196. ಪ್ರಿಯ (1979)


ಪ್ರಿಯಾ ಕನ್ನಡ ಚಲನಚಿತ್ರದ ಹಾಡುಗಳು 
  1. ಏ....ಕವಿತೆ ನೀನೂ ರಾಗ ನಾನೂ
  2. ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
  3. ಸಾಗರದಾಚೆಯ 
  4. ನನ್ನಲೀ ನೀನಾಗಿ 
  5. ತಂಗಾಳಿಯೇ ನೀ ಬೀಸದೆ 
ಪ್ರಿಯ (1979) - ಏ... ಕವಿತೆ ನೀನೂ ರಾಗ ನಾನೂ......
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಇಳಯರಾಜ ಗಾಯನ : ಎಸ್.ಜಾನಕಿ -ಕೆ.ಜೆ.ಏಸುದಾಸ್

ಹೆಣ್ಣು : ಆಆಆ....                  ಗಂಡು : ಆಆಆಅ...
ಹೆಣ್ಣು : ಏ....ಕವಿತೆ ನೀನೂ ರಾಗ ನಾನೂ
          ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
          ಏ...ಕವಿತೆ ನೀನೂ ರಾಗ ನಾನೂ..

ಗಂಡು : ನಿನ್ನಾ ರೂಪ ಕಂಡು ತಂಗಾಳಿ ಬಂದಿದೆ
           ನಿನ್ನಾ ರೂಪ ಕಂಡು ತಂಗಾಳಿ ಬಂದಿದೆ
           ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
           ಹೋಯ್..ಹೋಯ್..ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
           ತನ್ನಾಸೆ ಇನ್ನೂ ತೀರದಾಗಿ ಬೀಸಿ ಬೀಸಿ ಬಂದು ಹೋಗಿ........
ಹೆಣ್ಣು : ಏ....ಕವಿತೆ ನೀನೂ ರಾಗ ನಾನೂ

ಹೆಣ್ಣು : ನಿನ್ನಾ ಮಾತು ಕೇಳಿ ಆ ಗಿಳಿಯೇ ನಾಚಿದೆ
          ನಿನ್ನಾ ಮಾತು ಕೇಳಿ ಆ ಗಿಳಿಯೇ ನಾಚಿದೆ
          ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
          ಹೋಯ್ ಹೋಯ್..ಮುದ್ದುಮಾತ ಮರೆತು ಕಲ್ಲಾಗಿಹೋಗಿದೆ
          ನಿನ್ನಿಂದ ಪ್ರೀತಿ ಮಾತು ಇನ್ನು ಕೇಳಿ ಕೇಳಿ ಕಲಿವಾ ಆಸೆ..........
ಗಂಡು  : ಏ....ಕವಿತೆ ನೀನೂ ರಾಗ ನಾನೂ

ಗಂಡು : ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
            ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ಹೆಣ್ಣು : ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
          ಹೋಯ್ ಹೋಯ್ ..ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಇಬ್ಬರು : ನಿನ್ನಿಂದ ನನ್ನ ಯಾರೂ ಇನ್ನು ಎಂದೂ ದೂರ ಮಾಡಲಾರದೆಂದೂ........
ಹೆಣ್ಣು : ಏ....ಕವಿತೆ ನೀನೂ ರಾಗ ನಾನೂ
ಗಂಡು : ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
          ಹೇ...ಕವಿತೆ ನೀನೂ ರಾಗ ನಾನೂ..
--------------------------------------------------------------------------------------------------------------------------

ಪ್ರಿಯ (1979) - ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ .ಸಂಗೀತ : ಇಳಯರಾಜ,  ಸಾಹಿತ್ಯ : ಚಿ.ಉದಯಶಂಕರ  ಗಾಯನ : ಎಸ್.ಜಾನಕಿ

ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್  ಐ ಲವ್ ಯು  ಲವ್ ಯು ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಐ ಲವ್ ಯು  ಲವ್ ಯು ಲವ್ ಯು
ನಿನ್ನ ಬಿಟ್ಟು ನಾನಿಲ್ಲ ನಿನ್ನಾ ರೂಪ ನನ್ನ ಕಂಗಳಲ್ಲಿ ನೀನೇ ನಂದಾದೀಪ ನನ್ನಾ ಬಾಳಿನಲಿ
ಐ ಲವ್ ಯು.... ಐ ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್  ಐ ಲವ್ ಯು

