76. ಹಾಲುಜೇನು (೧೯೮೨)



ಹಾಲು ಜೇನು ಚಿತ್ರದ ಹಾಡುಗಳು 
  1. ಆನೆಯ ಮೇಲೆ ಅಂಬಾರಿ ಕಂಡೆ 
  2. ಹಾಯಾಗಿ ಕುಳಿತಿರು ನೀನು ಮಹಾರಾಣಿಯ ಹಾಗೆ 
  3. ಬಾಳು ಬೆಳಕಾಯಿತು 
  4. ಹಾಲು ಜೇನು ಒಂದಾದ ಹಾಗೆ 
  5. ಪೊಗದಿರಲೊ ರಂಗಾ 
ಹಾಲುಜೇನು (೧೯೮೨) ..........ಆನೆಯ ಮೇಲೆ ಅಂಬಾರಿ ಕಂಡೆ
ಸಾಹಿತ್ಯ : ಚಿ.ಉದಯಶಂಕರ   ಸಂಗೀತ : ಜಿ.ಕೆ.ವೆಂಕಟೇಶ್  ಗಾಯನ : ಡಾ.ರಾಜಕುಮಾರ್ ಮತ್ತು ಸುಲೋಚನಾ

ಡಾ.ರಾಜಕುಮಾರ್ :   ಆನೆಯ ಮೇಲೆ ಅಂಬಾರಿ ಕಂಡೆ
                               ಅಂಬಾರಿ ಒಳಗೆ ನಿನ್ನ ಕಂಡೆ
                               ಆನೆಯ ಮೇಲೆ ಅಂಬಾರಿ ಕಂಡೆ
                              ಅಂಬಾರಿ ಒಳಗೆ ನಿನ್ನ ಕಂಡೆ
                               ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಸುಲೋಚನಾ :   ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
                        ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
                         ಜೊತೆಯಲ್ಲಿ ನನ್ನೇ ನಾ ಕಂಡೆ
ಡಾ.ರಾಜಕುಮಾರ್ :  ಆನೆಯ ಮೇಲೆ ಅಂಬಾರಿ ಕಂಡೆ   ಅಂಬಾರಿ ಒಳಗೆ ನಿನ್ನ ಕಂಡೆ
                              ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ

ಡಾ.ರಾಜಕುಮಾರ್ :  ಬೃಂದಾವನದಲಿ ನೀರಿನ ಚಿಲುಮೆ ಕಂಡೆ
                              ಬಣ್ಣದ ಬೆಳಕಲಿ ನಲಿವ ನಿನ್ನ ಕಂಡೆ
                              ನಿನ್ನ ನಡು ಬಳಸಿ ನಿಂತ ನನ್ನೇ ಕಂಡೆ
ಸುಲೋಚನಾ :  ಬೇಲೂರ ಗುಡಿಯಲ್ಲಿ ಹೆಣ್ಣಿನ ಗೊಂಬೆ ಕಂಡೆ
                       ಅವಳ ಅಂದ ಕಂಡು ಸೋತು ಮೋಹಗೊಂಡು   ನಿಂತ ನಿನ್ನ ಕಂಡೆ
ಡಾ.ರಾಜಕುಮಾರ್ : ಆನೆಯ ಮೇಲೆ ಅಂಬಾರಿ ಕಂಡೆ   ಅಂಬಾರಿ ಒಳಗೆ ನಿನ್ನ ಕಂಡೆ
                             ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಸುಲೋಚನಾ : ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
                      ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
                      ಜೊತೆಯಲ್ಲಿ ನನ್ನೇ ನಾ ಕಂಡೆ

