116. ನಕ್ಕರೆ ಅದೇ ಸ್ವರ್ಗ (1967)

ನಕ್ಕರೇ ಅದೇ ಸ್ವರ್ಗ ಚಿತ್ರದ ಹಾಡುಗಳು 
  1. ಬಾಳೊಂದು ಭಾವಗೀತೆ ಆನಂದ (ಪಿ.ಸುಶೀಲಾ )
  2. ನಗಬೇಕು ನಗಿಸಬೇಕು ಇದೇ ನನ್ನ ಧರ್ಮ 
  3. ಕನಸಿದೋ ನನಸಿದೋ 
  4. ನಿನ್ನೇ ಎಲ್ಲಿಯೋ ನಾಳೆ ಎಲ್ಲಿಯೋ 
  5. ಈ ಹಾಯೇ ಇನ್ನೆಲ್ಲಿ 
  6. ಬಾಳೊಂದು ಭಾವಗೀತೆ 
ನಕ್ಕರೆ ಅದೇ ಸ್ವರ್ಗ (1967)
ಸಾಹಿತ್ಯ: ಅರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಸುಶೀಲಾ

ಆಆಆ... ಉಂ ಉಂ ಉಂ ಉಂ 
ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ
ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ

ಮನದಲ್ಲಿ ತುಂಬಿರೆ ಒಲವು ಮನೆಯಲ್ಲಿ ಸಂತಸ ಗೆಲುವು
ಮನದಲ್ಲಿ ತುಂಬಿರೆ ಒಲವು ಮನೆಯಲ್ಲಿ ಸಂತಸ ಗೆಲುವು
ನಗುವೇ ನಗವು ನಲಿವೇ ಜಗವು
ನಗುವೇ ನಗವು ನಲಿವೇ ಜಗವು ಜೀವನ ಸೊಬಗಿನ ಹೂವು
ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ

ಉರಿವಾಗ ಪ್ರೇಮದ ಹಣತೆ ನಮಗಿಲ್ಲ ಯಾವುದು ಕೊರತೆ
ಉರಿವಾಗ ಪ್ರೇಮದ ಹಣತೆ ನಮಗಿಲ್ಲ ಯಾವುದು ಕೊರತೆ
ಮಹಡಿಯ ಮಹಲು ಮುರುಕು ಗುಡಿಸಲು
ಮಹಡಿಯ ಮಹಲು ಮುರುಕು ಗುಡಿಸಲು ಬೆರೆತೆ ಜೀವಕೆ ಒಂದೇ
ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ
------------------------------------------------------------------------------------------------------------------------

ನಕ್ಕರದೇ ಸ್ವರ್ಗ (೧೯೬೭)......ನಗಬೇಕು ನಗಿಸಬೇಕು
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಎಂ.ರಂಗರಾವ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್

ನಗಬೇಕು ನಗಿಸಬೇಕು ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ
ನಗಬೇಕು ನಗಿಸಬೇಕು ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ

ಜನನದಲೂ ಅಳುವಿಹುದು ಮರಣದಲೂ ಅಳುವಿಹುದು
ಜನನದಲೂ ಅಳುವಿಹುದು ಮರಣದಲೂ ಅಳುವಿಹುದು
ಜೀವಿಸಿಹ ದಿನದೊಳಗೆ ನಗಬಾರದೆ ಅರೆಘಳಿಗೆ
ಜೀವಿಸಿಹ ದಿನದೊಳಗೆ ನಗಬಾರದೆ ಅರೆಘಳಿಗೆ
ನಗಬೇಕು ನಗಿಸಬೇಕು ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ

ಹಣಕಾಸಿನ ಖರ್ಚಿಲ್ಲ ರೇಷನ್ ಕಾರ್ಡ್ ಬೇಕಿಲ್ಲ
ಬ್ಲಾಕ್ ಮಾರ್ಕೆಟ್ ಸರಕಲ್ಲಾ ಮನದೊಳಗೇ ಇಹುದಲ್ಲಾ
ನಗಿಸುತಲಿ ನೀಗಿಸುವ ವಿಕಟಕವಿ ಬೇಸರವ
ನಗಿಸುತಲಿ ನೀಗಿಸುವ ವಿಕಟಕವಿ ಬೇಸರವ
ನುಂಗುತಲಿ ತನ್ನೆದೆಯ ದುಗುಡಗಳ ಸಾಸಿರವ
ನುಂಗುತಲಿ ತನ್ನೆದೆಯ ದುಗುಡಗಳ ಸಾಸಿರವ
ನಗಬೇಕು ನಗಿಸಬೇಕು ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ ಅದು ನಿಮ್ಮ ಕರ್ಮ
--------------------------------------------------------------------------------------------------------------------------

ನಕ್ಕರದೇ ಸ್ವರ್ಗ (೧೯೬೭)......ಕನಸಿದೋ ನನಸಿದೋ 
ಸಂಗೀತ : ಎಂ.ರಂಗರಾವ್ ಸಾಹಿತ್ಯ : ವಿಜಯ ನಾರಸಿಂಹ  ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ

ಗಂಡು : ಕನಸಿದೋ ನನಸಿದೋ ದುಗಡ ಮನದ ಬಿಸಿ ಬಯಕೆಯೋ
            ಇದು ಚಿಗುರು ಹರೆಯ ಸೆಳೆವೋ  ಚಿಗುರು ಹರೆಯ ಸೆಳೆವೋ  
ಹೆಣ್ಣು : ಕನಸಿದೋ ನನಸಿದೋ ದುಗಡ ಮನದ ಬಿಸಿ ಬಯಕೆಯೋ
            ಇದು ಚಿಗುರು ಹರೆಯ ಸೆಳೆವೋ  ಚಿಗುರು ಹರೆಯ ಸೆಳೆವೋ  

ಹೆಣ್ಣು : ಇಳಿದು ಬಂದಳೋ ಭಾಗ್ಯದೇವತೇ ಜಲಧಾರೇ ರೂಪ ತಾಳುಕೆ 
          ಇಳಿದು ಬಂದಳೋ ಭಾಗ್ಯದೇವತೇ ಜಲಧಾರೇ ರೂಪ ತಾಳುಕೆ
ಗಂಡು : ಹೆಣ್ಣು ಮನಸು ಹಲವು ದಿನಸೂ ಎಂದೂ ಧಾರೇ ತಿಳಿಸಿತು             
           ಹೆಣ್ಣು ಮನಸು ಹಲವು ದಿನಸೂ ಎಂದೂ ಧಾರೇ ತಿಳಿಸಿತು             
           ಚಂಚಲತೇ ಹೆಣ್ಣ ಹೆಸರು...  ಚಂಚಲತೇ ಹೆಣ್ಣ ಹೆಸರು... 
ಹೆಣ್ಣು : ಕನಸಿದೋ ನನಸಿದೋ ದುಗಡ ಮನದ ಬಿಸಿ ಬಯಕೆಯೋ
            ಇದು ಚಿಗುರು ಹರೆಯ ಸೆಳೆವೋ  ಚಿಗುರು ಹರೆಯ ಸೆಳೆವೋ  

