614. ಅಶ್ವಮೇಧ (೧೯೯೦)

ಅಶ್ವಮೇಧ ಚಲನಚಿತ್ರದ ಹಾಡುಗಳು 
  1. ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ
  2. ಯಾಕೋ ಏನೋ ನನ್ನೇದೇ 
  3. ಈ ಜಯ ನಿಮ್ಮದೇ 
  4. ಈ ಜೀವನವೇ ಸಂತೋಷವೇ 
  5. ಏ ಬಿ ಸಿ ಡಿ ಕಲಿತರೆ ನೀನು 
ಅಶ್ವಮೇಧ (೧೯೯೦) - ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ
ಸಂಗೀತ : ಸಂಗೀತ ರಾಜಾ ಸಾಹಿತ್ಯ : ದೊಡ್ಡ ರಂಗೇಗೌಡ ಹಾಡಿದವರು: ರಾಜ್ ಕುಮಾರ್ 

ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದು.... 
ದುಷ್ಟ ಸಂಹಾರಕೆ ಸತ್ಯ ಜೇಂಕಾರಕೆ
ಪ್ರಾಣ, ಒತ್ತೆ,  ಇಟ್ಟೂ ... ಹೋ... ರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು 
ನಡೆಸುವೆ ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ

ಸೂರ್ಯ ಚಂದ್ರರೇ ನಿನ್ನ ಕಂಗಳು ಗಿರಿ ಶ್ರುಂಗವೇ ನಿನ್ನ ಅಂಗವೋ
ದಿಕ್ಪಾಲಕರೆ ನಿನ್ನ ಕಾಲ್ಗಳು ಮಿಂಚು ಸಿಡಿಲು ನಿನ್ನ ವೇಗವು
ಜೀವ ಜೀವದಲಿ ಬೆರೆತು ಹೋದ ಭಾವ ಭಾವದಲಿ ಕರಗಿ ಹೋದ
ಜೀವಾಶ್ವವೆ ದೂರಾದೆಯಾ... ಪ್ರಾಣಾಶ್ವವೆ ಮರೆಯಾದೆಯಾ..
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು 
ನಡೆಸುವೆ ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ

ವಿಷ ವ್ಯೂಹವ ಕುಟ್ಟಿ ಕೆಡವಲು ವೀರ ಪೌರುಷ ಎತ್ತಿ ಹಿಡಿದು
ತಕಿಟ ಧಿಂ ದಿರನ ತಕಿಟ ಧಿಂ ಧಿರನ ದಿರನ ದಿರನ ದಿರನ ತಕಿಟ ಧಿಂ ತನ
ತಕಿಟ ಧಿಂ ತಕಿಟ ಧಿಂ ಧಿಂ ತನ್
ಛದ್ಮ ವೇಷವ ಹೊರ ಎಳೆಯಲು ಕ್ಷಾತ್ರ ತೇಜದ ಕತ್ತಿ ಇರಿದು
ಗೂಡ ರಾಕ್ಷಸರ ಕೊಚ್ಚಿ ನಡೆವೆ ನೀತಿ ನೇಮಗಳ ಬಿತ್ತಿ ಬೆಳೆವೆ
ಆಕಾಶವೇ ಮೇಲ್ಬೀಳಲಿ ಭೂತಾಯಿಯೇ ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು 
ನಡೆಸುವೆ ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ
------------------------------------------------------------------------------------------------

ಅಶ್ವಮೇಧ (೧೯೯೦) - ಯಾಕೋ ಏನೋ ನನ್ನೇದೇ 
ಸಂಗೀತ : ಸಂಗೀತ ರಾಜಾ ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳ ಗುರುರಾಜ  

ಹೆಣ್ಣು : ಯಾಕೋ ಏನೋ ನನ್ನೆದೆ ಝಂ ಝಂ ಝಂ ಎಂದಿದೆ 
          ಯಾಕೋ ಏನೋ ನನ್ನೆದೆ ಝಂ ಝಂ ಝಂ ಎಂದಿದೆ 
          ನಿನ್ನಾ ಕಾಣಲು ಕಣ್ಣು ಕಾದಿದೆ ನಿನ್ನ ಜೊತೆ ಸೇರಲು ನನ್ನ ಮನಸು ಬಯಸುತಿದೆ 
          ಯಾಕೋ ಏನೋ ನನ್ನೆದೆ ಝಂ ಝಂ ಝಂ ಎಂದಿದೆ    

