114. ಪ್ರೇಮಲೋಕ (1987)


ಪ್ರೇಮಲೋಕ ಚಿತ್ರದ ಹಾಡುಗಳು 
  1. ಬನ್ನಿ ನನ್ನ ಗೆಳೆಯರೇ 
  2. ಈ ನಿಂಬೆ ಹಣ್ಣಿನಂಥ ಹುಡುಗಿ ಬಂದ್ಲು ನೋಡು 
  3. ಬಾತರೂಮಿನಲ್ಲಿ ನನ್ನ ಪ್ರಿಯನ ಕಂಡೇ 
  4. ಬಾಯ್ ಫ್ರೆಂಡ್ ಬರುತ್ತಾನಂತ ಬಾಯಿಬಿಡಬೇಡಾ 
  5. ಚೆಲುವೇ ಒಂದು ಕೇಳ್ತೀನಿ ಇಲ್ಲ ಅಂದರೇ ಕೊಡ್ತೀಯಾ 
  6. ಇದು ನನ್ನ ನಿನ್ನ ಪ್ರೇಮಗೀತೆ ಚೆನ್ನ 
  7. ಮೋಸಗಾರನ ಹೃದಯ ಶೂನ್ಯನಾ 
  8. ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ 
  9. ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ 
  10. ಯಾರಿವನೂ ಈ ಮನ್ಮಥನೂ 
  11. ಏ ಗಂಗೂ ಈ ಬೈಕೂ ಕಲಿಸಿ ಕೊಡು ನಂಗೂ 

ಪ್ರೇಮಲೋಕ (1987) - ಗೆಳೆಯರೆ ನನ್ನ ಗೆಳತಿಯರೇ...
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ್.ಪಿ.ಬಿ


ಬನ್ನೀ....  ನನ್ನ ಗೆಳೆಯರೆ...  ಬನ್ನೀ....  ನನ್ನ ಗೆಳತಿಯರೆ
ಗೆಳೆಯರೆ.. ನನ್ನ ಗೆಳತಿಯರೆ
ಆ.. ಗೆಳೆಯರೆ.. ನನ್ನ ಗೆಳತಿಯರೆ
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ..
ಹೊಗೋಣ ಕಾಲೇಜಿಗೆ.. ಥ್ಯಾಂಕ್ಸ್ ಹೇಳಿ ವಯಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೇ
ಗೆಳೆಯರೆ ನನ್ನ ಗೆಳತಿಯರೇ...

(ಲಲ್ಲಲ್ಲಲ್ಲಲ್ಲ ಲಲ್ಲಲ್ಲಲ್ಲಲ್ಲ ಲಲ್ಲಲ್ಲಲ್ಲಲ್ಲ )
ಭಯವಿಲ್ಲದಂತ ವಯ್ಸಸಿದು  ಬಯಾಲಜಿ ಬರೆಯಬಹುದು
ಕೆಮ್ಮು ಬಾರದಂತ ವಯ್ಸಸಿದು, ಕೆಮಿಸ್ಟ್ರಿ ಕಲಿಯಬಹುದು
ಮೀಸೆ ಚಿಗುರುವಂತ ವಯ್ಸಸಿದು, (ರಂಪಂಪ )  ಹಿಸ್ಟರಿ ಓದಬಹುದು (ರಂಪಂಪ )
ಪ್ರೇಮ ಚಿಮ್ಮುವಂತ ವಯ್ಸಸಿದು, (ರಂಪಂಪ ) ಕಾಮರ್ಸ್ ಕೇಳಬಹುದು(ರಂಪಂಪ )
ಬನ್ನಿ ಗೆಳತಿಯರೇ.. ಡ್ರಿಲ್ಲಿಂಗ್ ಮಾಡಬಹುದು
ಬನ್ನಿ ಸ್ನೇಹಿತರೇ.. ಥ್ರಿಲ್ಲಿಂಗ್ ನೋಡಬಹುದು
ನಾನು ನೀನು ಎಂಬುದಿಲ್ಲ (ರುರುರುರೂರು)ಗಂಡು ಗಿಂಡು ಭೇದವಿಲ್ಲ..(ರುರುರುರೂರು)
ಚಿಂತೆಗಿಲ್ಲಿ ಜಾಗವಿಲ್ಲ (ರುರುರುರೂರು) ಜಾಲಿ ಮಾಡಿ ಬನ್ನಿ ಎಲ್ಲ (ರುರುರುರೂರು)
ವಯಸು ಕಳೆದು ಹೋದ ಮೇಲೆ ದೊರಕದು ಕೈಲಿ ಇರುವ ಪ್ರೇಮಲೋಕ ನಮ್ಮದು..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!
ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಾಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೆ ಗೆಳೆಯರೆ ನನ್ನ ಗೆಳತಿಯರೇ ರೇ ರೇ ರೇ

ಕ್ಲಾಸ್‍ರೂಮಿನಲ್ಲಿ ಇದ್ದರೆ, ಕಾಮೆಂಟ್ರಿ ಕೇಳಬಹುದು
ಕ್ಲೋಕ್‍ ರೂಮಿನಲ್ಲಿ ಇದ್ದರೆ, ಟೈಮ್ ಪಾಸ್ ಮಾಡಬಹುದು
ಲೈಬ್ರರಿಗೆಂದು ಹೋದರೆ, (ರಂಪಂಪ ) ಲವ್ ಸೀನ್ ನೋಡಬಹುದು (ರಂಪಂಪ )
ಲ್ಯಾಬೋರೇಟರಿಗೆ ಹೋದರೆ, (ರಂಪಂಪ ) ಡಿಂಗ್-ಡಾಂಗ್ ನೋಡಬಹುದು (ರಂಪಂಪ )
ಬನ್ನಿ ಗೆಳತಿಯರೇ ಡಿಸ್ಕೊ ಕುಣಿಯಬಹುದು ಅಹ್ಹಹ್ಹಾಹ್ಹಾ
ಬನ್ನಿ ಸ್ನೇಹಿತರೆ.. ಜಾಲಿ ಮಾಡಬಹುದು
ಸೂರ್ಯ ಚಂದ್ರ ಜೇಬಿನಲ್ಲೆ,  (ರುರುರುರೂರು) ತಾರೆ ಚುಕ್ಕಿ ಮುಷ್ಟಿಯಲ್ಲೆ (ರುರುರುರೂರು)
ಎಂಟು ದಿಕ್ಕು ನಮ್ಮ ಕೈಲಿ, (ರುರುರುರೂರು) ರಾಜರಂತೆ ನಾವು ಇಲ್ಲಿ (ರುರುರುರೂರು)
ಋತುಗಳೆಲ್ಲ ನಮ್ಮ ದಾರಿ ಕಾದಿದೆ ವರುಷ ಪೂರ್ತಿ ಹರುಷ ನಮ್ಮದಾಗಿದೆ..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!
ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೆ
ಗೆಳೆಯರೆ ನನ್ನ ಗೆಳತಿಯರೆ ಗೆಳೆಯರೆ ನನ್ನ ಗೆಳತಿಯರೆ
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೇ
ಗೆಳೆಯರೆ ನನ್ನ ಗೆಳತಿಯರೇ ಗೆಳೆಯರೆ ನನ್ನ ಗೆಳತಿಯರೇ..
------------------------------------------------------------------------------------------------------------------------

