1353. ಊರ್ವಶಿ ಕಲ್ಯಾಣ (೧೯೯೩)

ಊರ್ವಶಿ ಕಲ್ಯಾಣ ಚಲನಚಿತ್ರದ ಹಾಡುಗಳು 
  1. ನಿನ್ನ ನೋಡೋಕೆ ಮುದ್ದು ಮಾಡೋಕೆ 
  2. ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
  3. ಚೈತ್ರದ ಕೋಗಿಲೆ ಕೂಗಿದ ಹಾಗೇ 
  4. ನಾನ್ ಯಾರ್ ಗೋತ್ತೇ ಗೆಳೆಯಾ 
  5. ಕಲಿಗಾಲ ಇದು ಕಲಿಗಾಲ 
ಊರ್ವಶಿ ಕಲ್ಯಾಣ (೧೯೯೩) - ನಿನ್ನ ನೋಡೋಕೆ ಮುದ್ದು ಮಾಡೋಕೆ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಕೋರಸ್ : ಹೇ.. ಯಾರೂ .. ಅದು ಯಾರೂ .. 
ಗಂಡು : ನಿನ್ನಾ ನೋಡೋಕೆ ಮುದ್ದು ಮಾಡೋಕೇ ಎದ್ದೂ ಬಂದೆವೂ.. ಮೇಲಕೆ ಎದ್ದು ಬಂದೆವೂ 
            ಅಂದ ನೋಡಿ ಸೋತೂ ಹೋದೆವು ಇನ್ನೂ ಬಿಟ್ಟು ಹೋಗಲಾರೆವೂ 
            ನಿನ್ನಾ ನೋಡೋಕೆ ಮುದ್ದು ಮಾಡೋಕೇ ಎದ್ದೂ ಬಂದೆವೂ.. ಮೇಲಕೆ ಎದ್ದು ಬಂದೆವೂ 
            ಅಂದ ನೋಡಿ ಸೋತೂ ಹೋದೆವು ಅಹ್ಹಹ್ಹಹ್ಹಾ ಇನ್ನೂ ಬಿಟ್ಟು ಹೋಗಲಾರೆವೂ ಓಹೋಹೋ 

ಗಂಡು : ನೀರಜಾಕ್ಷಿ ನಿನ್ನ ಕಣ್ಣ ಕಮಲದಂತಿದೇ... ಹ್ಹಾ.. ಅಹ್ಹಹ್ಹಾ.. ಹೇಹೇ ... ಅಹ್ಹಹ್ಹಹ್ಹಹ್ಹಹ್ಹಾ 
            ಸರಸಿಜಾಕ್ಷಿ ತುಟಿಗಳೆರಡೂ ಹವಳದಂತಿದೇ ... 
ಕೋರಸ್ : ನೀರಜಾಕ್ಷಿ ನಿನ್ನ ಕಣ್ಣ ಕಮಲದಂತಿದೇ... ಸರಸಿಜಾಕ್ಷಿ ತುಟಿಗಳೆರಡೂ ಹವಳದಂತಿದೇ ... 
ಗಂಡು : ನಗೆಯೂ ಮಲ್ಲಿಗೇ ಹೂವಿನಂತಿದೆ ನಿನ್ನಂತೇ ಯಾರನ್ನೂ ಕಾಣೇ ..  ಈ ಮಾತೂ ಸುಳ್ಳಲ್ಲ ಜಾಣೇ ... 
            ನಿನ್ನಾ ನೋಡೋಕೆ ಮುದ್ದು ಮಾಡೋಕೇ ಎದ್ದೂ ಬಂದೆವೂ.. ಮೇಲಕೆ ಎದ್ದು ಬಂದೆವೂ 
            ಅಂದ ನೋಡಿ ಸೋತೂ ಹೋದೆವು ಯಾಹ್ಹೂ ಯಾಹ್ಹೂ ಯಾಹ್ಹೂ ಇನ್ನೂ ಬಿಟ್ಟು ಹೋಗಲಾರೆವೂ 
ಕೋರಸ್ :  ನಿನ್ನಾ ನೋಡೋಕೆ ಮುದ್ದು ಮಾಡೋಕೇ ಎದ್ದೂ ಬಂದೆವೂ.. ಮೇಲಕೆ ಎದ್ದು ಬಂದೆವೂ 
                ಅಂದ ನೋಡಿ ಸೋತೂ ಹೋದೆವು (ಅಹ್ಹಹ್ಹಹ್ಹ)  ಇನ್ನೂ ಬಿಟ್ಟು ಹೋಗಲಾರೆವೂ 

