139. ಸಿಡಿದೆದ್ದ ಸಹೋದರ (1983)

ಸಿಡಿದೆದ್ದ ಸಹೋದರ ಚಿತ್ರದ ಹಾಡುಗಳು 
  1. ಬೇಡಾ ಅನ್ನೋರು ಉಂಟೇ 
  2. ನನ ಸಮ ಯಾರಿಲ್ಲಾ 
  3. ಹರೆಯವು ಕರೆದಿದೆ 
  4. ಓ ನಾಜೂಕು ನಲ್ಲೇ 
  5. ದುಡ್ಡು ಇದ್ದರೇ ಜಗವಿಲ್ಲಾ 
ಸಿಡಿದೆದ್ದ ಸಹೋದರ (1983)
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ಸತ್ಯಂ   ಹಾಡಿದವರು: ವಿಷ್ಣುವರ್ಧನ್, ಎಸ್.ಜಾನಕಿ

ಬೇಡ ಅನ್ನೋರು ಉಂಟೇ ಹುಡುಗಿ ಬೇಡ ಅನ್ನೋರು ಉಂಟೆ
ಬೇಡ ಅನ್ನೋರು ಉಂಟೇ ಹುಡುಗಿ ದೂರ ಹೋಗೋರು ಉಂಟೆ
ಬೇಡ ಅನ್ನೋರು ಉಂಟೇ ನಿನ್ನ ಬೇಡ ಅನ್ನೋರು ಉಂಟೆ
ಬೇಡ ಅನ್ನೋರು ಉಂಟೇ ಹುಡುಗಿ ದೂರ ಹೋಗೋರು ಉಂಟೆ
ರುಚಿಯಾದ ಹಣ್ಣು ಸೊಗಸಾದ ಹೆಣ್ಣು
ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ
ಬೇಡ ಅನ್ನೋರು ಉಂಟೇ ನಿನ್ನ ಬೇಡ ಅನ್ನೋರು ಉಂಟೆ
ನಿನ್ನ ಬೇಡ ಅನ್ನೋರು ಉಂಟೇ ಹುಡುಗ ದೂರ ಹೋಗೋರು ಉಂಟೆ
ಮುತ್ತಿನ ಚೆಂಡು ಸೊಗಸಾದ ಗಂಡು
ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ
ಬೇಡ ಅನ್ನೋರು ಉಂಟೇ ಹುಡುಗಿ ದೂರ ಹೋಗೋರು ಉಂಟೆ
ನಿನ್ನ ಬೇಡ ಅನ್ನೋರು ಉಂಟೇ ಹುಡುಗ ದೂರ ಹೋಗೋರು ಉಂಟೆ

ಸಂಜೆಯ ವೇಳೆ ತಣ್ಣನೆ ಗಾಳಿ ಬೀಸಿ
ಚಳಿಯನು ಚೆಲ್ಲಿ ಹೂವಿನ ಕಂಪ ಹಾಸಿ
ಸಂಜೆಯ ವೇಳೆ ತಣ್ಣನೆ ಗಾಳಿ ಬೀಸಿ
ಚಳಿಯನು ಚೆಲ್ಲಿ ಹೂವಿನ ಕಂಪ ಹಾಸಿ
ಮನಸನ್ನು ಕಾಡಿದೆ ಜೊತೆಯೆಲ್ಲಿ ಎಂದಿದೆ
ಮನಸನ್ನು ಕಾಡಿದೆ ಜೊತೆಯೆಲ್ಲಿ ಎಂದಿದೆ
ಅದನೋಡಿ ಓಡೋಡಿ ನಾ ಬಂದೆ ಇಲ್ಲಿಗೆ
ಬೇಡ ಅನ್ನೋರು ಉಂಟೇ ಹುಡುಗಿ ದೂರ ಹೋಗೋರು ಉಂಟೆ
ಬೇಡ ಅನ್ನೋರು ಉಂಟೇ ಹುಡುಗಿ ದೂರ ಹೋಗೋರು ಉಂಟೆ

