778. ಭಾಗ್ಯವಂತ (೧೯೮೧)

ಭಾಗ್ಯವಂತ ಚಿತ್ರದ ಗೀತೆಗಳು 
  1. ತಿಳಿದವರೋ ಇಲ್ಲಾ ಮೂಡರೋ 
  2. ಅಮ್ಮಾ ಸೀ  ಶೀತಮ್ಮಾ 
  3. ನಗು ಕಂದ ನೀ 
  4. ಬಾನ ದಾರಿಯಲ್ಲಿ ಸೂರ್ಯ 
  5. ಗುರುವಾರ ಬಂತಮ್ಮಾ 
ಭಾಗ್ಯವಂತ (೧೯೮೧)
ಸಂಗೀತ: ಟಿ. ಜಿ. ಲಿಂಗಪ್ಪ  ಸಾಹಿತ್ಯ: ಚಿ. ಉದಯಶಂಕರ್  ಗಾಯಕರು: ಪೂರ್ಣಚಂದ್ರ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ...  ನನ್ನ ಪುಟ್ಟ ಕಂದ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ...  ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೆ ನೀ ನನ್ನ ಪ್ರಾಣದಂತೆ... ನನ್ನ ಪ್ರಾಣದಂತೆ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ...  ನನ್ನ ಪುಟ್ಟ ಕಂದ

ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಳಲೇನು ಚಂದ ನನ್ನ ಪುಟ್ಟ ದೊರೆಯೇ 
ಹಾಯಾಗಿ ಮಲಗು ಜಾಣ ಮರಿಯೇ... ನನ್ನ ಜಾಣ ಮರಿಯೇ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ...  ನನ್ನ ಪುಟ್ಟ ಕಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ...  ನನ್ನ ಪುಟ್ಟ ಕಂದ
------------------------------------------------------------------------------------------------------------------------

ಭಾಗ್ಯವಂತ (೧೯೮೧)
ಸಂಗೀತ: ಟಿ. ಜಿ. ಲಿಂಗಪ್ಪ  ಸಾಹಿತ್ಯ: ಚಿ. ಉದಯಶಂಕರ್  ಗಾಯಕರು: ರಾಜಕುಮಾರ 

ತಿಳಿದವರೋ ಇಲ್ಲಾ ಮೂಡರೋ
ತಿಳಿದವರೋ ಇಲ್ಲಾ ಮೂಡರೋ
ಆಡುವ ಮಾತಲೇ ವಿಷವನು ಸೇರಿಸಿ ಕೊಳ್ಳುವರು ಇವರು
ನಂಜಿನ ನಾಲಿಗೆ ಚಾಚುತ ಬಾಳನೆ ಉರಿಸುವರೋ ಇವರು
ತಿಳಿದವರೋ ಇಲ್ಲಾ ಮೂಡರೋ... ತಿಳಿದವರೋ ಇಲ್ಲಾ ಮೂಡರೋ

ಮೂಢನಂಬಿಕೆ ಸುಳಿಯಲಿ ಎಲ್ಲರ ತಳ್ಳುವರು ಇವರು
ಪಾಪ ಪುಣ್ಯದ ಭಯವೇ ಇಲ್ಲದೆ ಮೆರೆಯುವರು ಇವರು
ಆಡ ಬಾರದ ಮಾತಲಿ ನೋವನು ತುಂಬುವರು ಇವರು
ನೊಂದವರ ಕಣ್ಣೀರನು ಕುಡಿದು ತೇಗುವರೋ ಇವರು
ಮನುಷ್ಯರೋ ಇಲ್ಲಾ ರಾಕ್ಷಸರೊ... ಮನುಷ್ಯರೋ ಇಲ್ಲಾ ರಾಕ್ಷಸರೊ...