ಗಂಡು : ಶಿಲೆಯ ಮೈಯಲಿ ಕಲೆಯು ನಿಂದಿದೇ  ಇದು ಏನೀ ಅಮರ ಸಾಧನೇ  
           ಶಿಲೆಯ ಮೈಯಲಿ ಕಲೆಯು ನಿಂದಿದೇ  ಇದು ಏನೀ ಅಮರ ಸಾಧನೇ  
ಹೆಣ್ಣು : ಒಲವು ತಂದ ಗೆಲವಿನಿಂದ ಅಮರದೈವಿ ಸಾಧನೆ 
          ಒಲವು ತಂದ ಗೆಲವಿನಿಂದ ಅಮರದೈವಿ ಸಾಧನೆ 
          ಇದು ಮಧುರ ಹೃದಯ ಫಲವು..   ಇದು ಮಧುರ ಹೃದಯ ಫಲವು..   
ಗಂಡು : ಕನಸಿದೋ ನನಸಿದೋ ದುಗಡ ಮನದ ಬಿಸಿ ಬಯಕೆಯೋ
            ಇದು ಚಿಗುರು ಹರೆಯ ಸೆಳೆವೋ  ಚಿಗುರು ಹರೆಯ ಸೆಳೆವೋ  

ಹೆಣ್ಣು : ನಾಚಿ ಸ್ವರ್ಗವೇ ಇಲ್ಲಿ ಬಂದಿರೇ ಅಹಾ.. ನಾರೀ ಚಂದ್ರ ತಾರೇ  
          ನಾಚಿ ಸ್ವರ್ಗವೇ ಇಲ್ಲಿ ಬಂದಿರೇ ಅಹಾ.. ನಾರೀ ಚಂದ್ರ ತಾರೇ    
ಗಂಡು : ಪ್ರಣಯ ಗೀತೆ ಮೊದಲ ಸಾಲು ಮುತ್ತಿನಂಥ ನುಡಿಗಳೂ 
           ಪ್ರಣಯ ಗೀತೆ ಮೊದಲ ಸಾಲು ಮುತ್ತಿನಂಥ ನುಡಿಗಳೂ 
           ಇದು ದೊರೆಯ ಸುಧೆಯ ಸಮವೋ...   ಇದು ದೊರೆಯ ಸುಧೆಯ ಸಮವೋ...     
ಇಬ್ಬರು: ಕನಸಿದೋ ನನಸಿದೋ ದುಗಡ ಮನದ ಬಿಸಿ ಬಯಕೆಯೋ
            ಇದು ಚಿಗುರು ಹರೆಯ ಸೆಳೆವೋ  ಚಿಗುರು ಹರೆಯ ಸೆಳೆವೋ  

--------------------------------------------------------------------------------------------------------------------------

ನಕ್ಕರದೇ ಸ್ವರ್ಗ (೧೯೬೭)......ನಿನ್ನೇ ಎಲ್ಲಿಯೋ ನಾಳೆ ಎಲ್ಲಿಯೋ 
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಆರ್.ಎನ್.ಜಯಗೋಪಾಲ್  ಗಾಯನ : ಎಲ್.ಆರ್.ಈಶ್ವರೀ

(ಲಲಲಲ ಲಲಲಲ ಲಲಲಲ ಲಲಲಲ ಹೇ.. )
ನಿನ್ನೆ ಎಲ್ಲಿಯೋ (ತೂರುರು) ನಾಳೆ ಎಲ್ಲಿಯೋ (ತೂರುರು)
ಇಂದು ಹಾಡುವ (ತೂರುರು) ಕೂಡಿ ಆಡುವ (ತೂರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ ದೂಡಿ ಲೆಜ್ಜೆ ಕುಣಿವ ನಲಿವ ಮೆರವ
ನಿನ್ನೆ ಎಲ್ಲಿಯೋ (ತೂರುರು) ನಾಳೆ ಎಲ್ಲಿಯೋ (ತೂರುರು)
ಇಂದು ಹಾಡುವ (ತೂರುರು) ಕೂಡಿ ಆಡುವ (ತೂರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ ದೂಡಿ ಲೆಜ್ಜೆ ಕುಣಿವ ನಲಿವ ಮೆರವಾ