ಕೋರಸ್ : ಪಪಪಪಪ.. ರರಾರತರರರ  ಹಹಹಹಹಹ ರರರರರ 
ಗಂಡು : ಎಷ್ಟು ಮಣ ಚಿನ್ನವನ್ನೂ ಹೇರಿಕೊಂಡರೇ ... 
            ಸೊಂಟ ಉಳುಕಿ ಆಗೇದೇನೂ ನಿನಗೇ ತೊಂದರೇ ..  
 ಕೋರಸ್ : ಎಷ್ಟು ಮಣ ಚಿನ್ನವನ್ನೂ ಹೇರಿಕೊಂಡರೇ ... (ಹೇಹೇಹೇ)  
               ಸೊಂಟ ಉಳುಕಿ ಆಗೇದೇನೂ ನಿನಗೇ ತೊಂದರೇ ..  
 ಗಂಡು : ಎತ್ತಿ ಕೊಳ್ಳಲೇ ಹೊನ್ನ ಕೋಗಿಲೇ ಊರೆಲ್ಲಾ ಮೆರವಣಿಗೆ ಮಾಡಲೇ.. ನಿನ್ನಾಸೇ ಪೂರೈಸಲೇ... 
            ನಿನ್ನಾ ನೋಡೋಕೆ ಮುದ್ದು ಮಾಡೋಕೇ ಎದ್ದೂ ಬಂದೆವೂ.. ಮೇಲಕೆ ಎದ್ದು ಬಂದೆವೂ 
            ಅಂದ ನೋಡಿ ಸೋತೂ ಹೋದೆವು ಅಹ್ಹಹಹ್ಹಹ್ಹಹಹಹ ಇನ್ನೂ ಬಿಟ್ಟು ಹೋಗಲಾರೆವೂ ಹೇಹೇಹೇಹೇಹ್ 
ಕೋರಸ್ :   ಅಂದ ನೋಡಿ ಸೋತೂ ಹೋದೆವು (ಅಹ್ಹಹ್ಹಹ್ಹ)  ಇನ್ನೂ ಬಿಟ್ಟು ಹೋಗಲಾರೆವೂ ಹೇಹೇಹೇಹೇ 
---------------------------------------------------------------------------------------------------

ಊರ್ವಶಿ ಕಲ್ಯಾಣ (೧೯೯೩) - ಮೆರವಣಿಗೆ ಹೊರಟಿದೆ ಮೆರವಣಿಗೆ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ನ್ಯಾಯವಾಗಿ ನಡೆದುಕೊಂಡರೇ ಮದುವೆಯ ಮೆರವಣಿಗೆ 
ಅನ್ಯಾಯದಿಂದಲಿ ಸಿಡಿದು ನಿಂತರೇ ಮಸಣದ ಮೆರವಣಿಗೆ 
ಹೇಯ್ ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ನ್ಯಾಯವಾಗಿ ನಡೆದುಕೊಂಡರೇ ಮದುವೆಯ ಮೆರವಣಿಗೆ.. ಗೇ .. 

