132. ರೌಡಿ ರಂಗಣ್ಣ (1968)

ರೌಡಿ ರಂಗಣ್ಣ ಚಿತ್ರದ ಹಾಡುಗಳು 
  1. ಓ..ಗೆಳೆಯ ರಾಮಯ್ಯ 
  2. ಕಣ್ಣೆರಡು ನನಗೆ 
  3. ಬಾರೆ ಓ ಚೆಲುವೇ 
  4. ಧರಣಿಗೆ ಗಿರಿ ಭಾರವೇ 
  5. ಆದದ್ದು ಒಂದು 
ರೌಡಿ ರಂಗಣ್ಣ (1968)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.
ಎಸ್,  ಎಸ್.ಜಾನಕೀ  

ಗಂಡು : ಓ..ಗೆಳೆಯ ರಾಮಯ್ಯ.... ಓಯ್..ಹೊಯ್...
           ಓ.. ಗೆಳೆಯ ಭೀಮಯ್ಯಾ .... ಹೊಯ್...
          ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು
          ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು
          ಇದ್ದದ್ದು ಇದ್ದಂತೇ  ಕಂಡದ್ದು ಕಂಡಂತೇ ಮೈ ಮರೆತು ಕುಳಿತಿರುವಾ 
          ಮೌನಗೌರಿಯ ಕಥೆಯ 
          ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು 

ಗಂಡು : ಮನದಲ್ಲಿ ನೂರಾರು ಆಸೆಗಳು ಕಣ್ಣಲ್ಲಿ ಏನೇನೋ ಕನಸುಗಳು
            ಮನದಲ್ಲಿ ನೂರಾರು ಆಸೆಗಳು ಕಣ್ಣಲ್ಲಿ ಏನೇನೋ ಕನಸುಗಳು
           ಎದೆಯಲ್ಲಿ ಬಯಕೆ ಹೇಳಲು ನಾಚಿಕೆ ತಾವರೆಯ ಮೊಗದಲ್ಲೇ    
           ಭಾವನೆಯ ತೋರುವುಳು  
         ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು 
ಹೆಣ್ಣು : ಹಾಗೇನು 

ಹೆಣ್ಣು : ಕಣ್ಣಲ್ಲಿ ನೂರೆಂಟು ಚಪಲಗಳು ಅದಕ್ಕಾಗಿ ಈ ಬಳಸು ಮಾತುಗಳು (ಅಹ್ಹಹ್ಹಾ)
         ಕಣ್ಣಲ್ಲಿ ನೂರೆಂಟು ಚಪಲಗಳು ಅದಕ್ಕಾಗಿ ಈ ಬಳಸು ಮಾತುಗಳು 
         ಗುಲಗಂಜಿಗೆ ತನ್ನ ಮೈಯ ಕಪ್ಪೆಂದು ತಿಳಿದಿಲ್ಲಾ ಅಣ್ಣಯ್ಯನ ಮಾತಿಗೆ 
        ಏನೇನು ಅರ್ಥವಿಲ್ಲಾ 
       ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು 
ಗಂಡು : ಹಾಂ.. ಇರು ಇರು
           ಆತಿ ಪ್ರೀತಿಯಿಂದಲೇ ಬೆಳೆಸಿರಲಿ ನಗನಾಣ್ಯ ರಾಶಿಯೇ ಸುರಿದಿರಲಿ  
           ಆತಿ ಪ್ರೀತಿಯಿಂದಲೇ ಬೆಳೆಸಿರಲಿ ನಗನಾಣ್ಯ ರಾಶಿಯೇ ಸುರಿದಿರಲಿ 
          ಗಂಡನ್ನ ಕಾಣಲು ತೌರನ್ನೇ ಮರೆಯುವಳು ಒಡಹುಟ್ಟಿದ ಅಣ್ಣನ
          ಕಣ್ಣೆತ್ತೀ ನೋಡಳು (ಹುಂ.. ಹೋಗಣ್ಣ...)
          ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು 

