12. ಕಾವೇರಿ (1975)


ಕಾವೇರಿ ಚಿತ್ರದ ಹಾಡುಗಳು 
  1. ಶೃಂಗೇರಿ ಗಿರವಾಣಿ 
  2. ಈ ದೇಶ ಚನ್ನ ಈ ಮಣ್ಣು ಚಿನ್ನ 
  3. ಜ್ಯೋತಿ ಯಾವ ಜಾತಿಯಮ್ಮ 
  4. ಆಕಾಶದಲ್ಲಿ ಬಾನಾಡಿಯಾಗಿ 
  5. ಶಿಲ್ಪಿ ಚತುರ ಕಲ್ಪನ 
ಕಾವೇರಿ (೧೯೭೫)ಸಂಗೀತ: ಎಂ.ರಂಗರಾವ್ ಸಾಹಿತ್ಯ: ವಿಜಯನಾರಸಿಂಹ,  ಹಾಡಿದವರು: ಪಿ.ಸುಶೀಲಾ

ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ 
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ
ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ 
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ  
ತುಂಗಾ ನದಿ ತೀರ ಪೀಠಸ್ಥಿತೇ 
ಬಂಗಾರ ರಕ್ಷಿಸುವ ಲಕ್ಷ್ಮೀಯುತೇ 
ತುಂಗಾ ನದಿ ತೀರ ಪೀಠಸ್ಥಿತೇ 
ಬಂಗಾರ ರಕ್ಷಿಸುವ ಲಕ್ಷ್ಮೀಯುತೇ 
ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ 
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ  

ಸತ್ಯ ಶಿವ ಸುಂದರತೇ ಸಾಕಾರವಾಗಿ 
ನಿತ್ಯ ನಿರ್ಮಲ ಜ್ಞಾನ ಜ್ಯೋತಿ ಬೆಳಗಿ 
ಸತ್ಯ ಶಿವ ಸುಂದರತೇ ಸಾಕಾರವಾಗಿ 
ನಿತ್ಯ ನಿರ್ಮಲ ಜ್ಞಾನ ಜ್ಯೋತಿ ಬೆಳಗಿ 
ನರ್ತಿಸಿ ದೇವಿ ಕಾಲಿಗೇ ಮೇಲೇ 
ನರ್ತಿಸಿ ದೇವಿ ಕಾಲಿಗೇ ಮೇಲೇ 
ಆಪ್ತಜನರ ರಕ್ಷಕಿ ಕರುನಾಡ ಕಾಳೀ
ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ 
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ  
--------------------------------------------------------------------------------------------------------------------------

ಕಾವೇರಿ (೧೯೭೫)
ಸಂಗೀತ: ಎಂ.ರಂಗರಾವ್ ಸಾಹಿತ್ಯ: ವಿಜಯನಾರಸಿಂಹ,  ಹಾಡಿದವರು: ಎಸ್.ಪಿ.ಬಿ.

ಆಆಆ... ಆಹಾ..... ಲಲಲಾ  ಓಹೋಹೋ.. ಆಹಾ.. ಲಾಲಾ..
ಶಹಬ್ಬಾಸ್.ಶಹಬ್ಬಾಸ್.ಅಹ್ಹಹ್ಹಾ.. ಶಹಬ್ಬಾಸ್..

ಈ ದೇಶ ಚೆನ್ನ, ಈ ಮಣ್ಣು ಚಿನ್ನ, ಎಲ್ಲು ನಾ ಕಾಣೆನಲ್ಲ,
ಇಂಥ ಅಂದ ಇಂಥ ಚೆಂದ, ನಮ್ಮ ನಾಡಿಗೆ ಸಾಟೀ ಇಲ್ಲ
ಈ ದೇಶ ಚೆನ್ನ ಈ ಮಣ್ಣು ಚಿನ್ನ... ಆಆಆ... ಆಹಾ..... ಓಹೋಹೋ.