ಹೆಣ್ಣಿಗಾದ ಅನ್ಯಾಯಕ್ಕೇ ರಾವಣ ತಲೆಗಳ ಕೊಟ್ಟ 
ಹೆಣ್ಣಿಗೆ ಮಾಡಿದ ಅಪಮಾನಕ್ಕೇ ದುರ್ಯೋಧನನೂ ಕೆಟ್ಟ.. 
ಹೆಣ್ಣಿಗಾದ ಅನ್ಯಾಯಕ್ಕೇ ರಾವಣ ತಲೆಗಳ ಕೊಟ್ಟ 
ಹೆಣ್ಣಿಗೆ ಮಾಡಿದ ಅಪಮಾನಕ್ಕೇ ದುರ್ಯೋಧನನೂ ಕೆಟ್ಟ.. 
ಹೆಣ್ಣಿಗೆ ಬಲೆಯ ಬೀಸಿದ ಕೀಚಕ ಪ್ರಾಣವನ್ನೇ ಬಿಟ್ಟಾ... 
ನಂಬಿಸಿ ಹೆಣ್ಣಿಗೆ ದ್ರೋಹ ಬಗೆದರೇ ಬಿಡನೂ ನಿನ್ನ ಹುಷಾರ್ 
ಹ್ಹಾ.. ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ನ್ಯಾಯವಾಗಿ ನಡೆದುಕೊಂಡರೇ ಮದುವೆಯ ಮೆರವಣಿಗೆ 
ಆಆಆ... ನ್ಯಾಯವಾಗಿ ನಡೆದುಕೊಂಡರೇ ಮದುವೆಯ ಮೆರವಣಿಗೆ.. ಗೇ .. ಗೇ .. ಗೇ .. 

ಹೆಣ್ಣು ಎಂದರೇ ಎಂದೂ ನಿನ್ನ ಭೋಗದ ವಸ್ತು ಅಲ್ಲಾ 
ತಿಂದು ದೂರಕೆ ಎಸೆಯುವಂಥಹ ಎಂಜಲ ಎಲೆಯೂ ಅಲ್ಲಾ 
ಹೆಣ್ಣು ಎಂದರೇ ಎಂದೂ ನಿನ್ನ ಭೋಗದ ವಸ್ತು ಅಲ್ಲಾ 
ತಿಂದು ದೂರಕೆ ಎಸೆಯುವಂಥಹ ಎಂಜಲ ಎಲೆಯೂ ಅಲ್ಲಾ 
ಹೆಣ್ಣು ನೊಂದರೇ ನಿನ್ನ ಬಾಳಲೀ ಶಾಂತಿ ಸುಖವೂ ಇಲ್ಲಾ 
ಅವಳ ಕಂಬನಿ ಬೆಂಕಿ ಜ್ವಾಲೆಯೂ ಸುಡದೇ ಬಿಡುವುದಿಲ್ಲಾ 
ಹ್ಹಾ.. ಹ್ಹಾ ನಡೀರಿ..  
ಮೆರವಣಿಗೆ ಮೆರವಣಿಗೆ ನಡೆಯಲೀ ಮೆರವಣಿಗೆ 
ಮೆರವಣಿಗೆ ಮೆರವಣಿಗೆ ನಡೆಯಲೀ ಮೆರವಣಿಗೆ 
ಅತ್ತೆಯಮ್ಮನ ಮಗನ ಸೊಸೆಯ ಮದುವೆಯ ಮೆರವಣಿಗೆ 
ಮಂಗಳ ವಾದ್ಯದ ಸಡಗರದಿಂದ ನಡೆಯಲೀ ಮೆರವಣಿಗೆ
ಆಹ್ಹಾ... ಅಹ್ಹಹ್ಹಾ.. ಹೇಹೇಹೇ ... .ಅಹ್ಹಹ್ಹಾ.. ಅಹ್ಹಹ್ಹಾ .. ಅಹ್ಹಹ್ಹಾ 
ಪೀ ಪೀಪೀಪ್ಪಿ ..  ಪೀ ಪೀಪೀಪ್ಪಿ ..  ಡೂಮ್ ಡೂ ಡೂಮ್ ..
ಪೀ ಪೀಪೀಪ್ಪಿ ..  ಪೀ ಪೀಪೀಪ್ಪಿ ..  ಡೂಮ್ ಡೂ ಡೂಮ್ ..ಡೂಮ್ ಡೂ ಡೂಮ್ ..
--------------------------------------------------------------------------------------------------