ಹೆಣ್ಣು :  ಹೇ.. ಎಲ್ಲಿಂದಲೋ ಈಗ ಬಂದವಳು ಗಂಡಂಗೆ ಬೆದರಿಕೆಯ ಹಾಕುವಳು  
          ಎಲ್ಲಿಂದಲೋ ಈಗ ಬಂದವಳು ಗಂಡಂಗೆ ಬೆದರಿಕೆಯ ಹಾಕುವಳು 
ಗಂಡು : ಈ ಅತ್ತೆ ಮನೆಯಲ್ಲಿ ಹೀಗೇನೆ ಅಮ್ಮಯ್ಯ (ಆಅ )
ಹೆಣ್ಣು : ನಮ್ಮಲ್ಲಿ ವಾದಗಳು ಕೇಡ ನಿನ್ನ  ದಮ್ಮಯ್ಯ . (ಭಲೇ ಭಲೇ ಭಲೇ )         
ಗಂಡು ನೋಡಿದೀಯಾ ರಾಮ ಕೇಳೀದೆಯಾ ಭೀಮಾ (ಅಹ್ಹಹ್ಹ ಅಹ್ಹಹ್ಹ ) 
          ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು 
ಹೆಣ್ಣು : ಹೇಳುವೆನು... ಹೇಳುವೆನು ಗುಟ್ಟೊಂದು ಕಿವಿಯಲ್ಲಿ ಹೇಳುವೆನು ಹೋಯ್ 
          ಯ್ಯಾ..ಯ್ಯಾ... 
-------------------------------------------------------------------------------------------------------------------------

ರೌಡಿ ರಂಗಣ್ಣ (1968)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.
ಎಸ್, ಎಸ್ ಜಾನಕೀ 

ಗಂಡು : ಕಣ್ಣೆರೆಡು ನನಗೆ ಕಂಬನಿಯ ಸುರಿಸಿ ಸಾಕಾಗದಾಗಿದೆ
            ಹಗಲಿರುಳು ನಿನ್ನ ನೆನಪಲ್ಲೇ ಬೆಂದು ಎದೆ ಭಾರವಾಗಿದೇ
           ತಂಗಿ ಎದೆ ಭಾರವಾಗಿದೇ
ಹೆಣ್ಣು : ನಿನಗಾಗಿ ಅತ್ತು ಕಂಬನಿಯು ಬತ್ತಿ ಕಣ್ಣೆಲ್ಲಾ ಬರಿದಾಗಿದೆ ನನ್ನ
          ಬದುಕೆಲ್ಲಾ ಗೋಳಾಗಿದೆ ಅಣ್ಣಾ ಬದುಕೆಲ್ಲಾ ಗೋಳಾಗಿದೆ

ಗಂಡು : ಮಗುವಿನ ಮನಸು ಮದುವೇ ವಯಸು ಹೂವಂತೆ ನಿನದು ಸೊಗಸು
            ಬೆಂಕಿಯ ಮಡಿಲು ಗುಡುಗು ಸಿಡಿಲು ಜಗವೆಲ್ಲ ಭಯದ ಒಡಲು
            ಆಸರೆಯ ನೀಗಿ  ಏಕಾಂಗಿ ನೀ ಹೇಗೆ ಬಾಳುವೇ ತಂಗಿ ನೀ ಹೇಗೆ ಬಾಳುವೇ   
ಹೆಣ್ಣು : ಸೆರೆಮನೆಯಲ್ಲಿ ನೂರು ನೋವು ನೀ ಹೇಗೆ ಭರಿಸುತಿರುವೇ
          ಬಯಕೆಯ ಬಳ್ಳಿ ಬಾಡಿ ಹೋಗಿ ನೀ ಹೇಗೆ ಸೈರಿಸಿರುವೇ
          ನನಗಾಗಿ ಕೊರಗಿ ಕೃಷವಾಗಿ ಹೋಗಿ ದಿನ ಹೇಗೆ ನೂಕುವೇ
         ಅಣ್ಣಾ.. ದಿನ ಹೇಗೆ ನೂಕುವೇ

