155. ಬಿಳಿಹೆಂಡ್ತಿ (1975)


ಬಿಳೀ ಹೆಂಡ್ತಿ ಚಿತ್ರದ ಹಾಡುಗಳು 
  1. ದೇವರೇ ನುಡಿದ ಮೊದಲ ನುಡಿ ಪ್ರೇಮ ಪ್ರೇಮ 
  2. ಹಾಪ್ಯಿಸ್ಟ್ ಮೊಮೆಂಟ್ ಎವೆರಿ ಇವೆಂಟ್ 
  3. ರಂಗೇನ ಹಳ್ಳಿಯಾಗೇ ಬಂಗಾರ ಕಪ್ಪ ತೊಟ್ಟ 
  4. ಯಾವ ತಾಯಿಯ ಹಡೆದ ಮಗಳಾದರೇನೂ 
  5. ರಂಗೇನ ಹಳ್ಳಿಯಾಗೇ ಬಂಗಾರ (ವಾಣಿಜಯರಾಮ)

ಬಿಳಿಹೆಂಡ್ತಿ (1975) - ದೇವರೆ ನುಡಿದ ಮೊದಲ ನುಡಿ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ

ದೇವರೆ ನುಡಿದ ಮೊದಲ ನುಡಿಆ ದೇವರೆ ನುಡಿದ ಮೊದಲ ನುಡಿ
ಪ್ರೇಮ ಪ್ರೇಮ ಪ್ರೇಮವೆಂಬ ಮುನ್ನುಡಿ

ಪ್ರೇಮದ ನಂದಾದೀಪದ ಜ್ಯೋತಿ
ಪ್ರೇಮದ ಯಾನಕೆ ನೀಡಿದೆ ಕಾಂತಿ
ಪ್ರೇಮದ ಕ್ರಾಂತಿ ವಿಶ್ವಕೆ ಶಾಂತಿ
ಪ್ರೇಮ ಪ್ರೇಮ ಪ್ರೇಮವೊಂದೇ ಹೊನ್ನುಡಿ

ಪ್ರೇಮದ ನಗೆಯೇ ನಿತ್ಯ ವಸಂತ
ಪ್ರೇಮದ ಪ್ರಭೆಯ ರವಿಯಾನಂತ
ಪ್ರೇಮದ ಎಲ್ಲೆಯೆ ದಿವ್ಯ ದಿಗಂತ
ಪ್ರೇಮ ಪ್ರೇಮ ಪ್ರೇಮವೊಂದೇ ಹೊನ್ನುಡಿ
------------------------------------------------------------------------------------------------------------------------

ಬಿಳಿಹೆಂಡ್ತಿ (1975) - ಹ್ಯಾಪ್ಪಿಸ್ಟ್ ಮೊಮೆಂಟ್ ಎವ್ರಿ ಇವೆಂಟ್
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ


ಹ್ಯಾಪ್ಪಿಸ್ಟ್ ಮೊಮೆಂಟ್ ಎವ್ರಿ ಇವೆಂಟ್
ಸ್ವೀಟ್ ಯಾಂಡ್ ಪ್ಲೀಸ್ಎಂಟ್ ಒಹ್! ವಾಟ್ ಎನ್ ಎಂಚಾಂಟ್ಮೆಂಟ್
ಹ್ಯಾಪ್ಪಿಸ್ಟ್ ಮೊಮೆಂಟ್ ಎವ್ರಿ ಇವೆಂಟ್
ಸ್ವೀಟ್ ಯಾಂಡ್ ಪ್ಲೀಸ್ಎಂಟ್ ಒಹ್! ವಾಟ್ ಎನ್ ಎಂಚಾಂಟ್ಮೆಂಟ್
ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಕ್ಸಿಟ್ ಮೆಂಟ್ ... ಓಓಓಓಓಓಓ 

ಅತ್ತೆ ಕಿಸ್ಸ್ ಡ್ ಮೀ ... ಅತ್ತೆ ಬ್ಲೆಸ್ಸ್ ಡ್  ಮೀ....
ಅತ್ತೆ ಕಿಸ್ಸ್ ಡ್ ಮೀ ... ಅತ್ತೆ ಬ್ಲೆಸ್ಸ್ ಡ್  ಮೀ....
ಅತ್ತೆ ಪ್ರೈಜ್ಡ್ ಮೀ... ಅತ್ತೇ  ಒಹ್! ಪಿಂಚಡ್ ಮೀ ...
ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಕ್ಸಿಟ್ ಮೆಂಟ್ ... ಓಓಓಓಓಓಓ 

