ಮುಂಗಾರು ಮಳೆ ಚಲನಚಿತ್ರದ ಹಾಡುಗಳು
- ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
- ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
- ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
- ಅರಳುತಿರು ಜೀವದ ಗೆಳೆಯ
- ಒಂದೇ ಒಂದು ಸಾರೀ
- ಕುಣಿದು ಕುಣಿದು ಬಾರೇ
- ಸುವ್ವಿ ಸುವ್ವಾಲೇ
ಮುಂಗಾರು ಮಳೆ (2006) - ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಯಾಕ್ಣಿ ಹಾಡಿದವರು: ಸೋನು ನಿಗಮ್ ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ಎಂತ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ
ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರ ರಾಜ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ ಸುಮ್ಮನೆ
ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ
--------------------------------------------------------------------------------------------------------------------------
ಮುಂಗಾರು ಮಳೆ (2006) - ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಯಾಕ್ಣಿ ಹಾಡಿದವರು: ಸೋನು ನಿಗಮ್
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ
ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ
ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು
ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ
-----------------------------------------------------------------------------------------------------------------------
ಮುಂಗಾರು ಮಳೆ (2006) - ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಯಾಕ್ಣಿ ಹಾಡಿದವರು: ಶ್ರೇಯ ಘೋಶಾಲ್
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು
ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ

ಅರಳುತಿರು ಜೀವದ ಗೆಳೆಯ
ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದಾ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನ ವೀಣೆ..
ಹೀಗೆ ಸುಮ್ಮನೆ.....
ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಹೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ ಹೆಸರು..
ಯಾಕೆ ಸುಮ್ಮನೆ.....
ಮಾತಿಗೆ ಮೀರಿದ ಭಾವದ ಸೆಳೆತವೇ ಸುಂದರ
ಒಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರು ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲ್ಲಿ ನಿನ್ನನು
ಇರಲಿ ಗೆಳೆಯ ಈ ಅನುಬಂಧ
ಹೀಗೆ ಸುಮ್ಮನೆ.....
----------------------------------------------------------------------------------------------------------------
ಮುಂಗಾರು ಮಳೆ (2006) - ಒಂದೇ ಒಂದು ಸಾರಿ ಕಣ್ಮುಂದೇ ಬಾರೇ ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಹಾಡಿದವರು: ಕುನಾಲ್ ಗುಂಜಾವಾಲ, ಪ್ರಿಯಾ ಹೇಮೇಶ

ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
ನನ್ನ ಕಣ್ಣ ತುಂಬ ನಿನ್ನನ್ನೂ ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನೂ ನಾ ಕಂಡು ಕೊಂಡೇನು
ನೀ ಯಾರೋ ಕಾಣೇನೂ ನನ್ನೊಳ ನೀನು
ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
ಒಂದೇ ಕ್ಷಣ ಎದುರಿದ್ದು ಹ್ಹಾಂ ..
ಒಂದೇ ಕ್ಷಣ ಎದುರಿದ್ದು ನನ್ನ ಈ ಬಾಳನು ಸಿಂಗರಿಸಿದೇ
ನನ್ನ ಮೈ ಮನಸ್ಸನೂ ನೀ ಅವರಿಸಿದೇ
ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
ನನ್ನ ಕಣ್ಣ ತುಂಬ ನಿನ್ನನ್ನೂ ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನೂ ನಾ ಕಂಡು ಕೊಂಡೇನು
ನೀ ಯಾರೋ ಕಾಣೇನೂ ನನ್ನೊಳ ನೀನು
ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
ನಿನ್ನ ನಗು ನೋಡಿದಾಗ ಹ್ಹಾ.. ನಿನ್ನ ನಗು ನೋಡಿದಾಗ
ಹಗಲಲ್ಲೂ ಸಹ ಬಿಳಿ ಬೆಳದಿಂಗಳು
ಸುರಿದಂತಾಯಿತು ಸವಿದಂತಾಯಿತು
ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
ನನ್ನ ಕಣ್ಣ ತುಂಬ ನಿನ್ನನ್ನೂ ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನೂ ನಾ ಕಂಡು ಕೊಂಡೇನು
ನೀ ಯಾರೋ ಕಾಣೇನೂ ನನ್ನೊಳ ನೀನು
ಒಂದೇ ಒಂದು ಸಾರಿ ಕಣ್ಮುಂದೇ ಬಾರೇ
----------------------------------------------------------------------------------------------------------------
ಮುಂಗಾರು ಮಳೆ (2006) - ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ್ ಕಾಯ್ಕಿಣಿ ಗಾಯನ : ಉದಿತ ನಾರಾಯಣ, ಸುನ್ನಿಧಿ ಚೌಹ್ಹಣ, ಸ್ಟೀಫನ್
ಕೋರಸ್ : ಡೂ ಬಾರೇ .. ಡೂ ಬಾರೇ .. ಡೂಡೂಬಾ ..
ಡೂ ಬಾರೇ .. ಡೂ ಬಾರೇ .. ಡೂಡೂಬಾ ..
ಗಂಡು : ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
ಹೆಣ್ಣು : ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ...
ಹೆಣ್ಣು : ಇರುಳಲಿ ನೀನೆಲ್ಲೊ ಮೈಮುರಿದರೆ ನನಗೆಲ್ಲಿ ನವಿರಾದ ಹೂ ಕಂಪನ
ಗಂಡು : ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ಹೆಣ್ಣು : ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೊ.. ಒಲವೇ ವಿಸ್ಮಯ
ಕೋರಸ್ : ಡೂ ಬಾರೇ .. ಡೂ ಬಾರೇ .. ಡೂಡೂಬಾ ..
ಡೂ ಬಾರೇ .. ಡೂ ಬಾರೇ .. ಡೂಡೂಬಾ ..
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು: ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ
(ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ)