ನಿನ್ನ ಕಂಡಾಗ ತಾನೇ ಆಸೆ ಏನು ಕಣ್ಣಾ ಬಾಷೆ ಏನು ಕಂಡೇ ಅಂದೇ ನಾ ಸೋತುಹೋದೆ ನಲ್ಲಾ
ಮನದಲ್ಲಿ ನಿನ್ನ ಸೇರಿದೆ ಒಲವಿನ ಸುಖವನು ಸವಿಯಲು ಬಾ ಕಾಡದೇ ... ಐ ಲವ್ ಯು  ಐ ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ... ಐ ಲವ್ ಯು  ಲವ್ ಯು ಲವ್ ಯು

ನಿನ್ನಾ ನಾ ಕಾಣಾದಾಗ ಮುಳ್ಳಿನಲ್ಲಿ ಬಿದ್ದ ಹೂವಿನಂತೆ..  ಆದೇ
ನೊಂದು ನಾ ಬಾಡಿ ಹೋದೆ ನಲ್ಲಾ ನಿನಗಾಗಿ ನಾನು  ಕೂಗಿದೆ
ನಲ್ಲೆಯ ಪ್ರಾಣವ ಉಳಿಸಲು ಬಾ ಇಲ್ಲಿಗೆ ಐ ಲವ್ ಯು  ಐ ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಐ ಲವ್ ಯು  ಲವ್ ಯು ಲವ್ ಯು

ಕಣ್ಣಲ್ಲಿ ಪ್ರೇಮಗೀತೆ ಹಾಡಿ ಹಾಡಿ ನನ್ನ ಕಾಡಿ ಓಡಿ ಹೋದೆ ಹೀಗೇಕೆ ದೂರವಾದೆ ನಲ್ಲಾ
ಈ ನೋವ ಜೀವ ತಾಳದೆ ಗೆಳತಿಯ ಬಯಕೆಯ ಅರಿಯಲು ಬಾ ಮೆಲ್ಲಗೇ.. ಐ ಲವ್ ಯು  ಐ ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಐ ಲವ್ ಯು  ಲವ್ ಯು ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಐ ಲವ್ ಯು
ನಿನ್ನ ಬಿಟ್ಟು ನಾನಿಲ್ಲ ನಿನ್ನಾ ರೂಪ ನನ್ನ ಕಂಗಳಲ್ಲಿ ನೀನೇ ನಂದಾದೀಪ ನನ್ನಾ ಬಾಳಿನಲಿ
ಐ ಲವ್ ಯು  ಐ ಲವ್ ಯು ಐ ಲವ್ ಯು
--------------------------------------------------------------------------------------------------------------------------

ಪ್ರಿಯ (1979) - ಸಾಗರದಾಚೆಯ ಸೊಬಗಿನ ನಾಡನು ಕಂಡೇ ನಾನೀಗ ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ  ಗಾಯನ : ಕೆ.ಜೆ.ಏಸುದಾಸ್, ಕೋರಸ್  

ಗಂಡು : ಸಾಗರದಾಚೆಯ ಸೊಬಗಿನ ನಾಡನು  ಕಂಡೇ ನಾನೀಗ
            ಸಾಗರದಾಚೆಯ ಸೊಬಗಿನ ನಾಡನು  ಕಂಡೇ ನಾನೀಗ
            ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..
            ಸಾಗರದಾಚೆಯ ಸೊಬಗಿನ ನಾಡನು  ಕಂಡೇ ನಾನೀಗ

ಗಂಡು : ನೋಡುತಲಿರಲು ಸಂತೋಷ ಮನದಲೇನೂ ಉಲ್ಲಾಸ
            ಯಾರ ಮನಸ್ಸಿನಲ್ಲೂ ಕಾಣಿರೋ ರೋಷಾ.. ದ್ವೇಷಾ..
            ನಗುನಗುತಾ ನಯವಾಗಿ ಸರಸದಲಿ ಹೀತವಾಗಿ
            ಸ್ನೇಹದಿಂದ ಬರೆಯುತ ನುಡಿಯುವ ಪ್ರೀತಿಯಿಂದ ಕಳೆಯುವ ಜನಗಳ ನಾಡೇ ಸಿಂಗಾಪುರೂ
            ಸಾಗರದಾಚೆಯ ಸೊಬಗಿನ ನಾಡನು  ಕಂಡೇ ನಾನೀಗ
            ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..