ಹೆಣ್ಣು : ಹರಿದ ರೆಕ್ಕೆಯ ಮುರಿದ ಕಾಲ ಎಳೆಯಂತೆಯಾಗಿರುವೆ
ಗಂಡು: ಬಳಿಗೆ ಧಾವಿಸಿ ಬರಲು ತಂಗಿ ಸೆರೆ ಕಾವಲಲ್ಲಿರುವೇ
          ನೀನೊಂದು ದಡದಿ ನಾನೊಂದು ದಡದಿ ಕಣ್ಣೀರ ನದಿ ನಡುವೆ         
          ತಂಗಿ ಕಣ್ಣೀರ ನದಿ ನಡುವೆ         
ಹೆಣ್ಣು : ಕಣ್ಣೆರೆಡು ನನಗೆ ಕಂಬನಿಯ ಸುರಿಸಿ ಸಾಕಾಗದಾಗಿದೆ
ಗಂಡು :ಹಗಲಿರುಳು ನಿನ್ನ ನೆನಪಲ್ಲೇ ಬೆಂದು ಎದೆ ಭಾರವಾಗಿದೇ ತಂಗಿ
ಹೆಣ್ಣು : ಎದೆ ಭಾರವಾಗಿದೇ ಅಣ್ಣಾ
--------------------------------------------------------------------------------------------------------------------------

ರೌಡಿ ರಂಗಣ್ಣ (1968)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಎಸ್.ಪಿ.ಬಿ.

ಬಾರೆ ಓ ಚೆಲುವೆ ಬಳಿ ಬಾರೆ ಓ ಚೆಲುವೆ
ಕೆನೆ ಹಾಲು ಏಕೆ ಸವಿ ಜೇನು ಏತಕೆ
ನೀನೆ ಸಾಕೆನುವೆ...... ಬಳಿ ಬಾರೆ ಓ ಚೆಲುವೆ

ಕಣ್ಣಲಿ ತುಂಬಿದೆ ಚಂದ್ರಿಕೆ ಚೆಲುವೆ
ಅಧರದ ಸುಧೆಗೆ ನಾ ಕಾಣದಿರುವೆ
ಹೂವಿನ ಮೈಯಲಿ ಅಡಗಿದೆ ಒಲವೆ
ಪ್ರಣಯದ ಕಾವ್ಯವೆ ನೀನಾಗಿರುವೆ
ನೀನೇ ಸಾಕೆನುವೆ....
ಬಾರೆ ಓ ಚೆಲುವೆ ಬಳಿ ಬಾರೆ ಓ ಚೆಲುವೆ

ಯೌವನ ಭಾರದಿ ಬಳುಕುತಲಿರುವೆ
ಪ್ರೇಮದ ಗಾನಕೆ ನೀ ಕುಣಿದಿರುವೆ
ಹೃದಯದ ವೀಣೆಯ ನುಡಿಸುತಲಿರುವೆ
ಏಕಾಂತದಲಿ ನಾಚುವೆ ಏಕೆ
ನೀನೇ ಸಾಕೆನುವೆ.....
ಬಾರೆ ಓ ಚೆಲುವೆ ಬಳಿ ಬಾರೆ ಓ ಚೆಲುವೆ
ಕೆನೆ ಹಾಲು ಏಕೆ ಸವಿ ಜೇನು ಏತಕೆ
ನೀನೆ ಸಾಕೆನುವೆ...
ಬಳಿ ಬಾರೆ ಓ ಚೆಲುವೆ
--------------------------------------------------------------------------------------------------------------------------

ರೌಡಿ ರಂಗಣ್ಣ (1968)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಸುಶೀಲಾ

ಧರಣಿಗೆ ಗಿರಿ ಭಾರವೆ ಗಿರಿಗೆ ಮರವು ಭಾರವೆ
ಬಳ್ಳಿಗೆ ಕಾಯಿ ಭಾರವೆ  ಹೆತ್ತ ತಾಯಿಗೆ ಮಗುವು ಭಾರವೆ
ಧರಣಿಗೆ ಗಿರಿ ಭಾರವೆ    ಗಿರಿಗೆ ಮರವು ಭಾರವೆ
ಬಳ್ಳಿಗೆ ಕಾಯಿ ಭಾರವೆ  ಹೆತ್ತ ತಾಯಿಗೆ ಮಗುವು ಭಾರವೆ

