- ಯಾರೇ ನೀ ಅಭಿಮಾನಿ
- ರಮ್ಯಕೃಷ್ಣ
- ಶೃಂಗಾರ ಕಾವ್ಯವೋ
- ಮೈಸೂರು ಸೀಮೆ
- ವಾಸ ವಾಸ ಶ್ರೀನಿವಾಸ
- ಹಲೋ ಉಸಿರೇ
ಯಾರೇ ನೀ ಅಭಿಮಾನಿ (೨೦೦೦) - ಯಾರೇ ನೀ ಅಭಿಮಾನಿ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಶ್ರೀನಿವಾಸ, ಚಿತ್ರ
ಗಂಡು : ಯಾರೇ ನೀ ಅಭಿಮಾನಿ ಯಾರೇ ನೀ ಅಭಿಮಾನಿ
ಯಾರೇ ನೀ ಅಭಿಮಾನಿ ಎಲ್ಲಿದ್ದರೂ ಓಡಿ ಬಾ ಈ ಪಲ್ಲವಿ ಹಾಡು ಬಾ ..
ಯಾರೇ ನೀ ಅಭಿಮಾನಿ ಯಾರೇ ನೀ ಅಭಿಮಾನಿ
ಗಂಡು : ಈ ಕವನವೇ ನಿನಗೆ ಅರ್ಪಣೆ ಸಂಗೀತದಾ ಸ್ವರ ಸಂತರ್ಪಣೆ
ನೀ ಹಿಮಗಿರಿ ನಾ ಬರಿ ಭೂಮಿ ನೀನೇ ಅಲ್ಲವೇ ಕವಿಯಾ ಪ್ರತಿಧ್ವನಿ ಕವಿಯ ಲೇಖನಿ..
ಯಾರೇ ನೀ ಅಭಿಮಾನಿ ಯಾರೇ ನೀ ಅಭಿಮಾನಿ
ಯಾರೇ ನೀ ಅಭಿಮಾನಿ ಎಲ್ಲಿದ್ದರೂ ಓಡಿ ಬಾ ಈ ಪಲ್ಲವಿ ಹಾಡು ಬಾ ..
ಯಾರೇ ನೀ ಅಭಿಮಾನಿ ಯಾರೇ ನೀ ಅಭಿಮಾನಿ
ಗಂಡು : ಕಲ್ಪನಾ ಲೋಕದಾ ಗೆಳತಿಯೇ ಪತ್ತೆಯಾ ನೀಡದಾ ಪತ್ರವೇ
ಹೆಣ್ಣು : ಲೋಕಕೆ ಕಾಣದ ಹೃದಯಕೆ ಗೌಪ್ಯವೇ ಕ್ಷೇಮವು ಅಲ್ಲವೇ
ಗಂಡು : ಹೃದಯದಾ ಹೆಣ್ಣು : ಮಾತಿಗೆ
ಗಂಡು : ಪತ್ರವೇ ಹೆಣ್ಣು : ಇಂಚರ
ಗಂಡು : ಭಾವದಾ ಹೆಣ್ಣು : ಪಲ್ಲವಿ
ಗಂಡು : ಪತ್ರವೇ ಹೆಣ್ಣು : ಸುಂದರ
ಗಂಡು : ಪದಗಳು ಹೆಣ್ಣು : ತುಂಬಾ ಮೆಚ್ಚಿದೆ
ಗಂಡು : ಈ ಪ್ರೀತಿಯಾ ಹೆಣ್ಣು : ತುಂಬಾ ನೆಚ್ಚಿದೆ
ಗಂಡು : ಹೇಗೆ ಕಳಿಸಲಿ ಹೆಣ್ಣು : ತಾನೇ ತಲುಪಿದೆ
ಗಂಡು : ಈ ಪತ್ರದ ಹೆಣ್ಣು : ವಾದ ಸುಂದರ
ಗಂಡು : ಸರಿಯಾದ ಸುಂದರ
ಹೆಣ್ಣು : ಓ ನನ್ನ ಕವಿವಾಣಿ ನಾ ನಿನ್ನ ಅಭಿಮಾನಿ
ಈ ಪಲ್ಲವಿ ಹಾಡುವೆ ಈ ಪ್ರೀತಿಯ ಬೇಡುವೆ
ಗಂಡು : ಮುದ್ದಿಸೋ ಮುದ್ದಿನ ಅಕ್ಷರ ಹೆಣ್ಣು : ಮೆಚ್ಚಿದ ಕವಿಗಳೇ ಮೆಚ್ಚುಗೆ
ಗಂಡು : ಪತ್ರದಾ ಒಡತಿಯೇ ಅಪ್ಸರೇ ..