ಪ್ರೇಮಲೋಕ (1987) - ಈ ನಿಂಬೆ ಹಣ್ಣಿನಂತ ಹುಡುಗಿ
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ರಮೇಶ್


ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು ಏ ಬಾಲು.. ಏ ಬಾಲು
ಇದು ರಂಬೆ ಮೇನಕೆಯ ವಂಶದ ಬೆಡಗಿ ನೋಡು ಈ ಮಾಲು.. ಹೊಸ ಮಾಲು  
ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ  ಇಲ್ಲಿ ಬಿತ್ತು  ಇಂದೂ ಪೂರ್ತಿ ಡ್ಯೂಟಿ!
ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ  ಇಲ್ಲಿ ಬಿತ್ತು  ಇಂದೂ ಪೂರ್ತಿ ಡ್ಯೂಟಿ!
ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು  ಏ ಬಾಲು.. ಏ ಬಾಲು

ಈ ಬಿಸಿಲು ಕಾಲದಲಿ ಬಂತೋ ಕಾಮನ ಬಿಲ್ಲು .. ಆ ಹುಬ್ಬು, ಕರಿ ಹುಬ್ಬು
ಈ ಪಬ್ಲಿಕ್ ರೋಡಿನಲ್ಲಿ ಜಿಂಕೆ ಬಂದೈತಲ್ಲೊ.. ಆ ಕಣ್ಣು.. ಜಿಂಕೆ ಕಣ್ಣು
ಈ ಎಳೆ ಸಂಪಿಗೆಯ 3-Dಯಂಥ ಮೂಗೂ.. ಅಯ್ಯೋ..
ಅ ಅಹ್ ಕಳೆ ಕೊಡುವ ಈ ತೊಂಡೆ ತುಟಿಗಳ ರಂಗು.. ಅ ಮಿಂಚಿಂಗು
ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ  ಇಲ್ಲಿ ಬಿತ್ತು  ಇಂದೂ ಪೂರ್ತಿ ಡ್ಯೂಟಿ! 

ಈ ಹಗಲು ಹೊತ್ತಿನಲಿ ಚಂದ್ರ ಬಂದೈತಲ್ಲಾ..ಈ ಗಲ್ಲ.. ರಸಗುಲ್ಲಾ
ಆ ತಲೆ ಇಂದ ಉಂಗುಷ್ಟದವರೆಗೆ ಎಲ್ಲಾ ಮಾತಿಲ್ಲ ಕೊಂಕಿಲ್ಲ
ಈ ಎಳೆ ಬಿಸಿಲಿನಲಿ ಮಿನುಗುತಿರುವ ಹೆಣ್ಣೋ.. ಅಣ್ಣೋ
ಆ ಸೂರ್ಯ ಕೂಡ ಕಣ್ ಹೊಡಿತಾವನಲ್ಲನಣ್ಣೊ.. ನೋಡಣ್ಣೊ
ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ  ಇಲ್ಲಿ ಬಿತ್ತು  ಇಂದೂ ಪೂರ್ತಿ ಡ್ಯೂಟಿ!
ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು ಏ ಬಾಲು!
----------------------------------------------------------------------------------------------------------------------

ಪ್ರೇಮಲೋಕ (1987) - ಬಾತ್‍ರೂಮಿನಲ್ಲಿ ನನ್ನ ಪ್ರಿಯನ ಕಂಡೆ
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ್. ಜಾನಕಿ ಮತ್ತೆ ಇತರರು

ಗುಂಪು: ಏಳೇಳಿ ಪ್ರೇಮಿಗಳೆ ಮೇಲೇಳಿ..
           ಕನಸಿನಾ ಲೋಕದ ಹೂವುಗಳೆ ಏಳಿ         
           ಹೊತ್ತೇನು ಗೊತ್ತೇನು ನಿಮಗಿಲ್ಲ ಏಳಿ..
           ಪ್ರೇಮದ ರೋಗಿಗಳೆ ಬೆಳಗಾಯಿತೇಳಿ
           ದೂದುತ್ತ ದೂದುತ್ತ ದೂದುತ್ತ ದೂದು
ಹೆಣ್ಣು:  ಬಾತ್‍ರೂಮಿನಲ್ಲಿ ನ ನ್ನ ಪ್ರಿಯನ ಕಂಡೆ ಮನಸ ಕದ್ದ ಶೂರನ ಕಂಡೇ
          ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ ಮಿಂಚು ಮಾಯಗಾರನ ಕಂಡೇ
         ಸೋಪಿನಲ್ಲೂ ನೀನೆ ಪ್ರಿಯಾ! ಶಾಂಪುನಲ್ಲೂ ನೀನೆ ಪ್ರಿಯಾ!
         ಪೇಸ್ಟಿನಲ್ಲೂ ನೀನೆ ಪ್ರಿಯಾ!  ಬ್ರಶಿನಲ್ಲೂ ನೀನೆ ಪ್ರಿಯಾ!
         ಕಣ್ಣಿನಲ್ಲೂ ನೀನೆ ಪ್ರಿಯಾ! ಆಹ್!  ಹೃದಯದಲ್ಲೂ ನೀನೆ ಪ್ರಿಯಾ ಅ ಅ!
          ಜೀವದಲ್ಲೂ ನೀನೆ ಪ್ರಿಯಾ! ಎಲ್ಲೆಲು ನೀನೆ ಪ್ರಿಯಾ!!
          ಬಾತ್‍ರೂಮಿನಲ್ಲಿ ನನ್ನ ಪ್ರಿಯನ ಕಂಡೆ ಮನಸ ಕದ್ದ ಶೂರನ ಕಂಡೇ
          ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ ಮಿಂಚು ಮಾಯಗಾರನ ಕಂಡೇ
         ಪ್ರೀತಿ ಮಾಡಬೇಕಾದರೇ, ಯಾರದೇನು ಅಪ್ಪಣೆ ದೊರೇ..
         ಬಾಳಿನಲ್ಲಿ ನೀನು ಇದ್ದರೆ, ಚಿಂತೆ ಇಲ್ಲ ಬಾರೋ ದೊರೇ
         ಬಾಳಿನಲ್ಲಿ ನೀನು ಇದ್ದರೆ, ಚಿಂತೆ ಇಲ್ಲ ಬಾರೋ ದೊರೇ.. ಆಹ್ಹಾ...ಆಹ್ಹಾ... ಆ..
------------------------------------------------------------------------------------------------------------------------

