189. ಬೆಳ್ಳಿ ಮೋಡಗಳು (1992)


ಬೆಳ್ಳಿ ಮೋಡಗಳು ಚಿತ್ರದ ಹಾಡುಗಳು 
  1. ಹೃದಯವೇ ನಿನ್ನ ಹೆಸರಿಗೆ 
  2. ಮಳೆ ಬಿಲ್ಲ ಸಿಂಗಾರ 
  3. ರಾಮ ಬಾಣ ಎದೆ ಸೀಳಿ 
  4. ಮಾವಿನಲಿ ತೂಗಿರುವ 
  5. ಲೋಕವನೆ ತೂಗಿರುವ 
  6. ಭೂಮಿಯಲ್ಲಿ ಚಂದಿರನ 
ಬೆಳ್ಳಿ ಮೋಡಗಳು (1992) - ಭೂಮಿಯಲಿ ಚಂದಿರನ ಬೆಳದಿಂಗಳ ಲಾಲಿ
ಸಾಹಿತ್ಯ: ಕೆ.ವಿ.ರಾಜು ಸಂಗೀತ: ಉಪೇಂದ್ರಕುಮಾರ್ ಗಾಯನ: ಎಸ್.ಜಾನಕಿ

ಭೂಮಿಯಲಿ ಚಂದಿರನ ಬೆಳದಿಂಗಳ ಲಾಲಿ ಉಸಿರಾ ಬೆಸುಗೇ
ಗಾಳೀ ಹಾಡು ಲಾಲೀ ಜೋ ಜೋ ಮುದ್ದು ಲಾಲೀ ಮೆಲ್ಲಗೇ...ಭೂಮಿಯಲಿ...
ಓಹೋ ಹಗಲೆಲ್ಲಾ ನಿನಗಾಗಿ ಬರಿದೇ ಕಾದೆನೂ
ಕರುಳಾಗೇ ಇರುಳೆಲ್ಲಾ ಹೊಸ ಲಾಲಿ ನೀಡೆನೂ
ಓಹೋ ಅನುರಾಗ ಅನುಗಾಲ ನಿನದೇ ಆಗಲೀ
ಯುಗವೆಲ್ಲಾ ಸುಖವಾಗೀ ನಿನ್ನ ಸೇರಿ ಸಾಗಲೀ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವಾ ನಗಲೀ
ಹಿತವಾದ ಬೆಳಕೆಲ್ಲಾ ನಿನ್ನ ಹರಸೀ ಬರಲೀ

ಗಾಳಿಯಲಿ ತೇಲಿರುವ ಸಿಹಿಮುತ್ತಿನ ಲಾಲೀ ನಿನಗೇ ಸಿಗಲೀ
ಗಾಳೀ ಹಾಡು ಲಾಲೀ ಜೋ ಜೋ ಮುದ್ದು ಲಾಲೀ ಮೆಲ್ಲಗೇ...ಭೂಮಿಯಲಿ...
ಓಹೋ ಬದುಕೆಲ್ಲಾ ಬಿರುಗಾಳೀ ತನ್ನ ಕೈ ಚಾಚಿದೇ
ಒಡಲೆಂಬಾ ಅಂಗಳದಿ ನಿನ್ನ ಮುಖವು ಕಾಣದೇ
ಓಹೋ ನಿನಗಾಗಿ ಕಂಬನಿಯ ಕುಯಿಲೇ ಸಾಗಿದೇ
ಬರಿದಾದ ಒಡಲಲ್ಲಿ ಉಸಿರಾಟ ಎಲ್ಲಿದೇ
ಅನುಬಂಧಾ ಕರುಳಂದಾ ಎಂದೆಂದೂ ಇರಲೀ
ಕಡಲಂತೆ ನದಿಯಂತೆ ಎದುರೆದುರೂ ಸಿಗಲೀ
ಗಾಳಿಯಲಿ ತೇಲಿರುವ ಸಿಹಿಮುತ್ತಿನ ಲಾಲೀ ನಿನಗೇ ಸಿಗಲೀ
ಗಾಳೀ ಹಾಡು ಲಾಲೀ ಜೋ ಜೋ ಮುದ್ದು ಲಾಲೀ ಮೆಲ್ಲಗೇ...ಭೂಮಿಯಲಿ...
--------------------------------------------------------------------------------------------------------------------------

