627. ಗೋಕುಲ (೨೦೦೯)

ಗೋಕುಲ ಚಲನಚಿತ್ರದ ಹಾಡುಗಳು 
  1. ಆರಾಮಾಗೆ ಇದ್ದೆ ನಾನು 
  2. ಒನ್ ಬೈ ಟೂ ಜೀವನ 
  3. ಬರುವೇ ಓಡಿ ಓಡಿ 
  4. ಮಜಾ ಮಾಡೋಕೇ 
  5. ನೀನೇ ಹೇಳು ನನ್ನದಾವುದು 
  6. ಆರಾಮಾಗೆ ಇದ್ದೆ ನಾನು 
ಗೋಕುಲ (೨೦೦೯) - ಆರಾಮಾಗೆ ಇದ್ದೆ ನಾನು 
ಸಂಗೀತ: ಮನೋಮೂರ್ತಿ,  ಸಾಹಿತ್ಯ : ಜಯಂತ್ ಕಾಯ್ಕಿಣಿ,  ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್

ಆರಾಮಾಗೆ ಇದ್ದೆ ನಾನು ನಿನ್ನ ಕ‍ಂಡು, ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು... ಆರಾಮಾಗೆ

ನೆನೆಯುತ, ಬರೆದೆ ನೆನೆಯುತ‌ ಮನ ಇನ್ನೂನು ಭಾವುಕವಾಯಿತು..
ಬಯಸುತ, ಒಲವ ಬಯಸುತ‌ ಕ್ಷಣ ಒಂದೊಂದು ರೋಚಕವಾಯಿತು..
ನಾನು ನೀನು ಕೂತುಕೊಂಡ ಜಾಗ‌ ನಮ್ಮ ಮಾತೆ .. ಆಡುತಾವೆ ಈಗ..
ಪಿಸುಮಾತಾಡುತ, ಅರೆ ಏನಾಯಿತು ಸವಿ ಕನಸೊಂದು ಜೀವಂತವಾಯಿತು... ಆರಾಮಾಗೆ

ಮರೆಯಿತು, ಹೆಸರೆ ಮರೆಯಿತು ಈ ಮುದ್ದಾದ ಮೋರೆಯ ನೋಡುತ..
ಹೊರಟಿತು, ಹೃದಯ ಹೊರಟಿತು ನೀನಿದ್ದಲ್ಲೇ ಡೇರೆಯ ಹೂಡುತ..
ಕಾಣದಂತೆ ಓಡಿಬಂದೆಯೇನು ಕಾಡಿದಷ್ಟು ಪ್ರೀತಿ ಚೆಂದವೇನು
ಜೊತೆ ಒಡಾಡುತ, ಅರೆ ಏನಾಯಿತು ಈ ಬಡಜೀವ ಶ್ರೀಮಂತವಾಯಿತು... ಆರಾಮಾಗೆ
-------------------------------------------------------------------------------------------------

ಗೋಕುಲ (೨೦೦೯) - ಒನ್ ಬೈ ಟೂ ಜೀವನ 
ಸಂಗೀತ: ಮನೋಮೂರ್ತಿ, ಸಾಹಿತ್ಯ : ಧನಂಜಯ, ಗಾಯಕರು : ಟಿಪ್ಪು 

-------------------------------------------------------------------------------------------------

ಗೋಕುಲ (೨೦೦೯) - ಬರುವೇ ಓಡಿ ಓಡಿ 
ಸಂಗೀತ: ಮನೋಮೂರ್ತಿ, ಸಾಹಿತ್ಯ : ಜಯಂತ್ ಕಾಯ್ಕಿಣಿ, ಗಾಯಕರು : ಕಾರ್ತಿಕ, ರಿತೀಷ ಪದ್ಮನಾಭ  

ಬರುವೇ ಓಡಿ ಓಡಿ ನಲಿದು ಒಲಿವೆ ನೋಡಿ ನೋಡಿ ನಲಿದು 
ನಲಿವೆ ಹಾಡಿ ಹಾಡಿ ಕುಣಿದು ನಿನ್ನ ಪ್ರೀತಿಗೇ 
ಕರೆವೇ ಕಾದು ಕಾದು ಒಲಿದು ಅಲೆವೇ ಕಾಡಿ ಕಾಡಿ ಸೆಳೆದು 
ಸೆಳೆವೆ ಬಾರಿ ಬಾರಿ ಸುಳಿದು ನಿನ್ನ ಪ್ರೀತಿಗೇ 

