157. ಜನುಮದ ಜೋಡಿ (1996)


ಜನುಮದ ಜೋಡಿ ಚಿತ್ರದ ಹಾಡುಗಳು 
  1. ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ
  2. ಇವನ್ಯಾರ ಮಗನೋ ಹಿಂಗವ್ನಲ್ಲ
  3. ಜನುಮ ಜೋಡಿ ಆದರು ಏಕೆ ಅಂತರ
  4. ಜನುಮದ ಜೋಡಿ ನೀನು ಕನಕ ಕನಕ
  5. ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
  6. ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
  7. ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ
  8. ಹೇ... ಊರ ದ್ಯಾವರೇ  ಓ ಬೇರೇ ದ್ಯಾವರೇ
  9. ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ 
ಜನುಮದ ಜೋಡಿ (1996) - ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ
ಸಂಗೀತ: ವಿ.ಮನೋಹರ್ ಸಾಹಿತ್ಯ: ವಿ.ಮನೋಹರ್, ಗಾಯನ : ಡಾ|| ರಾಜಕುಮಾರ್

 ಹೇ... ಹೇ.. ಹೇ... ಓಓಓ...
ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ
ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ...
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ  ....

ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ ಪುಟ್ಟ ಧೂಪ ದೀಪದಿ ಶಿವನಿಲ್ಲಾ ....
ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ ಜಪ ತಪ ವ್ರತದಲ್ಲಿ ಅವನಿಲ್ಲಾ..
ಮಣ್ಣ ಕಣ ಕಣದಲ್ಲೂ... ಜೀವ ಜೀವಗಳಲ್ಲೂ...ಒಳಗಿನ ಕಣ್ಣಿಗೆ ಕಾಣುವಾತನು
ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿಕೆ ನಿಜ ... ಆಆಆ.. 
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ.. ಆಆಆ

ಮೇಳು ಕೀಳಿನ ನಡತೆ ಹಾದಿ ತಪ್ಪಿದ ಜಡತೆ ಕುಲ ವ್ಯಾಕುಲಗಳು ಸರಿಯೇನು...
ರೋಷ ದ್ವೇಷದ ಉರಿಯು ಲೋಭ ಮೋಸದ ಪರಿಯು ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು  ಸತ್ಯದ ಪಥವೇ ಬೆಳ್ಳಿ ಬೆಳಕು
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ... ಆಆಆ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ.. ಆಆಆ
ವೈಭೋಗ ಜೀವನ ತ್ಯಾಗವ ಮಾಡಿ ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ... ಆಆಆ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ.. ಆಆಆ
ಆಆಆ ... ಆಆಆ... ಆಆಆ.. ಆಆಆ...
--------------------------------------------------------------------------------------------------------------------------

ಜನುಮದ ಜೋಡಿ (1996) - ಇವನ್ಯಾರ ಮಗನೋ
ಸಾಹಿತ್ಯ, ಸಂಗೀತ: ವಿ.ಮನೋಹರ್ ಹಾಡಿರುವವರು: ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್

ಹೆಣ್ಣು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ ಹೇ..ಹೆಹೆಹೆಹೆ ಹೇ..ಹೆಹೆಹೆಹೆ
ಗಂಡು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ ಹೇ..ಹೆಹೆಹೆಹೆ ಹೇ..ಹೆಹೆಹೆಹೆ
ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ
ಗಂಡು : ಮಾಲಕ್ಷ್ಮಿ ರೂಪ    ಹೆಣ್ಣು : ಶೂರ ಈ ಭೂಪ
ಗಂಡು : ಮಾಲಕ್ಷ್ಮಿ ರೂಪ    ಹೆಣ್ಣು : ಶೂರ ಈ ಭೂಪ
ಗಂಡು : ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ
ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ

ಕೋರಸ್ : ತನಂ ತನಂ ತನಂ ತನಂ ತನಂ ತನಂ ತನಂ ತನಂ 
ಹೆಣ್ಣು : ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು  ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು
ಗಂಡು : ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಶುರುವಾಯ್ತು
          ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ
ಹೆಣ್ಣು : ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
ಗಂಡು : ಇವಳೇನ ಸಿರಿದೇವಿ ಹಾಂ ಹಾಂ ಹಾಂ
ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ              .
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ   

ಕೋರಸ್ : ತನಂ ತನಂ ತನಂ ತನಂ ಓಹೋಹೊ ಒಹೋಹೋ  ಆಆ ಆಅ 
ಹೆಣ್ಣು : ಓ.. ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ ಶಿವನೇ ಅವತಾರನ ಎತ್ತಿ ಬಂದಾನೊ
ಗಂಡು : ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ ಪಾರ್ವತಿ ಈ ವೇಷ ತಾಳಿ ಬಂದಾಳೊ
ಹೆಣ್ಣು : ಏನು ಇವನ ಆಸೆ ಒಳಗೆ ಯಾರ ಪಟವ ಕಾಣೆ
ಗಂಡು : ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ
ಹೆಣ್ಣು : ಒಲಿದಾರೆ ಇವನಿಗೆ ಹಾಂ ಹಾಂ ಹಾಂ ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ
ಗಂಡು : ಮಾಲಕ್ಷ್ಮಿ ರೂಪ    ಹೆಣ್ಣು : ಶೂರ ಈ ಭೂಪ
ಗಂಡು : ಮಾಲಕ್ಷ್ಮಿ ರೂಪ    ಹೆಣ್ಣು : ಶೂರ ಈ ಭೂಪ
ಗಂಡು : ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ
ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ              .
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ   
-----------------------------------------------------------------------------------------------------------------