ಹಾರ್ಟ್ ಇಸ್ ಸ್ವಿಂಗ್ ಇಂಗ್,  ಹಾರ್ಟ್ ಇಸ್  ಡಾನ್ಸ್ ಇಂಗ್
ರೋಜ್ ಇಸ್ ಸ್ಮೈಲ್ ಇಂಗ್ ... ಆಯ್ ಫೀಲ್ ಲೈಕ್ ಫ್ಲೈಯಿಂಗ್ ...
ಅತ್ತೆ ಕಿಸ್ಸ್ ಡ್ ಮೀ ... ಅತ್ತೆ ಬ್ಲೆಸ್ಸ್ ಡ್  ಮೀ....
ಅತ್ತೆ ಪ್ರೈಜ್ಡ್ ಮೀ... ಅತ್ತೇ  ಒಹ್! ಪಿಂಚಡ್ ಮೀ ...
ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಕ್ಸಿಟ್ ಮೆಂಟ್ ... ಓಓಓಓಓಓಓ 

ಆಯ್ ಯಾಮ್ ನಾಟ್ ಸಾರೀ ಕಮಿಂಗ್ ಟು ದಿಸ್ ಕಂಟ್ರಿ
ಆಯ್ ಫೀಲ್ ಮೆರ್ರಿ ವೆನ್ ಆಯ್ ವೆರ್ ಎ ಸಾರೀ...
ಮೈ ಅತ್ತೆ ಮಾವ ಮೈ ಹಸ್ಬೆಂಡ್ ಮೈ ಶಾರದಾ ...
ಎವ್ರಿ ಒನ್  ಇಸ್ ಮೈನ್ ... ಆಯ್ ವೆಲ್ಕಮ್ ಎವ್ರಿ ಸ್ಮೈಲ್
ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಕ್ಸಿಟ್ ಮೆಂಟ್ ... ಓಓಓಓಓಓಓ  
------------------------------------------------------------------------------------------------------------------------

ಬಿಳಿ ಹೆಂಡ್ತಿ (೧೯೭೫)....ರಂಗೇನ ಹಳ್ಳಿಯಾಗೆ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಕಸ್ತೂರಿ ಶಂಕರ್ ಮತ್ತು ವಾಣಿಜಯರಾಮ್


