635. ಒಲವು ಮೂಡಿದಾಗ (೧೯೮೪)

ಒಲವು ಮೂಡಿದಾಗ ಚಿತ್ರದ ಹಾಡುಗಳು 
  1. ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ 
  2. ಮನಸು ಕೇಳಿದೆ ಕೇಳಿದೆ ಕೇಳಿದೇ ಸುಖವನ್ನು 
  3. ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ 
  4. ಎಲ್ಲೇ ನೋಡು ಏನೇ ಮಾಡು 
ಒಲವು ಮೂಡಿದಾಗ (೧೯೮೪) - ಆದಿಲಕ್ಷ್ಮೀ ಗಜಲಕ್ಷ್ಮಿ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ. ಬಾಲು

ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ  ಗೃಹ ಲಕ್ಷ್ಮಿಯು ಮನೆಗೇ ಬರಲಿ ಎಂದೂ..
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ 

ರತಿಯೆಂಥಾ ಹೆಣ್ಣೇನು ಬೇಕಾಗಿಲ್ಲ,
ಆ... ರತಿಯೆಂಥಾ ಹೆಣ್ಣೇನು ಬೇಕಾಗಿಲ್ಲ ಮಿತಿಯಿರಲಿ ಮಾತಲ್ಲಿ ತಪ್ಪೇನಿಲ್ಲ...
ಬೇರೇನೂ ಆಸೆಯೂ ನನ್ನಲ್ಲಿ ಇಲ್ಲಾ
ಅತಿಯಾದ ಕೆಂಬಣ್ಣ ಸೊಗಸೇನಲ್ಲ, ಚೆಲ್ಲಾಟ ಆಡೋಳು ಬೇಕಾಗಿಲ್ಲ
ಇನ್ನೇನು ಹಂಬಲ ನನ್ನಲ್ಲಿ ಇಲ್ಲ, ನುಡಿಗೂ ನುಡಿಗೂ ಸಿಡುಕುತಿರಲಿ ಬೇಡವೇನಲ್ಲ...
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ...
ಧೈರ್ಯಲಕ್ಷ್ಮಿ ಧನ ಲಕ್ಷ್ಮಿ ಧಾನ್ಯಲಕ್ಷ್ಮಿಯೇ, ಸಂತಾನ ಲಕ್ಷ್ಮಿಯೇ
ಅಷ್ಟಲಕ್ಷ್ಮಿಯಾ ಕರುಣೆ ನನಗಿರಲೆಂದು ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದೂ...
ಎಲ್ಲರೂ ನನ್ನ ಬೇಗ ಹರಿಸಿರಿ ಇಂದೂ  ಗೃಹ ಲಕ್ಷ್ಮಿಯು ಮನೆಗೇ ಬರಲಿ ಎಂದೂ..
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ    

ಸಾವಿರ ಹೆಣ್ಣನ್ನೇ ತೋರಿಸು ನೀನೀಗ ಕಣ್ಣನ್ನು ತುಂಬಳು
ಮನದಲ್ಲಿ ನಿಲ್ಲಳು ನಾನೇನು ಮಾಡಲಮ್ಮ..
ಪ್ರೀತಿಯ ಮಾತನ್ನೇ ಆಡದ ಆ ಹೆಣ್ಣು ದೂರ ಓಡುತ
ಕೋಪದಿ ನೋಡುತ ಕಣ್ಣಲ್ಲಿ ಕೊಂದಳಮ್ಮ
ಈ ಮನವ ಗೆದ್ದೋಳು ಅವಳಲ್ಲವೇ ಈ ಮನೆಯ ಮಹಾಲಕ್ಷ್ಮಿ ಇವಳಲ್ಲವೇ 
ಆದಿಲಕ್ಷ್ಮೀ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ, ವಿಜಯಲಕ್ಷ್ಮಿಯೇ... ವಿಜಯಲಕ್ಷ್ಮಿಯೇ ...  ಹೊಯ್ 
--------------------------------------------------------------------------------------------------------------------------