ಮಾತಿಲ್ಲದೇ ಮುನ್ಸೂಚನೇ ಇಂದು ಆಗಿದೆ ನನ್ನ ಪ್ರೀತಿಗೇ ... ನಿನ್ನ ಪ್ರೀತಿಗೇ .. 
ನಾನಾಬಗೆ ಆಲೋಚನೆ ಇಂದೇ ಬಂದಿದೆ  ನನ್ನ ಪ್ರೀತಿಗೇ ... ನಿನ್ನ ಪ್ರೀತಿಗೇ .. 
ಬರುವೇ ಓಡಿ ಓಡಿ ನಲಿದು ಒಲಿವೆ ನೋಡಿ ನೋಡಿ ನಲಿದು 
ನಲಿವೆ ಹಾಡಿ ಹಾಡಿ ಕುಣಿದು ನಿನ್ನ ಪ್ರೀತಿಗೇ 
ಕರೆವೇ ಕಾದು ಕಾದು ಒಲಿದು ಅಲೆವೇ ಕಾಡಿ ಕಾಡಿ ಸೆಳೆದು 
ಸೆಳೆವೆ ಬಾರಿ ಬಾರಿ ಸುಳಿದು ನಿನ್ನ ಪ್ರೀತಿಗೇ 

ನಿನ್ನದೇ ನೆನಪಲಿ ನಡೆಯುವಾಗ ಎದುರು ನೀನು ಬಂದೆ 
ಜೂಮ್ಮ ಎನ್ನುವಂತ ಸಂತೋಷ ನನ್ನ ಪ್ರೀತಿಗೆ 
ಎಂದಿಗೂ ಮನಸಿನಲ್ಲಿ ಕನಸಿನಲ್ಲಿ ಅಳಿಸಲಾರದಂಥ 
ಗುಚ್ಚನೆ ನೂರು ಸಂದೇಶ ನಿನ್ನ ಪ್ರೀತಿಗೆ 
ಸವಿ ಮುತ್ತಿನ ಸಂಭಾವನೆ ಬಾಕಿ ಏಕಿದೆ ನನ್ನಾ ಪ್ರೀತಿಗೆ ನಿನ್ನ ಪ್ರೀತಿಗೆ 
ಓಲೈಸುವ ಸಂಭಾಷಣೆ ಇನ್ನೂ ಬೇಕಿದೆ ನನ್ನಾ ಪ್ರೀತಿಗೆ ನಿನ್ನ ಪ್ರೀತಿಗೆ 
ಬರುವೇ ಓಡಿ ಓಡಿ ನಲಿದು ಒಲಿವೆ ನೋಡಿ ನೋಡಿ ನಲಿದು 
ನಲಿವೆ ಹಾಡಿ ಹಾಡಿ ಕುಣಿದು ನಿನ್ನ ಪ್ರೀತಿಗೇ 
ಕರೆವೇ ಕಾದು ಕಾದು ಒಲಿದು ಅಲೆವೇ ಕಾಡಿ ಕಾಡಿ ಸೆಳೆದು 
ಸೆಳೆವೆ ಬಾರಿ ಬಾರಿ ಸುಳಿದು ನಿನ್ನ ಪ್ರೀತಿಗೇ 

