152. ಭಕ್ತ ಕನಕದಾಸ (1960)



ಭಕ್ತ ಕನಕದಾಸ ಚಿತ್ರದ ಹಾಡುಗಳು 
  1. ಬಾಗಿಲನು ತೆರೆದು ಸೇವೆಯನು ಕೋಡೋ ಹರಿಯೇ 
  2. ಬಳ್ಳಿ ಬಳ್ಳಿಯಲ್ಲಿ ಹೂವ 
  3. ಬದುಕಿದೆನು ಬದುಕಿದೆನು 
  4. ಕುಲಕುಲವೆಂದು ಹೊಡೆದಾಡದಿರಿ 
  5. ಈತನಿಗ ವಾಸುದೇವನೋ  
  6. ಸಿಂಗಾರ ಶೀಲಾ 
  7. ಇರುಳು ಎಲ್ಲೆಲ್ಲೂ 
ಭಕ್ತ ಕನಕದಾಸ (1960) - ಬಾಗಿಲನು ತೆರೆದು
ಸಾಹಿತ್ಯ: ಕನಕದಾಸರು   ಸಂಗೀತ : ಎಂ ವೆಂಕಟರಾಜು ಗಾಯನ: ಪಿ.ಬಿ. ಶ್ರೀನಿವಾಸ್

ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು|
ಏನ ಬಲ್ಲೆನು ನಾನು ನೆರೆಸುಜ್ನಾನಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮ ಅನವರತ ||
ದೇವ ... ದೇವ.... ದೇವ....

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ಬಾಗಿಲನು ತೆರೆದು

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲೂ...
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಬಾಗಿಲನು ತೆರೆದು
ಕಡುಕೋಪದಿಂ ಖಳನು ಖಡ್ಗವನೆ ಪಿಡಿದು..
ನಿನ್ನೊಡೆಯ ಎಲ್ಲಿಹನು ಎಂದು ನುಡಿಯೇ..
ಧೃಢ ಭಕುತಿಯಲು ಶಿಶುವು ಬಿಡದೆ ನಿನ್ನನು ಭಜಿಸೆ..
ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ ಬಾಗಿಲನು ತೆರೆದು...
ಯಮಸುತನ ರಾಣಿಗೆ ಅಕ್ಷಯವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೇ...
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೇ ಬಾಗಿಲನು ತೆರೆದು...
ಬಾಗಿಲನು ತೆರೆದು
ಬಾಗಿಲನು ತೆರೆದು... ಸೇವೆಯನು ಕೊಡೊ ಹರಿಯೇ
-------------------------------------------------------------------------------------------------------------------------

ಭಕ್ತ ಕನಕದಾಸ (1960) 
ಸಾಹಿತ್ಯ: ಕನಕದಾಸರು   ಸಂಗೀತ : ಎಂ ವೆಂಕಟರಾಜು ಗಾಯನ: ಪಿ.ಬಿ. ಶ್ರೀನಿವಾಸ್

ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು

ಹರಿ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿನಾಮೃತವೆನ್ನ ಕಿವಿಗೊದಗಿತೋ
ಹರಿದಾಸರು ಎನ್ನ ಬಂಧು ಬಳಗಾದರು
ಹರಿ ಶ್ರೀ ಮುದ್ರೆ ಎನಗಾಭರಣವಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಅಕಳಂಕ ಶ್ರೀ ಹರಿ ಭಕುತಿಗೆ ಮನ ಬೆಳೆದು
ರುಕ್ಮಿಣಿಯರಸ  ಕೈವಶನಾದನೇನಗೆ
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಹಿಂದೆನ್ನ ಜೀವಕೆ ಸಕಲ ಸಂಪದವಾಯಿತು
ಮುಂದೆನ್ನ ಜನ್ಮ ಸಫಾಲ್ಯವಾಯಿತು
ತಂದೆ ಶ್ರೀ  ಕಾಗಿನಲೆ  ಆದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ  
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
-----------------------------------------------------------------------------------------------------------------------

ಭಕ್ತ ಕನಕದಾಸ (1960) 
ಸಾಹಿತ್ಯ: ಕನಕದಾಸರು   ಸಂಗೀತ : ಎಂ ವೆಂಕಟರಾಜು ಗಾಯನ: ಪಿ.ಬಿ. ಶ್ರೀನಿವಾಸ್

ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟುಕಾಣಿಸ ಬಂದು ಹಿರಿದೆನು ಕಿರಿದೆನು
ಗುಟ್ಟುಕಾಣಿಸ ಬಂದು ಹಿರಿದೆನು ಕಿರಿದೆನು 
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ

ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದ ಬಬ್ಬುಳ್ಳಿಯ೦ತೆ ಸ್ಥಿರವಲ್ಲ ಈ ದೇಹ
ಜಲದ ಬಬ್ಬುಳ್ಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು.. ಓಓಓ
ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು.. ಓಓಓ
ಸಿರಿಕಾಗಿನೆಲೆಯಾದಿ ಕೇಶವರಾಯನ 
ಸಿರಿಕಾಗಿನೆಲೆಯಾದಿ ಕೇಶವ ರಾಯನ
ಚರಣ ಕಮಲವ ಕೀರ್ತಿಸುವನೆ ಕುಲಜ
ಚರಣ ಕಮಲವ ಕೀರ್ತಿಸುವನೆ ಕುಲಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಾರಾಯಣ ಹರಿ ನಾರಾಯಣ 
ನಾರಾಯಣ ಹರಿ ನಾರಾಯಣ 
ನಾರಾಯಣ ಹರಿ ನಾರಾಯಣ 
ನಾರಾಯಣ ಹರಿ ನಾರಾಯಣ 
ಹರಿ ನಾರಾಯಣ ಹರಿ ನಾರಾಯಣ 
ಹರಿ ನಾರಾಯಣ ಹರಿ ನಾರಾಯಣ 
ಹರಿ ನಾರಾಯಣ ಹರಿ ನಾರಾಯಣ 
--------------------------------------------------------------------------------------------------------------------------

ಭಕ್ತ ಕನಕದಾಸ (1960) 
ಸಾಹಿತ್ಯ: ಕನಕದಾಸರು   ಸಂಗೀತ : ಎಂ ವೆಂಕಟರಾಜು ಗಾಯನ: ಪಿ.ಬಿ. ಶ್ರೀನಿವಾಸ್

ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು
ಈತನೀಗ ವಾಸುದೇವನ  ಈ ಸಮಸ್ತ ಲೋಕದೊಡೆಯ
ಈತನೀಗ ವಾಸುದೇವನ  ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ
ಈತನೀಗ ವಾಸುದೇವನು ಲೋಕದೊಡೆಯ
ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ 
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮನ
ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ
ಈತನೀಗ ವಾಸುದೇವನು 

ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ
ಭಾವಕಲ್ಪನಾದದೇವ ಈತ ನೋಡಿರೋ
ಈತನೀಗ ವಾಸುದೇವನು 

ವ್ಯೋಮಕೇಶ ಇಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ
ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ಈತನೀಗ ಈತನೀಗ ವಾಸುದೇವನು
------------------------------------------------------------------------------------------------------------------------

ಭಕ್ತ ಕನಕದಾಸ (1960)
ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ ಸಂಗೀತ : ಎಂ ವೆಂಕಟರಾಜು ಗಾಯನ: ಎಸ್.ಜಾನಕೀ 

ಓಓಓ....  ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 

ಬಲುಕಿ ಕುಲಕಿ ಆದ ಚಂದ ನೋಡೇ ಹೆಣ್ಣೇ 
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೇ ಹೆಣ್ಣೇ 
ಬಲುಕಿ ಕುಲಕಿ ಆದ ಚಂದ ನೋಡೇ ಹೆಣ್ಣೇ 
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೇ ಹೆಣ್ಣೇ 
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 

ಉತ್ತಮ ಹಣ್ಣುಗಳ ನೋಡೇ ಹೆಣ್ಣೇ
ಮುತ್ತನಿಕ್ಕಿ ತಿನ್ನೋ ಹಕ್ಕಿ ಬಂತೇ ಹೆಣ್ಣೇ ... ಓಓಓ
ಉತ್ತಮ ಹಣ್ಣುಗಳ ನೋಡೇ ಹೆಣ್ಣೇ
ಮುತ್ತನಿಕ್ಕಿ ತಿನ್ನೋ ಹಕ್ಕಿ ಬಂತೇ ಹೆಣ್ಣೇ
ಮೋಡ ಕವಿದು ಆಡೋ ನವಿಲು ನೋಡೇ ಹೆಣ್ಣೇ 
ಈ ಗಾಡಸೆಹೆದ ಗುಟ್ಟೆನು ಕೇಳೇ ಹೆಣ್ಣೇ   
ಮೋಡ ಕವಿದು ಆಡೋ ನವಿಲು ನೋಡೇ ಹೆಣ್ಣೇ 
ಈ ಗಾಡಸೆಹೆದ ಗುಟ್ಟೆನು ಕೇಳೇ ಹೆಣ್ಣೇ   
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 