ಒಲವು ಮೂಡಿದಾಗ (೧೯೮೪) - ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ. ಬಾಲು, ಎಸ್.ಜಾನಕೀ

ಹೆಣ್ಣು : ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು
          ವಯಸು ಕೋರಿದೆ ಕೋರಿದೆ ಕೋರಿದೆ ಜೊತೆಯನ್ನು 
          ಬಯಕೆ ನೀ ಬಲ್ಲೆ ಏನೂ ಒಲಿದು ಒಂದಾಗಲೂ
         ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು.. ಸುಖವನ್ನು

ಗಂಡು : ಸನಿಹ  ಸನಿಹ ಬರಲೇ ಮೆಲ್ಲಗೆ ಹಿತವಾ ಹಿತವಾ ತರಲೆ ಮೆಲ್ಲಗೆ 
           ತಾಳ ಹಾಕಲೇ ಎದೆಯಾ ಹಾಡಿಗೇ 
ಹೆಣ್ಣು : ಸೆಳೆದೆ ಸೆಳೆದೆ ನನ್ನ ಮೆಲ್ಲಗೆ ಸೋತೆ ಸೋತೆ ನಿನ್ನಾ ಮಾತಿಗೇ 
          ಆಸೆ ತಾಳದೇ ಬಂದೆ ಇಲ್ಲಿಗೇ 
ಗಂಡು : ಬದುಕು ಸೊಗಸಾಯಿತು ನೀನು ಸೇರಲು 
ಹೆಣ್ಣು : ನಯನ ನೋಡಿದೆ ನೋಡಿದೆ ನೋಡಿದೆ ನಿನ್ನನ್ನು 
          ಬಯಕೆ ಕಾಡಿದೆ ಕಾಡಿದೇ ಕಾಡಿದೆ ನನ್ನನ್ನು
          ಒಲವು ಮನದಲ್ಲಿ ಮೂಡಲು ಕವಿತೆ ಕಣ್ಣಲ್ಲೇ ಹಾಡಿದೆ 
ಗಂಡು : ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು
           ವಯಸು ಕೋರಿದೆ ಕೋರಿದೆ ಕೋರಿದೆ ಜೊತೆಯನ್ನು 
          ಬಯಕೆ ನೀ ಬಲ್ಲೆ ಏನೂ ಒಲಿದು ಒಂದಾಗಲೂ
         ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು.. ಸುಖವನ್ನು

ಹೆಣ್ಣು : ಕಣ್ಣಿನಾ ಒಳಗೆ ಕೂಡಿ ಹಾಕುವೇ ಎದೆಯಾ ಒಳಗೆ ಸೆರೆಯಾ ಹಾಕುವೆ 
          ನಿನ್ನಾ ಎಂದಿಗೂ ಬಿಡದೆ ಕಾಯುವೇ 
ಗಂಡು : ದಿನವೂ ಇರಳು ಕನಸೇ ತುಂಬುವೇ ಎದೆಯಾ ವೀಣೆ ಶೃತಿಯಾ ಮಾಡುವೆ 
            ನಿನ್ನಾ ಉಸಿರಿನಾ ಉಸಿರೇ ಆಗುವೇ 
ಇಬ್ಬರು :  ಎಂದೂ ಒಂದಾಗಿಯೇ ನಾವು ಬಾಳುವಾ 
ಗಂಡು : ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು

ಹೆಣ್ಣು : ವಯಸು ಕೋರಿದೆ ಕೋರಿದೆ ಕೋರಿದೆ ಜೊತೆಯನ್ನು 
ಗಂಡು :  ಬಯಕೆ ನೀ ಬಲ್ಲೆ ಏನೂ
ಹೆಣ್ಣು : ಒಲಿದು ಒಂದಾಗಲೂ
ಇಬ್ಬರು : ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಾಲಾ 