ಹೆಣ್ಣು : ಊಹಿಸೋ ಕೆಚ್ಚೆದೆ ಕವಿಗಿದೆ
ಗಂಡು : ಮನಸಿನ ಹೆಣ್ಣು : ಕನ್ನಡಿ
ಗಂಡು : ಅಕ್ಷರ ಹೆಣ್ಣು : ಅಕ್ಷರಃ
ಗಂಡು : ಈ ಸುಸ್ವರ ಹೆಣ್ಣು : ಸುಸ್ವರಃ
ಗಂಡು : ಈ ಟಿಪ್ಪಣಿ ಹೆಣ್ಣು : ನನ್ನಾ ತಲುಪಿದೆ
ಗಂಡು : ತಾ ಮರುಧ್ವನಿ ಹೆಣ್ಣು : ತರಲು ಕಾದಿದೆ
ಗಂಡು : ಕಾದಿರುವೆ ನಾ ಹೆಣ್ಣು : ತೇಲಿರುವೆ ನಾ
ಗಂಡು : ಬಾ ಪ್ರೀತಿಸು ಹೆಣ್ಣು : ಬಾರೋ ಬಂಧಿಸು ನನ್ನಾ ಪಾಲಿಸು
ಗಂಡು : ಯಾರೇ ನೀ ಅಭಿಮಾನಿ ಯಾರೇ ನೀ ಅಭಿಮಾನಿ
ಯಾರೇ ನೀ ಅಭಿಮಾನಿ ಎಲ್ಲಿದ್ದರೂ ಓಡಿ ಬಾ ಈ ಪಲ್ಲವಿ ಹಾಡು ಬಾ ..
ಯಾರೇ ನೀ ಅಭಿಮಾನಿ ಯಾರೇ ನೀ ಅಭಿಮಾನಿ
-------------------------------------------------------------------------------
ಯಾರೇ ನೀ ಅಭಿಮಾನಿ (೨೦೦೦) - ರಮ್ಯಕೃಷ್ಣ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರ
ಗಂಡು : ರಮ್ಯಕೃಷ್ಣ ರಮ್ಯಕೃಷ್ಣ ರಮ್ಯಕೃಷ್ಣ ತುಂಬಾ ತೀಕ್ಷ್ಣ
ಮಾರ್ನಿಂಗನಲ್ಲಿ ನುಡಿಸಿದರೆ ಸೀತಾರಂತೇ ಇವನಿಂಗನಲ್ಲಿ ನುಡಿಸಿದರೆ ಗಿಟಾರದಂತೆ
ಚಿಂದಿ ಚಿಂದಿ ತಲೆ ಚಿಂದಿ ಇವಳ ನೋಟ ಮಾಟ ನೋಡೋಣ ತಲೆ ಚೆನ್ ಚಿಂದಿ
ಹೆಣ್ಣು : ಹ್ಹಾ.. ಮಾಮ ಮಾಮ ಶಿವೂ ಮಾಮ ರಾಮ ಶಾಮ ಮಿಕ್ಸಡ್ ಮಾಮಾ
ಲವ್ವಿನಲ್ಲಿ ಕಾಳಿದಾಸನ ಪೊಯಮಿನಂತೆ ಸೆಕ್ಸಿನಲ್ಲಿ ಹಂಸಲೇಖನ ಡ್ರ್ಯಾವಿನಂತೇ
ಮಂದಿ ಚಿಂದಿ ತಲೆ ಚಿಂದಿ ಇವನ ಆಟ ಪಾಠ ಕಂಡೋಳ ತಲೆ ಚಿನ್ ಚಿಂದಿ
ಗಂಡು : ರಮ್ಯಕೃಷ್ಣ ರಮ್ಯಕೃಷ್ಣ ರಮ್ಯಕೃಷ್ಣ ತುಂಬಾ ತೀಕ್ಷ್ಣ
ಗಂಡು : ಚಿನ್ ಚಿಂದಿ .. ಫ್ಲವರ್ ಫ್ಲವರ್ ಇವಳು ರೋಜಾ ಫ್ಲವರ್