ಜನುಮದ ಜೋಡಿ (1996) - ಜನುಮ ಜೋಡಿ ಆದರು
ಸಾಹಿತ್ಯ, ಸಂಗೀತ: ವಿ.ಮನೋಹರ್ ಹಾಡಿರುವವರು: ಡಾ||ರಾಜ್


ಜನುಮ ಜೋಡಿ ಆದರೂ ಏಕೆ ಅಂತರ ಜೀವ ಜೀವ ನಡುವಲಿ ಏಕೆ ಕಂದರ
ಮಧುರ ಗೀತೆ ಕೂಡ ಹೀಗೇಕೆ ಘೋರ 
ಜನುಮ ಜೋಡಿ ಆದರೂ ಏಕೆ ಅಂತರ ಜೀವ ಜೀವ ನಡುವಲಿ ಏಕೆ ಕಂದರ

(ಆಆಆಆಆಆ  ಆಆಆಆಆಆ )
ಕಡಲೀನ ಒಡಲು ಮುಗಿಲೀನ ಸಿಡಿಲು ಮಳೆ ಮಿಂಚು ಸೆಳೆತ ಬಾಳೆಲ್ಲವು
ಎಲೆ ಮೇಲೆ ಹನಿಯು ಮುತ್ತಂಥ ಮಣಿಯು ಬಿರುಗಾಳಿ ಬೀಸಿ ಸುಳಿಯಾದವು
ನೆರೆ ಬಂದು ಸೆರೆಯಾಯ್ತು ಎದೆಯಾಳದಿ ಕಣ್ಣೀರೆ ಮಾತಾಯ್ತು ಮನದಾಳದಿ
ಹೊರಗೆ ನಗೆಯ ಲೀಲೆ ಒಳಗೆ ಜ್ವಾಲೆ
ಜನುಮ ಜೋಡಿ ಆದರೂ ಏಕೆ ಅಂತರ ಜೀವ ಜೀವ ನಡುವಲಿ ಏಕೆ ಕಂದರ

(ಆಆಆಆಆಆ  ಆಆಆಆಆಆ )
ಕನಸೆಲ್ಲ ಬೆಂದು ಬರಿದಾಗೊ ಬದಲು ನನಸಾಗೊ ವೇಳೆ ಬರಬಾರದೆ
ಈ ಜೀವವೆರಡು ಒಂದೊಂದು ತೀರ ದಡ ತೋರೊ ದೋಣಿ ಸಿಗಬಾರದೆ
ಶುಭದ ಶಕುನವೆ ವರವಾಗು ಬಾ ಅಂಗೈಯ ಗೆರೆಯೆ ಬದಲಾಗಿ ಬಾ
ಕರಗಲೀಗ ಬೇಗ ಕರಿಮುಗಿಲು ದೂರ
ಜನುಮ ಜೋಡಿ ಆದರೂ ಏಕೆ ಅಂತರ ಜೀವ ಜೀವ ನಡುವಲಿ ಏಕೆ ಕಂದರ
ಮಧುರ ಗೀತೆ ಕೂಡ ಹೀಗೇಕೆ ಘೋರ 
(ಆಆಆಆಆಆ  ಆಆಆಆಆಆ ) 
-----------------------------------------------------------------------------------------------------------------

ಜನುಮದ ಜೋಡಿ (1996) - ಜನುಮದ ಜೋಡಿ ನೀನು
ಸಾಹಿತ್ಯ : ದೊಡ್ಡರಂಗೇಗೌಡ, ಸಂಗೀತ: ವಿ.ಮನೋಹರ್ ಹಾಡಿರುವವರು: ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್

ಕೋರಸ್ : ತಮನಂ ನಮ  ತಮನಂ ನಮ ತಮನಂ ನಮ ತಮನಂ ನಮ
               ತಮನಂ ನಮ  ತಮನಂ ನಮ ತಮನಂ ನಮ ತಮನಂ ನಮ
ಗಂ:   ಜನುಮದ ಜೋಡಿ ನೀನು ಕನಕ ಕನಕ  ಹುಡುಗನ ಪ್ರಾಣ ನೀನು ಕೊನೆಯ ತನಕ
       ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ
       ಹೇ.. ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ  ಮಾಲೆ ಮಾಲೆ ಮಾಲೆ ಮಾಲೆ ಮಲ್ಲೆ ಹೂಮಾಲೆ
ಹೆ:  ಜನುಮದ ಜೋಡಿ ನೀನೆ ಪ್ರಾಣ ಪದಕ  ಉಸಿರಾದೆ ನೀನು ನನ್ನ ಕೊನೆಯ ತನಕ