ಪ್ರೇಮಲೋಕ (1987) - ಬಾಯ್ ಫ್ರೆಂಡ್ ಬರ್ತಾನಂತ
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ್. ಜಾನಕಿ ಮತ್ತೆ ಇತರರು


ಗುಂಪು:   ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ     
             ಸುಳ್ಳು ಹೇಳಬೇಡ ಗಾಡಿಬಿಡಬೇಡ
             ಲೈಲಾ ಮಜನು ನಾ? ಗಂಗಾ ಜಮುನ ನಾ?
             ಲೈಲಾ ಮಜನು ನಾ? ಗಂಗಾ ಜಮುನ ನಾ?
             ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
             ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ
             ಸುಳ್ಳು ಹೇಳಬೇಡ (ಹೇಯ್).. ಗಾಡಿಬಿಡಬೇಡ
             ಸುಳ್ಳು ಹೇಳಬೇಡ (ಹೇಯ್).. ಗಾಡಿಬಿಡಬೇಡ

ಹೆಣ್ಣು:    ಹ್ಹಾಹ್ಹಾಹ್ಹಾ.. ಬೀದಿ ಕಾಮಣ್ಣರ ಹಾಗೇ.. ನನ್ನ ಪ್ರೇಮಿ ಅಲ್ಲಾ ಕಣೆ
            ಪ್ರೀತಿ ಮಾಡಿದ ಹೆಣ್ಣಿಗೇ... ಪ್ರಾಣಾನೆ ಕೊಡ್ತಾನ್ ಕಣೆ
            ಧೀರ ಕಣೆ.. ನನ್ನ ಶೂರಾ ಕಣೆ   ಧೀರ ಕಣೆ.. ನನ್ನ ಪ್ರಾಣಾ ಕಣೆ
ಗುಂಪು :   ಪ್ರೀತಿಯ ಮಾಡ್ತಾನೆ, ರುಚಿಯ ನೋಡ್ತಾನೆ, ಮುಂದಕ್ಕೆ ಗೊತ್ತೇನೇ?
              ಕೈಯನ್ನು ಕೊಡ್ತಾನೆ ಬೀದಿಲಿ ಬಿಡ್ತಾನೆ ಆಮೇಲೆ ಮುಂದೇನೇ?
              ಲೈಲಾ ಮಜನು ನಾ ಗಂಗಾ ಜಮುನ ನಾ..
              ಲೈಲಾ ಮಜನು ನಾ ಗಂಗಾ ಜಮುನ ನಾ..
             ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
             ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ..
             ಸುಳ್ಳು ಹೇಳಬೇಡ ಗಾಡಿ ಬಿಡಬೇಡ 
             ಸುಳ್ಳು ಹೇಳಬೇಡ ಗಾಡಿ ಬಿಡಬೇಡ 

ಕೋರಸ್ : ಹೂಂ ಹೂಂಹೂಂಹೂಂಹೂಂಹೂಂಹೂಂಹೂಂ
ಹೆಣ್ಣು :   ಅಹ್ಹ ಅಹ್ಹ ಅಹ್ಹ ಕೇಳೇ, ಶ್ರೀಕೃಷ್ಣನ ಹಾಗೇ.. ಸ್ತ್ರೀಲೋಲನಲ್ಲಾ ಕಣೆ
             ಕೇಳೇ, ಶ್ರೀರಾಮನ ಹಾಗೇ... ಒಂದೇ ಹೆಣ್ಣಿನ ಗಂಡು ಕಣೆ
             ಮುತ್ತು ಕಣೆ.. ನನ್ನ ಹವಳಾ ಕಣೆ     ಚಿನ್ನ ಕಣೆ.. ನನ್ನ ರನ್ನಾ ಕಣೆ
ಗುಂಪು :  ಪಕ್ಕಕ್ಕೆ ಬರ್ತಾನೆ ಗಲ್ಲಕ್ಕೆ ಕೊಡ್ತಾನೆ ಮುಂದಕ್ಕೆ ಗೊತ್ತೇನೆ?
              ಜೋಗುಳ ಹಾಡುವೆ ಜೀವಿಸೆ ಅನ್ನುತಾ ಅಮ್ಮನ ಮಾಡ್ತಾನೆ
              ಲೈಲಾ ಮಜನುನಾ ಗಂಗಾ ಜಮುನ ನಾ?
              ಲೈಲಾ ಮಜನುನಾ ಗಂಗಾ ಜಮುನ ನಾ?
              ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
               ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ..
              ರೈಲ್ ಬಿಡಬೇಡ ಚೋಳ್ ಬಿಡಬೇಡ
              ರೈಲ್ ಬಿಡಬೇಡ ಚೋಳ್ ಬಿಡಬೇಡ
              ಲೈಲಾ ಮಜನು ನಾ? ಗಂಗಾ ಜಮುನ ನಾ?
              ಲೈಲಾ ಮಜನು ನಾ? ಗಂಗಾ ಜಮುನ ನಾ?
              ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!
-------------------------------------------------------------------------------------------------------------------------

ಪ್ರೇಮಲೋಕ (1987) - ಚೆಲುವೆ ಒಂದು ಕೇಳ್ತಿನಿ
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ್.ಪಿ.ಬಿ ಮತ್ತು ಎಸ್.ಜಾನಕಿ


ಗಂಡು : ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದ್ರೇ ಕೊಡ್ತೀಯ?
           ನಿನ್ನ ಪ್ರೀತಿ ಮಾಡ್ತಿನಿ ಮನಸು ಹೃದಯ ಕೊಡ್ತೀಯ?
           ಮನಸೀನ ಆಸೆ ಹೇಳಲೇನೂ....!?
          ಮುದ್ದಾದ ಗೊಂಬೆ ನೀನು! ಮುತ್ತಂತ ಹೆಣ್ಣು ನೀನು!
          ನಾನಿನಗೆ ಜೊಡಿ ಅಲ್ಲವೆನು? ಅ ಅ ಅ ಅ ಅಹ್
ಹೆಣ್ಣು : ಚೆಲುವ ಒಂದು ಹೇಳ್ತಿನಿ ಇಲ್ಲ ಅಂದೇ ಕೆಳ್ತೀಯ?
          ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ? 
          ನಿಜವಾದ ಗಂಡೆ ಆದ್ರೆ ನೀನೂ....
          ಹೆಣ್ಣನ ಗೆಲ್ಲೊ ನೀನು.. ಮನಸನ್ನ ಕದಿಯೋ ನೀನು..
          ಆಮೇಲೆ ಪ್ರೀತಿ ಅಲ್ಲವೆನೂ.....?