ಊರ್ವಶಿ ಕಲ್ಯಾಣ (೧೯೯೩) - ಚೈತ್ರದ ಕೋಗಿಲೆ ಕೂಗಿದ ಹಾಗೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ  

ಹೆಣ್ಣು : ಆಯ್ ಲವ್ ಯೂ ... ಆಯ್ ಲವ್ ಯೂ ... 
          ಚೈತ್ರದ ಕೋಗಿಲೆ ಕೂಗಿದ ಹಾಗೇ ಇಂಪಾಗಿ ಹಾಡಿದೇ...  
          ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಬೇಡಿದೆ 
          ಆಯ್ ಲವ್ ಯೂ ... ಆಯ್ ಲವ್ ಯೂ ...    
          ಆಯ್ ಲವ್ ಯೂ ... ಆಯ್ ಲವ್ ಯೂ ... 
          ಚೈತ್ರದ ಕೋಗಿಲೆ ಕೂಗಿದ ಹಾಗೇ ಇಂಪಾಗಿ ಹಾಡಿದೇ... 
          ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೇ ... 
ಕೋರಸ್ : ಲಲಲ ಲಾಲಾಲ ಲಲಲ ಲಾಲಾಲ ಲಲಲ ಲಾಲಾಲ 

ಹೆಣ್ಣು : ಎಂಥಾ ಅನಂದ ನಲ್ಲಾ ನಿನ್ನಿಂದಾ ಈ ಬಾಳು ಸಿಹಿಯಾಗಿದೇ .. 
          ಎಂಥಾ ಅನಂದ ನಲ್ಲಾ ನಿನ್ನಿಂದಾ ಈ ಬಾಳು ಸಿಹಿಯಾಗಿದೇ .. 
          ಬಾನಿಗೇ ಹಕ್ಕಿ ಹಾರುವ ಹಾಗೇ ಕನಸೂ ತೇಲಾಡಿದೇ .. 
          ಬಿಡೇನು ನಿನ್ನನ್ನೂ ಬಂಧಿಸೂ ನನ್ನನ್ನೂ ಖಾಲಿ ಸೆರೆಯಾಗುವೇ ... 
          ಬಳ್ಳಿಯೂ ಮರವ ಹಬ್ಬಿದ ಹಾಗೇ ಸಂಗಾತಿ ಆಗುವೇ .. 
          ನಿನ್ನಾಟದ ಉಲ್ಲಾಸವ ಎಲ್ಲಾ ತುಂಬುವೇ .. 
          ಚೈತ್ರದ ಕೋಗಿಲೆ ಕೂಗಿದ ಹಾಗೇ ಇಂಪಾಗಿ ಹಾಡಿದೇ... 
          ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೇ ... 
ಗಂಡು : ಆಯ್ ಲವ್ ಯೂ ... ಆಯ್ ಲವ್ ಯೂ ...    
            ಆಯ್ ಲವ್ ಯೂ ... ಆಯ್ ಲವ್ ಯೂ ... 
          ಚೈತ್ರದ ಕೋಗಿಲೆ ಕೂಗಿದ ಹಾಗೇ ಇಂಪಾಗಿ ಹಾಡಿದೇ... 
          ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೇ ... 