ಕೋರಸ್ : ಲಲಲಲಲಲಲಲಲಲಾ ಲಲಲಲಲಲಲಲಲಲಾ ... ಲಾಲಾಲರಲಲಲಲಲಾ
ಗಂಡು : ಇಂದು ಇವರೂ ಬಾಲಕರೂ .. ನಾಳೆ ನಾಡನಾಳುವರೂ
            ಜಿಂಕೆಮರಿಗಳಂತೇ ಆಡಿ ಮನವ ಸೆಳೆಯುವರೂ
            ಒಣ ಮಾತೂ ಇಲ್ಲಿಲ್ಲಾ.. ವಂಚನೆಯ ಸುಳಿವಿಲ್ಲಾ
            ಭಾರತ ಚೀನಾ ಮಲೆಯ ಪ್ರಜೆಗಳೂ ಸೋದರರಂತೆ ಪ್ರೇಮದಿ ಬಾಳುವ ಊರೇ ಸಿಂಗಾಪುರೂ..
            ಸಾಗರದಾಚೆಯ ಸೊಬಗಿನ ನಾಡನು  ಕಂಡೇ ನಾನೀಗ

ಗಂಡು : ಸೂರ್ಯ ಕಾಂತಿ ಹೂವಂತೇ .. ಕಾಣುವಂತೇ ಚೆಲುವೆಯರೂ
            ಹೊನ್ನ ಬಣ್ಣ ಮೈ ಕಾಂತಿ ಕಣ್ಣ ತುಂಬುವರೂ ..
            ನಡೆವಾಗ ಕುಣಿವಂತೇ ನುಡಿವಾಗ ಹಾಡಂತೇ ..
            ಕಾವ್ಯದೀ ಕೂಡಾ ಕಾಣದ ಕಣ್ಣಿಗೇ ಕಲ್ಪನೆಯಲ್ಲೂ ಬಾರದ ಅಂದವೂ .. ಆಹಾ.. ಸಿಂಗಪುರೂ..
            ಸಾಗರದಾಚೆಯ ಸೊಬಗಿನ ನಾಡನು  ಕಂಡೇ ನಾನೀಗ
            ಹೊಸ ಜನರ ನೋಡುತಿಹೆ.. ಲಾಲಲಲಲಲಲಲಲಲ್ಲಲ್ಲ
ಕೋರಸ್ : ಲಾಲಲಲಲಲಲಲಲಲ್ಲಲ್ಲ ಲಾಲಲಲಲಲಲಲಲಲ್ಲಲ್ಲ ಲಾಲಲಲಲಲಲಲಲಲ್ಲಲ್ಲ
--------------------------------------------------------------------------------------------------------------------------

ಪ್ರಿಯ (1979) - ಸಾಗರದಾಚೆಯ ಸೊಬಗಿನ ನಾಡನು ಕಂಡೇ ನಾನೀಗ ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ  ಗಾಯನ : ಕೆ.ಜೆ.ಏಸುದಾಸ್ , ಎಸ್.ಜಾನಕೀ 

