165. ದೇವರಗುಡಿ -(1975)



ದೇವರ ಗುಡಿ ಚಿತ್ರದ ಗೀತೆಗಳು
  1. ಚೆಲುವೆಯ ಅಂದದ ಮೊಗಕೆ 
  2. ಮಾಮರವೆಲ್ಲೋ ಕೋಗಿಲೆಯಲ್ಲೋ 
  3. ಕಣ್ಣು ಕಣ್ಣು ಒಂದಾಯಿತು 
  4. ಶ್ರೀಕೃಷ್ಣ ಜನಿಸಿದ 
  5. ನಾ ಬಯಸದ ಭಾಗ್ಯ 
ದೇವರಗುಡಿ -(1975) - ಚೆಲುವೆಯ ಅಂದದ ಮೊಗಕೇ....
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ..
ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೇ ...ನಲಿವಿಗೇ....
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....
ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಮದುವೆಯ ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವೂ ಬಾಡದೂ
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದೂ
ಒಲವಿನಾ...ಜೀವನಾ...
ಒಲವಿನಾ...ಜೀವನಾ...ಸುಖಕೇ ಸಾಧನಾ.....
ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ..
ಸುಖಸಂಸಾರಕೆ ಎಂದೂ ಸತಿಯೇ ಕಾರಣ
-------------------------------------------------------------------------------------------------------------------------

ದೇವರಗುಡಿ (1975) - ಮಾಮರವೆಲ್ಲೋ ಕೋಗಿಲೆಎಲ್ಲೋ.....
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಹೇ.. ಹೇ.. ಆಹಾಹಾ...
ಮಾಮರವೆಲ್ಲೋ .. ಆಹ್ಹ್ ..  ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ  ಎಲ್ಲಿಯದೋ ಈ ಅನುಬಂಧ..
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ  ಎಲ್ಲಿಯದೋ ಈ ಅನುಬಂಧ..

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ...
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ  ಎಲ್ಲಿಯದೋ ಈ ಅನುಬಂಧ..

ಹುಣ್ಣಿಮೆಯಲ್ಲಿ ತಣ್ಣನೆ ಗಾಳೀ
ಬೀಸಲು ನಿನ್ನಾ ನೆನಪಾಗುವುದು
ದಿನರಾತ್ರಿಯಲೀ ಏಕಾಂತದಲೀ
ಏಕೋ ಏನೋ ನೋವಾಗುವುದು
ಬಯಕೆಯು ತುಂಬಿ ಆಸೆಯ ದುಂಬಿ
ಎದೆಯನು ಕೊರೆದೂ ಕಾಡುವುದೇನೋ...
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ..
ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ..
------------------------------------------------------------------------------------------------------------------------

ದೇವರ ಗುಡಿ (1975) - ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ....
ಸಾಹಿತ್ಯ : ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ : ವಾಣಿ ಜಯರಾಂ


ಗಾಡಾಂಧಕಾರದ ಇರುಳಲ್ಲಿ ಕಾರ್ಮೋಡ ನೀರಾದ ವೇಳೆಯಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ ಮಾವನ ಕಾವಲು ಬಾಗಿಲಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ

ತಾಯ ಸೆರೆಯ ಬಿಡಿಸಲೆಂದೇ ಕೃಷ್ಣನಂತೆ ಬಂದೆಯೇನು?
ಗೀತೆಯನ್ನು ಬೋಧಿಸಲೆಂದೇ ಭುವಿಗೆ ಇಳಿದು ಬಂದೆಯೇನು?
ನೀನು ಬಂದ ಗಳಿಗೆಯಿಂದ ಶೋಕವೆಲ್ಲ ತೀರಲಿ
ಶಾಂತಿ ಸೌಖ್ಯ ತುಂಬಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ ಮಾವನ ಕಾವಲು ಬಾಗಿಲಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ

ನೂರು ಒಗಟು ಬಿಡಿಸಿ ನಗುವ ಜಾಣೆ ನಿನ್ನ ತಾಯಿ ಅಂದು
ಬಾಳಿನೊಗಟ ಒಡೆವ ದಾರಿ ಕಾಣದಾಗಿ ಅಳುವಳಿಂದು
ನೂರು ನೋವ ನೀಗಿ ನಲಿವ ದಾರಿ ಬೇಗ ತೋರಿಸು
ತಾಯ ಆಸೆ ತೀರಿಸು
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ ಮಾವನ ಕಾವಲು ಬಾಗಿಲಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ ದೇವಕಿ ಇರುವಾಗ ಸೆರೆಯಲ್ಲಿ
ಆಹಾಹಾಹಾ ಹೂಂಹೂಂಹೂಂ  
---------------------------------------------------------------------------------------------------------------------