ಈ ಫ್ಲವರ್ ತುಂಬಾ ೪೨೦ ಪವರ್ ಪವರ್
ಹೆಣ್ಣು : ಇನೋಸೆಂಟು ಈತ ಇನೋಸೆಂಟು ಈತ ಹತ್ರ ಬಂದ್ರೆ ಇನೊಸೆನ್ಸು ಬರಿ ಸ್ಟಂಟು
ಗಂಡು : ನ್ಯೂಕ್ಲಿಯರ್ ಬಾಂಬ್ ಬಿದ್ರೆ ಬ್ಯಾಕ್ಟೀರಿಯಾ ರಮ್ಯಕೃಷ್ಣ ಬಾಂಬ್ ಬಿದ್ರೆ ಲವ್ ಏರಿಯಾ
ಹೆಣ್ಣು : ನನಗೆ ಸಿಗದೇ ಇದ್ರೆ ಈ ಲೋಕ ಟಾನಿಕು ನಾನು ನಿತ್ಯ ಮುಳುಗೋ ಟೈಟಾನಿಕೂ
ಗಂಡು : ಕನಸಿನಿಂದ ಎಬ್ಬಿಸುವ ಟೆಲಿಫೋನು ಕುಣಿಯೋದಕ್ಕೆ ಉಬ್ಬಿಸುವ ಸ್ಯಾಕ್ಸೋಫೋನು
ಚಿಂದಿ ಚಿಂದಿ ತಲೆ ಚಿಂದಿ ಇವಳ ಸೆಕ್ಸಿ ಗಾನಾ ಕೇಳೋನ್ನ ತಲೆ ಚಿನ್ ಚಿಂದಿ
ರಮ್ಯಕೃಷ್ಣ ರಮ್ಯಕೃಷ್ಣ ರಮ್ಯಕೃಷ್ಣ ತುಂಬಾ ತೀಕ್ಷ್ಣ
ಮಾರ್ನಿಂಗನಲ್ಲಿ ನುಡಿಸಿದರೆ ಸೀತಾರಂತೇ ಇವನಿಂಗನಲ್ಲಿ ನುಡಿಸಿದರೆ ಗಿಟಾರದಂತೆ
ಚಿಂದಿ ಚಿಂದಿ ತಲೆ ಚಿಂದಿ ಇವಳ ನೋಟ ಮಾಟ ನೋಡೋಣ ತಲೆ ಚೆನ್ ಚಿಂದಿ
ಹೆಣ್ಣು : ಹ್ಹಾ.. ಮಾಮ ಮಾಮ ಶಿವೂ ಮಾಮ ರಾಮ ಶಾಮ ಮಿಕ್ಸಡ್ ಮಾಮಾ
ಇಬ್ಬರು : ಚಿನ್ ಚಿಂದಿ .. ಟಾ .. ಬಸ್ಟ್ ಈಕೆ ಸೊಂಟ ಬಸ್ಟ ಈ ಡೆಲ್ಲಿ ಸ್ಪೆಷಲ್ ರಮ್ಯನ ಸೋಲ್ಸದ ಕಷ್ಟ
ಹೆಣ್ಣು : ಸ್ಟೆಪ್ಪು ಕಷ್ಟ ಈತನ ಸ್ಟೈಲು ಕಷ್ಟ ಈ ಮಿಕ್ಸಡ್ ಮಾಮನ್ ಬಿಟ್ರೇ ನಂಗೆ ನಷ್ಟ
ಗಂಡು : ಲಿಪ್ಸಲಿ ಹನಿ ಇದ್ದು ಕೊಡ್ತಾಳ ಸಖಿ ಸವಿದವ ಬಲ್ಲ ಇವಳ ಜ್ವಾಲಾಮುಖಿ
ಹೆಣ್ಣು : ಕವಿತೆಯ ಗೀತೆಯ ಬಲ್ ಡ್ರಿಲ್ ಮಾಸ್ಟರ್ ಚಿರತೆಯ ಮಣಿಸೋದಲ್ಲ ರಿಂಗ್ ಮಾಸ್ಟರ್
ಗಂಡು : ರಮ್ಯಕೃಷ್ಣ ರಮ್ಯಕೃಷ್ಣ ರಮ್ಯಕೃಷ್ಣ ತುಂಬಾ ತೀಕ್ಷ್ಣ
ಮಾರ್ನಿಂಗನಲ್ಲಿ ನುಡಿಸಿದರೆ ಸೀತಾರಂತೇ ಇವನಿಂಗನಲ್ಲಿ ನುಡಿಸಿದರೆ ಗಿಟಾರದಂತೆ
