1289. ಒಲವಿನ ಕಾಣಿಕೆ (೧೯೯೩)

ಒಲವಿನ ಕಾಣಿಕೆ ಚಲನಚಿತ್ರದ ಹಾಡುಗಳು 
  1. ನಿನ್ನಿಂದ ಕಂಡೆ ಆನಂದ ನಾನು 
  2. ನೀ ನನ್ನ ಜೀವ ನೀ ನನ್ನ ದೈವ 
  3. ಜೀವನ ವೀಣೆ ಶ್ರುತಿ ಹೀನ ಅದು 
  4. ನಾನೇ ರಾಧೇ ನೀನೇ ಶ್ಯಾಮ 
  5. ಡವ ಡವ ಎದೆಯೊಳಗೇ ಇದು 
ಒಲವಿನ ಕಾಣಿಕೆ (೧೯೯೩) - ನಿನ್ನಿಂದ ಕಂಡೆ ಆನಂದ ನಾನು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ  : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ

ಹೆಣ್ಣು : ಓಹೋ .. ಓಹೋ ..            ಗಂಡು : ಆಹಾ.. ಆಹ .. ಆಹ .. ಆಹ ..
ಹೆಣ್ಣು : ನಿನ್ನಂದ ಕಂಡೆ ಆನಂದ ನಾನು
          ನಿನ್ನಂದ ಕಂಡೆ ಆನಂದ ನಾನು ಮಾತೆಲ್ಲಾ ಹಾಡಾಗಿ
          ಆ ಹಾಡು ಇಂಪಾಗಿ ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
ಗಂಡು : ಬಾಳೊಂದು ಹೂವಾಗಿದೇ

ಕೋರಸ್ : ಆಹಾ.. ಆಹಾ.. ಆಹಾ.. ಆಹಾ ...
ಹೆಣ್ಣು : ತಂಗಾಳಿ ತಂಪಾಗಿ ಮೈ ಸೋಕಿದೆ ಬಿಸಿಲನ್ನು ನೆರಳಂತೆ ನೀ ಮಾಡಿದೇ ..
ಕೋರಸ್ : ಲಲ್ಲಲಲಲಲಾ.. ಲಾಲಾಲಾಲಾಲ
ಹೆಣ್ಣು : ತಂಗಾಳಿ ತಂಪಾಗಿ ಮೈ ಸೋಕಿದೆ ಬಿಸಿಲನ್ನು ನೆರಳಂತೆ ನೀ ಮಾಡಿದೇ ..
           ಮುಳ್ಳಿಂದ ನನ್ನ ದೂರ ನೀ ನೂಕಿದೇ ನೋವಿಂದ ಕ್ಷಣದಲ್ಲಿ ಕಾಪಾಡಿದೆ
ಗಂಡು : ಮುಳ್ಳೆಲ್ಲಾ ಇನ್ನು ಹೊಸ ಹೂವಿನಂತೇ ನೋವೆಲ್ಲಾ ಇನ್ನೂ ಸವಿ ಜೇನಿನಂತೇ
            ಬಾ ನನ್ನ ಸಂಗಾತಿಯೇ ಒಹೋ..ಒಹೋ.. ಒಹೋ..
  ಹೆಣ್ಣು : ನಿನ್ನಂದ ಕಂಡೆ ಆನಂದ ನಾನು ಮಾತೆಲ್ಲಾ ಹಾಡಾಗಿ
            ಆ ಹಾಡು ಇಂಪಾಗಿ ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
ಗಂಡು : ಬಾಳೊಂದು ಹೂವಾಗಿದೇ

