124. ಬಿಡುಗಡೆ (೧೯೭೩/1973)


ಬಿಡುಗಡೆ ಚಿತ್ರದ ಹಾಡುಗಳು 
  1. ಬಾನಿಗೆ ನೀಲಿಯ ಮೇಘಕೆ ಬೆಳ್ಳಿಯ 
  2. ನನ್ನ ಪುಟ್ಟ ಸಂಸಾರ 
  3. ಬೆಡಗಿನ ಹೆಣ್ಣಾ 
  4. ನಿನ್ನೆಯೋ ಮುಗಿದಕಥೆ 
  5. ಬಾನಿಗೆ ನೀಲಿಯ (ಪಿ.ಬಿ.ಎಸ್) 
ಬಿಡುಗಡೆ (೧೯೭೩) - ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ ಬಣ್ಣವ ತಂದವನು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಹೆಣ್ಣು : ಆಆಆ...ಆಆಆ....
           ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ ಬಣ್ಣವ ತಂದವನು
           ಬಾನಿಗೆ ನೀಲಿಯ,ಮೇಘಕೆ ಬೆಳ್ಳಿಯ ಬಣ್ಣವ ತಂದವನು
           ಹೂವಲಿ ಚೆಂದ, ನಿನ್ನಲಿ ಅಂದ ಓಓಓ... ಓಓಓ
           ಹೂವಲಿ ಚೆಂದ, ನಿನ್ನಲಿ ಅಂದ ಈ ಹೆಣ್ಣಿನ ಕಣ್ಣಲ್ಲಿ
           ಆಸೆಯ ಕಡಲನ್ನೆ ತುಂಬಿದ   ನಾ ಏನು ಮಾಡಲಿ

ಗಂಡು : ಆ..ಆಹಾ..ಓ... ಒಹೋ... ಹೇ.. ಹೇ.. ಹೇ.. ಆಹಾಹ್ ಓಹೋಹೋ.. ಓಹೋಹೋ.. ಹೂಂ ಹೂಂ
           ಹಿಮದ ರಾಶಿಗೆ ಗಿರಿಯನ್ನು ಬಳಸಿ, ನಲಿವ ಆಸೆ ತಂದವ
           ತಂಗಾಳಿಗೆ, ಚೆಲ್ಲಾಟದ, ಬಯಕೆ ತಂದವ...
           ಹಿಮದ ರಾಶಿಗೆ ಗಿರಿಯನ್ನು ಬಳಸಿ, ನಲಿವ ಆಸೆ ತಂದವ

ಗಂಡು : ತೋರಿದ ನಿನ್ನ, ಕಾಡಿದ ನನ್ನ
            ತೋರಿದ ನಿನ್ನ, ಕಾಡಿದ ನನ್ನ ಮೋಹ ತುಂಬಿ ಎದೆಯಲ್ಲಿ ಆನುರಾಗ ತಂದ
            ನಾ ಏನು ಮಾಡಲಿ

ಹೆಣ್ಣು :  ಆಆಆಅ... ಏತಕೊ ಕಾಣೆ, ಬಳಲಿದೆ ಮನವು  ಹೊಂಬಿಸಿಲಲ್ಲು, ಬೆವರಿದೆ ಮೊಗವು
           ಏತಕೊ ಕಾಣೆ ,ಬಳಲಿದೆ ಮನವು ಹೊಂಬಿಸಿಲಲ್ಲು, ಬೆವರಿದೆ ಮೊಗವು,...  ಬೆವರಿದೆ ಮೊಗವು
           ಯೌವನ ಭಾರಕೆ, ಬಳುಕಿದೆ ನಡುವು
           ಯೌವನ ಭಾರಕೆ, ಬಳುಕಿದೆ ನಡುವು  ಎದೆಯಲಿ ಕೋಲಾಹಲವು
            ನಾ ಏನು ಮಾಡಲಿ