ಗಂಡು : ಒಲವೇ ನೀನೊಲಿದ ಕ್ಷಣದಿಂದಲೆ ಈ ಭೂಮಿ ಈ ಬಾನು ಹೊಸದಾಗಿದೆ
ಹೆಣ್ಣು : ಖುಷಿಯಿಂದ ಈ ಮನವೆಲ್ಲ ಹೂವಾಗಿದೆ ಬೇರೇನೂ ಬೇಕಿಲ್ಲ ನೀನಲ್ಲದೆ
ಗಂಡು : ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ
ಹೆಣ್ಣು : ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೊ ಒಲವೇ ವಿಸ್ಮಯ
----------------------------------------------------------------------------------------------------------------
ಮುಂಗಾರು ಮಳೆ (2006) - ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಶಿವ ಹಾಡಿದವರು: ಹೇಮಂತ
ಕೋರಸ್ : ಆಹ್ಹಾ.. ಶವ್ವಾ.. ಆಹ್ಹಾ.. ಶವ್ವಾ..ಹಾಯ್ ಹಾಯ್ ಹಾಯ್ ಹಾಯ್ ಹಾಯ್ ಹಾಯ್

ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ ಅಹಾ.ಓಹೋ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಗಂಡು: ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ ಎದೆ ಗೂಡಲ್ಲಿ ಹುಡುಗಿ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಗಂಡು: ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ ಎದೆ ಗೂಡಲ್ಲಿ ಹುಡುಗಿ
ಚೆಲುವಾಂತ ಚೆನ್ನಗರಾಯ ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ ಎದೆ ಗೂಡಲ್ಲಿ ಹುಡುಗಿ
ಚೆಲುವಾಂತ ಚೆನ್ನಗರಾಯ ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು: ಶಾಬ.ಶಾಬ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ
(ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ)
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡಿಂಗ…
ಚೆಲುವಾಂತ ಚೆನ್ನಗರಾಯ ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು: ಹೇಹೇಹೇ ಹ್ಹಾ ಹ್ಹಾ ಹ್ಹಾ ಹ್ಹಾ ಶಾಬ.ಶಾಬ ಶಾಬ.ಶಾಬಶಾಬ.ಶಾಬ

ಗಂಡು : ಚಿನ್ನ ಅಪರಂಜಿಗಿಂತ ಚಿನ್ನ ನಿನ್ನ ಹುಡುಗನೂ
ನಿನ್ನ ನೆರಳಂತೇ ಮೂರೂ ಹೊತ್ತು ಜೊತೆಗಿರುವನೂ
ಯಾರೂ ಕೊಡದಷ್ಟು ಒಲವ ತಂದು ತಗೋ ಎನುವನೂ ಒಂದು
ಘಳಿಗೇನೂ ನಿನ್ನ ಬಿಟ್ಟೂ ಇರನೂ ಇರನೂ
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ ಎದೆ ಗೂಡಲ್ಲಿ ಹುಡುಗಿಚೆಲುವಾಂತ ಚೆನ್ನಗರಾಯ ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು: ಹೇಹೇಹೇ ಹ್ಹಾ ಹ್ಹಾ ಹ್ಹಾ ಹ್ಹಾ ಶಾಬ.ಶಾಬ ಶಾಬ.ಶಾಬಶಾಬ.ಶಾಬ
ಶಾಬ.ಶಾಬ ಶಾಬ.ಶಾಬ ಶಾಬ.ಶಾಬ ಓ ಬಲ್ಲೇ .. ಓ ಬಲ್ಲೇ .. ಓ ಬಲ್ಲೇ ..
ಗಂಡು : ಅವನ ಮನಸೊಂದು ಒಲವ ತೂಗೋ ಜೋಕಾಲಿಯೂ
ಅಲ್ಲಿ ಹಾಡುವಂತ ಜೋಗುಳ ಗಾನ ಪ್ರೀತಿ ಲಾಲಿಯೋ, ಗೆಳತೀ
ಆ ಉಯ್ಯಾಲೆಯಲ್ಲೀ ಆ ಲಾಲಿಯಾ ಕೇಳೋ ಭಾಗ್ಯ ಬಂದು ಬಾಗಿಲ ತಟ್ಟಿ ಕರೆದಿದೆ ನಿನ್ನ
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ ಕೈಯ ಹಿಡಿವನು ನಿನ್ನಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು: ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ
ಗಂಡು: ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ ರಂಗು ರಂಗೋಲಿ ಎದೆ ಗೂಡಲ್ಲಿ ಹುಡುಗಿ
ಚೆಲುವಾಂತ ಚೆನ್ನಗರಾಯ ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು ಸಂಗಡಿಗರು: ಹೇಹೇಹೇ ಹ್ಹಾ ಹ್ಹಾ ಹ್ಹಾ ಹ್ಹಾ ಶಾಬ.ಶಾಬ ಶಾಬ.ಶಾಬಶಾಬ.ಶಾಬ
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ(ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ)
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ
(ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ)
ಡಿಂಗ ಡಾಂಗ ಡ ಡಿಂಗ ಡಾಂಗ ಡಿಂಗ ಡಾಂಗ
----------------------------------------------------------------------------------------------------------------
No comments:
Post a Comment