137. ಗಾಳಿಮಾತು (1981)


ಗಾಳಿ ಮಾತು ಚಿತ್ರದ ಹಾಡುಗಳು 
  1. ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
  2. ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
  3. ನಗಿಸಲು ನೀನು ನಗುವೆನು ನಾನು
  4. ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
  5. ನಾನೇನು ನೀನೇನು ಅವನೇನು..  ಒಂದೇ ಎಲ್ಲರೂ
ಗಾಳಿಮಾತು (೧೯೮೧).....ನಮ್ಮೂರ ಸಂತೇಲಿ
ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ರಾಜನ್ - ನಾಗೇಂದ್ರ  ಗಾಯನ : ರಮಣ ಮತ್ತು ನಾಗೇಂದ್ರ


ರಮಣ: ಹೇ...ಹೇ....ಲಲ...ಲಲ...ಲಲ...
ನಾಗೇಂದ್ರ: ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ ಹಿಂದ್ ಹಿಂದೆ ಬoದೋಳು ನೀನ್ ತಾನೇ
               ನಿನ್ನ ನೋಡಿ ನಕ್ಕೋನು ನಾನ್ ತಾನೇ 
               ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ ಹಿಂದ್ ಹಿಂದೆ ಬoದೋಳು ನೀನ್ ತಾನೇ
              ನಿನ್ನ ನೋಡಿ ನಕ್ಕೋನು ನಾನ್ ತಾನೇ 
ರಮಣ:   ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ ಜಡೆಯನ್ನು ಎಳೆದವ ನೀನ್ ತಾನೇ
             ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
             ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ ಜಡೆಯನ್ನು ಎಳೆದವ ನೀನ್ ತಾನೇ
            ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ

ನಾಗೇಂದ್ರ: ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ
                 ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ
ರಮಣ: ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ
            ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ
ನಾಗೇಂದ್ರ: ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ
                ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ
ರಮಣ: ನನ್ನಲಿ ಹೇಳು ಆಭಾದರಣಿ ಸಂಬಳ ಏನ್ ತರ್ತಿ
           ನನ್ನಲಿ ಹೇಳು ಆಭಾದರಣಿ ಸಂಬಳ ಏನ್ ತರ್ತಿ
ನಾಗೇಂದ್ರ: No Job...No Vaccancy
ರಮಣ: You....Get Out....  I don't see...I don't see...
ನಾಗೇಂದ್ರ: I will see....I will see....
------------------------------------------------------------------------------------------------------------------------

ಗಾಳಿಮಾತು (1981) - ಬಯಸದೆ ಬಳಿ ಬಂದೆ
ಸಾಹಿತ್ಯ: ಚಿ. ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಗಾಯನ: ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣ್ಯಮ್

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

ಉರಿ ಬಿಸಿಲು ತಂಪಾಯಿತು ನಿನ್ನ ನಾ ನೊಡಲು
ಮೈ ಏಕೊ ಬಿಸಿ ಆಯ್ತು ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲ್ಲಿ ಕಲ್ಲು ಮೃದುವಾಯ್ತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ

ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು  
ಲ ಲ ಲ... ಹ! ಹ! ಹ! ಹ!  ಲ ಲ ಲ... ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ
ನಿನ್ನಿಂದ ಆನಂದ ಇಂದು ನಾ ಕಂಡೆನು
ಈ  ನಿನ್ನ ಸ್ನೇಹವನು ಇನ್ನು ಇನ್ನೆಂದೆಂದು ಬಿಡೆನು
ಸವಿಯಾದ ಮಾತಿಂದ   ಹೊಸ ಬಾಳು ತಂದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
--------------------------------------------------------------------------------------------------------------------------

ಗಾಳಿ ಮಾತು (೧೯೮೧)....ನಗಿಸಲು ನೀನು ನಗುವೆನು ನಾನು

ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ರಾಜನ್ - ನಾಗೇಂದ್ರ  ಗಾಯನ : ಎಸ್.ಜಾನಕಿ