ಕೋರಸ್ : ಒಹೋ... ಒಹೋ.. ಒಹೋ.. ಲಲಲಲಲಲಾಲಾಲಾಲ
ಗಂಡು : ಕಣ್ಣಲ್ಲಿ ಸವಿಗನಸು ನೀ ತುಂಬಿದೆ ನೂರಾರು ಹೊಸ ಬಯಕೆ ತೇಲಾಡಿದೆ
ಕೋರಸ್ : ಲಲ್ಲಲಲಲಲಾ.. ಲಾಲಾಲಾಲಾಲ
ಗಂಡು :  ಕಣ್ಣಲ್ಲಿ ಸವಿಗನಸು ನೀ ತುಂಬಿದೆ ನೂರಾರು ಹೊಸ ಬಯಕೆ ತೇಲಾಡಿದೆ
            ಬಂದಾಗ ಬಳಿ ನೀನು ಹೀತವಾಗಿದೆ ಮೈಯ್ಯಲ್ಲಿ ಮಿಂಚೊಂದು ಹರಿದಾಡಿದೆ
ಹೆಣ್ಣು : ಈ ತೋಳ ಬಂಧಿ ನಾನಾದ ಮೇಲೆ ಉಯ್ಯಾಲೆಯಂತೇ ಮನಸ್ಸಾದ ಮೇಲೆ
          ಯುಗವೊಂದು ಕ್ಷಣವಾಗಿದೇ... ಓಹೋ .. ಓಹೋ ..
          ನಿನ್ನಂದ ಕಂಡೆ ಆನಂದ ನಾನು ಮಾತೆಲ್ಲಾ ಹಾಡಾಗಿ
           ಆ ಹಾಡು ಇಂಪಾಗಿ ಇಂಪಿಂದ ಹಾಯಾಗಿ ಮತ್ತೇರಿದಂತಾಗಿ
ಗಂಡು : ಬಾಳೊಂದು ಹೂವಾಗಿದೇ
-----------------------------------------------------------------------------------------------------

ಒಲವಿನ ಕಾಣಿಕೆ (೧೯೯೩) - ನೀ ನನ್ನ ಜೀವ ನೀ ನನ್ನ ದೈವ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ  : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ

ಹೆಣ್ಣು : ನೀ ನನ್ನ ಜೀವ ನೀ ನನ್ನ ದೈವ ನೀನಾದೆ ನನ್ನ ಸಂಗಾತಿಯು
          ಬಾಳ ಬಂಗಾರವೇ ಪ್ರೀತಿ ಸಿಂಗಾರವೇ ನೀನು ಎಂದೆಂದೂ ನನ್ನ ಸೌಭಾಗ್ಯವೇ
          ನೀ ನನ್ನ ಜೀವ ನೀ ನನ್ನ ದೈವ ನೀನಾದೆ ನನ್ನ ಸಂಗಾತಿಯು
          ಬಾಳ ಬಂಗಾರವೇ ಪ್ರೀತಿ ಸಿಂಗಾರವೇ ನೀನು ಎಂದೆಂದೂ ನನ್ನ ಸೌಭಾಗ್ಯವೇ
ಕೋರಸ್ : ಒಹೋ.. ಒಹೋ... ಲಾಲಾಲಲಲಾಲಾಲ ..

ಹೆಣ್ಣು : ಸಂತೋಷ ಕೊಡುವ ಸಂಗೀತ ನೀನೇ ಮಸುಕಾದ ಮನಕೆ ಹೊಂಬೆಳಕು ನೀನೇ
          ಸಲ್ಲಾಪ ನೀಡೋ ಮನಗಣ್ಣ  ನೀನೇ ಸುಖವನ್ನು ತಂದ ಸಂಬಂಧ ನೀನೇ
          ನೀ ಹರಸು ಭೀಮನ ಅಮವ್ಯಾಸೇ ಇಂದು
          ನೀ ನನ್ನ ಜೀವ ನೀ ನನ್ನ ದೈವ ನೀನಾದೆ ನನ್ನ ಸಂಗಾತಿಯು
          ಬಾಳ ಬಂಗಾರವೇ ಪ್ರೀತಿ ಸಿಂಗಾರವೇ ನೀನು ಎಂದೆಂದೂ ನನ್ನ ಸೌಭಾಗ್ಯವೇ