(ಹೊಯ್ ಉಡಲಿಉಡಲಿಉಡಲಿಉಡಲಿಯೋ 
ಹೊಯ್ ಉಡಲಿಉಡಲಿಉಡಲಿಉಡಲಿಯೋ 
ಹೊಯ್ ಉಡಲಿಉಡಲಿಉಡಲಿಉಡಲಿಯೋ )
ದಾರಿಯು ಹಲವು ದೆಸೆಗಳೂ ಹಲವು  ಸೇರಿಹೆವಿಂದು ಸಂತೆಗೆ ಬಂದು
ದಾರಿಯು ಹಲವು ದೆಸೆಗಳೂ ಹಲವು  ಸೇರಿಹೆವಿಂದು ಸಂತೆಗೆ ಬಂದು
ಬನ್ನಿ ಹಾಡಿ ಜೋಡಿ ಹಕ್ಕಿ ಹಾಗೇ ಬಾನ ಸೇರಿ ಚುಕ್ಕಿ ಹಾಗೇ ನಗುವ ನಲಿವ ಮರೆವಾ
ನಿನ್ನೆ ಎಲ್ಲಿಯೋ (ತೂರುರು) ನಾಳೆ ಎಲ್ಲಿಯೋ (ತೂರುರು)
ಇಂದು ಹಾಡುವ (ತೂರುರು) ಕೂಡಿ ಆಡುವ (ತೂರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ ದೂಡಿ ಲೆಜ್ಜೆ ಕುಣಿವ ನಲಿವ ಮೆರವಾ

ಜೀವನ ಮಧುವ ಹೀರುತ ಬೆರೆವ ಕಾಲವ ನಿಲ್ಲಿಸಿ ಚಿಂತೆಯ ಮರೆವ
ಜೀವನ ಮಧುವ ಹೀರುತ ಬೆರೆವ ಕಾಲವ ನಿಲ್ಲಿಸಿ ಚಿಂತೆಯ ಮರೆವ
ಬನ್ನಿ ಹಾರೋ ಜೋಡಿ ಹಕ್ಕಿ ಹಾಗೆ ಬಾನ ಸೇರಿ ಚುಕ್ಕಿ ಹಾಗೆ ನಗುವ ನಲಿವ ಮೆರೆವಾ
ನಿನ್ನೆ ಎಲ್ಲಿಯೋ (ತೂರುರು) ನಾಳೆ ಎಲ್ಲಿಯೋ (ತೂರುರು)
ಇಂದು ಹಾಡುವ (ತೂರುರು) ಕೂಡಿ ಆಡುವ (ತೂರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ ದೂಡಿ ಲೆಜ್ಜೆ ಕುಣಿವ ನಲಿವ ಮೆರವಾ
--------------------------------------------------------------------------------------------------------------------------

ನಕ್ಕರೆ ಅದೇ ಸ್ವರ್ಗ (1967)
ಸಾಹಿತ್ಯ: ಅರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಸುಶೀಲಾ, ಪಿ.ಬಿ.ಶ್ರೀನಿವಾಸ್ 

ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ ಹೂಂ
ಗಂಡು : ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ
            ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
            ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ

ಗಂಡು : ಹಣದಲ್ಲಿ ಅರಸಿದೇ ಶಾಂತಿ ಬರಿದೆನ್ನ ಮನಸಿನ ಭ್ರಾಂತೀ
            ಹಣದಲ್ಲಿ ಅರಸಿದೇ ಶಾಂತಿ ಬರಿದೆನ್ನ ಮನಸಿನ ಭ್ರಾಂತೀ
ಹೆಣ್ಣು : ಮಮತೆ ಪ್ರೀತಿ ಸಹನೆ ಶಾಂತಿ           
          ಮಮತೆ ಪ್ರೀತಿ ಸಹನೆ ಶಾಂತಿ  ಬಾಳನು ಬೆಳಗುವ ಜ್ಯೋತಿ
          ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
          ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ
         