ಬೆಳ್ಳಿ ಮೋಡಗಳು (1992) - ಹೃದಯವೆ ನಿನ್ನ ಹೆಸರಿಗೆ
ಸಾಹಿತ್ಯ: ಕೆ.ವಿ.ರಾಜು ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, ಎಸ್.ಜಾನಕಿ


ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ..
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ
ಆಕಾಶ ನಾನಾದೆ ನಾ
ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ
ಮಾತಿನಲ್ಲೆ ತಂದೆ ಮಳೆ ಬಿಲ್ಲ ನಾಚಿ ನಿಂತ ಹೂವು ಬಳ್ಳಿ ಎಲ್ಲ
ಬಾನಲ್ಲಿ ಒಂದಾದೆ ನಾ

ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ
ಪ್ರಣಯದ ಹಾಡಾದೆ ನಾ ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ

ಮಳೆ ಹನಿಯ ಮೋಡ ನಾನಾಗಿ ಹನಿ ಇಡುವೆ ನೆನಪಾಗಿ
ಉದಯಗಳ ಊರೆ ನಾನಾಗಿ ಬೆಳಕಿಡುವೆ ನಿನಗಾಗಿ
ಪ್ರಣಯದ ಅರಾಧನ ಋತುವಿನ ಅಲಪನ
ಮಿಥುನದ ಆಲಿಂಗನ
-----------------------------------------------------------------------------------------------------------------------

ಬೆಳ್ಳಿ ಮೋಡಗಳು (1992) - ಹೃದಯವೆ ನಿನ್ನ ಹೆಸರಿಗೆ
ಸಾಹಿತ್ಯ: ಕೆ.ವಿ.ರಾಜು ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, 

ಲೋಕವನೆ ತೂಗಿರುವ ಲೋಕವನೆ ತೂಗಿರುವ
ಭೂತಾಯಿಯ ಲಾಲಿ ಕರುಳ ಕುಡಿಗೆ
ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ..
ಲೋಕವನೆ ಆ.. ಆ... ತೂಗಿರುವ ಆ... ಆ....
ಭೂತಾಯಿಯ ಲಾಲಿ ಕರುಳ ಕುಡಿಗೆ

ಓಹೋ ಹಗಲೆಲ್ಲಾ ನಿನಗಾಗಿ ಬರಿದೆ ಕಾದೇನು
ಕರುಳಾಗಿ ಇರುಳೆಲ್ಲಾ ಹೊಸ ಲಾಲಿ ನೆಯ್ದೆನು
ಓಹೋ ಅನುರಾಗ ಅನುಗಾಲ ನಿನಗೆ ಆಗಲಿ
ಯುಗವೆಲ್ಲಾ ಸುಖವಾಗಿ ನಿನ್ನ ಸೇರಿ ಸಾಗಲಿ
ಇಳೆಯಾಡೋ ಹಸಿರಲ್ಲಿ ನಿನ್ನ ಜೀವ ನಗಲಿ
ಹಿತವಾದ ಬೆಳಕೆಲ್ಲಾ ನಿನ್ನ ಹರಸಿ ಬರಲಿ
ಗಾಳಿಯಲಿ ಆ..ಆ.. ತೇಲಿರುವಾ ಆ..ಆ..
ಗಾಳಿಯಲಿ ತೇಲಿರುವಾ ಸಿಹಿ ಮುತ್ತಿನ ಲಾಲಿ ನಿನಗೆ ಸಿಗಲಿ