ದೇವರಗುಡಿ -(1975) - ಕಣ್ಣು ಕಣ್ಣು  ಒಂದಾಯಿತು 
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕೀ,  ಎಸ್.ಪಿ.ಬಾಲಸುಬ್ರಮಣ್ಯಂ

ಗಂಡು : ಹಹಹಹಹ.... ( ಒಹೋ.).. ಒಹೋ...
ಹೆಣ್ಣು : ಕಣ್ಣು ಕಣ್ಣು ಒಂದಾಯಿತು,
ಗಂಡು : ನನ್ನ ನಿನ್ನ ಮನ ಸೇರಿತು
ಹೆಣ್ಣು : ದಿನ ರಾತ್ರಿಯೂ ಕಂಡ ಕನಸು ನನಸಾಯಿತು..
          ಕಣ್ಣು ಕಣ್ಣು
ಗಂಡು : ಕಣ್ಣು ಕಣ್ಣು      ಹೆಣ್ಣು : ಒಂದಾಯಿತು,
ಗಂಡು : ನನ್ನ ನಿನ್ನ       ಹೆಣ್ಣು : ನನ್ನ ನಿನ್ನ
ಗಂಡು : ಮನ ಸೇರಿತು

ಹೆಣ್ಣು : ಏನೇ ಬರಲಿ ಚೆನ್ನ ಬಿಡಲಾರೆ ಎಂದು ನಿನ್ನ
          ನಿಜ ಹೇಳಲೇನು ನೀನೆ ನನ್ನ ಪ್ರಾಣ
ಗಂಡು : ಯಾರು ಮುನಿದರೇನು ಈ ಊರೇ ಸಿಡಿದರೇನು
           ನಂಬಿರುವ ಹೆಣ್ಣೇ ಕೈ ಬಿಡೇ ನಾನು
ಹೆಣ್ಣು : ಮಾತಿನ ಜೇನು ಸವಿದೇನು ನಾನು
ಗಂಡು : ಒಲವಿಗೆ ಮಣಿದು ಸೋತೆನು ನಾನು
            ನಿನ್ನೊಡಲಿರಲು ಹೃದಯ ತುಂಬಿತು...
           ಕಣ್ಣು ಕಣ್ಣು ಒಂದಾಯಿತು,
ಹೆಣ್ಣು : ನನ್ನ ನಿನ್ನ ಮನ ಸೇರಿತು
ಗಂಡು : ದಿನ ರಾತ್ರಿಯೂ ಕಂಡ ಕನಸು ನನಸಾಯಿತು..
           ಕಣ್ಣು ಕಣ್ಣು        ಹೆಣ್ಣು : ಕಣ್ಣು ಕಣ್ಣು
ಇಬ್ಬರು : ಒಂದಾಯಿತು,
ಹೆಣ್ಣು : ನನ್ನ ನಿನ್ನ      ಗಂಡು : ನನ್ನ ನಿನ್ನ
ಇಬ್ಬರು : ಮನ ಸೇರಿತು

ಗಂಡು : ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ
           ಕಾಣುವ ಕಣ್ಣಿಗೆ ಏನೋ ಆನಂದ
ಹೆಣ್ಣು : ನೂರು ಮಾತು ಏಕೆ ನೂರಾರು ಆಸೆ ಏಕೆ
          ನಿನ್ನೊಡನಿರುವಾಗ ಇನ್ನೂ ಬೇರೆ ಬೇಕೇ..
ಗಂಡು : ನಿನ್ನೀ ನುಡಿಗೆ.. ನಾ ಮೈಮರೆತೆ..
ಹೆಣ್ಣು : ಎಲ್ಲಾ ಮರೆತು... ನಿನ್ನಲಿ ಬೆರೆತೆ
         ನೀನೊಲಿದರಲು ಬಾಳು ಬೆಳಗಿತು ...
         ಕಣ್ಣು ಕಣ್ಣು ಒಂದಾಯಿತು,
ಗಂಡು : ನನ್ನ ನಿನ್ನ ಮನ ಸೇರಿತು
ಇಬ್ಬರು : ದಿನ ರಾತ್ರಿಯೂ ಕಂಡ ಕನಸು ನನಸಾಯಿತು..
ಹೆಣ್ಣು : ಆಹಾ ಆಹಾ (ಆಹಾ ಆಹಾ ) ಓಹೋಒಹೋ (ಓಹೋಒಹೋ )
          ಲಲಲ (ಲಲಲ ) ಆಹಾಹಾ (ಹೇಹೇಹೇ ) ಓಹೋಹೋ (ಹೂಂಹೂಂಹೂಂ)
-----------------------------------------------------------------------------------------------------------------------

