160. ಆಶಾ (1983)



ಆಶಾ ಚಿತ್ರದ ಹಾಡುಗಳು 
  1. ನಂದಾದೀಪ ಆಗು ಎಂದೆಂದೂ 
  2. ಲವ್ ಮೀ ಎನುವ ವಯಸು 
  3. ಡ್ಯಾನ್ಸ್ ವಿಥ್ ಮೀ 
  4. ಮುತ್ತೋ ಮುತ್ತೋ ಸಿಹಿ ಮುತ್ತೋ 
ಆಶಾ (1983)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ:ಎಸ್.ಪಿ.ಬಿ, ವಾಣಿಜಯರಾಂ

ಹೆಣ್ಣು : ಅಶ್ವತ್ಥಾಮ ಬಳಿ ವ್ಯಾಸಃ ಹನುಮಾನಚ ವಿಭೀಷಣಃ 
          ಕೃತಃ ಪರಶುರಾಮಶ್ಚ  ಸಪ್ತತೈತೆ ಚಿರಂಜೀವಿ
          ನಂದಾ ದೀಪ ಆಗು ಎಂದೆಂದೂ ನೀ ಆಗು ಎಂದೆಂದೂ
          ಪ್ರೀತಿ ಇಲ್ಲವ ಜ್ಯೋತಿ ಬಾಳಿಗೆ ತಂದು ನೀ ಬೆಳಗು ಎಂದೆಂದೂ
          ಅಣ್ಣಾ..ಅಣ್ಣಾ.. 
          ನಂದಾ ದೀಪ ಆಗು ಎಂದೆಂದೂ ನೀ ಆಗು ಎಂದೆಂದೂ

         ತಾಯಿ ತಂದೆ ನಾ ಕಾಣಲಿಲ್ಲಾ ನಿನ್ನಲ್ಲೇ ನಾ ಕಂಡೆ ಎಲ್ಲೆಲ್ಲಾ 
         ಕಣ್ಣಿಗೆ ರೆಪ್ಪೆಯೇ ಕಾವಲೂ ದೇಹಕೆ ಪ್ರಾಣವು ಕಾವಲೂ 
         ಈ ತಂಗಿಗೆ ಅಣ್ಣನೇ ಕಾವಲೂ  
         ಬಿಸಿಲೇನು ಮಳೆಯೇನೂ ಬಂದರೇನೂ 
         ನನಗೆಂದೂ ನೆರೆಳಾದೆ ನೀನು  
         ಈ ಸೇವೆಯೇ  ಸೌಭಾಗ್ಯ..ಈ ಸೇವೆಯೇ  ಸೌಭಾಗ್ಯ..
         ಇರಬೇಕು ಚಿರಕಾಲ ನನಗೆನೇ
ಗಂಡು : ನನ್ನ ಆಸೆ ಎಲ್ಲಾ ನಿನ್ನಲ್ಲಿ ಈ ಜೀವ ನಿನ್ನಲ್ಲಿ ಆಶಾ.. ಆಶಾ..
         
ಗಂಡು : ಈ ನನ್ನ ಹೂದೋಟದಲ್ಲಿ ನೀ ನಿಂತೇ ಸೌಗಂಧ ಚೆಲ್ಲಿ
           ನಿನ್ನೆಲ್ಲ ವೈಭೋಗ ತಂದೇ ನಾ ನನ್ನ ಹೊಂಗನಸಿನಲ್ಲಿ..
           ಬರುವಾ ಒಬ್ಬ ಚೆಲುವಾ ನಿನ್ನ ಕೈ ಹಿಡಿವಾ ನಗುವಾ ಮಗುವಾ ತರುವಾ
            ತೊಟ್ಟಿಲ ನಾ ತೂಗುವೇ ಜೋಗುಳ ಹಾಡುವೇ..
            ಲಾಲಿ ಜೋ ಜೋ ಲಾಲಿ ಲಾಲಿ ಜೋ ಜೋ ಲಾಲಿ                   
            ಮೈಮರೆತು ನಾ ತೇಲಿ ಹೋದೆ ಅತಿಯಾದ ಆನಂದದಲ್ಲಿ
            ಈ ನನ್ನ ಹಾರೈಕೆ...ಈ ನನ್ನ ಹಾರೈಕೆ...ಬಾಳೆಂದು ಹೂವಾಗಿ ನಗಲಿ
            ನನ್ನ ಆಸೆ ಎಲ್ಲಾ ನಿನ್ನಲ್ಲಿ ಈ ಜೀವ ನಿನ್ನಲ್ಲಿ ಆಶಾ.. (ಅಣ್ಣಾ ).
--------------------------------------------------------------------------------------------------------------------------

