823. ಎಸ್.ಪಿ. ಸಾಂಗ್ಲಿಯಾನ -೨ ( ೧೯೮೮)

ಎಸ್.ಪಿ. ಸಾಂಗ್ಲಿಯಾನ -೨ ಚಲನಚಿತ್ರದ ಹಾಡುಗಳು 
  1. ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
  2. ಮೇರು ಗಿರಿ ಆಣೆ ನೀಲಿ ಕಡಲಾಣೆ
  3. ಒಂದು ಮುತ್ತಿನಂಥ ಮುತ್ತು 
  4. ರಾಮಯ್ಯ ರಾಮಯ್ಯ ನೀ 
  5. ಮೈಯ್ಯೆಲ್ಲಾ ಕಣ್ಣಿಂದ ಒಬ್ಬ 

ಎಸ್.ಪಿ. ಸಾಂಗ್ಲಿಯಾನ -೨ ( ೧೯೮೮) - ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮನು, ಲತಾ ಹಂಸಲೇಖ 

ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಕಾಂಚಾಣ ಕೋಪವೇ... ಪ್ರೇಮದಾ ಬಿಂಬ ನಿನಾದರೆ ನಾ ನಿನ್ನ ಪ್ರತಿಬಿಂಬವೇ  
ಪ್ರೇಮದಾ ಬಿಂಬ ನಿನಾದರೆ ನಾ ನಿನ್ನ ಮರು ಬಿಂಬವೇ  
ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಆನೆ ಮೇಲೆ ಟೂಟೂ... ಒಂಟೆ ಮೇಲೆ ಟೂಟೂ... 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಕಾಂಚಾಣ ಕೋಪವೇ...ಆನೆಯ ಮೇಲೆ ಅಂಬಾರಿಯ ನಾ ಒಳಗೆ ದಯಮಾಡಿಸು 
ಒಂಟೆಯ ಮೇಲೆ ಹೂವ್  ಹಾಸಿಗೆ ನಾ ಕುಳಿತು ರಾರಾಜಿಸು... 
ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ

ಪ್ರತಿ ರಾತ್ರಿ ಕಣ್ಣ ಮುಚ್ಚದೇ ನಾನು.. ನಾನು.. 
ಪ್ರತಿ ಘಳಿಗೆ ಕಾದು ಕುಳಿತರು ಕನಿಕರಿಸದೆ ಹೋದೆ 
ನಿನ್ನ ಕಣ್ಣ ಒಳಗೆ ಕುಳಿತೇನೆ ನಾನು...  ನಾನು 
ಕನಸಲ್ಲಿ ಬೆರೆವ ಎಂದರು ನಿದ್ರಿಸದೆ ಹೋದೆ 
ಇಂದು ಮುಂಜಾನೆ ಮುಂಬಾಗಿಲಲಿ ಚುಕ್ಕಿ ಇಟ್ಟಾಗ ಬರಲಿಲ್ಲ 
ಅಯ್ಯೋ ಪ್ರಿಯೆ ನಿನ್ನ ಕೈಯ್ಯಲ್ಲಿ ಬರೆದ ರಂಗೋಲಿಯಲ್ಲಿ ನಾನಿದ್ದೆ 
ಹೋಗು ಎಲ್ಲಾ ಡುಪೂ ಡುಪೂ 
ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಬಾನಲ್ಲಿ ಮಳೆಯ ಬಿಲ್ಲಿಗೆ ನಿನ್ನ ನಡುವು 
ಸಮವೆಂದು ಕವನ ಬರೆದರೂ ಬಳುಕದೆಯೇ ಹೋದೆ 
ನೂರೆಂಟು ಬಣ್ಣ ತುಂಬಿದ ಅಂದ ಇರಲು 
ಬರಿ ಏಳು ಬಣ್ಣ ಹೊಗಳಲು ಸಿಹಿ ಸಮಯವ ಕಳೆದೆ 
ನೋಡು ನಿಂತೋಯಿತು ಸುವ್ವ ಲಾಲಿ ಶಬ್ದ ಭಂಡಾರವು ಖಾಲಿ
ಅಯ್ಯೋ ಪ್ರಿಯಾ ನಿನ್ನ ಕೈಯಲ್ಲೇ ಇರುವ ಚಿತ್ತಾರ ಲೇಖನಿ ನಾನು
ಹೋಗು.... ಎಲ್ಲಾ ಡುಪೂ ಡುಪೂ
ಟುಟು ಟೂ ಟುಟು ಟೂ...  ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಲಾಲಾ ಲಲಲಾ ಲಾಲಾ ಲಾಲ್
ಕಾಂಚಾಣ ಕೋಪವೇ... ಪ್ರೇಮದಾ ಬಿಂಬ ನಿನಾದರೆ ನಾ ನಿನ್ನ ಪ್ರತಿಬಿಂಬವೇ  
ಪ್ರೇಮದಾ ಬಿಂಬ ನಿನಾದರೆ ನಾ ನಿನ್ನ ಮರು ಬಿಂಬವೇ
-------------------------------------------------------------------------------------------------------------------------

ಎಸ್.ಪಿ. ಸಾಂಗ್ಲಿಯಾನ -೨ ( ೧೯೮೮) - ಮೇರು ಗಿರಿ ಆಣೆ ನೀಲಿ ಕಡಲಾಣೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮನು, ಲತಾ ಹಂಸಲೇಖ 

