127. ಸ್ವರ್ಣ ಗೌರಿ (೧೯೬೨)



ಸ್ವರ್ಣಗೌರಿ ಚಿತ್ರದ ಹಾಡುಗಳು 
  1. ನುಡಿಮನ ಶಿವಗುಣ 
  2. ನಟವರ ಗಂಗಾಧರ 
  3. ಬಾರೆ ನೀ ಚೆಲುವೆ 
  4. ಈ ಲೀಲಾ ವಿಲಾಸ 
  5. ಬಾರಾ ಚಂದ್ರಮ 
  6. ಜಯ ಗೌರಿ ಜಗದೀಶ್ವರಿ 
  7. ಹಾಡಲೇನು ಮನದಾಸೆ 
  8. ಬಂತು ನವ ಯೌವ್ವನ 
  9. ಓ ಜನನಿ ಕಲ್ಯಾಣಿ 
  10. ನ್ಯಾಯವಿದೇನಮ್ಮಾ 
  11. ಲಾಲಿ ಲಾಲಿ ಬಾಲ ಮುಕುಂದ
ಸ್ವರ್ಣ ಗೌರಿ(೧೯೬೨)...............ನಟವರ ಗಂಗಾಧರ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಡಾ.ಎಂ.ಬಾಲಮುರಳಿಕೃಷ್ಣ

ನಟವರ ಗಂಗಾಧರ... ನಟವರ ಗಂಗಾಧರ
ಉಮಾಶಂಕರ ನೀ ಲೀಲಾ  ವಿನೋದ ವಿಹಾರ
ನಟವರ ಗಂಗಾಧರ

ಜನನ ಮರಣೊಂದು ಚದುರಂಗವಾಗಿ ಜನರೇ ಕಾಯಾಗಿ
ನೀನೇ ಕಲಿಯಾಗಿ ರಣರಂಗ ಸಾಗಿ.....ಆ.......
ನೀನೇ ಕಲಿಯಾಗಿ ರಣರಂಗ ಸಾಗಿ
ನಗುವೇ ನೀ ತೂಗಿ... ನಗುವೇ ನೀ ತೂಗಿ
ನಟವರ ಗಂಗಾಧರ 

ತೋರಿನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೆ ದಾರಿ ಕವಲಾಗಿ
ಮನಮಾರುವಾಗ ಪ್ರಭುವೇ ಮುಂದಿಡುವೆ
ಪ್ರಭುವೇ ಮುಂದಿರುವೇ.. ನಟವರ ಗಂಗಾಧರ
ಉಮಾಶಂಕರನೀ ಲೀಲಾ  ವಿನೋದ ವಿಹಾರ
ನಟವರ ಗಂಗಾಧರ

ಜ್ಞಾನ ಗುಣ ಮಾಲಕರುಣಾಲವಾಲ ತಿಳಿಯೇ ನೀ ಲೀಲಾ 
ದೇವ ಜನ ತುಂಗಮ ಹಿಮಾ ತರಂಗ 
ಭಲ ರೇಜಗ ಪಾಲ... ಆಆಆ ಆಯಾ 
ಭಲ ರೇಜಗ ಪಾಲ... ಆಆಆ ಆ.. ನಟವರ ಗಂಗಾಧರ
ಉಮಾಶಂಕರನೀ ಲೀಲಾ  ವಿನೋದ ವಿಹಾರ
ನಟವರ ಗಂಗಾಧರ
 ------------------------------------------------------------------------------------------------------------------

ಸ್ವರ್ಣ ಗೌರಿ (೧೯೬೨) ...................ಬಾರಾ ಚಂದ್ರಮ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಡಾ.ಪಿ.ಬಿ.ಶ್ರೀನಿವಾಸ ಮತ್ತು ಎಸ್.ಜಾನಕಿ