ಆಆಆ... ಆಹಾ..... ಲಲಲಾ  ಓಹೋಹೋ.
ಕರ್ಣಾಟ ಕಾವೇರಿ ತಾಯಾಗಿ ಬಂದು, ನಮ್ಮಾಸೆ ಕೈಗೂಡ ವರದಾನ ತಂದು
ಕರ್ಣಾಟ ಕಾವೇರಿ ತಾಯಾಗಿ ಬಂದು, ನಮ್ಮಾಸೆ ಕೈಗೂಡ ವರದಾನ ತಂದು
ಹಸಿಹಸಿರಲ್ಲಿ ಹನಿಹನಿಯಲ್ಲಿ, ಹಸಿಹಸಿರಲ್ಲಿ ಹನಿಹನಿಯಲ್ಲಿ
ಆನಂದ ತಂದೇನು ಎಂದೂ ಎಂದೂ ಎನೆ ನಾನೇ ಧನ್ಯ
ಈ ದೇಶ ಚೆನ್ನ ಈ ಮಣ್ಣು ಚಿನ್ನ...ಆಆಆ... ಆಹಾ..... ಲಲಲಾ

ಈ ಜನ್ಮ ನೂರಾರು ನಾತಾಳಿ ಬರುವೆ, ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
ಈ ಜನ್ಮ ನೂರಾರು ನಾತಾಳಿ ಬರುವೆ, ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
ಕಣಕಣದಲ್ಲಿ ಪರಿಪರಿಯಲ್ಲಿ, ಕಣಕಣದಲ್ಲಿ ಪರಿಪರಿಯಲ್ಲಿ
ಸಂತೋಷ ಕಂಡೇನು ಎಂದೂ ಎಂದೂ ಅದೆ ನನ್ನಾ ಪುಣ್ಯ
ಈ ದೇಶ ಚೆನ್ನ ಈ ಮಣ್ಣು ಚಿನ್ನ..
ಆಆಆ... ಆಹಾ..... ಲಲಲಾ  ಓಹೋಹೋ.. ಆಹಾ..ಹೇಹೇ ..  ಲಾಲಾ..
-----------------------------------------------------------------------------------------------------------------------

ಕಾವೇರಿ (1975)ಸಂಗೀತ: ಎಂ.ರಂಗರಾವ್ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಎಸ್.ಜಾನಕಿ

ಜಗದೀಶ್ವರೀ... ಅಮ್ಮಾ...
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ
ಮೇಲು ಕೀಳು ಎಂದು ಮನುಜ ತಂದುಕೊಂಡ ದಳ್ಳುರಿ
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ

ಗಾಳಿ ನೀರು ಬೆಳಕು ಭೂಮಿ ಗಗನಕೆಲ್ಲಿ ಜಾತಿ
ಈ ಐದರಿಂದ ಆದ ನಮಗೆ ಏಕೆ ಇಂತ ನೀತಿ
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ

ಕಾಡ ಕಲ್ಲ ಶಿಲ್ಪಿ ಕೆತ್ತಲದುವೆ ದೇವರಾಯಿತೆ
ಬೇಡಿದೆಲ್ಲ ಬಯಕೆ ನೀಡುವಂತ ಶಕ್ತಿ ಬಂದಿತೆ
ಭಕ್ತಿ ಕೇಂದ್ರವೆನಿಸೆ ಗುಡಿಯು ಶಕ್ತಿ ಬಂದಿತು
ಭಾವದ ವೇಗ ತುಂಬಿ ದೈವ ನೆಲೆಸಿತು
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ

ಹುಟ್ಟುವಾಗ ಒಂದೆ ರೀತಿ ಸತ್ತ ಮೇಲೆ ಇಲ್ಲ ಜಾತಿ
ಇರುವ ನಡುವೆ ಏಕೆ ನಮಗೆ ಭೇದಭಾವ ಭ್ರಾಂತಿ
ಅನ್ನದ ಗುಳಿನಲ್ಲಿಹುದೆ ಜಾತಿ ಎಂಬ ಮುದ್ರೆ
ಎಲ್ಲ ತನ್ನ ಮಕ್ಕಳೆಂದು ಮುದ್ದಿಸದೆ ನಿದ್ರೆ
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ

ನೀನೆ ಪ್ರೇಮರೂಪವೆಂದು ಜಗವು ಸಾರಿದೆ
ಒಲಿದ ಮನಗಳೆರಡು ಕೂಡೆ ಹರಸಬಾರದೆ
ಹೆಣ್ಣು ನೋವ ಹೆಣ್ಣು ದೈವ ಅರಿಯಲಾರದೆ
ನನ್ನ ಬಾಳ ಇರುಳು ಹಗಲು ನಿನ್ನದಾಗಿದೆ
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ
-------------------------------------------------------------------------------------------------------------------------

ಕಾವೇರಿ (1975)ಸಂಗೀತ: ಎಂ.ರಂಗರಾವ್ ಸಾಹಿತ್ಯ: ವಿಜಯನಾರಸಿಂಹ  ಹಾಡಿದವರು: ಎಸ್.ಜಾನಕಿ

ಹೆಣ್ಣು : ಆಆಆ .... ಆ.... ಆ... ಆ...  
ಗಂಡು : ಆ ಆಹಾ... ಆಹಹಹ್ .. ಓಹೋಹೋ ಹೂಂ ಹೂಂ ... 
ಹೆಣ್ಣು : ಆಕಾಶದಲ್ಲಿ ಬಾನಾಡಿಯಾಗಿ ದನಿಯ ಬೆರೆಸಿ ಹಾಡುವ 
          ನಲಿ ನಲಿವಾ ನಗು ನಗುವಾ... ಬಾ... ಆಆಅ... 
ಗಂಡು : ಆನಂದದಿಂದ ಒಂದಾದ ಬಂಧ ಸೊಗದ ಶುಭದ ಸಂಗಮ 
            ಮೃದು ಮಧುರಾ ಇದು ಅಮರಾ... ಬಾ... ಆಆಅ... 
            ಆನಂದದಿಂದ ಒಂದಾದ ಬಂಧ... ಆಆಅ... 

ಹೆಣ್ಣು : ತೇಲಿ ತೇಲಿ ಹೋಗುವಾ ದೂರ ದೂರ ಸಾಗುವಾ 
          ತೇಲಿ ತೇಲಿ ಹೋಗುವಾ ದೂರ ದೂರ ಸಾಗುವಾ 
          ಮಧುರ ಮಿಲನ ಸುಧೆಯ ಪಾನ...  
          ಮಧುರ ಮಿಲನ ಸುಧೆಯ ಪಾನ ಇಲ್ಲೇ ಇಂದ್ರ ವೈಭವ 
ಗಂಡು : ಹೃದಯ ಮೌನ ಬಾಷೆಯ ಕಣ್ಣಮಿಂಚ ಸನ್ನೆಯಾ 
           ಹೃದಯ ಮೌನ ಬಾಷೆಯ ಕಣ್ಣಮಿಂಚ ಸನ್ನೆಯಾ 
           ಒಲವ ಕರೆಯ ಸರಸ ಸಮಯ 
           ಒಲವ ಕರೆಯ ಸರಸ ಸಮಯ 
           ನೋಡು ಪ್ರೇಮ ಮಾಯೆಯಾ 
ಹೆಣ್ಣು : ಆಕಾಶದಲ್ಲಿ ಬಾನಾಡಿಯಾಗಿ ದನಿಯ ಬೆರೆಸಿ ಹಾಡುವ 
          ನಲಿ ನಲಿವಾ ನಗು ನಗುವಾ... ಬಾ... ಆಆಅ... 
ಗಂಡು : ಆನಂದದಿಂದ ಒಂದಾದ ಬಂಧ... ಆಆಅ... 