ಚಿಂದಿ ಚಿಂದಿ ತಲೆ ಚಿಂದಿ ಇವಳ ನೋಟ ಮಾಟ ನೋಡೋಣ ತಲೆ ಚೆನ್ ಚಿಂದಿ
ಹೆಣ್ಣು : ಹ್ಹಾ.. ಮಾಮ ಮಾಮ ಶಿವೂ ಮಾಮ ರಾಮ ಶಾಮ ಮಿಕ್ಸಡ್ ಮಾಮಾ
ಲವ್ವಿನಲ್ಲಿ ಕಾಳಿದಾಸನ ಪೊಯಮಿನಂತೆ ಸೆಕ್ಸಿನಲ್ಲಿ ಹಂಸಲೇಖನ ಡ್ರ್ಯಾವಿನಂತೇ
ಮಂದಿ ಚಿಂದಿ ತಲೆ ಚಿಂದಿ ಇವನ ಆಟ ಪಾಠ ಕಂಡೋಳ ತಲೆ ಚಿನ್ ಚಿಂದಿ
ಗಂಡು : ರಮ್ಯಕೃಷ್ಣ ರಮ್ಯಕೃಷ್ಣ ರಮ್ಯಕೃಷ್ಣ ತುಂಬಾ ತೀಕ್ಷ್ಣ
------------------------------------------------------------------------------
ಯಾರೇ ನೀ ಅಭಿಮಾನಿ (೨೦೦೦) - ಶೃಂಗಾರ ಕಾವ್ಯವೋ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ರತ್ನಮಾಲ ಪ್ರಕಾಶ
ಇಬ್ಬರು : ಶೃಂಗಾರದ ಕಾವ್ಯವೋ ನನ್ನ ನಿನ್ನ ಮನದ ಮೌನದ ಮಾತು
ಎಂದೂ ಕೊನೆಯಾಗದಂತ ಭಾವಗಳ ನಾದ ಗ್ರಂಥ
ಹೃದಯ ಇದರ ಹಾಳೆಯೋ ... ಒಲವೇ ಇದರ ಶಾಯಿಯೋ ..
ಶೃಂಗಾರದ ಕಾವ್ಯವೋ ನನ್ನ ನಿನ್ನ ಮನದ ಮೌನದ ಮಾತು
ಎಂದೂ ಕೊನೆಯಾಗದಂತ ಭಾವಗಳ ನಾದ ಗ್ರಂಥ
ಹೃದಯ ಇದರ ಹಾಳೆಯೋ ... ಒಲವೇ ಇದರ ಶಾಯಿಯೋ ..
ಗಂಡು : ಏ .... ಮನಸೇ ಓ ಕನಸೇ ನೀವಿಬ್ಬರು ಸೇರಿದರೆ ಪ್ರೀತಿ ಮಾತೆ ಮಾತೆ ಯುಗಳ ಗೀತೆ
ಹೆಣ್ಣು : ಹೇ.. ಸ್ಪರ್ಶ ಹೇ.. ಸ್ಪರ್ಶ ನೀವಿಬ್ಬರು ಸೇರಿದರೆ ಪ್ರಣಯ ಮಾತೆ ಆ ಮಾತೆ ಹೃದಯ ಗೀತೆ
ಗಂಡು : ಪ್ರತಿ ಘಳಿಗೆ ರಸಘಳಿಗೆ ಪ್ರತಿ ಸುಖದ ದೀವಳಿಗೆ
ಎಲ್ಲಾ ಪುಟವು ಶೃಂಗಾರ ಶೃಂಗಾರ ಶ್ರೀಮಂತ ಶೃಂಗಾರ
ಇಬ್ಬರು : ಶೃಂಗಾರದ ಕಾವ್ಯವೋ ನನ್ನ ನಿನ್ನ ಮನದ ಮೌನದ ಮಾತು
ಎಂದೂ ಕೊನೆಯಾಗದಂತ ಭಾವಗಳ ನಾದ ಗ್ರಂಥ
ಹೃದಯ ಇದರ ಹಾಳೆಯೋ ... ಒಲವೇ ಇದರ ಶಾಯಿಯೋ ..