ಆಶಾ (1983)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ:ಜಯಚಂದ್ರನ್, ವಾಣಿಜಯರಾಂ

ಗಂಡು : ಲವ್ ಮೀ ಎನುವ ವಯಸು ಈಗ ಆದುವೇ ಸೊಗಸು
           ಲವ್ ಮೀ ಎನುವ ವಯಸು ಈಗ ಆದುವೇ ಸೊಗಸು
           ಏನೋ ಮತ್ತು ನೀಡೆ ಇಂಥ ಹೊತ್ತು ನಿನ್ನ ಕಂಡು ನಾನು ಆದೇ ಚಿತ್ತು
           ಮೈ ಜುಮ್ ಜುಮ್ ಎನ್ನಲ್ಲೂ ಬಾ ಬಳಿ ಬಾ ಬಾ ಬಾ ಬಾ
ಹೆಣ್ಣು :ಹ್ಹಾ.. ಆಯ್ ಲವ್ ಏನಲು ,ಮನಸು ಕಂಡೆ ಹೊಸದೇ ಕನಸು
         ಆಯ್ ಲವ್ ಏನಲು ಮನಸು ಕಂಡೆ ಹೊಸದೇ ಕನಸು
         ಕಣ್ಣಿನಲ್ಲಿ ಈಗ ಆಡೋ ಬಾಷೆ ನೀನು ಬಲ್ಲೆ ನನ್ನ ಪ್ರೇಮದಾಶೆ
         ತಂ ನಂ ಹಾಡಿದೆ  ಬಾ ಬಳಿ ಬಾ ಬಾ ಬಾ ಬಾ

ಗಂಡು: (ಆ... ಆ..) ಆಸೆ ಹಕ್ಕಿ ಹಾಡುತಿದೆ ಆಶಾ ಆಶಾ ಎನ್ನುತಿದೇ
ಹೆಣ್ಣು : ಆಸೆ ನೂರು ಮೂಡುತಿದೆ ಏನೋ ಏನೋ ಬೇಡುತಿದೇ  
ಗಂಡು : ಮಿಂಚಂತೇ ಬಳಿ ನೀ ಬಂದೇ ಜೇನಂಥ ಸಿಹಿ ಮಾತಂದೇ
ಇಬ್ಬರು : ಪ್ರೇಮ ಪ್ರೀತಿ ಎಲ್ಲಾ ಇಲ್ಲೇ ತಂದೇ ಬಾ (ಬಳಿ) ಬಾ ಬಾ ಬಾ ಬಾ
ಗಂಡು : ಲವ್ ಮೀ ಎನುವ ವಯಸು ಈಗ ಆದುವೇ ಸೊಗಸು
ಹೆಣ್ಣು : ಕಣ್ಣಿನಲ್ಲಿ ಈಗ ಆಡೋ ಬಾಷೆ ನೀನು ಬಲ್ಲೆ ನನ್ನ ಪ್ರೇಮದಾಶೆ
         ತಂ ನಂ ಹಾಡಿದೆ  (ಬಾ) ಬಳಿ ಬಾ (ಬಾ ಬಾ ಬಾ)

ಹೆಣ್ಣು : ಹ್ಹಾಂ.. ಹ್ಹಾಂ.. ನಾನು ನೀನು ಜೊತೆಗೂಡಿ ಆದಿಇಂದು ಹೊಸ ಜೋಡಿ
ಗಂಡು : ಪ್ರೀತಿ ನಮ್ಮ ಉಸಿರಾಗಿ ಎಂದು ಇರಲಿ ಹಸಿರಾಗಿ
ಹೆಣ್ಣು : ಈ ನಮ್ಮ ಪ್ರೇಮದಾರಂಭ ಇನ್ನೆಂದು ನಮಗಾನಂದ
ಇಬ್ಬರು : ಬೇರೆ ಮಾತೇ ಕೇಳಬೇಡ ಇನ್ನೂ (ಬಾ) ಬಳಿ ಬಾ (ಬಾ ಬಾ ಬಾ)
ಹೆಣ್ಣು : ಆಯ್ ಲವ್ ಏನಲು ,ಮನಸು ಕಂಡೆ ಹೊಸದೇ ಕನಸು
ಗಂಡು :  ಏನೋ ಮತ್ತು ನೀಡೆ ಇಂಥ ಹೊತ್ತು ನಿನ್ನ ಕಂಡು ನಾನು ಆದೇ ಚಿತ್ತು
           ಮೈ ಜುಮ್ ಜುಮ್ ಎನ್ನಲ್ಲೂ (ಬಾ) ಬಳಿ ಬಾ (ಬಾ ಬಾ ಬಾ.. ಹ್ಹಾಂ) 
--------------------------------------------------------------------------------------------------------------------------