ಗಂಡು :  ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೆ ಕೊಡ್ತೀನಿ
ಹೆಣ್ಣು :  ಹೌದಾ!.. ಹೈದಾ ..ಪರ್ವಾಗಿಲ್ವೇ
ಗಂಡು :  ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ
ಹೆಣ್ಣು :  ಹೌದಾ! ಹಾಗಂತ್ಯ?.. ಪರ್ವಾಗಿಲ್ವೆ
ಗಂಡು :  ಪ್ರೀತಿಗಾಗಿ ಲೋಕವನ್ನೆ ಜಯಿಸಬಲ್ಲೆ ನಾ
ಜಾನಕಿ :  ಹೌದ ವೀರ ಜೋಕುಮಾರ ಮಾತು ನಿಜವೆನಾ? ಆಹಹ
ಗಂಡು :  ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದ್ರೇ ಕೊಡ್ತಿಯ?
ಹೆಣ್ಣು :  ನಿನ್ನ ಪ್ರೀತಿ ಮಾಡ್ತಿನಿ ಹೇಳೊ ಕೆಲಸ ಮಾಡ್ತಿಯ?

ಹೆಣ್ಣು : ಧೈರ್ಯ ಇಲ್ಲದವರಲ್ಲಿ ಹೇಗೆ ಮನಸು ನೀಡಲೋ?
ಗಂಡು :  ಹೌದಾ.. ಅಯ್ಯೋ! ಮುಂದೇನ್ ಗತಿ!?
ಹೆಣ್ಣು : ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ?
ಗಂಡು:  ಆಯ್ಯಯ್ಯೊ.. ಹೌದಾ!? ಇನ್ನೇನ್ ಗತಿ!?
ಹೆಣ್ಣು :  ವೀರನಂಥ ಶೂರನಂಥ ಪ್ರೇಮಿ ನನ್ನವನು!
           ನಿನ್ನ ಹಾಗೆ ಹೇಡಿ ಅಲ್ಲ ನನ್ನ ಮನ್ಮಥನೂ. ಓ ಹೊ..
ಗಂಡು :  ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
            ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯ?
ಹೆಣ್ಣು :   ನಿಜವಾದ ಗಂಡೇ  ಆದ್ರೆ ನೀನೂ
           ಹೆಣ್ಣನ ಗೆಲ್ಲೋ ನೀನು.. ಮನಸನ್ನ ಕದಿಯೋ ನೀನು.
           ಆಮೆಲೆ ಪ್ರೀತಿ ಅಲ್ಲವೆನೂ?
--------------------------------------------------------------------------------------------------------------------------

ಪ್ರೇಮಲೋಕ (1987) - ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಸಾಹಿತ್ಯ / ಸಂಗೀತ: ಹಂಸಲೇಖ ಗಾಯಕರು: ಎಸ್. ಪಿ. ಬಿ, ಎಸ್. ಜಾನಕಿ


ಗಂಡು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
           ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು :  ಇದು ನಿಲ್ಲಲಾರದೆಂದು  ಕೊನೆಯಾಗಲಾರದೆಂದು
           ಈ ಪ್ರೇಮಲೋಕದ ಗೀತೆಯು
           ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
           ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು : ಇದು ನಿಲ್ಲಲಾರದೆಂದು  ಕೊನೆಯಾಗಲಾರದೆಂದು
           ಈ ಪ್ರೇಮಲೋಕದ ಗೀತೆಯು

ಹೆಣ್ಣು:  ಕೇಳೊ ಸರದಾರ, ಚುಕ್ಕಿಗಳಂತೆ ಬಾನಿನಲ್ಲಿ ನಾನು ನೀನು
          ಕೇಳೊ ಹಮ್ಮೀರ, ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ ಬಾ
ಗಂಡು : ಏಳು ಬಣ್ಣಗಳ ಕಾಮನಬಿಲ್ಲು  ನಮ್ಮದೇನೆ ಪ್ರೇಮ ತೋಟ ಮಾಡುವ
ಹೆಣ್ಣು:  ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ ಈ ನಮ್ಮ ಪ್ರೇಮರಾಗ ಹಾಡುವಾ
ಗಂಡು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
           ಇದು ಎಷ್ಟು ಸಾರಿ ಹಾಡಿದರು ಚೆನ್ನ
ಹೆಣ್ಣು :  ಇದು ನಿಲ್ಲಲಾರದೆಂದು  ಕೊನೆಯಾಗಲಾರದೆಂದು
           ಈ ಪ್ರೇಮಲೋಕದ ಗೀತೆಯು

ಗಂಡು: ಕೇಳೇ ಸಿಂಗಾರಿ ಹೂವಲ್ಲಿ ದುಂಬಿ ಸೇರಿಕೊಳ್ಳೊ ಹೊತ್ತು ಇದು..  ಬಾ ಬಾ 
          ಕೇಳೇ ಬಂಗಾರಿ ಪ್ರೇಮಿಗಳಲ್ಲಿ ನೀಡಿಕೊಳ್ಳೋ ಮುತ್ತು ಇದು.. ಬಾ ಬಾ
ಹೆಣ್ಣು: ನನ್ನ ನಿನ್ನ ಸ್ನೇಹ ಬಂಧನವಿದು
         ಮರೆಯಲಾಗದು, ಅಳಿಸಲಾಗದೆಂದಿಗೂ
ಗಂಡು:  ಕೇಳೆನ್ನ ಗೆಳತಿ   ಇನ್ನೊಂದು ಸರತಿ
            ಜನ್ಮವನೆತ್ತಿದರೂ ನಾವೊಂದೇ 
ಹೆಣ್ಣು : ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
          ಇದು ಎಷ್ಟು ಸಾರಿ ಹಾಡಿದರು ಚೆನ್ನ
ಗಂಡು : ಇದು ನಿಲ್ಲಲಾರದೆಂದು  ಕೊನೆಯಾಗಲಾರದೆಂದು
           ಈ ಪ್ರೇಮಲೋಕದ ಗೀತೆಯು
-----------------------------------------------------------------------------------------------------------------------

