138. ಅಪರಾಧಿ (1976)

ಅಪರಾಧಿ ಚಿತ್ರದ ಹಾಡುಗಳು 
  1. ಬೇಡ ನಂಬಬೇಡಾ 
  2. ಒಹ್ ಯೂಮ್ಮಿ ಬಾರ ಅಮ್ಮಿ 
  3. ನಗುವ ನಿನ್ನ ಮೊಗದ ಚೆನ್ನ 
  4. ಝುಮ್ ಝಲಿಯಾ 
  5. ಈ ಸೊಗಸು ವಯಸು 
ಅಪರಾಧಿ (1976)
ಸಂಗೀತ: ಸತ್ಯಂ  ಸಾಹಿತ್ಯ: ಚಿ.ಉದಯಶಂಕರ್   ಹಾಡಿದವರು: ಎಸ್.ಪಿ.ಬಿ.

ಅಹ್ಹಹ್ಹ ಹೂಂ ಹೂಂ
ಬೇಡ, ನಂಬಬೇಡ
ಅರೆ ಜೀವ ಹೋದರೂ ಹೆಂಗಸರನ್ನು
ಎಂದಿಗು ನೀನು ನೋಡಬೇಡ
ಬೇಡ ನಂಬಬೇಡ
ಬೇಡ ನಂಬ... ಬೇಡ

ಮೊದಲ ಬಾರಿಗೆ ನೋಡಿದಾಗ
ಹ್ಹೀಹ್ಹೀಹ್ಹೀ ಹ್ಹಹ್ಹಹ್ಹ  ಹ್ಹೂ ಹ್ಹೂ ಹ್ಹೂ
(ಹ್ಹಹ್ಹಹ್ಹ ) ಹ್ಹಾ.. ಹೀಗೆ ಹೀಗೇ
ಮೊದಲ ಬಾರಿಗೆ ನೋಡಿದಾಗ  ಮುಸಿ ಮುಸಿ ನಗುತ ಮನಸೆಳೆದಾಗ
ಮುಸಿ ಮುಸಿ ನಗುತ ಮನಸೆಳೆದಾಗ ನಾಯಿಯ ಹಾಗೆ ಹಿಂಬಾಲಿಸುವೆ
ನಾಯಿಯ ಹಾಗೆ ಹಿಂಬಾಲಿಸುವೆ ತಾಳಿ ಕಟ್ಟುವೆ ಕೆಟ್ಟು ಹೋಗುವೆ
ಗುಲಾಮನಂತೆ ಕೈಯ ಕಟ್ಟುವೆ ಬೇಡ, ನಂಬಬೇಡ
ಜೀವ ಹೋದರೂ ಹೆಂಗಸರನ್ನು ಎಂದಿಗು ನೀನು ನೋಡಬೇಡ
ಬೇಡ ನಂಬಬೇಡ

ಟಿಂಗ್ ಕೀ ಟಿಂಗ್ ಟಿಂಗ್  ಟರ್ ಟರ್ ಟರ್
ಠಣ ಠಣ ಠಣ್ ಠಣ್ ಮ್ ತೇರರಡಂ
ರಾವಣ ಸತ್ತನು ಸೀತೆಯಿಂದ..
ಅಯ್ಯೋ ಅಯ್ಯಯ್ಯೋ (ಅಯ್ಯೋ ಪಾಪ) ಹ್ಹಹ್ಹಹ್ಹ
ರಾವಣ ಸತ್ತನು ಸೀತೆಯಿಂದ
ಕೀಚಕ ಬಿದ್ದ ದ್ರೌಪತಿಯಿಂದ
ಕೀಚಕ ಬಿದ್ದ ದ್ರೌಪತಿಯಿಂದ ವಿಶ್ವಾಮಿತ್ರ ಮೇನಕೆಯಿಂದ
ವಿಶ್ವಾಮಿತ್ರ ಮೇನಕೆಯಿಂದ ಹೆಣ್ಣಿನಿಂದಲೆ ನಾನು ಕೆಟ್ಟೆನು
ನೀನು ಹೀಗೆ ಹಾಳಾದೀಯೆ ಬೇಡ, ನಂಬಬೇಡ
ಜೀವ ಹೋದರೂ ಹೆಂಗಸರನ್ನು ಎಂದಿಗು ನೀನು ನೋಡಬೇಡ
ಬೇಡ ನಂಬಬೇಡ ಬೇಡ, ನಂಬಬೇಡ
ಬೇಡ ನಂಬಬೇಡ ಬೇಡ, ನಂಬಬೇಡ
ಬೇಡ ನಂಬಬೇಡ ಬೇಡ, ನಂಬಬೇಡ
-------------------------------------------------------------------------------------------------------------------------

