129. ಹಣ್ಣೆಲೆ ಚಿಗುರಿದಾಗ (1968)



ಹಣ್ಣೆಲೇ ಚಿಗುರಿದಾಗ ಚಿತ್ರದ ಹಾಡುಗಳು 
  1. ಹೂವು ಚೆಲುವೆಲ್ಲಾ ತಾನೆಂದಿತು 
  2. ಇದೇ ಹುಡುಗಿ ಇದೇ ಬೆಡಗಿ 
  3. ಹಾಲಲಿ ಮಿಂದವಳೋ ದಂತದ ಮೈಯವಳೋ 
  4. ಬಾರಾ ಒಲಿದು ಬಾರಾ 
  5. ಮಲ್ಲೆ ಮಲ್ಲೆ (ಎಲ್.ಆರ್.ಈಶ್ವರಿ)

ಹಣ್ಣೆಲೆ ಚಿಗುರಿದಾಗ (1968)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಸುಶೀಲಾ

ಬಾರಾ ಒಲಿದು ಬಾರಾ ನಿದಿರೆ ತಾರಾ ಕಂದಗೆ
ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ
ಬಾರಾ ಒಲಿದು ಬಾರಾ ನಿದಿರೆ ತಾರಾ ಕಂದಗೆ
ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ

ಕನಸಿನ ಲೋಕದ ಹೂಬನದಲ್ಲಿ
ಕಾಮನ ಬಿಲ್ಲಿನ ಚಪ್ಪರದಲ್ಲಿ
ಕನಸಿನ ಲೋಕದ ಹೂಬನದಲ್ಲಿ
ಕಾಮನ ಬಿಲ್ಲಿನ ಚಪ್ಪರದಲ್ಲಿ
ಕಮಲದ ಹೂಗಳ ಹಾಸಿಗೆಯಲ್ಲಿ
ಕಮಲದ ಹೂಗಳ ಹಾಸಿಗೆಯಲ್ಲಿ
ಮಲಗಿಸು ಮಗುವ ಮಡಿಲಲ್ಲಿ
ಬಾರಾ ಒಲಿದು ಬಾರಾ ನಿದಿರೆ ತಾರಾ ಕಂದಗೆ
ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ

ತಾಯಿಯ ಪ್ರೇಮದ ಸುಧೆಯನು ಬಯಸಿ
ತಪಿಸುವ ಕಂದನ ಕಣ್ಣನು ಒರೆಸಿ
ತಾಯಿಯ ಪ್ರೇಮದ ಸುಧೆಯನು ಬಯಸಿ
ತಪಿಸುವ ಕಂದನ ಕಣ್ಣನು ಒರೆಸಿ
ತೋಳಿನ ಆಸರೆ ನೀಡುತ ರಮಿಸಿ
ತೋಳಿನ ಆಸರೆ ನೀಡುತ ರಮಿಸಿ
ನೋವನು ಮರೆಸು ನೀ ನಗಿಸಿ
ಬಾರಾ ಒಲಿದು ಬಾರಾ ನಿದಿರೆ ತಾರಾ ಕಂದಗೆ
ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ
-----------------------------------------------------------------------------------------------------------------------

ಹಣ್ಣೆಲೆ ಚಿಗುರಿದಾಗ (1968)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗರಾವ್ ಹಾಡಿದವರು: ಎಂ.ಬಾಲಮುರಳಿಕೃಷ್ಣ


ಹಾಲಲಿ ಮಿಂದವಳೊ ದಂತದ ಮೈಯವಳೊ
ಹುಣ್ಣಿಮೆ ಹೆಣ್ಣಾದಳೊ, ಹೇಳೆ
ಹಾಲಲಿ ಮಿಂದವಳೊ ದಂತದ ಮೈಯವಳೊ
ಹುಣ್ಣಿಮೆ ಹೆಣ್ಣಾದಳೊ

