ಮುಗಿಯದ ಕಥೆ ಚಿತ್ರದ ಹಾಡುಗಳು
- ಕಂಗಳು ವಂದನೆ ಹೇಳಿದೇ ಹೃದಯವು ತುಂಬಿ ಹಾಡಿದೇ
- ಮುತ್ತು ಉರುಳಿ ಹೋಗಿ
- ತೂರು ತೂರು ತೂರು
- ಜನ್ಮ ಕೊಟ್ಟ ತಾಯಿ ಹೆಣ್ಣು
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ. ಉದಯಶಂಕರ ಗಾಯಕರು: ಎಸ್. ಪಿ. ಬಾಲು, ಎಸ್. ಜಾನಕಿ
ಹೆಣ್ಣು : ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಗಂಡು : ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ
ಒಲವಿನ ಕಾವ್ಯಕೆ ಇಂದೇ ಪೀಠಿಕೆ
ಹೆಣ್ಣು : ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೇ
ಹೆಣ್ಣು : ಮುಡಿಯ ಜಾರಿದ ಹೂವಿದು ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ ಕಾಪಾಡಿದ ಕೈಗಳಿವು
ಗಂಡು : ಗಂಗೆಗೆ ಕೊಳೆ ಸೋಂಕದು ಪಾಪದ ಫಲ ಸಲ್ಲದು
ನಿನ್ನನು ಪಡೆದಂಥಹ ಈ ಭಾಗ್ಯವು ನನ್ನದು
ಹೆಣ್ಣು : ಪೂರ್ವದ ಪುಣ್ಯವೋ ಗಂಡು : ಜನ್ಮದ ಬಂಧವೋ
ಹೆಣ್ಣು : ನಾನು ನೀನು ಗಂಡು : ನೀನು ನಾನು
ಇಬ್ಬರು : ಒಂದೇ ಎಂದೆಂದಿಗೂ
ಗಂಡು : ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಗಂಡು : ಬಾಳಿನ ಗುಡಿ ಬೆಳಗಲಿ ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ
ಹೆಣ್ಣು : ಬಯಕೆಯ ಕುಡಿ ಚಿಗುರಲಿ ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ ಸೌಭಾಗ್ಯವು ಎನಗಿರಲಿ
ಗಂಡು : ಸ್ವರವು ನೀ ಶೃತಿಯು ನಾ ಹೆಣ್ಣು : ದೊರೆಯು ನೀ ದಾಸಿ ನಾ
ಗಂಡು : ನಾನು ನೀನು ಹೆಣ್ಣು : ನೀನು ನಾನು
ಇಬ್ಬರು : ಒಂದೇ ಎಂದೆಂದಿಗೂ
ಹೆಣ್ಣು : ಕಂಗಳು ವಂದನೆ ಹೇಳಿದೆ ಗಂಡು : ಹೃದಯವು ತುಂಬಿ ಹಾಡಿದೆ
ಹೆಣ್ಣು : ಆಡದೆ ಉಳಿದಿಹ ಮಾತು ನೂರಿದೆ
ಇಬ್ಬರು : ಗಂಡು : ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಅಹ್ಹಹ್ಹಾ ಅಹ್ಹಹ್ಹಾ .. ಅಹ್ಹಹ್ಹಾ ಅಹ್ಹಹ್ಹಾ ..
--------------------------------------------------------------------------------------------------------------------------
ಮುಗಿಯದ ಕಥೆ (೧೯೭೬) - ಮುತ್ತೂ ಉರುಳಿ ಹೋಗಿ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ. ಉದಯಶಂಕರ ಗಾಯಕರು: ಎಸ್. ಪಿ. ಬಾಲು,
ಮುತ್ತು ಉರುಳಿ ಹೋಗಿ ಕೈ ಜಾರಿತೂ ಬಿದ್ದೂ ಕಲ್ಲ ತಾಗೀ ಚೂರಾಯಿತೂ
ಏನೋ ಬಯಸಿತು ಏನೋ ವ್ಹಾಹಾ ಆಯಿತೂ
ಮುತ್ತು ಉರುಳಿ ಹೋಗಿ ಕೈ ಜಾರಿತೂ ಬಿದ್ದೂ ಕಲ್ಲ ತಾಗೀ ಚೂರಾಯಿತೂ
ಸೇರದೂ ಎಂದೂ ಆಗದು ಒಂದೂ ಏನೋ ಬಯಸಿತು ಏನೋ ಆಯಿತೂ
ಏನೋ ಬಯಸಿತು ಏನೋ ಆಯಿತೂ
ನೆರಳನು ಕೊಡುವಾ ಮರವೇ ಉರಿದು ಬೆಂಕಿಯ ಮಳೆಯಾ ತಂದಿತೇ......