ಸೂರ್ಯನು ಜಾರಿ ಚಂದಿರ ನೋಡು ಬಂದ
ನಾ ಹೇಳಲು ನಾಚುವ ಬಯಕೆಯ ಎದೆಯಲಿ ತಂದ
ಸೂರ್ಯನು ಜಾರಿ ಚಂದಿರ ನೋಡು ಬಂದ
ನಾ ಹೇಳಲು ನಾಚುವ ಬಯಕೆಯ ಎದೆಯಲಿ ತಂದ
ಈಗೇನು ಮಾಡಲಿ ನಾ ಎಲ್ಲಿ ಹೋಗಲಿ
ಈಗೇನು ಮಾಡಲಿ ನಾ ಎಲ್ಲಿ ಹೋಗಲಿ
ಈ ಕಣ್ಣೇ ಹೇಳಾಯ್ತು ಇನ್ನೆಲ್ಲಿ ಹೋಗುವೆ
ಬೇಡ ಅನ್ನೋರು ಉಂಟೇ ಹುಡುಗ ದೂರ ಹೋಗೋರು ಉಂಟೆ
ಬೇಡ ಅನ್ನೋರು ಉಂಟೇ ಹುಡುಗ ದೂರ ಹೋಗೋರು ಉಂಟೆ
ರುಚಿಯಾದ ಹಣ್ಣು ಸೊಗಸಾದ ಹೆಣ್ಣು
ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ
ನಿನ್ನ ಬೇಡ ಅನ್ನೋರು ಉಂಟೇ ಹುಡುಗ ದೂರ ಹೋಗೋರು ಉಂಟೆ
ಬೇಡ ಅನ್ನೋರು ಉಂಟೇ ಹುಡುಗಿ ದೂರ ಹೋಗೋರು ಉಂಟೆ
------------------------------------------------------------------------------------------------------------------------

ಸಿಡಿದೆದ್ದ ಸಹೋದರ (1983)
ಸಂಗೀತ: ಸತ್ಯಂ ಸಾಹಿತ್ಯ: ಆರ್.ಏನ್.ಜಯಗೋಪಾಲ್  ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ಹ್ಹೀ.. ಶಬರೀಬ ಶಬರಬರೀಬ 
            ನನ ಸಮ ಯಾರಿಲ್ಲಾ  ನಂಗೆ ಯಾರ ಹಂಗಿಲ್ಲಾ 
            ಕೊಟ್ಟ ಮಾತು ತಪ್ಪಲ್ಲಾ ಆಗದೆಂಬ ಮಾತಿಲ್ಲಾ 
            ಎದುರಾಳಿಗೆ ಬಿರುಗಾಳಿಗೇ ಹಾರಾಟಕೆ ಕೂಗಾಟಕೇ 
            ನಾನೆಂದೂ ಅಂಜೋದಿಲ್ಲಾ ಯ್ಯಾ..
            ನನ ಸಮ ಯಾರಿಲ್ಲಾ (ಆಂ )  ನಂಗೆ ಯಾರ ಹಂಗಿಲ್ಲಾ (ಹೂಂ )
            ಕೊಟ್ಟ ಮಾತು ತಪ್ಪಲ್ಲಾ (ಆಂ ) ಆಗದೆಂಬ ಮಾತಿಲ್ಲಾ (ಹೂಂ ) 
            ಎದುರಾಳಿಗೆ (ಓ) ಬಿರುಗಾಳಿಗೇ(ಓ) ಹಾರಾಟಕೆ (ಆ) ಕೂಗಾಟಕೇ (ಆ)
            ನಾನೆಂದೂ ಅಂಜೋದಿಲ್ಲಾ ಯ್ಯಾ.. 
            ನನ ಸಮ ಯಾರಿಲ್ಲಾ  ನಂಗೆ ಯಾರ ಹಂಗಿಲ್ಲಾ ಯ್ಯಾ... 