ಓಹೋ ಋಣವಾಗಿ ಉಡಿ ತುಂಬಿ ಕರುಳ ಕಾದೆ ನೀ
ಒಡಲ್ಲಲ್ಲೇ ವಿಷನುಂಗಿ ಉಸಿರಾಗಿ ನಿಂತೇ ನೀ
ಓಹೋ ಉರಿ ಬೆಂಕಿ ಮನೆ ತುಂಬಿ ಮಗಳೇ ಆದೆ ನೀ
ಬರಿದಾದ ಮನ ತುಂಬೋ ಅನುರಾಗ ಬಂಧಿ ನೀ
ನವತಾರೆ ನಡುವಲ್ಲಿ ನಿನ್ನ ಮಾತೆ ಇರಲಿ
ನವಮಾಸದ ಒಡಲೆಲ್ಲಾ ನಿನ್ನ ರೂಪ ಹೇರಲಿ
ಕಂಡಿರದ ಕೇಳಿರಿದ ಕಂಡಿರದ ಕೇಳಿರದ
ಜಗ ತೂಗುವ ಲಾಲಿ ನಿನಗೆ ಸಿಗಲಿ
ಗಾಳಿ ಹಾಡು ಲಾಲಿ ಜೋ ಜೋ ಮುದ್ದು ಲಾಲಿ ಮೆಲ್ಲಗೆ..
ಕಂಡಿರದ ಕೇಳಿರಿದ ಕಂಡಿರದ ಕೇಳಿರದ
ಜಗ ತೂಗುವ ಲಾಲಿ ನಿನಗೆ ಸಿಗಲಿ
--------------------------------------------------------------------------------------------------------------------------

ಬೆಳ್ಳಿ ಮೋಡಗಳು (1992) - ಮಾವಿನಲಿ ಹೊಸ ಕೋಗಿಲೆಯ 
ಸಾಹಿತ್ಯ: ಕೆ.ವಿ.ರಾಜು ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, ಸಂಗೀತ ಕಟ್ಟಿ  

ಮಾವಿನಲಿ ಹೊಸ ಕೋಗಿಲೆಯು  ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು    ಸಿರಿ ಜೋಡಿಗಳ ಉಸಿರಾಟವಿದು
ಹೃದಯ ರಾಮನ ಉಸಿರೇ ಜಾನಕಿ ಕರುಣೆ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು
ಮಾವಿನಲಿ ಹೊಸ ಕೋಗಿಲೆಯು  ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು   ಸಿರಿ ಜೋಡಿಗಳ ಉಸಿರಾಟವಿದು

ಏನಿದು ಗೌರಮ್ಮನ ಹೆರಳು ಈಟೂದ್ಧನ ಮುಡಿಸಿ ಮಲ್ಲಿಗೆ ಗಿಡನಾ
ಕೋಪವೇಕೆ ಸಿಂಧೂರಮ್ಮಾ ಕಥೆಯಲ್ಲಾ ನಿಂಗ್ಯಾಕಮ್ಮಾ
ತನ್ನಿ ಬೇಗ ಕರಿಮಣಿ ಸರನಾ
ಏನಪ್ಪಾ ಸಿಂಗಾರಯ್ಯಾ ಹುಡುಗಿ ತಯಾರಯ್ಯಾ
ಮುಗಿಸೊ ಬೇಗನೆ ಮಾರಾಯಾ ಜರೀ ಪೇಟಾ ಒಂದು ಇಲ್ವಾ
ಪ್ಯಾಟೆಗ್ ಹೋದೋರ್ ಬಂದೆ ಇಲ್ವಾ ಆಗು ಬರೋ ಚೋಲ್ಲದಲ್ಲಿ ಮದುವೆನಾ
ಹಾಲುಂಡ ತವರಿನ ಹಾಲ್ಗೆನ್ನೆಗರಿಷಿಣ ಆ ಪಚ್ಚೆ ಹಸಿರಿನ ಸಿಂಗಾರ ನೀನೇನಾ
ಕೂಗಿದೆ ಹಸೆಮಣೆ ಬಾರವ್ವಾ...  ಬಾಳಿಗೆ ಮೂರೇ ಗಂಟು ನನ್ನವ್ವಾ...