ದೇವರಗುಡಿ -(1975) - ನಾ ಬಯಸದ ಭಾಗ್ಯ 
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ರಾಜನ್-ನಾಗೇಂದ್ರ ಗಾಯನ : ಪಿ.ಬಿ.ಎಸ್,  ಪಿ.ಸುಶೀಲಾ 

ಹೆಣ್ಣು : ನಾ ಬಯಸದ ಭಾಗ್ಯ ನನದಾಯಿತು... ಇಂದು ನನದಾಯಿತು
          ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ...
ಗಂಡು : ನಾ ಬಯಸದ ಭಾಗ್ಯ ನನದಾಯಿತು... ಇಂದು ನನದಾಯಿತು
          ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ...
          ನಾ ಬಯಸದ ಭಾಗ್ಯ ನನದಾಯಿತು... ಇಂದು ನನದಾಯಿತು

ಹೆಣ್ಣು : ಕಂಗಳಲಿ ಪ್ರೇಮ ತುಂಬಿತು, ಅಧರದಲಿ ಆಸೆ ಮೂಡಿತು
          ನಿನ್ನೊಲವಿಗೆ ತನುವು ಹೂವಾಯಿತು
ಗಂಡು : ಸ್ನೇಹದಲಿ ನೀನು ಸೇರಲು, ಬಾಹುಗಳ ಬಂದಿಯಾಗಲು
            ಆ ಸ್ವರ್ಗದ ಸುಖವೇ ನನ್ನದಾಯಿತು...
ಹೆಣ್ಣು : ನೀನೊಲಿದು ತಂದ ಆನಂದದಿಂದ,  ಬರಿದಾದ ಬಾಳು ಬೆಳಕಾಯಿತು
          ನಾ ಬಯಸದ ಭಾಗ್ಯ ನನದಾಯಿತು... ಇಂದು ನನದಾಯಿತು

ಹೆಣ್ಣು : ಆಆಆ ..( ಅಹಹಹ)... ಆಆಆ (ಓಹೋಹೋ... ಆಹಾ ) ಆಹಾ (ಒಹೋ) ಆಹಾ 
ಗಂಡು : ಮಲ್ಲಿಗೆಯ ಹೂವ ಹಾಸಿಗೆ, ಸ್ವಾಗತದ ಗೀತೆ ಹಾಡಿದೆ
           ಹೊಸ ಅನುಭವ ಇಂದು ಹಿತವಾಗಿದೆ..
ಹೆಣ್ಣು : ಹಾಲಿನಲಿ ಜೇನು ಸೇರಿದೆ, ಅಮೃತವೇ ಬಾಳಾ ತುಂಬಿದೆ..
          ನನ್ನಾ ಆಸೆಯ ನಡಿಗೆ ಮನ ನಾಚಿದೇ..
ಗಂಡು : ಏಕಾಂತದಲ್ಲಿ ನಾನಿರಲು ಇಲ್ಲಿ ಆ ಚಿಂತೆ ನಿನಗೇಕೆ..
            ನಾ ಬಯಸದ ಭಾಗ್ಯ ನನದಾಯಿತು... ಇಂದು ನನದಾಯಿತು
ಇಬ್ಬರು : ಶುಭ ಯೋಗವೊ ಅನುರಾಗವೋ ನನ್ನ ನಿನ್ನ ಮಿಲನಾ...
             ನಾ ಬಯಸದ ಭಾಗ್ಯ ನನದಾಯಿತು... ಇಂದು ನನದಾಯಿತು
            ಇಂದು ನನದಾಯಿತು
--------------------------------------------------------------------------------------------------------------------------

No comments:

Post a Comment