89. ಅಪೂರ್ವ ಸಂಗಮ (1984)


ಅಪೂರ್ವ ಸಂಗಮ ಚಿತ್ರದ ಹಾಡುಗಳು 
  1. ಅರಳಿದೆ ತನು ಮನ ನೋಡುತ 
  2. ತಾರಾ ಓ.. ತಾರಾ ತಾರಾ.. ಬಾ ತಾರಾ 
  3. ನಿನ್ನೆಗಿಂತ ಇಂದು ಚೆನ್ನ 
  4. ಬಂಗಾರಿ ನನ್ನ ವೈಯ್ಯಾರಿ ಕೇಳೇ 
  5. ಭಾಗ್ಯ ಎನ್ನಲೇ ಪುಣ್ಯ ಎನ್ನಲೇ 
ಅಪೂರ್ವ ಸಂಗಮ (1984) - ಅರಳಿದೆ ತನೂ ಮನಾ ನೋಡುತ ನಿನ್ನಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ.ರಾಜ್ ಕುಮಾರ್ ಮತ್ತು ಎಸ್.ಜಾನಕಿ

ಅರಳಿದೆ ತನು ಮನ ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ ಕಂಡೆನು ನಾ..೨..ಅರಳಿದೆ...
ಚಲಿಸುವ ತಂಗಾಳಿಯೂ ಚೆಲುವೇ ನಿನ್ನಾ ನೋಡೀ
ನಲಿಯುತ ಓಡಿದೆ ಮುಂಗುರುಳಾ ಹಿಡಿದೂ ಆಡೀ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನಾ ಅಂದಾ ನೋಡೀ
ಸುಖಾ ತರುತಿದೇ ಹಿತಾ ಬಯಸಿದೇ ಚಲುವಾ...ಅರಳಿದೆ...

ಎದೆಯಲೀ ಹೊಮ್ಮೀ ಹೊಮ್ಮೀ ನೂರೂ ಬಯಕೇ ಈಗ
ಕೆಣಕಲು ಸೋತೆನು ನನ್ನಿನಿಯಾ ನಿನ್ನಾ ನೋಡೀ
ಪ್ರಣಯದ ಸಂಗೀತದ ಇಂಪೂ ಕಿವಿಯಾ ತುಂಬೀ
ಕನಸನು ಕಂಡೆನು ಸಂಗಾತಿಯೇ ನಿನ್ನಾ ಸೇರೀ
ಇನ್ನೂ ಬಿಡುವೆನೇ ನನ್ನೇ ಕೊಡುವೆನಾ ಚಲುವೇ...ಅರಳಿದೆ.
--------------------------------------------------------------------------------------------------------------------------

ಅಪೂರ್ವ ಸಂಗಮ (೧೯೮೪) - ಬಂಗಾರಿ, ನನ್ನ ವಯ್ಯಾರಿ ಹೇಳೆ ನನ್ನ ಮೇಲೆ ಕೋಪ ಏತಕೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್


ಬಂಗಾರಿ, ನನ್ನ ವಯ್ಯಾರಿ ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ       ಹೇ ಬಂಗಾರಿ, ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
ಒಂದು ಬಾರಿ ಬಳಿಸೇರಿ    ಮನದಾಸೆ ನೀ ಅರಿತು
ಮನದಾಸೆ ನೀ ಅರಿತು    ಬೇಗ ಪೂರೈಸಿ ಬಿಡಬಾರದೆ
ಬೇಗ ಪೂರೈಸಿ ಬಿಡಬಾರದೆ

ನಿನ್ನ ಬಳ್ಳಿಯ ತೋಳಲಿ ನನ್ನ   ಬಳ್ಳಿಯ ತೋಳಲಿ ನನ್ನ
ನಡುವ ಬಳಸುತ ಹತ್ತಿರ ನಿಲ್ಲೆ
ಬಿಸಿ ಏರುತಿದೆ ಹಸಿವಾಗುತಿದೆ
ಮನದಾಸೆಗಳು ಕುಣಿದಾಡುತಿವೆ
ಬಳಿ ಬರದೆ ಬಿಡೆನು   ಇನ್ನು ನಿನ್ನ ಬಾ ಚಿನ್ನ
ವಯ್ಯಾರಿ, ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ

ನಿನಗೆ ಅಂದವ ಕೊಟ್ಟನು ಏಕೆ   ಅಂದವ ಕೊಟ್ಟನು ಏಕೆ
ಇಲ್ಲಿ ಚಪಲವ ಇಟ್ಟನು ಏಕೆ       ಪ್ರತಿ ರಾತ್ರಿಯಲಿ ಜೊತೆ ಸೇರುತಲಿ
ಸವಿಮಾತಿನಲಿ ಸುಖ ಹೊಂದುತಲಿ
ವಯ್ಯಾರಿ, ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
ಇಲ್ಲಿ ಮೆತ್ತನೆ ಹಾಸಿಗೆ ಏಕೆ   ಮೆತ್ತನೆ ಹಾಸಿಗೆ ಏಕೆ
ಹೀಗೆ ಬಾಗಿಲು ಮುಚ್ಚುವೆ ಏಕೆ
ಇರುಳಾಗುತಿದೆ ಸುಖ ಕೇಳುತಿದೆ
ನಿನ್ನ ನೋಡುತಿರೆ ಚಳಿಯಾಗುತಿದೆ 
ನಿನ್ನಾಸೆ ಹೆಚ್ಚಿ   ಅಯ್ಯೊ ಸೋತೆ ಬಾ ನಲ್ಲೆ
ಬಂಗಾರಿ, ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
ಈ ಆವೇಶ ನಿನಗೇತಕೆ
ಒಂದು ಬಾರಿ ಬಳಿಸೇರಿ   ಮನದಾಸೆ ನೀ ಅರಿತು
ಮನದಾಸೆ ನೀ ಅರಿತು
ಬೇಗ ಪೂರೈಸಿ ಬಿಡಬಾರದೆ  ಬೇಗ ಪೂರೈಸಿ ಬಿಡಬಾರದೆ
------------------------------------------------------------------------------------------------------------------------

ಅಪೂರ್ವ ಸಂಗಮ (1984)  - ತಾರಾ, ಓ ತಾರಾ....  ತಾರಾ, ಓ ತಾರಾ ತಾರಾ, ಬಾ ತಾರಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್, ಎಸ್.ಜಾನಕಿ

ತಾರಾ, ಓ ತಾರಾ....  ತಾರಾ, ಓ ತಾರಾ ತಾರಾ, ಬಾ ತಾರಾ
ನಾ ಇಲ್ಲೆ ಇರುವೆ   ಜೊತೆಯಲ್ಲೆ ಬರುವೆ ನಿನ್ನ ನೊಡಲೆಂದೆ ನಾನು
ಕಾದು ಕಾದು ಸೋತು ಹೋದೆ ಏಕೆ ನಿಧಾನಿಸಿ ಬಂದೆ (ಇಲ್ಲವಲ್ಲ)

ರಾಜ, ಓ ರಾಜ  ರಾಜ, ಓ ರಾಜ
ಹಾದೀಲಿ ಮುಳ್ಳು, ಹೌದಾ ಎಲ್ಲೆಲ್ಲೂ ಕಲ್ಲು, (ಅಯ್ಯಯ್ಯೊ)
ಒಂಟಿ ಹೆಣ್ಣು ತಾನೆ ನಾನು ಓಡಿ ಓಡಿ ಬಂದೆನಲ್ಲ
ಎಲ್ಲೂ ನಾ ನಿಲ್ಲಲೆ ಇಲ್ಲ, (ಅಯ್ಯೊ ಪಾಪ) ಎಲ್ಲೂ ನಾ ನಿಲ್ಲಲೆ ಇಲ್ಲ