ಗಂಡು : ಬಾಳ ಕಾರಂಜಿಯೇ ನಲ್ಮೆಯ ಅಪರಂಜಿಯೇ 
            ರಮ್ಯ ಸೌಂದರ್ಯವೇ ನನ್ನ ಚೈತನ್ಯವೇ 
            ನೀನು ಎಂದೆಂದೂ ನನ್ನ ಗೃಹ ಲಕ್ಷ್ಮಿಯೇ 
ಹೆಣ್ಣು : ಓಹೋ ... ಓಹೋ .. ಓಹೋ ... ಆಹಾ .. ಆಹಾ.. ಆಹಾ 
ಗಂಡು : ಬೇಲೂರ ಗುಡಿಯ ಪುತ್ತಳಿಯೂ ನೀನೇ ಶೃಂಗಾರ ಹರಿವ ನವರಾಗ ನೀನೇ  
            ರೋಮಾಂಚ ಕೊಡುವ ಹೊಸ ಲಾಸ್ಯ ನೀನೇ
            ಬಾನಂಚದೊಳಗೆ  ಶಶಿಕಾಂತಿ ನೀನೇ ನೀನೊಲಿದು ಜೀವನ ಸವಿ ಜೇನು ಇಂದು
ಹೆಣ್ಣು : ನೀ ನನ್ನ ಜೀವ ನೀ ನನ್ನ ದೈವ ನೀನಾದೆ ನನ್ನ ಸಂಗಾತಿಯು
          ಬಾಳ ಬಂಗಾರವೇ ಪ್ರೀತಿ ಸಿಂಗಾರವೇ ನೀನು ಎಂದೆಂದೂ ನನ್ನ ಸೌಭಾಗ್ಯವೇ
------------------------------------------------------------------------------------------------------

ಒಲವಿನ ಕಾಣಿಕೆ (೧೯೯೩) - ಜೀವನ ವೀಣೆ ಶ್ರುತಿ ಹೀನ ಅದು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ  : ವಿ.ಮನೋಹರ  ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ

ಗಂಡು : ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
            ನನ್ನೆದೇ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
            ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
            ನನ್ನೆದೇ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
            ನೆನಪುಗಳಾ ಪಲ್ಲಕಿಯಲೀ ಪ್ರಿಯೇ ನಿನ್ನ ಪ್ರಯಾಣ ಒಲವೇ
            ಚೆಲುವೇ ಎಲ್ಲಿ ನೀ ಇರುವೇ ..
            ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
            ನನ್ನೆದೇ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ

ಗಂಡು : ಒಲವಿನ ದೀಪದಲಿ ಬೆಳಗಿದೆ ಬಾಳನು ನಗುವಿನ ತೋರಣದೇ ಮೆರೆಸಿದೆ ನನ್ನ ಮನೆಯ
            ಮರೆಯಲು ಆಗದ ಮೋಡಿಯಲಿ ಬಂಧಿಸಿದೆ ನೀನು ನನ್ನನ್ನೂ
            ಪ್ರತಿಕ್ಷಣ ಎದುರು ನೋಡುತ್ತಿಹೇ ಸೇರುವುದು ಎಂದು ನಿನ್ನನ್ನು
            ಒಲವೇ..  ಚೆಲುವೆ..  ಎಲ್ಲಿ ನೀ ಇರುವೇ ..
            ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
            ನನ್ನೆದೇ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ

ಹೆಣ್ಣು : ಲಲಲಲಲಲಾ .. ಲಲಲಲಲಲಾ .. ಲಲಾ ಹೋಹೊಹೋ...
ಗಂಡು : ವಿಧಿಯೇ ಆಗಿದೆಯೋ ಸೂತ್ರದ ಬೊಂಬೆ ಕುಣಿಸಿ
            ನಗುವೇಯಾ ಸಂತೋಷದೇ ನನ್ನನ್ನು ನೀನು ಅಳಿಸಿ ನನ್ನಯ ಕೂಗು ಕೇಳಿಸದೇ
            ಕಾದಿಹುದೇ ಕಿವಿಯು ಕಿವುಡಾಗಿ ಅಂತ್ಯವು ಎಂದು ವೇದನೆಗೆ ಆಗಿಹುದು
            ಬಾಳು ಇರುಳಾಗಿ ಓಲವೇ ಚೆಲುವೇ ಎಲ್ಲಿ ನೀ ಇರುವೇ ..
            ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
            ನನ್ನೆದೇ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
            ನೆನಪುಗಳಾ ಪಲ್ಲಕಿಯಲೀ ಪ್ರಿಯೇ ನಿನ್ನ ಪ್ರಯಾಣ ಒಲವೇ
            ಚೆಲುವೇ ಎಲ್ಲಿ ನೀ ಇರುವೇ ..
            ಜೀವನ ವೀಣೆ ಶ್ರುತಿ ಹೀನ ಅದು ತಾಳಿದೆ ಮೌನ
            ನನ್ನೆದೇ ದೇವಿಗೆ ಅಭಿಷೇಕ ಕಣ್ಣೀರಿನ ಸ್ನಾನ
-----------------------------------------------------------------------------------------------------

