136. ಅರ್ಚನ (1982)

ಅರ್ಚನ ಚಿತ್ರದ ಹಾಡುಗಳು 
  1. ಬೆಳದಿಂಗಳು ನಗುತಿದೆ 
  2. ಬಯಕೆ ಬಾಳಿನಲಿ 
  3. ಕನ್ನಡದಲ್ಲಿ ಕ್ಷಮಿಸು ಏನುವೇ 
  4. ಬಿರುಗಾಳಿ ಮನದಲ್ಲಿ  
ಅರ್ಚನ (1982) - ಬೆಳದಿಂಗಳೂ ನಗುತಿದೇ ನಿನ್ನ ಕಂಗಳೂ ಕರೆದಿದೇ
ಸಾಹಿತ್ಯ:ಆರ್.ಎನ್.ಜಯಗೋಪಾಲ್, ಸಂಗೀತ:ರಾಜನ್-ನಾಗೇಂದ್ರ, ಗಾಯನ: ಎಸ್.ಪಿ.ಬಿ, ಎಸ್.ಜಾನಕಿ

ಹೆಣ್ಣು : ಲಾ ಲಾ ಲಾಲಾ   (ಲಾ ಲಾ ಲಾಲಾ )
ಗಂಡು :  ಲಾ ಲಾ ಲಾಲಾ (ಸರಿಗ ಸರಿಗ ಸರಿಗ ಸರಿಗ )
ಹೆಣ್ಣು : ಲಾ ಲಾ ಲಾಲಾ   (ತನನಂ ತನನಂ ತನನಂ ತನನಂ    )
          ಬೆಳದಿಂಗಳೂ ನಗುತಿದೇ ನಿನ್ನ ಕಂಗಳೂ ಕರೆದಿದೇ
          ಸನಿಹಾ ಸನಿಹಾ ಕರೆದಿದೇ
          ಒಡಲಿನಾ ಕಣ ಕಣಾ ಏನೇನೋ ಕಂಪನಾ....ಬೆಳದಿಂಗಳೂ....
ಗಂಡು : ಬೆಳದಿಂಗಳೂ ನಗುತಿದೇ ನಿನ್ನ ಕಂಗಳೂ ಕರೆದಿದೇ
          ಸನಿಹಾ ಸನಿಹಾ ಕರೆದಿದೇ
          ಒಡಲಿನಾ ಕಣ ಕಣಾ ಏನೇನೋ ಕಂಪನಾ....
ಹೆಣ್ಣು : ಬೆಳದಿಂಗಳೂ ನಗುತಿದೇ
ಗಂಡು : ನಿನ್ನ ಕಂಗಳೂ ಕರೆದಿದೇ

ಹೆಣ್ಣು : ಅಲೆ ಅಲೆಗಳ ಇಂಪಲ್ಲೀ ಕಡಲಂಚಿನ ಸೊಂಪಲ್ಲೀ
         ಅಲೆ ಅಲೆಗಳ ಇಂಪಲ್ಲೀ ಕಡಲಂಚಿನ ಸೊಂಪಲ್ಲೀ
         ತಂಗಾಳಿಯ ತಂಪಲ್ಲೀ ನಿನ್ನ ರೂಪ ಕಂಡೆನಾ
ಗಂಡು : ಚಂದುಟಿಗಳ ಮಿಂಚಲ್ಲೀ ನಗೆಸೂಸುವ ಸಂಚಲ್ಲೀ
           ಈ ಮೌನದ ಮಾತಲ್ಲೀ ಸೆರೆಯಾಗಿ ಹೋದೆನಾ
           ಈ ಪ್ರೇಮ ಕಾಣಿಕೇ ನಿನಗೆಂದೇ ನಾ ತಂದೇ
           ನಿನಗೆಂದೇ ನಾ ತಂದೇ....
ಹೆಣ್ಣು : ಬೆಳದಿಂಗಳೂ ನಗುತಿದೇ
ಗಂಡು : ನಿನ್ನ ಕಂಗಳೂ ಕರೆದಿದೇ
ಹೆಣ್ಣು : ಸನಿಹಾ ಸನಿಹಾ ಸೆಳೆದಿದೆ
ಗಂಡು : ಒಡಲಿನಾ ಕಣ ಕಣಾ
ಹೆಣ್ಣು : ಏನೇನೋ ಕಂಪನಾ....
ಹೆಣ್ಣು : ಬೆಳದಿಂಗಳೂ ನಗುತಿದೇ
ಗಂಡು : ನಿನ್ನ ಕಂಗಳೂ ಕರೆದಿದೇ
ಕೋರಸ್ : ಲಾಲಾಲಲಾ   ಲಾಲಾಲಲಾ ಲಾಲಾಲಲಾ
ಗಂಡು :  ಲಾ ಲಾ ಲಾಲಾ (ಲಾ ಲಾ ಲಾಲಾ )