ಜೋಡಿಗಳು ಬೆಳ್ಳಿ ಮೋಡಗಳು ಸದಾ ಸುಮಂಗಲಿ ಸುಧಾಮಯೀ ಆಗಯಿರು
ಹಾಡುಗಳು ಬೆಳ್ಳಿ ಜಾಡುಗಳು ಸದಾ ಸುಹಾಸದ ಆನಂದದಿ ತೇಲುತಲಿರು
ಸುಖವೇ.... ಹೊಯ್...  ಹೊಯ್.. ನನ್ನ ಬಿಟ್ಟು ಎಲ್ಲಾ ಬಿಟ್ಟು ಇವರ ಹಿಡಿಯೋ ನೀ
ಮಾವಿನಲಿ ಹೊಸ ಕೋಗಿಲೆಯು  ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು    ಸಿರಿ ಜೋಡಿಗಳ ಉಸಿರಾಟವಿದು
ಹೃದಯ ರಾಮನ ಉಸಿರೇ ಜಾನಕಿ ಕರುಣೆ ಜೀವನ ಕರುಳ ಬಂಧನ
ಪಂಚಮವೇದದ ತಾರೆಗಳು
ಮಾವಿನಲಿ ಹೊಸ ಕೋಗಿಲೆಯು  ಸಿರಿ ಚೈತ್ರಗಳ ಹೊಸೆದಾಡುತಿದೆ
ಮಂಗಳದ ಹೊಸ ರಾಗವಿದು    ಸಿರಿ ಜೋಡಿಗಳ ಉಸಿರಾಟವಿದು

ಲೋಕಗಳು ಸುಂದರ ಸ್ನೇಹಗಳು ಧೃವ ತಾರೆಯಂತೆ ಬಾನ ತುಂಬಾ ನೀನೇ ಇರು
ಭಾವಗಳು ಸುಂದರ ಸ್ವಪ್ನಗಳು ಕಣ್ಣ ನೀರಿನಲ್ಲೂ ಆಸೆ ತುಂಬೋ ದೀಪಗಳೂ
ಋಣವೇ .... ಹೊಯ್.... ನನ್ನ ಬಿಟ್ಟು ಎಲ್ಲ ಬಿಟ್ಟು ಇವರ ಹಿಡಿಯೋ ನೀ
ಮಂಡಕ್ಕಿ  ಮಂಡೂಕಯ್ಯಾ ವಸಗೆ ರೂಮಲ್ಲಯ್ಯಾ ನಾಚಿಕೆ ಏತಕೆ ಮಹರಾಯ
ಸಿಂಧೂರಿನ ಸಿಂಗಾರವ್ವಾ ಮಹಾರಾಜನ ಹೆಸರೇನವ್ವಾ
ತಲೆಯೆತ್ತಿ ಮುಖ ನೋಡೇ ಮಾರಾಯತಿ ತಲೆಯೆತ್ತಿ ಮಹರಾಯ್ತಿ
ಮುಗಿಲೆ ಊರಾಯ್ತಿರಾ ಧರೆಗೆ ಬೆಳಕಾಯ್ತೀರಾ ಚಂದ್ರನ ಸೇರಿಕೊಂಡು ಚಕೋರಿ
 ತಾರೆಗಳು ನಗ್ತಾವೆಲ್ಲಾ ನಮ್ಮ ಕೂಡಿ ಹಾಡಿ ಎಲ್ಲಾ  ಮಿನುಗಿ ಮಾಯಾ ಆಗೋ ಮಾತೆಲ್ಲಿ.....
--------------------------------------------------------------------------------------------------------------------------

ಬೆಳ್ಳಿ ಮೋಡಗಳು (1992) - ರಾಮ ಬಾಣ ಎದೆ ಸೀಳಿ 
ಸಾಹಿತ್ಯ: ಕೆ.ವಿ.ರಾಜು ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, ಸಂಗೀತ ಕಟ್ಟಿ 

ರಾಮ ಬಾಣ ಏದೆ ಸೀಳಿ ನಿಂತ ಸಮಯ
ವರ ಮಂಡೂಕ ನೀನೇನಾ ಹೇಯ್ ರಾಮ ಮರುಗಿತು....
ನೋವಿನ ಧಣಿಗೆ ರಾಮನಾದ ಹೃದಯಾ ....
ಬದುಕಿನ ಹಿತವಾ ತಿಳಿಸಲು ರಥವಾ ನಡೆಸಿದ ಹರಿಯ ಕಥೆಯನು ಬರೆದ
ಋಷಿಮುನಿ ವ್ಯಾಸ ಇಹಪರ ರಘುವರ ಕನಿಕರ ಹಿತಕರ
ನುಡಿದರೇ ಹಿತಕರ ಪಡೆಯುವೆ ಇಹಪರ
ಗೀತೆಯ ಒಳಗೆ ಜೀವರಾಶಿ ಚಲನ
ಬೆಳಕೊಂಡಲ್ಲಾ ನೂರಾರು ಈ ಬಾಳ ಮುಕುತಿಗೆ
ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ

ರಘುಕುಲ ಗುಣ ಚರಿತಾ... ಆ..ಆ
ರಘುಕುಲ ಗುಣ ಚರಿತಾ ಅಗಸನ ಭೂತ ಧರೆಯನು ಸುಡಲು
ರಘುವರ ಪೂಥ ಹಗಲಲಿ ಇರಲು
ಅನುರಾಗದ ಹೃದಯ ವೇದನೆ
ನೆಲೆ ಕಾಣಲು ಊರಿಗೆ ಅರ್ಪಣೆ
ಧ್ವನಿ ಒಂದಲ್ಲಾ ನೂರಾರು ಮುತ್ಸಂಜೆ ಮರೆಯಲಿ
ಜಗದೊಡಲ ಸುಡುತಿರುವ ಸಮಯದಿ

ಮನು : ಬೆಂಕಿಯ ಒಳಗೆ ಸೀತೆ ಮತ್ತೆ ಜನನ
          ಧರೆ ಬಾನೆಲ್ಲ ನೀರಾಡಿ ಕಣ್ಣಲಿ ತೆರೆಯಿತು
         ರಾಮ ಬಾಣ ಏದೆ ಸೀಳಿ ನಿಂತ ಸಮಯ

ಮನು : ಸ್ವರಗಳ ಹೊಸ ಪಲುಕೇ....  ಹಸುರಿನ ಗಿಳಿ ಮೆಲುಕೇ....
           ನವರಸ ತಾಕಿ ಹರಿದಿದೆ  ಕಿರಣ
           ನವ ಸುಮ ಸಾಕಿ ತರಲಿವೆ ಚೇತನ
           ಮುಗಿಲಾಗಲಿ ನಗುವ ರಾಗವು  ನದಿಯಾಗಲಿ ಮುಗಿಲ ಮೋಡವು
           ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
           ನಗುನಗುತಾ ಅನವರತ ಧರೆಯಲಿ
ಇಬ್ಬರು : ರಾಮ ಬಾಣ ಏದೆ ಸೀಳಿ ನಿಂತ ಸಮಯ
            ಸ್ವರ ಝೇಂಕಾರ ಓಂಕಾರ ತಾನಾಗಿ ಹಾಡಲಿ
            ರಾಮ ಬಾಣ ಏದೆ ಸೀಳಿ ನಿಂತ ಸಮಯ

ಕಟ್ಟಿ : ತನಿ ತನಿ ಎರೆವ ಬದುಕಿನ ಮುಖವ ಸ್ವರವಾಗಿ ಸೇರೇ
             ಇಹಪರ ಹಿತಕರ ಕನಿಕರ ರಘುವರ
            ನುಡಿದರೆ ಹಿತಕರ ಪಡೆಯುವೆ ಇಹಪರ
            ಗೀತೆಯ ಒಳಗೆ ಜೀವರಾಶಿ ಚಲನ
            ಬೆಳಕೊಂಡಲ್ಲಾ ನೂರಾರು ಈ ಬಾಳ ಮುಕುತಿಗೆ
           ಗೀತೆಯೇ ನಿನಗೆ ಪ್ರೇಮ ಪೂರ್ಣ ನಮನ
-------------------------------------------------------------------------------------------------------------------------

ಬೆಳ್ಳಿ ಮೋಡಗಳು (1992) - ರಾಮ ಬಾಣ ಎದೆ ಸೀಳಿ 
ಸಾಹಿತ್ಯ: ಕೆ.ವಿ.ರಾಜು ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, ಎಸ್. ಜಾನಕೀ 