ಶೃಂಗಾರದ ಕಾವ್ಯವೋ ನನ್ನ ನಿನ್ನ ಮನದ ಮೌನದ ಮಾತು
ಹೆಣ್ಣು : ಬಾಳೆಂಬ ಬಾನಿನಲ್ಲಿ ನೋಡಲ್ಲಿ ಪ್ರೀತಿಸೋ ಹಕ್ಕಿ ಸಾಲು ಜೋಡಿ ಹಕ್ಕಿ ಸಾಲು
ಗಂಡು : ಓ ನಲ್ಲೆ ಬಾ ನಲ್ಲೆ ಭೂಮಿಲಿ ಎಲ್ಲಕ್ಕಿಂತ ಪ್ರೀತಿ ಮೇಲು ಸೇರು ಹಕ್ಕಿ ಸಾಲು
ಹೆಣ್ಣು : ಧರೆಗಿಂತ ಶಶಿ ಮಿಗಿಲು ಶಶಿಗಿಂತ ರವಿ ಮಿಗಿಲು ಮಿಗಿಲು ಮಿಗಿಲು
ನೀ ತಂದ ಪ್ರೀತಿಯ ಆನಂದ ಆನಂದ
ಇಬ್ಬರು : ಶೃಂಗಾರದ ಕಾವ್ಯವೋ ನನ್ನ ನಿನ್ನ ಮನದ ಮೌನದ ಮಾತು
ಎಂದೂ ಕೊನೆಯಾಗದಂತ ಭಾವಗಳ ನಾದ ಗ್ರಂಥ
ಹೃದಯ ಇದರ ಹಾಳೆಯೋ ... ಒಲವೇ ಇದರ ಶಾಯಿಯೋ ..
ಶೃಂಗಾರದ ಕಾವ್ಯವೋ ನನ್ನ ನಿನ್ನ ಮನದ ಮೌನದ ಮಾತು
------------------------------------------------------------------------------
ಯಾರೇ ನೀ ಅಭಿಮಾನಿ (೨೦೦೦) - ಮೈಸೂರು ಸೀಮೆ ಹೆಣ್ಣು ನೋಡು
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ.
(ಆಆಆಆ ಆಆಆಆ ಆಆಆಅ )
ಮೈಸೂರ ಸೀಮೆ ಹೆಣ್ಣು ನೋಡು ಇವ್ಳ ಮೈಸೂರು ರೇಶಿಮೆ ಸೀರೆ ನೋಡು
ಇವ್ಳ ಮೈಸೂರು ಮಲ್ಲಿಗೆ ಜಡೆ ನೋಡು ಇವ್ಳ ಮೈಸೂರು ಗಂಧದ ಕೆನ್ನೆ ನೋಡು
(ಆಆಆಆ ಆಆಆಆ ಆಆಆಅ )
ಮೈಸೂರು ಸೀಮೆ ಹೆಣ್ಣು ನೋಡು ಇವ್ಳ ಮೈಸೂರು ಚಿನ್ನದ ಡಾಬು ನೋಡು
ಇವ್ಳ ಮೈಸೂರು ಕಾಸಿನ ಸರ ನೋಡು ಇವ್ಳ ಮೈಸೂರು ಕುಸುರಿ ವಾಲೇ ನೋಡು
ಮೈಸೂರೂ ... ಮೈಸೂರೂ ... ಮೈಸೂರ ಹೆಣ್ಣ ಚಂದ
ನಮ್ ಮೈಸೂರು ನಡೆ ಚೆಂದ ನಮ್ಮ ಮೈಸೂರು ನುಡಿ ಚೆಂದ
ಮೈಸೂರು ಸೀಮೆ ಹೆಣ್ಣಾ ನೋಡು
(ಆಆಆಆ ಆಆಆಆ ಆಆಆಅ )
ಮೈಸೂರು ವೀಣೆ ಮೀಟುವ ಮೈಸೂರು ಬೆಂಡೆ ಬೆರಳುಗಳ ನೋಡು
(ಆಆಆಆ ಆಆಆಆ ಆಆಆಅ )
ಮೈಸೂರು ವೀಳೇದೆಲೆ ತಿಂದಾ ಮೈಸೂರು ತುಂಬೆ ತುಟಿಗಳ ನೋಡು
(ಆಆಆಆ ಆಆಆಆ ಆಆಆಅ )
ಗಸ ಮಗ ಪಮನಿಸ ಗಸ ಮಗ ಪಮನಿಸ (ಹೂಂ ಹೂಂ ಹೂಂ ಹೂಂ )
ಗಸ ಮಗ ಪಮನಿಸ ಗಸ ಮಗ ಪಮನಿಸ (ಹೂಂ ಹೂಂ ಹೂಂ ಹೂಂ )
ಗಸ ಮಗ ಪಮರಿಪ (ಹೂಂ ಹೂಂ ಹೂಂ ಹೂಂ )
ಗಸ ಮಗ ಪಮರಿಪ ಸನಿಗರಿ ಸನಿಫನಿ ನೋಡು ನೋಡು ನೋಡ್ ಮೈಸೂರು ನಾಟ್ಯ ನೋಡ್ ನೋಡ್
