86. ಮಾಂಗಲ್ಯ ಭಾಗ್ಯ (1976)



ಮಾಂಗಲ್ಯ ಭಾಗ್ಯ ಚಿತ್ರದ ಹಾಡುಗಳು 
  1. ಆಸೆಯ ಭಾವ ಒಲವಿನ ಜೀವಾ 
  2. ಆಸೆಯ ಭಾವ ಒಲವಿನ ಜೀವಾ (ಎಸ್.ಪಿ.ಬಿ.)
  3. ಸೌಂದರ್ಯ ತುಂಬಿದೆ 
  4. ಕೇಳು ಮಗುವೇ ಕಥೆಯಾ 
  5. ಕಾಣುತಿರುವೇ ಪ್ರಣಯದಾಟವ 
  6. ಸ್ವಾಗತ ರಾಣಿಗೇ ಸುಸ್ವಾಗತ ಮಹಾರಾಣಿಗೆ 
ಮಾಂಗಲ್ಯ ಭಾಗ್ಯ (1976) - ಆಸೆಯ ಭಾವ ಒಲವಿನ ಜೀವ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಸ್. ಜಾನಕಿ 

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದಾ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ...
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಹೆಮ್ಮೆಯ ಹೆಚ್ಚಿಸುವಾ ಈ ನಡೆ ಗಂಭೀರ 
ಹಮ್ಮಿನ ಹೃದಯವೇ ಪ್ರೀತಿಯ ಸಾಗರ 
ಚೆನ್ನಿಗ ಚಂದಿರನ ಸ್ನೇಹದ ಕಾಣಿಕೆ 
ಹೊಂದಿದ ಭಾಗ್ಯವೂ ನನ್ನದು ಇಂದಿಗೇ 
ಪೂಜೆಯ ಪುಣ್ಯವೆಲ್ಲಾ ಕಣ್ಣ ಮುಂದೆ ಬಂದು ನಿಂತಿದೆ 
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಸನಿಹದ ಸುಖದಲ್ಲಿ ಸ್ನೇಹದ ಕಂಪಿನಲಿ 
ಸಂಯಮ ನಿಲ್ಲದೇ ಸಂಗಮ ಬೇಡಿದೆ 
ಕೂಡಿದ ಹೃದಯಗಳ ಹಂಬಲ ಕೈಸೇರಿ 
ಮೇರೆಯೇ ಇಲ್ಲದ ಮಧುರಕೆ ತುಂಬಿದೆ 
ಮಾಂಗಲ್ಯ ಭಾಗ್ಯವಿಂದ ಇಂದು ನಮ್ಮ ಬಾಳು ಬೆಳಗಿದೆ 
ಪ್ರೇಮದ ಜೋಡಿ ದೇವರ ಬೇಡಿ ಹಾಯಾಗಿ ಹಾಡಿದೆ 
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
ಆಸೆಯ ಭಾವ ಒಲವಿನ ಜೀವ... ಜೀವ ಒಂದಾಗಿ ಬಂದಿದೆ
--------------------------------------------------------------------------------------------------------------------------

ಮಾಂಗಲ್ಯ ಭಾಗ್ಯ (1976) - ಆಸೆಯ ಭಾವ ಒಲವಿನ ಜೀವ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಸ್. ಪಿ.ಬಿ.

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದಾ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ...
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆವೇ 
ಹೆಜ್ಜೆಯ ಭಾವಕೆ ಹಂಸವೆ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೆ ಚೇತನ
ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನೆಶೆ ತಾನೇರಿದಂತಿದೆ...
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ

ದೂರದ ಹೃದಯಗಳ ಸನಿಹದ ಬೇಗೆಯಲಿ
ವಿರಹದ ವೇದನೆ ಮುಗಿಲನು ಸೇರಿದೆ
ತೀರದ ದಾಹದಲಿ ಮೀರಿದ ಕಾತರಕೆ
ಮೇರೆಯೆ ಇಲ್ಲದ ತುಡಿತವು ತುಂಬಿದೆ
ಯಾವುದೊ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ...
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
--------------------------------------------------------------------------------------------------------------------------

