193. ಬೆಂಕಿಯ ಬಲೆ (೧೯೮೩)


ಬೆಂಕಿಯ ಬಲೇ ಚಿತ್ರದ ಹಾಡುಗಳು 
  1. ಬಿಸಿಲಾದರೇನು ಮಳೆಯಾದರೇನು
  2. ಬಿಸಿಲಾದರೇನು ಮಳೆಯಾದರೇನು (ಎಸ್.ಜಾನಕೀ )
  3. ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
  4. ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
  5. ನನಗಾಗಿ ಬಂದ ಹೊ... ಆನಂದ ತಂದ.. ಹಾ...
ಬೆಂಕಿಯ ಬಲೆ (೧೯೮೩)............ಬಿಸಿಲಾದರೇನು ಮಳೆಯಾದರೇನು
ಸಾಹಿತ್ಯ :  ಚಿ. ಉದಯಶಂಕರ್     ಸಾಹಿತ್ಯ : ರಾಜನ್-ನಾಗೇಂದ್ರ   ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ


ಬಿಸಿಲಾದರೇನು ಮಳೆಯಾದರೇನು
ಬಿಸಿಲಾದರೇನು ಮಳೆಯಾದರೇನು ಜೊತೆಯಾಗಿ ಎಂದೂ ನಾನಿಲ್ಲವೇನು
ನೀ ನನ್ನ ಜೀವಾ ಎಂದಿಗೂ
ಬಿಸಿಲಾದರೇನು ಮಳೆಯಾದರೇನು.. ಬಿಸಿಲಾದರೇನು

ಹೂವು ಹಾವಾದರೇನು ಹಾಲು ವಿಷವಾದರೇನು
ಹೂವು ಹಾವಾದರೇನು ಹಾಲು ವಿಷವಾದರೇನು
ಈ ನಿನ್ನ ನೋಟ ಬೆರೆತಾಗ ಮುಳ್ಳು ಹೂವಾಗಿ ಅರಳದೇನು
ಭುವಿಯೇ ಬಾಯ್ಬಿಟ್ಟರೇನು ಸಿಡಿಲೆ ಎದುರಾದರೇನು
ನನ್ನಾಣೆ ನಲ್ಲೆ ನಾ ನಿನ್ನ ಬಿಡೆನು ಪ್ರಾಣಕ್ಕೆ ಪ್ರಾಣ ಕೊಡುವೆ
ಕಂಬನಿ ಮಿಡಿಯದೇ ಇನ್ನು ನಗಲಾರೆಯೇನು
ಬಿಸಿಲಾದರೇನು ಮಳೆಯಾದರೇನು... ಬಿಸಿಲಾದರೇನು

ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು
ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು
ಈ ಬಾಳು ಇನ್ನು ಹೋರಾಟತಾನೇ ಬಿಡು ಇನ್ನು ಚಿಂತೆಯನ್ನ್ಯು
ಯಾರೇನು ಅಂದರೇನು ಊರೇ ಎದುರಾದರೇನು
ಕೊನೆತನಕ ನಾನು ಹೋರಾಡಿ ಗೆಲುವೆ ನಿನ್ನನ್ನು ನಾನು ಬಿಡೆನು
ಕೊರಗದೆ ನಡುಗದೆ ನಲ್ಲೆ ನಗಲಾರೆಯೇನು
ಬಿಸಿಲಾದರೇನು ಮಳೆಯಾದರೇನು ಜೊತೆಯಾಗಿ ಎಂದೂ ನಾನಿಲ್ಲವೇನು
ನೀ ನನ್ನ ಜೀವಾ ಎಂದಿಗೂ
ಬಿಸಿಲಾದರೇನು ಮಳೆಯಾದರೇನು... ಬಿಸಿಲಾದರೇನು
-------------------------------------------------------------------------------------------------------------------------

ಬೆಂಕಿಯ ಬಲೆ (೧೯೮೩)............ಬಿಸಿಲಾದರೇನು ಮಳೆಯಾದರೇನು
ಸಾಹಿತ್ಯ : ಚಿ.ಉದಯಶಂಕರ್   ಸಂಗೀತ : ರಾಜನ್-ನಾಗೇಂದ್ರ   ಗಾಯನ : ಎಸ್.ಜಾನಕಿ

ಬಿಸಿಲಾದರೇನು ಮಳೆಯಾದರೇನು
ಬಿಸಿಲಾದರೇನು ಮಳೆಯಾದರೇನು ಜೊತೆಯಾಗಿ ಎಂದೂ ನಾನಿಲ್ಲವೇನು
ಈ ಚಿಂತೆ ಏಕೇ ಹೇಳಿರೀ
ಬಿಸಿಲಾದರೇನು ಮಳೆಯಾದರೇನು... ಬಿಸಿಲಾದರೇನು