ಆಶಾ (1983)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ

ಹೆಣ್ಣು : Dance with me Merry Merry Disco
          Swing with me Jolly Jolly Disco
          Oh.. Darling Darling Darling Darling
ಗಂಡು : ಮೋಹಕ ಸಂಜೆ, ಈ ಬಣ್ಣಗಳ ಮೇಳ
           ಬೀಸಿದೆ ಜಾಲ, ಈ ಕಣ್ಣುಗಳ ಗಾಳ
           Dance with me (ಹೋ ಹೋ )Merry Merry Disco (ಹೋ ಹೋ )

ಹೆಣ್ಣು : ಸಂಗೀತ ರಂಗಿನಲಿ ಸಂತೋಷ ಗುಂಗಿನಲಿ
ಗಂಡು : ಒಂದಾದ ಹೃದಯಗಳು ಕೂಗಾಡಿ ಕುಣಿದಿರಲಿ
ಹೆಣ್ಣು : ತಾಳ ಮೇಳ (ಉಊ ಉಊ) ಸೇರಿದಂತೆ (ಉಊ ಉಊ)
ಗಂಡು : ಗಂಡು ಹೆಣ್ಣು ಜೋಡಿಯಾಗಿ ಆಡಿ ಹಾಡಿ, Hey...
ಹೆಣ್ಣು : Dance with me Merry Merry Disco
         Swing with me Jolly Jolly Disco
ಗಂಡು : Oh... Baby Baby Baby Baby
           ಮೋಹಕ ಸಂಜೆ, ಈ ಬಣ್ಣಗಳ ಮೇಳ
           ಬೀಸಿದೆ ಜಾಲ, ಈ ಕಣ್ಣುಗಳ ಗಾಳ
ಹೆಣ್ಣು : Dance with me (ಶಬಬರಿಬಬರಿಬರಿಬರಿಬ) 
          Merry Merry Disco (ರಿಬರಿಬರಿಬರಿಬಬಾ )

ಹೆಣ್ಣು : ಸಂಗಾತಿ ಜೊತೆಯಿರಲು ಸಂದರ್ಭ ಒದಗಿರಲು
ಗಂಡು : ಮೈತುಂಬ ಮತ್ತಿರಲು ಜಗವನ್ನೆ ಮರೆತಿರಲು
ಹೆಣ್ಣು : ಮಿಂಚಿನಂತೆ, (ಹೊಯ್ ಹೊಯ್ ) ಆಗೇ ಹೋಯ್ತು (ಹೊಯ್ ಹೊಯ್ )
ಗಂಡು : ಕಣ್ಣು ಮುಚ್ಚಿ ತೆರೆಯೊ ಮುನ್ನ ಮುಗಿದೇ ಹೋಯ್ತು, ಲವ್... 
           Dance with me (ಹೋ  ಹೋ )Merry Merry Disco (ಹೋ  ಹೋ )
ಹೆಣ್ಣು : Swing with me Jolly Jolly Disco
ಗಂಡು : Hey... Baby Baby Baby Baby
           ಮೋಹಕ ಸಂಜೆ, ಈ ಬಣ್ಣಗಳ ಮೇಳ
           ಬೀಸಿದೆ ಜಾಲ, ಈ ಕಣ್ಣುಗಳ ಗಾಳ
ಇಬ್ಬರು: Dance with me Merry Merry Disco ಯ್ಯಾ.... 
------------------------------------------------------------------------------------------------------------------------

ಆಶಾ (1983)
ಸಾಹಿತ್ಯ:ಆರ್.ಎನ್.ಜಯಗೋಪಾಲ್ ಸಂಗೀತ:ಜಿ.ಕೆ.ವೆಂಕಟೇಶ್, ಗಾಯನ: ರಾಜುಕುಮಾರ ಭಾರತಿ, ವಾಣಿಜಯರಾಂ 

ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
            ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು
           ನೀಡು ನೀನೂ ಬಾನು  ಮುತ್ತೊಂದ ತಂದಂತೇ
           ಈ ಭೂಮಿ ರಂಗೇರಿ ನಿಂತಂತೇ ನಿನ್ನೇ ಒಂದು ಕೊಟ್ಟೆ ನೀನು
          ಇನ್ನೂ ಬೇಕು ಎಂದೇ ನಾನು ಇವಾಗಲೇ ನಾ ಇವಾಗಲೇ
ಹೆಣ್ಣು : ಗೊತ್ತೋ ಗೊತ್ತು ನನಗೆ ಗೊತ್ತೋ ಗೊತ್ತು 
          ಗೊತ್ತೋ ಗೊತ್ತು ನನಗೆ ಗೊತ್ತೋ ಗೊತ್ತು ತುಂಟಾ ನೀನು 
          ಆಸೆ ಮತ್ತೇರಿ ಬಂದಂತೇ ಹೊಸ ಪ್ರೀತಿ ತೂರಾಡಿ ನಿಂತಂತೇ 
          ಮೂರೂ ಹೊತ್ತು ಒಂದೇ ಮಾತು ಕೊಟ್ಟು ಕೊಟ್ಟು ಹೋದೆ ಸೋತು 
          ಹೋಗಿಗಲೇ ದೂರ ಹೋಗಿಗಲೇ   

ಗಂಡು : ವನದಲ್ಲಿ ಎಲ್ಲೋ ಹೊಸ ಹಾಡಿದೆ ಒಲವಿಗೆ ವೇಳೆ ಇದೇ ಎಂದಿದೆ 
ಹೆಣ್ಣು : ತಿಳಿಯದ ಮಾತು ಇನ್ನೂ ಏನಿದೆ ಅವಸರ ಇನ್ನೇಕೆ ಬಿಡು ಎಂದಿದೆ 
ಗಂಡು : ಮಲ್ಲಿಗೆ ಹೂಮಾಲೆ ಬಾಡೋ ಮುನ್ನ ಕೆಂದುಟಿ ಜೇನನ್ನು ತಾರೆ ಚಿನ್ನ 
ಹೆಣ್ಣು : ಚೆನ್ನ ಬಿಡು ನಿನ್ನ ಹಠವನ್ನ ಬಾ.. ಬಾ ... 
ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು 
ಹೆಣ್ಣು : ಗೊತ್ತೋ ಗೊತ್ತು ನನಗೆ ಗೊತ್ತೋ ಗೊತ್ತು 

ಹೆಣ್ಣು : ಅನುಭವ ಕಂಡೇ ಬಲು ನೂತನ ಒಡಲಲಿ ಏನೋ ನವ ಚೇತನ 
ಗಂಡು : ಮನಗಳ ಮಿಲನದ ಮಧುಚಂದ್ರವು ಕಾಲವು ಮರೆಯದ ಹೊಸ ಕಾವ್ಯವೂ 
ಹೆಣ್ಣು : ನನ್ನ ನಿನ್ನ ಪ್ರೀತಿ ಮಧುರ ನಮ್ಮಿ ಒಲವು ಎಂದೂ ಅಮರ 
ಗಂಡು : ಚಿನ್ನ ಬಿಡಲಾರೆ ನಾ ನಿನ್ನ ಬಾ... ಬಾ...  
ಗಂಡು : ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು 
ಹೆಣ್ಣು : ತುಂಟಾ ನೀನು 
ಗಂಡು : ಬಾನು  ಮುತ್ತೊಂದ ತಂದಂತೇ ಈ ಭೂಮಿ ರಂಗೇರಿ ನಿಂತಂತೇ 
ಹೆಣ್ಣು : ಮೂರೂ ಹೊತ್ತು ಒಂದೇ ಮಾತು ಕೊಟ್ಟು ಕೊಟ್ಟು ಹೋದೆ ಸೋತು 
          ಹೋಗಿಗಲೇ ದೂರ ಹೋಗಿಗಲೇ   
ಗಂಡು : ಲಾ ಲ ಲಾ ಲ ಲಾ ಲ 
ಇಬ್ಬರು : ಲಾ ಲ ಲಾ ಲ ಲಾ ಲ 
------------------------------------------------------------------------------------------------------------------------- 

No comments:

Post a Comment