ಸುಮ್ಮನೇ ಹಿಡಿದ ಕೈಯ್ಯ ಮರೆತು ಮೈಯ್ಯ ಮರೆಯಬೇಕು ಎಂಬ 
ಸುಂದರವಾದ ಸಣ್ಣಾ ಸೇ ನನ್ನ ಪ್ರೀತಿಗೇ 
ನಿನ್ನದೇ ಜೊತೆಯಲ್ಲಿಂದು ಕತೆಯಲೊಂದು ಹೆಣೆಯಬೇಕು 
ಬೇಗ ನೀಡುವೆಯೇನು ನೀ ಭಾಷೆ ನನ್ನ ಪ್ರೀತಿಗೆ 
ದಿನ ರಾತ್ರಿಯ  ಆರಾಧನೆ ಒಂದೇ ಆಗಿದೆ ನನ್ನಾ ಪ್ರೀತಿಗೇ ನಿನ್ನ ಪ್ರೀತಿಗೇ 
ಈ ಲೋಕದ ಆಪಾದನೆ ಬೇಕೇ ಬೇಕಿದೇ ನನ್ನಾ ಪ್ರೀತಿಗೇ ನಿನ್ನ ಪ್ರೀತಿಗೇ 
ಬರುವೇ ಓಡಿ ಓಡಿ ನಲಿದು ಒಲಿವೆ ನೋಡಿ ನೋಡಿ ನಲಿದು 
ನಲಿವೆ ಹಾಡಿ ಹಾಡಿ ಕುಣಿದು ನಿನ್ನ ಪ್ರೀತಿಗೇ 
ಕರೆವೇ ಕಾದು ಕಾದು ಒಲಿದು ಅಲೆವೇ ಕಾಡಿ ಕಾಡಿ ಸೆಳೆದು 
ಸೆಳೆವೆ ಬಾರಿ ಬಾರಿ ಸುಳಿದು ನಿನ್ನ ಪ್ರೀತಿಗೇ 
-----------------------------------------------------------------------------------------------

ಗೋಕುಲ (೨೦೦೯) - ಮಜಾ ಮಾಡೋಕೇ 
ಸಂಗೀತ: ಮನೋಮೂರ್ತಿ, ಸಾಹಿತ್ಯ : ಧನಂಜನ, ಗಾಯಕರು : ಕಾರ್ತಿಕ, ರಿತೀಷ ಪದ್ಮನಾಭ  

-------------------------------------------------------------------------------------------------

ಗೋಕುಲ (೨೦೦೯) - ನೀನೇ ಹೇಳು ನನ್ನದಾವುದು 
ಸಂಗೀತ: ಮನೋಮೂರ್ತಿ, ಸಾಹಿತ್ಯ : ಜಯಂತ್ ಕಾಯ್ಕಿಣಿ, ಗಾಯಕರು : ಸೋನು ನಿಗಮ್, 

ನೀನೇ ಹೇಳು ನನ್ನದಾವುದು 
ತೀರದಲ್ಲಿ ಹೆಜ್ಜೆಯ ಗುರುತೂ  ಸಾವಿರಾರೂ .. ಸಾವಿರಾರೂ .. 
ನೀನೇ ಹೇಳು ನನ್ನದಾವುದು 
ನೀರಿನಲ್ಲಿ ಮೂಡುವ ಅಲೆಗಳು ಸಾಲು ಸಾಲು 
ನೀನೇ ಹೇಳು ನನ್ನದಾವುದು... ನನ್ನದಾವುದು 
ಬಾಗಿಲ ಮುಂದೆ ತಾ ನಿಂತು ಕೂಗಿವೇ ನಂಟು ನೂರೆಂಟೂ  
ನೀನೇ ಹೇಳು ನನ್ನದಾವುದು 

ಯಾರ ಕೈಯಿಂದ ಜಾರಿ ಇನ್ಯಾರ ಕನಸಿಗ ಚೂರು 
ರಾತ್ರಿಯ ದಾಟಿಯಾದಾಗ ಬಂದಿದೆ ಹ್ಹಾ... ನನ್ನ ಊರೂ 
ಕೇಳುತ್ತ ನನ್ನ ನೀ ಯಾರು  ಕಾಡಿದೆ ದಾರಿ ನೂರಾರೂ 
ನೀನೇ ಹೇಳು ನನ್ನದಾವುದು 
ತೀರದಲ್ಲಿ ಹೆಜ್ಜೆಯ ಗುರುತೂ ಸಾವಿರಾರು 
ನೀನೇ ಹೇಳು ನನ್ನದಾವುದು 
ನೀರಿನಲ್ಲಿ ಮೂಡುವ ಅಲೆಯ ಸಾಲೂ ಸಾಲೂ 
ನೀನೇ ಹೇಳು ನನ್ನದಾವುದು 