ಒಲವಿನ ಕಾಣಿಕೆ (೧೯೯೩) - ನಾನೇ ರಾಧೇ ನೀನೇ ಶ್ಯಾಮ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ  : ಆರ್.ಏನ್.ಜಯಗೋಪಾಲ, ಗಾಯನ : ಸಂಗೀತ ಕಟ್ಟಿ

ನಾನೇ ರಾಧಾ ನೀನೇ ಶ್ಯಾಮ
ನಾನೇ ರಾಧಾ ನೀನೇ ಶ್ಯಾಮ ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ ಯಮುನಾ ಗಂಗಾ ಒಲವೇ
ರಾಗದ ಲೋಕ ರಂಗನು ನೀಡಿ ಬೃಂದಾವನದ ಸಂತಸ ನೋಡಿ
ನಗುವಿನ ನಂದನ ಅರಳಿ ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ ಮೋಹನ ಮುರುಳಿ ನಮ್ಮ ಪ್ರೇಮ

ಸರಸದ ಸಂಗಕೆ ಮನವು ಮಿಡಿವುದು ಏಕಾಂತ ದಿನಾ 
ಉಳುಕುವ ಕಾಣಲು ತನುವು ಕುಣಿವುದು ಕೂಡಲು ಕ್ಷಣ 
ಬೆರೆತಾಗ ಶೃಂಗಾರ ತೀರಾ ಅನುರಾಗ ವಿಹಾರ ಮಧುರ 
ಸುಖವು ಬಾಳಲ್ಲಿ ತುಂಬಿ ಯಮುನಾ ಗಂಗಾ ಒಲವೇ 
ನಾನೇ ರಾಧಾ ನೀನೇ ಶ್ಯಾಮ ಮೋಹನ ಮುರುಳಿ ನಮ್ಮ ಪ್ರೇಮ

ಜೇನಿನ ಚುಂಬನ ಸವಿಯೇ ತಂದಿದೆ ಬಂಧನ ಬಲೆ 
ಪ್ರಣಯದ ಔತಣ ಸಿಹಿಯೇ ತೋರಿದೆ ನೂತನ ನೆಲೆ 
ಒಡನಾಟ ರೋಮಾಂಚವಾಗಿ ಅನುಗಾಲ ಒಂದಾಗಿ ಸಾಗಿ 
ಕನಸು ನನಸಾಗಿ ಹೋಗಿ ಯಮುನಾ ಗಂಗಾ ಒಲವೇ 
ನಾನೇ ರಾಧಾ ನೀನೇ ಶ್ಯಾಮ ಮೋಹನ ಮುರುಳಿ ನಮ್ಮ ಪ್ರೇಮ
ಪ್ರೀತಿಯ ಗೋಕುಲ ಇದುವೇ ಯಮುನಾ ಗಂಗಾ ಒಲವೇ
ರಾಗದ ಲೋಕ ರಂಗನು ನೀಡಿ ಬೃಂದಾವನದ ಸಂತಸ ನೋಡಿ
ನಗುವಿನ ನಂದನ ಅರಳಿ ಯಮುನಾ ಗಂಗಾ ಒಲವೇ
ನಾನೇ ರಾಧಾ ನೀನೇ ಶ್ಯಾಮ ಮೋಹನ ಮುರುಳಿ ನಮ್ಮ ಪ್ರೇಮ
-----------------------------------------------------------------------------------------------------

ಒಲವಿನ ಕಾಣಿಕೆ (೧೯೯೩) - ಡವ ಡವ ಎದೆಯೊಳಗೇ ಇದು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ  : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳ

ಗಂಡು : ಢವ ಢವ ಎದೆಯೊಳಗೇ ಇದು ಲವ್ ಲವ್ ಒಳಗೊಳಗೇ
            ಮನಸಿಗ ಹಾಡೋ ಹಕ್ಕಿ ಹವ ಹವ .. 
ಹೆಣ್ಣು : ಹೇಹೇ ..