ಗಂಡು : ಸ್ನೇಹಕ್ಕೇ ಬಾಗುವೇ ದ್ವೇಷವ ಗೆಲ್ಲುವೇ 
            ಹಗೆಯಾಗಿ ಬಂದವರ ಬುಡವನ್ನೇ ಕಿಳುವೇ      
ಹೆಣ್ಣು : ನ್ಯಾಯಕ್ಕೇ ಹೋರುವೇ ನಾಡಿಗೇ ದುಡಿಯುವೇ 
          ಈ ತಾಯ್ ಮಣ್ಣಲೀ ಫಲಗೈವ ಕಾಣುವೇ 
ಗಂಡು : ಪ್ರೀತಿಗೆ ಪ್ರೇಮಕೇ ದಾಸನು ಆಗುವೇ 
            ಕಲ್ಲಲೂ ನೀರಿದೆ ಎನ್ನುವ ಮಾತಿಗೇ ದೃಷ್ಟಾಂತ ನಾನಗುವೇ 
            ನನ ಸಮ ಯಾರಿಲ್ಲಾ (ಪಪ್ಪಪ್ಪ) ನಂಗೆ ಯಾರ ಹಂಗಿಲ್ಲಾ (ಪಪ್ಪಪ್ಪ)
            ಕೊಟ್ಟ ಮಾತು ತಪ್ಪಲ್ಲಾ (ಪಪ್ಪಪ್ಪ) ಆಗದೆಂಬ ಮಾತಿಲ್ಲಾ (ಪಪ್ಪಪ್ಪ)
            ಎದುರಾಳಿಗೆ (ಆ) ಬಿರುಗಾಳಿಗೇ (ಆ) ಹಾರಾಟಕೆ (ಓ ) ಕೂಗಾಟಕೇ  (ಓ )
            ನಾನೆಂದೂ ಅಂಜೋದಿಲ್ಲಾ .. 
            ನನ ಸಮ ಯಾರಿಲ್ಲಾ ...  ನಂಗೆ ಯಾರ ಹಂಗಿಲ್ಲಾ ಒಹೋ... . 

ಹೆಣ್ಣು : ಕಣ್ಣಲ್ಲೇ ಕೊಲ್ಲುವೇ ನದಿಯಲಿ ಕುಣಿಸುವೇ 
          ಈ ಬೆಂಕಿ ಜೊತೆ ಸೇರಿ ಸವಾಲು ನಾ ಹಾಕುವೇ 
ಗಂಡು : ರೂಪಕೆ ಸೊಲುವೇ ನೋಟಕೆ ಬಾಗುವೇ 
           ಚೆಲುವೆಂಬ ಗುಡಿಯಲ್ಲಿ ಪೂಜಾರಿ ಆಗುವೇ 
ಹೆಣ್ಣು : ದೀನರ ಕಂಗಳ ಕಂಬನಿ ಒರೆಸುವೇ  
ಗಂಡು : ಆದರ ತೋರುವ ಎಲ್ಲರ ಪಾಲಿಗೆ ಸ್ನೇಹದ ಕೈ ನೀಡುವೇ 
            ನನ ಸಮ ಯಾರಿಲ್ಲಾ (ಪಪ್ಪಪ್ಪ) ನಂಗೆ ಯಾರ ಹಂಗಿಲ್ಲಾ (ಪಪ್ಪಪ್ಪ)
            ಕೊಟ್ಟ ಮಾತು ತಪ್ಪಲ್ಲಾ (ಪಪ್ಪಪ್ಪ) ಆಗದೆಂಬ ಮಾತಿಲ್ಲಾ (ಪಪ್ಪಪ್ಪ)
            ಎದುರಾಳಿಗೆ (ಆ) ಬಿರುಗಾಳಿಗೇ (ಆ) ಹಾರಾಟಕೆ (ಓ ) ಕೂಗಾಟಕೇ  (ಓ )
            ನಾನೆಂದೂ ಅಂಜೋದಿಲ್ಲಾ .. 
            ನನ ಸಮ ಯಾರಿಲ್ಲಾ ...  ನಂಗೆ ಯಾರ ಹಂಗಿಲ್ಲಾ ಒಹೋ... .      
------------------------------------------------------------------------------------------------------------------------