ಬಳುಕುವ ಲತೆಯಂತ ನಡುವವಳೊ
ಬಳುಕುವ ಲತೆಯಂತ ನಡುವವಳೊ
ನೈದಿಲೆ ಹೂವಂತ ಕಣ್ಣವಳೊ
ನವಿಲಿನ ನಡೆಯ ಕುಲುಕುವ ಜಡೆಯ
ಮಧುಮಯ ತುಟಿಯ ಈ ಚೆನ್ನೆ ತಾನಾವಳೊ
ಹಾಲಲಿ ಮಿಂದವಳೊ ದಂತದ ಮೈಯವಳೊ
ಹುಣ್ಣಿಮೆ ಹೆಣ್ಣಾದಳೊ

ಸಂಗೀತ ಸಾಹಿತ್ಯ ಸಮಲೋಚನಿ
ಸುಧೆಗಿಂತ ಸವಿಯಾದ ಮೃದುಭಾಷಿಣಿ
ಸಂಗೀತ ಸಾಹಿತ್ಯ ಸಮಲೋಚನಿ
ಸುಧೆಗಿಂತ ಸವಿಯಾದ ಮೃದುಭಾಷಿಣಿ
ಹರೆಯವೆ ಹೊರೆಯಾದ ನವ ತರುಣಿ
ಶಿಲ್ಪಿಯ ಕಲೆಗೆಲ್ಲ ಸ್ಪೂರ್ತಿಯು ನೀ
ನಾಟ್ಯ ರಾಣಿ ಕಾವ್ಯ ವಾಣಿ ರಾಗಿಣಿ
ನೀಲವೇಣಿ ಮಧುರ ಪಾಣಿ ಮಾನಿನಿ
ಮೃದಂಗ ಸುನಾದ ತರಂಗ ವಿನೋದ
ವಿಲಾಸದಲಿ ವಿರಾಜಿಸುವ ವಿಹಂಗಮವೆ
ಹಾಲಲಿ ಮಿಂದವಳೊ  ದಂತದ ಮೈಯವಳೊ
ಹುಣ್ಣಿಮೆ ಹೆಣ್ಣಾದಳೊ
------------------------------------------------------------------------------------------------------------------------

ಹಣ್ಣೆಲೆ ಚಿಗುರಿದಾಗ (1968) - ಹೂವೂ ಚೆಲುವೆಲ್ಲಾ
ಸಾಹಿತ್ಯ: ಅರ್.ಎನ್.ಜಯಗೋಪಾಲ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಸುಶೀಲ


ಹೂವೂ ಚೆಲುವೆಲ್ಲಾ ನಂದೆಂದಿತೂ
ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು

ಕೋಗಿಲೆಯು ಗಾನದಲ್ಲಿ ತಾನೇ ಮೊದಲೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ
ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು

ನವಿಲೊಂದು ನಾಟ್ಯದಲ್ಲಿ ತಾನೇ ದೊರೆಯೆಂದಿತು
ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ತಂಪೆಂತು
ಹೆಣ್ಣು ನಾತ್ಯದರಸಿ ಪಾರ್ವತಿಯೆ ಹೆಣ್ಣೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ
ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು

ಮುಗಿಲೊಂದು ಬಾನಿನಲ್ಲಿ ನಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗನ್ಗೆ ಹೆಣ್ಣೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ
ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು
ಹೂವೂ ಚೆಲುವೆಲ್ಲಾ ನಂದೆಂದಿತೂ
-------------------------------------------------------------------------------------------------------------------------

ಹಣ್ಣೆಲೆ ಚಿಗುರಿದಾಗ (೧೯೬೮).....ಇದೇ ಹುಡುಗಿ ಇದೇ ಬೆಡಗಿ
ಸಾಹಿತ್ಯ:ಆರ್.ಎನ್.ಜಯಗೋಪಾಲ್, ಸಂಗೀತ:ಎಂ.ರಂಗರಾವ್, ಗಾಯನ : ಡಾ.ಪಿ.ಬಿ.ಶ್ರೀ, ಎಲ್.ಆರ್.ಈಶ್ವರಿ