ಪ್ರೇಮಲೋಕ (1987) - ಮೋಸಗಾರನಾ? ಹೃದಯಶೂನ್ಯನಾ?
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ್.ಪಿ.ಬಿ


ಏಯ್!! ಏಯ್!!!ಹೇಯ್!
ಏಯ್  ಮೋಸಗಾರನಾ? ಹೃದಯಶೂನ್ಯನಾ?
ನಿನಗೆ ಇನ್ನು ನಾ ಬೇಡವಾದೆನಾ?
ಕೇಳೆನ್ನ ಒಲವೇ, ನೀನನ್ನ ಜೀವವೆ
ನಂಬಿಕೆ ಇಲ್ಲವೇ?, ಶಂಕಿಸ ಬೇಡವೇ
ಹೇಯ್! ಬಾರೆ ಹೃದಯವೆ ಮನಸು ತೆರೆದಿದೆ
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ಧತಿ
ಹೇಯ್! ಮೋಸಗಾರನಾ?  ಆ .. ಹೃದಯಶೂನ್ಯನಾ?
ನಿನಗೆ ಇನ್ನು ನಾ ಬೇಡವಾದೆನಾ?

ಹೇಯ್! ಇರುಳೆಂದು ಹಗಲಲ್ಲ  ಸುಳ್ಳೆಂದು ನಿಜವಲ್ಲ
ಈ ಶಕುನಿ ಜನರೆದುರೂ ಪ್ರೀತಿಗೆ ಬೆಲೆಯಿಲ್ಲ
ಈ ಲೋಕ ಎಂದರೆ ಬರಿ ಪ್ರೀತೀಗೆ ತೊಂದರೆ
ಹೆಜ್ಜೆ ಹಿಂದಿಟ್ಟರೆ, ಗೆಲುವಿಲ್ಲ ಹೊರಗೆ ಬಾರೆ
ಕಣ್ಣೀರಿಕೇ?... ಕಂಗಾಲೇಕೆ?  ಬಾ...
ಬಾರೆ ಹೃದಯವೆ, ಮನಸು ತೆರೆದಿದೆ, ಏಯ್
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಒಲವೇ, ನೀನೆನ್ನ ಜೀವವೇ
ನಂಬಿಕೆಯಿಲ್ಲವೇ?, ಶಂಕಿಸಬೇಡವೆ
ಹೇಯ್! ಮೋಸಗಾರನಾ?  ಆ .. ಹೃದಯಶೂನ್ಯನಾ?
ಏಯ್  ನಿನಗೆ ಇನ್ನು ನಾ ಬೇಡವಾದೆನಾ?

ಹೇಯ್! ಪ್ರೀತಿಯ ಹಾಲಿಗೆ ಹುಳಿಯಿಂಡಬಹುದೀಗ
ಭಯವೇಕೆ ಈ ಹುಳಿಗೆ? ಮೊಸರಾಗದೇನೀಗ
ಉಸಿರಾಟ ನಿಂತರೂ ನಾ ಇಲ್ಲಿಂದಾ ಹೋಗೆನೇ
ಹೆಸರೇನೆ ಬಂದರೂ ನಾನೆಂದೂ ನಿನ್ನ ಬಿಡೆನೇ
ನಿನ್ನಾ ಮೇಲ ಆಣೆ ಓ..ಸಾಕ ಆಣೆ ಬಾ....ಆಹ್!
ಬಾರೆ ಹೃದಯವೇ ಮನಸು ತೆರೆದಿದೆ..ಏಯ್!
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ದತಿ
ಏಯ್  ಮೋಸಗಾರನಾ? ಹೃದಯಶೂನ್ಯನಾ?
ನಿನಗೆ ಇನ್ನು ನಾ ಬೇಡವಾದೆನಾ?
-----------------------------------------------------------------------------------------------------------------------

ಪ್ರೇಮಲೋಕ (1987) - ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ
ಸಾಹಿತ್ಯ / ಸಂಗೀತ: ಹಂಸಲೇಖ ಗಾಯಕರು: ಎಸ್. ಪಿ. ಬಿ, ಮತ್ತು ಲತ ಹಂಸಲೇಖ


ಗಂಡು : ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ
            ನೀನಿಲ್ಲಿ ಸೇರೋದು ಓದುವ ಸಲುವಾಗಿ
            ಹುಡ್‍ಗೀರ ಕಾಲೇಜು, ನೀನಿನ್ನು ಟೀನೇಜು
            ಹುಷಾರಾಗಿರಬೇಕು, ಚೆನ್ನಾಗಿ ಓದ್‍ಬೇಕು
            ನಾನ್ ತುಂಬಾ ಕಟ್‍ನಿಟ್ಟು, ತಲೆ ಕೆಟ್ರೆ ಕಿಕ್ಕು ಔಟು
           ನೆಲ ನೋಡ್ಕೋತಾ ಬರಬೇಕು , ನೆಲ ನೋಡ್ಕೋತಾ ಹೋಗ್‍ಬೇಕು
           ಆ.. ಅಂಡರ್ಸ್ಟ್ಯಾಂಡ್
ಹೆಣ್ಣು : ಯಸ್ ಸರ್

ಗಂಡು : ಹಲ್ಲೊ ಮೈ ಲವ್ಲಿ ಲೇಡಿ, ಹೂ ಆರ್ ಯೂ, ಹೂ ಆರ್ ಯು
           ಹಲ್ಲೊ ಮೈ ಲವ್ಲಿ ಲೇಡಿ, ಹೂ ಆರ್ ಯೂ, ಹೂ ಆರ್ ಯು|
ಹೆಣ್ಣು : ಕನ್ನಡ ಬರೋದಿಲ್ವ? ಕಣ್ಣೆರಡೂ ಕಾಣಲ್ವಾ?
ಗಂಡು : ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೆಣ್ಣು : ಹೌದೇನೋ ಮನ್ಮಥ, ಬಾಯ್ಮುಚ್ಕೊಂಡ್ ಹೋಗಪ್ಪಾ
ಗಂಡು : ಹೊಸ ಹುಡ್‍ಗೀ ಅಂತ ಬಿಡ್ತೀನಿ, ನಾಳೆ ಇಂದ ನೋಡ್ಕೋತೀನಿ
           ಆ.. ಅಂಡರ್ಸ್ಟ್ಯಾಂಡ್  ಯಸ್ ಬಾಸ್