ಏತಕೆ ಹೀಗೆ ಹೆದರಿಕೆ ಮೊಗದಿ ಹೇಳೇ ಚಿನ್ನ
ಯಾಕಮ್ಮ ಹೆದ್ರುಕೋತಿಯ ಹೇಳು
ಏತಕೆ ಹೀಗೆ ಹೆದರಿಕೆ ಮೊಗದಿ ಹೇಳೇ ಚಿನ್ನ
ನೀನೇ ಬಲ್ಲೆ ನುಮ್ಮನೆ ಏಕೆ ಕಾಡುವೆ ನನ್ನ
ನಾ ರಾಜನಾದ ಮೇಲೆ ಇದೇ ನನ್ನ ರಾಜ್ಯ
ನಾ ರಾಜನಾದ ಮೇಲೆ ಇದೇ ನನ್ನ ರಾಜ್ಯ
ರಾಜ....  ಎಲ್ಲೋ .... ಅಲ್ಲೇ ತಾನೆ ಎಂದೂ
ಹಿಂದೆ ಮುಂದೆ ಸೇವಕರಿರಲೇ ಬೇಕು
ನಾನಿರಲು ಭಯವೇಕೆ, (ಇಲ್ವಲ್ಲ)
ನಾನಿರಲು ಭಯವೇಕೆ

ನಿನ್ನನೆ ನಂಬಿ ಬಂದೆನು ಇಂದು ಕೇಳೋ ಜಾಣ
ನನಗೊತ್ತು ಮರಿ ನೀನು ಬರ್ತೀಯಾ ಅಂತ
ನಿನ್ನನೆ ನಂಬಿ ಬಂದೆನು ಇಂದು ಕೇಳೋ ಜಾಣ
ನಂಬಿದ ಹೆಣ್ಣೆ ಎಂದಿಗೂ ನೀನೆ ನನ್ನ ಪ್ರಾಣ
ನಮ್ಮೂರು ಬಲು ದೂರ ಗೊತ್ತೇ ಕುಮಾರ
ನಮ್ಮೂರು ಬಲು ದೂರ ಗೊತ್ತೇ ಕುಮಾರ
ಇನ್ನೂ....  ನಾವು....  ಅಲ್ಲಿ ಇಲ್ಲಿ ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇಕೆ, ಬ್ಯಾಡ ಬ್ಯಾಡ ಬ್ಯಾಡ
ಈ ಸೇವಕರು ಬರಬೇಕೆ
ತಾರಾ, ಓ ತಾರಾ   ರಾಜ, ಓ ರಾಜ
ನಾ ಇಲ್ಲೆ ಇರುವೆ     ಜೊತೆಯಲ್ಲೆ ಬರುವೆ
ನಿನ್ನ ನೊಡಲೆಂದೆ ನಾನು ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ   ಏಕೆ ನಿಧಾನಿಸಿ ಬಂದೆ ಲಾಲ್ಲಲಾ..
------------------------------------------------------------------------------------------------------------------------

ಅಪೂರ್ವ ಸಂಗಮ (1984) - ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್, ರಮೇಶ

ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು  ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ....
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ....
ಭಾಗ್ಯಾ ಎನ್ನಲೇ.....
ಪುಣ್ಯಾ ಎನ್ನಲೇ...

ಕತ್ತಲಿನಲ್ಲಿ ನಾನಿರುವಾಗ ಜ್ಯೋತಿಯ ಹಾಗೆ ನೀ ಬಂದೆ
ಕತ್ತಲಿನಲ್ಲಿ ನಾನಿರುವಾಗ  ಜ್ಯೋತಿಯ ಹಾಗೆ ನೀ ಬಂದೆ
ಬಾಳಲಿ ಇಂದು ಮೊದಲನೆ ಬಾರಿ ಸೋದರ ಪ್ರೇಮವ ನಾ ಕಂಡೆ
ಓ.. ಅಣ್ಣಾ ನಿನ್ನ ಮಾತು  ಮುತ್ತೂ ಕಡಲ ಮುತ್ತೂ
ಕೈ ಜಾರಿ ಹೋದ ಮುತ್ತೊಂದು ಮತ್ತೆ ತಾನಾಗಿ ಕೈ ಸೇರಿದೇ...ಏ..
ಭಾಗ್ಯಾ ಎನ್ನಲೇ
ಪುಣ್ಯಾ ಎನ್ನಲೇ