ಜಾನಕೀ :   ಮಳೆ ಬಿಲ್ಲ ಸಿಂಗಾರ ನವರಾಗ ದೀಪ ...||
                ಈ ಮನೆಯ ಸಿಂಧೂರ ಇದರ ಸ್ವರೂಪ
                 ಮಳೆ ಬಿಲ್ಲ ಸಿಂಗಾರ ನವರಾಗ ದೀಪ
                 ಸಿರಿಲಕ್ಷ್ಮಿ ಸಂತಾನ ತವರೂರ ಪ್ರಾಣ
                 ಚೈತ್ರಗಳ ಬಾನಿಂದ ತೋರಣವ  ತಂದ
                ಅರಿಷಿಣ ಕುಂಕುಮದ ಅನುರಾಗ ಬಂಧಾ .. ಓ,, ಓ,,, ಓ,,
ಮನು :  ಹುಣ್ಣಿಮೆಯ  ಶೃಂಗಾರ ನವರಾತ್ರಿ ರಾಗ
            ಈ ಮನೆಯ ಬಂಗಾರ ಇದರ ಪರಾಗ 
            ಹುಣ್ಣಿಮೆಯ  ಶೃಂಗಾರ ನವರಾತ್ರಿ ರಾಗ
            ಸವಿ ಜೇನ ಜೋಗುಳದ ಮರುಜನ್ಮವೆಂದು
            ಕಳಿಸಯ್ಯ ತಾತಯ್ಯಾ ಹರಸುತ್ತಾ ಎಂದು
            ನಿನ್ನದೆಂದು ಕರುಳೊಂದ  ಕರುಣಾಳ ಸಿಂಧೂ...ಆ..  ಆ ...
ಜಾನಕೀ : ಮಳೆ ಬಿಲ್ಲ ಸಿಂಗಾರ ನವರಾಗ ದೀಪ ....

ಜಾನಕೀ :  ಕಡಲಿಗೆ ನೂರಾರು ನದಿಯೆಂಬ ನಾಡಿ
              ಸೇರದೆ ಸಾವಿರ ಪಲ್ಲವಿಯ ಹಾಡಿ
ಮನು :   ಜಲವೆಲ್ಲಾ ಮೈತಾಳಿ ಮಳೆಯಾಗಿ ಸೂಸಿ
            ಹರಿಯದೆ ಮತ್ತೊಮ್ಮೆ ಧರೆಗೆಲ್ಲಾ ಹಾಸಿ
ಜಾನಕೀ : ಮನ ತುಂಬಿ ನಿಂತಂತ ಹಗೆಯಲ್ಲಾ ನೀಗಿ
             ಎದೆ ತುಂಬಿ ಬಂದಂತ ಹೊಂಬಿಸಿಲ ತೂಗಿ
ಮನು :   ಒಲವಲಿ            ಜಾನಕೀ: .   ಹರಸಿರಿ
ಇಬ್ಬರು :  ಇವಳಾಸೆ ಎಂದೆಂದೂ ಕೇಳುತಲಿ ನೀವು...ಓ..ಓ..
ಜಾನಕೀ : ಮಳೆ ಬಿಲ್ಲ ಸಿಂಗಾರ ನವರಾಗ ದೀಪ
             ಈ ಮನೆಯ ಸಿಂಧೂರ ಇದರ ಸ್ವರೂಪ

ಮನು :     ಹೂವಿಂದ ನಾರಿಗೂ ಸುಖ ಸ್ವರ್ಗ ಉಂಟೂ
ಜಾನಕೀ :  ಅತ್ತೆಯಾ ಬಾಳಿಗೂ ಮರುಜನ್ಮ ಗಂಟೂ
               ಸೌಭಾಗ್ಯ ಸೊಸೆಯಾ ನಂಬಿಹೆ ನಂಟು
ಮನು :    ಈ ಗಂಟು ನೂರೆಂಟು ಆಸೆಯೇ ಆಗಿ
             ಹಾಲುಂಡ ತೀರಣ ಒಂದೊಂದು ತೂಗಿ
ಜಾನಕೀ :  ಹರಸುತ ಬೆರೆತಿವೆ      ಮನು : ಬೆರೆಯುತ ಬೆಸೆದಿವೆ
ಇಬ್ಬರು : ಜೊತೆಯಾಗಿ ನೀವೂನು ಈ ಬಂಧ ತೂಗಿ.. ಓ... ಓ..
ಜಾನಕೀ : ಮಳೆ ಬಿಲ್ಲ ಸಿಂಗಾರ ನವರಾಗ ದೀಪ
--------------------------------------------------------------------------------------------------------------------------

No comments:

Post a Comment