ಅಪರಾಧಿ (1976)
ಸಂಗೀತ: ಸತ್ಯಂ  ಸಾಹಿತ್ಯ: ಚಿ.ಉದಯಶಂಕರ್   ಹಾಡಿದವರು: ಎಸ್.ಪಿ.ಬಿ. ಪಿ.ಸುಶೀಲಾ 

ಕೋರಸ್ : ಓ... ಲಾ ಲಲಾಲ್ ಲಲಾಲ್
ಗಂಡು : ಹೇ.. ಓ ಯಮ್ಮಿ  ಬಾರ ಅಮ್ಮಿ ಕೂಡಿ  ಹಾಡೋಣ (ಲಲಲಾ)
            ಹಾಯಾಗಿ ನಾವೆಲ್ಲ ಕಾಲ ಕಳೆಯೋಣ (ಲಲಲಾ)
ಹೆಣ್ಣು : ಓ.. ಯಪ್ಪಾ.. ಬಾರ ಅಪ್ಪಾ  ಕೂಡಿ  ಹಾಡೋಣ (ಲಲಲಾ)
            ಹಾಯಾಗಿ ನಾವೆಲ್ಲ ಕಾಲ ಕಳೆಯೋಣ
           ಲಲಲಾ ಲಲಲಾ (ಲಲಲಾ ಲಲಲಾ)
ಕೋರಸ್ : ಓ... ಲಾ ಲಲಾಲ್ ಲಲಾಲ್ 

ಗಂಡು : ಬಾರೇ  ಜಾಣೆ ಇಂದು ಗಾಳಿ ಹಾಡು ಹಾಡಿದೆ ಆಆಆ.. 
           ಅಂದ ನೋಡು ಇಂದು ಹೂವೂ ಕೂಗಿ ಹೇಳಿದೇ 
ಹೆಣ್ಣು : ಹ್ಹಾಂ.. ನಾಲ್ಕು ಕಣ್ಣು ಕೂಡಿ ಏನೋ ಮೋಡಿ ಮಾಡಿದೇ 
         ಆಆಆ.. ಮನಸು ಮನಸು ಸೇರಿ ಏನೋ ಆಟ ಆಡಿದೆ 
ಎಲ್ಲರು : ಕಾಳ ಬಸ್ಸು ಠುಸ್ಸು ಎಂದು ಪಂಚರ್ ಆದಾಗ 
           ಧೈರ್ಯ ಅನ್ನೋ ಸ್ಟ್ಫೆನ್ನಿ ಬೇಕು ನಮಗೆ ಆವಾಗ 
ಗಂಡು : ಓ..  ಓ ಯಮ್ಮಿ  ಬಾರ ಅಮ್ಮಿ ಕೂಡಿ  ಹಾಡೋಣ (ಲಲಲಾ)
            ಹಾಯಾಗಿ ನಾವೆಲ್ಲ ಕಾಲ ಕಳೆಯೋಣ (ಲಲಲಾ) 
ಹೆಣ್ಣು : ಓ.. ಯಪ್ಪಾ.. ಬಾರ ಅಪ್ಪಾ  ಕೂಡಿ  ಹಾಡೋಣ (ಲಲಲಾ)
            ಹಾಯಾಗಿ ನಾವೆಲ್ಲ ಕಾಲ ಕಳೆಯೋಣ