ಮೈಸೂರು ಭಾವ ನೋಡು ನೋಡ್ ಮೈಸೂರು ಭಂಗಿ ನೋಡು ನೋಡ್
ಮೈಸೂರ ಸೀಮೆ ಹೆಣ್ಣು ನೋಡು ಇವ್ಳ ಮೈಸೂರು ರೇಶಿಮೆ ಸೀರೆ ನೋಡು
ಇವ್ಳ ಮೈಸೂರು ಮಲ್ಲಿಗೆ ಜಡೆ ನೋಡು ಇವ್ಳ ಮೈಸೂರು ಗಂಧದ ಕೆನ್ನೆ ನೋಡು
ಮೈಸೂರೂ ... ಮೈಸೂರೂ ... ಮೈಸೂರ ಹೆಣ್ಣ ಚಂದ
ನಮ್ ಮೈಸೂರು ನಡೆ ಚೆಂದ ನಮ್ಮ ಮೈಸೂರು ನುಡಿ ಚೆಂದ
ಮೈಸೂರು ಸೀಮೆ ಹೆಣ್ಣಾ ನೋಡು... ನೋಡು..ನೋಡು
ಮೈಸೂರ ಕನ್ನಂಬಾಡಿಯೇ ತುಂಬಿದಂಥ ಪ್ರಾಯದಾಕೆ
(ಆಆಆಆ ಆಆಆಆ ಆಆಆಅ )
ಮೈಸೂರ ಬೃಂದಾವನ ಚಿಮ್ಮುವಂಥ ಚೆಲುವಿನಾಕೆ
(ಆಆಆಆ ಆಆಆಆ ಆಆಆಅ )
ರಸಿಕರ ಸೆಳೆಯುವ (ಹೂಂಹೂಂಹೂಂಹೂಂ ) ಕವಿಮನ ಕೆಣಕುವ (ಹೂಂಹೂಂಹೂಂಹೂಂ )
ಝಗ ಝಗ ಬೆಳಗುವ ಮೈಸೂರು ಅರಮನೆ ನೋಡು ನೋಡು ನೋಡ್
ಮೈಸೂರು ಅಂದದ ಅರಮನೆ ನೋಡ್ ನಡೆಯೋ ಬೆಡಗಿನ ಅರಮನೆ ನೋಡ್
ಬಳುಕೋ ಹೆಣ್ಣರಮನೆ ನೋಡ್
ಮೈಸೂರು ಸೀಮೆ ಹೆಣ್ಣು ನೋಡು ಇವ್ಳ ಮೈಸೂರು ಪಾಕಿನ ಮಾತು ನೋಡು
ಇವ್ಳ ಮೈಸೂರು ರಾಣಿಯ ಠೀವಿ ನೋಡು ಇವ್ಳ ಮೈಸೂರು ಚಾಮುಂಡಿ ಕಲೆ ನೋಡು
ಮೈಸೂರ್... ಮೈಸೂರ್... ಮೈಸೂರ್...ಮೈಸೂರ ಹೆಣ್ಣ್ ಚೆಂದ ನಮ್ಮ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ ಮೈಸೂರು ಸೀಮೆ ಹೆಣ್ಣು ನೋಡು..........
(ಆಆಆಆ ಆಆಆಆ ಆಆಆಅ ಆಆಆಆ ಆಆಆಆ ಆಆಆಅ )
------------------------------------------------------------------------------
ಯಾರೇ ನೀ ಅಭಿಮಾನಿ (೨೦೦೦) - ವಾಸ ವಾಸ ಶ್ರೀನಿವಾಸ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರ
ಗಂಡು : ವಾಸ ವಾಸ ಶ್ರೀನಿವಾಸ ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡರ ಸಹವಾಸ ಟ್ರಬಲ್ ಟ್ರಬಲ್
ಹೆಣ್ಣು : ಎಂಗೇಜೇ ನಮ್ ಡ್ರೆಸ್ಸೂ ಬ್ಯೂಟೀನೇ ಅಡ್ರೆಸ್ಸೂ
ಅಂದ್ಕೊಂಡಾಗಲೇ ಚಾನ್ಸು ನಿಲ್ಲಲ್ಲ ರೋಮಾನ್ಸು
ಗಂಡು : ಸ್ಟಿರಿಯೋ ಪೋನಿಕ್ ಹಾರ್ಟ್ ಇಲ್ದಿದ್ರೇ ಗೋವಿಂದ