ಹೆ:  ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ  ಕಣ್ಣಲ್ಲೆ ತೊಡಿಸಿದೆ ನೀ ಮುತ್ತಿನ ಒಡವೆ
ಗ:   ಒಡವೆ ತೊಡದೇನೆಯೂ ಚೆಲುವೇರ ಚೆಲುವೆ   ಎದೆ ತುಂಬಿಕೊಳ್ಳಲು ನಿನ್ನಾ ಪಡೆವೆ
ಹೆ:  ನಿನ್ನ ಪ್ರೀತಿ ಚಿಲುಮೆಯೆ ಎಂದೆಂದಿಗೂ  ಗೆಲುವ ತರುವ ವರವೆ
ಗಂ:  ಅದು ಯಾವ ಜನುಮದಲೊ ಆಗೈತೆ  ನನಗು ನಿನಗು ಮದುವೆ
ಹೆ: ನಿನ್ನ ಜೋಡಿ ಮಾಡಿದ ಆ ದೇವಗೆ  ಕೈಯ್ಯ ಮುಗಿವೆ ಮುಗಿವೆ
ಗಂ:   ಜನುಮದ ಜೋಡಿ ನೀನು ಕನಕ ಕನಕ  ಹುಡುಗನ ಪ್ರಾಣ ನೀನು ಕೊನೆಯ ತನಕ

ಕೋರಸ್ : ಆ ಆ ಆ ಅ  ಆ ಆ ಆ ಅ ಆ ಆ ಆ ಅ  ಆ ಆ ಆ ಅ ಆ ಆ ಆ ಅ  ಆ ಆ ಆ ಅ
ಗಂ: ಮೊದಲನೆಯ ನೋಟದಾಗೆ ಸೆಳೆದೆ ನೀ ಮನಸ  ಶಿವರಾತ್ರಿ ತಂದೆ ನೀ ದಿವಸ ದಿವಸ
ಹೆ: ನಂಗೂ ಹಂಗಾಗೈತೆ ಕೇಳಯ್ಯ ಅರಸ  ಒಳಗೊಳಗೆ ಹಾಡೈತೆ ಹೃದಯ ಸರಸ
ಗಂ:  ನೆಲ ಮುಗಿಲು ಸೇರಿದರು ಬೇರಾಗದು  ನಮ್ಮ ಬಾಳ ಕಳಸ
ಹೆ: ಒಡಲಾಳ ಚಂದದಲಿ ಹೇಳೈತೆ ಪ್ರೀತಿ ಕಥೆಯ ಸೊಗಸ
ಗಂ: ನಮ್ಮ ಬದುಕ ಹರಕೆಯ ಪೂರೈಸಲು ದಿನವು ಹರುಷ ಹರುಷ
ಹೆ:  ಜನುಮದ ಜೋಡಿ ನೀನೆ ಪ್ರಾಣ ಪದಕ  ಉಸಿರಾದೆ ನೀನು ನನ್ನ ಕೊನೆಯ ತನಕ
      ಇದು ಯಾವ ದೈವ ಲೀಲೆ ಮನಸಾಯ್ತು ನಿನ್ನ ಮೇಲೆ
      ಇದು ಯಾವ ದೈವ ಲೀಲೆ ಮನಸಾಯ್ತು ನಿನ್ನ ಮೇಲೆ ಮೇಲೆ ಮೇಲೆ ಮೇಲೆ ಮೇಲೆ ತೇಲಿ ಹೋದೆನೂ
ಗಂ:  ಹೊಯ್.. ಜನುಮದ ಜೋಡಿ ನೀನು ಕನಕ ಕನಕ  ಹುಡುಗನ ಪ್ರಾಣ ನೀನು ಕೊನೆಯ ತನಕ
-----------------------------------------------------------------------------------------------------------------------

ಜನುಮದ ಜೋಡಿ (1996) - ಮಣಿ ಮಣಿ ಮಣಿ ಮಣಿಗೊಂದು
ಸಾಹಿತ್ಯ, ಸಂಗೀತ: ವಿ.ಮನೋಹರ್ ಹಾಡಿರುವವರು: ಶಿವರಾಜಕುಮಾರ, ಮಂಜುಳ ಗುರುರಾಜ್