ಗಂಡು : ಇಲ್ಲಿ ಹೀಗೆ ಸೇರೋ ವೇಳೆ ಪಯಣ ತಂದಿದೆ
            ನಾಳೆ ನಾವೂ ದೂರ ಆಗೋ ಕಾಲ ಮುಂದಿದೆ ಏಏಏ
ಹೆಣ್ಣು : ಲಲಲಲ್ಲಲ್ಲ ಹೃದಯ ಹೃದಯ ಬೆರೆಯೋ  ಸಮಯ ಕೂಡಿ ಬಂದರೇ
          ಆಆಆ... ಬೇರೆ ಬೇರೆ ಆಗೋ ಮಾತೇ ಇಲ್ಲಾ ಬಾಳಿಗೆ
ಎಲ್ಲರು : ಬಸ್ಸು ಹೀಗೆ ನಿಂತೇ ಇದ್ದರೇ ಇಲ್ಲೇ ಠಿಕಾಣ
            ಕಾಲಚೀಲ ಏನೂ ಇಲ್ಲ ಹೀಗೆ ಇರೋಣ
ಗಂಡು : ಅರೆರೇ  ಓ..  ಓ ಯಮ್ಮಿ  ಬಾರ ಅಮ್ಮಿ ಕೂಡಿ  ಹಾಡೋಣ (ಲಲಲಾ)
            ಹಾಯಾಗಿ ನಾವೆಲ್ಲ ಕಾಲ ಕಳೆಯೋಣ (ಲಲಲಾ) 
ಹೆಣ್ಣು : .. ಓ.. ಯಪ್ಪಾ.. ಬಾರ ಅಪ್ಪಾ  ಕೂಡಿ  ಹಾಡೋಣ (ಲಲಲಾ)
            ಹಾಯಾಗಿ ನಾವೆಲ್ಲ ಕಾಲ ಕಳೆಯೋಣ 
ಎಲ್ಲರೂ : ಲಾಲಲ್ಲಲ್ಲಲ್ಲಲಾ  (ಅಹ್ಹಹ್ಹಾ )  ಲಾಲಲ್ಲಲ್ಲಲ್ಲಲಾ  (ಅಹ್ಹಹ್ಹಾ )  
           ಲಾಲಲ್ಲಲ್ಲಲ್ಲಲಾ  (ಅಹ್ಹಹ್ಹಾ )    ಲಾಲಲ್ಲಲ್ಲಲ್ಲಲಾ  (ಅಹ್ಹಹ್ಹಾ )        
-------------------------------------------------------------------------------------------------------------------------

ಅಪರಾಧಿ (1976)
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. ಪಿ.ಸುಶೀಲಾ

ಗಂಡು : ಆ... ಹೇ... (ಆಹಾ.. ಲಲಲಲಾ  ಹ್ಹಹ್ಹಹ್ಹಹ್ಹಾ)  ಹ್ಹಹ್ಹಹ್ಹಹಾ (ಹ್ಹಹ್ಹಾ )
           ನಗುವ ನಿನ್ನ ಮೊಗದ ಚೆನ್ನಾ ಒಲವನು ಕೋರಿದೆ 
           ನಗುವ ನಿನ್ನ ಮೊಗದ ಚೆನ್ನಾ ಒಲವನು ಕೋರಿದೆ 
ಹೆಣ್ಣು : ಮಾತಲೇ ನನ್ನ ಮೈ ಚೆಲುವನ್ನ ಹೊಗಳದೇ ಚೆನ್ನ ಬಾರೋ         
           ನಗುವ ನಿನ್ನ ಮೊಗದ ಚೆನ್ನಾ ಒಲವನು ಕೋರಿದೆ 
ಗಂಡು : ಲಾ ಲಲಲ್ಲಲ್ಲಾ ಲಾ  (ಲಾ ಲಲಲ್ಲಲ್ಲಾ ಲಾ ಆ.. )
           ಸ್ನೇಹಕೆ ಮನಸಿಂದು ಸೋಲುತಿದೆ ಆಸೆಯೂ ನನ್ನನ್ನೇ ತೇಲಿಸಿದೇ.. ಎಹೇ.. 
           ಸ್ನೇಹಕೆ ಮನಸಿಂದು ಸೋಲುತಿದೆ ಆಸೆಯೂ ನನ್ನನ್ನೇ ತೇಲಿಸಿದೇ.. 
           ಏಕೋ ಏನೋ ಎಲ್ಲಾ ಹೊಸದಾಗಿದೆ 
ಹೆಣ್ಣು : ನಗುವ ನಿನ್ನ (ಆ )ಮೊಗದ ಚೆನ್ನಾ (ಆ) ಒಲವನು ಕೋರಿದೆ