ಹೆಣ್ಣು : ಮೂಡಿ ಸಾವಿರ ದಳದಿ ಕಾಯುತಿರುವೆನು ನಿನ್ನ
          ಪ್ರೇಮ ಸಾರದ ಮಧುವ ಸವಿಯಲಾರೆನು ಮುನ್ನ
          ಈ ಅಲೆಯ ಸಂಕೋಲೆ ಕಳಚಿ ಬರಲಾರೆನು
          ನಲವಿಂದ ಮಂಚಾರಿ ನೀ ನೊಲಿದು ಬಾರೆನ್ನ... ಆಆಆ  
         ಬಾರಾ ಚಂದ್ರಮ (ಹುಂಹುಂ ) ಚೆನ್ನಾರ ಚೆಲುವ ಬಾರಾ
        ಕಣ್ಣಾಸೆ ತುಂಬಿ ತಾರಾ ಈ ಮೋದ ವಿನೋದ ಮನಕಾ ಮೋದ
ಗಂಡು : ಬಾರೇ ಓ ಸುಮ (ಹುಂಹುಂ )ಕಣ್ಣಾರೆ ಕಂಡೆ ಭಾಮ
            ನಿನ್ನಂಗ ರಂಗ ಸೀಮ ಈ ಮೋದ ವಿನೋದ ಮನಕಾ ಮೋದ
ಹೆಣ್ಣು :  ಬಾರಾ ಚಂದ್ರಮ             

ಹೆಣ್ಣು :  ನಾನೇನು ಬಲ್ಲೆ ಮರಯಾದ ಮೇಲೆ  ತೋರೆಯುವೆ ನೀ ಅನುರಾಗವ
ಗಂಡು :  ಓಓಓಓ ತಾರೇರು ನನ್ನ ಚೆಲುವೇರು ಮುನ್ನ ನೀ ನೀಡು ಆ ಸುರಭೋಗವ
             ಮುನಿಸೇನು ಮೋಹಿನಿ ಕುಣಿದಾಡೋ ಕಾಮಿನಿ
            ಈ ಮೋದ ವಿನೋದ ಮನಕಾ ಮೋದ  ಬಾರೇ ಓ ಸುಮ
ಗಂಡು :  ಬಾರೇ ಓ ಸುಮಾ

ಗಂಡು : ಮನರಾಣಿ ನೀನೇ ಅನುವಾಗು ಜಾಣೆ ಸಾಕಿನ್ನು ಈ ಬಿಗುಮಾನವು
ಹೆಣ್ಣು : ಓಓಓ ... ಬರಲಾರೆ ನಾನು ಬಳಿಸಾರು ನೀನು  ಈ ಬಂಧನ ಅನುಗಾಲವು
          ಮುದಮೋಹ ತಾಳುವ ಸುರಲೀಲೆಯಾಡುವ
         ಈ ಮೋದ ವಿನೋದ ಮನಕಾ ಮೋದ
         ಬಾರಾ ಚಂದ್ರಮ ಚೆನ್ನಾರ ಚೆಲುವ ಬಾರಾ
          ಕಣ್ಣಾಸೆ ತುಂಬಿ ತಾರಾ ಈ ಮೋದ ವಿನೋದ ಮನಕಾ ಮೋದ
ಹೆಣ್ಣು :  ಬಾರಾ ಚಂದ್ರಮ        ಗಂಡು : ಬಾರೇ ಓ ಸುಮ
--------------------------------------------------------------------------------------------------------------------------

ಸ್ವರ್ಣಗೌರಿ (೧೯೬೨)........................ಬಾರೇ ನೀ ಚೆಲುವೆ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಡಾ.ಪಿ.ಬಿ.ಶ್ರೀನಿವಾಸ್


ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ನಿನ್ನೊಲವು ಚೆಲುವು ಮನಕಂದ
ಬಾರೇ ನೀ ಚೆಲುವೆ

ನಾರಿ ಶೃಂಗಾರವಾಹಿನಿಯೇ
ನಾರಿ ಶೃಂಗಾರವಾಹಿನಿಯೇ
ಮಧುರ ಮಂದಾರ ಮೋಹಿನಿಯೆ
ಲಲಿತ ಸುಂದರ ರಮಣೀಯೆ
ವಿಲಾಸವ ತೋರು ವಿನೋದವ ಬೀರು
ವನರಾಣಿ ಕಲವಾಣಿ ಚಿಂತಾಮಣಿ
ಬಾರೇ ನೀ ಚೆಲುವೆ