ಸಿಡಿದೆದ್ದ ಸಹೋದರ (1983)
ಸಂಗೀತ: ಸತ್ಯಂ  ಸಾಹಿತ್ಯ: ಗೀತಪ್ರಿಯಾ   ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ, ವಾಣಿಜಯರಾಂ

ಗಂಡು : ಹರೆಯವು ಕರೆದಿದೇ ಹೃದಯವು ಬೆರೆತಿದೇ ಪ್ರೇಮ ಬಂತೀಗ
ಹೆಣ್ಣು : ಮನಸಿನ ಬಣದಲಿ ಕನಸಿದು ಅರಳಿದೆ ಏನೋ ಆವೇಗಾ
ಗಂಡು : ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ
           ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ
           ಹರೆಯವು ಕರೆದಿದೇ ಹೃದಯವು ಬೆರೆತಿದೇ ಪ್ರೇಮ ಬಂತೀಗ
ಹೆಣ್ಣು : ಮನಸಿನ ಬಣದಲಿ ಕನಸಿದು ಅರಳಿದೆ ಏನೋ ಆವೇಗಾ 
ಗಂಡು : ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ
           ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ

ಗಂಡು : ಬಾನಲ್ಲಿ ಬಾನಾಡಿ ಮೆರೆವಂತೆ ಹಾರಾಡುವಾ 
ಹೆಣ್ಣು : ನೂರಾಸೆ ಗರಿಬಿಚ್ಚಿ ನಲಿವಿಂದ ಜೊತೆಗೂಡುವಾ 
ಗಂಡು : ಬಾನಲ್ಲಿ ಬಾನಾಡಿ ಮೆರೆವಂತೆ ಹಾರಾಡುವಾ 
ಹೆಣ್ಣು : ನೂರಾಸೆ ಗರಿಬಿಚ್ಚಿ ನಲಿವಿಂದ ಜೊತೆಗೂಡುವಾ 
ಗಂಡು : ಪ್ರೇಮಕ್ಕೆ ಕಾಲ ಬಂದಿದೆ ಏಕಾಂತ ಇಲ್ಲಿ ಕರೆದಿದೇ 
ಹೆಣ್ಣು : ರಾಗಕ್ಕೆ ತಾಳ ಸೇರಿದೇ ಜೀವಕ್ಕೆ ಜೀವ ಕೂಡಿದೆ 
ಗಂಡು : ಹೂ ತೇರು ಬಂದಂತೇ ನೀನಿತ್ತ ಬಂದಾಗ ನಾನಿಂದು ನಾನಲ್ಲವೇ 
ಹೆಣ್ಣು : ಮಿಂಚಂತೆ ನೀ ನಕ್ಕು ನಂಗೊಂದು ತಂದಾಗ ಮುಂದೇನೂ ಮಾತಿಲ್ಲವೋ 
         ಹರೆಯವು ಕರೆದಿದೇ ಹೃದಯವು ಬೆರೆತಿದೇ ಪ್ರೇಮ ಬಂತೀಗ
         ಮನಸಿನ ಬಣದಲಿ ಕನಸಿದು ಅರಳಿದೆ ಏನೋ ಆವೇಗಾ
ಗಂಡು : ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ
           ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ

ಗಂಡು: ಕೈಯಲ್ಲಿ ಕೈ ಇಟ್ಟು ಉಯ್ಯಾಲೆಯಾ ತೂಗಾಡುವಾ
ಹೆಣ್ಣು : ಎದೆ ಮೇಲೆ ತಲೆ ಇಟ್ಟು ಮೈ ಮರೆತು ಓಲಾಡುವಾ
ಗಂಡು: ಕೈಯಲ್ಲಿ ಕೈ ಇಟ್ಟು ಉಯ್ಯಾಲೆಯಾ ತೂಗಾಡುವಾ
ಹೆಣ್ಣು : ಎದೆ ಮೇಲೆ ತಲೆ ಇಟ್ಟು ಮೈ ಮರೆತು ಓಲಾಡುವಾ
ಗಂಡು : ನಿಂಗಾಗಿ ನಾನು ಹುಡುಕಿದೆ ಸಂಗಾತಿ ನೀನು ಸೇರಿದೆ
ಹೆಣ್ಣು : ಮುತ್ತಂಥ ಮಾತು ಹೇಳಿದೆ ಯಾವತ್ತೂ ನಿಂದೇ ನನ್ನದೇ
ಗಂಡು : ನಮ್ಮಂಥ ಈ ಜೋಡಿ ಹಿಂದೆಂದೂ ಕಂಡಿಲ್ಲಾ ಮುಂದೆಂದೂ ಸೇರಲ್ಲವೋ
ಹೆಣ್ಣು : ಆ ಬೃಹ್ಮ ಅಪರೂಪ ಸರಿ ಲೆಕ್ಕ ತಾ ಹಾಕಿ  ಬರೆದಂತ ನೆಂಟಲ್ಲವೋ
          ಹರೆಯವು ಕರೆದಿದೇ ಹೃದಯವು ಬೆರೆತಿದೇ ಪ್ರೇಮ ಬಂತೀಗ
          ಮನಸಿನ ಬಣದಲಿ ಕನಸಿದು ಅರಳಿದೆ ಏನೋ ಆವೇಗಾ
ಗಂಡು : ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ
           ಈ ಭೀತಿ ಏತಕೆ ನೀ ಪ್ರೀತಿ ಮಾಡಲೂ  
------------------------------------------------------------------------------------------------------------------------

ಸಿಡಿದೆದ್ದ ಸಹೋದರ (1983)
ಸಂಗೀತ: ಸತ್ಯಂ  ಸಾಹಿತ್ಯ: ಗೀತಪ್ರಿಯಾ   ಹಾಡಿದವರು: ಎಸ್.ಪಿ.ಬಿ. 

ದುಡ್ಡು ಇದ್ರೇ ಜಗವೆಲ್ಲಾ ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ ಮುಂದೆ ಜಗದಲ್ಲಿ ಬೇರೆ ದ್ಯಾವ್ರೇ ಇಲ್ಲವಲ್ಲಾ
ಈ ಲೋಕ ಹೀಗೇತಕೋ ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ ಹೇ ದೇವ ನೀನೇತಕೋ ಯ್ಯಾ...
ದುಡ್ಡು ಇದ್ರೇ ಜಗವೆಲ್ಲಾ ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ ಮುಂದೆ ಜಗದಲ್ಲಿ ಬೇರೆ ದ್ಯಾವ್ರೇ ಇಲ್ಲವಲ್ಲಾ
ಈ ಲೋಕ ಹೀಗೇತಕೋ ಹೇ ದೇವ ನೀನೇತಕೋ ಅಹ್ಹಹ್ಹ...
ಈ ಲೋಕ ಹೀಗೇತಕೋ ಹೇ ದೇವ ನೀನೇತಕೋ ಯ್ಯಾ...