ಆ......ಆ......ಆ......ನಗಿಸಲು ನೀನು ನಗುವೆನು ನಾನು
ನಗಿಸಲು ನೀನು ನಗುವೆನು ನಾನು  ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು ನಾನೊಂದು ಬೊಂಬೆಯೂ ನೀ ಸೂತ್ರಧಾರಿ

ವೀಣೆಯು ನಾನು ವೈಣಿಕ ನೀನು
ತಂತಿಯು ಮೀಟದೆ ನುಡಿಸುವುದೇನು ಆ...ಆ...ಆಆ...ಆಆ....
ವೀಣೆಯು ನಾನು ವೈಣಿಕ ನೀನು ತಂತಿಯು ಮೀಟದೆ ನುಡಿಸುವುದೇನು
ಬಯಸಿದ ರಾಗ ನುಡಿಸಿ ನೀ ನಲಿದಾಗ  ನನಗೂ ಆನಂದ ನಿನ್ನಿಂದ
ನುಡಿಸಲು ನೀನು ನುಡಿವೆನು ನಾನು
ನುಡಿಸಲು ನೀನು ನುಡಿವೆನು ನಾನು  ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಗಿಸಲು ನೀನು ನಗುವೆನು ನಾನು ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು  ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನಾ ತಾಳಕೆ ನನ್ನ 
ನಂ ತ ನಂ ತಮ್ ತ ನಂ ತ ನಂ ತಮ್ ತ ನಂ ತ ನಂ ತಮ್ ತ
ನಂ ತ ನಂ ತ ತನನನನ ತನನನನ
ಕಾಣದೆ ಎಲ್ಲೋ ನೀನಿರಲೇನು ಕುಣಿಸುವೆ ನಿನ್ನಾ ತಾಳಕೆ ನನ್ನ
ಕೈಹಿಡಿದೆನ್ನ ನಡೆಸು ಕರುಣಿಸು ಹರಸು
ನನ್ನಾ ಸೇವೆ ಸ್ವೀಕರಿಸು
ನಡೆಸಲು ನೀನು ನಡೆವೆನು ನಾನು
ನಡೆಸಲು ನೀನು ನಡೆವೆನು ನಾನು ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಗಿಸಲು ನೀನು ನಗುವೆನು ನಾನು ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
------------------------------------------------------------------------------------------------------------------------

ಗಾಳಿ ಮಾತು (1981) - ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಗಾಯನ: ಎಸ್.ಜಾನಕಿ

ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..ಒಮ್ಮೆ ನಿನ್ನನ್ನೂ..

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡೂ ಬೆರೆಗಾದೆ...||ಒಮ್ಮೆ ನಿನ್ನನ್ನೂ..||
ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...||ಒಮ್ಮೆ ನಿನ್ನನ್ನೂ...||
-------------------------------------------------------------------------------------------------------------------------

ಗಾಳಿಮಾತು (೧೯೮೧)  - ನಾನೇನು ನೀನೇನು ಅವನೇನು..  ಒಂದೇ ಎಲ್ಲರೂ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ

ನಾನೇನು ನೀನೇನು ಅವನೇನು..  ಒಂದೇ ಎಲ್ಲರೂ
ನಾನೇನು ನೀನೇನು ಅವನೇನು..ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..ಒಂದೇ ಎಲ್ಲರೂ

ಕಪ್ಪನೆಯ ಮೋಡಗಳು ಕರಗುತ ನೀರಾಗಿ ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ..... ಹೇ... ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ
ನಾನೇನು ನೀನೇನು ಅವನೇನು.. ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..ಒಂದೇ ಎಲ್ಲರೂ

ಗಾಳಿಯನು ನೀರನ್ನು ತಂದವ ನೀನಲ್ಲ ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ... ಹೇ ನಿನದಲ್ಲದ ಈ ಸಂಪತ್ತಿಗೆ ಏಕೆ ಬಡಿದಾಡಿ ಹೋರಾಡುವೆ
ನಾನೇನು ನೀನೇನು ಅವನೇನು..ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..ಒಂದೇ ಎಲ್ಲರೂ
--------------------------------------------------------------------------------------------------------------------------

No comments:

Post a Comment