ಮೇಘಮಾಲೆಯೇ ಮುಂಗುರುಳು
ಮೇಘಮಾಲೆಯೇ ಮುಂಗುರುಳು
ಕಮಲ ಸಮ್ಮೊಹ ಕಣ್ಣಿನೊಲು
ನಿನ್ನ ವಾಹನ ಗಿರಿಸಾಲು
ಸುಹಾಸಿನಿ ನೀರೆ ಸುಮೋದವ ತೋರೆ
ವನರಾಣಿ ಕಲವಾಣಿ ಚಿಂತಾಮಣಿ
ಬಾರೇ ನೀ ಚೆಲುವೆ

ಮೌನವಿನ್ನೇಕೆ ಓ ರಮಣಿ
ಮೌನವಿನ್ನೇಕೆ ಓ ರಮಣಿ
ಮನವ ಸೋತೇನು ಲಾಲಿಸು ನೀ
ಒಲಿದು ಬಾರೆ ಸುಮವೇಣಿ
ಪರಾಗವ ಬೀರು ಸರಾಗವ ತೋರು
ವನರಾಣಿ ಕಲವಾಣಿ ಚಿಂತಾಮಣಿ
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ನಿನ್ನೊಲವು ಚೆಲುವು ಮನಕಂದ
ಬಾರೇ ನೀ ಚೆಲುವೆ
------------------------------------------------------------------------------------------------------------

ಸ್ವರ್ಣ ಗೌರಿ (೧೯೬೨)......................ಜಯಗೌರಿ ಜಗದೀಶ್ವರಿ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಎಸ್.ಜಾನಕಿ ಮತ್ತು ಚಿತ್ತರಂಜನ್

ಆ.....ಆ......ಆ.......ಆಆಆ............
ಜಯಗೌರೀ ಜಗದೀಶ್ವರೀ ಜಯಗೌರೀ ಜಗದೀಶ್ವರೀ
ಕಾವುದೆನ್ನ ಕಲಾಸಾಗರೀ...  ಜಯಗೌರೀ ಜಗದೀಶ್ವರೀ

ಸುಮಧುರಗಾನ ಸುಲಲಿತತಾಣ 
ಸುಮಧುರಗಾನ ಸುಲಲಿತತಾಣ
ಬೇಡುವೆನಾ ಸುಧಾಮಯಿದಾನ
ಧಿಮಿಕಿಟತಾಳ ಸ್ವರಾವಳಿ ಮೇಳ
ಧಿಮಿಕಿಟತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದನಿ
ಜಯಗೌರೀ ಜಗದೀಶ್ವರೀ

ಲಯಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಲಯಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವಜಾಯೆ ಪ್ರಭಾವದಿ ಕಾಯೆ
ಪರಶಿವಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ
ಜಯಗೌರೀ ಜಗದೀಶ್ವರೀ.... ಜಯಗೌರೀ ಜಗದೀಶ್ವರೀ
ಗಮಗಮ ದನಿದನಿ ನಿ ಗಪಮ ಗಪಮ 
ಜಯಗೌರೀ ಜಗದೀಶ್ವರೀ
ಆ.......ಆ...........
ಜಯಗೌರೀ ಜಗದೀಶ್ವರೀ ಜಗದೀಶ್ವರೀ
ಜಗದೀಶ್ವರೀ ಜಗದೀಶ್ವರೀ ಜಗದೀಶ್ವರೀ
--------------------------------------------------------------------------------------------------------------------------

ಸ್ವರ್ಣಗೌರಿ (1962)...........................ನುಡಿಮನ ಶಿವಗುಣ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲ


ಹೆಣ್ಣು : ಓಂಕಾರ ನಾದಸ್ವರೂಪ ಬಾಲೇಂದುಭೂಷಣ ಕಲಾಪ
          ನಿಗಮ ಭುವನದೀಪ ನಟರಾಜ ನಮಾಮಿ ನಟರಾಜ ನಮಾಮಿ
ಪಿ.ಬಿ.ಶ್ರೀ : ನುಡಿಮನ ಶಿವಗುಣ ಸಂಕೀರ್ತನ
               ನುಡಿಮನ ಶಿವಗುಣ ಸಂಕೀರ್ತನ
               ನಿಜಪದ ಪಾವನ ನೋಡಿ ಪಾಡುವೆನ
               ನಿಜಪದ ಪಾವನ ನೋಡಿ ಪಾಡುವೆನ
               ನುಡಿಮನ ಶಿವಗುಣ ಸಂಕೀರ್ತನ

