81. ಮಿಲನ - ೨೦೦೭


ಮಿಲನ ಚಲನಚಿತ್ರದ ಹಾಡುಗಳು 
  1. ಅಂತೂ ಇಂತೂ ಪ್ರೀತಿ ಬಂತು, 
  2. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
  3. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
  4. ಕದ್ದು ಕದ್ದು ನೋಡೊ ಕಳ್ಳ ಯಾರೊ
  5. ಕಿವಿ ಮಾತೊಂದು  ಹೇಳಲೆ ನಾನಿಂದು
  6. ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...
  7. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ (ಚಿತ್ರಾ)
ಮಿಲನ - (೨೦೦೭) - ಅಂತೂ ಇಂತೂ ಪ್ರೀತಿ ಬಂತು, 
ಸಂಗೀತ : ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ, ಗಾಯನ : ಉದಿತ ನಾರಾಯಣ ಮತ್ತು ಚಿತ್ರ

ಅಂತೂ ಇಂತೂ ಪ್ರೀತಿ ಬಂತು, ಇಂದು ನವಿರಾದ ಮಳೆಬಿಲ್ಲಿನಂತೆ
ಅಂತೂ ಇಂತೂ ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ
ಮನ ಸೋತೆ ಮನಸಾರೆ, ನನ್ನ ಹೊಸ ಲೋಕ ನಿನ್ನಲ್ಲಿ ಈಗ
ಮನ ತುಂಬಿ ಮನಸೂರೆ, ಸರಿ ಮುಂದೇನು ನೀ ಹೇಳು ಬೇಗ
ಅಂತೂ ಇಂತೂ ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ...
ಕಾಣದ ನಾಡಲ್ಲಿ, ಕೇಳದ ಊರಲ್ಲಿ, ಕೈ ಹಿಡಿದು ಹೋಗೋಣ ಕಳೆದು
ನಾ ನಿನ್ನನು, ನೀ ನನ್ನನು, ಹುಡುಕೋಣ ಖುಷಿಯಲ್ಲಿ ಅಲೆದು
ಇದ್ದಾಗ ಸಂಗಾತ, ಮುದ್ದಾದ ಸಂಗೀತ, ಇನ್ಯಾವ ದನಿ ಕೇಳದಲ್ಲ
ನಮ್ಮೊಲವಲಿ, ನಾವಿಬ್ಬರೇ, ಜಗದಲ್ಲಿ ಬೇರಾರೂ ಇಲ್ಲ
ಅಂತೂ ಇಂತೂ ಪ್ರೀತಿ ಬಂತು, ಒಂದು ಸೊಗಸಾದ ಸವಿ ಸೊಲ್ಲಿನಂತೆ...
ನೀ ಕೈಗೆ ಸಿಕ್ಕಾಗ, ಕಣ್ಣಲ್ಲೇ ನಕ್ಕಾಗ, ಹೃದಯ ಹೂ ಬಿಡುವ ಕಾಲ
ಸುಳಿವಿಲ್ಲದೆ ಸುಳಿದಾಡುತ, ಸೆರೆ ಹಿಡಿಯುವ ಮೋಹ ಜಾಲ
ನೋಡುತ್ತಾ ದಂಗಾಗಿ, ಉನ್ಮತ್ತ ಗುಂಗಾಗಿ, ದಯವಿಟ್ಟು ನೀ ನನ್ನ ಕಾಡು
ನಿನ್ನುಸಿರಲೇ, ನಾ ಕೇಳುವೆ, ನನ್ನೆದೆಯ ಇಂಪಾದ ಹಾಡು
ಅಂತೂ ಇಂತೂ ಪ್ರೀತಿ ಬಂತು, ಇಂದು ನವಿರಾದ ಮಳೆಬಿಲ್ಲಿನಂತೆ...
------------------------------------------------------------------------------------------------------------------------

ಮಿಲನ - (೨೦೦೭) - ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಸಂಗೀತ : ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ, ಗಾಯನ : ಸೋನು ನಿಗಮ್


ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ....

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ.......ನಿನ್ನಿಂದಲೆ....

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ....ನಿನ್ನಿಂದಲೆ....
-------------------------------------------------------------------------------------------------------------------------

ಮಿಲನ - (೨೦೦೭) - ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಸಂಗೀತ : ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್ 

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 
ಹೇಳುವುದು ಏನೋ ಉಳಿದು ಹೋಗಿದೆ 
ಹೇಳಲಿ ಹೇಗೆ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 

ನೋವಿನಲಿ ಜೀವ ಜೀವ ಅರಿತ ನಂತರ 
ನಲಿವೂ ಬೇರೆ ಏನಿದೆ ಪ್ರೀತಿ ಅಂತರ 
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತುರ 
ಒಂದೇ ಸಾರಿ ನೀ ಕೇಳೆಯಾ ಈ ಸ್ವರ 
ಮನಸ್ಸಲ್ಲಿ ಚೂರು ಜಾಗ ಬೇಕಿದೆ 
ಕೇಳಲಿ ಹೇಗೆ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 