ಬೆಂಕಿ ಮಳೆಯಾದರೇನು ಸಿಡಿಲು ಗುಡುಗಾದರೇನು
ಬೆಂಕಿ ಮಳೆಯಾದರೇನು ಸಿಡಿಲು ಗುಡುಗಾದರೇನು
ನಾನಿನ್ನು ನಲ್ಲ ಭಯಪಡಲಾರೆ ನೀನಿರಲು ಸಾಲದೇನು
ಸೆಳೆವ ಸುಳಿಯಾದರೇನು ನೆಲವೇ ಬಾಯ್ಬಿಟ್ಟರೇನು
ಈ ಬಾಳು ಎಂದೂ ಹೋರಾಟತಾನೇ ಬಿಡಿ ಇನ್ನು ಚಿಂತೆಯನ್ನು
ಕೊರಗದೆ ನಡುಗದೆ ನಲ್ಲ ನಗಬಾರದೇನು
ಬಿಸಿಲಾದರೇನು ಮಳೆಯಾದರೇನು... ಬಿಸಿಲಾದರೇನು

ಸಿರಿಯ ನಾ ಬೇಡಲಿಲ್ಲ ಸುಖವಾ ನಾ ಕೇಳಲಿಲ್ಲ
ಸಿರಿಯ ನಾ ಬೇಡಲಿಲ್ಲ ಸುಖವಾ ನಾ ಕೇಳಲಿಲ್ಲ
ಎಂದೆಂದೂ ಹೀಗೆ ನಗುನಗುತ ಇರಲು ನನಗಿದುವೆ ಹರುಷವೆಲ್ಲ
ಕಷ್ಟ ಹೊಸದೇನೂ ಅಲ್ಲ ಶಾಂತಿ ನಾ ಕಾಣಲಿಲ್ಲ
ನೋವಲ್ಲೇ ಹುಟ್ಟಿ ನೋವಲ್ಲೇ  ಬೆಳೆದೆ ನೋವೇ ನನಗೆಂದೂ ಎಲ್ಲ
ನಿಮ್ಮನು ಬಿಟ್ಟರೆ ನನಗೆ ಗತಿಯಾರೂ ಇಲ್ಲ
ಬಿಸಿಲಾದರೇನು ಮಳೆಯಾದರೇನು
ಜೊತೆಯಾಗಿ ಎಂದೂ ನಾನಿಲ್ಲವೇನು ಈ ಚಿಂತೆ ಏಕೇ ಹೇಳಿರೀ
ಬಿಸಿಲಾದರೇನು ಮಳೆಯಾದರೇನು... ಬಿಸಿಲಾದರೇನು
------------------------------------------------------------------------------------------------------------------------

ಬೆಂಕಿಯ ಬಲೆ (1983)- ಒಲಿದ ಜೀವ ಜೊತೆಯಲಿರಲು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ


ಗಂಡು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
            ಒಲಿದ ಜೀವ ಜೊತೆಯಲಿರಲು ಬಾಳು ಸುಂದರ

ಹೆಣ್ಣು : ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ
ಇಬ್ಬರು :  ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
              ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
              ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ

ಗಂಡು : ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
            ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
            ಕರವ ಹಿಡಿದಾಗ ನಗುತ ನಡೆವಾಗ ಭುವಿಯೇ ಸ್ವರ್ಗದಂತೆ
ಹೆಣ್ಣು : ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
          ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
          ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ
ಗಂಡು : ಕಣ್ಣೀರು ಪನ್ನೀರ ಹನಿಯಂತೆ
ಹೆಣ್ಣು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಗಂಡು : ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ
ಇಬ್ಬರು :  ಒಲಿದ ಜೀವ ಜೊತೆಯಲಿರಲು ಬಾಳು ಸುಂದರ

ಹೆಣ್ಣು : ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
          ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
          ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮಿಟ್ಟಿಯಂತೆ
ಗಂಡು : ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
            ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
            ಏನೊ ಉಲ್ಲಾಸ ಏನೊ ಸಂತೋಷ ಮರೆತು ಎಲ್ಲ ಚಿಂತೆ
ಹೆಣ್ಣು : ಒಲವಿಂದ ದಿನವೊಂದು ಕ್ಷಣವಂತೆ
ಗಂಡು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಹೆಣ್ಣು : ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ
ಇಬ್ಬರು :  ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಗಂಡು : ಬಾಳು ಸುಂದರ     ಹೆಣ್ಣು : ಈ ಬಾಳು ಸುಂದರ
------------------------------------------------------------------------------------------------------------------------