ಗಂಡು : ನೆರಳಿನಂಗೆ ನೀನು ಯಾಕೆ ಬಂದೆ ನನ್ನ ಹಿಂದೆ ಯಾಕೆ ನಿಂದೆ 
            ಮೈಮ್ಯಾಗೇ ಬಿದ್ದು ಓಡಾಡಿ ನೀ ನನ್ನಾ ಯಾಕೆ ಕಾಡುವೆ 
ಹೆಣ್ಣು : ನನ್ನ ರಾಜಾ ನೀನೇನೇ ಈ ಕಾಡು ಮೇಡು ಕಣಿವೆಗೆ 
          ಪ್ರೀತಿ ಬಾನಲಿ ಆಸೆ ಹಕ್ಕಿಯ ರೆಕ್ಕೆ ಬಿಚ್ಚಿ ಹಾರಲು  ಬಣ್ಣ ಬಣ್ಣ ಕಂಡಿದೆ.. 
          ಯಾಕೋ ಏನೋ ನನ್ನೆದೆ ಝಂ ಝಂ ಝಂ ಎಂದಿದೆ 

ಗಂಡು : ಚೆಲುವಿನಲಿ ನೀನು ರಾಗ ರತಿಯೇ ಪ್ರೇಮದಲಿ ನೀನು ಪ್ರಾಣ ಸಖಿಯೇ 
            ನನ್ ರಾಣಿ ನೀನೇ ಎಂದಿಲ್ಲ ನೀ ಇಂಗೆ ಯಾಕೆ ಕನಸು ಕಾಣುವೇ 
ಹೆಣ್ಣು : ಯಾಕೋ ಏನೋ ನನ್ನೆದೆ ಝಂ ಝಂ ಝಂ ಎಂದಿದೆ 
          ನಿನ್ನಾ ಕಾಣಲು ಕಣ್ಣು ಕಾದಿದೆ ನಿನ್ನ ಜೊತೆ ಸೇರಲು ನನ್ನ ಮನಸು ಬಯಸುತಿದೆ 
          ಯಾಕೋ ಏನೋ ನನ್ನೆದೆ ಝಂ ಝಂ ಝಂ ಎಂದಿದೆ    
------------------------------------------------------------------------------------------------

ಅಶ್ವಮೇಧ (೧೯೯೦) - ಈ ಜಯ ನಿಮ್ಮದೇ 
ಸಂಗೀತ : ಸಂಗೀತ ರಾಜಾ ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳ ಗುರುರಾಜ  

ಗಂಡು : ಈ ಜಯ ನಿಮ್ಮದೇ ಈ ಫಲ ನಿಮ್ಮದೇ ನೀವೇ ನನ್ನ ತಾಯಿತಂದೆ 
           ನಿಮ್ಮ ಅಭಿಮಾನವೇ ನನಗೆಂದು ರಕ್ಷೆ ನಿಮ್ಮ ಹಾರೈಕೆ ನಾ ಬೇಡುವೆ 
ಕೋರಸ್ : ಊರಿಗೆ ಹೆಸರ ತಂದವ ನೀನು ಬಾಳಿ ಬದುಕು ನೂರುಕಾಲ 
               ನಾಡಿಗೆ ಕೀರ್ತಿ ತರುತಾ ನೀನು ಬಾಳಿ ಬದುಕು ನೂರುಕಾಲ 
ಗಂಡು : ಈ ಜಯ ನಿಮ್ಮದೇ ಈ ಫಲ ನಿಮ್ಮದೇ ನೀವೇ ನನ್ನ ತಾಯಿತಂದೆ 
           ನಿಮ್ಮ ಅಭಿಮಾನವೇ ನನಗೆಂದು ರಕ್ಷೆ ನಿಮ್ಮ ಹಾರೈಕೆ ನಾ ಬೇಡುವೆ 

ಗಂಡು : ದುಷ್ಟರನೆಲ್ಲ ಮಟ್ಟವ ಹಾಕಿ ಮುಂದೆ ಹಾದಿ ಸಾಗುವ 
           ಎಂದೆಂದೂ ನಾವು ಒಟ್ಟಿಗೆ ಕಲಿತು ಪ್ರೀತಿ ಸ್ನೇಹವ ಕಾಣುವ 
           ವಂಚಕ ಜನಕೆ ಪಾಠವ ಕಲಿಸಿ ಸ್ವಾರ್ಥವ ಮೆರೆವ ಮಂದಿಯ ಅಳಿಸಿ 
          ನಾಡನು ನಾವು ಕಾಯೋಣ 
ಕೋರಸ್ : ಊರಿಗೆ ಹೆಸರ ತಂದವ ನೀನು ಬಾಳಿ ಬದುಕು ನೂರುಕಾಲ 
               ನಾಡಿಗೆ ಕೀರ್ತಿ ತರುತಾ ನೀನು ಬಾಳಿ ಬದುಕು ನೂರುಕಾಲ 
ಗಂಡು : ಈ ಜಯ ನಿಮ್ಮದೇ ಈ ಫಲ ನಿಮ್ಮದೇ ನೀವೇ ನನ್ನ ತಾಯಿತಂದೆ 
           ನಿಮ್ಮ ಅಭಿಮಾನವೇ ನನಗೆಂದು ರಕ್ಷೆ ನಿಮ್ಮ ಹಾರೈಕೆ ನಾ ಬೇಡುವೆ 

