1594. ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪)



ಮಕ್ಕಳಿರಲ್ಲವ್ವಾ ಮನೆ ತುಂಬಾ ಚಲನಚಿತ್ರದ ಹಾಡುಗಳು 
  1. ಮಕ್ಕಳಿರಲ್ಲವ್ವಾ ಮನೆ ತುಂಬಾ
  2. ನಮ್ಮ ಗುಲಾಬಿ ಬಳ್ಳಿಯಲ್ಲಿ ಹೂವೇ ಬಿಟ್ಟಿಲ್ಲ 
  3. ಓ ಉಷಾ ಉಷಾ ಉಲ್ಲಾಸ 
  4. ನನ್ನ ಚಿನ್ನ ನನ್ನ ರನ್ನ
  5. ಬಾಳ ಏಳು ಬೀಳು 
  6. ಯಾದವ ನೀ ಬಾರೋ 
ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪) - ಮಕ್ಕಳಿರಲ್ಲವ್ವಾ ಮನೆ ತುಂಬಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ 

ಕೋರಸ್ : ವ್ವಾ... ವ್ವವ್ವವ್ವವ್ವವ್ವಾ ವ್ವವ್ವವ್ವವ್ವವ್ವಾ ವ್ವವ್ವವ್ವವ್ವವ್ವಾ ವ್ವವ್ವವ್ವವ್ವವ್ವಾ     
ಗಂಡು : ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) 
            ಮುನ್ನೆಡೆವ ಸಿರಿಗನ್ನಡದ ಕಂಪನು ಸವಿ ಇಂಪನು ದಿನ ದಿನ ಕ್ಷಣ ಕ್ಷಣ ಬೆಳಗುವಾ.... 
ಕೋರಸ್ : ಹೌದೂ ... ಹೌದೂ ... ಹೌದೂ ... ಹೌದೂ ... ಹೌದೂ ... 
ಗಂಡು : ಮನಸನು ಹೊಸತಿಗೆ ನಡೆಸುವಾ 
ಕೋರಸ್ : ಹೌದೂ ... ಹೌದೂ ... ಹೌದೂ ... ಹೌದೂ ... ಹೌದೂ ... 
ಗಂಡು : ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) 

ಗಂಡು : ಕನ್ನಡ ನಾಡ ಹೆಮ್ಮೆಯ ಹೀರಿ ನಲ್ಮೆಯ ಬೀರುವಂಥ 
           ಕನ್ನಡ ಭಾಷೆ ಎಲ್ಲೇಡೇ ಸಾರೀ ಜಾಣ್ಮೆಯ ತೋರುವಂಥ.. 
           ಕನ್ನಡ ನಾಡ ಹೆಮ್ಮೆಯ ಹೀರಿ ನಲ್ಮೆಯ ಬೀರುವಂಥ 
           ಕನ್ನಡ ಭಾಷೆ ಎಲ್ಲೇಡೇ ಸಾರೀ ಜಾಣ್ಮೆಯ ತೋರುವಂಥ.. 
           ಸಂಗೀತ ಸಾಹಿತ್ಯ ಅಭಿಮಾನ ಇರುವಂಥ 
           ನಮ್ಮ ಕಲೆಯ ಚೆಲುವ ಜಗಕೆ ತಿಳಿಸಿ ಮೆರೆಯುವಂಥ               
          ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) 

ಗಂಡು : ಇಲ್ಲಿನ ಗೋಳು ಭವಣೆಯ ಮೀರಿ ಕೆಚ್ಚನೂ ಕಾಣುವಂಥ 
            ನಮ್ಮಯ ಶಿಲ್ಪ ನಮ್ಮಯನಿಚ್ಚ ಮೆಚ್ಚುತ ಸಾಗುವಂಥ 
            ಇಲ್ಲಿನ ಗೋಳು ಭವಣೆಯ ಮೀರಿ ಕೆಚ್ಚನೂ ಕಾಣುವಂಥ 
            ನಮ್ಮಯ ಶಿಲ್ಪ ನಮ್ಮಯನಿಚ್ಚ ಮೆಚ್ಚುತ ಸಾಗುವಂಥ 
            ಎಂದೆಂದೂ...  ನಾವೆಲ್ಲಾ... ಒಂದೆಂದೂ ತಿಳಿವಂಥ 
            ನಮ್ಮ ಬದುಕ ಬೆಡಗ ಸುಖದ ಸೊಬಗ ಮೆರೆಸುವಂಥ 
          ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) ಮಕ್ಕಳಿರಲ್ಲವ್ವಾ ಮನೆ ತುಂಬಾ (ವ್ವವ್ವಾ ) 
            ಮುನ್ನೆಡೆವ ಸಿರಿಗನ್ನಡದ ಕಂಪನು ಸವಿ ಇಂಪನು ದಿನ ದಿನ ಕ್ಷಣ ಕ್ಷಣ ಬೆಳಗುವಾ.... 
ಕೋರಸ್ : ಹೌದೂ ... ಹೌದೂ ... ಹೌದೂ ... ಹೌದೂ ... ಹೌದೂ ... 
ಗಂಡು : ಮನಸನು ಹೊಸತಿಗೆ ನಡೆಸುವಾ 
ಕೋರಸ್ : ಹೌದೂ ... ಹೌದೂ ... ಹೌದೂ ... ಹೌದೂ ... ಹೌದೂ ... 
-----------------------------------------------------------------------------------------------
 
ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪) - ನಮ್ಮ ಗುಲಾಬಿ ಬಳ್ಳಿಯಲ್ಲಿ ಹೂವೇ ಬಿಟ್ಟಿಲ್ಲ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಅನಂತನಾಗ 

ಅರಮನೆಯಂಥ ಈ ಮನೆಯೊಳಗೇ ಬರವೇ ಇಲ್ಲ ಸಿರಿ ವೈಭವಕೆ 
ಕೊರತೆಯೇ ಕಾಣದು ವಜ್ರ ವೈಡೂರ್ಯಕೆ ಮೇರೆಯೇ ಇಲ್ಲ ಬೆಳ್ಳಿ ಬಂಗಾರಕೆ 

ಕಂಡ ಕಂಡದ್ದು ಕಣ್ಣೇದುರುಂಟು ಶ್ರೀಮಂತಿಕೆಗೂ ಇದಕೂ ನಂಟು 
ಇಂಥಹದಿಲ್ಲ ಅನ್ನೋ ಹಾಗಿಲ್ಲ ಇರಬೇಕಾದ್ದು ಮಾತ್ರ ಮುಖ್ಯವಾಗಿಲ್ಲ 

ನಮ್ಮ ಗುಲಾಬಿ ಬಳ್ಳಿಯಲಿ ಹೂವೇ ಬಿಟ್ಟಿಲ್ಲ 
ಈ ಮನೆಯ ಹರುಷವ ಮೆರೆಯಲು ನಗೆಯೇ ಚಿಮ್ಮಿಲ್ಲ 
ಅಮೃತ ಶಿಲೆಯ ಈ ನೆಲದಲ್ಲಿ ಹೆಜ್ಜೆ ಕಂಡಿಲ್ಲ 
ಸೊಬಗನು ಬೆಳಗೋ ಮಲ್ಲಿಗೆಯಂತ ಮೊಗ್ಗೇ ಮೂಡಿಲ್ಲ 
ನಲ್ಮೆಯ ಬದುಕಿನ ಅಕ್ಕರೆ ಬಾನಲಿ ತಾರೆ ಮಿಂಚಿಲ್ಲ 

ಹೊರನೋಟಕೆ ಈ ಮನೆ ಎಂದೂ ನಂದಗೋಕುಲ.. ನಂದಗೋಕುಲ
ಆದರೆ ಒಳಗಿರೋರಗೇ ಮಾತ್ರ ಗೊತ್ತಿದ್ದರ ಗುಟ್ಟು ಗ್ರಹಣ 
ಇಲ್ಲಿನ ಮಂದಿಗೆ ತಪ್ಪದು ಒಂದು ಭಾರಿ ವ್ಯಸನ... 
ಏನಿದ್ರೇನೂ... ಏನಾದ್ರೇನು... ಯಾರಿದ್ರೆನೂ... ಯಾರ್ ಹೋದ್ರೇನು 
ತನುವು ಮನವು ಅರಳಕೊಂಡ್ ಉಕ್ಕೊಂಡ ಸೆಳೆಯುವಂತ ಹೂವಿಲ್ಲ 
ಅಂತಸ್ತಿದ್ರು ಪದವಿ ಇದ್ರೂ ಭೋಗದ ಕಡಲು ತುಂಬಿ ತುಳುಕಿದರು 
ಹಗಲು ರಾತ್ರಿ ಮಿಂಚಿ ಹರಿಸಿ ಕರೆಯುವಂತ ಚಿಕ್ಕೆ ಇಲ್ಲಾ 
ಹೌದೂ .. ಚಿಕ್ಕೆ ಇಲ್ಲಾ...  ಅದಕೆ ಪುಟ್ಟಾ ನಾ ಹೇಳೋದು       

ಘಲ್ ಘಲ್ ಗೆಜ್ಜೆ ಸದ್ದನು ತಾನು ಮಾಡುತ 
ಪುಟ್ಟ ಪುಟ್ಟ ಹೆಜ್ಜೆ ಮೆಲ್ಲಗೆ ತಾನು ಹಾಕುತ 
ಓಲಾಡುವಂತ ಓಡಾಡುವಂತ ತೂಗಾಡುವಂತ ಕುಡಿ ಬೇಕು... 
ಆಹಾ.. ಕುಣಿದಾಡುವಂತ ಸುಮ ಬೇಕು 