ಸುಲೋಚನಾ : ಶ್ರೀರಂಗಪಟ್ಟಣದೆ ರಂಗನ ಗುಡಿಯ ಕಂಡೆ
                      ಶ್ರೀರಂಗನಾಥನಂತೆ ಮಲಗಿಹ ನಿನ್ನ ಕಂಡೆ
                      ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
                      ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
ಡಾ.ರಾಜಕುಮಾರ್ :  ಹಾಲಿನ ಕಡಲಿಂದ ಬಂದ ನಿನ್ನ ಕಂಡೆ
                              ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ ನಲಿವ ನನ್ನೇ ಕಂಡೆ
ಡಾ.ರಾಜಕುಮಾರ್ : ಆನೆಯ ಮೇಲೆ ಅಂಬಾರಿ ಕಂಡೆ   ಅಂಬಾರಿ ಒಳಗೆ ನಿನ್ನ ಕಂಡೆ
                             ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಸುಲೋಚನಾ : ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
                      ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
                      ಜೊತೆಯಲ್ಲಿ ನನ್ನೇ ನಾ ಕಂಡೆ
ಡಾ.ರಾಜಕುಮಾರ್ : ಆನೆಯ ಮೇಲೆ ಅಂಬಾರಿ ಕಂಡೆ
                             ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ
                             ಏನಪ್ಪ ಮಾಡೋದೀವಾಗಾ...
--------------------------------------------------------------------------------------------------------------------------

ಹಾಲು ಜೇನು (೧೯೮೨) ..............ಬಾಳು ಬೆಳಕಾಯಿತು ಪ್ರ್ರೇಮದ ಹೂವೆ
ಸಾಹಿತ್ಯ : ಚಿ. ಉದಯಶಂಕರ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ರಾಜಕುಮಾರ್

ಹ್ಹುಂ.......ಹ್ಹುಂ.......ಹ್ಹುಂ.......
ಬಾಳು ಬೆಳಕಾಯಿತು ಬಾಳು ಬೆಳಕಾಯಿತು
ಪ್ರೇಮದ ಹೂವೆ ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು

ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲಿ ಇಂದು ಬೆರೆಯಲುಇಂದು
ನನ್ನ ನಿನ್ನ ಜೀವ ಚಿನ್ನ ಒಲವಿನ ಹೂವೆ
ಬಾಳು ಬೆಳಕಾಯಿತು ಬಾಳು ಬೆಳಕಾಯಿತು
ಪ್ರೇಮದ ಹೂವೆ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು

ರಾಗವು ನೀನು ಭಾವವು ನೀನು
ರಾಗವು ನೀನು ಭಾವವು ನೀನು
ನನ್ನೆದೆ ವೀಣೆ......ಆ.....ಆ......ಆ.......
ನನ್ನೆದೆ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೆ
ಬಾಳು ಬೆಳಕಾಯಿತು
ಪ್ರೇಮದ ಹೂವೆ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು
ದೇಹವು ನಾನು ಪ್ರಾಣವು ನೀನು
ದೇಹವು ನಾನು ಪ್ರಾಣವು ನೀನು
ಅಗಲುವುದುಂಟೆ ಇನ್ನು ನಿನ್ನ ನಾನು ಹೇಳು
ಒಲವಿನ ಹೂವೆ
ಬಾಳು ಬೆಳಕಾಯಿತು
ಪ್ರೇಮದ ಹೂವೆ ಪ್ರೇಮದ ಹೂವೆ ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು
-------------------------------------------------------------------------------------------------------------------------

ಹಾಲುಜೇನು (1982) - ಹಾಲು ಜೇನು ಒಂದಾದ ಹಾಗೆ
ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಡಾ.ರಾಜ್‍ಕುಮಾರ್ ಸಂಗೀತ: ಜಿ.ಕೆ.ವೆಂಕಟೇಶ್


ಹಾಲುಜೇನು ಒಂದಾದ ಹಾಗೆ
ನನ್ನ ನಿನ್ನ ಜೀವನ ||ಪಲ್ಲವಿ||

ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ  ||ಪಲ್ಲವಿ||

ಬಿಸಿಲಾಗಲಿ, ಮಳೆಯಾಗಲಿ, ನೆರಳಾಗಿ ನಾನು ಬರುವೆನು ಜೊತೆಗೆ |೨|
ಸವಿಮಾತಲಿ ಸುಖನೀಡುವೆ,ಎಂದೆಂದಿಗೂ ಹೀಗೆ
ಹೂವಾಗಲಿ ಈ ಮೊಗವರಳಿ, ಸಂತೋಷದ ಪರಿಮಳ ಚೆಲ್ಲಿ |೨|
ಹಾಯಾಗಿರೂ ||ಪಲ್ಲವಿ||

ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಕೊರಗಿದೆ ಚೆಲುವೆ |೨|
ಇಂದೇತಕೆ ಈ ಮೌನವು, ಹೀಗೇಕೆ ನೀನಿರುವೆ
ನೀನೇತಕೆ ಬಾಡುವೆ ಕೊರಗಿ, ನಾನಿಲ್ಲವೇ ಆಸರೆಯಾಗಿ |೨|
ಹಾಯಾಗಿರೂ  ||ಪಲ್ಲವಿ||
ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ ||ಪಲ್ಲವಿ||
-----------------------------------------------------------------------------------------------------------------------

ಹಾಲುಜೇನು (೧೯೮೨)............ಪೋಗಾದಿರೆಲೋ ರಂಗ ಬಾಗಿಲಿನಿಂದಾಚೆ

ಸಾಹಿತ್ಯ : ಶ್ರೀಪುರಂದರದಾಸರು  ಸಂಗೀತ : ಜಿ.ಕೆ.ವೆಂಕಟೇಶ್  ಗಾಯನ : ಎಸ್.ಜಾನಕಿ


ಪೋಗಾದಿರೆಲೋ ರಂಗ ಪೋಗಾದಿರೆಲೋ ರಂಗ ಬಾಗಿಲಿನಿಂದಾಚೆ 
ಪೋಗಾದಿರೆಲೋ ರಂಗ ಭಾಗವತರು ಕಂಡು ಎತ್ತಿಕೊಂಡೊಯ್ವರು 
ಪೋಗಾದಿರೆಲೋ ರಂಗ

ಸುರಮುನಿಗಳು ತಮ್ಮ ಹೃದಯ ಕಮಲಿದಲ್ಲಿ
ಸುರಮುನಿಗಳು ತಮ್ಮ ಹೃದಯ ಕಮಲಿದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರದೆತ್ತಿಕೊಂಬುವರು
ಪೋಗಾದಿರೆಲೋ ರಂಗ

ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿದರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲೀತು ಕರಕೆಂದು
ಬೇಗಾದಿಂದಲಿ ಬಂದು ಬಿಗಿದಪ್ಪಿಕೊಂಬುವರು
ಪೋಗಾದಿರೆಲೋ ರಂಗ

ಇತ್ತ ನಾರಿಯರೆಲ್ಲ ಇಷ್ಟವಾ ಸಲ್ಲಿಸೆಂದು
ಇತ್ತ ನಾರಿಯರೆಲ್ಲ ಇಷ್ಟವಾ ಸಲ್ಲಿಸೆಂದು
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೋ
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೋ
ಸೃಷ್ಟೀಶ ಪುರಂದರವಿಠಲರಾಯನೆ
ಸೃಷ್ಟೀಶ ಪುರಂದರವಿಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನು ರಂಗಯ್ಯ
ಪೋಗಾದಿರೆಲೋ ರಂಗ
ಪೋಗಾದಿರೆಲೋ ರಂಗ ಬಾಗಿಲಿನಿಂದಾಚೆ
ಪೋಗಾದಿರೆಲೋ ರಂಗ
------------------------------------------------------------------------------------------------------------------------

ಹಾಲು ಜೇನು (೧೯೮೨)
ರಚನೆ: ಚಿ. ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್  ಗಾಯಕ/ನಟ: ಡಾ. ರಾಜಕುಮಾರ್

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, 
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತಲೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ,ನೀನೆ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, 
ಮಹಾರಾಣಿಯ ಹಾಗೆ

ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ
ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ, ಮಹನೀಯರಲ್ಲವೇ
ನೆನ್ನೆಯ ತನಕ ನೀನೆ ದುಡಿದೆ, ಈ ಸಂಸಾರಕೆ ಜೀವ ತೈದೆ
ಈ ದಿನವಾದರು ನಿನ್ನ, ಸೇವೆಯ ಮಾಡುವೆ ಚಿನ್ನ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, 
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತಲೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ, ನೀನೆ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ

ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ 
ಮನಸನು ಅರಿತು ನೆಡೆಯುತಲಿರಲು ಚಿಂತೆಯ ಮಾತೇಕೆ
ನೀ ನಗುತಿರಲು ನಮ್ಮೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿಯಲ್ಲ, ಗಂಡನು ದೇವರು ಅಲ್ಲ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, 
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತಲೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ,ನೀನೆ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ
---------------------------------------------------------------------------------------------------------------------



No comments:

Post a Comment