ವಾಸ ವಾಸ ಶ್ರೀನಿವಾಸ ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡರ ಸಹವಾಸ ಟ್ರಬಲ್ ಟ್ರಬಲ್
ಗಂಡು : ಶಿವ ಸ್ವಲ್ಪ ಹೇಳ್ತೀಯಾ ಹೆಂಗೆ ಮೇನಟೈನ್ ಮಾಡ್ತಿಯಾ
ಸಿಂಗಲ್ ಬಿಲ್ಲಿಗೇ ಡಬ್ಬಲ್ ಬಾಣನಾ
ಹೆಣ್ಣು : ಕಿಸ್ ಮೀ ಕಿಸ್ ಮೀ ಕಿಲ್ ಮೀ ಕಿಲ್ ಮೀ
ಗಂಡು : ಕೈಯ್ಯ್ ಹಿಡ್ಕೊಳ್ ಕಣ್ಣೊಳಗೆ ಪ್ರೀತಿ ಮಾಡೋವ್ಳ್ ಮನಸೋಳಗೆ
ಸಿಂಗಲ್ ಮೈಯ್ಯಿಗೇ ಡಬ್ಬಲ್ ಪ್ರಾಣಾನಾ
ಹೆಣ್ಣು : ಹಗ್ ಮೀ ಹಗ್ ಮೀ ಹೇ.. ಬೇಗ್ ಮೀ ಬೇಗ್ ಮೀ
ಓ... ರಾಜ ರಸಿಕರ ರಾಜ ನನ್ ಹೀರೋ ನೀನೂ
ಗಂಡು : ಡಾರ್ಲಿಂಗ್ಸ್ ಅಂದ್ರೆ ಡಾರ್ಲಿಂಗ್ಸು ಪಿಕ್ಸೋ ಫಿಕ್ಸು
ಹಾಡೋಕ ಅಂತಾ ಬಾಯ್ ಬಿಟ್ರೇ ಬೌಂಡರಿ ಸಿಕ್ಸೂ
ಹೆಣ್ಣು : ಎಂಗೇಜೇ ನಮ್ ಡ್ರೆಸ್ಸೂ ಬ್ಯೂಟೀನೇ ಅಡ್ರೆಸ್ಸೂ
ಅಂದ್ಕೊಂಡಾಗಲೇ ಚಾನ್ಸು ನಿಲ್ಲಲ್ಲ ರೋಮಾನ್ಸು
ಗಂಡು : ಸ್ಟಿರಿಯೋ ಪೋನಿಕ್ ಹಾರ್ಟ್ ಇಲ್ದಿದ್ರೇ ಗೋವಿಂದ
ವಾಸ ವಾಸ ಶ್ರೀನಿವಾಸ ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡರ ಸಹವಾಸ ಟ್ರಬಲ್ ಟ್ರಬಲ್
ಹೆಣ್ಣು : ನನ್ನ ಜೊತೆ ನೀನಿದ್ರೇ ಮರಿಬೇಕು ನೀ ನಿದ್ರೇ
ರಾತ್ರಿ ಹಗಲು ನಗಿಸೋಳು ನಾನು
ಗಂಡು : ಲವ್ವೋ ಲವ್ವು ಟೂ ಇನ್ ಒನ್ ಲವ್ವೂ
ಹೆಣ್ಣು : ನೀನೇ ನನ್ನ ಧೃವತಾರೆ ನಿನ್ನ ಯಾರು ಬಿಡ್ತಾರೇ
ಬಿಟ್ಟು ಕೊಡದೇ ಬಿಗಿಸೋಳು ನಾನು
ಗಂಡು : ಲವ್ವೋ ಲವ್ವು ಒನ್ ಬೈಟೂ ಲವ್ವೂ
ಹರೇ ರಾಮ ರಾಮ ಹೇಂಗೇ ಹೇಳಲೇ ನಾನೂ
ಇವರಿಬ್ಬರ ಸೆರಗಲಿ ಹೊಕ್ಕು ಸುಕ್ಕಾದೆ ಇನ್ನೂ
ವಾಸ ವಾಸ ಶ್ರೀನಿವಾಸ ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡರ ಸಹವಾಸ ಟ್ರಬಲ್ ಟ್ರಬಲ್
ಹೆಣ್ಣು : ಎಂಗೇಜೇ ನಮ್ ಡ್ರೆಸ್ಸೂ ಬ್ಯೂಟೀನೇ ಅಡ್ರೆಸ್ಸೂ
ಅಂದ್ಕೊಂಡಾಗಲೇ ಚಾನ್ಸು ನಿಲ್ಲಲ್ಲ ರೋಮಾನ್ಸು
ಗಂಡು : ಸ್ಟಿರಿಯೋ ಪೋನಿಕ್ ಹಾರ್ಟ್ ಇಲ್ದಿದ್ರೇ ಗೋವಿಂದ
ವಾಸ ವಾಸ ಶ್ರೀನಿವಾಸ ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡರ ಸಹವಾಸ ಟ್ರಬಲ್ ಟ್ರಬಲ್