ಗಂಡು : ನಿಶೆ ತುಂಬಿದೆ ಕಣ್ಣೆಲ್ಲಾ ಬಿಸಿಯಾಗಿದೆ ಮೈಯೆಲ್ಲಾ
            ನಿಶೆ ತುಂಬಿದೆ ಕಣ್ಣೆಲ್ಲಾ ಬಿಸಿಯಾಗಿದೆ ಮೈಯೆಲ್ಲಾ
           ಹೀಗೆಂದೂ ಆಗಿಲ್ಲಾ ಏನೀ ರೋಮಾಂಚನಾ
ಹೆಣ್ಣು : ಹೊಸ ಹರೆಯದ ಗುಂಗಲ್ಲೀ ತನು ಬಳಸುವ ತೋಳಲ್ಲೀ
          ಜಗವನ್ನು ಮರೆವುದೇ ಅನುರಾಗ ಬಂಧನಾ
          ನೂರಾಸೆ ಹೊಮ್ಮಿದೇ ನನ್ನಲ್ಲೀ ನೀನಾದೇ
         ನಿನ್ನಲ್ಲೀ ನಾನಾದೇ....
ಗಂಡು : ಬೆಳದಿಂಗಳೂ (ನಗುತಿದೇ )
ಹೆಣ್ಣು : ನಿನ್ನ ಕಂಗಳೂ (ಕರೆದಿದೇ)
ಗಂಡು : ಸನಿಹಾ ಸನಿಹಾ ಸೆಳೆದಿದೆ
ಹೆಣ್ಣು : ಒಡಲಿನಾ (ಕಣ ಕಣಾ )
ಹೆಣ್ಣು : ಏನೇನೋ ಕಂಪನಾ....
ಗಂಡು : ಬೆಳದಿಂಗಳೂ (ನಗುತಿದೇ )
ಹೆಣ್ಣು : ನಿನ್ನ ಕಂಗಳೂ (ಕರೆದಿದೇ)
ಇಬ್ಬರೂ: ಲಾಲಾಲಲಾ   ಲಾಲಾಲಲಾ ಲಾಲಾಲಲಾ
--------------------------------------------------------------------------------------------------------------------------

ಅರ್ಚನ (1982) - ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಚಲುವೇ ನೀನು ಬಂದೇ ಈ ಮನಕೇ ಬೆಳಕು ತಂದೇ
ದಿನವೂ ಅನುಕ್ಷಣವೂ ನಿನದೇ ಪ್ರೀತಿ ಅರ್ಚನಾ
ನೀನೇ ನನ್ನಾಸೆ ಚೇತನಾ....
ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಚಲುವೇ ನೀನು ಬಂದೇ ಈ ಮನಕೇ ಬೆಳಕು ತಂದೇ
       
ಹರಿವಾ ಕಾವೇರಿಯಂತೇ ಬಲು ಸೊಗಸೂ ನಿನ್ನ ನಡೆಯು
ಮಧುರಾ ಆಲಾಪದಂತೇ ಕಿವಿಗಿಂಪೂ ನಿನ್ನ ನುಡಿಯು
ಅರಿಯುತಲೀ ಸರಸದಲೀ ಈ ಪ್ರೇಮ ನಿನಗೆ ಅರ್ಪಣಾ
ಅರಳೋ ಮುಂಜಾನೆಯಂತೆ ತಿಳಿ ಹೊಳಪೂ ನಿನ್ನ ನಿಲುವು
ನಗುವಾ ಮಂದಾರದಂತೇ ಅತಿ ಕಾಂತಿ ನಿನ್ನ ಮುಖವೂ
ಹಗಲಿನಲು ಇರುಳಿನಲೂ ಎಂದೆಂದೂ ಇರಲಿ ದರ್ಶನ
ನಿನದೇ ಆರಾಧನಾ....
ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಚಲುವೇ ನೀನು ಬಂದೇ ಈ..  ಮನಕೇ ಬೆಳಕು ತಂದೇ