ಕಸ್ತೂರಿ: ರಂಗೇನಾ ಹಳ್ಳಿಯಾಗೆ ವಾಣಿ: ರಂಗೇನಾ ಹಲ್ಲಿಯಾಗೆ
ಕಸ್ತೂರಿ :ಹಲ್ಲಿ ಅಲ್ಲಮ್ಮಾ ಹಳ್ಳಿ .. ಹಳ್ಳಿ.... ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ
ವಾಣಿ: ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ
ಕಸ್ತೂರಿ: ರಂಗಾದ ರಂಗೇಗೌಡ ಮೆರೆದಿದ್ದ
ವಾಣಿ: ರಂಗಾದ ರಂಗೇಗೌಡ ಮೆರೆದಿದ್ದ
ಕಸ್ತೂರಿ :ರಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ವಾಣಿ:  ರಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಕಸ್ತೂರಿ: ಬಂಗಾರಿ ರಂಗಿ ಮೈ ಅರಳಿತ್ತು
ವಾಣಿ: ಬಂಗಾರಿ ರಂಗಿ ಮೈ ಅರಳಿತ್ತು
ಇಬ್ಬರೂ : ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ  ರಂಗಾದ ರಂಗೇಗೌಡ ಮೆರೆದಿದ್ದ
ಕಸ್ತೂರಿ : ನಕ್ಕಾ ನಕ್ಷತ್ರದಂತಾ                 ವಾಣಿ: ನಕ್ಕಾ ನಕ್ಷತ್ರದಂತಾ
ಕಸ್ತೂರಿ : ಚೊಕ್ಕಾದ ರoಗೀನ್ ಕಂಡ         ವಾಣಿ: ಚೊಕ್ಕಾದ ರoಗೀನ್ ಕಂಡ
ಕಸ್ತೂರಿ : ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ಇಬ್ಬರೂ : ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ಕಸ್ತೂರಿ  : ರoಗೀಯ ಕೈಯ್ಯಾ ಮ್ಯಾಗೆ ರಂಗ ಭಾಷೆಯ ಕೊಟ್ಟ
ವಾಣಿ:  ರoಗೀಯ ಕೈಯ್ಯಾ ಮ್ಯಾಗೆ ರಂಗ ಭಾಷೆಯ ಕೊಟ್ಟ
ಕಸ್ತೂರಿ : ಸಂಗಾತಿ ನೀನೇ ಅಂಥ ಆಣೆ ಇಟ್ಟ
ಇಬ್ಬರೂ :  ಬಾಳ ಸಂಗಾತಿ ನೀನೇ ಅಂಥ ಆಣೆ ಇಟ್ಟ
                ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ  ರಂಗಾದ ರಂಗೇಗೌಡ ಮೆರೆದಿದ್ದ
ಕಸ್ತೂರಿ ಶಂಕರ್ : ಭಾರೀ ಹಡಗಾನೇರಿ          ವಾಣಿ: ಭಾರೀ ಹಡಗಾನೇರಿ
ಕಸ್ತೂರಿ : ದೂರಾ ದೇಶ ಸುತ್ತಿ                       ವಾಣಿ: ದೂರಾ ದೇಶ ಸುತ್ತಿ
ಕಸ್ತೂರಿ : ಊರ್ಗೇನೆ ಸಿರಿ ತರ್ತೀನಿ ಅಂಥ ಹೊಂಟ
ವಾಣಿ:   ಊರ್ಗೇನೆ ಸಿರಿ ತರ್ತೀನಿ ಅಂಥ ಹೊಂಟ
ಇಬ್ಬರೂ: ರಂಗ ಊರ್ಗೇನೆ ಸಿರಿ ತರ್ತೀನಿ ಅಂಥ ಹೊಂಟ
ಕಸ್ತೂರಿ : ವರ್ಸ ವರ್ಸಾ ಕಾದು ಬರ್ತಾನೆ ರಂಗ ಅಂಥ
ವಾಣಿ : ವರ್ಸ ವರ್ಸಾ ಕಾದು ಬರ್ತಾನೆ ರಂಗ ಅಂಥ
ಕಸ್ತೂರಿ : ಅತ್ತು ಅತ್ತು ಕಣ್ಣು ಬಾತೋಯ್ತು
ವಾಣಿ: ಅತ್ತು ಅತ್ತು ಕಣ್ಣು ಬಾತೋಯ್ತು
ಇಬ್ಬರೂ : ರಂಗಿ ಅತ್ತ ಕಣ್ಣೀರ್ ಕೆರೆ ಬತ್ತೋಯ್ತು
              ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ  ರಂಗಾದ ರಂಗೇಗೌಡ ಮೆರೆದಿದ್ದ

ಕಸ್ತೂರಿ : ಬಂದ ರಂಗಾ ಬಂದಾ                    ವಾಣಿ: ಬಂದ ರಂಗಾ ಬಂದಾ
ಕಸ್ತೂರಿ : ತಂದ ಬೇರೊಂದು ಹೆಣ್ಣ                 ವಾಣಿ: ತಂದ ಬೇರೊಂದು ಹೆಣ್ಣ
ಕಸ್ತೂರಿ : ಮೋಜಾಗಿ ಮದುವೆ ಅಗೋಯ್ತು ಬಲ್ ಸೋಕಾಗಿ ಸೋಬ್ನ ಆಗೋಯ್ತು
ವಾಣಿ:  ಮೋಜಾಗಿ ಮದುವೆ ಅಗೋಯ್ತು ಬಲ್ ಸೋಕಾಗಿ ಸೋಬ್ನ ಆಗೋಯ್ತು
ಕಸ್ತೂರಿ : ಮದುವೇನ ನೋಡಿ ರಂಗಿ ಮನದಾಗೇ ದು:ಖ ನುಂಗಿ
ವಾಣಿ: ಮದುವೇನ ನೋಡಿ ರಂಗಿ ಮನದಾಗೇ ದು:ಖ ನುಂಗಿ
ಕಸ್ತೂರಿ : ಮನಸಾರೆ ಜೋಡೀನ ಹರಸ್ತೀದ್ಳು
ವಾಣಿ: ಮನಸಾರೆ ಜೋಡೀನ ಹರಸ್ತೀದ್ಳು
ಕಸ್ತೂರಿ : ಮನೆದ್ಯಾವ್ರೆ ಕಾಪಾಡು ಅoತೀದ್ಳು
ವಾಣಿ: ಮನೆದ್ಯಾವ್ರೆ ಕಾಪಾಡು ಅoತೀದ್ಳು
            ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ ರಂಗಾದ ರಂಗೇಗೌಡ ಮೆರೆದಿದ್ದ
ಕಸ್ತೂರಿ  : ತಂದ ಬೇರೊಂದು ಹೆಣ್ಣ ಮೋಜಾಗಿ ಮದುವೆ ಅಗೋಯ್ತು
ವಾಣಿ: ಬಲ್ ಸೋಕಾಗಿ ಸೋಬ್ನ ಆಗೋಯ್ತು
ಕಸ್ತೂರಿ : ಆಗೋಯ್ತು           ವಾಣಿ: ಆಗೋಯ್ತು
ಕಸ್ತೂರಿ  : ಆಗೋಯ್ತು          ವಾಣಿ: ಆಗೋಯ್ತು
--------------------------------------------------------------------------------------------------------------------------