-----------------------------------------------------------------------------
ಯಾರೇ ನೀ ಅಭಿಮಾನಿ (೨೦೦೦) - ಹಲೋ ಉಸಿರೇ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರ
ಗಂಡು : ಹಲೋ ಉಸಿರೇ .. ಹಲೋ ಚೆಲುವೇ ಒಂದು ಸಾರಿ ನನ್ನತ್ತ ನೀ ತಿರುಗಿ ನೋಡು ಉಸಿರೇ
ತಿರುಗಿಸಿಡುವೆ ನಿನ್ನತ್ತ ಈ ತಿರುಗೋ ಭೂಮಿ ಚೆಲುವೆ ಹಲೋ ಉಸಿರೇ .. ಹಲೋ ಚೆಲುವೇ
ಹೆಣ್ಣು : ಲೋಕವೇ ನಾಚುವ ಪ್ರೇಮದಾ ಲೋಕ ನಮ್ಮದು
ಗಂಡು : ಸಾವಿರ ಜನುಮ ಬಂದರೂ ಪ್ರೀತಿ ನಿಲ್ಲದು
ಹೆಣ್ಣು : ಹಲೋ ಮಲ್ಲಿಗೆ ಇರುಳಾಗದ ಭಾಷೆ ಕೊಡು
ಗಂಡು : ಈ ಕನಸು ಕನಸಾಗದ ವರ ಕೊಡು
ಹೆಣ್ಣು : ಹಾಯ್ ಹಾಯ್ ಬಿಸಿಲು ಬೆಳದಿಂಗಳು ಬೆರೆಸುತಿದೆ ಹೃದಯಗಳು
ಗಂಡು : ಎಷ್ಟು ದೂರ ನೀನಿದ್ರೂ ನನಗೇನು ಚಿಂತೆ ಇಲ್ಲ
ನಿನ್ನ ಎದೆಯ ಕಿವಿ ಹತ್ರ ನನ್ನ ಹಾಡು ನಿನಗಿದೆಯಲ್ಲ
ಹೆಣ್ಣು : ಇನ್ನೂ ಒಂದೇ ಒಂದು ಸಾರಿ ನೀ ಕರೆದರೆ ಸಾಕು ಇಲ್ಲಿ
ನಿನ್ನ ಕೋಟಿ ಬಯಕೆನಾ ಪೂರೈಸಿ ಬಿಡುವೆ ಇಲ್ಲಿ
ಗಂಡು : ಹಲೋ .. ಹೃದಯ ಹಲೋ ಕನಸೇ
ಗಂಡು : ಪ್ರೀತಿಯ ಅಂಕುರ ಮೊದಲು ಹೆಣ್ಣಾ ಕಣ್ಣಿಂದ
ಹೆಣ್ಣು : ಆಸೆಯ ಆರಂಭ ಮೊದಲು ಗಂಡು ಮನಸಿಂದ
ಗಂಡು : ಹೇ.. ಪ್ರೇಮಾ ನಮ್ಮ ಹಸಿವಿಗೆ ಅನ್ನವೇ ನೀನು
ಹೆಣ್ಣು : ಹೇ... ಹಾಡು ನಮ್ಮ ದಣಿವಿಗೆ ನೀರು ನೀನೇ
ಗಂಡು : ಹೃದಯಗಳ ತಲೆ ಬಾಚಿ ಮೂವರಿಸು ಪ್ರೀತಿ ಮೂಡಿಸಿ
ಹೆಣ್ಣು : ಮುಂದಿನ ಹುಣ್ಣಿಮೆ ಹುಟ್ಟಿ ಮತ್ತೆ ಬರಲಿ ಬರಲಿ ಬರಲಿ
ನಿನ್ನ ಉಸಿರಿನ ಗಾಳಿ ನನ್ನ ಎದೆಯಿಂದಾನೆ ಬರಲಿ
ಗಂಡು : ಹೃದಯ ನಿಂತ ಮೇಲುನೂ ಕೆಲ ನಿಮಿಷ ಇರಬಹುದಂತೆ
ಪ್ರೀತಿ ನಿಂತ ಕ್ಷಣದಲ್ಲಿ ಆಕಾಶ ತಲೆ ಕೆಳಗಂತೆ
ಹಲೋ ಉಸಿರೇ... ಹಲೋ ಚೆಲುವೇ ..
------------------------------------------------------------------------------
No comments:
Post a Comment