ಹೆಣ್ಣು : ಹೊಳೆಯುವ ಕಣ್ಣಾಸೆ ಕೇಳಿದೆಯಾ ಹವಳದ ತುಟಿಗಾಸೆ ಬಾ ಇನಿಯಾ 
          ಹೊಳೆಯುವ ಕಣ್ಣಾಸೆ ಕೇಳಿದೆಯಾ ಹವಳದ ತುಟಿಗಾಸೆ ಬಾ ಇನಿಯಾ 
          ನೋವು ಇಲ್ಲಾ ಇಲ್ಲಿ ನೀ ಕಾಣೆಯಾ 
ಗಂಡು : ನಗುವ ನಿನ್ನ ಮೊಗದ ಚೆನ್ನಾ  ಒಲವನು ಕೋರಿದೆ 

ಗಂಡು : ಕೆಣುಕುವ ಮಾತಿಂದ ಕಾಡಿರುವೇ ಸರಸಕೆ ಬಾ ಎಂದು ಕೂಗಿರುವೇ ಹೇ...      
           ಕೆಣುಕುವ ಮಾತಿಂದ ಕಾಡಿರುವೇ ಸರಸಕೆ ಬಾ ಎಂದು ಕೂಗಿರುವೇ
           ಇನ್ನೂ ನನ್ನ ಆಟ  ನೀ ನೋಡುವೇ
ಹೆಣ್ಣು : ನಗುವ ನಿನ್ನ ಮೊಗದ ಚೆನ್ನಾ  ಒಲವನು ಕೋರಿದೆ 
ಗಂಡು : ಕಣ್ಣಿನ ಬಾಣ ಸೋಕಲು ನನ್ನ ಸೋತೆನು ಚಿನ್ನಾ ಕೇಳೇ 
ಇಬ್ಬರು : ನಗುವ ನಿನ್ನ ಮೊಗದ ಚೆನ್ನಾ  ಒಲವನು ಕೋರಿದೆ 
-------------------------------------------------------------------------------------------------------------------------. 

ಅಪರಾಧಿ (1976)
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ 

ಝುಮ್ ಜಾಲಿಯಾ  ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ  ಹ್ಹಾ...ಆಆಆ
ಝುಮ್ ಜಾಲಿಯಾ  ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ ಹ್ಹಾ...ಆಆಆ
ಝುಮ್ ಜಾಲಿಯಾ 

ಚೆಲುವನ್ನು ನೋಡು ಒಲವನ್ನು ಬೇಡು ನಲಿವನ್ನ ನೀನೊಲ್ಲೆಯಾ ಹ್ಹಾ...ಆಆಆ
ಚೆಲುವನ್ನು ನೋಡು ಒಲವನ್ನು ಬೇಡು ನಲಿವನ್ನ ನೀನೊಲ್ಲೆಯಾ ಹ್ಹಾ...ಆಆಆ
ಸೊಗಸನ್ನೂ ಕಾಣು ಸವಿಯಾದ ಜೇನು ವಿಷಯವನ್ನು ನೀ ಹೊಂದೆಯಾ ಹ್ಹಾ.. ಆ..
ಸೊಗಸನ್ನೂ ಕಾಣು ಸವಿಯಾದ ಜೇನು ವಿಷಯವನ್ನು ನೀ ಹೊಂದೆಯಾ ಹ್ಹಾ.. ಆ.. 
ಝುಮ್ ಜಾಲಿಯಾ  ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ ಹ್ಹಾ...ಆಆಆ
ಝುಮ್ ಜಾಲಿಯಾ 

ತಂಗಾಳಿಯಲ್ಲಿ ಸಂಗೀತದಂತೆ ಈ ಸಂಗ ಹಾಯಾಗಿದೇ ಹೇ..ಹೇ.. 
ತಂಗಾಳಿಯಲ್ಲಿ ಸಂಗೀತದಂತೆ ಈ ಸಂಗ ಹಾಯಾಗಿದೇ ಹೇ..ಹೇ..
ಸಿಂಗಾರಿ ನನ್ನ ಈ ಅಂದ ನಿನ್ನ ಎಂದೆಂದೂ ಜೊತೆಯಾಗಿದೇ  ಹೇ..
ಸಿಂಗಾರಿ ನನ್ನ ಈ ಅಂದ ನಿನ್ನ ಎಂದೆಂದೂ ಜೊತೆಯಾಗಿದೇ  ಹೇ..
ಝುಮ್ ಜಾಲಿಯಾ  ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ ಹ್ಹಾ...ಆಆಆ
ಝುಮ್ ಜಾಲಿಯಾ 
-------------------------------------------------------------------------------------------------------------------------