ಗಂಡು : ಕೊಡುವೇ, ನನ್ನೇ ನಾ ಕಾಣಿಕೆ, ಬಾರೆ ಸನಿಹಕೆ
            ಇನ್ನು ಒಂಟಿ ಇರಲಾರೆ, ನಿನ್ನನೆಂದು ಬಿಡಲಾರೆ ನೀನೆ ಬಾಳಿನಾಸರೆ
            ಕೊಡುವೇ ನನ್ನೇ ನಾ ಕಾಣಿಕೆ
            ಕಣ್ಬೆಳಕಲ್ಲೆ ಹೂವರಳಿಸಿದೆ  ಕಿರುನಗೆಯಲ್ಲೆ ಹತ್ತಿರ ಸೆಳೆದೆ
            ಕಣ್ಬೆಳಕಲ್ಲೆ ಹೂವರಳಿಸಿದೆ ಕಿರುನಗೆಯಲ್ಲೆ ಹತ್ತಿರ ಸೆಳೆದೆ  ತಾಳೆನು ಇನ್ನು, ಈ ದೂರವನು
           ನಾ ಏನು ಮಾಡಲಿ                               ಹೆಣ್ಣು :  ನಾ ಏನು ಮಾಡಲಿ
ಗಂಡು : ನಾ ಏನು ಮಾಡಲಿ                               ಹೆಣ್ಣು :  ನಾ ಏನು ಮಾಡಲಿ
--------------------------------------------------------------------------------------------------------------------

ಬಿಡುಗಡೆ (1973) - ನನ್ನ ಪುಟ್ಟ ಸಂಸಾರ ಲೋಕದಿಂದ ಬಹು ದೂರ..
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಮ್.ರಂಗರಾವ್ ಗಾಯನ: ಪಿ.ಸುಶೀಲ


ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ
ಪ್ರಿಯತಮನಾ ಪ್ರೇಮಗಂಗಾ ತುಂಬಿ ಹರಿವಾ ಮಂದಿರಾ
ತುಂಬಿ ಹರಿವಾ ಮಂದಿರಾ....
ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ
ಪ್ರಿಯತಮನಾ ಪ್ರೇಮಗಂಗಾ ತುಂಬಿ ಹರಿವಾ ಮಂದಿರಾ
ತುಂಬಿ ಹರಿವಾ ಮಂದಿರಾ....
ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ

ಮೋಡದ ಮರೆಯಾ ಹುಣ್ಣಿಮೆ ತೆರೆಯಾ ಚಿನ್ನದ ಮನೆಯಾ ಅಂಗಳದಲ್ಲೀ ಆಆಆ...
ಮೋಡದ ಮರೆಯಾ ಹುಣ್ಣಿಮೆ ತೆರೆಯಾ ಚಿನ್ನದ ಮನೆಯಾ ಅಂಗಳದಲ್ಲೀ
ಒಂದಾಗೀ ಓಲಾಡೀ ಪ್ರಿಯತಮ ನಾನೂ..
ಒಂದಾಗೀ ಓಲಾಡೀ ಪ್ರಿಯತಮ ನಾನೂ.. ಮೈ ಮರೆತಿಹೆವೂ ಆನಂದದಿ........
ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ
ಪ್ರಿಯತಮನಾ ಪ್ರೇಮಗಂಗಾ ತುಂಬಿ ಹರಿವಾ ಮಂದಿರಾ
ತುಂಬಿ ಹರಿವಾ ಮಂದಿರಾ....
ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ

ಗಾಳಿಯ ಗಾನ ಪ್ರಣಯದ ತಾನಾ ಕೂಡುತ ಹಾಡೀ ಕುಣಿಯುವುದಲ್ಲೀ.. ಆಆಆ..
ಗಾಳಿಯ ಗಾನ ಪ್ರಣಯದ ತಾನಾ ಕೂಡುತ ಹಾಡೀ ಕುಣಿಯುವುದಲ್ಲೀ
ಹಗಲಿಲ್ಲಾ ಇರುಳಿಲ್ಲಾ ಸವಿಮಲ ಪ್ರೇಮ
ಹಗಲಿಲ್ಲಾ ಇರುಳಿಲ್ಲಾ ಸವಿಮಲ ಪ್ರೇಮ ಮಳೆಗರೆದಿಹುದೂ ಯಾವಾಗಲೂ.....
ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ
ಪ್ರಿಯತಮನಾ ಪ್ರೇಮಗಂಗಾ ತುಂಬಿ ಹರಿವಾ ಮಂದಿರಾ
ತುಂಬಿ ಹರಿವಾ ಮಂದಿರಾ....
ನನ್ನ ಪುಟ್ಟ ಸಂಸಾರಾ ಲೋಕದಿಂದ ಬಹುದೂರಾ
-----------------------------------------------------------------------------------------------------------------------

ಬಿಡುಗಡೆ (1973) - ಬೆಡಗಿನ ಹೆಣ್ಣಾ ಅರಳಿದ ಕಣ್ಣಾ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ಎಮ್.ರಂಗರಾವ್ ಗಾಯನ: ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ  

ಕೋರಸ್ :  ಲಲ್ಲಲ್ಲಲ್ಲ ಲಲ್ಲಲಾ... ಲಲ್ಲಲಾ... ಲಲ್ಲಲಾಲಾ ...  ಲಲ್ಲಲಾಲಾ ...
ಹೆಣ್ಣು : ಬೆಡಗಿನ ಹೆಣ್ಣಾ..  ಅರಳಿದ ಕಣ್ಣಾ
          ಬೆಡಗಿನ ಹೆಣ್ಣಾ ಅರಳಿದ ಕಣ್ಣಾ ಸೊಗಸು ಕಂಡೆಯೇನೋ
ಕೋರಸ್ :  ಜೀನ್ ಜೀನ್ ನಾಕ್ಕಡಿ ಜಿಜಿನ್ನಾ
ಹೆಣ್ಣು : ನಲಿಯುವ ಹೆಣ್ಣಾ ನಡಿಗೆಯ ಚೆನ್ನಾ ಕಣ್ತುಂಬಾ ಕಾಣುವ ಆಸೆಯೇನು
          ಬೆಡಗಿನ ಹೆಣ್ಣಾ ಅರಳಿದ ಕಣ್ಣಾ .... ಲಾಲಾಲಲಲ (ಲಲಲ)
          ಲಾಲಾಲಲಲ ರರರೂರರ ಲಾಲಾಲಲಲ ರರರರ

ಹೆಣ್ಣು : ನೂರಾರು ಬಯಕೆಯ ವಯಸ್ಸು ಏನೇನೋ ಕಂಡಿದೆ ಕನಸು
ಕೋರಸ್ : ಲಲ್ಲಲಾ.. ಲಲ್ಲಲಾ ಲಲ್ಲಲಾ.. ಲಲ್ಲಲಾ
ಹೆಣ್ಣು : ಆ.. ನೂರಾರು ಬಯಕೆಯ ವಯಸ್ಸು ಏನೇನೋ ಕಂಡಿದೆ ಕನಸು
          ಉಯ್ಯಾಲೆ ಆಡೋ ಮನಸು ಮೂಡುತಿದೆ ಕಾಡುತಿದೆ ಒಹೋ
          ಕೂಡಿ  ನಲಿದಾಡಿ ಕುಣಿದಾಡಿ (ಚಚಚ)
         ಹಾಡಿ ಹೊಸ ಹಾಡ ಮೈಮರೆತು (ಚಚಚ)
         ಕೂಡಿ  ನಲಿದಾಡಿ ಕುಣಿದಾಡಿ (ಚಚಚ)
         ಹಾಡಿ ಹೊಸ ಹಾಡು ಮೈಮರೆತು ಚಚಚ
         ಬೆಡಗಿನ ಹೆಣ್ಣಾ ಅರಳಿದ ಕಣ್ಣಾ .... ಲಾಲಾಲಲಲ