ಅತ್ತರೆ ಕಣ್ಗಳಲಿ ಮುತ್ತುಗಳೆ ಸುರಿಯುವುದು
ಅತ್ತರೆ ಕಣ್ಗಳಲಿ ಮುತ್ತುಗಳೆ ಸುರಿಯುವುದು
ಹವಳದ ತುಟಿಗಳಲಿ ಸಿಹಿ ಜೇನು ತುಂಬಿಹುದು
ಬಂಗಾರದ ಗೊಂಬೆಯೆ ಸಾದ್ಯವೆ ನಿನ್ನ ಮರೆವುದು
ಬಳ್ಳಿಗೆ ಕಾಯಿ ಭಾರವೆ   ಹೆತ್ತ ತಾಯಿಗೆ ಮಗುವು ಭಾರವೆ
ಧರಣಿಗೆ ಗಿರಿ ಭಾರವೆ  ಗಿರಿಗೆ ಮರವು ಭಾರವೆ
ಬಳ್ಳಿಗೆ ಕಾಯಿ ಭಾರವೆ  ಹೆತ್ತ ತಾಯಿಗೆ ಮಗುವು ಭಾರವೆ

ಬಾಳ ಬಳ್ಳಿಯಲ್ಲಿ ನೀನು ಹೂವಾಗಿ ಅರಳಿರುವೆ
ಬಾಳ ಬಳ್ಳಿಯಲ್ಲಿ ನೀನು ಹೂವಾಗಿ ಅರಳಿರುವೆ
ಬಂಜೆಯೆನ್ನುವ ನಿನ್ನೆ ನೀ ಬಂದು ಅಳಿಸಿರುವೆ
ಲಾಲನೆಯು ಪಾಲನೆಯು ತಾಯಿಗೆ ಸೌಭಾಗ್ಯವೆ
ಬಳ್ಳಿಗೆ ಕಾಯಿ ಭಾರವೆ  ಹೆತ್ತ ತಾಯಿಗೆ ಮಗುವು ಭಾರವೆ
ಧರಣಿಗೆ ಗಿರಿ ಭಾರವೆ  ಗಿರಿಗೆ ಮರವು ಭಾರವೆ
ಬಳ್ಳಿಗೆ ಕಾಯಿ ಭಾರವೆ  ಹೆತ್ತ ತಾಯಿಗೆ ಮಗುವು ಭಾರವೆ
-----------------------------------------------------------------------------------------------------------------------

ರೌಡಿ ರಂಗಣ್ಣ (1968)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.
ಎಸ್  

ಆದದ್ದು ಒಂದು ಅಂದುಕೊಂಡಿದ್ದೊಂದು ಏಯ್..
ಅದಕ್ಕೆ ನೋಡಿ ಹೆಣ್ಣು.. ಅಯ್ಯಯ್ಯೋ ನಿಂತಿದೆ ಬಿಡುತಲಿ ಕಣ್ಣು
ಅಮ್ಮಮ್ಮೋ... ನಾಚಿಕೆ ಏನೂ ಚೆನ್ನ ....
ಲಾಗಿ ಚಕ್ಕಿ  ಲಾಗಿ ಚಕ್ಕಿ ಲಾಗಿ ಚಕ್ಕಿ ಲಾಗಿ ಚಕ್ಕಿ ಹೆಣ್ಣೇ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ನಿನ್ನೇ ...
ಆದದ್ದು ಒಂದು ಅಂದುಕೊಂಡಿದ್ದೊಂದು ಏಯ್..
ಅದಕ್ಕೆ ನೋಡಿ ಹೆಣ್ಣು.. ಅಯ್ಯಯ್ಯೋ ನಿಂತಿದೆ ಬಿಡುತಲಿ ಕಣ್ಣು
ಅಮ್ಮಮ್ಮೋ... ನಾಚಿಕೆ ಏನೂ ಚೆನ್ನ ....