ಅಪರಾಧಿ (1976)
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. ಪಿ.ಸುಶೀಲಾ 

ಗಂಡು : ಈ ಸೊಗಸು ವಯಸು ಮನಸು ಯಾರಿಗಾಗಿ ಇದು ಯಾರಿಗಾಗಿ
ಹೆಣ್ಣು : ಈ ಹೃದಯ ಹರೆಯ ಗೆಳಯ ನಿನಗಾಗಿ ಎಂದೂ ನಿನಗಾಗಿ ನಿನಗಾಗಿ
ಗಂಡು : ಓ..  ಸೊಗಸು ವಯಸು ಮನಸು ಯಾರಿಗಾಗಿ ಇದು ಯಾರಿಗಾಗಿ
ಹೆಣ್ಣು : ಈ ಹೃದಯ ಹರೆಯ ಗೆಳಯ ನಿನಗಾಗಿ ಎಂದೂ ನಿನಗಾಗಿ ನಿನಗಾಗಿ 

ಗಂಡು : ಬಾಡಿಗೆಗೆ ಕೊಟ್ಟೇ ನೀ ನಿನ್ನ ಮನೆಯನ್ನೇ (ಹ್ಹ ಆ ) 
           ಕೊಂಡು ಕಂಡನೇ ನನ್ನೇ ಮನಸನ್ನೇ 
ಹೆಣ್ಣು : ಹೂವಿನಂಥ ಯೌವ್ವನ ನಗುವ ಈ ವೇಳೆ 
          ಈ ಮನಸು ಮುನ್ನೂರು ಕನಸಿನ ಉಯ್ಯಾಲೇ 
ಗಂಡು : ಹೃದಯವಿದು ಜೋಪಾನ  ಹೆಣ್ಣು : ಹೆದರದಿರು ಓ ಚೆನ್ನ 
ಗಂಡು : ಒಡೆಯದಿರೂ ಓ ಚಿನ್ನ  ನಾ ಬೇಡುವೇ... 
ಗಂಡು : ಓ.... ಈ ಸೊಗಸು ವಯಸು ಮನಸು ಯಾರಿಗಾಗಿ ಇದು ಯಾರಿಗಾಗಿ
ಹೆಣ್ಣು : ಈ ಹೃದಯ ಹರೆಯ ಗೆಳಯ ನಿನಗಾಗಿ ಎಂದೂ ನಿನಗಾಗಿ ನಿನಗಾಗಿ 

ಹೆಣ್ಣು : ನನ್ನೆದೇಯ ತೇರಲಿ ನಿನಗೆ ಮೆರವಣಿಗೆ (ಹ್ಹಾಂ )
          ಆಸೆಗಳ ಮಂಚದಿ ಸುಖದ ಉರವಣಿಗೆ
ಗಂಡು : ಸೇರಿಸಿದೇ ನಮ್ಮನ್ನು ಬೃಹ್ಮನ ಬರವಣಿಗೆ
            ರಾಣಿಯಂತೆ ಇಂದು ನೀ ಪ್ರೀತಿಯ ಅರಮನೆಗೆ
ಹೆಣ್ಣು : ನಂಬಿರುವೇ ನಾನಿಂದು             ಗಂಡು : ಕೈ ಬಿಡೇನು ಎಂದೆಂದೂ
ಹೆಣ್ಣು : ಜೊತೆಯಲ್ಲಿರುವೇ ನಾನೆಂದೂ ಈ ಬಾಳಲಿ
ಗಂಡು : ಅಹ್ಹಹ್ಹಹ್ಹ..  ಈ.... ಈ ಸೊಗಸು ವಯಸು ಮನಸು ಯಾರಿಗಾಗಿ ಇದು ಯಾರಿಗಾಗಿ
ಹೆಣ್ಣು : ಈ ಹೃದಯ ಹರೆಯ ಗೆಳಯ ನಿನಗಾಗಿ ಎಂದೂ ನಿನಗಾಗಿ ನಿನಗಾಗಿ ನಿನಗಾಗಿ 
-------------------------------------------------------------------------------------------------------------------------

No comments:

Post a Comment