ಗಂ : ಹ್ಞೂ ಹ್ಞೂ ಹ್ಞೂ ಹ್ಞೂ ಹ್ಞೂ.........
        ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
        ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ
        ತಾನಿ ತಂದಾನ ತಂದನ ತಂದಾನ ತಂದನ ತಂದಾನ ತಂದನ ತಂದಾನನ
       ತಾನಿ ತಂದಾನಿ ತಂದಾನ ತಂದಾನಿ ತಂದಾನ ತಂದಾನ ತಂದಾನ ತಂದಾನನ
       ನಿನ್ನ ಹೆಸರೇನೋ ಮಣಿ ಅಂತ ಗೊತ್ತಾಯ್ತು.
       ಆದರೆ ಮಣಿ ಜೊತೆ ಇರೋ ದಾರದ ಹೆಸರೇ ಗೊತ್ತಾಗ್ಲಿಲ್ವಲ್ಲೇ....ಏಏಏಏಏ
ಹೆ ; ಮಣಿ ಜೊತೆ ದಾರ ಇರಲ್ಲ. ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೇ ಮಣಿ
ಗಂ : ಗೊತ್ತಾಯ್ತ ಗೊತ್ತಾಯ್ತ. ಆದರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ
         ಒಸಿ ಉದಾರವಾಗಿ ಹೇಳಿದ್ರೆ ಆಗೋಲ್ವಾ.
ಹೆ : ಹೆಣ್ಣು ಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು ಹಿಂಗೆಲ್ಲ ಆಡಬಾರದು ಅಂತ ಒಸಿ ಹೇಳೇ ಮಣಿ
ಗಂ : ಏನೋ ಹೆಸರು ಕೇಳಿದರೆ ಕೆಸ್ರಲ್ ಬಿದ್ದೊರ್ ಥರ ಆಡಬಾರದು ಅಂತ ಹೇಳೇ ಮಣಿ.
ಹೆ : ನಮ್ಮ್ ಹೆಸ್ರು ಮಾತ್ರ ಕೇಳಿ ತಮ್ಮ ಹೆಸ್ರು ಹೇಳ್ದೆ ಇರೋದ ಬಲ್ ಮೋಸ ಅಂತ ಹೇಳೇ ಮಣಿ.
ಗಂ : ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ  ಕೃಷ್ಣ ಕೃಷ್ಣ ಕೃಷ್ಣ
        ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ಹೆ : ಹಂಗಾರೆ. ಗೋಪಿಕ ಸ್ತ್ರೀಯರು ಇದಾರಾ ಅಂತ ಈಗಲೇ ಕೇಳ್ಬಿಡೆ ಮಣಿ.
ಗಂ : ಚೇ ಚೇ ಅದೆಲ್ಲ ದ್ವಾಪರ ಯುಗಕ್ಕೆ. ಈ ಕಲಿಯುಗದ ಕೃಷ್ಣ ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
        ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಹೆ : ನನ್ನೂ  ನೋಡಲ್ವಾ??
ಗಂ : ನೋಡ್ತಾನೆ ಇದೀನಲ್ಲ.

ಗಂ : ಮಾತು ಮಾತಲ್ಲೇ ಮಾತು ಮರಸ್ ಬ್ಯಾಡ ಅಂತ ಹೇಳೇ ಮಣಿ
        ಇವಗಲ್ಲಾದ್ರು ಹೆಸರನ್ನ ಹೇಳೆಲೆ ಕನ್ಯಾಮಣಿ
ಹೆ : ನನ್ನ್ ಹೆಸರು ಒಂದು ಹೂವಿನ ಹೆಸರನಾಗೆ ಸೇರ್ಕೋoಡೈತೆ ಅಂತ ಹೇಳೇ ಮಣಿ
       ನನ್ನ್ ಹೆಸರು ಒಂದು ಹೂವಿನ ಹೆಸರನಾಗೆ ಸೇರ್ಕೋ0ಡೈತೆ ಅಂತ ಹೇಳೇ ಮಣಿ
ಗಂ : ಅದು ಯಾವ ಹೂವು ಅದು ಯಾವ ಹೂವು ನೆಲದ ಮ್ಯಾಲೈತೋ ಅಂಬರ ದಾಗೈತೋ
        ನೆಲದ ಮ್ಯಾಲೈತೋ ಅಂಬರ ದಾಗೈತೋ  ಗೊತ್ತಗ್ಲಿಲ್ವಲೇ ಮಣಿ ಕಣ್ಮಣಿ
ಹೆ : ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೋoಡೈತೆ.. ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೋoಡೈತೆ
       ಅಂತ ಹೇಳೇ ಮಣಿ ಬೇಗ ಹೇಳೇ ಮಣಿ
ಗಂ : ಅಂಬರಕ್ಕೆ ಚಾಚ್ಕೋoಡೈತೆ ಅಂಬರ ಅಂದ್ರೆ ಕನಕಾಂಬರ.. ಓ.. ಗೊತ್ತಾಯ್ತು ..
        ಕನಕ ಕನಕ ಕನಕ ಕನಕ ಕನಕ ಕನಕ ಕನಕ ಕನಕ..
       ಕನಕ ಕನಕ ಎಷ್ಟು ಚೆಂದಾಗೈತೆ. ಕನಕ ಕನಕ ಅಹಹ ಮುದ್ದಾಗೈತೆ
ಮಣಿ : ಹೌದು ಹೌದು ಚೆಂದಾಗೈತೆ ಈಗ ಊರ್ ಹತ್ರಕ್ಕ್ ಬಂದೈತೆ ಗಾಡಿ ನಿಲ್ಸು ಅಂತ ಹೇಳೇ ಕನಕ,
--------------------------------------------------------------------------------------------------------------------------

ಜನುಮದ ಜೋಡಿ (1996) - ಕೊಲುಮಂಡೆ ಜಂಗಮ
ಸಾಹಿತ್ಯ: ದೊಡ್ಡರಂಗೇಗೌಡ,  ಸಂಗೀತ: ವಿ.ಮನೋಹರ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ, ಕೋರಸ್  