ಮಾಂಗಲ್ಯ ಭಾಗ್ಯ (1976) - ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ

ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ

ಜನಕರಾಜ ಬೆಳೆಸಿದಾ ಮುದ್ದಿನ ವನಿತೆ
ಸುಖದ ಸೋಪಾನದಲ್ಲಿ ಸುಂದರಿ ಸೀತೆ
ಜಗದ ಮಲ್ಲರೆಲ್ಲರು....
ಜಗದ ಮಲ್ಲರೆಲ್ಲರು ಶರಣು ಎಂದ ಶಿವಧನು
ಎತ್ತಿದ ಶ್ರೀರಾಮನ ಮಡದಿಯಾದಳು ಸೀತೆ ಒಡತಿಯಾದಳು
ಆಸೆಯ ಸವಿಯಿಂದ ಮದುವೆಯ ಅನುಬಂಧ..
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ

ರಾಜನು ಶ್ರೀರಾಮನೆ ಆಗುವನೆಂದೂ
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದೂ
ರಾಜನು ಶ್ರೀರಾಮನೆ ಆಗುವನೆಂದೂ
ಪಟ್ಟ ಮಹಿಷಿ ಪಟ್ಟಕೆ ತಾನೇರುವೆನೆಂದೂ
ಕಟ್ಟಿದಂತ ಸೀತೆಯ ಕನಸ ಹೊನ್ನ ಗೋಪುರ
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ
ಉರಿದು ವಿಷದ ಮಾತಿನಿಂದ ತಂದಳು ಕಣ್ಣೀರ
ಮಂಥರೆ ತಂದಳು ಕಣ್ಣೀರ
ಆಸೆಯ ಸವಿಯಿಂದ ಮುಗಿಯಿತು ಆನಂದ..
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ

ವನವಾಸಿಯಾದಳು ಸಾರ್ವಭೌಮನ ರಾಣಿ
ನೆರಳಂತೆ ನಡೆದಳು ಸಹಧರ್ಮಿಣಿ
ಕಂಡೂ ಬಂಗಾರದ ಬಣ್ಣದ ಜಿಂಕೆ
ಸೀತೆ ಮನವ ಕಲಕಿತೂ ಮೋಸದ ಬಯಕೆ
ವಂಚನೆಯ ಸುಳಿ ತರಲು ಘೋರ ಅಗಲಿಕೆ
ವಂಚನೆಯ ಸುಳಿ ತರಲು ಘೋರ ಅಗಲಿಕೆ
ಗುರಿಯಾದಳು ಸೀತೆ ಅಪಾರ ಶೋಕಕೆ ಅಪಾರ ಶೋಕಕೆ
ಆಸೆಯ ಸವಿಯಿಂದ ಬವಣೆಯ ವಿಧಿ ತಂದ..
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ
ಜಗದ ತಾಯಿ ಜಾನಕಿಯ ಶೋಕದ ವಿಷಯ..
ಕೇಳು ಮಗುವೆ ಕಥೆಯ ಆಸೆ ತಂದ ವ್ಯಥೆಯ
--------------------------------------------------------------------------------------------------------------------------

ಮಾಂಗಲ್ಯ ಭಾಗ್ಯ (1976) - ಸೌಂದರ್ಯ ತುಂಬಿದೆ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್.ಜಾನಕೀ 


ಗಂಡು : ಹ್ಹಾ.. ಹ್ಹಾಂ ಹ್ಹಾಹ್ಹಾಹಹಾ ರಾರಾರಾರಾರಾರಾರಾ ಹೇಹೇಹೇ ಹ್ಹಾಂ ಹಾ...ಆಆಆ...
           ಸೌಂದರ್ಯ ತುಂಬಿದೆ ಸಂತೋಷ ತಂದಿದೆ
           ಎಂದೆಂದೂ ಕಾಣದ ಆಸೇ ಚಿಮ್ಮಿದೇ ಹಾಡು ಹೊಮ್ಮಿದೆ
           ಶೃಂಗಾರ ಕಾವ್ಯವೋ ಬೇಲೂರ ಶಿಲ್ಪವೋ ಹೆಣ್ಣಾಗಿ ಇಂದೂ ತಾ ಬಂದಿದೆ
           ಹಲೋ ಯುವರ್ ಸ್ವೀಟ್ ನೇಮ್ ಪ್ಲೀಸ್ (ಶೋಭಾ ) ಓ... ಫೆಂಟಾಸ್ಟಿಕ್ ಅಹ್ಹಹ್ಹಾ
           ಸೌಂದರ್ಯ ತುಂಬಿದೆ ಸಂತೋಷ ತಂದಿದೆ ಎಂದೆಂದೂ ಕಾಣದ ಶೋಭಾ
          ನಕ್ಕರೇ (ಅಹ್ಹಹ್ಹಹ್ಹಹ್ಹ) ಹಾಲೂ ಸಕ್ಕರೇ