ಪುಟ್ಟ ಕಂದನ ದಾರಿಗೆ ಮುಳ್ಳಿನ ರಾಶಿಯ ಹಾಸಿದರು
ಕೆಟ್ಟ ಮಾತಲಿ ಚುಚ್ಚಿ ವೇದನೆ ತುಂಬುತಾ ಅಟ್ಟಿದರು
ಇಂಥ ಜನರನು ನೋಡಲಾರದೆ ದೇವರು ಕಲ್ಲಾದ
ಇವರಿಗೆ ಏನನು ಹೇಳಲಾಗದೆ ಹೀಗೆ ಮೂಕಾದ ... ದೇವನು ಹೀಗೆ ಮೂಕಾದ
ಮನುಷ್ಯರೋ ಇಲ್ಲಾ ರಾಕ್ಷಸರೊ... ಮನುಷ್ಯರೋ ಇಲ್ಲಾ ರಾಕ್ಷಸರೊ...
-------------------------------------------------------------------------------------------------------------------------

ಭಾಗ್ಯವಂತ (೧೯೮೧)
ಸಂಗೀತ: ಟಿ. ಜಿ. ಲಿಂಗಪ್ಪ  ಸಾಹಿತ್ಯ: ಚಿ. ಉದಯಶಂಕರ್  ಗಾಯಕರು: ರಾಜಕುಮಾರ 

।। ಪೂಜ್ಜಾಯ ರಾಘವೇಂದ್ರಾಯ್ ಸತ್ಯ ಧರ್ಮ ರತಾಯಚ್ 
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ... 
ನಮತಾಂ ಕಾಮಧೇನುವೇ ... ।।

ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮಾ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮಾ
ಸ್ಮರಣೆ ಮಾತ್ರದಲಿ ಕ್ಲೇಷ ಕಳೆದು ಸದ್ಗತಿಯ ಕೊಡುವನಮ್ಮಾ
ವಾರ ಬಂತಮ್ಮ ಗುರುವಾರ ಬಂತಮ್ಮ

ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ..
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ..
ರಾಘವೇಂದ್ರ ಗುರುರಾಯ ಬಂದು ಭವರೋಗ ಕಳೆವನಮ್ಮ...
ವಾರ ಬಂತಮ್ಮ ಗುರುವಾರ ಬಂತಮ್ಮ

ಮನವ ತೊಳೆಯರಮ್ಮ ಭಕ್ತಿಯ ಮಣೆಯ ಹಾಕಿರಮ್ಮ..
ಮನವ ತೊಳೆಯರಮ್ಮ ಭಕ್ತಿಯ ಮಣೆಯ ಹಾಕಿರಮ್ಮ..
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮಾ...  
ವಾರ ಬಂತಮ್ಮ ಗುರುವಾರ ಬಂತಮ್ಮ

ಕೋಪ ಅರಿಯನಮ್ಮ ಯಾರನು ದೂರ ತಳ್ಳಣಮ್ಮಾ
ಕೋಪ ಅರಿಯನಮ್ಮ ಯಾರನು ದೂರ ತಳ್ಳಣಮ್ಮಾ
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮಾ...
ವಾರ ಬಂತಮ್ಮ ಗುರುವಾರ ಬಂತಮ್ಮ

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ...
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ...
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮಾ..
ವಾರ ಬಂತಮ್ಮ ಗುರುವಾರ ಬಂತಮ್ಮ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮಾ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮಾ
ಸ್ಮರಣೆ ಮಾತ್ರದಲಿ ಕ್ಲೇಷ ಕಳೆದು ಸದ್ಗತಿಯ ಕೊಡುವನಮ್ಮಾ
ವಾರ ಬಂತಮ್ಮ ಗುರುವಾರ ಬಂತಮ್ಮ
----------------------------------------------------------------------------------------------------------------------

ಭಾಗ್ಯವಂತ (೧೯೮೧)
ಸಂಗೀತ: ಟಿ. ಜಿ. ಲಿಂಗಪ್ಪ  ಸಾಹಿತ್ಯ: ಚಿ. ಉದಯಶಂಕರ್  ಗಾಯಕರು: ಕುಮಾರಿ ಜ್ಯೋತಿ 

ನಗು ಕಂದ ನೀ ನಗು ಕಂದ
ನಗು ಕಂದ ನೀ ನಗು ಕಂದ
ನಿನ್ನ ನಗುವಿನಿಂದ ಮನದಿ ತುಂಬು ಆನಂದ
ನಗು ಕಂದ ನೀ ನಗು ಕಂದ

