103. ಪ್ರೇಮಪರ್ವ (1983)


ಪ್ರೇಮ ಪರ್ವ ಚಿತ್ರದ ಹಾಡುಗಳು 
  1. ಬಾ ಮೆಲ್ಲಗೆ ಮನದಾ ಮಲ್ಲಿಗೇ 
  2. ಏನೇ ಸರಸವ್ವ ಹಳ್ಳಿ ಬಿಟ್ಟು 
  3. ಅನುರಾಗದ ಆರಾಧನೆ 
  4. ಆಲಿಸಿರಿ ಸೋದರರೇ 
ಪ್ರೇಮಪರ್ವ (1983)
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ

ಗಂಡು : ಬಾ ಮೆಲ್ಲಗೆ ಮನದಾ ಮಲ್ಲಿಗೆ
            ಬಾ ಮೆಲ್ಲಗೆ ಮನದಾ ಮಲ್ಲಿಗೆ ಒಲವನು ತೋರಿ ಪರಿಮಳ ಬೀರಿ
            ರಾಗದ ಹೂಮಳೆ ಸುರಿಸುತ
            ಬಾ ಮೆಲ್ಲಗೆ ಮನದಾ ಮಲ್ಲಿಗೆ ಬಾ ಮೆಲ್ಲಗೆ ಮನದಾ ಮಲ್ಲಿಗೆ
ಹೆಣ್ಣು : ಆಆಆ... ಆಆಆ... ಆಆಆ....

ಗಂಡು : ಹೊಂಬಿಸಿಲು ಕಂಡಂತೆ, ಹಿತವಾಗಿ ನೀ ನಗಲು
           ಹೊಂಬಿಸಿಲು ಕಂಡಂತೆ, ಹಿತವಾಗಿ ನೀ ನಗಲು
           ಸಿರಿಗಂಗೆ ಹರಿದಂತೆ, ನೀ ಮಾತನಾಡಲು...
           ತಂಗಾಳಿ ಸುಳಿದಂತೆ, ನನ ಬಳಿಗೆ ನೀ ಬರಲು
           ಮಳೆಬಿಲ್ಲು ಹೊಳೆವಂತೆ, ನಿನ್ನ ರೂಪ ನೋಡಲು
          ಪ್ರೀತಿಯ ಪಯಣದಲಿ, ಸಂಗಾತಿ ಆಗಲು
          ಬಾ ಮೆಲ್ಲಗೆ ಮನದಾ ಮಲ್ಲಿಗೆ ಬಾ ಬಾ ಮೆಲ್ಲಗೆ ಮನದಾ ಮಲ್ಲಿಗೆ
          ಒಲವನು ತೋರಿ ಪರಿಮಳ ಬೀರಿ ರಾಗದ ಹೂಮಳೆ ಸುರಿಸುತ... ಆಆಆ..
         ಬಾ ಮೆಲ್ಲಗೆ ಮನದಾ ಮಲ್ಲಿಗೆ ಬಾ ಮೆಲ್ಲಗೆ ಮನದಾ ಮಲ್ಲಿಗೆ

ಗಂಡು : ಕಾರ್ಯದಲಿ ಎಂದೆಂದು, ಚರಣದಾಸಿಯಾಗಿ
          ಕಾರ್ಯದಲಿ ಎಂದೆಂದು, ಚರಣದಾಸಿಯಾಗಿ
         ಚಾತುರ್ಯ ನೀತಿಯಲಿ, ಮನೆಯ ಮಂತ್ರಿಯಾಗಿ
ಹೆಣ್ಣು : ಆಆಆ... ಆಆಆ... ಆಆಆ....
ಗಂಡು : ಸಂಗದಲಿ ಸತಿಯಾಗಿ, ಸುಖ ನೀಡೋ ರತಿಯಾಗಿ
            ವಾತ್ಸಲ್ಯ ಮಮತೆಯಲಿ, ಹಾರೈಸೋ ತಾಯಾಗಿ
            ಜೀವನ ದೇಗುಲದ, ಕಾಮಧೇನುವಾಗಿ
           ಬಾ ಮೆಲ್ಲಗೆ ಮನದಾ ಮಲ್ಲಿಗೆ ಬಾ ಮೆಲ್ಲಗೆ ಮನದಾ ಮಲ್ಲಿಗೆ
           ಒಲವನು ತೋರಿ ಪರಿಮಳ ಬೀರಿ ರಾಗದ ಹೂಮಳೆ ಸುರಿಸುತ ... ಆಆಆ..
          ಬಾ ಮೆಲ್ಲಗೆ ಮನದಾ ಮಲ್ಲಿಗೆ ಬಾ ಮೆಲ್ಲಗೆ ಮನದಾ ಮಲ್ಲಿಗೆ
----------------------------------------------------------------------------------------------------------------------