ನಿನ್ನ ಲೆಕ್ಕಾಚಾರವೆಲ್ಲಾ... ಓಹೋಹೋ
ತಲಿಕೆಳಗು ಆಗೇ ಹೋಯಿತಲ್ಲಾ ಆಹಾಹಾ ಎನ್ನುವ ಕೋಪ
ಎದೆಯಲಿ ತಾಪ ಅದಕ್ಕಾಗೇ ಮನದಲ್ಲಿ ಪಶ್ಚಾತಾಪ... ಪಾಪ
ಲಾಗಿ ಚಕ್ಕಿ  ಲಾಗಿ ಚಕ್ಕಿ ಲಾಗಿ ಚಕ್ಕಿ ಲಾಗಿ ಚಕ್ಕಿ ಹೆಣ್ಣೇ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ನಿನ್ನೇ ...
ಆದದ್ದು ಒಂದು ಅಂದುಕೊಂಡಿದ್ದೊಂದು ಏಯ್..
ಅದಕ್ಕೆ ನೋಡಿ ಹೆಣ್ಣು.. ಅಯ್ಯಯ್ಯೋ ನಿಂತಿದೆ ಬಿಡುತಲಿ ಕಣ್ಣು
ಅಮ್ಮಮ್ಮೋ... ನಾಚಿಕೆ ಏನೂ ಚೆನ್ನ ....

ತಣ್ಣನೆ ಹುಣ್ಣಿಮೆಯಲ್ಲಿ ಆಹಾಹಾ..
ಹೆಣ್ಣೇ ನನ್ನೊಂಟಿಯಾಗಿಲ್ಲಿ... ಆಹಾಹಾ
ಬಿಟ್ಟೇಕೆ ಓಡಿದೆ.. ಮನಸೇಕೆ ಕಾಡಿದೆ
ಅದಕ್ಕಾಗಿ ನಾ ಬಂದು ನಿನ್ನ ಸೇರಿದೆ
ಲಾಗಿ ಚಕ್ಕಿ  ಲಾಗಿ ಚಕ್ಕಿ ಲಾಗಿ ಚಕ್ಕಿ ಲಾಗಿ ಚಕ್ಕಿ ಹೆಣ್ಣೇ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ನಿನ್ನೇ ...
ಆದದ್ದು ಒಂದು ಅಂದುಕೊಂಡಿದ್ದೊಂದು ಏಯ್..
ಅದಕ್ಕೆ ನೋಡಿ ಹೆಣ್ಣು.. ಅಯ್ಯಯ್ಯೋ ನಿಂತಿದೆ ಬಿಡುತಲಿ ಕಣ್ಣು
ಅಮ್ಮಮ್ಮೋ... ನಾಚಿಕೆ ಏನೂ ಚೆನ್ನ ....

ಗಜನಿಂಬೆ ಹಣ್ಣನಂಥ   ಹೆಣ್ಣೇ... ಓಹೋಹೋ
ದುರುಗುಟ್ಟಿ ನೋಡುವೇ ಏನೇ.. ಓಹೋಹೋ
ಓಡಲು ಸುಮ್ಮನೇ ಬಿಡುವೇನೆ ನಿನ್ನೆ
ನಾನೆಂದೇ ನಿನಗಾಗಿ ಮಾಡಿ ಬಂದೇನೆ ಸಫಾ
ಲಾಗಿ ಚಕ್ಕಿ  ಲಾಗಿ ಚಕ್ಕಿ ಲಾಗಿ ಚಕ್ಕಿ ಲಾಗಿ ಚಕ್ಕಿ ಹೆಣ್ಣೇ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ  ಘುಮ್ ಚಿಕ್ಕಿ
ಘುಮ್ ಚಿಕ್ಕಿ  ಘುಮ್ ಚಿಕ್ಕಿ  ನಿನ್ನೇ ...
ಆದದ್ದು ಒಂದು ಅಂದುಕೊಂಡಿದ್ದೊಂದು ಏಯ್..
ಅದಕ್ಕೆ ನೋಡಿ ಹೆಣ್ಣು.. ಅಯ್ಯಯ್ಯೋ ನಿಂತಿದೆ ಬಿಡುತಲಿ ಕಣ್ಣು
ಅಮ್ಮಮ್ಮೋ... ನಾಚಿಕೆ ಏನೂ ಚೆನ್ನ ....
--------------------------------------------------------------------------------------------------------------------------

No comments:

Post a Comment