ಗಂಡು : ಹೇ ಮಾತ ಮಲ್ಲಯ್ಯ      ಕೋರಸ್ :  ಹೇ ಮಾತ ಮಲ್ಲಯ್ಯ
ಗಂಡು :   ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡವ್ರೇ
              ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕೋರಸ್ :   ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಗಂಡು : ಕೊಡುವಾಗ್ಲೆಲ್ಲ ಕೊಡ್ತಾನೊ ನಮ್ಮಪ್ಪ ಶಿವ (ಅಹ್) ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವ(ಹೌದು)
            ಅಕ್ಕರೆ ಮಾತಾಡಿ ಭಿಕ್ಷೆ ಹಾಕವ್ವ ಅಂದೌವ್ನೆ ಮಾದೇವ (ಆಆಆ)
            ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕೋರಸ್ :  ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ

ಗಂಡು : ತಾಯಿ ಅಂದ್ರೆ ತಾಯಿ ಆಗ್ಬೇಕಿಲ್ಲ ತಾಯಿ ಲಗ್ನ ಆಗ್ದೇ ಇರೊ ಹೆಣ್ಮಗಳು ತಾಯಿ
           ಭಿಕ್ಷೆ ನೀಡುದ್ರೆ ಬಾಳು ಬಂಗಾರ ತಾಯಿ
           ಬೈದ್ ದೂಡುದ್ರೆ ಬಾಳು ಬೂದ್ಗುಂಬಳಕಾಯಿ ಅಂದೌನೆ ಮಾದೇವಾ
           ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕೋರಸ್ :   ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ

ಗಂಡು : ಉಡ್ಗಿ ಅಂದ್ರೆ ಚಿಕ್ಕ್ ಉಡ್ಗಿ ಅಲ್ಲ ತಾಯಿ (ಆ) ಕಂಕಣ ಬಾಗ್ಯ ಬರೊ ಕನ್ಯಾಮಣಿ ತಾಯಿ (ಕನ್ಯಾಮಣಿ)
             ಭಿಕ್ಷೆ ನೀಡುದ್ರೆ ಸಿರಿ ಸಿಂಗಾರ ತಾಯಿ
             ಬೈದ್ ದೂಡುದ್ರೆ ನಿಮ್ ಬಾಳು ಬೆಂಡೇಕಾಯಿ ಅಂದೌವ್ನೆ ಮಾದೇವಾ.. (ಆಅ )
ಕೋರಸ್ :  ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
                ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ

ಗಂಡು : ಶುಭವಾಗುತೈತಮ್ಮೋ....  ಶುಭವಾಗುತೈತಮ್ಮೋ...
            ಹೆತ್ತೋರ ಪುಣ್ಯವು ಮುತ್ತಾಗಿ ಬಂತಮ್ಮೋ  ಮುತ್ತಂಥ ಭಾಗ್ಯವ ಬಾಗಿಲಿಗೆ ತಂತಮ್ಮೋ
             ದೇವರ ಗುಡ್ಡ ಬಂದು ಭಕ್ತಿಯಿಂದ ಶಿವನ ನೆನೆದು ಹಾಡಿ (ಅರೆರೆರೆ )
            ಭೂದೇವಿ ಕೈಯ ಚಾಚಿ ಆಕಾಶಾನ ಮುಟ್ಟೋತಾವು ನೋಡಿ
ಕೋರಸ್ :  ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ ಶರಣೆಂದಾವೋ ಬನವು ಶರಣೆಂದಾವೋ

ಗಂಡು : ಬನವೆಲ್ಲ ಹೂವಾದೋ...  ಹೂವೆಲ್ಲ ಗಮ್ಮೆಂದೊ...
            ಕೈ ಎತ್ತಿ ಕ್ವಾರುಣ್ಯ ಭಿಕ್ಷೆಯ ನೀಡವ್ವೋ ಮಾದೇವ್ನ ಮನಸಾರೆ ರಕ್ಷೆಯ ಕೇಳವ್ವೋ
           ನೆತ್ತಿಯ ಸೂರ್ಯ ಸ್ವಾಮಿ ಕತ್ಲೆ ಮನಗೆ ಓಗೊ ಒತ್ತು ಆಡು
           ಚಿತ್ತಾವ ಗಟ್ಟಿ ಮಾಡಿ ಇತ್ತಾಗಿ ಕುಳಿತ್ರೆ ಮುತ್ತು ನೋಡೋ
ಕೋರಸ್ :  ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ ಶರಣೆಂದಾವೋ ಬನವು ಶರಣೆಂದಾವೋ