ಪ್ರೇಮಪರ್ವ (1983)
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ ಮತ್ತು ಕೋರಸ್


ಹೇ... ಹ್ಯಾ.. ಆಹಾ ಆಹಾ ..
ಏನೇ ಸರಸವ್ವ ಹಳ್ಳಿ ಬಿಟ್ಟು ಬೆಂಗಳೂರಿಗೆ ಯಾಕೆ ಬಂದ್ಯವ್ವ
ತೊಪ್ಪೆ ಗಿಪ್ಪೆ ತಟ್ಟೋದ ಬಿಟ್ಟು ಕಾಲೇಜನಲ್ಲಿ....ಓದೋ ಆಸೆ ನಿಂಗ್ಯಾಕವ್ವ
(ಅರೇ..  ಓದೋ ಆಸೆ ನಿಂಗ್ಯಾಕವ್ವ)

ಮೌನ ಗೌರಿ ರೀತಿ ಸಾಕು  ಡಿಸ್ಕೊ ಡ್ಯಾನ್ಸ್ ಮಾಡಬೇಕು
ನಾಚಿಕೆ ನೀಗುತ್ತಾ.. . ಅಂಜಿಕೆ ದೂಡುತಾ... ಸಂಗವ ಸೇರು ಬಾ...
ತೇಪೆ ಲಂಗ ತೆಗೆದ ಹಾಕು ಅರೇ..  ಪ್ಯಾಂಟು ಶರ್ಟ್ ಹಾಕಬೇಕು
ಲಿಪ್ ಸ್ಟಿಕ್ ತಿಡುತಾ.. ತಾ.. ತಾ..   ಗಾಗುಲ್ಸ್ ಹಾಕುತಾ..ತಾ... ತಾ...
ಸ್ಟೈಲೀಷ್ಟು ಆಗು ಬಾ (ಸ್ಟೈಲೀಷ್ಟು ಆಗು ಬಾ)
ಏನೇ ಸರಸವ್ವ ಹಳ್ಳಿ ಬಿಟ್ಟು ಬೆಂಗಳೂರಿಗೆ ಯಾಕೆ ಬಂದ್ಯವ್ವ
ತೊಪ್ಪೆ ಗಿಪ್ಪೆ ತಟ್ಟೋದ ಬಿಟ್ಟು ಕಾಲೇಜನಲ್ಲಿ..ಓಯ್  ಓಯ್  ..
ಓದೋ ಆಸೆ ನಿಂಗ್ಯಾಕವ್ವ
(ಅರೇ..  ಓದೋ ಆಸೆ ನಿಂಗ್ಯಾಕವ್ವ)

ಹೊಯ್. ಹೊಯ್..  ಹೊಯ್.. ಹೊಯ್..  ದಿನತನ್ಕ್ ದಿನತನ್ಕ್ ದಿನತನ್ಕ್ ದಿನತನ್ಕ್ 
ತಂಗಕು ತಂಗಕು ತಂಗಕು ತಂಗಕು ತಂಗಕು  ಹೇಹೇಹೇ ತರಡತಡಕ್ ತಡತಡಕ್
ಪಿಳ್ಳೆ ಕರ್ನಲ್ಲಿ ಏನೇ ಉಸರಬಳ್ಳಿ ಮೇಕೆ ಮೇಯಸ್ತೀಯಾ ಎಮ್ಮೆ ಕಾಯ್ತಿಯಾ 
ಮೇಕೆ ಮೇಯಸ್ತೀಯಾ ಎಮ್ಮೆ ಕಾಯ್ತಿಯಾ ಭತ್ತ ಕುಟ್ಟತ್ತಿಯಾ ರಾಗಿ  ರೊಟ್ಟಿ ತಟ್ಟತ್ತಿಯಾ 
ಹಿಟ್ಟಿನ ಮಡಿಕೆ ಕೆರೀತಿಯಾ..ಆ.. ಆ.. .  ಹೇಳದಂಗೆ  ಕೇಳತಿಯಾ ಒಂದು ಕೆಲಸ ಮಾಡ್ತಿಯಾ 
ಮದುವೆ ಸೋಭ್ನ್ ಆಗಿ ಗಂಡನ ಜೊತೆ ಸಾಗಿ ಮಕ್ಳು ಮರಿ ಹೆತ್ತು ಸಂಸಾರ ಭಾರ ಹೊತ್ತು 
ಮುದುಕಿ ಆಗ್ತೀಯಾ...
(ಗೂನು ಬೆನ್ನು ಬೆಚ್ಚು ಬಾಯಿ ಮೆಳ್ಳಗಣ್ಣವ್ವ )
ಅರೇ..   ಏನೇ ಸರಸವ್ವ (ಹರೇ ರಾಮ್ ) ಹಳ್ಳಿ ಬಿಟ್ಟು ಬೆಂಗಳೂರಿಗೆ ಯಾಕೆ ಬಂದ್ಯವ್ವ (ಹರೇ ಕೃಷ್ಣ )
ತೊಪ್ಪೆ ಗಿಪ್ಪೆ ತಟ್ಟೋದ ಬಿಟ್ಟು ಕಾಲೇಜನಲ್ಲಿ....ಹರೇ ರಾಮ ಹರೇ ಕೃಷ್ಣ  ಹರೇ ಓದೋ ಆಸೆ ನಿಂಗ್ಯಾಕವ್ವ
(ಅರೇ..  ಹರೇ ರಾಮ ಹರೇ ಕೃಷ್ಣ  ಹರೇ ಹರೇ )