ಗಂಡು : ಸನಿಹ ಸನಿಹ ಸನಿಹ ಬರಲೇ ಮೆಲ್ಲಗೆ ಹಿತವಾ ಹಿತವಾ ತರಲೆ ಮೆಲ್ಲಗೆ 
           ತಾಳ ಹಾಕಲೇ ಎದೆಯಾ ಹಾಡಿಗೇ 
ಹೆಣ್ಣು : ಮನಸು ಕೇಳಿದೇ ಕೇಳಿದೇ ಕೇಳಿದೇ ಸುಖವನ್ನು
          ವಯಸು ಕೋರಿದೆ ಕೋರಿದೆ ಕೋರಿದೆ ಜೊತೆಯನ್ನು 
          ಬಯಕೆ ನೀ ಬಲ್ಲೆ ಏನೂ ಒಲಿದು ಒಂದಾಗಲೂ 
--------------------------------------------------------------------------------------------------------------------------

ಒಲವು ಮೂಡಿದಾಗ (೧೯೮೪) - ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಆಆಆ... ಆಆಆ...
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ 
ಮಾತಲ್ಲಿ ಮಿತವಿರಲೇ ಬೇಕು ನಿಮ್ಮ ನಡೆಯಲ್ಲಿ ಹಿತವಿರಲೇಬೇಕು 
ನೀವೂ ಎಲ್ಲೇ ಇರಲಿ ನಾಳೆ ಹೇಗೆ ಇರಲಿ ಜನ ಮೆಚ್ಚುವಂತೆ ನೀವಿರಬೇಕು ಆಆಆ... 
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ 
ಮಾತಲ್ಲಿ ಮಿತವಿರಲೇ ಬೇಕು ನಿಮ್ಮ ನಡೆಯಲ್ಲಿ ಹಿತವಿರಲೇಬೇಕು 

ಹಿರಿಯರಲಿ ಗೌರವವು ನಿಮಗಿರಬೇಕು ಗುರುಗಳಲಿ ಭಕ್ತಿ ಭಾವ ತುಂಬಿರಬೇಕು 
ಯಾರಲ್ಲೂ ದ್ವೇಷ ಇರಬಾರದು 
ಗೆಳೆಯರಲ್ಲಿ ಸ್ನೇಹ ಪ್ರೇಮ ತುಂಬಿರಬೇಕು ಬಡವರನು ಪ್ರೀತಿಸುವ ಗುಣವಿರಬೇಕು 
ಯಾರಲ್ಲೂ ನೋವು ತರಬಾರದು 
ಸುಳ್ಳು ನುಡಿ ಆಡದಿರು ಕೆಟ್ಟವರ ಸೇರದಿರಿ ಬಾಳುವಾ ರೀತಿಯಾ ಕಲಿಯಿರಿ 
ಬುದ್ದಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ 
ಮಾತಲ್ಲಿ ಮಿತವಿರಲೇ ಬೇಕು ನಿಮ್ಮ ನಡೆಯಲ್ಲಿ ಹಿತವಿರಲೇಬೇಕು 
ನೀವೂ ಎಲ್ಲೇ ಇರಲಿ ನಾಳೆ ಹೇಗೆ ಇರಲಿ ಜನ ಮೆಚ್ಚುವಂತೆ ನೀವಿರಬೇಕು 