ಗಂಡು : ಸುಂದರ ಯುವಕ, ದುಷ್ಯಂತ ರಾಜ  ಬೇಟೆಯನಾಡಲು ಬಂದ
ಕೋರಸ್ : ಎಲ್ಗೇ ಸಾರ್?
ಗಂಡು : ಆಂ..ಕಾಡ್ಗೆ ಸಾರ್ ಬೇಟೆಯ ಮರೆತು ಕಾಡಿನ ಸೊಗಸು ನೋಡುತ ಸವಿಯುತ ನಿಂದ
ಕೋರಸ್ : ಯಾಕೆ ಸಾರ್?
ಗಂಡು : ಏಯ್..ಸುಮ್ನೇ ಸಾರ್ ಕಾಡಿನ ನಡುವೆ, ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಕೋರಸ್ :  ಹೌದಾ ಸಾರ್?
ಗಂಡು : ಹಹ್ಹ ಹಹ್ಹ  ಹೌದು ಸಾರ್
           ಚೆಲುವೆಯ ನೋಡಿ, ಹತ್ತಿರ ಓಡಿ  ಹುಡುಗಿಯ ಕೈ ಹಿಡುಕೊಂಡ
ಕೋರಸ್ : ಆಮೇಲ್ ಸಾರ್? ಹೇಳಿ ಸಾರ್?
ಗಂಡು : ಹತ್ತಿರ ಕರೆಯುತ್ತಾ, ತೋಳಿಂದ ಬಳಸುತ್ತ,  ಕಣ್ಣಲ್ಲೇ ನೋಡುತ್ತ, ಪ್ರೀತಿಯ ಮಾಡುತ್ತಾ
         '  ಯಾರೇ ನೀನು ಚೆಲುವೆ?', ಅಂದ  'ನಿನ್ನ ಅಂದ ಚೆಂದ', ಅಂದ
           ಹಣೆಯಲ್ಲಿ ಬೆವರುತ್ತಾ  ತನುವೆಲ್ಲ ನಡುಗುತ್ತಾ  ನೆಲವನ್ನೇ ನೋಡುತ್ತಾ
           ನುಡಿಗಳು ನಾಚುತ್ತಾ  ನಾನು ಇನ್ನು ನಿನಗೆ ಸ್ವಂತ  ಹೆಸರು ಶಕುಂತಲ ಅಂತ
ಕೋರಸ್ : ಬಂದರೂ ಸಾರ್, ಓಹೋ  
              ಬಂದ್ಲು ಸಾರ್, ಓಹೋ    ಶಕುಂತಲ, ಓಹೋ   
              ಬಂದರೂ ಸಾರ್, ಓಹೋ    
ಗಂಡು : ನೀನಾ ಶಕುಂತಲ?             ಹೆಣ್ಣು :  ಅಲ್ಲಾ ನಾನ್ ಶಶಿಕಲ
ಗಂಡು :  ಯಾರನ್ನ ನೋಡ್ಬೇಕು?       ಹೆಣ್ಣು : ನಿಮ್ಮನ್ನೇ ನೋಡ್ಬೇಕು
ಗಂಡು : ಏನ್ ಆಗ್ಬೇಕಾಗಿತ್ತು?           ಹೆಣ್ಣು : ಅಡ್ಮಿಟ್ ಆಗ್ಬೇಕಿತ್ತು
ಕೋರಸ್ :  ಸರಿ ಈ ಕಡೆ ಕಳ್ಸಿ ಸಾರ್
ಗಂಡು :  ಶಟ್‍ಅಪ್ ಅಂದ್ರೆ ಬಾಯ್ಮುಚ್ಚು ಸಾರ್
             ಹೋಗಮ್ಮ ಹುಡುಗಿ ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಕೋರಸ್ :  ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಗಂಡು : ನಿನಗ್ಯಾವುದ್ ಇಷ್ಟವೋ, ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಕೋರಸ್ :   ಈ ಬೆಂಚೇ ಸೆಲೆಕ್ಟ್ ಮಾಡ್ಕೋ
ಗಂಡು : ಬಂದ್‍ಕೂಡ್ಲೇ ಮೀಟಿಂಗಾ?  ಕಂಡ್‍ಕೂಡ್ಲೇ ಕಿಸ್ಸಿಂಗಾ?   
           ಲಕ್ಷ್ಮೀ ನೀನ್ ಸ್ವಲ್ಪ್ ಕೂತ್ಕೋ   ಶಶಿ ನೀನ್ ಇಲ್ ಕೂತ್ಕೋ
          ಪೀಟರ್ ನೀನ್ ಕೈ ಎತ್ಕೋ    ರೋಸಿ ನೀನ್ ಸೆರಗ್ ಮುಚ್ಕೋ
         ಪೋಲಿ ಆಟವೆಲ್ಲ ಬಿಡಬೇಕು    ಬರಿ ಪಾಠವನ್ನು ಕಲಿಬೇಕು
ಕೋರಸ್:  ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ್ಲಲ ಲಾಲಾಲ ಲಾ ಲಾ ಲಾ ಲಾಲ
               ಲ್ಲ ಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ
-------------------------------------------------------------------------------------------------------------------------

ಪ್ರೇಮಲೋಕ (1987) - ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಸಾಹಿತ್ಯ / ಸಂಗೀತ: ಹಂಸಲೇಖ ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ


(ಆಆಆ.. ಆಆಆ.. ಜುಂಜುಂ ಜುಂಜುಂ ಜುಂಜುಂ )
ಗಂಡು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
            ಭೂಮಿಯಲ್ಲಿ ಹಾಡಿ ತಿಳಿಸೋಣ 
ಹೆಣ್ಣು : ಪ್ರೀತಿ ಹಂಚೋಣ  ಆನಂದ ಪಡೆಯೋಣ
          ಬನ್ನಿ ಪ್ರೇಮದ ರಹಸ್ಯ ಹೇಳೋಣ
ಗಂಡು : ಜೀವನವೆಂದರೆ    ಹೆಣ್ಣು : ಪ್ರೀತಿಯೆನ್ನೋಣ
ಗಂಡು : ಲೋಕದ ಸೃಷ್ಠಿಗೆ  ಹೆಣ್ಣು: ಪ್ರೀತಿ ಕಾರಣ
ಗಂಡು : ಜೀವನವೆಂದರೆ    ಹೆಣ್ಣು : ಪ್ರೀತಿಯೆನ್ನೋಣ
ಗಂಡು : ಲೋಕದ ಸೃಷ್ಠಿಗೆ  ಹೆಣ್ಣು: ಪ್ರೀತಿ ಕಾರಣ
ಇಬ್ಬರು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಆಆಆ.. ಆಆಆ.. )
ಹೆಣ್ಣು : ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಗಂಡು : ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
           ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಹೆಣ್ಣು : ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಗಂಡು : ಬರುವುದು ಹೇಗೆ?     ಹೆಣ್ಣು : ಇರುವುದು ಹೇಗೆ?
ಗಂಡು : ತಿಳಿದಿದೆ ನಮಗೆ,      ಹೆಣ್ಣು : ಆದರೆ ಕೊನೆಗೆ
ಗಂಡು : ಹೋಗುವ ಘಳಿಗೆ       ಹೆಣ್ಣು : ತಿಳಿಯದು ನಮಗೆ
ಗಂಡು : ಒಗಟಿದು ಎಲ್ಲರಿಗೆ
ಹೆಣ್ಣು : ಜೀವನವೆಂದರೆ     ಗಂಡು : ಪ್ರೀತಿಯೆನ್ನೋಣ (ಮಾಪದಸ)
ಹೆಣ್ಣು :  ಲೋಕದ ಸೃಷ್ಠಿಗೆ  ಗಂಡು : ಪ್ರೀತಿ ಕಾರಣ (ಸನಿಸ )
ಇಬ್ಬರು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