ಹೆಣ್ಣು : ಇಂದೇನೋ ಹೊಸ ಉಲ್ಲಾಸ ನಾ ಎಂದೂ ಕಾಣದ ಹರುಷ.. ( ಡೂಡೂಡೂ ಡೂಡೂಡೂಡೂಡೂಡೂ)
          ಬಾಳಿಲ್ಲಿ ಇರಲಿ ಸರಸ ಪ್ರತಿದಿವಸ ಪ್ರತಿ ನಿಮಿಷ  ಒಹೋ...
         ಹಾರಿ ಬಾನಾಡಿ ನೀವಾಗಿ ( ಚಚಚ) ಏರಿ  ಮುಗಿಲಲ್ಲಿ ತೇಲಾಡಿ (ಚಚಚ)
         ಹಾರಿ ಬಾನಾಡಿ ನೀವಾಗಿ ( ಚಚಚ) ಏರಿ  ಮುಗಿಲಲ್ಲಿ ತೇಲಾಡಿ (ಚಚಚ)
         ಬೆಡಗಿನ ಹೆಣ್ಣಾ ಅರಳಿದ ಕಣ್ಣಾ ಸೊಗಸು ಕಂಡೆಯೇನೋ
ಕೋರಸ್ : ಜೀನ್ ಜೀನ್ ನಾಕ್ಕಡಿ ಜಿಜಿನ್ನಾ ಜೀನ್ ಜೀನ್ ನಾಕ್ಕಡಿ ಜಿಜಿನ್ನಾ
ಹೆಣ್ಣು :  ನಲಿಯುವ ಹೆಣ್ಣಾ ನಡಿಗೆಯ ಚೆನ್ನಾ ಕಣ್ತುಂಬಾ ಕಾಣುವ ಆಸೆಯೇನು
           ಬೆಡಗಿನ ಹೆಣ್ಣಾ ಅರಳಿದ ಕಣ್ಣಾ .... ಲಾಲಾಲಲಲ

ಕೋರಸ್ : ಹೂಂ ಹೂಂ .. ಲಲಲಲಾ  ಹೂಂ ಹೂಂ .. ಲಲಲಲಾ
ಗಂಡು :  ಕೈ ಜಾರಿ ಒಡೆದ ಮುತ್ತು ನೀವೀಗ ಕಳೆದ ಹೊತ್ತು
            ಕೈ ಜಾರಿ ಒಡೆದ ಮುತ್ತು ನೀವೀಗ ಕಳೆದ ಹೊತ್ತು
            ಬೇಕೆಂದು ಬಯಸಲು ಮತ್ತೆ ದೊರುಕುವುದೇ ದೊರಕುವುದೇ ಓ
            ಕುಣಿವಾಸೆ ತರವಲ್ಲ ದಿನವೆಲ್ಲವೂ ಕಲಿವಾಸೆ ಇರಬೇಕು ಅನುಗಾಲವೂ
            ಕುಣಿವಾಸೆ ತರವಲ್ಲ ದಿನವೆಲ್ಲವೂ ಕಲಿವಾಸೆ ಇರಬೇಕು ಅನುಗಾಲವೂ
           ಬೆಡಗಿನ ಹೆಣ್ಣೇ ಮೋಹದ ರನ್ನೇ ..
           ಬೆಡಗಿನ ಹೆಣ್ಣೇ ಮೋಹದ ರನ್ನೇ ಕಾಲಕಳೆಯಬೇಡಾ
           ನಲಿಯುವ ಹೆಣ್ಣೇ ಚೆಲುವಿನ ಚೆನ್ನೆ ನನ್ನಲ್ಲಿ ಇನ್ನು ಸುಳ್ಳಾಡಬೇಡ
           ಬೆಡಗಿನ ಹೆಣ್ಣೇ...
--------------------------------------------------------------------------------------------------------------------------

ಬಿಡುಗಡೆ (1973) - ನಿನ್ನೆಯೋ ಮುಗಿದ ಕಥೆ ನಾಳೆಯ ಚಿಂತೆ ವ್ಯಥೆ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ಎಮ್.ರಂಗರಾವ್ ಗಾಯನ: ಎಸ್.ಜಾನಕೀ 

ನಿನ್ನೆಯೋ ಮುಗಿದ ಕಥೆ ನಾಳೆಯ ಚಿಂತೆ ವ್ಯಥೆ
ಈ ದಿನಾ ನಿನ್ನದು ಈ ಹರುಷ ನಮ್ಮದು...  ರಾಜಾ... ಹುಶ್..
ಈ ದಿನಾ ನಿನ್ನದು ಈ ಹರುಷ ನಮ್ಮದು

ಓ.. ಆಹ್  ಓ.. ಆಹ್ ಆಅಅ ರರರರ...ಲಲಲಲಾಲಾಲ
ಕಣ್ಣಿನಲ್ಲೇ ಕುಣಿಸುವೆನು..  ಹಾಯ್,  ತುಟಿಯ ಮಿಂಚಲಿ ಸೆಳೆಯುವೆನು..  ಹಹ 
ಮಾತಲೇ ಮೈಮರೆಸುವೆನು ಸೋತೆ ಸೋತೆ ಏನಿಸುವೆನು
ಕಣ್ಣಿನಲ್ಲೇ ಕುಣಿಸುವೆನು, ತುಟಿಯ ಮಿಂಚಲಿ ಸೆಳೆಯುವೆನು
ಮಾತಲೇ ಮೈಮರೆಸುವೆನು ಸೋತೆ ಸೋತೆ ಏನಿಸುವೆನು
ನಿನ್ನೆಯೋ ಮುಗಿದ ಕಥೆ ನಾಳೆಯ ಚಿಂತೆ ವ್ಯಥೆ
ಈ ದಿನಾ ನಿನ್ನದು ಈ ಹರುಷ ನಮ್ಮದು 

ಓ.. ಆಹ್  ಓ.. ಆಹ್ ಆಅಅ ರುರುರುರೂರ್
ಅರುಳುತಿರುವ ಯೌವ್ವನವು...  ಹೋ.. ಎದೆಯ ತುಂಬಿ ಕಾಡುತಿದೆ ಏಯ್ 
ನಿನ್ನ ಕಂಡಾ ದಿನದಿಂದಾ  ನೂರು ಬಯಕೆ ಮೂಡುತಿದೆ 
ಭೂಮಿಗಿಳಿದಾ ಅಮೃತವಾ ಸೇವಿಸುವಂತೆ ಬಾ ಚೆಲುವಾ 
ಮತ್ತಿನ ಲೋಕದಿ ವಿಹರಿಸುವ ಜಗವನೇ ಕುಣಿಸುತಾ ನಗುತಿರುವಾ 
ನಿನ್ನೆಯೋ ಮುಗಿದ ಕಥೆ ನಾಳೆಯ...  ಚಿಂತೆ ವ್ಯಥೆ 
ಈ ದಿನಾ ನಿನ್ನದು ಈ ಹರುಷ ನಮ್ಮದು 
--------------------------------------------------------------------------------------------------------------------------

ಬಿಡುಗಡೆ (೧೯೭೩) - ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ,
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್, 


ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ, ಬಣ್ಣವ ತಂದವನು ಬಾನಿಗೆ ನೀಲಿಯ,
ಮೇಘಕೆ ಬೆಳ್ಳಿಯ, ಬಣ್ಣವ ತಂದವನು ಹೂವಲಿ ಚೆಂದ, ನಿನ್ನಲಿ ಅಂದ
ಹೂವಲಿ ಚೆಂದ, ನಿನ್ನಲಿ ಅಂದ
--------------------------------------------------------------------------------------------------------------------------

No comments:

Post a Comment