1673. ವಿಶೇಷ ಹಾಡುಗಳು

ವಿಶೇಷ ಹಾಡುಗಳು 
  1. ಕಾಣದಂತೆ ಆಕ್ರಮಿಸಿದೇ ವೈರೀ ಕರೋನಾ - ಎಸ್.ಪಿ.ಬಿ. (೨೦೨೦) 
  2. ಎದೆ ತುಂಬಿ ಹಾಡುವೇನೂ ಸವಿ ಜೇನ ಹರಿಸಿ - ಎಸ್.ಪಿ.ಬಿ 
  3. ಕನ್ನಡ ಬಂಧು ಸುಗ್ಗಿಯ ಕೇಳು - ಪಿ.ಬಿ.ಶ್ರೀ 
  4. ಈ ನಾಡು ನಮ್ಮದೂ ಈ ಗಾಳಿ ನಮ್ಮದೂ - ಕೋರಸ್ 
  5. ಮೀಲೇ ಸುರ್ ಮೇರಾ ತುಮ್ಹಾರಾ  - ಕೋರಸ್ 




೦೧. ಕೊರೋನಾ ಜಾಗೃತಿ ಮೂಡಿಸುವ ಹಾಡು
ಹಾಡಿದವರು :   ಶ್ರೀಯುತ ಎಸ್ ಪಿ ಬಾಲಸುಬ್ರಹ್ಮಣ್ಯಮ್ 
ಸಾಹಿತ್ಯ : ಜಯಂತ ಕಾಯ್ಕಿಣಿ

ಕಾಣದಂತೆ ಆಕ್ರಮಿಸಿದೇ ವೈರೀ ಕರೋನಾ
ಅದಕೆ ಈಗ ನಾವೇ ದಾರಿಯಾಗದಿರೋಣ
ಕಾಲಬುಡಕೆ ಬರುವ ತನಕ ಕಾಯದಿರೋಣ...
ಕಾಲಬುಡಕೆ ಬರುವ ತನಕ ಕಾಯದಿರೋಣ
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ...

ಹೆಸರು ಹುದ್ದೆ ಆಸ್ತಿ ಗಿಸ್ತಿ ಬರದೂ ನೆರವಿಗೇ....
ವೈದ್ಯ ದಾದಿ ಬಳಗ ಸಿದ್ಧ ನಮ್ಮ ಉಳಿವಿಗೇ..
ಅವರಿಗಾಗಿ ಸೌಕರ್ಯ ಸಿದ್ಧವಿಡೋಣ..
ಅವರಿಗಾಗಿ ಸೌಕರ್ಯ ಸಿದ್ಧವಿಡೋಣ..
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ...

ಕೈ ತೋಳೆದೇ ಮುಟ್ಟಬೇಕು ಅಂತಿದ್ದೇವೂ ಅಂದೂ...
ಮುಟ್ಟಿದರೇ ಎನನೂ ಕೈ ತೋಳೆಯೋಣ ಇಂದೂ...
ಸಂತೆಯಲಿ ಸಂದಣಿಯಲಿ ಹೋಗದಿರೋಣ....
ಸಂತೆಯಲಿ ಸಂದಣಿಯಲಿ ಹೋಗದಿರೋಣ....
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ...

ಬೀದಿ ಬದಿ ವ್ಯಾಪಾರೀ ಎಲ್ಲಿ ಹೋದರೋ...
ಮನೆಯೇಯಿರದ ಕೂಲಿ ಬಳಗ ಎಲ್ಲೀ.. ಇರುವರೋ
ಬೀದಿ ಬದಿ ವ್ಯಾಪಾರೀ ಎಲ್ಲಿ ಹೋದರೋ...
ಮನೆಯೇಯಿರದ ಕೂಲಿ ಬಳಗ ಎಲ್ಲೀ.. ಇರುವರೋ
ಅವರಿಗಾಗೀ..ಬುತ್ತಿಯನ್ನೂ..ಮೀಸಲಿಡೋಣ...
ಅವರಿಗಾಗೀ..ಬುತ್ತಿಯನ್ನೂ..ಮೀಸಲಿಡೋಣ...
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ..

ಭೂಮಿ ಬಾನು ನೀರು ಕಾಡು ಧ್ವಂಸ ಮಾಡುತ...
ನಾವೇ ತಂದು ಕೊಂಡೆವೀಗ ಚಂಡಮಾರುತ
ಭೂಮಿ ಬಾನು ನೀರು ಕಾಡು ಧ್ವಂಸ ಮಾಡುತ...
ನಾವೇ ತಂದು ಕೊಂಡೆವೀಗ ಚಂಡಮಾರುತ
ಈಗಲಾದ್ರೂ.. ಅಟ್ಟಹಾಸ ಬಿಟ್ಟು ಬಿಡೋಣ....
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ..
ಕಾಣದಂತೆ ಆಕ್ರಮಿಸಿದೇ ವೈರೀ ಕರೋನಾ
ಅದಕೆ ಈಗ ನಾವೇ ದಾರಿಯಾಗದಿರೋಣ
ಕಾಲಬುಡಕೆ ಬರುವ ತನಕ ಕಾಯದಿರೋಣ...
ಕಾಲಬುಡಕೆ ಬರುವ ತನಕ ಕಾಯದಿರೋಣ
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ
ನಾವೇ ಇಂದೂ ನಮಗೊಂದೂ ಅವಕಾಶ ಕೋಡೋಣ

------------------------------------------------------------------------------------------------------------------------

೦೨. ಈ ಟಿವಿ ಧಾರಾವಾಹಿ -  ಎದೆ ತುಂಬಿ ಹಾಡುವೇನು  - ಗಾಯನ : ಎಸ್.ಪಿ.ಬಿ 
 
ಆ. ಆ.. ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ 
ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ 
ಜೀವ ಇರುವ ಜೀವದೋರೆಗೆ ಭಾವದಿಂದ ಭಾವದೊಳಗೆ
ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ 
ನಮಿಸುತ್ತಾ... ನಮಿಸುತ್ತಾ... ನಮಿಸುತ್ತಾ... ನಿಮ್ಮ ಸುತ್ತ....
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ 
ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ 
ಜೀವ ಇರುವ ಜೀವದೋರೆಗೆ ಭಾವದಿಂದ ಭಾವದೊಳಗೆ
ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ 
ನಮಿಸುತ್ತಾ... ನಮಿಸುತ್ತಾ... ನಮಿಸುತ್ತಾ... ನಿಮ್ಮ ಸುತ್ತ....
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ..... 

ಚೈತ್ರವಿರಲೀ ಶಿಖರವಿರಲೀ ಬಾನಿಗೊಂದು ಪಲ್ಲವಿ 
ಕಣಿವೆಯಿರಲಿ ಶಿಖರವಿರಲೀ ಭೂಮಿಗೊಂದೆ ಪಲ್ಲವಿ..
ಬಂಧವೋ ಅನುಬಂಧವೋ.. ಪ್ರತಿ ಹೃದಯಕ್ಕೊಂದೇ ಪಲ್ಲವಿ
ಸ್ನೆಹವೋ ಸವಿ ಪ್ರೆಮವೋ ಪ್ರತಿ ಮನಸ್ಸಿಗೊಂದೇ ಪಲ್ಲವಿ
ಕೋಟಿ ಕೊಟಿ ಮನಸ್ಸುಗಳಲೀ ಕೋಟೆ ಕಟ್ಟು ಕನಸುಗಳಲಿ
ಹಾಡುವೇನು ಪಲ್ಲವಿಯ ಶಾರದೆಯ ಸವಿ ನುಡಿಯ 
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ 
ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ
ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ 
ನಮಿಸುತ್ತಾ... ನಮಿಸುತ್ತಾ... ನಮಿಸುತ್ತಾ... ನಿಮ್ಮ ಸುತ್ತ....
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ
ಎದೆ ತುಂಬಿ ಹಾಡುವೇನು... ಸರಿಗಮ ಸನಿಪದ ಗಮಗರಿ ಗಸರಿಸನಿ ನಿಗ ಎದೆ ತುಂಬಿ ಹಾಡುವೇನು...
ಸಾ.. ಧನಿಸಮಪದ ನಿಪಮದ ದನಿಸ ದನಿಸರಿಗ ದನಿಸಗದ ಪದನಿದ ದಪಮ ಮಗ ಮಪರಿಗಮನಿ ...   ಎದೆ  ತುಂಬಿ ..

ಭಾಷೆವಿಲ್ಲ ಬೇಧವಿಲ್ಲ ಭಾವಕ್ಕೊಂದೇ.. ಪಲ್ಲವಿ
ಅಂಕೆಗಿಲ್ಲ ಶಂಕೆಗಿಲ್ಲ ಜೇವಕ್ಕೊಂದೇ... ಪಲ್ಲವಿ
ರಂಗದ ಅಂತರಂಗದ ಅನುರಾಗಕ್ಕೊಂದೇ.. ಪಲ್ಲವಿ
ಧನಿಕರೋಕದಿ.. ಬಡವರೋ ಕೃತಿ.. ಸಾಟಿಕ್ಕೊಂದೇ.. ಪಲ್ಲವಿ
ಕೋಟಿ ಕೋಟಿ ಹೆಜ್ಜೆಗಳಲೀ.. ಕಣ್ಣ ತೆರೆಸೋ ನಾದಗಳಲೀ..
ಹಾಡುವೇನು ಪಲ್ಲವಿಯ ಶಾರದೆಯ ಸವಿ ನುಡಿಯ 
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ 
ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ
ಜೀವ ಇರುವ ಜೀವದೋರೆಗೆ ಭಾವದಿಂದ ಭಾವದೊಳಗೆ
ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ 
ನಮಿಸುತ್ತಾ... ನಮಿಸುತ್ತಾ... ನಮಿಸುತ್ತಾ... ನಿಮ್ಮ ಸುತ್ತ....
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ.. 

--------------------------------------------------------------------------

೩. ಕನ್ನಡ ಬಂಧು ಸುಗ್ಗಿಯ ಕೇಳು 
ಸಂಗೀತ, ರಚನೆ 
ಮತ್ತು: ಗಾಯನ :  ಪಿ.ಬಿ.ಶ್ರೀನಿವಾಸ 

ಕನ್ನಡ ಬಂಧು ಸುಗ್ಗಿಯ ಕೇಳು ಕನ್ನಡಾಂಬೆಮಾನಿಯಾಗಿ ಏಳೂ ... 
ಕನ್ನಡವು ಪಡೆಯಬಾರದು ಸೋಲೂ ... ಕನ್ನಡವಾಗಲೀ ಪ್ರೀತಿಯ ಹಾಲೂ ... 
ಕನ್ನಡ ಬಂಧೂ.... 
ಕನ್ನಡ ಬಂಧು ಸುಗ್ಗಿಯ ಕೇಳು ಕನ್ನಡಾಂಬೆಮಾನಿಯಾಗಿ ಏಳೂ ... 
ಕನ್ನಡವು ಪಡೆಯಬಾರದು ಸೋಲೂ ... ಕನ್ನಡವಾಗಲೀ ಪ್ರೀತಿಯ ಹಾಲೂ ... 
ಕನ್ನಡ ಬಂಧು ಸುಗ್ಗಿಯ ಕೇಳು 

ಕನ್ನಡ ನಾಡು ಕಲೆಗಳ ಬೀಡು... ಕನ್ನಡನಾಡಿನ ಹಿರಿಮೆಯ ಹಾಡು...  
ಕನ್ನಡ ಭಾಷೆಯು ಜೇನಿನ ಗೂಡು.. ಕನ್ನಡ ಗೀತೆಗೆ ಮನವನು ನೀಡೂ ....    
ಕನ್ನಡ ಬಂಧು ಸುಗ್ಗಿಯ ಕೇಳು 

ಕನ್ನಡ ನುಡಿ ಎಲ್ಲರಿಗೂ ಕಲಿಸು... 
ಕನ್ನಡ ನುಡಿ ಎಲ್ಲರಿಗೂ ಕಲಿಸು...  ಕನ್ನಡ ಮಾತೆಯ ಹರಕೆಯ ಬಯಸು 
ಕನ್ನಡ ವಿಜಯೋತ್ಸವ ದಿನ ನಡೆಸು ಕನ್ನಡತನದ ಹೆಮ್ಮೆಯ ಉಳಿಸು 
ಕನ್ನಡ ಬಂಧು ಸುಗ್ಗಿಯ ಕೇಳು 

ಕನ್ನಡ ಸಂಸ್ಕೃತಿ ಜಗದಲಿ ಬೆಳಗಲೀ .. ಕನ್ನಡ ಕೀರ್ತಿ ಸುಗಂಧ ಹರಡಲಿ 
ಕನ್ನಡ ಪತಾಕೆ ಬಾನಲಿ ಹಾರಲೀ ... ಕನ್ನಡದ ನೌಕೆ ತೀರವ ಸೇರಲೀ ... 
ಕನ್ನಡ ಬಂಧು ಸುಗ್ಗಿಯ ಕೇಳು 

ಕನ್ನಡ ತಾಯಿಯ ನಾಮವ ಜಪಿಸು... 
ಕನ್ನಡ ತನು ಕನ್ನಡ ಕನ್ನಡ ಕನ್ನಡ ಕನಸು ನನಸುಗಳೆಲ್ಲ ರೂಪ 
ಕನ್ನಡ ತನು ಕನ್ನಡ ಕನ್ನಡ ಕನ್ನಡ ಕನಸು ನನಸುಗಳೆಲ್ಲ ರೂಪ 
ಕನ್ನಡ ಕನ್ನಡಿಯಲಿ ಮುಖ ನೋಡು 
ಕನ್ನಡ ಕನ್ನಡಿಯಲಿ ಮುಖ ನೋಡು ಕನ್ನಡದಿಂದ ಸದಾ ಮೆರೆದಾಡು 
ಕನ್ನಡ ಬಂಧು ಸುಗ್ಗಿಯ ಕೇಳು ಕನ್ನಡಾಂಬೆಮಾನಿಯಾಗಿ ಏಳೂ ... 
ಕನ್ನಡವು ಪಡೆಯಬಾರದು ಸೋಲೂ ... ಕನ್ನಡವಾಗಲೀ ಪ್ರೀತಿಯ ಹಾಲೂ ... 

ಕನ್ನಡವೆಂದೂ ಬಾಡದ ಹೂವೂ.. ಕನ್ನಡವೆಂದೂ ಬಾಡದ ಹೂವೂ 
ಕನ್ನಡ ವೈರಿಯ ಹೆಸರೇ ಹಾವೂ ... ಕನ್ನಡ ವೈರಿಯ ಹೆಸರೇ ಹಾವೂ ... 
ಕನ್ನಡ ಪ್ರೇಮದ ಖನಿಗಳ ನಾವೂ 
ಕನ್ನಡ ಪ್ರೇಮದ ಖನಿಗಳ ನಾವೂ 
ಕನ್ನಡಕ್ಕೇ ಚಿರಋಣಿಗಳು ನಾವೂ... 
ಕನ್ನಡ ಬಂಧು ಸುಗ್ಗಿಯ ಕೇಳು ಕನ್ನಡಾಂಬೆಮಾನಿಯಾಗಿ ಏಳೂ ... 
ಕನ್ನಡವು ಪಡೆಯಬಾರದು ಸೋಲೂ ... ಕನ್ನಡವಾಗಲೀ ಪ್ರೀತಿಯ ಹಾಲೂ ... 
-------------------------------------------------------------------------
೪. ಈ ಮಣ್ಣು ನಮ್ಮದು ಈ ಗಾಳಿ ನಮ್ಮದು
ಸಂಗೀತ ಮತ್ತು ರಚನೆ : ಆರ್ ಎನ್ ಜಯಗೋಪಾಲ್ ಗಾಯನ :  ಮದರಾಸ್ ಆರ್ಕೆಸ್ಟ್ರಾ


ಗಂಡು : ಈ ಮಣ್ಣು ನಮ್ಮದು (ಹೂಂಹೂಂಹೂಂ )
ಹೆಣ್ಣು : ಈ ಗಾಳಿ ನಮ್ಮದು (ಹೂಂಹೂಂಹೂಂ )
ಗಂಡು : ಈ ಮಣ್ಣು ನಮ್ಮದು
ಹೆಣ್ಣು : ಈ ಗಾಳಿ ನಮ್ಮದು
ಗಂಡು : ಕಲಕಲನೆ ಹರಿಯುತಿಹ ನೀರು ನಮ್ಮದು
ಕೋರಸ್ : ಲಲಲಾ ಲಲಲಾ ಲಲಲಾ ಲಲಲಾ ಲಲಲಾ
ಗಂಡು : ಕಲಕಲನೆ ಹರಿಯುತಿಹ ನೀರು ನಮ್ಮದು
ಎಲ್ಲರು : ಕಣಕಣದಲು ಭಾರತೀಯ ರಕ್ತ ನಮ್ಮದು.. ನಮ್ಮದು.. ನಮ್ಮದು
ಗಂಡು : ಈ ಮಣ್ಣು ನಮ್ಮದು ಹೂಂಹೂಂಹೂಂ

ಗಂಡು : ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ
ಹೆಣ್ಣು : ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
ಗಂಡು : ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ... ತಂದೆ ಸಮಾನ 
ಹೆಣ್ಣು : ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ... ತಾಯಿ ಸಮಾನ 
ಎಲ್ಲರು : ಈ ದೇಶದ ಜನರೆಲ್ಲರೂ ಸೋದರ ಸಮಾನ,
             ಈ ನಾಡಿನ ಹೃದಯವದು ದೈವ ಸನ್ನಿಧಾನ.. ದೈವ ಸನ್ನಿಧಾನ 
ಗಂಡು : ಈ ಮಣ್ಣು ನಮ್ಮದು
ಹೆಣ್ಣು : ಈ ಗಾಳಿ ನಮ್ಮದು
ಗಂಡು : ಕಲಕಲನೆ ಹರಿಯುತಿಹ ನೀರು ನಮ್ಮದು
ಎಲ್ಲರು : ಕಣಕಣದಲು ಭಾರತೀಯ ರಕ್ತ ನಮ್ಮದು.. ನಮ್ಮದು.. ನಮ್ಮದು
ಗಂಡು : ಈ ಮಣ್ಣು ನಮ್ಮದು ಆಆಆಅ... ಆಆಆ

ಗಂಡು : ಅಜಂತ ಎಲ್ಲೋರ ಹಳೆಬೀಡು ಬೇಲೂರು ಶಿಲೆಗಳಿವು ಕಲೆಯ ಆಗರ.. (ಕಲೆಯ ಆಗರ)
ಅಜಂತ ಎಲ್ಲೋರ ಹಳೆಬೀಡು ಬೇಲೂರು ಶಿಲೆಗಳಿವು ಕಲೆಯ ಆಗರ.. (ಕಲೆಯ ಆಗರ)
ಹೆಣ್ಣು : ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ (ಮಹಾಸಾಗರ )
          ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ (ಮಹಾಸಾಗರ )
         ನಡೆದು ಹೋದ ಚರಿತೆಯು ನಾಳೆ ಎನುವ ಕವಿತೆಯು (ಹ್ಞೂ.ಹ್ಞೂ.ಹ್ಞೂ..ಹ್ಞೂ.)
         ನಡೆದು ಹೋದ ಚರಿತೆಯು ನಾಳೆ ಎನುವ ಕವಿತೆಯು
ಎಲ್ಲರು : ಈ ನಾಡ ಮಣ್ಣಲಿದೆ ಜೀವನ ಸಾರ/ ಜೀವನ ಸಾರ ಹ್ಞೂ..ಹ್ಞೂ...ಹ್ಞೂ...ಹ್ಞೂ...
ಗಂಡು : ಈ ಮಣ್ಣು ನಮ್ಮದು
ಹೆಣ್ಣು : ಈ ಗಾಳಿ ನಮ್ಮದು
ಗಂಡು : ಕಲಕಲನೆ ಹರಿಯುತಿಹ ನೀರು ನಮ್ಮದು
ಎಲ್ಲರು : ಕಣಕಣದಲು ಭಾರತೀಯ ರಕ್ತ ನಮ್ಮದು.. ನಮ್ಮದು.. ನಮ್ಮದು
ಗಂಡು : ಈ ಮಣ್ಣು ನಮ್ಮದು ಆಆಆಅ... ಆಆಆ

ಗಂಡು : ತಂಗಾಳಿಗೆ ತಲೆದೂಗುವ ಪೈರಿನ ಹಾಡು ಪೈರಿನ ಹಾಡು
ಕೋರಸ್ : ಲಲಲಾ ಲಲಲಾ ಲಲಲಾ ಲಲಲಾ ಲಲಲಾ
             ತಂಗಾಳಿಗೆ ತಲೆದೂಗುವ ಪೈರಿನ ಹಾಡು ಪೈರಿನ ಹಾಡು
            ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು.. ಯಂತ್ರದ ಜಾಡು... ಯಂತ್ರದ ಜಾಡು
ಗಂಡು : ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು
            ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು
ಎಲ್ಲರು : ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು... ಸಾಗಿದೆ ನೋಡು
--------------------------------------------------------------------------------------------------------------------------

5. ಮೀಲೇ ಸುರ್ ಮೇರಾ ತುಮ್ಹಾರಾ ತೋ ಸುರ್ ಬನೇ ಹಮಾರಾ - ಕೋರಸ್ 

ಹಿಂದಿ - ಮೀಲೇ ಸುರ್ ಮೇರಾ ತುಮ್ಹಾರಾ ತೋ ಸುರ್ ಬನೇ ಹಮಾರಾ
          ಸುರ್ ಕೀ ನದಿಯಾನ್ ಹರ್ ದಿಶಾ ಸೇ ಬಹಕೇ ಸಾಗರ್ ಮೇ ಮೀಲೇ.. 
          ಬಾದಲೊಂನ್ ಕಾ ರೂಪ್ ಲೇಕರ್ ಭರಸೇ.. ಹಲಕೇ ..  ಹಲಕೇ ..   
          ಮೀಲೇ ಸುರ್ ಮೇರಾ ತುಮ್ಹಾರಾ ತೋ... ಸುರ್ ಬನೇ ಹಮಾರಾ
          ಮೀಲೇ ಸುರ್ ಮೇರಾ ತುಮ್ಹಾರಾ 

ಕಾಶ್ಮೀರೀ :  ಚೈನ್ ತರಜ್  ತೈನ್ ತರಜ್ ಏಕವಟ್ ಬನಿಯೇ ಸಾಯೇನ್ ತರಜ್ 
ಪಂಜಾಬಿ : ತೇರಾ ಸುರ್ ಮೀಲೇ ಮೇರೇ ಸುರದೇ ನಾಲ್ 
                ಮಿಲಕೇ ಬಣೇ ಏಕ್ ನವಾ ಸುರ್ ತಾಲ್ 
ಹಿಂದಿ : ಮೀಲೇ ಸುರ್ ಮೇರಾ ತುಮ್ಹಾರಾ ತೋ ಸುರ್ ಬನೇ ಹಮಾರಾ

ಸಿಂಧೀ : ಮೋಹಂಜಾ ಸುರ್ ಕಹೀ ದೇಸ್ ಪ್ಯಾರ್ ಮೀಲೇ ಕೋ ದೇ 
            ಗೀತ ಅ ಸಾಧೋ ಮಧುರ ಕರಾಲೋ ಬಡೇ ತಲೇ       
ಉರ್ದು:  ಸುರ್ ಕಾ ದರಿಯಾ ಬಹಕೇ ಪಾಗಲ್ ಮೇಲ್ ಮೀಲೇ  
ಪಂಜಾಬಿ: ಬದಲಾಂದ ರೂಪ ಲೇಕೇ ಬರಸನ್  ಓಲೇ .. ಓಲೇ 

ತಮಿಳ : ಇಸೈನ್ ಧಾಲ್ ನಮ್ಮ್ ಇರುವರೀನ್ ಸುರಮುಮ್ ನಮಗಾ ರೂಮ್ 
             ಇಸೈನದೇ ರಾನಾಲಂ ಆಳಿಸೇ ಆರಗಳ್ ಮುಗಿಲಾಐ 
             ಮಳೆಯಾಳ್ ಪೋವಿವರ್ ಪೋ ನೀಸೈ  ನಂಬೀ ಸೈ.... ಹೀಹೀ ಹೀ ಹೀ ಹೀ  
ಕನ್ನಡ : ಧಿಕ್ ತಕಡದು 
           ತಕಧಿಮಿ ತಕಝನು ತಕಧಿಮಿ ತಕಝನು  ತಕಧಿಮಿ ತಕಝನು ತಕಧಿಮಿ ತಕಝನು    
           ನನ್ನ ಧ್ವನಿಗೇ ನಿನ್ನ ದ್ವನಿಯ ಸೇರಿದಂತೇ ನಮ್ಮ ಧ್ವನಿಯಾ 
ತೆಲಗು : ನಾ ಸ್ವರಮೂ ನೀ ಸ್ವರಮೂ ಸಂಗಮ ಮೈ ಮರೇತರಂಗ ಅವತಿರಂಚೇ.. 
ಮಲಯಾಳಂ: ನಿಂದೇ ಸ್ವರವಂ ನಿಂಗಳುಡೇ ಸ್ವರವಂ ಒತ್ತುಜೇನು ನಮ್ಮೂಡೇ ಸ್ವರಮಾಯ್    

ಬಂಗಾಳಿ: ತೋ.. ಮಾರ್ ಶೂರ್ ಮೋದೇರ್ ಶೋರ್ ಸೃಷ್ಟಿ ಕೋರೂ ಕೋಯೀ ಕೋ ಶೂರ್ 
              ತೋ.. ಮಾರ್ ಶೂರ್ ಮೋದೇರ್ ಶೋರ್ ಸೃಷ್ಟಿ ಕೋರೂ ಕೋಯೀ ಕೋ ಶೂರ್ 
             ಸೃಷ್ಟಿ ಹೋ ಓಹೀ ಕೋ ತಾಲ್ 
ಓಡಿಯಾ : ತೋಮಾ ಮುರ ಸುರರ ಮಿಲನ ಸೃಷ್ಟಿ ಕಾರೀ ಚಾಲುವ್ ಚಪ್ಪಾನೂ 
ಗುಜಾರಾತೀ : ಮಳೇ ಸುರ್ ಜೋ ತಾರೋ ಮಾರೋ ಬನೇ ಅಪಣೋ ಸುರ್ ನೀರಾಳೋ  
ಮರಾಠಿ : ಮಾಂಝಾ ತುಮಝಾ ಧೂಲ್ ಕಾ ತಾರಾ ಮಧುರ ಸುರಾಂಚಾ ಬರಸೀ ಕೀ ಧಾರಾ.. 
ಹಿಂದಿ : ಸುರ್ ಕೀ ನದಿಯಾನ್ ಹರ್ ದಿಶಾ ಸೇ ಬಹಕೇ ಸಾಗರ್ ಮೇ ಮೀಲೇ.. 
          ಬಾದಲೊಂನ್ ಕಾ ರೂಪ್ ಲೇಕರ್ ಭರಸೇ.. ಹಲಕೇ ..  ಹಲಕೇ ..   
          ಓ... ಮೀಲೇ ಸುರ್ ಮೇರಾ ತುಮ್ಹಾರಾ 
          ಮೀಲೇ ಸುರ್ ಮೇರಾ ತುಮ್ಹಾರಾ.. ಓ..  ಸುರ್ ಬನೇ ಹಮಾರಾ
          ಮೀಲೇ ಸುರ್ ಮೇರಾ ತುಮ್ಹಾರಾ.. ಓ..  ಸುರ್ ಬನೇ ಹಮಾರಾ
          ಮೀಲೇ ಸುರ್ ಮೇರಾ ತುಮ್ಹಾರಾ.. ಓ..  ಸುರ್ ಬನೇ ಹಮಾರಾ
          ಓ..  ಸುರ್ ಬನೇ ಹಮಾರಾ  ಓ..  ಸುರ್ ಬನೇ ಹಮಾರಾ
          ಓ..  ಸುರ್ ಬನೇ ಹಮಾರಾ  ಓ..  ಸುರ್ ಬನೇ ಹಮಾರಾ
          ಓ..  ಸುರ್ ಬನೇ ಹಮಾರಾ  ಓ..  ಸುರ್ ಬನೇ ಹಮಾರಾ
---------------------------------------------------------------------------------------------------------------------

No comments:

Post a Comment