(ಆಆಆ.. ಆಆಆ.. ಆಆಆ.. ಆಆಆ.)
ಗಂಡು : ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಹೆಣ್ಣು : ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ
          ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಗಂಡು : ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ
ಹೆಣ್ಣು : ಬದುಕಿನ ಜೊತೆಗೆ    ಗಂಡು : ಪ್ರೆಮದ ಬೆಸುಗೆ
ಗಂಡು : ಇರುವುದು ಹೀಗೆ    ಗಂಡು : ಒಲವಿನ ಸೆರೆಗೆ
ಹೆಣ್ಣು : ಪ್ರೀತಿಯ ಸವಿಗೆ     ಗಂಡು : ತೋರುವ ನಮಗೆ
ಹೆಣ್ಣು : ಪ್ರೇಮವು ವರತಾನೆ?
ಗಂಡು : ಜೀವನವೆಂದರೆ    ಹೆಣ್ಣು : ಪ್ರೀತಿಯೆನ್ನೋಣ  (ಮಾಪದಸ)
ಗಂಡು : ಲೋಕದ ಸೃಷ್ಠಿಗೆ  ಹೆಣ್ಣು: ಪ್ರೀತಿ ಕಾರಣ ( ಸನಿಸ )
ಗಂಡು : ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಹೆಣ್ಣು :  ಭೂಮಿಯಲ್ಲಿ ಹಾಡಿ ತಿಳಿಸೋಣ 
ಗಂಡು : ಪ್ರೀತಿ ಹಂಚೋಣ   ಹೆಣ್ಣು : ಆನಂದ ಪಡೆಯೋಣ
ಇಬ್ಬರು : ಬನ್ನಿ ಪ್ರೇಮದ ರಹಸ್ಯ ಹೇಳೋಣ
ಗಂಡು : ಜೀವನವೆಂದರೆ    ಹೆಣ್ಣು : ಪ್ರೀತಿಯೆನ್ನೋಣ  (ಮಾಪದಸ)
ಗಂಡು : ಲೋಕದ ಸೃಷ್ಠಿಗೆ  ಹೆಣ್ಣು: ಪ್ರೀತಿ ಕಾರಣ (ಸನಿಸ )
ಗಂಡು : ಜೀವನವೆಂದರೆ    ಹೆಣ್ಣು : ಪ್ರೀತಿಯೆನ್ನೋಣ  (ಮಾಪದಸ)
ಗಂಡು : ಲೋಕದ ಸೃಷ್ಠಿಗೆ  ಹೆಣ್ಣು: ಪ್ರೀತಿ ಕಾರಣ(ಸನಿಸ )
(ಜುಂ ಜುಂ ಜುಂಜುಂ ಜುಂ ಜುಂಜುಂ ಜುಂ ಜುಂಜುಂ ಜುಂಜುಂ)
------------------------------------------------------------------------------------------------------------------------

ಪ್ರೇಮಲೋಕ (1987) - ಯಾರಿವನೂ, ಈ ಮನ್ಮಥನೂ?
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ್.ಜಾನಕಿ ಮತ್ತು ಇತರರು


ಹೆಣ್ಣು : ಯಾರಿವನೂ, ಈ ಮನ್ಮಥನೂ? .
           ಯಾರಿವನೂ, ಈ ಮನ್ಮಥನೂ? ..
ಹೆಣ್ಣು : ವೀರರಲ್ಲಿ ವೀರ          ಗುಂಪು : ವೀರ ಧೀರ            
ಹೆಣ್ಣು:  ಬಂದ ನಮ್ಮ ಶೂರ     ಗುಂಪು:  ಶೂರ ಶೂರ
ಹೆಣ್ಣು:  ಹಮ್ಮೀರ...  ಯಾರಿವನು, ಹೇ ಯಾರಿವನು
          ಯಾರಿವನೂ.... ಈ ಮನ್ಮಥನೂ?

ಕೋರಸ್ : ಹೇಹೇಹೇಹೇಹೇಹೇ
ಹೆಣ್ಣು:  ಸಿಂಹದ ಶಕ್ತಿಯಿದೆ ಹೇ ಯಾರಿದು, ಮಿಂಚಿನ ನೋಟವಿದೆ ಹೇ ಯಾರಿದು
          ಸಿಂಹದ ಶಕ್ತಿಯಿದೆ ಹೇ ಯಾರಿದು, ಮಿಂಚಿನ ನೋಟವಿದೆ ಹೇ ಯಾರಿದು
          ಹಾವಿನ ರೋಷದ, ಗುಡುಗಿನ ವೇಷದ ಸಾರಥಿ ಯಾರಿವನು
          ಚೋರರ ಪಾಲಿನ ಚಿರತೆಯ ಸೇಡಿನ ಶತ್ರುವು ಯಾರಿವನು
          ಹಾವಿನ ರೋಷದ, ಗುಡುಗಿನ ವೇಷದ ಸಾರಥಿ ಯಾರಿವನು
         ಚೋರರ ಪಾಲಿನ ಚಿರತೆಯ ಸೇಡಿನ ಶತ್ರುವು ಯಾರಿವನು....
         ಆಹ್ಹಾ..ಒಹೋ...  ಹೇ..ಆ.. ವ್ವಾವ್ವಾ..
ಹೆಣ್ಣು : ವೀರರಲ್ಲಿ ವೀರ       ಗುಂಪು: ವೀರ ಧೀರ
ಹೆಣ್ಣು: ಬಂದನಮ್ಮ ಶೂರ   ಗುಂಪು:  ಶೂರ ಶೂರ       
ಹೆಣ್ಣು:  ಹಮ್ಮೀರ...  ಯಾರಿವನು, ಹೇ ಯಾರಿವನು
          ಯಾರಿವನೂ.... ಈ ಮನ್ಮಥನೂ?