ಪಿ.ಬಿ.ಶ್ರೀ: ಇದೇ ಹುಡುಗಿ ಇದೇ ಬೆಡಗಿ   ಕುಡಿ ನೋಟದೆ ಸೆಳೆದಾ ಆ ಸೊಬಗಿ
ಎಲ್.ಆರ್.ಈಶ್ವರಿ: ಇದೇ ಹುಡುಗ ಇದೇ ಸೊಬಗ  ಈ ಮೋಡಿಯ ಹೂಡಿದ ಗಾರುಡಿಗ
ಪಿ.ಬಿ.ಶ್ರೀ: ಇದೇ ಹುಡುಗಿ ಇದೇ ಬೆಡಗಿ  ಕುಡಿ ನೋಟದೆ ಸೆಳೆದಾ ಆ ಸೊಬಗಿ
ಎಲ್.ಆರ್.ಈಶ್ವರಿ:  ಇದೇ ಹುಡುಗ ಇದೇ ಸೊಬಗ  ಈ ಮೋಡಿಯ ಹೂಡಿದ ಗಾರುಡಿಗ
                           ಇದೇ ಹುಡುಗ

ಪಿ.ಬಿ.ಶ್ರೀ:  ಒಲವೆಂಬ ನಾಟಕದ ನಾಯಕಿ ನೀನೇ  ಅವಳನ್ನು ವರಿಸುವ ನಾಯಕ ನಾನೇ
               ಒಲವೆಂಬ ನಾಟಕದ ನಾಯಕಿ ನೀನೇ  ಅವಳನ್ನು ವರಿಸುವ ನಾಯಕ ನಾನೇ
ಎಲ್.ಆರ್.ಈಶ್ವರಿ:  ಲೇಖಕನಾರೋ ದರ್ಶಕನಾರೋ ಈ ಕಥೆಗೆ
                           ಲೇಖಕನಾರೋ ದರ್ಶಕನಾರೋ ಈ ಕಥೆಗೆ
                           ಆ ಜಾಣ ಸುಮ ಬಾಣ ಅದೇ ಮನ್ಮಥ
                           ಇದೇ ಹುಡುಗ ಇದೇ ಸೊಬಗ
ಪಿ.ಬಿ.ಶ್ರೀ: ಇದೇ ಹುಡುಗಿ ಇದೇ ಬೆಡಗಿ  ಕುಡಿ ನೋಟದೆ ಸೆಳೆದಾ ಆ ಸೊಬಗಿ
              ಇದೇ ಹುಡುಗಿ

ಎಲ್.ಆರ್.ಈಶ್ವರಿ: ಬಿಗಿದಾಗ ಕೊರಳಿಗೆ ಮಂಗಳ ಸೂತ್ರ    ಬರುವೆ ನಾ ವಹಿಸಲು ನಾಯಕಿ ಪಾತ್ರ
                          ಬಿಗಿದಾಗ ಕೊರಳಿಗೆ ಮಂಗಳ ಸೂತ್ರ     ಬರುವೆ ನಾ ವಹಿಸಲು ನಾಯಕಿ ಪಾತ್ರ
ಪಿ.ಬಿ.ಶ್ರೀ: ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
              ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
              ಅಭ್ಯಾಸ ಆರಂಭ ಇಂದೇ ಆಗಲಿ
             ಇದೇ ಹುಡುಗಿ ಇದೇ ಬೆಡಗಿ  ಕುಡಿ ನೋಟದೆ ಸೆಳೆದಾ ಆ ಸೊಬಗಿ
ಎಲ್.ಆರ್.ಈಶ್ವರಿ:  ಇದೇ ಹುಡುಗ ಇದೇ ಸೊಬಗ  ಈ ಮೋಡಿಯ ಹೂಡಿದ ಗಾರುಡಿಗ
-----------------------------------------------------------------------------------------------------------------------