ಗಂಡು : ಚೆಲುವಿಂದ ಕಲೆಯಾಗಿ ಬಂದರೇ ಕುಡಿನೋಟ ಖಣಿಯಾಗಿ ಕೊಂದರೇ
            ಸೋತಿತು ಈ ಮನ ಗೆದ್ದಿತೂ ಯೌವ್ವನ
            ನೂರೆಂಟೂ ಹೂ ನಗುವ ತೋಟಕೇ ಹಾರಾಡಿ ಮರಿ ದುಂಬಿ ಬಂದರೇ
            ಮಧುಮಾಸ ಕಾರಣ ಸವಿಜೇನ ಔತಣ ಹೀರುತಾ ಹಾರುವಾ ದುಂಬಿಗೇ ಸಂಭ್ರಮಾ
ಹೆಣ್ಣು : ವಾಟ್ ಶಾಲ್ ಆಯ್ ಕಾಲ್ ಯೂ (ಮೀ.. ಚಂದ್ರಮೋಹನ್ )  ಓ...
           ಸೌಂದರ್ಯ ತುಂಬಿದೆ ಸಂತೋಷ ತಂದಿದೆ
           ಎಂದೆಂದೂ ಕಾಣದ ಚಂದಿರ ಶೀತಲಾ ನೋಟದೀ ಚಂಚಲಾ...

ಹೆಣ್ಣು : ಅನುರಾಗ ಸ್ವರರಾಗವಾದರೇ (ಅಹ್ಹಹ್ಹಹ್ಹಾ...ಆಆಆ)
          ಶ್ರುತಿ ತಾಳ ಬೆರೆತಂತೇ ನಿಂತರೇ  (ರಾರಾರಾಹ್ಹಾಹಾಆಆಅ)
          ಗಂಡು ಹೆಣ್ಣು ಬಾಳಿಗೆ ಕಣ್ಣೂ
ಗಂಡು : ಬಳುಕಾಡೋ ಲತೇ ನೀನೂ ನಡೆದರೆ (ಅಹ್ಹಹ್ಹಹ್ಹಾ ..)
            ಇನಿದಾದ ಮೃದು ವೀಣೆ ನುಡಿದರೇ (ಅಹ್ಹಹ್ಹಹ್ಹಾ..)
            ಹಾಡುತ ನಿಂತರೇ ಸೊಬಗಿನ ಅಪ್ಸರೇ
ಇಬ್ಬರು : ಹುಣ್ಣಿಮೆ ಭೂಮಿಗೇ ಬಂದಿತು ಇಲ್ಲಿಗೇ
             ಸೌಂದರ್ಯ ತುಂಬಿದೆ ಸಂತೋಷ ತಂದಿದೆ
             ಎಂದೆಂದೂ ಕಾಣದ ಆಸೇ ಚಿಮ್ಮಿದೇ ಹಾಡು ಹೊಮ್ಮಿದೆ
            ಶೃಂಗಾರ ಕಾವ್ಯವೋ ಬೇಲೂರ ಶಿಲ್ಪವೋ ಹೆಣ್ಣಾಗಿ ಇಂದೂ ತಾ ಬಂದಿದೆ
            ಲಾ ಲಾ ಲ್ಲಲ್ಲಲಾ ಲಾ ಲಾ ಲಾಲಾ ಲಾ
-------------------------------------------------------------------------------------------------------------------------

ಮಾಂಗಲ್ಯ ಭಾಗ್ಯ (1976) - ಕಾಣುತಿರುವೇ ಪ್ರಣಯದಾಟವ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಗಾಯನ: ವಾಣಿಜಯರಾಂ 


ಕಾಣುತಿರುವೇ ಪ್ರಣಯದಾಟವ ಮಲೆನಾಡಿನ ಈ ಬೆಳಗಿನಲಿ
ಕಾಣುತಿರುವೇ ಪ್ರಣಯದಾಟವ ಮಲೆನಾಡಿನ ಈ ಬೆಳಗಿನಲಿ (ಆಆಆ)
ಕೇಳುತಿರುವೇ ಪ್ರೇಮರಾಗವ ಸುಳಿಗಳಿ ಅಲೆ ಅಲೆಗಳಲೀ..