ಪಿ.ಸುಶೀಲ:  ನಾಟ್ಯಲೀಲ ನಟನಾಲೋಲ ನೀನೇ ಭಾವರಸಾಲ
                 ನೀನೇ ಭಾವರಸಾಲ
ಪಿ.ಬಿ.ಶ್ರೀ : ನಾಟ್ಯಲೀಲ ನಟನಾಲೋಲ ನೀನೇ ಭಾವರಸಾಲ
               ನೀನೇ ಭಾವರಸಾಲ
ಪಿ.ಸುಶೀಲ: ಕುಣಿಸುವಾ ಮನ ತಣಿಸುವ ಕುಣಿಸುವಾ ಮನ ತಣಿಸುವ
                ಕಮನೀಯ ಕಾಮಹರದೇವ
                ನುಡಿಮನ ಶಿವಗುಣ ಸಂಕೀರ್ತನ

ಪಿ.ಬಿ.ಶ್ರೀ : ನಾದಸಾರ ನಿಗಮಾಕಾರ ನೀನೇ ಗಾನವಿಹಾರ
               ನೀನೇ ಗಾನವಿಹಾರ
ಪಿ.ಸುಶೀಲ: ನಾದಸಾರ ನಿಗಮಾಕಾರ ನೀನೇ ಗಾನವಿಹಾರ
               ನೀನೇ ಗಾನವಿಹಾರ
ಪಿ.ಬಿ.ಶ್ರೀ: ಪ್ರಚನ ನೀ ಮಧುವಚನ ನೀ
ಪಿ.ಸುಶೀಲ: ಪ್ರಚನ ನೀ ಮಧುವಚನ ನೀ
ಇಬ್ಬರೂ :  ನವರಾಗ ತಾಳ ಲಯ ತಾನಾ
              ನುಡಿಮನ ಶಿವಗುಣ ಸಂಕೀರ್ತನ
              ನಿಜಪದ ಪಾವನ ನೋಡಿ ಪಾಡುವೆನ
              ನಿಜಪದ ಪಾವನ ನೋಡಿ ಪಾಡುವೆನ
              ನುಡಿಮನ ಶಿವಗುಣ ಸಂಕೀರ್ತನ
ಪಿ.ಬಿ.ಶ್ರೀ : ಗಮದನಿಸನಿದಪ ನಿದಪಮಗಪಮರಿಸ ಗರಿಗರಿಸನಿಪ................
------------------------------------------------------------------------------------------------------------------------

ಸ್ವರ್ಣಗೌರಿ (1962)...........................ಓ ಜನನೀ ಕಲ್ಯಾಣಿ!
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ 


ಓ ಜನನೀ ಕಲ್ಯಾಣಿ! ಪತಿಯ ಪರಿಪಾಲಿಸಮ್ಮ ಭವಾನಿ
ನೀನೆ ಗತಿ ದಾಯಿನಿ....  ಓ ಜನನೀ ಕಲ್ಯಾಣಿ!

ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮತಿಯು ಮರುಳಾಗಿ ಗತಿ ಹೀನಳಾಗಿ
ಬಂದೆ ನೀ ಲಾಲಿಸಮ್ಮ ಶರ್ವಾಣಿ
ಕರುಣಿ ಕಾತ್ಯಾಯಿನಿ....  ಓ ಜನನೀ ಕಲ್ಯಾಣಿ!

ಸುಖ ಸಂತೋಷ ವಿನೋದವ ಕಾಣೆ..
ಪತಿಸೇವಾ ಪರಾಜಿತೆ ನಾನೆ
ಸುಖ ಸಂತೋಷ ವಿನೋದವ ಕಾಣೆ..
ಪತಿಸೇವಾ  ಪರಾಜಿತೆ ನಾನೆ
ಪತಿಯ ಸುಖಕಾಗಿ ಸವಿಬಾಳಿಗಾಗಿ
ಬಲಿಯು ನಾನಾದೆನಮ್ಮ ಸುವ್ವಾಲಿ
ನಲಿಯೆ ನಾರಯಣಿ ಓ ಜನನೀ ಕಲ್ಯಾಣಿ!  ಪತಿಯ ಕಾಪಾಡಮ್ಮ
ಪತಿಯ ಕಾಪಾಡಮ್ಮ....  ಕಾಪಾಡಮ್ಮ....    |
------------------------------------------------------------------------------------------------------------------------
ಸ್ವರ್ಣಗೌರಿ (1962)...........................ನ್ಯಾಯವಿದೇನಮ್ಮ?
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ 


ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?
ಬಂದಿಹೆ ನಿನ್ನ ಚರಣದೊಳೆನ್ನ ಬಿನ್ನಹ ಕೇಳಮ್ಮ
ನಿರಾದಾರಿ ಯಾದೆ ನನ್ನ ಜೀವನ ನೋಡಮ್ಮ
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?
ಬಂದಿಹೆ ನಿನ್ನ ಚರಣದೊಳೆನ್ನ ಬಿನ್ನಹ ಕೇಳಮ್ಮ
ನಿರಾದಾರಿ ಯಾದೆ ನನ್ನ ಜೀವನ ನೋಡಮ್ಮ
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?

ತವ ಚರಣ ನಂಬಿ ನಿಜಕರಣ ತುಂಬಿ ಭರದಿಂದ ಚಿಮ್ಮಿ ಬಂದೆನೆ
ಮಣ್ಣಾಯಿತೆನ್ನ ಸವಿಬಾಳ ಬಣ್ಣ ಜಗದಂಬೆ ಕುಂದಿ ನೊಂದೆನೆ
ಗತಿ ನೀನೆ ತೋರಮ್ಮ ವರದಾನ ನೀಡಮ್ಮಾ!
ಚಿದಾನಂದ ಮಾಯೆ ನಿನ್ನ ಮೌನ ವಿದೇನಮ್ಮಾ?
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?

ಪತಿದೇವ ಸತಿಯ ಜೀವ ಮುಡಿಯ ಕುಸುಮದಾನ
ನಿಜ ಯೌವನ್ನ ಸುಖ ಬಂದನ ಮಧುರ ಜೀವ ಮಾನ
ಹಣೆಯ ಚಂದನವು ಸುಮನ ಮನ ಮೋಹನ ಜಾಣ
ಪತಿ ದೇವನ ತೋರಿಸು ನೀ  ಬಿಡು ಬಿಗುಮಾನ
ಆಣೆ ಇದೆ ಜನನಿ ನೀ ಆಲಿಸು ಭವಾನಿ!

ಧಗಧಗಧಗವೆನೆ ಪ್ರಳಯ ಜ್ವಾಲೆಯೆ ಜಗವ ತುಂಬಲೀ!
ಸುರವನ ಗಿರಿಗುಡುಗಾಡಿ ಧರಣಿ ಬಿರುದಿ ನುಂಗಿ ನಗಲೀ!
ನದಿ ನದಾಳಿ ಹೊಮ್ಮಿ ಲೋಕದೊಳ್ ನಾಶವನ್ನೆ ತರಲೀ!
ಮೃಡಾನಿ ಲಾಲಿಸು ನೀ, ಬಳಿಸಾರಿದೆ ನಾ ಜನನೀ!
ಚಂಡ ಮುಂಡ ದೈತ್ಯಾದಿ ನಾಷಿನಿ ಶುಂಭ ನಿಶುಂಬ ನಿಶೂದಿನಿ
ಕರುಣೆ ತೋರು ಜನನಿ ಕರುಣೆ ತೋರು ಜನನಿ
ಜನನೀ!   ಜನನೀ!  ಜನನೀ!
------------------------------------------------------------------------------------------------------------------------
ಸ್ವರ್ಣಗೌರಿ (1962)..........................ಕನಲಿ ಕಾದಂತ ಕಾಲನ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ

ಕನಲಿ ಕಾದಂತ ಕಾಲನ ಕರುಣೆ ಕೋರಿ
ವಿಧಿಗೆ ಇದಿರಾಡಿ ಮೃತನಾದ ಪತಿಯ ಲಬ್ಧ ಜೀವಿತ ಮಾಡಿ
ವರಗಳ ಸಾರಿಕುಂದಿ ಮಿರಿಯೆ ಸಾವಿತ್ರಿ ನಿಜ ಸತಿ ಧರ್ಮ ಮಹಿಮಾ...
ಅ ಅ ಅ ಅ ಅ ಅ ಆ ಆ ಆ ಅ ಅ ಅ ಆ

