153. ಚೆಲ್ಲಿದ ರಕ್ತ (೧೯೮೨)

ಚೆಲ್ಲಿದ ರಕ್ತ ಚಿತ್ರದ ಹಾಡುಗಳು 
  1. ಶಿವನೊಲಿದರೆ ಭಯವಿಲ್ಲ ಶಿವ ಮುನಿದರೆ ಬದುಕಿಲ್ಲ
  2. ಎಂದೂ ಇಲ್ಲದೇ ಇಂದೂ 
  3. ಓ ಮಾವನ ಮಗಳೇ 
  4. ಅಯ್ಯೋ ಅಬ್ಬಯ್ಯಾ 
ಚೆಲ್ಲಿದ ರಕ್ತ (೧೯೮೨)....ಶಿವನೊಲಿದರೆ ಭಯವಿಲ್ಲ
ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ಸತ್ಯಂ  ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಗಂಡು : ಶಿವನೊಲಿದರೆ ಭಯವಿಲ್ಲ....  ಶಿವ ಮುನಿದರೆ ಬದುಕಿಲ್ಲ ಶಿವನಲ್ಲದೇ ಹರನಲ್ಲದೇ...  ಗತಿಯಾರೂ ನಮಗಿಲ್ಲ
           ಜಟೆಯಲ್ಲಿ ಕಟ್ಟಿದ ನದಿಯ ತಲೆಯಲ್ಲಿ ಮುಡಿದ ಶಶಿಯ ಕಣ್ಣೊಳಗೆ ಉರಿವಾ ಬೆಂಕಿಯಾ ಬಚ್ಚಿಟ್ಟುಕೊಂಡು
           ನಗುವಾ ನಮ್ಮ ಶಿವನಾ ಕಂಡೆಯಾ ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ
           ಜಟೆಯಲ್ಲಿ ಕಟ್ಟಿದ ನದಿಯ ತಲೆಯಲ್ಲಿ ಮುಡಿದ ಶಶಿಯ ಕಣ್ಣೊಳಗೆ ಉರಿವಾ ಬೆಂಕಿಯಾ ಬಚ್ಚಿಟ್ಟುಕೊಂಡು
           ನಗುವಾ ನಮ್ಮ ಶಿವನಾ ಕಂಡೆಯಾ ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ
ಕೋರಸ್ :  ಶಂಭೋ ಶಂಕರ ಮಹದೇವ ಶಿವ ಶಂಭೋ ಶಂಕರ ಮಹದೇವ
           ಜಟೆಯಲ್ಲಿ ಕಟ್ಟಿದ ನದಿಯ ತಲೆಯಲ್ಲಿ ಮುಡಿದ ಶಶಿಯ ಕಣ್ಣೊಳಗೆ ಉರಿವಾ ಬೆಂಕಿಯಾ ಬಚ್ಚಿಟ್ಟುಕೊಂಡು
           ನಗುವಾ ನಮ್ಮ ಶಿವನಾ ಬಲ್ಲೆಯಾ ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ

ಗಂಡು : ಪಟ್ಟು ಪೀತಾoಬರವಿಲ್ಲ ಬoಗಾರದ ಒಡವೆಗಳಿಲ್ಲ...
           ಪಟ್ಟು ಪೀತಾoಬರವಿಲ್ಲ ಬoಗಾರದ ಒಡವೆಗಳಿಲ್ಲ ಬೂದಿಯನು ಬಳಿದು ಮೈಗೆಲ್ಲ
          ವಿಷ ಸರ್ಪ ಹಿಡಿದು ಕೊರಳಲ್ಲಿ ಸುತ್ತಿಕೊಂಡನು ಹಿಮಗಿರಿ ಏರಿ ಹಾಯಾಗಿ ಅಲ್ಲೀ ಕುಳಿತನು
ಕೋರಸ್ :  ಶಂಭೋ ಶಂಕರ ಮಹದೇವ ಶಿವ ಶಂಭೋ ಶಂಕರ ಮಹದೇವ