ಗಂಡು : ಮಾನವ ಎಷ್ಟೇ ಮುನ್ನಡೆದಿರಲಿ ದೈವ ಶಕ್ತಿ ಒಂದಿದೆ 
            ದೈವದ ಮುಂದೆ ಯಂತ್ರ ತಂತ್ರದ ಪಾತ್ರವು ಎಂದು ಸಣ್ಣದೇ 
            ಶಕ್ತಿಯ ಪದಕೆ ನಾವೆಲ್ಲ ನಮಿಸಿ ನಮ್ಮೆಲ್ಲ ಹರಕೆ ದೈವಕೆ ಸಲ್ಲಿಸಿ ಒಳ್ಳೆಯ ರೀತಿ ಬಾಳೋಣ 
ಕೋರಸ್ : ಊರಿಗೆ ಹೆಸರ ತಂದವ ನೀನು ಬಾಳಿ ಬದುಕು ನೂರುಕಾಲ 
               ನಾಡಿಗೆ ಕೀರ್ತಿ ತರುತಾ ನೀನು ಬಾಳಿ ಬದುಕು ನೂರುಕಾಲ 
ಗಂಡು : ಈ ಜಯ ನಿಮ್ಮದೇ ಈ ಫಲ ನಿಮ್ಮದೇ ನೀವೇ ನನ್ನ ತಾಯಿತಂದೆ 
           ನಿಮ್ಮ ಅಭಿಮಾನವೇ ನನಗೆಂದು ರಕ್ಷೆ ನಿಮ್ಮ ಹಾರೈಕೆ ನಾ ಬೇಡುವೆ 
ಕೋರಸ್ : ಊರಿಗೆ ಹೆಸರ ತಂದವ ನೀನು ಬಾಳಿ ಬದುಕು ನೂರುಕಾಲ 
               ನಾಡಿಗೆ ಕೀರ್ತಿ ತರುತಾ ನೀನು ಬಾಳಿ ಬದುಕು ನೂರುಕಾಲ 
               ಊರಿಗೆ ಹೆಸರ ತಂದವ ನೀನು ಬಾಳಿ ಬದುಕು ನೂರುಕಾಲ 
               ನಾಡಿಗೆ ಕೀರ್ತಿ ತರುತಾ ನೀನು ಬಾಳಿ ಬದುಕು ನೂರುಕಾಲ 
         ------------------------------------------------------------------------------------------------

ಅಶ್ವಮೇಧ (೧೯೯೦) - ಈ ಜೀವನವೇ ಸಂತೋಷವೇ 
ಸಂಗೀತ : ಸಂಗೀತ ರಾಜಾ ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ಮಂಜುಳ ಗುರುರಾಜ  

ಈ ಜೀವನವೇ ಸಂತೋಷ ನಗುತಾ ಇರಲು ಉಲ್ಲಾಸ 
ಹಾಡಿ ಕುಣಿದಾಗ ಇಲ್ಲೇ ಹೊಸ ಲೋಕ 
ಎಲ್ಲ ಮರೆತಾಗ ಇಲ್ಲೇ ಸುಖ ಸ್ವರ್ಗ 
ಈ ಜೀವನವೇ ಸಂತೋಷ ನಗುತಾ ಇರಲು ಉಲ್ಲಾಸ 
ಹಾಡಿ ಕುಣಿದಾಗ ಇಲ್ಲೇ ಹೊಸ ಲೋಕ 
ಎಲ್ಲ ಮರೆತಾಗ ಇಲ್ಲೇ ಸುಖ ಸ್ವರ್ಗ 

ಈ ಮೋಜಿನಲ್ಲಿ ಆವೇಶ ಇದನ್ನು ತಿಳಿಯೆ ಉತ್ಸಾಹ 
ಸ್ನೇಹ ಕಲೆತಾಗ ನೂರು ಹೊಸ ಬಳಗ 
ಪ್ರೀತಿ ಬೆರೆತಾಗ ಅದುವೇ ಹೊಸ ರಾಗ 
ಈ ಜೀವನವೇ ಸಂತೋಷ ನಗುತಾ ಇರಲು ಉಲ್ಲಾಸ 
ಹಾಡಿ ಕುಣಿದಾಗ ಇಲ್ಲೇ ಹೊಸ ಲೋಕ 
ಎಲ್ಲ ಮರೆತಾಗ ಇಲ್ಲೇ ಸುಖ ಸ್ವರ್ಗ 