ಕೋರಸ್ : ಪಬಂ ಪಬಂ ಪಬಂ ಪಬಂ ಪಬಂ ಪಬಂ ಪಬಂ
ಹೆಣ್ಣು: ಬೆಂಕಿಯ ಬಿರುಸಿದೆ ಹೇ ಯಾರಿದು  ಗಾಳಿಯ ವೇಗವಿದೆ ಹೇ ಯಾರಿದು
         ಬೆಂಕಿಯ ಬಿರುಸಿದೆ ಹೇ ಯಾರಿದು  ಗಾಳಿಯ ವೇಗವಿದೆ ಹೇ ಯಾರಿದು
         ಮೋಹಕ ರೂಪದ ಸುಂದರ ದೇಹದ ಸ್ನೇಹಿತನ್ಯಾರಿವನು?
         ಹೆಣ್ಣಿನ ಹೃದಯದ ನಾಡಿಯ ಮಿಡಿಸುವ ಪ್ರೇಮಿಯು ಯಾರಿವನು?
         ಮೋಹಕ ರೂಪದ ಸುಂದರ ದೇಹದ ಸ್ನೇಹಿತನ್ಯಾರಿವನು?
         ಹೆಣ್ಣಿನ ಹೃದಯದ ನಾಡಿಯ ಮಿಡಿಸುವ ಪ್ರೇಮಿಯು ಯಾರಿವನು?...
         ಆಹ್ಹಾ..ಒಹೋ...  ಹೇ..ಆ.. ವ್ವಾವ್ವಾ..
ಹೆಣ್ಣು : ವೀರರಲ್ಲಿ ವೀರ       ಗುಂಪು: ವೀರ ಧೀರ
ಹೆಣ್ಣು: ಬಂದನಮ್ಮ ಶೂರ   ಗುಂಪು:  ಶೂರ ಶೂರ       
ಹೆಣ್ಣು:  ಹಮ್ಮೀರ...  ಯಾರಿವನು, ಹೇ ಯಾರಿವನು
-------------------------------------------------------------------------------------------------------------------------

ಪ್ರೇಮಲೋಕ (1987) - ಯಾರಿವನೂ, ಈ ಮನ್ಮಥನೂ?
ಸಂಗೀತ / ಸಾಹಿತ್ಯ : ಹಂಸಲೇಖ ಗಾಯಕರು: ಎಸ.ಪಿ.ಬಿ. ಎಸ್.ಜಾನಕಿ 


ಹೆಣ್ಣು : ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
         ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
         ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
         ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
         ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೋ
ಗಂಡು : ಏ ರಂಗು ಇದೇನು ಶೋಕಿ ಬಂತೇ ನಿಂಗು
           ಏ ರಂಗು ಇದೇನು ಶೋಕಿ ಬಂತೇ ನಿಂಗು
          ಸಂತೆಗ್ ಹೋಗಬೇಕೇ  ನೀ ಕಂತೆ ತರಬೇಕೇ
         ಸಂತೆಗ್ ಹೋಗಬೇಕೇ  ನೀ ಕಂತೆ ತರಬೇಕೇ
         ಪ್ಯಾಟೇ ಸುತ್ತಬೇಕೆ ನೀ ಕ್ವಾಟೆ ಹತ್ತಬೇಕೆ 

ಗಂಡು : ಇದೇ ನೋಡು ಕ್ಲಚ್ಚು, ಇದೇ ಲೈಟು ಸ್ವಿಚ್ಚು 
           ಇದೇ ಸ್ಟಾರ್ಟು ಸ್ವಿಚ್ಚು ಇದೇ ಒಳಗೆ ಚುಚ್ಚು 
           ಮ್ಯಾಲೆ ಹತ್ತಿ ಕೂರು ಇರೋದ್ ನಾಲ್ಕ್ ಗ್ಯಾರೂ 
           ಮೊದಲು ಮ್ಯಾಲೇ ಎತ್ತು ಆಮೇಲೆ ಕೆಳಗೆ ಒತ್ತು  
          ಕೋಡು ಆಕ್ಸಿಲೇಟರ್ ಈಗ 
ಹೆಣ್ಣು : ಅಯ್ಯೋ ಮಜಾ ಐತಿ, ಗಾಡಿ ಓಟ ಐತೇ  
          ಅಯ್ಯೋ ಮಜಾ ಐತಿ, ಗಾಡಿ ಓಟ ಐತೇ
         ಸೊಂಟ ಹಿಡಿಯಬೇಡಾ ಮಜಾ ಕೆಡಿಸಬೇಡಾ 
         ಮುತ್ತ ಗಿತ್ತು ಬೇಡಾ ತಕರಾರ್ ಮಾಡಬೇಡಾ 
         ಡ್ಯಾಶ್ ಆಯ್ತು ನೋಡು ಈಗ... 
        ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಗಂಡು : ಏ ರಂಗು ಇದೇನು ಶೋಕಿ ಬಂತೇ ನಿಂಗು..ಆ.. ಅಹ್ಹಹ್ಹಹ್ಹಾ..

ಹೆಣ್ಣು  : ಮೋಟಾರ್ ಬೈಕ್ ನಾನು ಈ ಪಲ್ಟಿ ನಡೆಯೇ ನೀನು
           ನಿಜ ಹೇಳಲೇನು ನೀ ನಡೆಸಿದಂತೆ ನಾನು
          ಸರಿ ಏನು ನನ್ನ ರೈಡರ್
ಗಂಡು : ರೈಡು ಅಂದರೇ ಲೈಫು ಲೈಫಿಗೆ ನೀನೇ ವೈಫು
          ಕೇಳೇ ನನ್ನ ವೈಫು ನೀನೇ ನನ್ನ ಲೈಫು ಸರಿಯೇನೆ ನನ್ನ ಲವ್ವರ್
ಹೆಣ್ಣು : ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಗಂಡು : ಏ ರಂಗು ಇದೇನು ಶೋಕಿ ಬಂತೇ ನಿಂಗು..ಆ.. ಅಹ್ಹಹ್ಹಹ್ಹಾ..
ಹೆಣ್ಣು :  ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
           ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
           ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೋ
ಹೆಣ್ಣು :  ಏ ಗಂಗೂ     ಗಂಡು : ರಂಗು
ಹೆಣ್ಣು :  ಏ ಗಂಗೂ     ಗಂಡು : ರಂಗು
------------------------------------------------------------------------------------------------------------------------

No comments:

Post a Comment