ಗಂಡು : ಮನದಲ್ಲಿ ತುಂಬಿರೆ ಒಲವು ಮನೆಯಲ್ಲಿ ಸಂತಸ ಗೆಲುವು
           ಮನದಲ್ಲಿ ತುಂಬಿರೆ ಒಲವು ಮನೆಯಲ್ಲಿ ಸಂತಸ ಗೆಲುವು
ಗಂಡು : ನಗುವೇ ನಗವು ನಲಿವೇ ಜಗವು
           ನಗುವೇ ನಗವು ನಲಿವೇ ಜಗವು ಜೀವನ ಸೊಬಗಿನ ಹೂವು
ಇಬ್ಬರು : ಬಾಳೋಂದು ಭಾವಗೀತೆ ಆನಂದ ತುಂಬಿದ ಕವಿತೆ
            ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ
--------------------------------------------------------------------------------------------------------------------------

ನಕ್ಕರದೇ ಸ್ವರ್ಗ (೧೯೬೭)...... ಈ ಹಾಯೀ ಇನ್ನೆಲ್ಲಿ 
ಸಂಗೀತ : ಎಂ.ರಂಗರಾವ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಡಾ.ಪಿ.ಸುಶೀಲಾ 

ಆಆಆ... ಆಆಆ... ಆಆಆ.. ಆಆಆ....
ಈ ಹಾಯೀ ಇನ್ನೇಲ್ಲಿ ಇಲ್ಲೇನೇ  ಬಾಳಲ್ಲಿ
ಈ ಹಾಯೀ ಇನ್ನೇಲ್ಲಿ ಇಲ್ಲೇನೇ ಬಾಳಲ್ಲಿ
ಈ ಹಾಯೀ ಇನ್ನೇಲ್ಲಿ

ಆಆಆ... ಆಆಆ... ಆಆಆ.. ಆಆಆ....
ಇದೇ ಸುಖದಾ ಮಹಾ ಸೌಧ ಅನುರಾಗದ ಬಂಧ 
ಇದೇ ಸುಖದಾ ಮಹಾ ಸೌಧ ಅನುರಾಗದ ಬಂಧ 
ಗುಡಿಯಲ್ಲಿ ನಾ ದೇವ ಗುಡಿಸಿನಲಿ ತಾ ನಿಂದಾ 
ಗುಡಿಯಲ್ಲಿ ನಾ ದೇವ ಗುಡಿಸಿನಲಿ ತಾ ನಿಂದಾ 
ಈ ನಮ್ಮ ಈ ಪ್ರೇಮ ಎಂದೆಂದೂ ಆನಂದ 
ಈ ಹಾಯೀ ಇನ್ನೇಲ್ಲಿ ಇಲ್ಲೇನೇ ಬಾಳಲ್ಲಿ
ಈ ಹಾಯೀ ಇನ್ನೇಲ್ಲಿ 

ಆಆಆ... ಆಆಆ... ಆಆಆ.. ಆಆಆ....
ಇದೇ ನಗೆಯೇ ಸದಾ ಇರಲೀ ಬರದೆಂದೂ ಬಿರುಗಾಳೀ 
ಇದೇ ನಗೆಯೇ ಸದಾ ಇರಲೀ ಬರದೆಂದೂ ಬಿರುಗಾಳೀ 
ಹಂಗಿಲ್ಲದ ಗಂಜೀ ಆ ಸುಧೆಯ ಕಾರಂಜೀ 
ಹಂಗಿಲ್ಲದ ಗಂಜೀ ಆ ಸುಧೆಯ ಕಾರಂಜೀ 
ಸಂತೋಷ ಸಂಸಾರ  ಈ ಬಾಳ ಬಂಗಾರ 
ಈ ಹಾಯೀ ಇನ್ನೇಲ್ಲಿ ಇಲ್ಲೇನೇ ಬಾಳಲ್ಲಿ
ಈ ಹಾಯೀ ಇನ್ನೇಲ್ಲಿ 
--------------------------------------------------------------------------------------------------------------------------

No comments:

Post a Comment