ಹೃದಯಾ ಸಂಬಂಧಕಾಗೀ ಮರುಳಾಯ್ತು ನನ್ನ ಜೀವ
ಪ್ರಣಯಾ ಸಂಯೋಗವಾಗೀ ನವಿರಾಯ್ತು ನನ್ನ ಭಾವ
ಹರುಷದಲಿ ಮೆರೆಯುತಲೀ ಜೇನಾಯ್ತು ನನ್ನ ಜೀವನಾ
ಸುಖವಾ ನೀ ಕಾಣಲೆಂದೂ ಮುಡಿಪಾಯ್ತು ನನ್ನ ಸ್ನೇಹ....
ಬವಣೇ ನೀ ನೀಗಲೆಂದೂ ಮಿಡಿದಾಯ್ತು ನನ್ನ ಮೋಹಾ
ಜಗ ಮರೆತು ಜೊತೆ ಬೆರೆತು ಸಲ್ಲಿಸುವೆ ಮುತ್ತಿನರ್ಚನಾ
ನಲ್ಮೆಯೇ ಆರಾಧನಾ....
ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಚಲುವೇ ನೀನು ಬಂದೇ ಈ ಮನಕೇ ಬೆಳಕು ತಂದೇ
--------------------------------------------------------------------------------------------------------------------------

ಅರ್ಚನ (1982) - ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ ಗಾಯನ: ವಾಣಿಜಯರಾಂ

ಕನ್ನಡದಲ್ಲಿ ಕ್ಷಮಿಸು ಏನುವೇ ಇಂಗ್ಲಿಷನಲ್ಲಿ ಸಾರೀ ಏನುವೇ
ಸನಿಹ ಬಾ ಇಲ್ಲಿ ಸಂತೈಸುವೇ ಕಲಹ ಸಾಕಿನ್ನೂ ಕೈ ಮುಗಿಯುವೇ 
ಪ್ರೀತಿ ಅತಿಯಾಗಿ ಹುಡುಗಾಟ ಆಡಿ ನೋಂದೇ ನಾ ನಿನ್ನ ಗತಿಯ ನೋಡಿ 
ಕನ್ನಡದಲ್ಲಿ ಕ್ಷಮಿಸು ಏನುವೇ ಇಂಗ್ಲಿಷನಲ್ಲಿ ಸಾರೀ ಏನುವೇ
ಸನಿಹ ಬಾ ಇಲ್ಲಿ ಸಂತೈಸುವೇ ಕಲಹ ಸಾಕಿನ್ನೂ ಕೈ ಮುಗಿಯುವೇ 

ಸಂಗಾತಿಯೇ  ನಿನಗಾಗಿ ನಾ ಈ ಪ್ರಾಣವೇ ಕೊಡಬಲ್ಲೇನು 
ಎಂದು ಹೇಳಿದೆಯಲ್ಲಾ ಆ ಮಾತು ಉಳಿಸಿಕೋ 
ಎರಡೇಟಿಗೆ ಸುಸ್ತಾದೆಯಾ ಕೈಲಾಗದೇ ಮಂಕಾದೆಯಾ 
ಏಕೆ ಬೆದರಿದೇ ಹೀಗೆ ಬಾ ಧೈರ್ಯ ತಂದುಕೋ 
ಮಾತು ಮಾತಿನಲಿ ಪ್ರೀತಿ ಎನ್ನುತಲಿ 
ನೂರು ಪ್ರೇಮ ಕಥೆ ನುಡಿದು ಸರಸದಲಿ 
ಕೈಯ್ ಕೊಟ್ಟು ಓಡುವೇಯಾ
ಕನ್ನಡಲ್ಲಿ ಪ್ರಿಯನು ಏನುವೇ ಇಂಗ್ಲೀಷನಲ್ಲಿ ಡಾರ್ಲಿಂಗ್ ಏನುವೇ 
ಸನಿಹ ಬಾ ಇಲ್ಲಿ ಸಂತೈಸುವೇ ಕಲಹ ಸಾಕಿನ್ನೂ ಕೈ ಮುಗಿಯುವೇ 