ಹೆಣ್ಣು : ಹ್ಯಾಪಿ ಅಪ್ಪು ಸುಕ್ಕವಾ ಯಾಲೂ ಅಪ್ಪು ಚೀಕವಾ
ಗಂಡು : ಹ್ಯಾಪಿ ಅಪ್ಪು ಸುಕ್ಕವಾ ಲಾಲು ಅಕ್ಕೂ ಚಿಂತವಾ
ಹೆಣ್ಣು : ಸಾಯ ಪಾಂಡಡೀರನ್  ಸಾಯಾ ದರಹರಹರಿ ಎರಡಕಾಮ್
ಗಂಡು : ಸಾಯ ಪಾಂಡಡೀರಮೂನ್  ಸಾಯ ಬರಹರಿಹರೀಇಡೊಕಾಮ್
ಹೆಣ್ಣು : ಪಡಸಾ ಓರಾಗಂಟಿ ಫಡಾನೂ ..
ಗಂಡು : ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ
ಹೆಣ್ಣು : ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ
ಗಂಡು : ಹೂವಲ್ಲಿ ಗಂಧ ಒಂದಾಗಿ ಸೇರಿ ಬೆರೆತಂತೇ ಇರುವ ಹಾಯಾಗೀ
ಹೆಣ್ಣು : ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ )
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ)
          ಹೂವಲ್ಲಿ ಗಂಧ ಒಂದಾಗಿ ಸೇರಿ ಬೆರೆತಂತೇ ಇರುವ ಹಾಯಾಗೀ 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ಹೂವಲ್ಲಿ ಗಂಧ ಒಂದಾಗಿ ಸೇರಿ ಬೆರೆತಂತೇ ಇರುವ ಹಾಯಾಗೀ 

ಕೋರಸ್ : ಲಾಲಲಲಲಲ್ಲಲ್ಲಲಾಲಾ ಲಾಲಲಲಲಲ್ಲಲ್ಲಲಾಲಾ  ಲಾಲಲಲಲಲ್ಲಲ್ಲಲಾಲಾ
               ಲಾಲಲಲಲಲ್ಲಲ್ಲಲಾಲಾ ಲಾಲಲಲಲಲ್ಲಲ್ಲಲಾಲಾ ಲಾಲಲಲಲಲ್ಲಲ್ಲಲಾಲಾ
ಹೆಣ್ಣು : ತನುವಿಗೇ ನಿನ್ನಾಸೇ ಮನಸಿಗೇ ನಿನ್ನಾಸೇ ಅಧರಕೆ ನಿನ್ನಾಸೇ ಹೃದಯಕೆ ನಿನ್ನಾಸೇ
ಗಂಡು : ಅವಕ್ಕಂತೇ ಮತ್ತಾ ಗುಮಾರಾಯಾ  ಜನಾಲೂ ಪಾತ್ ತಮಕಾಯ್
ಹೆಣ್ಣು : ತನುವಿಗೇ ನಿನ್ನಾಸೇ ಮನಸಿಗೇ ನಿನ್ನಾಸೇ ಅಧರಕೆ ನಿನ್ನಾಸೇ ಹೃದಯಕೆ ನಿನ್ನಾಸೇ
           ನೀನಾಗಿ ತಂದ ನೂರಾಸೇ ಕಣ್ಣಲಿ ನುಡಿವಾ ಆ ಧಾಟಿ 
           ಜೀವವನು ಸೆಳೆಯುತಿರೇ ನೋಡುಗಳ ಮರೆಸುತಿರೆ ಸಾವಿರ ವರುಷ ಬಾಳುವ ಆಸೇ 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ಹೂವಲ್ಲಿ ಗಂಧ ಒಂದಾಗಿ ಸೇರಿ ಬೆರೆತಂತೇ ಇರುವ ಹಾಯಾಗೀ 