ಗಂಡು : ಲವ್ವ್ ಸ್ಟೋರಿ ನಮ್ಮದೇ ಹೊಸ ತರಹ ಇದು ನನ್ನ ನಿನ್ನ ಸಿಹಿ ಬರಹ
            ಬದುಕೆಲ್ಲಾ ಲವ್ವಲಿ ಲವ್ವಲಿ ಚೆಲ್ಲೋದೇ ಜಾಲಿ ಜಾಲಿ ಜಾಲಿ
ಹೆಣ್ಣು : ಲವ್ವಂದ್ರೆ ಸಿಂಪಲ್ಲೂ ಹಾಕ್ತಾನೇ ಸಿಂಬಲ್ಲು ಕಣ್ಣು ಕಣ್ಣು ಒಂದಾದ್ರೇ ಡ್ರೀಮ್ ಸಿಗ್ನಲ್
ಗಂಡು : ಹಾಕ್ತಲ್ಲೇ ಮ್ಯೂಜಿಕ್ ಕಣ್ಣಮುಂದೆ ಮ್ಯಾಜಿಕ್ ನಂಗು ನಿಂಗು ಲೈಫೆಲ್ಲಾ ಮುತ್ತೇ ತಾಳಿಕ್ಕೂ
ಹೆಣ್ಣು : ಭಾಷೆ ವಿಚಾರದ ಮಾತೇ ಮರಿ ಮರಿ
ಗಂಡು : ಜಾತಿ ಗಲಾಟೆಯ ಚಿಂತೆ ಮರಿ ಮರಿ
ಹೆಣ್ಣು : ಪ್ರೀತಿ ತಾನೇ ಆಸ್ತಿ ನಮಗೆ ಬಾರೋ ಬಾರೋ ಬಾರೋ ಬಾ
ಗಂಡು : ಢವ ಢವ ಎದೆಯೊಳಗೇ ಇದು ಲವ್ ಲವ್ ಒಳಗೊಳಗೇ
            ಮನಸಿಗ ಹಾಡೋ ಹಕ್ಕಿ ಹವ ಹವ .. 
ಹೆಣ್ಣು : ಓಹೋ ..       ಗಂಡು : ಆಹಾ
ಇಬ್ಬರು : ಓಹೋ .. ಒಹೋ..  ಹೇಹೇ ..

ಗಂಡು : ಕಾಡೆಲ್ಲಾ ಸುತ್ತೋಣ ಗಿರಿ ಶಿಖರ ಹತ್ತೋಣ ಹರಿದು ಧುಮಕೋ ಜಲಪಾತ  ಕರಗಿ ಮೀಯೋಣ
ಹೆಣ್ಣು : ಒಹೋ.. ಜನರಿಂದ ದೂರಾಗಿ ಊರಾಚೆ ಹೋಗೋಣ ಅಲ್ಲಿ ಒಂದು ಮುದ್ದಾದ ಮನೆಯ ಕಟ್ಟೋಣ
ಗಂಡು : ಹೊತ್ತು ಗೊತ್ತಿಲ್ಲದ ಓಹೋ .. ಪ್ರೀತಿ ಸಿಹಿ ಸಿಹಿ
ಹೆಣ್ಣು : ಪ್ರೀತಿ ಇದೆ ಕಡೆ ಚೆಲುವು ಖುಷಿ ಖುಷಿ
ಗಂಡು : ಒಲವು ಚೆಲುವು ಎಲ್ಲಾ ನೀನೇ .. ಬಾರೇ ಬಾರೆ ಬಾರೇ ಬಾ
            ಢವ ಢವ ಎದೆಯೊಳಗೇ ಇದು ಲವ್ ಲವ್ ಒಳಗೊಳಗೇ
            ಮನಸಿಗ ಹಾಡೋ ಹಕ್ಕಿ ಹವ ಹವ .. 
ಹೆಣ್ಣು : ಓಹೋ ..       ಗಂಡು : ಆಹಾ
ಇಬ್ಬರು : ಓಹೋ .. ಒಹೋ..  ಹೇಹೇ ..
------------------------------------------------------------------------------------------------------

No comments:

Post a Comment