ಗಂಡು : ನಿನ್ನಾ ಆಟಕ್ಕೇ .. ನಿನ್ನಾ ನೋಟಕ್ಕೇ ಓ ನಲ್ಲೇ ಬೆರಗಾದೇನೂ..  
            ನಿನ್ನಾ ಆಟಕ್ಕೇ .. ನಿನ್ನಾ ನೋಟಕ್ಕೇ ಓ ನಲ್ಲೇ ಬೆರಗಾದೇನೂ..  
            ಮುತ್ತಿನ ಹಾರ ಹಾಕುವಾ ಆಸೇ ನನ್ನಾಣೆ ಸುಳ್ಳಾಡೇನೂ 
            ಮುಗಿಲ ಮೇಲೇರಿ ಮಳೆಯ ಬಿಲ್ಲಲ್ಲಿ ಜೊತೆಯಾಗಿ ಜಾರೋಣವೇ.. 
            ಕಾಮನ ಬಿಲ್ಲ ರಂಗನ್ನೂ ತಂದೂ ಹೊಸ ಹಬ್ಬ ಮಾಡೋಣವೇ.. 
            ನಿನ್ನಾಸೆಯೂ .. ಇನ್ನೇನಿದೇ.. ಹೇಳೂ ಊರ್ವಶಿಯೇ.. 
ಹೆಣ್ಣು : ಚೈತ್ರದ ಕೋಗಿಲೆ ಕೂಗಿದ ಹಾಗೇ ಇಂಪಾಗಿ ಹಾಡಿದೇ... 
ಗಂಡು : ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಬೇಡಿದೆ 
ಹೆಣ್ಣು : ಆಯ್ ಲವ್ ಯೂ ... ಆಯ್ ಲವ್ ಯೂ ...    
ಗಂಡು : ಆಯ್ ಲವ್ ಯೂ ... ಆಯ್ ಲವ್ ಯೂ ... 
ಇಬ್ಬರು :  ಆಯ್ ಲವ್ ಯೂ ... ಆಯ್ ಲವ್ ಯೂ ... 
               ಆಯ್ ಲವ್ ಯೂ ... ಆಯ್ ಲವ್ ಯೂ ... 
--------------------------------------------------------------------------------------------------

ಊರ್ವಶಿ ಕಲ್ಯಾಣ (೧೯೯೩) - ನಾನ್ ಯಾರ್ ಗೋತ್ತೇ ಗೆಳೆಯಾ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ಅತ್ತೆಯ ಅರೆಮನೆ ಇದ್ದರೇನೂ  ಅಹ್ಹ.. ಅಹ್ಹ.. ಅಹ್ಹ.. ಅಹಹಹ.. 
ಲಕ್ಷ ಲಕ್ಷವ ಇದ್ದರೇನೂ.. ಅರೆರೇ .ಅರೇ  
ಅತ್ತೆಯ ಅರೆಮನೆ ಇದ್ದರೇನೂ ಲಕ್ಷ ಲಕ್ಷವ ಇದ್ದರೇನೂ.. 
ಉದ್ಯೋಗಂ ಪುರಷ ಲಕ್ಷಣಂ ಅಲ್ವೇನೋ ಅಪ್ಪಾ... ಹ್ಹಾ... 
ಕಡಲೆಕಾಯ್... ಗರಂ ಕಡಲೆಕಾಯ್ 
ಕಡಲೆಕಾಯ್... ಗರಂ ಗರಂ ಕಡಲೆಕಾಯ್ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 

ಅತ್ತೆಗೆ ತಕ್ಕ ಅಳಿಯನಾದರೂ ಸಿಂಪಲ್ಲಾಗಿ ಇರುವೇ .. 
ಹತ್ತು ಕಾರಿನ ಒಡೆಯನಾದರೂ ಗಾಡಿಯ ತಳ್ಳುತ್ತಲಿರುವೇ .. 
ಅತ್ತೆಗೆ ತಕ್ಕ ಅಳಿಯನಾದರೂ ಸಿಂಪಲ್ಲಾಗಿ ಇರುವೇ .. ಹೌದೂ .. 
ಹತ್ತು ಕಾರಿನ ಒಡೆಯನಾದರೂ ಗಾಡಿಯ ತಳ್ಳುತ್ತಲಿರುವೇ .. 
ಮುತ್ತು ರತ್ನದ ರಾಶಿಯಿದ್ದರೂ... ಆಆಆ... ಆಆಆ.. ಆಆಆ... ಭಲೇ ಭಲೇ ಭಲೇ ಭಲೇ 
ಮುತ್ತು ರತ್ನದ ರಾಶಿಯಿದ್ದರೂ ಕಡ್ಲೇಕಾಯಿ ವ್ಯಾಪಾರ ಮಾಡುವೇ .. 
ಕಡಲೆಕಾಯ್... ತಾಜ್ ಮಾಲ್ ಕಡಲೆಕಾಯ್... ಗರಂ ಗರಂ ಕಡಲೆಕಾಯ್ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ ಅಳಿಯಾ .. ಅಳಿಯಾ .. 