ಲಾಲಾ ಲಾಲಾ (ಲಾಲಾಲ)  ಲಾಲಾ ಲಾಲಾ (ಲಾಲಾಲ)  ಲಾಲ ಲಲಲ ಲಾಲಾ 
ಧೂಮಪಾನ ಮಾಡುವುದೇ ಗೌರವವಲ್ಲ ಮಧುಪಾನ ದೇಹಕ್ಕೆ ಒಳ್ಳೆಯದಲ್ಲ 
ಈ ನಿಜವ ಏಕೆ ನೀ ಅರಿತಿಲ್ಲಾ... 
ಅತಿಯಾದ ಚೆಲ್ಲಾಟ ಸರಿಯೇನಲ್ಲ ಹೆಣ್ಣುಗಳ ನಿನ್ನಾಟದ ಗೊಂಬೆಗಳಲ್ಲಾ 
ಈ ಪಾಠ ಏಕೆ ನೀ ಕಲಿತಿಲ್ಲ 
ಮಳ್ಳನಂತೆ  ನೋಡದಿರು ಕಳ್ಳನಂತೆ ಆಡದಿರು 
ಬದುಕಿನಾ ನೀತಿಯಾ ಅರಿತುಕೊ 
ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ 
ಮಾತಲ್ಲಿ ಮಿತವಿರಲೇ ಬೇಕು ನಿಮ್ಮ ನಡೆಯಲ್ಲಿ ಹಿತವಿರಲೇಬೇಕು 
ನೀವೂ ಎಲ್ಲೇ ಇರಲಿ ನಾಳೆ ಹೇಗೆ ಇರಲಿ ಜನ ಮೆಚ್ಚುವಂತೆ ನೀವಿರಬೇಕು 
ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನಾ ಹೊನ್ನ ಹೂಗಳೇ 
ಮಾತಲ್ಲಿ ಮಿತವಿರಲೇ ಬೇಕು ನಿಮ್ಮ ನಡೆಯಲ್ಲಿ ಹಿತವಿರಲೇಬೇಕು 
--------------------------------------------------------------------------------------------------------------------------

ಒಲವು ಮೂಡಿದಾಗ (೧೯೮೪) - ಎಲ್ಲೇ ನೋಡು ಏನೇ ಮಾಡು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ. ಬಾಲು,

ಎಲ್ಲೇ ನೋಡು ಏನೇ ಮಾಡು ಬಾಳಲಿ ಸುಖವೇ ಇಲ್ಲಾ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ

ಬದುಕಿನ ಕಥೆಯನ್ನು ಬಯಸುವ ಸುಖವನ್ನು ಕಂಬನಿಯಲ್ಲೇ ಆ ವಿಧಿ ಬರೆದ 
ನಡೆಯುವ ಹಾದಿಲೀ ಕಾಲುಗಳ ಅಡಿಯಲ್ಲಿ ವೇದನೆ ಕೊಡುವಾ ಮುಳ್ಳನು ಎಸೆದಾ
ಕನಸುಲೇ ಹರುಷಾ ಆ ಹರುಷವು ನಿಮಿಷ ಎಲ್ಲೇ ಹುಡುಕು ಕೊನೆಯಿಲ್ಲ ನಿನಗೇ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ  
ಎಲ್ಲೇ ನೋಡು ಏನೇ ಮಾಡು ಬಾಳಲಿ ಸುಖವೇ ಇಲ್ಲಾ ... ಓಓಓ 
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ  
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ  
ಎಲ್ಲೇ ನೋಡು ಏನೇ ಮಾಡು

ಬಡತನ ಬರಲೇನು ಸಿರಿತನ ಇರಲೇನು ಆ ವಿಧಿಗೆಂದೂ ಎಲ್ಲವೂ ಒಂದೇ
ಒಳ್ಳೆಯತನವಿರಲಿ ಕೆಟ್ಟವನಾರಿನಲಿ ಸುಡುವ ಬೆಂಕಿಗೇ ಎಲ್ಲರೂ ಒಂದೇ
ಬೇಡದೇ ಕೊಡುವಾ ತೀರದ ಕಷ್ಟವ ನಿಜವಾ ನುಡಿಯೇ ಏತಕೆ ಅಳುವೇ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ  
ಎಲ್ಲೇ ನೋಡು ಏನೇ ಮಾಡು ಬಾಳಲಿ ಸುಖವೇ ಇಲ್ಲಾ ... ಓಓಓ 
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ  
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ  
ಎಲ್ಲೇ ನೋಡು ಏನೇ ಮಾಡು
--------------------------------------------------------------------------------------------------------------------------

No comments:

Post a Comment