ಕೋಗಿಲೆ ಇಂಚರವ ಕೇಳೇ ಹೆಣ್ಣೇ 
ಇದು ಕಲಿಸಿದಂತ ಗುರು ಯಾರು ಕೇಳೇ ಹೆಣ್ಣೇ.. ಓಓಓ  
ಕೋಗಿಲೆ ಇಂಚರವ ಕೇಳೇ ಹೆಣ್ಣೇ 
ಇದು ಕಲಿಸಿದಂತ ಗುರು ಯಾರು ಕೇಳೇ ಹೆಣ್ಣೇ 
ಸುತ್ತ ಮುತ್ತ ಇರುವ ಚಿತ್ರ ನೋಡೇ ಹೆಣ್ಣೇ 
ಇದ ಕೆತ್ತಿದಂತ ರಸಿಕನ್ಯಾರು ಕೇಳೇ ಹೆಣ್ಣೇ 
ಸುತ್ತ ಮುತ್ತ ಇರುವ ಚಿತ್ರ ನೋಡೇ ಹೆಣ್ಣೇ 
ಇದ ಕೆತ್ತಿದಂತ ರಸಿಕನ್ಯಾರು ಕೇಳೇ ಹೆಣ್ಣೇ 
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
-------------------------------------------------------------------------------------------------------------------------

ಭಕ್ತ ಕನಕದಾಸ (1960)
ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ ಸಂಗೀತ : ಎಂ ವೆಂಕಟರಾಜು ಗಾಯನ: ಪಿ.ಬಿ.ಶ್ರೀ,  ಎಸ್.ಜಾನಕೀ 

ಗಂಡು : ಸಿಂಗಾರ ಶೀಲ ಸಂಗೀತ ಲೋಲ
ಹೆಣ್ಣು :   ಆಆಅ ಸಿಂಗಾರ ಶೀಲ ಸಂಗೀತ ಲೋಲ
           ಸಿಂಗಾರ ಶೀಲ ಸಂಗೀತ ಲೋಲ
           ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ 
           ಸಿಂಗಾರ ಶೀಲ ಸಂಗೀತ ಲೋಲ

ಸರಸ ಸುಮ್ಮಾನ ಸಂತೋಷ ಭಾವ 
ಶರಧಿಯಂತಾಗಿ ತುಂಬಿತೋ ಜೀವಾ 
ಹರಿಯೇ ದೊರೆಯೇ ಈ ನಿನ್ನ ಮಾಯೇ 
ಏನೆಂದು ಹೇಳಲ್ಲಯ್ಯಾ ದೀನಬಂಧು ನೀನಯ್ಯಾ 
ಸಿಂಗಾರ ಶೀಲ ಸಂಗೀತ ಲೋಲ

ಕವಿದ ಗಾಢಾಂಧಕಾರವ ನೀಗಿ 
ಬೆಳಕ ನೀ ತಂದೇ ನನ್ನವನಾಗಿ             
ನಲಿದೆ ಒಲಿದೇ ನಲ್ಮೆಯ ತಂದೇ
ಕಾಪಾಡು ಕಾಮಧೇನು ನೀನೇ ಎಂದು ತೋರಿದೆ 
ಸಿಂಗಾರ ಶೀಲ ಸಂಗೀತ ಲೋಲ

ಮನದೊಳೆಕಿಂತ ಮೋಹದ ವೀಣೆ
ಮಧುರ ಝೇಂಕಾರ ತಂದಿತೋ ಕಾಣೇ
ಕುಣಿವೇ ತಣಿವೆ ಸೇವೆಯ ಗೈವೇ
ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೇ 
ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ 
ಸಿಂಗಾರ ಶೀಲ ಸಂಗೀತ ಲೋಲ
--------------------------------------------------------------------------------------------------------------------------

ಭಕ್ತ ಕನಕದಾಸ (1960)
ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ ಸಂಗೀತ : ಎಂ ವೆಂಕಟರಾಜು ಗಾಯನ: ಎಸ್.ಜಾನಕೀ


ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ ಬೆಂದಳಲೂ....
ಅಲೆದು ಅನಾಥಳಾಗಿ ಅಳುವೇ ನೀರಾಶಳಾಗಿ...
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ
ಅಲೆದು ಅನಾಥಳಾಗಿ....  ಅಲೆದು ಅನಾಥಳಾಗಿ ಅಣುವೇ ನೀರಾಶಳಾದೆ
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ

ಯಾರಿಗೆ ಈ ನೋವ ಹೇಳಿ ಯಾರಡೇ  ನಾ ದಾರಿ ಕೇಳಲಿ
ಯಾರಿಗೆ ಈ ನೋವ ಹೇಳಿ ಯಾರಡೇ  ನಾ ದಾರಿ ಕೇಳಲಿ
ಎಲ್ಲಿದೆ ಸಾಗಲು ಏತರ ಬಾಳಲೋ  
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ

ದೇವರೇ ಇಲ್ಲದಂತ ದೇಗುಲ ಈ ದೇಹ ಕಾಂತ
ದೇವರೇ ಇಲ್ಲದಂತ ದೇಗುಲ ಈ ದೇಹ ಕಾಂತ
ಎಂದಿದೆ ಸೇರಲು ಶಾಂತಿಯ ಕಾಣಲು
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ
-------------------------------------------------------------------------------------------------------------------------

No comments:

Post a Comment