ಬಿಳಿ ಹೆಂಡ್ತಿ (೧೯೭೫)...ಯಾವ ತಾಯಿಯು ಹಡೆದ ಮಗಳಾದರೇನು
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಕಸ್ತೂರಿ ಶಂಕರ್


ಯಾವ ತಾಯಿಯು ಹಡೆದ ಮಗಳಾದರೇನು ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು    ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು

ಈ ತಾಯ ಕರುಣೆಯ ತಂಪಿನಲಿ  ಈ ತಾಯ ಕಣ್ಣಿನ ಕಾಂತಿಯಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ತಾಯ ಬಂಧನದ ರಕ್ಷೆಯಲ್ಲಿ  ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಮನೆಯ ಭಾಗ್ಯದ ಬಾಗಿಲಲ್ಲಿ  ಈ ಮನೆಯ ಧರ್ಮದ ದೀಪದಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ  ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಬಾಳ ಪೂಜೆಯ ರಾಶಿಯಲ್ಲಿ  ಈ ಬಾಳ ಹಾದಿಯ ಸಂಗಮದಲ್ಲಿ
ಈ ಬಾಳ ಹಾಡಿನ ಪಲ್ಲವಿಯಲ್ಲಿ  ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು
----------------------------------------------------------------------

ಬಿಳಿ ಹೆಂಡ್ತಿ (೧೯೭೫)....ರಂಗೇನ ಹಳ್ಳಿಯಾಗೆ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ವಾಣಿಜಯರಾಮ್


ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ
ರಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು
ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ

ನಕ್ಕಾ ನಕ್ಷತ್ರದಂತಾ  ಚೋಕ್ಕಾದ ರoಗೀನ್ ಕಂಡ         
ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ರoಗೀಯ ಕೈಯ್ಯಾ ಮ್ಯಾಗೆ ರಂಗ ಭಾಷೆಯ ಕೊಟ್ಟ
ಸಂಗಾತಿ ನೀನೇ ಅಂಥ ಆಣೆ ಇಟ್ಟ
ಬಾಳ ಸಂಗಾತಿ ನೀನೇ ಅಂಥ ಆಣೆ ಇಟ್ಟ 
ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ 
ರಂಗಾದ ರಂಗೇಗೌಡ ಮೆರೆದಿದ್ದ

ಭಾರೀ ಹಡಗಾನೇರಿ ದೂರಾ ದೇಶ ಸುತ್ತಿ                       
ಊರ್ಗೇನೆ ಸಿರಿ ತರ್ತೀನಿ ಅಂಥ ಹೊಂಟ
ರಂಗ ಊರ್ಗೇನೆ ಸಿರಿ ತರ್ತೀನಿ ಅಂಥ ಹೊಂಟ
ವರ್ಸ ವರ್ಸಾ ಕಾದು ಬರ್ತಾನೆ ರಂಗ ಅಂಥ
ಅತ್ತು ಅತ್ತು ಕಣ್ಣು ಬಾತೋಯ್ತು
ಅತ್ತು ಅತ್ತು ಕಣ್ಣು ಬಾತೋಯ್ತು
ರಂಗಿ ಅತ್ತ ಕಣ್ಣೀರ್ ಕೆರೆ ಬತ್ತೋಯ್ತು
ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ 
ರಂಗಾದ ರಂಗೇಗೌಡ ಮೆರೆದಿದ್ದ
ರಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು
ರಂಗೇನಾ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ
-------------------------------------------------------------------


----------------------------------------------------

No comments:

Post a Comment