ಮುತ್ತು ಉರುಳಿ ಹೋಗಿ ಕೈ ಜಾರಿತೂ ಬಿದ್ದೂ ಕಲ್ಲ ತಾಗೀ ಚೂರಾಯಿತೂ
ಸೇರದೂ ಎಂದೂ ಆಗದು ಒಂದೂ ಏನೋ ಬಯಸಿತು ಏನೋ ಆಯಿತೂ
ಏನೋ ಬಯಸಿತು ಏನೋ ಆಯಿತೂ
ನೆರಳನು ಕೊಡುವಾ ಮರವೇ ಉರಿದು ಬೆಂಕಿಯ ಮಳೆಯಾ ತಂದಿತೇ......
ದಾಹವ ಕಳೆವಾ ಜಲವೇ ನಿನಗೇ ವಿಷವನು ತಂದು ನೀಡಿತೇ.. ಓಓಓ..
ವಿಷವನು ತಂದು ನೀಡಿತೇ
ನಿನ್ನಂದವೇ ಹಗೆಯಾಯಿತೇ ನಿನ್ನಾಸೆ ಮಣ್ಣಾಗಿ ಹೋಯಿತೇ.... ಓಓಓ ...
ಮುತ್ತು ಉರುಳಿ ಹೋಗಿ ಕೈ ಜಾರಿತೂ ಬಿದ್ದೂ ಕಲ್ಲ ತಾಗೀ ಚೂರಾಯಿತೂ
ಮೀನನು ಮೇಲೆ ಮುಳುಗುವ ಹಾಗೇ ಹೆಣ್ಣಿಗೇ ಹೆಣ್ಣೇ ಶತ್ರುವೂ
ಕೊಡಲಿಯ ಕಾವೂ ಕುಲಕೇ ಮೃತ್ಯು ಎಂಬುವಾ ಮಾತೇ ಸತ್ಯವೂ ಓಓಓ ....
ಎಂಬುವಾ ಮಾತೇ ಸತ್ಯವೂ
ಈ ಘೋರಕೇ ತಡೆ ಎಲ್ಲಿದೇ ಈ ಕಥೆಗೇ ಕೊನೇ ಎಲ್ಲಿದೇ ಓಓಓ ....
ಮುತ್ತು ಉರುಳಿ ಹೋಗಿ ಕೈ ಜಾರಿತೂ ಬಿದ್ದೂ ಕಲ್ಲ ತಾಗೀ ಚೂರಾಯಿತೂ
ಕೈ ಜಾರಿತೂ ಚೂರಾಯಿತೂ
--------------------------------------------------------------------------------------------------------------------------
ಮುಗಿಯದ ಕಥೆ (೧೯೭೬) - ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಆರ್.ಏನ್.ಜಯಗೋಪಾಲ ಗಾಯಕರು: ಎಸ್. ಜಾನಕೀ
ಕೋರಸ್ : ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ಹೆಣ್ಣು : ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತೂ
ಈ ಹೊತ್ತೂ... ನಮಗಾಯ್ತು ಈ ಹೊತ್ತೂ... ನಮಗಾಯ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತೂ
ಕೋರಸ್ : ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ಪಬಪ್ಪಪ್ಪಾ (ಪಬಪ್ಪಪಾಪಪ್ಪಪ್ಪಪ್ಪ ) ಪಬಪ್ಪಪ್ಪಾ (ಪಬಪ್ಪಪಾಪಪ್ಪಪ್ಪಪ್ಪ )
ಪಬಪಪಪ ಪಬಪಪಪ ಪಬಪಪಪ ಪಬಪಪಪ ಪಬಪಪಪ