ತಾಮ್ ತಥಥೈ ಧೀಮ್  ತಥಥೈ ತಜನುತಾಮ್  ತಥಥೈ ತಥಥೈತಾಮ್   ತಧೀಮ್ ಥೈ ಥೈ
ನಿನ್ನ ರೂಪ ಬಲು ಅಂದ (ಹರೇ ರಾಮ ಹರೇ ರಾಮ ಹರೇ ರಾಮ ಹರೇ ಹರೇ )
ಹಿಪ್ಪಿ ಆದ್ರೇ ಇನ್ನೂ ಚಂದ (ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ )  
ಕಾವಿಯ ಧರಿಸಿಕೋ..  ಜಪಮಾಲೆಯ  ಹಿಡಿದಿಕೋ..  ಆಶ್ರಮ ಸೇರಿಕೋ .. 
ಬರಿಗಾಲ ನಡೆ ಸಾಕು ಹೊಸ ಪಾದರಕ್ಷೆ ಮೆಟ್ಟಬೇಕು 
ಅರೇ ..  ತಾಳವ ಹಾಕುತಾ...  ತಂತಿಯ ಮೀಟುತ್ತಾ...  ಭಜನೆ ಮಾಡು ಬಾ 
(ಹರೇ ರಾಮ ಹರೇ ಕೃಷ್ಣ  ಹರೇ ಹರೇ ಹರೇ)
ಏನೇ ಸರಸವ್ವ ಹಳ್ಳಿ ಬಿಟ್ಟು ಬೆಂಗಳೂರಿಗೆ ಯಾಕೆ ಬಂದ್ಯವ್ವ
ತೊಪ್ಪೆ ಗಿಪ್ಪೆ ತಟ್ಟೋದ ಬಿಟ್ಟು ಕಾಲೇಜನಲ್ಲಿ..ಹೇ ಹೇ ..ಓದೋ ಆಸೆ ನಿಂಗ್ಯಾಕವ್ವ
(ಅರೇ..  ಓದೋ ಆಸೆ ನಿಂಗ್ಯಾಕವ್ವ)
--------------------------------------------------------------------------------------------------------------------

ಪ್ರೇಮಪರ್ವ (೧೯೮೩)
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ


ಗಂಡು : ಅನುರಾಗದಾ ಆರಾದನೇ ಹೊಸಬಾಳಿನಾ ಅಭಿನಂದನೇ
            ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ
ಹೆಣ್ಣು : ನೋವೂ ನಲಿವಾಯ್ತೂ ಜೀವಾ ಹಗುರಾಯ್ತೂ ನಮ್ಮ ಪೂಜೆ ಫಲವಾಯ್ತು
ಗಂಡು : ಅನುರಾಗದಾ ಆರಾದನೇ ಹೊಸಬಾಳಿನಾ ಅಭಿನಂದನೇ
            ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ 

ಹೆಣ್ಣು : ನಾ ನಡೆವ ಪಥವೆಲ್ಲಾ ಬರಿ ಮುಳ್ಳೂ ಎಂದಿದ್ದೇ
          ಹೂವನೂ ಹಾಸಿದೇ
          ನನಗಾರೂ ಗತಿಯಿಲ್ಲಾ ಜೊತೆಯಿಲ್ಲಾ ಎಂದಿದ್ದೇ
          ಆಸರೇ ನೀಡಿದೇ..ಆ..
ಗಂಡು : ಒಲವೆಂಬಾ ಉಳಿಯಿಂದಾ ಕಲ್ಲನ್ನೂ ನೀ ಕಡೆದೇ
            ರೂಪವಾ ನೀಡಿದೇ
           ಕ್ಷಣವೆಂಬಾ ಉರಿಯಿಂದಾ ಬದುಕಲ್ಲೀ ಬೆಂದಿದ್ದೇ
           ತಾಳ್ಮೆಯಾ ಕಲಿಸಿದೇ..ಹೋ..ತಾಳ್ಮೆಯಾ ಕಲಿಸಿದೇ   ...
ಹೆಣ್ಣು : ಅನುರಾಗದಾ ಆರಾದನೇ ಹೊಸಬಾಳಿನಾ ಅಭಿನಂದನೇ
            ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ 