ತಪ್ಪಾಯಿತು ಎಂದಾಗಲೂ ಕೈ ಕಾಲನೂ ಹಿಡಿದಾಗಲೂ 
ಕೆಂಪಗಾಗಿದೇ ಕಣ್ಣು ನಾ ಕಾಣೇ ಏತಕೋ.. ಹ್ಹಾಂ 
ನನ್ನಾಣೆಗೂ ಸುಳ್ಳಾಡೆನೂ ಈ ಹೆಣ್ಣಿಗೇ ನೀ ಗಂಡನೂ 
ಕೋಪ ಬೀಡು ಬೀಡು ಇನ್ನೂ ನೀ ಶಾಂತಿ ತಂದುಕೋ 
ನಿನ್ನ ಸೇವೆಯಲಿ ಬಾಳು ಸೆವೆಸುವೆನೂ 
ನಿನ್ನ ಕಂದನಿಗೇ ಅಮ್ಮನಾಗುವೆನೂ 
ನಂಬು ನಂಬು ನನ್ನನ್ನೂ 
ಕನ್ನಡದಲ್ಲಿ ಕ್ಷಮಿಸು ಏನುವೇ ಇಂಗ್ಲಿಷನಲ್ಲಿ ಸಾರೀ ಏನುವೇ
ಸನಿಹ ಬಾ ಇಲ್ಲಿ ಸಂತೈಸುವೇ ಕಲಹ ಸಾಕಿನ್ನೂ ಕೈ ಮುಗಿಯುವೇ 
ಪ್ರೀತಿ ಅತಿಯಾಗಿ ಹುಡುಗಾಟ ಆಡಿ ನೋಂದೇ ನಾ ನಿನ್ನ ಗತಿಯ ನೋಡಿ 
ಕನ್ನಡದಲ್ಲಿ ಕ್ಷಮಿಸು ಏನುವೇ ಇಂಗ್ಲಿಷನಲ್ಲಿ ಸಾರೀ ಏನುವೇ
ಸನಿಹ ಬಾ ಇಲ್ಲಿ ಸಂತೈಸುವೇ ಕಲಹ ಸಾಕಿನ್ನೂ ಕೈ ಮುಗಿಯುವೇ
ಲಾಲ ಲಾಲ  ಲಾಲ ಲಲಲ ಒಹೋ ಒಹೋ ಒಹೋ 
--------------------------------------------------------------------------------------------------------------------------

ಅರ್ಚನ (1982) - ಬಯಕೇ ಬಾಳಿನಲ್ಲೀ ಒಲುಮೇ ಹೂವು ಚೆಲ್ಲೀ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಆರ್.ಏನ್.ಜಯಗೋಪಾಲ್  ಗಾಯನ: ವಾಣಿಜಯರಾಂ 

ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ ಎಡವಿದೆ ನಡೆಯಲಿ ಅನುರಾಗ

ನಂಬಿಕೆಯೇ ನಂದಾದೀಪ ಗಾಳಿಯಲೀ ಆರಿಹೋಗಿ
ಮನೆಯೆಂಬ ದೇವಾಲಯದೇ ಇರುಳನ್ನು ಕಂಡಿದೇ
ಅಭಿಷೇಕ ಹಾಲಿನಲ್ಲಿ ಹುಳಿಯನ್ನು ಹಿಂಡಿದಂತೇ
ಸಂಸಾರ ಶಾಂತಿಯಲ್ಲಿ ಸಂದೇಹ ಮೂಡಿದೆ
ಜೀವನವೇ ಕಂಗಾಲಾಗಿ ಕಣ್ಣೀರಾಗಿ ಹರಿಯುತಿದೆ
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ ಎಡವಿದೆ ನಡೆಯಲಿ ಅನುರಾಗ

ಪ್ರೇಮಿಸಿದ ಜೀವವೊಂದು ಕೈ ಹಿಡಿದ ಜೀವವೊಂದೂ
ಮಧ್ಯದಲ್ಲಿ ಮೂಗ ಜೀವ ಯಾರೋದೋ ತಪ್ಪಿಲ್ಲೀ
ನೋಡುತಿಹ ಮೋಜಿನಲ್ಲಿ ಬರೆದಾತ ಮೇಲೆ ಕುಳಿತು
ಚದುರಂಗ ಆಟವಾಡಿ ಮಾನವನ ಬಾಳಲಿ
ಅಂತ್ಯದಲಿ ಸೋಲೋ ಗೆಲುವೋ  ಅಳಿವೋ ಉಳಿವೋ ತಿಳಿಯದಿದೇ
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ ಎಡವಿದೆ ನಡೆಯಲಿ ಅನುರಾಗ
ಬಿರುಗಾಳಿ ಮನದಲ್ಲಿ
--------------------------------------------------------------------------------------------------------------------------

No comments:

Post a Comment