ಗಂಡು : ಕಾದೋರ್ಗೆ ಕಾಣ್ತಾನೋ...  ಕಂಡೋರ್ಗೆ ನೀಡ್ತಾನೋ...
            ಮುಂಗಾರ ಮಳೆಬರಲು ಕೋಗೆಯು ಕುಣಿದಾವೋ
            ಬಾಯಾರಿ ನೆಲದೊಡಲ ಕಣಕಣವು ಮಣಿದಾವೋ
            ಕೋಡ್ಗಲ್ಲ ಗುಡ್ಡೆ ಮ್ಯಾಗೆ ಮಾದೇವ ಬಂದೆ ಬರುತಾನವ್ವೋ(ಅರೆರೆರೆ )
            ನಂಬಿದ ಭಕ್ತರಿಗೆಂದು ಪ್ರೀತಿಯ ಕೊಟ್ಟೆ ಕೊಡುತಾನವ್ವೋ
ಕೋರಸ್ : ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ ಶರಣೆಂದಾವೋ ಬನವು ಶರಣೆಂದಾವೋ
                ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ ಶರಣೆಂದಾವೋ ಬನವು ಶರಣೆಂದಾವೋ
                ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ ಶರಣೆಂದಾವೋ ಬನವು ಶರಣೆಂದಾವೋ
                ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ ಶರಣೆಂದಾವೋ ಬನವು ಶರಣೆಂದಾವೋ
--------------------------------------------------------------------------------------------------------------------------

ಜನುಮದ ಜೋಡಿ (1996) - ಸೀರೆ ಸೀರೆ ಎಲ್ಲೆಲ್ಲೋ
ಸಾಹಿತ್ಯ, ಸಂಗೀತ: ವಿ.ಮನೋಹರ್ ಹಾಡಿರುವವರು: ಸಂಗೀತ ಕಟ್ಟಿ


ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ... ಅಹ್ಹಹ್ಹಾ..

ಗಂಡು : ನೋಡದ್ಯಾ.. ನಿನ್ನಂಗೇ ಐತೇ...
ಹೆಣ್ಣು : ಮಾವು ಬೇವು ಚಿಗುರಿದರೆ ಚೈತ್ರ ವೈಶಾಖ  ಮಾವ ನಿನ್ನ ಕಂಡಾಗ ಬಂತು ಮೈ ಶಾಖ
           ನೋಡು ಹೊಸ ಹರೆಯ ಮಾಡಿ ಮೈ ಬಿಸಿಯ ಉಟ್ಟ ಸೀರೆ ಮೈಯ ಮೇಲೆ ನಿಲ್ಲದೋ
           ಸೆರಗು ಹಾರಿ ನೆರಿಗೆ ಜಾರಿ ಹೋಯಿತು ನಡುವ ನೀ ಬಳಸಿ ಎದೆಯ ಬಿಸಿಗೆ
           ಪ್ರೇಮ ಬೆಸುಗೆ ಹಾಕು...  ಬಾ...
ಗಂಡು : ಅಯ್ಯೋ ಮೈ ಮೇಲೆಲ್ಲಾ ಬಿಳ್ತಾಲ್ಲಲ್ಲೋ ಅಲ್ವೋ..
ಹೆಣ್ಣು :ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
          ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
          ಒಂದಾಗಿ ಸೇರೋಣ ಓಡಿ... ಬಾ...
          ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ

ಹೆಣ್ಣು : ಹೂಂ...  ಮಾಗಿಯ ಕಾಲದಲಿ ದೂರ ಇರಬ್ಯಾಡಾ ಇರುಳಲಿ ಒಂಟಿಯಾಗಿ ಬಿಟ್ಟೋಹೋಗಬ್ಯಾಡ 
          ಸುರಿಯೂ ಮಳೆಯಲ್ಲಿ ಕೊರೆಯೂ ಚಳಿಯಲ್ಲಿ ಸೆರೆಗಿನಲ್ಲಿ ನಿನ್ನ ಮುಚ್ಚಿಕೊಳ್ಳುವೆ 
ಗಂಡು : ಇದೊಂದೇ ಬಾಕೀ
ಹೆಣ್ಣು : ಬೊಗಸೆ ತುಂಬಾ ಸುಖವ ಹಂಚಿಕೊಳ್ಳುವೆ (ರಾಮರಾಮ) 
          ಇಂದು ಎಂದೆಂದೂ ನೀನೇ ಮಾವ ನನ್ನ ಜೀವ ಓಡಿ... ಬಾ..... 
ಗಂಡು : ನಾ ಯಾವ್ ಸೀಮೆ ಮಾವ ನಿಂಗೆ
ಹೆಣ್ಣು : ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
          ಹ್ಹಾಂ..  ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
          ಒಂದಾಗಿ ಸೇರೋಣ ಓಡಿ... ಬಾ...
          ಆ.. ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ
          ಅಹ್ಹಹ್ಹಹ್ಹ... ಅಹ್ಹಹ್ಹ ...  
-------------------------------------------------------------------------------------------------------------------------

ಜನುಮದ ಜೋಡಿ (1996) - ಓ .. ಊರ ದ್ಯಾವರೇ  ಓ ಬೇರೇ ದ್ಯಾವರೇ
ಸಾಹಿತ್ಯ, ಸಂಗೀತ: ವಿ.ಮನೋಹರ್ ಹಾಡಿರುವವರು: ಮಂಜುಳಾ ಗುರುರಾಜ 