(ಆಆಆ.. ಆಆಆ.. )
ನಾಚಿದೇ ಹೆಣ್ಣು ಬೆವತಿಹ ತೆರೆದಲಿ ಮಂಜದು ಕವಿದಿಹುದು..
ಚಿನ್ನದ ಕಿರಣದ ಸೂರ್ಯನ ಪ್ರಭೆಗೇ ಕರಿಗೀ ನೀರಾಗಿಹುದು
ಹಸಮಣೆ ವಧುವಿನ ನಸುನಗು ತೆರೆದಲೀ ಹಸಿರೇ ತುಂಬಿಹುದೂ ..
ಪ್ರಕೃತಿಯೇ ವಧುವೂ ಕಿರಣವೇ ವರದೂ ಮಿಲನಕೆ ಬಂದಿಹುದು
(ಆಆಆ.. ಆಆಆ..ಆಆಆ.. ಆಆಆ.. ಆಆಆ.. ಆಆಆ..  )
ಕಾಣುತಿರುವೇ ಪ್ರಣಯದಾಟವ ಮಲೆನಾಡಿನ ಈ ಬೆಳಗಿನಲಿ (ಆಆಆ)
ಕೇಳುತಿರುವೇ ಪ್ರೇಮರಾಗವ ಸುಳಿಗಳಿ ಅಲೆ ಅಲೆಗಳಲೀ..
(ಆಆಆ.. ಆಆಆ..ಆಆಆ.. ಆಆಆ.. ಆಆಆ.. ಆಆಆ..  )

ಎಲೆಗಳ ಕಲರವ ಝರಿಗಳ ಮೊರೆತ ವಾಲಗ ಊದಿಹುದೂ ..
ಹಕ್ಕಿಯ ಗಾನದ ಮಂತ್ರಘೋಶಕೇ ಜಗಕಣ್ಣತೆರೆದಿಹುದು
ಏಕಾಂತದನಿಸೀ ಮಿಲನದ ಉಷೆಗೇ ಮೆಲ್ಲನೇ ಕೊರಗಿಹುದೂ ..
ಪ್ರಕೃತಿಯ ಕಾಡೂ ಚುಂಬಿಸೇ ಬಾನೂ ಎಲ್ಲಡೇ ಬೆಳಕಿಹುದೋ
(ಆಆಆ.. ಆಆಆ..ಆಆಆ.. ಆಆಆ.. ಆಆಆ.. ಆಆಆ..  )
--------------------------------------------------------------------------------------------------------------------------

ಮಾಂಗಲ್ಯ ಭಾಗ್ಯ (1976) - ಸ್ವಾಗತ ರಾಣಿಗೇ ಸುಸ್ವಾಗತ ಮಹಾರಾಣೀಗೇ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಆರ್.ಏನ್.ಜಯಗೋಪಾಲ ಗಾಯನ: ವಾಣಿಜಯರಾಂ, ಕೋರಸ್  


ಕೋರಸ್ : ಲಲ್ಲಲಲ್ಲಲಲಲ್ಲಲ್ಲಾ ಲಲ್ಲಲಲ್ಲಲಲ್ಲಲ್ಲಾ...ಲಲ್ಲಲಲ್ಲಲಲ್ಲಲಲ್ಲಲ್ಲಾ 
                ಸ್ವಾಗತ ರಾಣಿಗೇ ಸುಸ್ವಾಗತ ಮಹಾರಾಣಿಗೆ 
                ನಮ್ಮೊಂದಿಗೇ ನಲಿದಾಡು ಬಾ ಸವಿ ಸೇರು ಬಾ ಜೊತೆ ನೀಡು ಬಾ 
ಹೆಣ್ಣು : ಈ ಮನದಲ್ಲಿ ನೂರು ಆಸೇ ಆಸೇ ಆಸೇ (ಆಸೇ ಆಸೇ ಆಸೇ )
           ಭಾಗ್ಯದ ಬಾಗಿಲೂ ಬಾಳಲಿ ತೆರೆಯಲೂ ಕನಸೆಲ್ಲವೂ ನನಸಾಗಿದೇ ಹೊಸ ಸಂಭ್ರಮ ನನಗಾಗಿದೇ       