ಪಬಪಪಪ ಪಬಪಪಪ ಪಬಪಪಪ ಪಬಪಪಪ ಪಬಪಪಪ
ಪಬ ಪಬ ಪಬ ಪಬಪಪ ಪಬ ಪಬ ಪಬ ಪಬಪಪ
ಪಬಬ ಪಬಬ ಪಬಬ ಪಬ ಪಬಪಪ
ಪಬಪಪಪ ಪಬಪಪಪ ಪಬಪಪಪ ಪಬಪಪಪ ಪಬಪಪಪ
ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
ಹೆಣ್ಣು : ಹಾಯಾದ ಸಂತೋಷ ಹೊಸದಾದ ಉಲ್ಲಾಸ
ಹಾಯಾದ ಸಂತೋಷ ಹೊಸದಾದ ಉಲ್ಲಾಸ
ಅನುರಾಗ... ನೀನಗೀಗ... ಬಂತು ಬಾ ಬೇಗ
ಮನಸಲ್ಲಿ ಮನಸಿಟ್ಟು ಕಣ್ಣಲ್ಲಿ ಕಣ್ಣಿಟ್ಟು ಕಲೆತಾಗ
ನೋಡಾಗ ಆ ಆವೇಗ..
ಕಾಲ ಬಂತೂ (ಲಲ್ಲಲ್ಲಲ್ಲಾ ) ತಾರಾ ಮುತ್ತೂ (ಲಲ್ಲಲ್ಲಲ್ಲಾ )
ಕಾಲ ಬಂತೂ (ಲಲ್ಲಲ್ಲಲ್ಲಾ ) ತಾರಾ ಮುತ್ತೂ ಹ್ಹೂ ಹ್ಹೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತೂ
ಕೋರಸ್ : ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ಹೆಣ್ಣು : ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ
ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ ಈ ಚಂದ
ನಿಂದೇನೇ ಎಲ್ಲಾ ನಿಂದೇನೇ
ಕೋರಸ್ : ಲಲಲ್ಲಲ್ಲಲ್ಲಾ ಲಲಲ್ಲಲ್ಲಲ್ಲಾ ಲಲಲ್ಲಲ್ಲಲ್ಲಾ ಲಲಲ್ಲಲ್ಲಲ್ಲಾ ಆಹಾ..
ಹೆಣ್ಣು : ಹಿಂದೆಂದೂ ಕಂಡಿಲ್ಲಾ ಇನ್ನೆಂದೂ ಸಿಕ್ಕಲ್ಲ ಬಾ ನಲ್ಲ
ಈ ರಾತ್ರಿ ಎಲ್ಲಾ ನಿಂದೇನೇ
ನಾನು ಮತ್ತೂ (ಲಲಲ್ಲಲ್ಲಲ್ಲಾ ) ನೀನೂ ಮತ್ತೂ (ಲಲಲ್ಲಲ್ಲಲ್ಲಾ )
ನಾನು ಮತ್ತೂ (ಲಲಲ್ಲಲ್ಲಲ್ಲಾ ) ನೀನೂ ಮತ್ತೂ ಹ್ಹೂ ಹ್ಹೂ
--------------------------------------------------------------------------------------------------------------------------
ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ ಈ ಚಂದ
ನಿಂದೇನೇ ಎಲ್ಲಾ ನಿಂದೇನೇ
ಕೋರಸ್ : ಲಲಲ್ಲಲ್ಲಲ್ಲಾ ಲಲಲ್ಲಲ್ಲಲ್ಲಾ ಲಲಲ್ಲಲ್ಲಲ್ಲಾ ಲಲಲ್ಲಲ್ಲಲ್ಲಾ ಆಹಾ..