ಕೋರಸ್ : ಆಆಆಅ.. ಆಆಆ... ಆಆಆ.... ಆಆಆಅ.. ಆಆಆ... ಆಆಆ....
ಹೆಣ್ಣು : ಸಂಜೆಯ ಈ ಬಿಸಿಲೂ ರಂಗನೂ ಚೆಲ್ಲಿರಲೂ ಹೊನ್ನಿನ ಈ ಒಡಲೂ ಬಾಳಿಗೆ ಬಳುಕಿರಲೂ
ಗಂಡು : ಹತ್ತಿ ಕಿತ್ತ ಸಿದಾ ಜೂವಾ ಜೂವಾ ಒರಾಂತ್ ಜಲ್ ಜೂವಾ ಜೂವಾ         
ಹೆಣ್ಣು : ಸಂಜೆಯ ಈ ಬಿಸಿಲೂ ರಂಗನೂ ಚೆಲ್ಲಿರಲೂ ಹೊನ್ನಿನ ಈ ಒಡಲೂ ಬಾಳಿಗೆ ಬಳುಕಿರಲೂ
          ಏನೇನೋ ಕನಸೂ ನಿನ್ನಿಂದಾ ನನ್ನಲ್ಲೀ ಏನೋ ಆನಂದಾ .. 
           ನನ್ನನೀಯಾ ನನ್ನ ಒಡಲು ನನ್ನ ಒಲವೂ ನನ್ನುಸಿರೂ ಸಾವಿರ ಜನುಮಾನೂ ನಿನ್ನದೇ ಎಂದೂ 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ಹೂವಲ್ಲಿ ಗಂಧ ಒಂದಾಗಿ ಸೇರಿ ಬೆರೆತಂತೇ ಇರುವ ಹಾಯಾಗೀ 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 


          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
          ನನ್ನಲ್ಲೀ ನೀನಾಗಿ ನಿನ್ನಲ್ಲೀ ನಾನಗೀ (ಓ) 
-------------------------------------------------------------------------------------------------------------------------

ಪ್ರಿಯ (1979) - ತಂಗಾಳಿಯೇ.. ನೀ ಬೀಸದೇ ನಿಲ್ಲೂ ನಿಲ್ಲೂ ಅಲ್ಲೀ 
ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ  ಗಾಯನ : ಕೆ.ಜೆ.ಏಸುದಾಸ್ 

ತಂಗಾಳಿಯೇ..  ನೀ ಬೀಸದೇ...  ನಿಲ್ಲೂ ನಿಲ್ಲೂ ಅಲ್ಲೀ..  ಎಲ್ಲಾ ನೀನೂ ಬಲ್ಲೇ ..
ಈ ಬೇಗೆಯಾ ಕಂಡೇಯಾ .. ಏನೆಂದೂ ನೀ ಹೇಳಯ್ಯಾ.. ಓ ಪ್ರಿಯಾ .. ಓ ಪ್ರಿಯಾ .. ಓ ಪ್ರಿಯಾ ..

ಸೀತೆಗಾಗಿ ಅಳುತ ಕೂಗಿ ರಾಗದಲ್ಲಿ ಸೋತು ಹೋಗಿ
ವಿರಹದಿಂದ ನೊಂದು ಬೆಂದೂ ಬಾಡಿ ಹೋಗದೇ ..
ಅವಳಿಗಾಗಿ ಅಲೆಯುತಿರುವೇ ಸೀತೆಯಲ್ಲೂ ಕಾಣೇನೇ .. ಓ ಪ್ರಿಯಾ .. ಓ ಪ್ರಿಯಾ .. ಓ ಪ್ರಿಯಾ ..

ಎಲ್ಲೇ ಇರಲೀ .. ಏಕೆ ಹೀಗೆ ಎಲ್ಲ ಮರೆತೂ ಮೌನವಾದೇ
ನನ್ನ ದನಿಯಾ ಇನ್ನೂ ನೀನೂ ಕೇಳಲಾರೆಯಾ..
ಇಲ್ಲೇ ನಾನು ಇರುವೇನೆಂದೂ ಒಮ್ಮೆ ಕೂಗಲಾರೆಯಾ
ತಂಗಾಳಿಯೇ..  ನೀ ಬೀಸದೇ...  ನಿಲ್ಲೂ ನಿಲ್ಲೂ ಅಲ್ಲೀ..  ಎಲ್ಲಾ ನೀನೂ ಬಲ್ಲೇ ..
ಈ ಬೇಗೆಯಾ ಕಂಡೇಯಾ .. ಏನೆಂದೂ ನೀ ಹೇಳಯ್ಯಾ.. ಓ ಪ್ರಿಯಾ .. ಓ ಪ್ರಿಯಾ .. ಓ ಪ್ರಿಯಾ ..
--------------------------------------------------------------------------------------------------------------------------

No comments:

Post a Comment