ಊರ್ವಶಿ ನನ್ನ ಇಷ್ಟಪಟ್ಟರೇ .. ಏನು ಮಾಡದೇ ನಾನೂ .. ಹೂಂ .. 
ತಾಳಿ ಕಟ್ಟಿದ್ದೇ ಈಗ ಜೀವನ ಆಯಿತು ಹಾಲು ಜೇನೂ .. 
ಊರ್ವಶಿ ನನ್ನ ಇಷ್ಟಪಟ್ಟರೇ .. ಏನು ಮಾಡಲೀ ನಾನೂ 
ತಾಳಿ ಕಟ್ಟಿದ್ದೇ ಈಗ ಜೀವನ ಆಯಿತು ಹಾಲು ಜೇನೂ .. 
ನಾನೂ ಬಯಸದೇ ಲಕ್ಕೂ ಬಂದಿತೂ ... ಕಮಾನ್ ಲಕ್ಕಡೂ... ಓಓಓ ಓಓ ಓಓ ಓಓಓ   
ನಾನೂ ಬಯಸದೇ ಲಕ್ಕೂ ಬಂದಿತೂ ಹಿಡಿವರಾರೂ ಇನ್ನೂ ನನ್ನಾ... 
ಕಡಲೆಕಾಯ್... ಬಡವರ ಬಾದಾಮಿ ಕಡಲೆಕಾಯ್... 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ಅತ್ತೆಯ ಅರೆಮನೆ ಇದ್ದರೇನೂ  ಅಹ್ಹ.. ಅಹ್ಹ.. ಅಹ್ಹ.. ಅಹಹಹ.. 
ಲಕ್ಷ ಲಕ್ಷವ ಇದ್ದರೇನೂ.. ಅರೆರೇ .ಅರೇ  
ಅತ್ತೆಯ ಅರೆಮನೆ ಇದ್ದರೇನೂ ಲಕ್ಷ ಲಕ್ಷವ ಇದ್ದರೇನೂ.. 
ಉದ್ಯೋಗಂ ಪುರಷ ಲಕ್ಷಣಂ ಅಲ್ವೇನೋ ಅಪ್ಪಾ... ಹ್ಹಾ... 
ಕಡಲೆಕಾಯ್... ಗರಂ ಗರಂ ಕಡಲೆಕಾಯ್ 
ಕಡಲೆಕಾಯ್... ಗರಂ ಗರಂ ಕಡಲೆಕಾಯ್ ಅಹ್ಹಹ್ಹಹ್ಹಹಹ್ಹಹ್ಹ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರ್ ಗೊತ್ತೇ ಗೆಳೆಯಾ ಅಕ್ಕಯ್ಯಮ್ಮನ ಅಳಿಯಾ 
(ಅಕ್ಕಯ್ಯಮ್ಮನ ಅಳಿಯಾ ಅಕ್ಕಯ್ಯಮ್ಮನ ಅಳಿಯಾ (ಅಹ್ಹ) 
ಅಕ್ಕಯ್ಯಮ್ಮನ ಅಳಿಯಾ ಅಕ್ಕಯ್ಯಮ್ಮನ ಅಳಿಯಾ (ಹರಿ ಓಂ.. )
---------------------------------------------------------------------------------------------------