ನಿಜ ಪತಿಯ ಅತ್ತೆ-ಮಾವರ ಜನನೀ-ಜನಕರನು..
ತನ್ನ ಸಕಲ ಕುಲವನು
ಘನವೆನೆ ಉದ್ದರಿಸಿದಳು ಜನವರಾ..
ಸಾವಿತ್ರಿ ಜನ್ಮ ಚರಿತ್ರೆಯ ಕೇಳೂ
ಅ ಅ ಅ ಅ ಆ
-------------------------------------------------------------------------------------------------------------------------

ಸ್ವರ್ಣಗೌರಿ (1962)...........................ವಿಮಲ ನೀಲ ಜಲದೊಳೇನು
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ


ವಿಮಲ ನೀಲ ಜಲದೊಳೇನು
ಅಲೆಯ ಕಲಕಲ ಮೇಲಾ
ಒಲವನರಿಯನೆ ಮನದೊಳೇನು
ನಲಿವದ ಸಮಯ ಲೀಲಾ

ಈ ಲೀಲಾ ವಿಲಾಸ ವಿನೊದ ಕಾಣೆನು..
ಆನಂದ ಬಾನು ತುಂಬಿ ಜೇನು ತಂದನೆನು? |೨|
ಈ ಲೀಲಾ ವಿಲಾಸ!

ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ |೨|
ಮಧುರ ರಾಗ ಅನುರಾಗ ತಾಳಿ |೨|
ನೂತನ.. ಭಾವನ
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ!

ಸುಮವಿಗಾನ ವನಮೊಹ ಜಾಲ..
ಮೊರೆಯೆ ಗಂಗಾ ನವರಾಗ ಮಾಲ |೨|
ಬೆಳಗುತಾನೆ ನಿಜರೂಪ ಲೀಲ |೨|
ಕಾಣಲೇ.. ಕಾಣನು
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ!

ಮಧು ವಸಂತ ನೀ ತೋರು ನಾಮ..
ಆರವದನ ನಯನಾಭಿ ರಾಮ
ಮಧು ವಸಂತ ನೀ ತೋರು ನಾಮ
ಗುಂಡಗಳಿರ ಇವನಾರು ಕಾಮ?
ಕಾಣಿರಾ.. ಕೇಳಿರಾ
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ ವಿನೊದ ಕಾಣೆನು
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ!
-----------------------------------------------------------------------------------------------------------------------

ಸ್ವರ್ಣಗೌರಿ (1962)..........................ಹಾಡಲೇನು ಮನದಾಸೆ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ:ಎಸ್.ಜಾನಕಿ

ಆ ಆ ಆ ಆ ಆ  ಹಾಡಲೇನು.. ಮನದಾಸೆ.. ನಾನು
ಕನಸು ಕಂಡೇನು ನಾನು.. ಹಾಡಲೇನು ಮನದಾಸೆ ನಾನು
ಕನಸು ಕಂಡೇನು.. ನಾನು ಹಾಡಲೇನು

ಅನುರಾಗದಿನ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ
ಅನುರಾಗದಿನ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ
ನವ ವಸಂತನು ಬಂದನೆ
ಆಶಾ ಕುಸುಮ ನಲಿದಾಡುವಾಗ
ಆಶಾ ಕುಸುಮ ನಲಿದಾಡುವಾಗ ಗಾಳಿ ಬೀಸಿತೆನೆ.....
ಹಾಡಲೇನು ಮನದಾಸೆ ನಾನು
ಕನಸು ಕಂಡೇನು.. ನಾನು ಹಾಡಲೇನು

ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ |
ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ |
ವಿಧಿ ವಿಲಾಸವ ಅರಿಯೆನೆ
ಮಧುರ ಸಾರ ಕನಸಳಿಯಿತೀಗ
ಮಧುರ ಸಾರ ಕನಸಳಿಯಿತೀಗ
ಕಣ್ಣ ತೆರೆದೇನೆ ಕಥೆಯ ಕಾಣೇನೆ!
-------------------------------------------------------------------------------------------------------------------------
ಸ್ವರ್ಣಗೌರಿ (1962)...........................ಬಂತು ನವಯೌವ್ವನ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ

ಹೆಣ್ಣು : ಬಂತು ನವಯೌವ್ವನ  ತುಂಬಿ ಸಂಜೀವನ
         ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ
         ನಿನ್ನ ಸರಿಕಾಣೆನ  ಚೆಲ್ವ ಮನ ಮೋಹನ
         ಸುಂದರ ನಂದನ ನನ್ನ ಸಂತೋಷನ
         ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ
ಸಂಗಡಿಗರು:  ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
                    ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
ಹೆಣ್ಣು : ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ

ಹೆಣ್ಣು :  ಮೌನ ಬಿಡು ರನ್ನ ಸವಿ ಬಾಳ ಮಧು ಚೆನ್ನ
          ಜೇನಾಗಿ ಬಾರೆನ್ನ ರಾಜ ರಾಜ ರಾಜ!
          ರೂಪು ಯೌವನ.. ಬೋಗ  ಜೀವನ
          ರೂಪು ಯೌವನ.. ಬೋಗ  ಜೀವನ ಬೇಕೆ ಜಾಣ?
          ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ

ಹೆಣ್ಣು : ಬಾರದಿನ್ನೆಂದು ಈ ಪ್ರಣಯ ಸುಖವೊಂದು
          ಒಂದಾಡಿ ಕೂಡೆನ್ನ ಮಾರ ನೀರ ಧೀರ
ಸಂಗಡಿಗರು:  ನಿರುಪಮ ಬಂದನ ಮನಹರ ಚತುರ ಬಾರ ಸುಂದರ 
                    ನಿರುಪಮ ಬಂದನ ಮನಹರ ಚತುರ ಬಾರ ಸುಂದರ
ಹೆಣ್ಣು : ಬಾರದಿನ್ನೆಂದು ಈ ಪ್ರಣಯ ಸುಖವೊಂದು
          ಒಂದಾಡಿ ಕೂಡೆನ್ನ ಮಾರ ನೀರ ಧೀರ
          ಗಾನ ನರ್ತನ.. ರಾಗ ರಂಜನ
          ಗಾನ ನರ್ತನ.. ರಾಗ ರಂಜನ ಬೇಕೆ ಜಾಣ?
          ಬಂತು ನವಯೌವ್ವನ..  ನೋಡೆನ್ನ ಜಾಣ ತುಂಬಿ ಸಂಜೀವನ
ಸಂಗಡಿಗರು: ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
                  ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
                  ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ 
-------------------------------------------------------------------------------------------------------------------------

ಸ್ವರ್ಣಗೌರಿ (1962)
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: 
 ಪಿ.ಲೀಲಾ 

ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು

ಮನಗಳ ದೀಪ ಆಶಾರೂಪ ಮಾತಾಪಿತರ ಆಶಾಪ್ರಕಾಶ
ಕೀರ್ತಿಸು ಗಂಧ ಓ ಮುದ್ದು ಕಂದ
ಕೀರ್ತಿಸು ಗಂಧ ಓ ಮುದ್ದು ಕಂದ
ಮಧುರಾನಂದ ಈ ಅನುಬಂಧ 
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು

ಅರಮನೆಯಾಗಲಿ ಗುಡಿಸಲೆಯಾಗಲಿ 
ಮೆರೆಯುವೆ ಆಗಿ ಆನಂದ ಜ್ಯೋತಿ
ಅರಮನೆಯಾಗಲಿ ಗುಡಿಸಲೆಯಾಗಲಿ 
ಮೆರೆಯುವೆ ಆಗಿ ಆನಂದ ಜ್ಯೋತಿ
ಸಿರಿತನ ತಂದರು ಬಡತನ ಬಂದರೂ 
ಸಿರಿತನ ತಂದರು ಬಡತನ ಬಂದರೂ 
ಉಳಿವಂತ ಆಸ್ತಿ ನಿನ್ನಯ ಪ್ರೀತಿ 
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು

ಮಾಲೀಕ ಆಸೆಯ ಸುಮಸಂತಾನ
ಮಾತೆಯ ಪದವೇ ಮಾನ್ಯ ಸಮ್ಮಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ  
ಮಮತೆಯ ಮಡಿಲೇ ನಿನ್ನಯ ಸ್ಥಾನ 
ಮಾತೆಗೆ ಮಾನ ನಿನ್ನ ಉತ್ಸಾನ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
--------------------------------------------------------------------------------------------------------------------------


No comments:

Post a Comment