ಗಂಡು : ವಿಷವನ್ನೇ ಕುಡಿದಾ ಒಮ್ಮೆ ಯಮನ್ನನ್ನೇ ತಡೆದಾ ಒಮ್ಮೆ
            ವಿಷವನ್ನೇ ಕುಡಿದಾ ಒಮ್ಮೆ ಯಮನ್ನನ್ನೇ ತಡೆದಾ ಒಮ್ಮೆ ಭಕ್ತಿಗೇ ಮೆಚ್ಚಿ ಮತ್ತೊಮ್ಮೆ
            ಆತ್ಮಲಿಂಗವಾ ಭಕ್ತನಿಗೇ ಕೊಟ್ಟ ದೇವನು ಬೇಕೂ ಏನೂ ಕೈಲಾಸವನ್ನೂ ಕೊಡುವನು
ಕೋರಸ್ :  ಶಂಭೋ ಶಂಕರ ಮಹದೇವ ಶಿವ ಶಂಭೋ ಶಂಕರ ಮಹದೇವ

ಗಂಡು : ಹೂವನ್ನು ಬೇಡೋದಿಲ್ಲ ಹಣ್ಣನ್ನು ಕೇಳೋದಿಲ್ಲ.... ಆಆಆಅ.... ಓ..  ಆಆಆ
            ಹೂವನ್ನು ಬೇಡೋದಿಲ್ಲ ಹಣ್ಣನ್ನು ಕೇಳೋದಿಲ್ಲ ಹೊಗಳಿಕೆಯಾ ಎಂದೂ ಬಯಸೋಲ್ಲ
           ನೀಲಕಂಠ ಹೂವಂತಾ ಹೃದಯಾ ಹುಡುಕುವ ಹಣ್ಣಾದ ಮನವ ಕಂಡಾಗ ಅಲ್ಲೇ ನಿಲ್ಲುವಾ
           ಶ್ರೀ ಕಂಠಾ ಆನಂದವನ್ನೂ ನೀಡುವಾ
           ಜಟೆಯಲ್ಲಿ ಕಟ್ಟಿದ ನದಿಯ ತಲೆಯಲ್ಲಿ ಮುಡಿದ ಶಶಿಯ ಕಣ್ಣೊಳಗೆ ಉರಿವಾ ಬೆಂಕಿಯಾ ಬಚ್ಚಿಟ್ಟುಕೊಂಡು
           ನಗುವಾ ನಮ್ಮ ಶಿವನಾ ಬಲ್ಲೆಯಾ ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ
ಕೋರಸ್ :  ಶಂಭೋ ಶಂಕರ ಮಹದೇವ ಶಿವ ಶಂಭೋ ಶಂಕರ ಮಹದೇವ
--------------------------------------------------------------------------------------------------------------------------

ಚೆಲ್ಲಿದ ರಕ್ತ (೧೯೮೨) - ಎಂದೂ ಇಲ್ಲದೇ ಇಂದೂ ಹೆಣ್ಣೊಂದ ಕಂಡಾಗ ಗಯ್ಯಾಳಿ ಆಗಬೇಕೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಡಾ.ಎಸ್.ಪಿ.ಬಿ

ಎಂದೂ ಇಲ್ಲದೇ ಇಂದೂ ಹೆಣ್ಣೊಂದ ಕಂಡಾಗ ಗಯ್ಯಾಳಿ ಆಗಬೇಕೇ ಅವಳು ನೀ ಹೇಳೂ ಹೀಗೇಕೇ
ಕೆಂಪು ಹೂವೆಂದು ಕೊಂಡು ಕಂಪು ಉಂಟೆಂದು ಕೊಂಡು ಕೈ ಚಾಚಿ ಬಂದಾಗ ಶಿವನೇ ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೇ ಅದ ಕಂಡು ನಾ ಕೆಟ್ಟೇ... ಅಂದವ ನೀ ಕೊಟ್ಟೇ ಅದ ಕಂಡು ನಾ ಕೆಟ್ಟೇ