ಊರ್ವಶಿ ಕಲ್ಯಾಣ (೧೯೯೩) - ಕಲಿಗಾಲ ಇದು ಕಲಿಗಾಲ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಕಲಿಗಾಲ ಇದು ಕಲಿಗಾಲ..  
ಕಲಿಗಾಲ ಇದು ಕಲಿಗಾಲ ಸ್ವರ್ಗ ನರಕ ಬೇರೆ ಇಲ್ಲಾ ಬದುಕಿರುವಾಗಲೇ ನೋಡುವೇ ಎಲ್ಲಾ 
ಸತ್ತ ಮೇಲೆ ಏನಾಗುವೆಯೋ ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ 
ಕಲಿಗಾಲ ಇದು ಕಲಿಗಾಲ..  ಕಲಿಗಾಲ.... 

ದೋಸೆಯ ಹೊದುಕೆ ಹಾಕಿದ ಹಾಗೇ ಸುಡುವುದು ನಿನ್ನ ಭಾವದ ಬೇಗೇ 
ಹೆಣ್ಣಿನ ಹಿಂದೆ ತಿವಿಯಲು ಬರುವುದೂ ಮಾಡಿದ ದ್ರೋಹ ಶೂಲದ ಹಾಗೇ .. 
ನಾನೂ ಎನ್ನುತಾ ಮರೆದವರೂ ಜೊತೆಯವರನ್ನೂ ತುಳಿದವರೂ.. 
ಎಲ್ಲಿಹರಿಂದೂ ಎಂದೋ ಅವರೂ ಮಣ್ಣಲ್ಲಿ ಮಣ್ಣಾಗಿಹರೂ 
ಕಲಿಗಾಲ ಇದು ಕಲಿಗಾಲ ಸ್ವರ್ಗ ನರಕ ಬೇರೆ ಇಲ್ಲಾ ಬದುಕಿರುವಾಗಲೇ ನೋಡುವೇ ಎಲ್ಲಾ 
ಸತ್ತ ಮೇಲೆ ಏನಾಗುವೆಯೋ ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ 
ಕಲಿಗಾಲ ಇದು ಕಲಿಗಾಲ..  ಕಲಿಗಾಲ.... 

ಓಂ.. ರೀಮ್ ಓಂ...  ಓಂ.. ರೀಮ್ ಓಂ.. ಸ್ವಾಹ್  ಸ್ವಾಹ್  
ಪಾಪದ ಕೊಡವೂ ತುಂಬಿದ ಮೇಲೆ ದೇವರೂ ಕೂಡಾ ರಕ್ಷಿಸಲಾರ 
ಬಿಸಿ ಕಣ್ಣೀರಿಂದ ಕರಗದು ಪಾಪ ಆಗುವುದೇ ಆಗ ಭೂಮಿಗೇ ಭಾರ 
ನುಂಗಲೂ ಬೇಕು ಕೆಂಡವನೂ ಅಪ್ಪಲೂ ಬೇಕೂ ಬೆಂಕಿಯನೂ 
ಮಾಡಿದನ್ನೂ ಉಣ್ಣಲೇಬೇಕೂ ಅಯ್ಯೋ ತಿಳಿ ನೀ ಇದನೂ 
ಕಲಿಗಾಲ ಇದು ಕಲಿಗಾಲ ಸ್ವರ್ಗ ನರಕ ಬೇರೆ ಇಲ್ಲಾ ಬದುಕಿರುವಾಗಲೇ ನೋಡುವೇ ಎಲ್ಲಾ 
ಸತ್ತ ಮೇಲೆ ಏನಾಗುವೆಯೋ ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ 
ಕಲಿಗಾಲ ಇದು ಕಲಿಗಾಲ..  ಇದು ಕಲಿಗಾಲ.... 
---------------------------------------------------------------------------------------------------

No comments:

Post a Comment