ಹಣ್ಣೆಲೆ ಚಿಗುರಿದಾಗ (೧೯೬೮)......ಮಲ್ಲೆ ಮಾಲೆ ನಲ್ಲಗೆಂದು
ಸಾಹಿತ್ಯ :ಆರ್.ಎನ್.ಜಯಗೋಪಾಲ್  ಸಂಗೀತ : ಎಂ.ರಂಗರಾವ್  ಗಾಯನ : ಪಿ.ಸುಶೀಲಾ,ಎಲ್.ಆರ್.ಈಶ್ವರಿ 

ತಾಯಿ ತoದೆಯು ಹೊತ್ತ ಹರಕೆಯ ಫಲವೇ
ಒಡಹುಟ್ಟಿದವರ ಒಲುಮೆಯಾ ಹೂವೇ
ಹೆಣ್ಣಿನಾ ಹಿರಿಮೆಯೇ ಮೈತಳದ ಚೆಲುವೆ
ನಿನ್ನ ಕೈ ಹಿಡಿದವನೇ ಬಲು ಧನ್ಯ ಎನುವೆ
               ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಕೋರಸ್: ಜಾಜಿ ಮಲ್ಲೆ ಮಾಲೆ ನಲ್ಲಾಗೆಂದು ಹಿಡಿದು ಬಾರಮ್ಮ
              ನಲ್ಲೇ ಮೆಲ್ಲನೊಂದು ನಗೆಯ ಚೆಲ್ಲಿ ನಡೆದು ಬಾರಮ್ಮ
               ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆಯಿಂದ ನೀನಿoದು
ಕೋರಸ್:  ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
                ಜಾಜಿ ಮಲ್ಲೆ ಮಾಲೆ ನಲ್ಲಾಗೆಂದು ಹಿಡಿದು ಬಾರಮ್ಮ

ಕನ್ನಡದ ಕುಲಮಗಳೆ ಕವಿಯ ಕಲ್ಪನೆಯೆ
ಸರಸತಿಯ ಹಿರಿಮಗಳೆ ಸೌಭಾಗ್ಯವತಿಯೆ
ಕಲಶಗನ್ನಡಿ ಕಣ್ಣ ನೀ ತೆರೆದು ಬಾರೆ
ಕೋರಸ್:  ಕಲಶಗನ್ನಡಿ ಕಣ್ಣ ನೀ ತೆರೆದು ಬಾರೆ
                ಒಲವಿನಾ ಮುನ್ನುಡಿಯ ಬರೆವ ಚೆನ್ನಿಗನಾ
                ಒಲವಿನಾ ಮುನ್ನುಡಿಯ ಬರೆವ ಚೆನ್ನಿಗನಾ
ಕೋರಸ್: ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
               ಜಾಜಿ ಮಲ್ಲೆ ಮಾಲೆ ನಲ್ಲಾಗೆಂದು ಹಿಡಿದು ಬಾರಮ್ಮ

ಹುಣ್ಣಿಮೆ ಚoದಿರನಿವನು ಈ ಹೆಣ್ಣನು ಆಳಬಲ್ಲವನು
ಹುಣ್ಣಿಮೆ ಚoದಿರನಿವನು ಈ ಹೆಣ್ಣನು ಆಳಬಲ್ಲವನು
ಕಣ್ಣಲಿ ನಿಂತವನ ಕೊಡುಗೆಯ ತಂದವನ
ಕಣ್ಣಲಿ ನಿಂತವನ ಕೊಡುಗೆಯ ತಂದವನ
ಹಸೆಯಲಿ ಕಾದಿಹನು ಲಲನೆ ನೋಡಮ್ಮ
ಕೋರಸ್: ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
               ಜಾಜಿ ಮಲ್ಲೆ ಮಾಲೆ ನಲ್ಲಾಗೆಂದು ಹಿಡಿದು ಬಾರಮ್ಮ
-------------------------------------------------------------------------------------------------------------------------

No comments:

Post a Comment