ನನ್ನನ್ನೂ ಕಂಡಾಗ ಗಂಡೇನೇ ನೀ ಅಂದಳಲ್ಲಾ ಓ ಶಿವನೇ ಗಂಡೇನೇ ನೀ ಅಂದಳಲ್ಲಾ
ಅಯ್ಯಯ್ಯಯ್ಯಯ್ಯ ಇವಳನ್ನೂ ನಾ ಬಂದೇ ಕಾಪಾಡಬೇಕಾಯಿತಲ್ಲ್ಲಾ ಶಿವನೇ ಕಾಪಾಡಬೇಕಾಯಿತಲ್ಲ್ಲಾ
ಈ ದುಂಡು ಮಲ್ಲಿಗೆಗೇ ಒಣ ಜಂಭ ಹೀಗೇಕೇ ಇವಳಾಸೆ ನನಗ್ಯಾಕೆ ಓ ಶಿವನೇ ಇವಳಾಸೆ ನನಗ್ಯಾಕೆ
ಅರೆರೆರೆರೇ ಎಂದೂ ಇಲ್ಲದೇ ಇಂದೂ ಹೆಣ್ಣೊಂದ ಕಂಡಾಗ ಗಯ್ಯಾಳಿ ಆಗಬೇಕೇ ಅವಳು ನೀ ಹೇಳೂ ಹೀಗೇಕೇ
ಅಂದವ ನೀ ಕೊಟ್ಟೇ ಅದ ಕಂಡು ನಾ ಕೆಟ್ಟೇ... ಅಂದವ ನೀ ಕೊಟ್ಟೇ ಅದ ಕಂಡು ನಾ ಕೆಟ್ಟೇ

ಹುಲಿಯನ್ನು ಹಿಡಿಯೋದು ಕಷ್ಟವೂ ನನಗಲ್ಲಾ ಅಹ್ಹ.. ಶಿವನೇ  ಕಷ್ಟವೂ ನನಗಲ್ಲಾ
ಹೆಣ್ಣನ್ನೂ ಗೆಲ್ಲೋದೂ ಇನ್ನೂ ಗೊತ್ತಿಲ್ಲಾ ಓ ಶಿವನೇ ಇನ್ನೂ ಗೊತ್ತಿಲ್ಲಾ
ಕಣ್ಣನ್ನೂ ಇಟ್ಟೋನೇ ಹೆಣ್ಣನ್ನೂ ಕೊಟ್ಟೋನೇ ಗತಿಯೇನೂ ನಾ ಕಾಣೇ ಓ ಶಿವನೇ ಗತಿಯೇನೂ ನಾ ಕಾಣೇ
ಅರೆರೆರೆರೇ ಎಂದೂ ಇಲ್ಲದೇ ಇಂದೂ ಹೆಣ್ಣೊಂದ ಕಂಡಾಗ ಗಯ್ಯಾಳಿ ಆಗಬೇಕೇ ಅವಳು ನೀ ಹೇಳೂ ಹೀಗೇಕೇ
ಕೆಂಪು ಹೂವೆಂದು ಕೊಂಡು ಕಂಪು ಉಂಟೆಂದು ಕೊಂಡು ಕೈ ಚಾಚಿ ಬಂದಾಗ ಶಿವನೇ ಮುಳ್ಳಾಯ್ತು ಹಿಡಿದಾಗ
ಅಂದವ ನೀ ಕೊಟ್ಟೇ ಅದ ಕಂಡು ನಾ ಕೆಟ್ಟೇ... ಅಂದವ ನೀ ಕೊಟ್ಟೇ ಅದ ಕಂಡು ನಾ ಕೆಟ್ಟೇ
--------------------------------------------------------------------------------------------------------------------------

ಚೆಲ್ಲಿದ ರಕ್ತ (೧೯೮೨) - ಓ ಮಾವನ ಮಗಳೇ ಇದೇ ನೋಟ ನನಗಂದೂ ನಗೆ ತಂದಿತೂ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಡಾ.ಎಸ್.ಪಿ.ಬಿ, ಪಿ.ಸುಶೀಲಾ