ದೂರ ತೀರುವಲ್ಲಿ ಯಾರೋ ನನಗಾಗಿ ಕಾದಂತೆ ಸುಳಿವು 
ವೇಷ ಕಳಚಿಟ್ಟ ಮೇಲೆ ಕೊನೆಗುನೂ ಕಂಡಿದ್ದೇ ಒಲವೂ 
ಕಾಣದ ಹಂಚಿ ಎಲ್ಲಿಂದ ಕಾಗದ ಉಂಟು ನೂರೊಂದು 
ನೀನೇ ಹೇಳು ನನ್ನದಾವುದು 
ತೀರದಲ್ಲಿ ಹೆಜ್ಜೆಯ ಗುರುತೂ ಸಾವಿರಾರು 
ನೀನೇ ಹೇಳು ನನ್ನದಾವುದು 
ನೀರಿನಲ್ಲಿ ಮೂಡುವ ಅಲೆಯ ಸಾಲೂ ಸಾಲೂ 
ನೀನೇ ಹೇಳು ನನ್ನದಾವುದು 
ಬಾಗಿಲ ಮುಂದೆ ತಾ ನಿಂತು ಕೂಗಿವೇ ನಂಟು ನೂರೆಂಟೂ  
ನೀನೇ ಹೇಳು ನನ್ನದಾವುದು 
ಯಾರ ಕೈಯಿಂದ ಜಾರಿ ಇನ್ಯಾರ ಕನಸಿಗ ಚೂರು 
------------------------------------------------------------------------------------------------

ಗೋಕುಲ (೨೦೦೯) - ಆರಾಮಾಗೆ ಇದ್ದೆ ನಾನು
ಸಂಗೀತ: ಮನೋಮೂರ್ತಿ, ಸಾಹಿತ್ಯ : ಜಯಂತ್ ಕಾಯ್ಕಿಣಿ, ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್

ಆರಾಮಾಗೆ ಇದ್ದೆ ನಾನು ನಿನ್ನ ಕ‍ಂಡು, ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು...
ಆರಾಮಾಗೆ ಇದ್ದೆ ನಾನು ನಿನ್ನ ಕ‍ಂಡು, ಅರೆ ಏನಾಯಿತು

ನೆನೆಯುತ, ಬರೆದೆ ನೆನೆಯುತ‌ ಮನ ಇನ್ನೂನು ಭಾವುಕವಾಯಿತು..
ಬಯಸುತ, ಒಲವ ಬಯಸುತ‌ ಕ್ಷಣ ಒಂದೊಂದು ರೋಚಕವಾಯಿತು..
ನಾನು ನೀನು ಕೂತುಕೊಂಡ ಜಾಗ‌ ನಮ್ಮ ಮಾತೆ .. ಆಡುತಾವೆ ಈಗ..
ಪಿಸುಮಾತಾಡುತ, ಅರೆ ಏನಾಯಿತು ಸವಿ ಕನಸೊಂದು ಜೀವಂತವಾಯಿತು...
ಆರಾಮಾಗೆ ಇದ್ದೆ ನಾನು ನಿನ್ನ ಕ‍ಂಡು, ಅರೆ ಏನಾಯಿತು

ಮರೆಯಿತು, ಹೆಸರೆ ಮರೆಯಿತು ಈ ಮುದ್ದಾದ ಮೋರೆಯ ನೋಡುತ..
ಹೊರಟಿತು, ಹೃದಯ ಹೊರಟಿತು ನೀನಿದ್ದಲ್ಲೇ ಡೇರೆಯ ಹೂಡುತ..
ಕಾಣದಂತೆ ಓಡಿಬಂದೆಯೇನು  ಕಾಡಿದಷ್ಟು ಪ್ರೀತಿ ಚೆಂದವೇನು
ಜೊತೆ ಒಡಾಡುತ, ಅರೆ ಏನಾಯಿತು ಈ ಬಡಜೀವ ಶ್ರೀಮಂತವಾಯಿತು...
ಆರಾಮಾಗೆ ಇದ್ದೆ ನಾನು ನಿನ್ನ ಕ‍ಂಡು, ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು...
ಆರಾಮಾಗೆ ಇದ್ದೆ ನಾನು ನಿನ್ನ ಕ‍ಂಡು, ಅರೆ ಏನಾಯಿತು
-------------------------------------------------------------------------------------------------

No comments:

Post a Comment