ಹೆಣ್ಣು : ಜಾತಿ ಮತದ ಮೀರಿದಾ ಪ್ರೇಮರಾಜ್ಯ ಸಂಪದಾ 
          ಜಾತಿ ಮತದ ಮೀರಿದಾ ಪ್ರೇಮರಾಜ್ಯ ಸಂಪದಾ 
          ನಿನಗೆ ನನಗೆ ಅವನ ಕೊಡುಗೆ ಅದನ್ನು ಹಂಚಿಕೊಳ್ಳುವಾ 
ಗಂಡು : ಹೊನ್ನ ಮಳೆಯು ಬೀಳಲಿ ನಮ್ಮ ಒಲವು ಬಾಳಲಿ 
            ನನಗೆ ನೀನು ನಿನಗೆ ನಾನು ಒಂದೇ ಪ್ರಾಣ ಆಗುವಾ 
ಇಬ್ಬರು  : ಆಕಾಶದಲ್ಲಿ ಬಾನಾಡಿಯಾಗಿ ದನಿಯ ಬೆರೆಸಿ ಹಾಡುವ 
              ನಲಿ ನಲಿವಾ ನಗು ನಗುವಾ... ಬಾ... ಆಆಅ... 
              ಆನಂದದಿಂದ ಒಂದಾದ ಬಂಧ... ಆಆಅ... 
----------------------------------------------------------------------------------------------------------------------

ಕಾವೇರಿ (೧೯೭೫)ಸಂಗೀತ: ಎಂ.ರಂಗರಾವ್ ಸಾಹಿತ್ಯ: ವಿಜಯನಾರಸಿಂಹ,  ಹಾಡಿದವರು: ಲತಾ, ಏನ್.ಎಸ್.ರಾಮನ್ 

ಹೆಣ್ಣು : ಶಿಲ್ಪ ಚತುರ ಕಲ್ಪನಾ ಕಲಾ ವಿಲಾಸವಾ
          ನೋಡೇ ಮೂಗನಾದರೂ ಕವಿತೆ ಹಾಡುವಾ
ಗಂಡು : ಭೂಮಿಗಿಳಿದು ಬಂದ ಈ ಯಕ್ಷಲೋಕವಾ
            ಕಂಡು ಕವಿಯು ಜಗವ ಮರೆತು ದೇವನಾಗುವಾ ಆಆಆ.. 
ಇಬ್ಬರು : ಶಿಲ್ಪ ಚತುರ ಕಲ್ಪನಾ ಕಲಾ ವಿಲಾಸವಾ 
          ನೋಡೇ ಮೂಗನಾದರೂ ಕವಿತೆ ಹಾಡುವಾ

ಗಂಡು : ಬಾ ಇಲ್ಲಿ ನಮ್ಮ ನಾವೇ ಇಂದು ಮರೆಯುವಾ 
           ಹೊಸದೊಂದು ಲೋಕದಲ್ಲಿ ವಿಹಾರಗೈಯುವಾ 
           ಬಾ ಇಲ್ಲಿ ನಮ್ಮ ನಾವೇ ಇಂದು ಮರೆಯುವಾ 
           ಹೊಸದೊಂದು ಲೋಕದಲ್ಲಿ ವಿಹಾರಗೈಯುವಾ 
           ಶಿಲ್ಪಿ ಜಕ್ಕಣ್ಣನ ಅಮರ ವೈಭವ...  
           ಶಿಲ್ಪಿ ಜಕ್ಕಣ್ಣನ ಅಮರ ವೈಭವ 
           ಅಂದು ಮೆರೆದ ರೀತಿಯಲ್ಲಿ ಇಂದು ನೋಡುವಾ 
ಇಬ್ಬರು : ಶಿಲ್ಪ ಚತುರ ಕಲ್ಪನಾ ಕಲಾ ವಿಲಾಸವಾ 
          ನೋಡೇ ಮೂಗನಾದರೂ ಕವಿತೆ ಹಾಡುವಾ