ಗಂಡು : ಓ.. ಮಾವನ ಮಗಳೇ...... ಹೇಹೇಹೇ....
           ಓ ಮಾವನ ಮಗಳೇ ಇದೇ ನೋಟ ನನಗಂದೂ ನಗೆ ತಂದಿತೂ
           ಇದೇ ನೋಟ ನನಗಂದೂ ನಗೆ ತಂದಿತೂ ಅದೇ ನೋಟ ನನಗಿಂದೂ ಜೋತೆಯಾಯಿತೂ
           ಅದೇ ನೋಟ ನನಗಿಂದೂ ಜೋತೆಯಾಯಿತೂ
ಹೆಣ್ಣು : ಅತ್ತೆಯ ಮಗನೇ ... ಹೇಹೇಹೇ
          ಓ.. ಅತ್ತೆಯ ಮಗನೇ ಇದೇ ನೋಟ ನನಕಂಡೂ ಕಹಿಯಾಯಿತೂ
          ಇದೇ ನೋಟ ನನಗಂದು ಕಹಿಯಾಯಿತೂ ಅದೇ ನೋಟ ನನಗಿಂದೂ ಜೊತೆಯಾಯಿತು
          ಅದೇ ನೋಟ ನನಗಿಂದೂ ಜೊತೆಯಾಯಿತು
ಗಂಡು : ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
ಹೆಣ್ಣು : ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ

ಹೆಣ್ಣು : ಬಾರೆಂದೂ ಕರೆತಂದೇ ಸವಿ ಸ್ನೇಹಕೇ  ಕಣ್ಣಲ್ಲಿ ಸೆರೆಹಿಡಿದೇ ಈ ಪ್ರೇಮಕೇ
          ಬಾರೆಂದೂ ಕರೆತಂದೇ ಸವಿ ಸ್ನೇಹಕೇ  ಕಣ್ಣಲ್ಲಿ ಸೆರೆಹಿಡಿದೇ ಈ ಪ್ರೇಮಕೇ
ಗಂಡು : ನೀ ನನ್ನ ಬಳಿಯಿರಲೂ ಈ ಜೀವನ...
           ನೀ ನನ್ನ ಬಳಿಯಿರಲೂ ಈ ಜೀವನ  ಸಂತೋಷ ತುಂಬಿರುವ ನವ ಚೇತನ
ಹೆಣ್ಣು : ಅತ್ತೆಯ ಮಗನೇ ... ಹೇಹೇಹೇ
          ಓ.. ಅತ್ತೆಯ ಮಗನೇ ಇದೇ ನೋಟ ನನಕಂಡೂ ಕಹಿಯಾಯಿತೂ
ಗಂಡು : ಅದೇ ನೋಟ ನನಗಿಂದೂ ಜೋತೆಯಾಯಿತೂ.. ಅದೇ ನೋಟ ನನಗಿಂದೂ ಜೋತೆಯಾಯಿತೂ

ಗಂಡು : ಬೆರ್ಪಟ್ಟೂ ಅಗಲಿದೆವೂ ವಿಧಿ ಸಂಚಿಗೇ ಅವನಿಂದೂ ಶುಭರಾಗ ನಮ್ಮ ಬಾಳಿಗೇ
            ಬೆರ್ಪಟ್ಟೂ ಅಗಲಿದೆವೂ ವಿಧಿ ಸಂಚಿಗೇ ಅವನಿಂದೂ ಶುಭರಾಗ ನಮ್ಮ ಬಾಳಿಗೇ
ಹೆಣ್ಣು : ದೊಡ್ಡವರ ಕನಸೆಲ್ಲಾ ನನಸಾಯಿತೂ... ದೊಡ್ಡವರ ಕನಸೆಲ್ಲಾ ನನಸಾಯಿತೂ
          ನಮ್ಮಾಸೇ ಚಿರಕಾಲ ಸುಖ ನೀಡಿತೂ   
ಗಂಡು : ಮಾವನ ಮಗಳೇ...... ಆಹಾಹಾ
           ಓ ಮಾವನ ಮಗಳೇ ಇದೇ ನೋಟ ನನಗಂದೂ ನಗೆ ತಂದಿತೂ
           ಇದೇ ನೋಟ ನನಗಂದೂ ನಗೆ ತಂದಿತೂ ಅದೇ ನೋಟ ನನಗಿಂದೂ ಜೋತೆಯಾಯಿತೂ
           ಅದೇ ನೋಟ ನನಗಿಂದೂ ಜೋತೆಯಾಯಿತೂ
ಹೆಣ್ಣು : ಅತ್ತೆಯ ಮಗನೇ ... ಹೇಹೇಹೇ
          ಓ.. ಅತ್ತೆಯ ಮಗನೇ ಇದೇ ನೋಟ ನನಕಂಡೂ ಕಹಿಯಾಯಿತೂ
          ಇದೇ ನೋಟ ನನಗಂದು ಕಹಿಯಾಯಿತೂ ಅದೇ ನೋಟ ನನಗಿಂದೂ ಜೊತೆಯಾಯಿತು
          ಅದೇ ನೋಟ ನನಗಿಂದೂ ಜೊತೆಯಾಯಿತು
ಗಂಡು : ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
ಹೆಣ್ಣು : ಲಲಲಲ್ಲಲ್ಲಲ್ಲಲಾ  ಲಲಲಲ್ಲಲ್ಲಲ್ಲಲಾ
--------------------------------------------------------------------------------------------------------------------------