ಅಣ್ಣನೆ ನಿನ್ನಾ ನೋಡಿದ ಮೇಲೆ ಅಮ್ಮನ ಕಾಣೋ ಆಸೆ
ಅಣ್ಣನೆ ನಿನ್ನಾ ನೋಡಿದ ಮೇಲೆ ಅಮ್ಮನ ಕಾಣೋ ಆಸೆ
ನನ್ನವರೊಡನೆ ಒಂದಾಗಿ ಮುಂದೆ ಬಾಳೋಣ ಎನ್ನುವ ಆಸೆ
ಆ.. ಚಿಂತೇ ಏಕೆ ಇನ್ನೂ ನಾನೂ ಇಲ್ಲವೇನೂ
ಸಿಡಿಲಂತೆ ಬಿದ್ದು ಈ ಕೋಟೆ ಒಡೆದೂ ಹಾರೋಣ ಆಕಾಶಕೇ..ಏ..
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು
ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ....
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
-------------------------------------------------------------------------------------------------------------------------

ಅಪೂರ್ವ ಸಂಗಮ (1984) - ನಿನ್ನೆಗಿಂತಾ... ಇಂದು ಚೆನ್ನಾ... ಚಿನ್ನ  ಇಂದೇ ಗಿಂತ ನಾಳೆ ಚೆನ್ನಾ... ಆಆ..
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ವಾಣಿಜಯರಾಮ 

ನಿನ್ನೆಗಿಂತಾ... ಇಂದು ಚೆನ್ನಾ... ಚಿನ್ನ  ಇಂದೇ ಗಿಂತ ನಾಳೆ ಚೆನ್ನಾ... ಆಆ..
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ  ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ  ಆ ಇಂದೇ ಗಿಂತ ನಾಳೆ ಚೆನ್ನಾ 
ಕಾಣದ ಅಂದ ಕೆಣಕಲು ನಿನ್ನಾ ಬಿಡುವೆಯಾ ನೀನು ನನ್ನನ್ನಾ... ಆಆಆ 
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ  ಚಿನ್ನ ಇಂದೇ ಗಿಂತ ನಾಳೆ ಚೆನ್ನಾ

ಕಣ್ಣಲ್ಲಿ ನಿನ್ನಲ್ಲಿ  ತುಂಬಿ ಮೋಹ...  ಕಣ್ಣಲ್ಲಿ ನಿನ್ನಲ್ಲಿ  ತುಂಬಿ ಮೋಹ 
ಕೆಣಕಲು ನೀ ಕೂಗುವೇ ದಾಹ ದಾಹ 
ಆಧರವು ಸುಮದಂತೆ ಬೀರಿದಾಗ ನೀನು
ಆಧರವು ಸುಮದಂತೆ ಬೀರಿದಾಗ ನೀನು
ಜೇನಿನ ಸಿಹಿಗಾಗಿ ದುಂಬಿ ಬರುವಂತೆ
ಆದರೂ ಹೀಗೇಕೆ ಮತ್ತೇ ಬಂದಂತೇ
ಅವಸರ ಬಿಡು ನಿಧಾನ.... ಆಆಆ ...
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ  ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ  ಆ ಇಂದೇ ಗಿಂತ ನಾಳೆ ಚೆನ್ನಾ 

ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ..  ಅಹ್ಹಹ್ಹಹ ..
ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ
ಬಳುಕಲು ಈ ನಡುವು ರಂಭೆಯ ಹಾಗೇ
ನಲಿಯುವ ನವಿಲಂತೆ ಕುಣಿವಾಗ ನಾನು
ನಲಿಯುವ ನವಿಲಂತೆ ಕುಣಿವಾಗ ನಾನು
ಗಾಳಕ್ಕೆ ಸೆರೆಯಾದ ಮರಿ ನೀನಂತೇ
ಹೇಳಲು ಬರದಂಥ ನೋವು ಕಂಡಂತೇ
ಕಾಡುವೇ ಅಯ್ಯೋ ಇದೇಕೇ...
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ  ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ  ಆ ಇಂದೇ ಗಿಂತ ನಾಳೆ ಚೆನ್ನಾ 
ಕಾಣದ ಅಂದ ಕೆಣಕಲು ನಿನ್ನಾ ಬಿಡುವೆಯಾ ನೀನು  ನನ್ನನ್ನಾ... ಆಆಆ 
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ  ಚಿನ್ನ ಇಂದೇ ಗಿಂತ ನಾಳೆ ಚೆನ್ನಾ
--------------------------------------------------------------------------------------------------------------------------

No comments:

Post a Comment