ಹೆಣ್ಣು : ತಾರುಣ್ಯ ಬಂದೂ ಬಲೇ ಬೀಸಲೂ ಲಾವಣ್ಯ ನಿಂದೂ ಮೋಡಿ ಮಾಡಲೂ 
           ನನ್ನದೇ ತಂತಿಯೂ ತಾ ಮೀಟಲೂ (ಲಲ ) ಲಲ್ಲಲಲ (ಲಲ್ಲಲ್ಲಲಲ) ಲಲಲಲ್ಲಲ್ಲಲಾ 
           ಹೊಸ ಭಾವ ತುಂಬಿ ಹೊನಲಾಗಿದೇ ಹಾರೈಕೆ ಎಲ್ಲಾ ಈಡೇರಿದೇ 
           ಹರುಷದ ಕಂಪನ ಮೈ ತುಂಬಿದೇ...  ಮೈ ತುಂಬಿದೇ...  ಆಸೇ ಆಸೇ ಆಸೇ (ಆಸೇ ಆಸೇ ಆಸೇ )
ಕೋರಸ್ : ಸ್ವಾಗತ ರಾಣಿಗೇ ಸುಸ್ವಾಗತ ಮಹಾರಾಣಿಗೆ 
                ನಮ್ಮೊಂದಿಗೇ ನಲಿದಾಡು ಬಾ ಸವಿ ಸೇರು ಬಾ ಜೊತೆ ನೀಡು ಬಾ 
   
ಹೆಣ್ಣು : ಒಲವೆಂಬ ಮಹಲು ನಾನಾಳುವೇ ಮಹಾರಾಣಿಯಂತೇ ನಾ ಬಾಳುವೇ ಹೂವಿನ ಮಂಚದೀ ಓಲಾಡುವೇ .. 
          ಗುರಿಯನ್ನೂ ಜಯಸೀ ನಾ ಸಾಗುವೇ ನಿಮಗೆಲ್ಲ ನಾನೂ ನೆರಳಾಗುವೇ ಎಲ್ಲರ ಪ್ರೀತಿಯ ನಾ ಗೆಲ್ಲುವೇ .. 
          ನಾ ಗೆಲ್ಲುವೇ ..  ಆಸೇ ಆಸೇ ಆಸೇ (ಆಸೇ ಆಸೇ ಆಸೇ )
          ಭಾಗ್ಯದ ಬಾಗಿಲೂ ಬಾಳಲಿ ತೆರೆಯಲೂ ಕನಸೆಲ್ಲವೂ ನನಸಾಗಿದೇ ಹೊಸ ಸಂಭ್ರಮ ನನಗಾಗಿದೇ       
          ಈ ಮನದಲ್ಲಿ ನೂರು ಆಸೇ ಆಸೇ ಆಸೇ (ಆಸೇ ಆಸೇ ಆಸೇ )
ಕೋರಸ್ : ಸ್ವಾಗತ ರಾಣಿಗೇ ಸುಸ್ವಾಗತ ಮಹಾರಾಣಿಗೆ 
                ನಮ್ಮೊಂದಿಗೇ ನಲಿದಾಡು ಬಾ ಸವಿ ಸೇರು ಬಾ ಜೊತೆ ನೀಡು ಬಾ 
                ಲಾಲಲಾ ಲಲಲ್ಲಲ್ಲಾ ಲಾಲಲಾ ಲಲಲ್ಲಲ್ಲಾ ಲಾಲಲಾ ಲಲಲ್ಲಲ್ಲಾ ಲಾಲಲಾ ಲಲಲ್ಲಲ್ಲಾ 
--------------------------------------------------------------------------------------------------------------------------

No comments:

Post a Comment