ಕಣ್ಣು ತೆರೆದು ಕಾಣುವಾ ಆ ಕನಸೇ 
ಜೀವನ ಸಣ್ಣ ಹಠವ ಮಾಡಿದೆ 
ಹೃದಯ ಈ ದಿನ ಎದೆಯ ದೂರವಾಣಿಯಾ ಕರೆಯಾ 
ರಿಂಗಣ ಕೇಳು ಜೀವವೇ  ಏತಕೀ ಕಂಪನಾ 
ಹೃದಯವು ಎಲ್ಲೇ ಕಳೆದು ಹೋಗಿದೆ 
ಹುಡುಕಲೇ ಬೇಕೇ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 
ಹೇಳುವುದು ಏನೋ ಉಳಿದು ಹೋಗಿದೆ 
ಹೇಳಲಿ ಹೇಗೆ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 
------------------------------------------------------------------------------------------------------------------------

ಮಿಲನ (2007) - ಕದ್ದು ಕದ್ದು ನೋಡೊ ಕಳ್ಳ ಯಾರೊ
ಸಂಗೀತ:ಮನೋಮೂರ್ತಿ  ಸಾಹಿತ್ಯ: ನಾಗೇಂದ್ರ ಪ್ರಸಾದ್  ಗಾಯನ:ಚೈತ್ರ, ಪ್ರವೀಣ ದತ್, ಸುರೇಶ್ ಪೀಟರ್ಸ್, ಸ್ಟೇಫನ್


ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಸವಿ ಸಮಯ .. ಸರ ಸಮಯ
ಹೊಸ ವಿಷಯ ತಿಳಿಸುವೆಯ
ಎದೆಯೊಳಗೆ ಕುಚ್ ಹೋಗಯ
ಹೋಗೆ ಅಮ್ಮಯ್ಯ ಇದು ಸರಿಯ
ಕದ್ದು ಕದ್ದು ನೋಡೊ ಕಳ್ಳ ಯಾರು
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಎಲ್ಲ ನನ್ನನ್ನು ನೋಡುತ್ತಾರಲ್ಲ
ನಾನೆ ಬೇರೆನೆ ಎಲ್ಲಾರಾಗಲ್ಲ
ನನ್ನ ಮುಟ್ಟೊಕೆ ಬೇಡುತ್ತಾರಲ್ಲ
ನಾನು ಏನಂತ ಗೊತ್ತು ಇಲ್ಲೆಲ್ಲ
ನಿನ ಒಳಗು ಒಲವು ಶುರು
ಭ್ರಮೆ ನಿನದು ದೂರ ಇರು
ಒಲವಿರದೆ ಇರಬಹುದು
ಪ್ರತಿ ಕಡೆಗು ಬರಬಹುದೆ
ಕದ್ದು ಕದ್ದು ನೋಡೊ ಕಳ್ಳ ಯಾರು
ತಂಟೆ ಮಾಡುವಂತ ತುಂಟಿ ಯಾರೊ

ಸಂಜೆ ತಂಗಾಳಿ ಬೀಸಿ ಬಂದಿದೆ
ಮಲ್ಲೆ ಮೊಗ್ಗೆಲ್ಲ ಕಂಪು ತಂದಿದೆ
ಅಂದ ಇಲ್ಲಿದೆ ನೋಡು ಬಾರೆಯ
ಸೋಲೊ ಗಂಡಲ್ಲ ಹೋಗೆ ಅಮ್ಮಯ್ಯ
ಕರೆದಿಹಳು ನಿನ ರಾಧ
ಕರಗಿದರೆ ಅಪರಾದ
ನಿನ ಸತಿಗೆ ಪರ ಪುರುಶ
ನಿಜವೆ ಇದು ದಿನ ಹರುಶ
ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಸವಿ ಸಮಯ .. ಸರ ಸಮಯ
ಹೊಸ ವಿಷಯ ತಿಳಿಸುವೆಯ
ಎದೆಯೊಳಗೆ ಕುಚ್ ಹೋಗಯ
ಹೋಗೆ ಅಮ್ಮಯ್ಯ ಇದು ಸರಿಯ
ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ
--------------------------------------------------------------------------------------------------------------------------

ಮಿಲನ (2007) - ಕಿವಿ ಮಾತೊಂದು  ಹೇಳಲೆ ನಾನಿಂದು
ಸಂಗೀತ: ಮನೋ ಮೂರ್ತಿ  ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ: ಕುನಾಲ್ ಗಾಂಜಾವಾಲ


ಕಿವಿ ಮಾತೊಂದು  ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಹಸಿರಾಗಿದೆ ದೀಪವು ನಿನಗಾಗಿ
ನಸು ನಗುತಲೆ ಸಾಗು ನೀನು ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು!

ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು ..
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ
ನೊಡಲೆ ಬೇಕು ನೀ ಬಂದು!
ಕಿವಿ ಮಾತೊಂದು  ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನೆಯ ಬಾಳಿನ ಸಂಗೀತ
ಹಾಡಲೆ ಬೇಕು ನೀನಿಲ್ಲಿ ..
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನೆಯ ಪಾಲಿನ ಈ ಆಟ
ಆಡಲೆ ಬೇಕು ನೀನೀಗ!
ಕಿವಿ ಮಾತೊಂದು  ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಹಸಿರಾಗಿದೆ ದೀಪವು ನಿನಗಾಗಿ
ನಸು ನಗುತಲೆ ಸಾಗು ನೀನು ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು  ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!
---------------------------------------------------------------------------------------------------------------

ಮಿಲನ (2007) - ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...
ಸಂಗೀತ: ಮನೋ ಮೂರ್ತಿ  ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ: ರಾಜೇಶ್ ಕೃಷ್ಣನ, ಶ್ರೇಯಾ ಘೋಷಾಲ್  


ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ....
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....

ಆಟದ ಬಯಲಿನ ಆಟವ ತೊರೆದು
ನೂತನ ಪುಟವನು ತೆರೆಯುವ ಸಮಯ
ಕಳಶದ ಕನ್ನಡಿ ಹೊಳೆಯುತಲಿರಲು
ಮಮತೆಯ ಧಾರೆಯ ಎರೆಯುವ ಸಮಯ
ಹಿರಿಯರ ಹೃದಯವು ಹನಿಯುವ ಸಮಯ
ಹರೆಯದ ಕಣ್ಗಳು ಅರಳುವ ಸಮಯ

ಕೈಯಲಿರಲು ಹೂಮಾಲೆ ಕಣ್ಣಿನಲ್ಲಿ ಪ್ರಾಣ
ತೆರೆಯೊಂದು ಸರಿದಾಗ ಸಂಜೀವನ.....

ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ

ಮಳೆಬಿಸಿಲಿರಲಿ ಸಿಹಿ ಕಹಿ ಇರಲಿ
ಆಸರೆಯಾಗುವ ವಚನದ ಸಮಯ
ಮಂಗಳ ಸೂತ್ರದಿ ಬಾಳಿನ ಪಟವು
ಬಾನಿಗೆ ಏರುವ ಪಯಣದ ಸಮಯ

ನಲುಮೆಯ ದಿಬ್ಬಣ ನಲಿಯುವ ಸಮಯ
ನೆನಪಿನ ಬಾಗಿನ ನೀಡುವ ಸಮಯ

ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ
ಚೆಲುವಿನ ಔತಣದ ಸಮ್ಮಿಲನ..........

ಪಲ್ಲಕ್ಕಿಯಿಂದು ಹಾರುವ ಹಕ್ಕಿಯಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....

ಬಲಗಾಲನಿಟ್ಟು ಬಾಳಿಂದು ಒಳಗೆ ಬಂದಿದೆ
ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....

-----------------------------------------------------------------------------------------------------------

ಮಿಲನ - (೨೦೦೭) - ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಸಂಗೀತ : ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ, ಗಾಯನ : ಶ್ರೇಯಾ ಘೋಷಾಲ್ 

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 
ಹೇಳುವುದು ಏನೋ ಉಳಿದು ಹೋಗಿದೆ 
ಹೇಳಲಿ ಹೇಗೆ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 

ನೋವಿನಲಿ ಜೀವ ಜೀವ ಅರಿತ ನಂತರ 
ನಲಿವೂ ಬೇರೆ ಏನಿದೆ ಪ್ರೀತಿ ಅಂತರ 
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತುರ 
ಒಂದೇ ಸಾರಿ ನೀ ಕೇಳೆಯಾ ಈ ಸ್ವರ 
ಮನಸ್ಸಲ್ಲಿ ಚೂರು ಜಾಗ ಬೇಕಿದೆ 
ಕೇಳಲಿ ಹೇಗೆ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 

ಕಣ್ಣು ತೆರೆದು ಕಾಣುವಾ ಆ ಕನಸೇ 
ಜೀವನ ಸಣ್ಣ ಹಠವ ಮಾಡಿದೆ 
ಹೃದಯ ಈ ದಿನ ಎದೆಯ ದೂರವಾಣಿಯಾ ಕರೆಯಾ 
ರಿಂಗಣ ಕೇಳು ಜೀವವೇ  ಏತಕೀ ಕಂಪನಾ 
ಹೃದಯವು ಎಲ್ಲೇ ಕಳೆದು ಹೋಗಿದೆ 
ಹುಡುಕಲೇ ಬೇಕೇ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 
ಹೇಳುವುದು ಏನೋ ಉಳಿದು ಹೋಗಿದೆ 
ಹೇಳಲಿ ಹೇಗೆ ತಿಳಿಯದಾಗಿದೆ 
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ 
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾದಿದೆ 
------------------------------------------------------------------------------------------------------------------------

No comments:

Post a Comment