ಈ ಯೌವ್ವನವೇ ಹಸಿ ಮೋಹ ಬಯಕೆ ಬಿರಿಯೆ ಬಿಸಿ ದಾಹ 
ಸಂಜೆ ಸುಳಿದಾಗ ಬೇಕು ಸವಿ ಸಂಗ 
ತುಟಿಯು ಕರೆವಾಗ ಬೆಸುಗೆ ನವರಂಗ 
ಈ ಜೀವನವೇ ಸಂತೋಷ ನಗುತಾ ಇರಲು ಉಲ್ಲಾಸ 
ಹಾಡಿ ಕುಣಿದಾಗ ಇಲ್ಲೇ ಹೊಸ ಲೋಕ 
ಎಲ್ಲ ಮರೆತಾಗ ಇಲ್ಲೇ ಸುಖ ಸ್ವರ್ಗ 
----------------------------------------------------------------------------------------------

ಅಶ್ವಮೇಧ (೧೯೯೦) - ಏ ಬಿ ಸಿ ಡಿ ಕಲಿತರೆ ನೀನು 
ಸಂಗೀತ : ಸಂಗೀತ ರಾಜಾ ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳ ಗುರುರಾಜ  

ಗಂಡು : ಎ ಬಿ ಸಿ ಡಿ ಕಲಿತರೆ ನೀನು ಕಲಿಸುವೆ ನಾನು 
           ಬದುಕಿನಲೀ ಬದಲಾಗು ಮಾಡರ್ನ್ ಟೈಪಾಗು 
           ಹೊಸ ಹೆಜ್ಜೆ ಹಾಕಿ ಕುಣಿದಾಡು ನೀ 
           ಹೊಸ ನೋಟ ತೋರಿ ಮೆರೆದಾಡು ನೀ... 
           ಹ್ಹಾ...  ಫ್ಯಾಷನ್ ಕಲಿತಾಗ ಟಿಪ್ ಟಾಪು ಆದಾಗ್ 
           ಯುವ್ ಲವ್ಲೀ ಲೇಡಿ ಹೇ... ಐ ಲವ್ ಯು ಲೇಡಿ ಹಾಂ .. 

ಗಂಡು : ಓಲಾಡುವ ತೇಲಾಡುವ ಬಾಳಲಿ ಒಂದಾಗುತಾ 
           ಮುಂದಾಗುವಾ ರಂಗಲಿ ಮಿಲನದಲಿ ಜೀವ ಹೂವಾಗಿ 
           ಒಲವಿನಲಿ ನಾನೇ ನೀನಾಗಿ ಸರಸದಲಿ ಬೆರೆಯುತಲಿ 
           ದಿನ ದಿನ ಕ್ಷಣ ಕ್ಷಣ ಹಾಯ್.... 
ಹೆಣ್ಣು : ಎ ಬಿ ಸಿ ಡಿ ಕಲಿತೆನು ನಾನು ಕಲಿಸಿದೆನು ನೀನು 
           ಬದುಕಿನಲೀ ಬದಲಾದೆ ಮಾಡರ್ನ್ ನಾನಾದೇ  
           ಹೊಸ ಹೆಜ್ಜೆ ಹಾಕಿ ಕುಣಿದಾಡಿದೆ  
           ಹೊಸ ನೋಟ ತೋರಿ ಮೆರೆದಾಡಿದೇ... 
           ಹ್ಹಾ...  ಫ್ಯಾಷನ್ ಕಲಿತಾಯ್ತು ಟಿಪ್ ಟಾಪು ಕಂಡಾಯ್ತು 
           ಆಯ್ ಲವ್ ರಾಜಾ ಮೈ ಡಾರ್ಲಿಂಗ್ ರಾಜಾ 

ಹೆಣ್ಣು : ಈ ಬಂಧನಾ ಈ ಚುಂಬನಾ ಜೀವನ ತುಂಬಾ 
ಗಂಡು : ಆನಂದದಾ ಆಲಿಂಗನಾ ಬಂಧನಾ 
ಹೆಣ್ಣು : ಮೋಹದ ಮನ್ಮಥ ನೀನಾಗಿ 
ಗಂಡು : ರಸಿಕತೆಯ ರತಿಯು ನೀನಾಗಿ 
ಹೆಣ್ಣು : ಉಲಿ ಉಲಿಯುತಲಿ 
ಗಂಡು : ಒಲಿಯುತಲಿ ಮೈ ಮನ ಕಣಕಣ ಎಕ್ಸ್ ವ್ಯಾಯ್ ಝೆಡ್ 
------------------------------------------------------------------------------------------------

No comments:

Post a Comment