 ಬೆಂಕಿಯ ಬಲೆ (೧೯೮೩) - ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯಕ:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಹರುಷ ಹರುಷ ಎಲ್ಲೆಲ್ಲೂ ಜೊತೆಗೆ ನೀನಿರೆ
ಸರಸ ಸರಸ ಬಾಳೆಲ್ಲ ಸನಿಹ ನೀನಿರೆನಿನ್ನ ಮಾತಿಗೆ ನಿನ್ನ ಪ್ರೇಮಕೆ ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ ಮಂಕಾಗಿ ಹೋದೆನು.. ನನ್ನನ್ನೇ ಮರೆತೆನು
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚೆಲುವ ನಿನ್ನ ನುಡಿ ಕೇಳಿ ಗಿಳಿಯು ನಾಚಿತು
ಚೆಲುವೆ ನಿನ್ನ ನಡೆ ನೋಡಿ ನವಿಲು ಕುಣಿಯಿತು
ನಗುನಗುತ ನೀ ಬರಲು ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು ಮನವೇಕೋ ಬೆಚ್ಚಿತು... ಜಗವನ್ನೇ ಮರೆಸಿತು
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ
----------------------------------------------------------------------------------------------------------------------

ಬೆಂಕಿಯ ಬಲೆ (೧೯೮೩) - ನನಗಾಗಿ ಬಂದ ಹೊ... ಆನಂದ ತಂದ.. ಹಾ...
ಸಾಹಿತ್ಯ: ಚಿ. ಉದಯಶಂಕರ  ಸಂಗೀತ: ರಾಜನ್-ನಾಗೇಂದ್ರ  ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ

ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..

ನಮಗಾಗೆ ಇಲ್ಲಿ ಮಂಚ ಹಾಕಿದೆ ಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆ
ಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆ ಹೇ.. ಕಾದಿಹೆ ಪ್ರೇಮದಿ ನಿನ್ನ ಸೇವೆಗೆ
ಮುಗಿಲಿಂದ ಚಂದ್ರ ಇಣುಕಿ ನೋಡಿದೆ ತಂಗಾಳಿ ತಂಪು ತಂದು ಚೆಲ್ಲಿದೆ
ಈ ಚಳಿ ತಾಳದೇ ತನುವು ನಡುಗಿದೆ ಪ್ರೀತಿಯ ತೋರುತ ಅಪ್ಪಿಕೊಳ್ಳದೇ
ಹ.. ಬೆಚ್ಚುವೆ ಹೀಗೇಕೆ ಹ.. ಕೆನ್ನೆಯು ಕೆಂಪೇಕೆ
ತುಟಿಯ ಬಳಿ ತುಟಿಗಳನು ನಾನು ತಂದಾಗ ಹೊ....
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೋಯ್.. ಹೋಯ್.. ಹೋಯ್.. ಹೋಯ್..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..

ಕಣ್ಣಲ್ಲಿ ನೂರಾಸೆ ಸೇರಿಕೊಂಡಿದೆ ಮೈಯಲ್ಲ ಬಿಸಿಯೇರಿ ನಿನ್ನ ಕೂಗಿದೆ
ಕಾತುರ ತಾಳದೆ ಮನವು ನೊಂದಿದೆ ಹಾ.. ಆತುರ ನನ್ನೆದೆ ತುಂಬಿಕೊಂಡಿದೆ
ಅನುರಾಗದಾನಂದ ಹೃದಯ ತುಂಬಿದೆ ಮುತ್ತೊಂದು ಬೇಕೆಂದು ತುಟಿಯ ಕೇಳಿದೆ
ಜೀವವು ನಿಲ್ಲದು ಬಯಕೆ ಮುಗಿಯದೇ ಬೇಡುವೆ ಬಾರೆಯಾ ಬೇಗ ಸನಿಹಕೆ
ಅಂದದ ಹೆಣ್ಣೊಂದು ಅರೆ ಹಾ.. ಬಳಿಯಲಿ ನಿಂತಾಗ
ಕೈಯ ಕಟ್ಟಿ ಕುಳಿತಿರಲು ಕಲ್ಲು ನಾನಲ್ಲ.. ಹಾ.. ಹ.. ಹ.. ಹ..
ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೊ.. ಹೊ.. ಹೊ.. ಹೊ.. ಹೊ.. ಹೊ.. ಹೊ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
--------------------------------------------------------------------------------------------------------------------------

No comments:

Post a Comment