ಎಲ್ಲಾ ವೇಷ ಎಲ್ಲಾ ಮೋಸ ದುಡ್ಡಗಾಗಿ
ಎಲ್ಲರೂ ಪಾಪ ಮಾಡೋದಿಲ್ಲೀ ದುಡ್ಡಗಾಗಿ
ದುಡ್ಡಗಾಗಿ ಕೊಲೆ ಕೂಡಾ ಮಾಡ್ತವೀ
ದುಡ್ಡುಗಾಗಿ ನಮ್ಮನ್ನ ನಾವೇ ಮಾರ್ತೀವಿ
ದುಡ್ಡು ಇದ್ರೇ ಚಿಂತೇ ದುಡ್ಡು ಇಲ್ದೇ ಇಲ್ಲದರೂ ಚಿಂತೇ
ದುಡ್ಡು ಇದ್ರೇ ಚಿಂತೇ ದುಡ್ಡು ಇಲ್ದೇ ಇಲ್ಲದರೂ ಚಿಂತೇ
ದುಡ್ಡಿನ ಮುಂದೆ ನಮ್ಮ ಬಾಳು ಗೋಳಂತೇ 
ದುಡ್ಡು ಇದ್ರೇ ಜಗವೆಲ್ಲಾ ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ ಮುಂದೆ ಜಗದಲ್ಲಿ ಬೇರೆ ದ್ಯಾವ್ರೇ ಇಲ್ಲವಲ್ಲಾ
ಈ ಲೋಕ ಹೀಗೇತಕೋ ಹೇ ದೇವ ನೀನೇತಕೋ (ಹ್ಹಾ ಹ್ಹಾ ಹ್ಹಾ )
ಈ ಲೋಕ ಹೀಗೇತಕೋ ಹೇ ದೇವ ನೀನೇತಕೋ ಯ್ಯಾ... 

ಪಪಪ ಪಪಪ ಪಪಪ ತೂರು ತೂರು ತೂರು ತೂರು 
ಸ್ಥಾನ ಮಾನ ಎಲ್ಲಾ ಇಲ್ಲಿ ದುಡ್ಡು ಇದ್ರೇ
ನೆಂಟರೂ ಬಂಟರೂ ಸ್ನೇಹಿತರೆಲ್ಲರೂ ದುಡ್ಡು ಇದ್ರೇ
ಸ್ವರ್ಗವನ್ನು ಇಲ್ಲೇ ಸೃಷ್ಟಿಸಬಹುದು ದುಡ್ಡಿಂದ
ನ್ಯಾಯನ್ನ ಕೂಡಾ ಕೊಂಡುಕೊಳ್ಳಬಹುದು ದುಡ್ಡಿಂದ
ಪ್ರೀತಿ ಮಮತೆ ಎಲ್ಲೂ ತಾಯಿ ಪ್ರೀತಿಯನ್ನೂ
ಪ್ರೀತಿ ಮಮತೆಯನ್ನೂ  ತಾಯಿ ಪ್ರೀತಿಯನ್ನೂ
ದುಡ್ಡಿದೆಂದು ಕೊಳ್ಳಕ್ಕ ಮಾತ್ರ ಆಗಲ್ಲ 
ದುಡ್ಡು ಇದ್ರೇ ಜಗವೆಲ್ಲಾ ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ ಮುಂದೆ ಜಗದಲ್ಲಿ ಬೇರೆ ದ್ಯಾವ್ರೇ ಇಲ್ಲವಲ್ಲಾ
ಈ ಲೋಕ ಹೀಗೇತಕೋ (ಹ್ಹಾ ಹ್ಹಾ ಹ್ಹಾ )
ಹೇ ದೇವ ನೀನೇತಕೋ (ಹ್ಹಾ ಹ್ಹಾ ಹ್ಹಾ )
ಈ ಲೋಕ ಹೀಗೇತಕೋ (ಹ್ಹಾ ಹ್ಹಾ ಹ್ಹಾ )
ಹೇ ದೇವ ನೀನೇತಕೋ ಯ್ಯಾ... 
-------------------------------------------------------------------------------------------------------------------------

ಸಿಡಿದೆದ್ದ ಸಹೋದರ (1983)
ಸಂಗೀತ: ಸತ್ಯಂ ಸಾಹಿತ್ಯ: ಗೀತಪ್ರಿಯಾ ಹಾಡಿದವರು: ಎಸ್.ಪಿ.ಬಿ.