ಚೆಲ್ಲಿದ ರಕ್ತ (೧೯೮೨) - ಅಯ್ಯೋ ಅಬ್ಬಯ್ಯಾ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ

ಹೇಯ್ ... ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ ಅರೇ.. ಓ.. ಆ... ಓ.. ಆ...
ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ ಅರೇ.. ಓ.. ಆ... ಓ.. ಅಹ್ಹ.....

ಹುಣ್ಣಿಮೆ ಬಂದಾಗ ಎಲ್ಲಿಗೇ ಹೋಗಿದ್ದೇ ಹುಣ್ಣಿಮೆ ರಾತ್ರಿಲೀ ಎಲ್ಲಿ ನಿಂತಿದ್ದೇ
ಹುಣ್ಣಿಮೆ ಬಂದಾಗ ಎಲ್ಲಿಗೇ ಹೋಗಿದ್ದೇ ಹುಣ್ಣಿಮೆ ರಾತ್ರಿಲೀ ಎಲ್ಲಿ ನಿಂತಿದ್ದೇ
ಸಣ್ಣಾನೆ ನಡುವಿನ ಹೆಣ್ಣೊಂದು ಕಂಡಾಗ ಕಣ್ಣು ಕಣ್ಣು ಏಕೇ ಬಿಡುತೀಯಾ
ನಾನೀಗ ಒಲ್ಲೆ ಹೋಗಯ್ಯಾ ... ಆ.. ನಾನೀಗ ಒಲ್ಲೆ ಹೋಗಯ್ಯಾ ..
ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ ಅರೇ.. ಓ.. ಆ... ಓ..ಓ..ಓ.. ಅಹ್..ಆಹ್ ... ಆಹ್

ಕತ್ತಾಲೂ ಬಂದಾಗ ಅಲ್ಲೇ ನಿಂತಿದ್ದೇ ಸುತ್ತಾಲೂ ಯಾರಿಲ್ಲ ಒಂಟಿಯಾಗಿದ್ದೇ
ಅಹ್..   ಕತ್ತಾಲೂ ಬಂದಾಗ ಅಲ್ಲೇ ನಿಂತಿದ್ದೇ ಸುತ್ತಾಲೂ ಯಾರಿಲ್ಲ ಒಂಟಿಯಾಗಿದ್ದೇ
ಅತ್ತಿತ್ತ ನೋಡುತ್ತ ಮೇತ್ತಾಗೇ ಹಾಡುತ್ತ ಓತ್ತೊಂದು ಕೊಡಲೂ ಕಾದಿದ್ದೇ
ಅತ್ತೆಯ ಮಗನೇ ಎಲ್ಲಿದ್ದೇ...  ಓಯ್ ಅತ್ತೆಯ ಮಗನೇ ಎಲ್ಲಿದ್ದೇ
ಅಯ್ಯೋ ಅಬ್ಬಯ್ಯ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯ ಬೇಡ ಸುಬ್ಬಯ್ಯ
ನಾಳೆ ಬಾರಯ್ಯಾ ನಾಳೇ ಬಾರಯ್ಯಾ ಅರೇ.. ಓ.. ಆ... ಓ..ಓ..ಓ.. ಹೇಹೇಹೇ ಅಹ್..ಆಹ್ ... ಆಹ್
--------------------------------------------------------------------------------------------------------------------------

No comments:

Post a Comment