ಹೇ...  ಓ .. ಊರ ದ್ಯಾವರೇ  ಓ ಬೀರೇ ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ಮೊಗಿಸೋಕೆ ಕಳಸವನೇ ಜವರಾಯ್ ಬಂಟ್ರ್  ನೋಡಿದ್ರು ಸುಮ್ಕಿದ್ದೀ ನಿಂಗವ್ರ ನೆಂಟ್ರ್
ಊರ ದ್ಯಾವರೇ  ಓ ಕ್ರೂರ  ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ ನೀ ಎಕ್ಕುಟ್ ಹೋಗ್
ನೀನ್ ಮನೆ ಕಾಯಹೋಗ್  ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ್ ಬೀಸಿದರೂ ಕೊಯ್ದರಲ್ಲೋ ಕತ್ನಾ
ಊರ ದ್ಯಾವರೇ.. ಹ್ಹಹ್ಹ   ಓ ಬೇರೇ ದ್ಯಾವರೇ.. ಹ್ಹಹ್ಹ

ಮುತ್ತಿನ ನಕ್ಕತೈತಿ ಕತ್ತಿನ ಸರವೈತಿ ಹಣೆ ಮ್ಯಾಲೆ ಕುಂತೈತಿ ಬೊಟ್ಟು ಬಾಸಿಂಗ..  ಹೀಹ್ಹೀಹ್ಹಿ
ದೊಡ್ಡ ಸೀರೆ ಉಟ್ಟಕೊಂಡು ಅರಿಷಣ ಹಚ್ಚಕೊಂಡು ಹಸಿ ಮಣೆ ಏರಿತೀನಿ ಬಾರೋ ಮಧುಲಿಂಗಾ..
ಏ... ನಿಂಗ್ ಕೊಬ್ಬ್ ಹೆಚ್ಚಾಯ್ತಾ ತಲೆ ಕೇಟ್ ಕೆರವಾಯ್ತ ನಿಂಗ್ ಘರ್ ಬಡಿಯಾ ನಿಂಗ್ ಕುಲ್ ಹಿಡಿಯ್
ನಿನ್ ಸದೆಬಡಿಯಾ ನಿನ್ ತಲೆ ಒಡೆಯಾ ಅಹ್ಹುಹ್ಹೂ ...
ಓ.. ಊರ ದ್ಯಾವರೇ  ಓ ಕ್ರೂರ್  ದ್ಯಾವರೇ ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್ ನೆತ್ತರ್ ಹರಿಸೋಕೆ ದಂಡ್ ದಂಡು ಬಂದ್ರು
ಪ್ರೀತಿ ಅರಳಿದ ಗುಂಡಿಗೆನೇ ಕಿತ್ತರೂ
ಓ.. ಊರ ದ್ಯಾವರೇ  ಅಹ್ಹಹ್ಹಹ್ಹ್ ... ಓ ಕುಲ ದ್ಯಾವರೇ... ಅಹ್ಹಹ್ಹ

ಮೈಲಿಗೇ ಇಲ್ಲದ ಮಲ್ಲಿಗೆ ಹೂವಿಗೂ ಪೂಜೆಯಾ ವೇಳೆಗೆ ಬಂತು ಬರ ಸಿಡಿಲು
ಸತ್ತರೂ ಸರಿಯೇ ಸುಟ್ಟರೂ ಸರಿಯೇ ನನ್ನೋನ ಸೇವೆಗೆ ಮಾತ್ರ ಈ ಒಡಲು
ಏ...ನನ್  ಮನೆ ಮುರದ ನೀ ನನ್ ಎದೆ ಒಡೆದ ನೀ ಮುಳ್ಳಾದ ನೀ  ಹಾಳಾದ  ನೀ
ನೆಗದ ಬೀಳಾ ನಿಂಗ್ ಹುಳಾ ಬೀಳಾ
ಊರ ದ್ಯಾವರೇ  ಓ ಕೆಟ್ಟ ದ್ಯಾವರೇ  ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್ ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ್ ಬೀಸಿದರೂ ಕೊಯ್ದರಲ್ಲೋ ಕತ್ನಾ
ಓ.. ಊರ ದ್ಯಾವರೇ  ಹ್ಹೀಹ್ಹೀಹ್ಹೀ  ಓ..   ಊರ ದ್ಯಾವರೇ ಹ್ಹೂಹ್ಹೂಹ್ಹೂ
--------------------------------------------------------------------------------------------------------------------------

ಜನುಮದ ಜೋಡಿ (1996) - ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಸಾಹಿತ್ಯ: 
ದೊಡ್ಡರಂಗೇಗೌಡ, ಸಂಗೀತ: ವಿ.ಮನೋಹರ್ ಹಾಡಿರುವವರು: ಮಂಜುಳಾ ಗುರುರಾಜ, ರಾಜೇಶ ಕೃಷ್ಣನ