ಸುರುಲೋಕದ ಪಾರಿಜಾತ ಬಾಡುವುದೇನು
ಆಕಾಶದ ತಾರೆ ಹೊಳಪು ಮಾಸುವುದೇನು
ಆ ಮೂಢರ ಮಾತು ನೋವ ತಂದಿತೇನು
ದೇವರನ್ನೇ ನಂಬು ನನ್ನ ಭಾಗ್ಯವಂತ ನೀನು
ನಗು ಕಂದ ನೀ ನಗು ಕಂದ

ನೀಲಿಯ ಗಗನದಲ್ಲಿ ಬೆಳ್ಳಿ ಮೋಡ ಹಾಸುವೇ...
ನೀಲಿಯ ಗಗನದಲ್ಲಿ ಬೆಳ್ಳಿ ಮೋಡ ಹಾಸುವೇ...
ಕಂದ ನೀನು ಮಲಗು ಅಲ್ಲಿ ಲಾಲಿ ಹಾಡುವೆ.. ಲಾಲಾ ಲಾಲಾ ಲಾಲಾ ಲಾಲಾ
ಕಂದ ನೀನು ಮಲಗು ಅಲ್ಲಿ ಲಾಲಿ ಹಾಡುವೆ..
ತಾಯಿ ಮಮತೆ ತರುವ ಸುಖದ ಸೊಗಸು ನೋಡುವೆ
ಬಾಲ ಸೂರ್ಯ ಬರುವ ತನಕ ಕನಸ ಕಾಣುವೇ..
ನಗು ಕಂದ ನೀ ನಗು ಕಂದ
ನಿನ್ನ ನಗುವಿನಿಂದ ಮನದಿ ತುಂಬು ಆನಂದ
ನಗು ಕಂದ ನೀ ನಗು ಕಂದ
-------------------------------------------------------------------------------------------------------------------------

ಭಾಗ್ಯವಂತ (೧೯೮೧)
ಸಂಗೀತ: ಟಿ. ಜಿ. ಲಿಂಗಪ್ಪ  ಸಾಹಿತ್ಯ: ಚಿ. ಉದಯಶಂಕರ್  ಗಾಯಕರು: ಪೂರ್ಣ ಚಂದ್ರ, ಲೋಹಿತ್ 

ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ
ನಮ್ಮ ತಂದೆ ಶ್ರೀರಾಮ

ಸೀತಾ ಮಾತೆಯು ನಮಗಿರುವಾಗ ಯಾರು ತಬ್ಬಲಿಯಲ್ಲಾ.. ಯಾರು ತಬ್ಬಲಿಯಲ್ಲಾ
ರಾಮನು ನಾವು ನಂಬಿರುವಾಗ ಹೆದರುವ ಕಾರಣವಿಲ್ಲಾ.. ಹೆದರುವ ಕಾರಣವಿಲ್ಲಾ..
ಹನುಮನ ಪ್ರೇಮವ ಪಡೆದಿರುವಾಗ ಕ್ಷಷ್ಟವ ಬರುವುದೇ ಇಲ್ಲಾ
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ..  ನಮ್ಮ ತಂದೆ ಶ್ರೀರಾಮ

ಕಾಣದ ಹಾಗೆ ಮರೆಯಲಿ ನಿಂತು ನೋಡುತಲಿರುವನು ಎಲ್ಲಾ... ನೋಡುತಲಿರುವನು ಎಲ್ಲಾ...
ಪ್ರೀತಿಯ ಹೊರತು ಬೇರೆ ಏನನು ಎಂದು ಬಯಸುವುದಿಲ್ಲಾ.. ಎಂದು ಬಯಸುವುದಿಲ್ಲಾ..
ಮಕ್ಕಳು ಏನೇ ಬೇಡಲಿ ಅವರು ಇಲ್ಲಾ ಎನ್ನುವುದಿಲ್ಲಾ..
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ..  ನಮ್ಮ ತಂದೆ ಶ್ರೀರಾಮ
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ..   ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ..
ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ..   ಅಮ್ಮ ಸೀತಮ್ಮಾ ತಂದೆ ಶ್ರೀ ರಾಮ..

No comments:

Post a Comment