ಗಂಡು : ಆಹಾ.. ಚೇಲುವಿದಕೇ ರತಿಯು ಸಾಟಿಯೇ 
           ರಂಭೆಯಲ್ಲಿ ಓಡಿದಳೂ  ಬೆರಗಾಗಿಯೇ...ಆಆಆ...  
           ಆಹಾ.. ಚೇಲುವಿದಕೇ ರತಿಯು ಸಾಟಿಯೇ 
           ರಂಭೆಯಲ್ಲಿ ಓಡಿದಳೂ  ಬೆರಗಾಗಿಯೇ 
           ನಿನ್ನ ರೂಪ ಬಿಂಬಿಸುವ ಕನ್ನಡಿ ಸಾಕ್ಷಿ 
           ನಿನ್ನ ರೂಪ ಬಿಂಬಿಸುವ ಕನ್ನಡಿ ಸಾಕ್ಷಿ            
          ನಿನ್ನೊಳು ನೀ ಮರುಳಾದೇ ಮಾರನ ಸಾಕ್ಷಿ 
          ಆಹಾ.. ಚೇಲುವಿದಕೇ ರತಿಯು ಸಾಟಿಯೇ   
            
  ಹೆಣ್ಣು : ಹೇಳೂ.. ಹೇಳೂ ನೀನೇ ಹೇಳೂ.. ಹೂಂ 
            ಹೇಳೂ.. ಹೇಳೂ ಗಿಳಿಯೇ ಎನ್ನ ಇನಿಯನ ಪರಿ ಇದು ಸರಿಯೇ 
            ಹೇಳೂ.. ಹೇಳೂ ಗಿಳಿಯೇ ಎನ್ನ ಇನಿಯನ ಪರಿ ಇದು ಸರಿಯೇ 
            ಏಕಾಂತದಲ್ಲಿ ಚಿಂತಾಭ್ರಾಂತಳಾದೇ..  
           ಹಾದಿ ಕಾದು ಭ್ರಾಂತಳಾದೇ ಏಕೋ ಏನೋ  ಬೇತಳಾದೆ 
           ನನ್ನ ಮನದ ನೋವ ನಮಗೇ ನೀ ಕೇಳೆಂದೇ.. 
           ನೀ ಕೇಳೆಂದೇ.. ನೀ ಕೇಳೆಂದೇ..    
           ಹೇಳೂ.. ಹೇಳೂ ಗಿಳಿಯೇ ಎನ್ನ ಇನಿಯನ ಪರಿ ಇದು ಸರಿಯೇ   

ಗಂಡು : ಚನ್ನಕೇಶವನ ಚಂದ್ರಮುಖಿ ನೀನೇ ಪರಮ ಸುಖೀ...  
            ಚನ್ನಕೇಶವನ ಚಂದ್ರಮುಖಿ ನೀನೇ ಪರಮ ಸುಖೀ 
           ವಿರಹದಿಂದ ನೀ ಬಾಡಿದೇಯಾ ಸಖೀ
           ವಿರಹದಿಂದ ನೀ ಬಾಡಿದೇಯಾ ಸಖೀ 
           ಓಕುಳಿ ಆಡೇಯಾ ಅಳಲು ಉಕ್ಕೀ
           ಥೈ ಥೈ ತಕಿಟ ಧಿಮಿಕಿಟ ತಕಜನು ರಣುತಾ 
           ಕುಣಿದಾಡುವ ಬಾಲೆ ನಾಟ್ಯಲೋಲೆ 
           ದುರಾಜಾ ಮೋರ್ದೇವಿ ದೇನಲೇ 
          ಏನೀ ಸುನಾದ ಏನೀ ವಿನೋದ ಏನೀ ಭಾವೋನವಾದ 
ಹೆಣ್ಣು : ಶಿಲ್ಪಿ ಚಾತುರ್ಯ ಕಾವ್ಯ ಮಾಧುರ್ಯ ಕಲೆಯ ಸೌಂದರ್ಯ ನಾನೇ ನಾನೇ 
           ಮೈ ಪುಳಕ ಕೈ ಚಳಕ ಸಾರಥಿಕ ಜೀವನ ಸುಖ ನೀನೇ ನೀನೇ ನೀನೇ 
           ಇದು ಜೀವನ ಓ ದುರ್ಖನ ಝಣ ಝಣ ರುಪೈರ ಝಣ 
           ರೋಮಾಂಚನ.. ಚಿರ ಯೌವ್ವನ.. ಆಲಿಂಗನ...      
----------------------------------------------------------------------------------------------------------------------

No comments:

Post a Comment