ಮೇರು ಗಿರಿ ಆಣೆ ನೀಲಿ ಕಡಲಾಣೆ ನೀನು ವಧುವಾದೆ ನನಗೆ
ಭೂಮಿ ಆಕಾಶ ಏನಾಯ್ತೋ ಕಾಣೆ ಹೃದಯ ತೇಲಾಡಿದೆ ದೇವರಾಣೆ
ಏಳು ಸ್ವರದಾಣೆ ನಾದ ಶೃತಿ ಆಣೆ ನೀನು ವರವಾದೆ ನನಗೆ
ಕನಸು ನನಸಾಗಿಸಿ ನೀನು ಬಂದೆ ಸತಿಯ ಸೌಭಾಗ್ಯ ದ ಸೌಖ್ಯ ತಂದೆ

ಒಂದುಗೂಡಿತು ನಾಲ್ಕು ಕಂಗಳು  ನಾಚಿಕೊಂಡಿತು ತಿಳಿಯ ತಿಂಗಳು
ನಮ್ಮ ಮಿಲನವ ನೋಡಬಂದವು ಆರು ಋತುಗಳು
ಏಕವಾದವು ನಾಲ್ಕು ತುಟಿಗಳು   ಮೂಕವಾದವು ದುಂಬಿ ದನಿಗಳು
ಒಂದೇ ದಿನದಲ್ಲಿ ಶರಣು ಬಂದವು ಎಲ್ಲ ಸುಖಗಳು
ಶುಭಯೋಗದ ಸುಖರಾಗದ ಆಲಾಪ ಹೊರಟಿದೆ
ಪ್ರೇಮದ ಸಂಗೀತ ಕಚೇರಿಯಲಿ
ಶುಭಯೋಗದ ಸುಖರಾಗದ ಆಲಾಪ ಹೊರಟಿದೆ
ಪ್ರೇಮದ ಸಂಗೀತ ಕಚೇರಿಯಲಿ
ಮೇರು ಗಿರಿ ಆಣೆ ನೀಲಿ ಕಡಲಾಣೆ ನೀನು ವಧುವಾದೆ ನನಗೆ
ಭೂಮಿ ಆಕಾಶ ಏನಾಯ್ತೋ ಕಾಣೆ  ಹೃದಯ ತೇಲಾಡಿದೆ ದೇವರಾಣೆ

ಪ್ರೇಮ ಪೂಜೆಗೆ ನಾವೇ ಕುಸುಮವು ರಾಗ ಸೇವೆಗೆ ನಾವೇ ಪ್ರಥಮವು
ಬಾಡದಿರಲು ನಾ ಅಕ್ಷಯಾಮೃತ ನಿನ್ನ ಸ್ಮರಣೆಯು
ನಿನ್ನ ಗುಣಗಳೇ ಒಂದು ಸಂಪುಟ
ನಿನ್ನ ರೂಪವೇ ಅದರ ಮುಖಪುಟ
ಮಾರು ಹೋದೆನು ಸೂರೆಯಾದೆನು ಶರಣು ಎಂದೇನೂ
ಅನುಗಾಲದ ಅಪರೂಪದ ಆನಂದ ಹೊರಟಿದೆ
ಸ್ನೇಹದ ಸಂತೋಷ ಕೂಟದಲ್ಲಿ
ಅನುಗಾಲದ ಅಪರೂಪದ ಆನಂದ ಹೊರಟಿದೆ
ಸ್ನೇಹದ ಸಂತೋಷ ಕೂಟದಲ್ಲಿ
ಮೇರು ಗಿರಿ ಆಣೆ ನೀಲಿ ಕಡಲಾಣೆ ನೀನು ವರನಾದೆ ನನಗೆ
ಭೂಮಿ ಆಕಾಶ ಏನಾಯ್ತೋ ಕಾಣೆ ಹೃದಯ ತೇಲಾಡಿದೆ ದೇವರಾಣೆ
ಏಳು ಸ್ವರದಾಣೆ ನಾದ ಶೃತಿ ಆಣೆ ನೀನು ವರವಾದೆ ನನಗೆ
ಕನಸು ನನಸಾಯ್ತು ಮಂದಾರ ಮಾಲೆ
ಹರಸಿ ಶುಭ ಎಂದಿತಾ ಇಂದ್ರನೋಲೆ
------------------------------------------------------------------------------------------------------

ಎಸ್.ಪಿ. ಸಾಂಗ್ಲಿಯಾನ -೨ ( ೧೯೮೮) -  ಒಂದು ಮುತ್ತಿನಂಥ ಮುತ್ತು 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ 

------------------------------------------------------------------------------------------------------

ಎಸ್.ಪಿ. ಸಾಂಗ್ಲಿಯಾನ -೨ ( ೧೯೮೮) -  ರಾಮಯ್ಯ ರಾಮಯ್ಯ ನೀ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ 

------------------------------------------------------------------------------------------------------

ಎಸ್.ಪಿ. ಸಾಂಗ್ಲಿಯಾನ -೨ ( ೧೯೮೮) -  ಮೈಯ್ಯೆಲ್ಲಾ ಕಣ್ಣಿಂದ ಒಬ್ಬ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ 

------------------------------------------------------------------------------------------------------

    No comments:

    Post a Comment