ಓ.. ನಾಜೂಕು ನಲ್ಲೇ ನಾ ನಿನ್ನಾಟ ಬಲ್ಲೇ ಹೇ...
ಅರೇ  ಓ.. ನಾಜೂಕು ನಲ್ಲೇ ನಾ ನಿನ್ನಾಟ ಬಲ್ಲೇ ..
ಸಂಕೋಚ ಬಿಟ್ಟು ಸಂತೋಷ ಗುಟ್ಟು ತಿಳಿಯೋಕೆ ಬಾ ಇಲ್ಲೇ ಹೇ...ಹೇ.. 
ಬಂದು ಆಡು ಡುಮ್ಮ ಡುಮ್ಮಿ ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ

ನಿಂಗಾಗಿಯೇ ನಾ ಹುಟ್ಟಿದೆ ನಿಜವಿದು ನನ್ನಾಣೆ
ನನ್ನತ್ತೆಮಗಳೇ ನಿಜವಿದು ನನ್ನಾಣೆ
ನಿನ್ನಂತಹ ನನ್ನ ಜೋಡಿಯ ಜಗದಲಿ ನಾ ಕಾಣೇ
ನನ್ನತ್ತೆಮಗಳೇ ಜಗದಲಿ ನಾ ಕಾಣೆ
ಮುಟ್ಟಿ ನೋಡು ನನ್ನ ಎದೆಯ ಕೊಟ್ಟು ನಿನ್ನ ಹೃದಯ
ಬಿಟ್ಟು ಓಡದೇ ಓ ಜಾಣೆ ಹೇ... ಹೇ...
ಅರೇ  ಓ.. ನಾಜೂಕು ನಲ್ಲೇ ನಾ ನಿನ್ನಾಟ ಬಲ್ಲೇ ..
ಸಂಕೋಚ ಬಿಟ್ಟು ಸಂತೋಷ ಗುಟ್ಟು ತಿಳಿಯೋಕೆ ಬಾ ಇಲ್ಲೇ ರೇ...ರೇ ರೇ ರೇ.. 
ಬಂದು ಆಡು ಡುಮ್ಮ ಡುಮ್ಮಿ ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ ಹ್ಹಾ..ಆ..ಹೇ..

ನೀ ನೋಡಲು ನನ್ನಲ್ಲಿದೆ ಸೊಗಸಿನ ಮೈ ಕಟ್ಟು
ನನ್ನತ್ತೆಮಗಳೇ ಸೊಗಸಿನ ಮೈ ಕಟ್ಟು
ನೀ ಬಿಟ್ಟರೂ ನಾ ಬಿಟ್ಟೇನೇ ಬಿರುಸಿನ ಈ ಪಟ್ಟು
ನನ್ನೆತ್ತೆಮಗಳೇ ಬಿರುಸಿನ ಈ ಪಟ್ಟು
ಆಳು ನಾನು ಕಟ್ಟು ಮಸ್ತು ನೋಡಿ ಆದೆ ನೀನು ಸುಸ್ತೂ
ಜಟ್ಟಿ ನಾನು ಯಾವತ್ತೂ ಹ್ಹಾಂ... ಹ್ಹಾಂ.. ಹ್ಹಾಂ
ಅರೇ  ಓ.. ನಾಜೂಕು ನಲ್ಲೇ ಅರೇ  ನಾ ನಿನ್ನಾಟ ಬಲ್ಲೇ ..
ಅರೆರೇ  ಓ.. ನಾಜೂಕು ನಲ್ಲೇ ಆ.. ನಾ ನಿನ್ನಾಟ ಬಲ್ಲೇ ..
ಸಂಕೋಚ ಬಿಟ್ಟು ಸಂತೋಷ ಗುಟ್ಟು ತಿಳಿಯೋಕೆ ಬಾ ಇಲ್ಲೇ ರೇ...ರೇ ರೇ ರೇ.. 
ಬಂದು ಆಡು ಡುಮ್ಮ ಡುಮ್ಮಿ ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ ಹ್ಹಾ..ಆ
------------------------------------------------------------------------------------------------------------------------

No comments:

Post a Comment