ಹೆಣ್ಣು : ಹಿಂದೆಂದೂ ಕಂಡಿಲ್ಲಾ ಇನ್ನೆಂದೂ ಸಿಕ್ಕಲ್ಲ ಬಾ ನಲ್ಲ
ಈ ರಾತ್ರಿ ಎಲ್ಲಾ ನಿಂದೇನೇ
ನಾನು ಮತ್ತೂ (ಲಲಲ್ಲಲ್ಲಲ್ಲಾ ) ನೀನೂ ಮತ್ತೂ (ಲಲಲ್ಲಲ್ಲಲ್ಲಾ )
ನಾನು ಮತ್ತೂ (ಲಲಲ್ಲಲ್ಲಲ್ಲಾ ) ನೀನೂ ಮತ್ತೂ ಹ್ಹೂ ಹ್ಹೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತೂ
ಈ ಹೊತ್ತೂ... ನಮಗಾಯ್ತು ಈ ಹೊತ್ತೂ... ನಮಗಾಯ್ತು
ಕೋರಸ್ : ಈ ಹೊತ್ತೂ... ನಮಗಾಯ್ತು ಈ ಹೊತ್ತೂ... ನಮಗಾಯ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ಮುಗಿಯದ ಕಥೆ (೧೯೭೬) - ಜನ್ಮ ಕೊಟ್ಟ ತಾಯಿ ಹೆಣ್ಣೂ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಆರ್.ಏನ್.ಜಯಗೋಪಾಲ ಗಾಯಕರು: ಎಸ್. ಜಾನಕೀ
ಜನ್ಮ ಕೊಟ್ಟ ತಾಯಿ ಹೆಣ್ಣೂ ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ ಮಾಡುವರೂ ಪಾಪಿಗಳೂ

ಜನ್ಮ ಕೊಟ್ಟ ತಾಯಿ ಹೆಣ್ಣೂ
ಹೆಣ್ಣಿನ ರೂಪವನೂ ಬಣ್ಣಿಸಿ ಹಾಡುವರೂ
ಹೂವಿಗೇ ಹೋಲಿಸುತಾ ಕೋಮಲೆ ಎನ್ನುವರೂ
ಮೋಹದಾ ಮೂಡಿನಲಿ ಜೇನಿನಾ ಮಾತಿನಲಿ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಹೆಣ್ಣಿನ ರೂಪವನೂ ಬಣ್ಣಿಸಿ ಹಾಡುವರೂ
ಹೂವಿಗೇ ಹೋಲಿಸುತಾ ಕೋಮಲೆ ಎನ್ನುವರೂ
ಮೋಹದಾ ಮೂಡಿನಲಿ ಜೇನಿನಾ ಮಾತಿನಲಿ
ಆಸೆಯಾ ತೋರುತಲಿ ಮೋಸವಾ ಮಾಡುವರೂ
ಕಾಮಾದ ಶಾಲೆಯಲ್ಲಿ ಅವಳ ನೂಕೀ ಬೀಸಾಡುವರೂ
ಜನ್ಮ ಕೊಟ್ಟ ತಾಯಿ ಹೆಣ್ಣೂ ಪೂಜಿಸುವ ದೈವ ಹೆಣ್ಣೂ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಬಾಳಿನ ಹಾದಿಯಲಿ ಬೆಳಕನು ತೋರುವಳು
ಪ್ರೀತಿಯ ತೋರುತಲಿ ಸೇವೆಯ ಮಾಡುವಳು
ನಿಮಿಷದ ಆಸೆಗಾಗಿ ಕಾಮದ ಪಶುಗಳಾಗಿ
ಆ ಹೆಣ್ಣ ಬಾಳನ್ನೇ ಕಣ್ಣೀರೂ ಮಾಡುವರೂ
ಎಲ್ಲವ ದೋಚಿ ಅವಳ ಸೂಳೆ ಎಂದೂ ದೂರುವರು
ಜನ್ಮ ಕೊಟ್ಟ ತಾಯಿ ಹೆಣ್ಣೂ ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ ಮಾಡುವರೂ ಪಾಪಿಗಳೂ
ಆ ಹೆಣ್ಣ ಶೀಲವನೇ ಮಾಡುವರೂ ಪಾಪಿಗಳೂ
ಜನ್ಮ ಕೊಟ್ಟ ತಾಯಿ ಹೆಣ್ಣೂ ಪೂಜಿಸುವ ದೈವ ಹೆಣ್ಣೂ
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment