202. ಗುರು ಶಿಷ್ಯರು (1981)


ಗುರು ಶಿಷ್ಯರು ಚಿತ್ರದ ಹಾಡುಗಳು 
  1. ದೊಡ್ಡವರೆಲ್ಲಾ ಜಾಣರಲ್ಲ
  2. ಜಯ ಜಯ ಸಾಂಬಸದಾಶಿವ 
  3. ದೀನಳ ಮೊರೆಯ 
  4. ನಿನಗಾಗಿ ಎಲ್ಲ ನಿನಗಾಗಿ 
  5. ನಾಚಿ ಓಡಿದನು ಮದನಾ 
ಗುರು ಶಿಷ್ಯರು (1981) - ದೊಡ್ಡವರೆಲ್ಲ ಜಾಣರಲ್ಲ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಕೆ.ವಿ.ಮಹಾದೇವನ್ ಗಾಯನ : ಎಸ್. ಪಿ.ಬಿ.

ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎ೦ದೂ ನಿಜವಲ್ಲ ಗೆಳೆಯ ಎ೦ದು ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ

ದೊಡ್ಡ ಮನುಷ್ಯರು ದೊಡ್ಡವರಲ್ಲ... (ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ... (ನುಗ್ಗುವರೆಲ್ಲ)
ದೊಡ್ಡ ಮನುಷ್ಯರು ದೊಡ್ಡವರಲ್ಲ... (ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ... (ನುಗ್ಗುವರೆಲ್ಲ)
ಕೋಟೆಗೆ ಕನ್ನ ಹಾಕುವರಲ್ಲ  ಗ೦ಟನು ಕಟ್ಟಿ ಓಡುವರಲ್ಲ
ತಕದಿಮಿ ತಕದಿಮಿ ತಕದಿಮಿ ತಕದಿಮಿ ಬಡಿದರೆ ಆಗ ತೋಡಿ ರಾಗ ಹಾಡುವರಲ್ಲ
(ಆಆಆ..ಆಆಆ.. )
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ದೊಡ್ಡವರೆಲ್ಲ ಜಾಣರಲ್ಲ

(ಆಆಆ... ಸರಿಗಮಪದನಿಸ ಸರಿಗಮಪದನಿಸ ಪದನಿಸ ಪದನಿಸ
ಆಆಆ.. ಕುಡ್ತಕ್ಯಾಕೂ ಕುಡ್ತಕ್ಯಾಕೂ )
ಸರಿಗಮಪದನಿಸ ಹೇಳುವರೆಲ್ಲ ಸ೦ಗೀತವನು ಬಲ್ಲವರಲ್ಲ
(ಸರಿ ಗಮ ಪದ ನಿಸ)
ಸರಿಗಮಪದನಿಸ ನಿಸದಪರಿಗಮಗ  ಹೇಳುವರೆಲ್ಲ ಸ೦ಗೀತವನು ಬಲ್ಲವರಲ್ಲ
ಎರಡಕ್ಷರವ ಕಲಿತವರೆಲ್ಲ ಪ೦ಡಿತರ೦ತೆ ನಟಿಸುವರಲ್ಲ
(ಆ ಏ ಈ ಔ ಊ ಐ ಅ೦)
ಒ೦ದೊ೦ದ್ಲ ಒ೦ದು ಮಗ್ಗಿಯ ಮು೦ದೆ ಬೇರೆ ಸುಲಭದ ಲೆಕ್ಕವೆ ಇಲ್ಲ
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ದೊಡ್ಡವರೆಲ್ಲ ಜಾಣರಲ್ಲ

(ಹೂಂ..ಹೂಶ್...   ಹೂಂ ಪೂರರರ್ ದುಂಬತಕ ತಕ ತಕ
ದಿಂಗತಕ ತಕ ತಕ ದಿಂಗತಕ ತಕ ತಕ )
ಅರಗಿಳಿ ನೀರಲಿ ಈಜುವುದಿಲ್ಲ... (ಈಜುವುದಿಲ್ಲ)
ಮೊಸಳೆಯು ಮೇಲೆ ಹಾರುವುದಿಲ್ಲ... (ಹಾರುವುದಿಲ್ಲ)
ಅರಗಿಳಿ ನೀರಲಿ ಈಜುವುದಿಲ್ಲ... (ಈಜುವುದಿಲ್ಲ ಇಲ್ಲಾ )
ಮೊಸಳೆಯು ಮೇಲೆ ಹಾರುವುದಿಲ್ಲ... (ಹಾರೋದಿಲ್ಲಾ ಇಲ್ಲಾ )
ಕಾಗೆಗೆ ಗ೦ಟಲು ಕಟ್ಟುವುದಿಲ್ಲ (ಕಾ ಕಾ ಕಾ ಕಾ ಕಾ )
ಗೂಬೆಯ ಯಾರೂ ಸಾಕುವುದಿಲ್ಲ (ಉಹೂಂ ಉಹೂಂ ಉಹೂಂ)
ಇ೦ಥ ಶಿಷ್ಯರು ಬೇಕು ಎ೦ದರು ಬೇರೆ ಯಾರಿಗು ಸಿಕ್ಕುವುದಿಲ್ಲ (ಇಲ್ಲ ಇಲ್ಲ )
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ ಎ೦ದೂ ನಿಜವಲ್ಲ ಗೆಳೆಯ ಎ೦ದು ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ದೊಡ್ಡವರೆಲ್ಲ ಜಾಣರಲ್ಲ
-------------------------------------------------------------------------------------------------------------------

ಗುರು ಶಿಷ್ಯರು (೧೯೮೧)......ಜಯ ಜಯ ಸಾಂಬಸದಾಶಿವ ಶಂಕರ
ಸಾಹಿತ್ಯ : ಚಿ.ಉದಯಶಂಕರ ಸಂಗೀತ :ಕೆ.ವಿ.ಮಹಾದೇವನ್ ಗಾಯನ್:ಎಸ್.ಜಾನಕಿ ಮತ್ತು ಸಂಗಡಿಗರು


ಓಂ.....ಓಂ.....ಓಂ.....
ಜಯ ಜಯ ಸಾಂಬಸದಾಶಿವ ಶಂಕರ
ಜಯ ಜಯ ಸಾಂಬಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ  ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ    ಓಂ ನಮಃ ಶಿವಾಯ    ಓಂ ನಮಃ ಶಿವಾಯ ಶಿವಾಯ ನಮಃ
ಜಯ ಜಯ ಸಾಂಬಸದಾಶಿವ ಶಂಕರ

ಜಯ ಗಂಗಾಧರ ಸೋಮಶೇಖರ ಜಗದಾಧರ ಫಣಿಹಾರ
ಜಯ ಗಂಗಾಧರ ಸೋಮಶೇಖರ ಜಗದಾಧರ ಫಣಿಹಾರ
ರುಂಡಮಾಲಧರ ನೀಲಕಂಠಹರ ಗಜಚರ್ಮಾಂಬರಧರ ಶೂಲಧರ
ರುಂಡಮಾಲಧರ ನೀಲಕಂಠಹರ ಗಜಚರ್ಮಾಂಬರಧರ ಶೂಲಧರ  ಓ......ಓ.....ಓ....
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ
ಜಯ ಜಯ ಸಾಂಬಸದಾಶಿವ ಶಂಕರ

ಜಯ ಅಭಯಂಕರ ಸರ್ವಶುಭಂಕರ ಮುನಿಜನಸೇವಿತ ಗಂಭೀರ
ಜಯ ಅಭಯಂಕರ ಸರ್ವಶುಭಂಕರ ಮುನಿಜನಸೇವಿತ ಗಂಭೀರ
ಜಯ ಮೃತ್ಯುಂಜಯ ಜಯ ನಿಟಿಲಾಕ್ಷ ಕರುಣಾಸಾಗರ ಓಂಕಾರ
ಜಯ ಮೃತ್ಯುಂಜಯ ಜಯ ನಿಟಿಲಾಕ್ಷ ಕರುಣಾಸಾಗರ ಓಂಕಾರ
ಜಯ ಜಯ ಸಾಂಬಸದಾಶಿವ ಶಂಕರ  ಜಯ ಜಯ ಸಾಂಬಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ   ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ  ಓ......ಓ.....ಓ....
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ  ಓ......ಓ.....ಓ....
---------------------------------------------------------------------------------------------------------------

ಗುರುಶಿಶ್ಯರು (1981)......ನಿನಗಾಗಿ ಎಲ್ಲ ನಿನಗಾಗಿ
ಸಾಹಿತ್ಯ : ಚಿ. ಉದಯಶಂಕರ್  ಸಂಗೀತ : ಕೆ.ವಿ.ಮಹಾದೇವನ್  ಗಾಯನ : ಎಸ್.ಜಾನಕಿ ಮತ್ತು ಪಿ.ಸುಶೀಲ

ಎಸ್.ಜಾನಕಿ :  ದೀನಳ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಓ ರಮಣ
                     ದೀನಳ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಓ ರಮಣ
ಪಿ.ಸುಶೀಲ:     ದೀನರ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಭೂ ರಮಣ
                    ದೀನರ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಭೂ ರಮಣ

ಎಸ್.ಜಾನಕಿ :  ಆಸರೆ ಕಾಣದೆ ನೊಂದಿದೆ ಪ್ರಾಣ ನಿರಾಸೆಯ ತುಂಬಿದೆ ನನ್ನ
                     ಆಸರೆ ಕಾಣದೆ ನೊಂದಿದೆ ಪ್ರಾಣ ನಿರಾಸೆಯ ತುಂಬಿದೆ ನನ್ನ
                     ಸೇರೇ ಸನಿಹ ಸಂತೈಸೆ ಒಲಿದು ಮನಸಾರ ಬೆರೆತು ಸುಖ ನೀಡಬಾರದೆ
                     ದೀನಳ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಓ ರಮಣ

ಪಿ.ಸುಶೀಲ:     ಆಸರೆ ಕಾಣದೆ ನೊಂದಿಹ ಜನರ ನಿರಾಸೆಗೆ ನೂಕುವುದೇನು
                     ಆಸರೆ ಕಾಣದೆ ನೊಂದಿಹ ಜನರ ನಿರಾಸೆಗೆ ನೂಕುವುದೇನು
                     ಹಾಡಿ ಕುಣಿವ ಹೆನ್ಣೊಂದ ಸೇರಿ ನಿಜಕಾರ್ಯ ಮರೆವ ದೊರೆಗೇಕೆ ರಾಜ್ಯವೂ
                     ದೀನರ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಭೂ ರಮಣ
-------------------------------------------------------------------------------------------------------------------------

ಗುರು ಶಿಷ್ಯರು (1981)............ನಿನಗಾಗಿ ಎಲ್ಲಾ ನಿನಗಾಗಿ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಕೆ.ವಿ.ಮಹಾದೇವನ್ ಗಾಯನ : ಎಸ್.ಜಾನಕಿ ಮತ್ತು ಎಸ್.ಪಿ.ಬಿ 


ಎಸ್.ಜಾನಕಿ: ನಿನಗಾಗಿ ಎಲ್ಲಾ ನಿನಗಾಗಿ ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಲ್ಲೇ ನಿನಗಾಗಿ ನಿನಗಾಗಿ ನಾನೇ ನಿನಗಾಗಿ
ಎಸ್.ಜಾನಕಿ:  ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಾನೇ ನಿನಗಾಗಿ
ಎಸ್.ಪಿ.ಬಾಲ: ರಾತ್ರಿಯ ರಾಣಿಯ ಸೆರಗಿನ ನೆರಳು ಹೊನ್ನ ಹೂಗಳು ನಭದಿ ಅರಳಿದಾ ಇರುಳು
ಎಸ್.ಜಾನಕಿ:  ಚಂದ್ರಕಾಂತಿಗೆ ಬೆವರೀ ಸೋತ ಈ ಒಡಲು 
                     ಹೃದಯದೊಳು ತುಂಬಿದ ಬಯಕೆಯಾ ಕಡಲು ಆ ಆ ...ಆ ಆ ...ಆ ಆ ...
ಎಸ್.ಪಿ.ಬಾಲ: ರಾತ್ರಿಯ ರಾಣಿಯ ಸೆರಗಿನ ನೆರಳು ಹೊನ್ನ ಹೂಗಳು ನಭದಿ ಅರಳಿದಾ ಇರುಳು
                     ಹೊನ್ನ ಹೂಗಳು ನಭದಿ ಅರಳಿದಾ ಇರುಳು
ಎಸ್.ಜಾನಕಿ: ಚಂದ್ರಕಾಂತಿಗೆ ಬೆವರೀ ಸೋತ ಈ ಒಡಲು
                    ಚಂದ್ರಕಾಂತಿಗೆ ಬೆವರೀ ಸೋತ ಈ ಒಡಲು ಹೃದಯದೊಳು ತುಂಬಿದ ಬಯಕೆಯಾ ಕಡಲು
ಎಸ್.ಪಿ.ಬಾಲ: ನಿನಗಾಗಿ ನಲ್ಲೇ ನಿನಗಾಗಿ
ಎಸ್.ಜಾನಕಿ: ನಿನಗಾಗಿ ನಲ್ಲಾ ನಿನಗಾಗಿ
ಎಸ್.ಜಾನಕಿ: ತಾವರೆಯ ನಾಚಿಸುವ ಅಂದದಾ ವದನ  ವದನದಲಿ ಅರಳಿರುವ ನೈದಿಲೆಯ ನಯನ
ಎಸ್.ಪಿ.ಬಾಲ: ನಯನದಲಿ ತುಂಬಿರುವ ಈ ರತಿಯ ಧ್ಯಾನ  ನನ್ನೆದೆಗೆ ನಾಟಿರುವ ಮನ್ಮಥನ ಬಾಣ
ಎಸ್.ಜಾನಕಿ: ತಾವರೆಯ ನಾಚಿಸುವ ಅಂದದಾ ವದನ ವದನದಲಿ ಅರಳಿರುವ ನೈದಿಲೆಯ ನಯನ
                   ವದನದಲಿ ಅರಳಿರುವ ನೈದಿಲೆಯ ನಯನ
ಎಸ್.ಪಿ.ಬಾಲ: ನಯನದಲಿ ತುಂಬಿರುವ ಈ ರತಿಯ ಧ್ಯಾನ  
                     ನಯನದಲಿ ತುಂಬಿರುವ ಈ ರತಿಯ ಧ್ಯಾನ   ನನ್ನೆದೆಗೆ ನಾಟಿರುವ ಮನ್ಮಥನ ಬಾಣ
ಎಸ್.ಜಾನಕಿ:ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಲ್ಲೇ ನಿನಗಾಗಿ
ಎಸ್.ಜಾನಕಿ:ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಾನೇ ನಿನಗಾಗಿ  ನಿನಗಾಗಿ ...ನಿನಗಾಗಿ ...ನಿನಗಾಗಿ ..ನಿನಗಾಗಿ ....
--------------------------------------------------------------------------------------------------------------------------

ಗುರು ಶಿಷ್ಯರು (1981)............ನಿನಗಾಗಿ ಎಲ್ಲಾ ನಿನಗಾಗಿ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಕೆ.ವಿ.ಮಹಾದೇವನ್ ಗಾಯನ : ಎಸ್.ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ


ಗಂಡು : ಆ...ಆ...ಆ...ಆ..ಆ...ಆ...ಆ...ಆ..ಆಆಆ...
          ಮದನಾ ಓಡಿದನು ಮದನಾ.. ನಾಚಿ ಓಡಿದನು ಮದನಾ...
          ಮದನಾ ಮದನಾ.. ನಾಚಿ ಓಡಿದನು ಮದನಾ...
         ನೋಡಿ ನಿನ್ನ ಈ ಸುಂದರ ವದನಾ..
         ಮದನಾ ಮದನಾ ನಾಚಿ ಓಡಿದನು ಮದನಾ...

ಗಂಡು : ಆ ಸುರಲೋಕದ ಶಿಲ್ಪಿಯ ಕನಸೋ 
           ಹೊನ್ನಿನ ತಾವರೆ ಹೂವಿನ ಸೊಗಸೋ 
ಹೆಣ್ಣು :ಆ ಸುರಲೋಕದ ಶಿಲ್ಪಿಯ ಕನಸೋ 
         ಹೊನ್ನಿನ ತಾವರೆ ಹೂವಿನ ಸೊಗಸೋ
ಗಂಡು : ಪ್ರೇಮದ ರಾಜ್ಯವ ಆಳುವ ಅರಸೊ 
ಹೆಣ್ಣು : ಪ್ರೇಮದ ರಾಜ್ಯವ ಆಳುವ ಅರಸೊ 
ಗಂಡು : ನಿನ್ನ ನೋಡುವನೋ ನೋಡಿ ಕಾಡುವುನೋ 
           ಇವನಾ ಎದುರು ನಿಲ್ಲಲಾರೆ
           ಇವನಾ ಎದುರು ನಿಲ್ಲಲಾರೆ ಎಂದು ಅರಿತು 
           ಮೌನದಿಂದ ಮೆಲ್ಲಗೆ ನಾಚಿ ಓಡಿದನು ಮದನಾ.. 
ಹೆಣ್ಣು :  ಮದನಾ (ಆಆಆ)  ಮದನಾ.. ನಾಚಿ ಓಡಿದನು ಆಹ್ಹಹ್ಹಹ್ಹ..

ಹೆಣ್ಣು : ನೋಟದಿ ಎಸೆಯುತ ಹೂವಿನ ಬಾಣ 
          ಹೆಣ್ಣಿನ ಎದೆಯಲಿ ತುಂಬುತ ತಲ್ಲಣ 
ಗಂಡು : ನೋಟದಿ ಎಸೆಯುತ ಹೂವಿನ ಬಾಣ 
          ಹೆಣ್ಣಿನ ಎದೆಯಲಿ ತುಂಬುತ ತಲ್ಲಣ 
ಹೆಣ್ಣು : ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ 
ಗಂಡು : ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ
ಹೆಣ್ಣು : ಕೆಣಕಿ ಈ ತನುವ ಕುಣಿಸಿ ಯೌವ್ವನವ 
          ಮನವ ಸೆಳೆವ ಸನಿಹ ಕರೆವ 
          ಮನವ ಸೆಳೆವ ಸನಿಹ ಕರೆವ ಜಾಣ್ಮೆ ಕಂಡು ಸೋತೆನೆಂದು
        ನಿಲ್ಲದೆ ನಾಚಿ ಓಡಿದನು ಮದನಾ.. 
ಗಂಡು : ಮದನಾ ಮದನಾ.. ನಾಚಿ ಓಡಿದನು ಮದನಾ...
ಹೆಣ್ಣು : ಆಆಆ.. ನೋಡಿ ನಿನ್ನ ಈ ಸುಂದರ ವದನಾ..
          ಮದನಾ (ಹೂಂ ಹೂಂ ) ಮದನಾ..
ಇಬ್ಬರು : ನಾಚಿ ಓಡಿದನು ಮದನಾ... 
--------------------------------------------------------------------------------------------------------------------------

No comments:

Post a Comment