ಹೆಣ್ಣು : ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ ಊರಿನ ನಾರೀರೆಲ್ಲ ಪೂಜೆಗೇ ಬನ್ನಿರೇ .. ಓಓಓ 
          ಆರತಿ ಗಂಗಮ್ಮಂಗೆ ಆರತಿ ಗೌರಮ್ಮಂಗೆ ಹೊಂಬಾಳೆ ಕಲಶನೆಲ್ಲ ಹೊತ್ತು ತನ್ನಿರೇ..  ಓಓಓಓಓ  
ಕೋರಸ್ : ಸೋ.. ಎನ್ನಿರೇ ... ಸೋಬಾನೆ ಎನ್ನಿರೇ ಸುವ್ವಿ ಎನ್ನಿರೇ ಸುವ್ವಾಲೆ ಎನ್ನಿರೇ 


ಹೆಣ್ಣು : ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ ಊರಿನ ನಾರೀರೆಲ್ಲ ಪೂಜೆಗೇ ಬನ್ನಿರೇ .. ಓಓಓ 

ಗಂಡು : ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಕೋರಸ್  : ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಗಂಡು : ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ       
ಕೋರಸ್ : ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ     
ಹೆಣ್ಣು : ತಂಬಿಟ್ಟಿನಾರತಿ ಮಾಡ್ಕೊಂಡು ಬಂದೂ ಕಣಿಗಲೇ ಹೂ ಬತ್ತಿ ಹಣ್ಣು ಕಾಯಿ ತಂದೂ 
           ತಂಬಿಟ್ಟಿನಾರತಿ ಮಾಡ್ಕೊಂಡು ಬಂದೂ ಕಣಿಗಲೇ ಹೂ ಬತ್ತಿ ಹಣ್ಣು ಕಾಯಿ ತಂದೂ
ಗಂಡು : ನಡೆ ಮೂಡಿ ತನಿ ಹಾಸಿರೋ ದೇವಿಗೆ ಆಗ್ರದಲೇ ಎಡೆ ಹಾಕಿರೋ 
ಕೋರಸ್ : ನಡೆ ಮೂಡಿ ತನಿ ಹಾಸಿರೋ ದೇವಿಗೆ ಆಗ್ರದಲೇ ಎಡೆ ಹಾಕಿರೋ
ಗಂಡು : ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಕೋರಸ್  : ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಗಂಡು : ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ       
ಕೋರಸ್ : ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ       
           ತಾಯಿಯೇ ಜಗದಂಬೆ ಕಾಪಾಡವ್ವೋ ... ಕಾಪಾಡೂ 

ಹೆಣ್ಣು : ಹರಕೆ ಹೊತ್ತು ಬಂದೆವೂ ಹರಸು ತಾಯಿ ಎಂದೆವು
ಕೋರಸ್ : ಹರಸು ತಾಯಿ ಎಂದೆವು
ಹೆಣ್ಣು :  ವರವ ಬೇಡಿ ನಿಂದೇವೋ ಕರವ ಮುಗಿದು ಹಾಡೆವು
ಕೋರಸ್ : ಕರವ ಮುಗಿದು ಹಾಡೆವು 
ಗಂಡು : ನಿನ್ನನ್ನೇ ನಂಬಿ ನಿಂತ ನಮ್ಮನ್ನ ಕಾಪಾಡವ್ವೋ ಭಯ ಭೀತಿ ದೂಡಿ ನಮಗೆ ದಿಟ ದಾರಿ ತೋರವ್ವೋ 
ಹೆಣ್ಣು : ನೀ ನೀಡೋ ಮರುಗ ಮಲ್ಲೆ ವರವೆಂದೇ ತಿಳಿದೆವು
ಕೋರಸ್ : ನೀ ನೀಡೋ ಮರುಗ ಮಲ್ಲೆ ವರವೆಂದೇ ತಿಳಿದೆವು
ಹೆಣ್ಣು :  ನೀ ಮೆಟ್ಟೋ ಈ ಮಣ್ಣ ಬಂಢಾರ ತಲೆಗಿಟ್ಟೆವೋ
ಕೋರಸ್ : ಒಹೋ..  ನೀ ಮೆಟ್ಟೋ ಈ ಮಣ್ಣ ಬಂಢಾರ ತಲೆಗಿಟ್ಟೆವೋ 
ಗಂಡು : ಹಣ್ಣುಕಾಯ್ಮಣೆ  ಇಕ್ಕಿರೋ ಎಲ್ಲರಿಗೆ ಚರಪಿನಾ ಸಿಹಿ ಹಂಚಿರೋ
ಕೋರಸ್ : ಹಣ್ಣುಕಾಯ್ಮಣೆ  ಇಕ್ಕಿರೋ ಎಲ್ಲರಿಗೆ ಚರಪಿನಾ ಸಿಹಿ ಹಂಚಿರೋ 
ಗಂಡು : ಗಂಡಿನಾ ಮಾರಮ್ಮನಾ ವೈರಾಗಿ ಮೂರ್ ಹೊತ್ತು ನೀವ್ ನೆನೆಯಿರೋ 
ಕೋರಸ್ : ಗಂಡಿನಾ ಮಾರಮ್ಮನಾ ವೈರಾಗಿ ಮೂರ್ ಹೊತ್ತು ನೀವ್ ನೆನೆಯಿರೋ  
--------------------------------------------------------------------------------------------------------------------------

No comments:

Post a Comment