ಗಂಡು : ಹಣದಿಂದಾ ಮದವೇರೀ ಮೃಗವಾಗೀ ಮೆರೆದಿದ್ದೇ
           ಮನುಜನಾ ಮಾಡಿದೇ
           ದೇವರನೇ ಮರೆತಿದ್ದೇ ಗುರುವಾಗೀ ನೀ ಬಂದೇ
           ಭಕ್ತಿಯಾ ಕಲಿಸಿದೇ..ಆಹಾ..
ಹೆಣ್ಣು : ಮನದಾಸೇ ರಥವೇರೀ ಅನುಗಾಲಾ ಜೊತೆಯಲ್ಲೀ
          ನಲಿಯುತಾ ಸಾಗುವಾ
          ನಾವೆಂದೂ ಸುಖವಾಗೀ ಒಲವಿಂದಾ ಇರುವಂತೇ
          ರಾಯರಾ ಬೇಡುವಾ ಗುರುರಾಯರಾ ಬೇಡುವಾ  ...
ಗಂಡು : ಅನುರಾಗದಾ ಆರಾದನೇ ಹೊಸಬಾಳಿನಾ ಅಭಿನಂದನೇ
ಹೆಣ್ಣು : ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ
ಗಂಡು : ನೋವೂ ನಲಿವಾಯ್ತೂ ಜೀವಾ ಹಗುರಾಯ್ತೂ ನಮ್ಮ ಪೂಜೆ ಫಲವಾಯ್ತು
ಹೆಣ್ಣು : ಅನುರಾಗದಾ ಆರಾದನೇ
ಗಂಡು : ಹೊಸಬಾಳಿನಾ ಅಭಿನಂದನೇ
ಇಬ್ಬರು :  ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ 
--------------------------------------------------------------------------------------------------------------------------

ಪ್ರೇಮಪರ್ವ (೧೯೮೩)
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ದೊಡ್ಡರೆಂಗೇಗೌಡ, ಗಾಯನ: 
 ಎಸ್.ಜಾನಕಿ

ಆಆಆ... ಆಆಆ..
ಆಲಿಸಿರಿ ಸೋದರರೇ ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಹಿರಿಯರಿಗೇ ತಲೆ ಬಾಗಿ ಗುರುಗಳಿಗೆ ಶರಣಾಗಿ
ಕಲಿತ ವಿದ್ಯೆಯೇ ಭೂಷಣ ವಿನಯ ಕೀರ್ತಿಗೇ ಕಾರಣ... ಆಆಆ..
ಆಲಿಸಿರಿ ಸೋದರರೇ ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ

ಕೆಡುಕಿನ ವಿಷ ಬೀಜ ಮನಸಲಿ ನೇಡಬೇಡಿ
ನೆಟ್ಟರೂ ಮರವದು ಕಹಿ ಫಲವು ನೀಡುವುದೂ
ಹುಡುಕುತ ದುರಮಾರ್ಗ ಎಂದೆಂದೂ ಹಿಡಿಬೇಡಿ
ಹಿಡಿದರೇ ಬದುಕಲಿ ಕೆಡುಕೇ ಆಗುವುದೂ
ಬಲ್ಲವರ ಸವಿಮಾತು ಸುಳ್ಳಲ್ಲ ಮರೆಯದಿರಿ
ಆಲಿಸಿರಿ ಸೋದರರೇ ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ

ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆಯಾಗಿ 
ದೇಶದ ಪ್ರಗತಿಗೇ ಹಗಲಿರುಳೂ ನೇರವಾಗಿ 
ಹೆತ್ತವರ ಮನದಾಸೆ ಪೂರೈಸಿ ಅನುವಾಗಿ 
ಜನತೆಯ ಸೇವೆಗೇ ದುಡಿಯಲು ಮುಂದಾಗಿ 
ನಾಡಿನ ಘನ ಹಿರಿಮೆ ನಂಬಿಸದೇ ಬೆಳಗಿಸಿರಿ  
ಆಲಿಸಿರಿ ಸೋದರರೇ ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಹಿರಿಯರಿಗೇ ತಲೆ ಬಾಗಿ ಗುರುಗಳಿಗೆ ಶರಣಾಗಿ
ಕಲಿತ ವಿದ್ಯೆಯೇ ಭೂಷಣ ವಿನಯ ಕೀರ್ತಿಗೇ ಕಾರಣ... ಆಆಆ..
ಆಲಿಸಿರಿ ಸೋದರರೇ ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ....  
--------------------------------------------------------------------------------------------------------------------------

No comments:

Post a Comment