ಹೇಯ್... ಏನ್ ನೋಡ್ತಾ ಇದ್ದಿಯೋ ... ಹಾಗಂದ್ರೇ ... 
ಇಲ್ಲಿನ ಅಂದ ಚೆಂದಾನೆಲ್ಲಾ ಚಿಂದಿ ಚಿಂದಿ ಮಾಡಬೇಕು... 
ಅತ್ತಾ ಇತ್ತಾ ಓಡಾಡಬೇಕು... ಎದ್ವಾ ತದ್ವಾ ಉರುಳಬೇಕು... ಅಹ್ಹಹ್ಹಾ   
       
ಸೋಫಾ ಕುರ್ಚಿ ಎಳೆದಾಡುತ್ತಾ ಪರದೇನೆಲ್ಲಾ ಹರಿದಾಕುತ್ತ 
ಕಿಟಕಿ ಗಾಜು ಹೊಡೆದಾಕುತ್ತಾ ಬಾಗಿಲು ಚಿಲಕ್ ಮುರಿದುಹಾಕುತ್ತ 
ಥೈ ಥೈ ತಕಥೈ ಕುಣಿಬೇಕು ಏನಾದರೊಂದು ಹೊಡಿಬೇಕು 
ಕೇಕೇ ಹಾಕಿ ನಗಬೇಕು ... ಅಹ್ಹಹ್ಹಹಾ 
 
ಅಹ್ಹಹ್ಹಾ... ನಗ್ತಾ ನಗ್ತಾ  ಓಡಾಡಬೇಕು ಓಡ್ತಾ ಓಡ್ತಾ ಬೀಳಬೇಕು 
ಬಿದ್ದ ಮೇಲೆ ಜೋರಾಗಿ ಅಳಬೇಕು ಆಗ ಒಳಗಿರೋ ತಾಯಿ ನನ ಸಂಗಾತಿ 
ಓಡೋಡಿ ಬಂದು ಪ್ರೀತಿಯಿಂದ ಬಾಚಿ ತಬ್ಬಿಕೊಂಡು 
ಮಗುನಾ ಕಂಕುಳಲ್ಲಿ ಎತ್ತಿಕೊಂಡು ಅಯ್ಯೋ ನನ್ನ ಪುಟ್ಟ... ಏನಾಯ್ತಪ್ಪಾ ಕಂದ 
ಏನಾಯ್ತು ನನ್ನ ಚಿನ್ನ ಅನ್ಕೊಂಡು ಅಪ್ಪಕ್ಕೊಂಡು ಲೋಚ ಲೋಚ್ ಮುತ್ತ ಕೊಡಬೇಕು 
ಜೋ ಜೋ ಅಂತಾ ಲಾಲಿ ಹಾಡ್ತಾ... ಅಕ್ಕರೆಯಿಂದ ರಮಿಸಬೇಕು... 
ದೂರದಲ್ಲಿ ನಿಂತ್ಕೊಂಡು ಅದನ್ನೆಲ್ಲಾ ಮೌನವಾಗಿ ನೋಡಬೇಕು... 
ನೋಡ್ತಾ ನೋಡ್ತಾ ನಗಬೇಕು... ಹ್ಹಾ ನಗಬೇಕು ಅಹ್ಹಹ್ಹಹ್ಹಾ... ಅಹ್ಹಹ್ಹಹ್ಹಾ     
----------------------------------------------------------------------------------------------
 
ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪) - ಓ ಉಷಾ ಉಷಾ ಉಲ್ಲಾಸ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ  

ಗಂಡು : ಓ ಉಷಾ ಉಷಾ ಉಲ್ಲಾಸ ನೀ ಕೋಡು ಹೊಸ ಸಂತೋಷ 
           ಸೌಂದರ್ಯ ಸಂಜೀವಿನೀ ನೀನೂ ಶೃಂಗಾರ ಸಂಮೋಹಿನೀ ನೀನೂ 
ಹೆಣ್ಣು : ಕಾಣದ ರೋಮಾಂಚ ಹೊಂದೇ ನಾನಿಂದೂ 
ಗಂಡು : ಓ ಉಷಾ ಉಷಾ ಉಲ್ಲಾಸ ನೀ ಕೋಡು ಹೊಸ ಸಂತೋಷ 
 
ಗಂಡು : ಪರ್ವತ ಶ್ರೇಣಿ ನಿನ್ನಯ ವೇಣಿ ಮಂಜುಳ ವಾಹಿನೀ ನಿನ್ನಯ ವಾಣಿ 
ಹೆಣ್ಣು : ನಿನ್ನಯ ಶಾಂತಿ ನಲ್ಮೆಯ ರೀತಿ             
          ನಿನ್ನಯ ಶಾಂತಿ ನಲ್ಮೆಯ ರೀತಿ ನಿನ್ನಯ ಕೇಶ ಮಿಂಚುವ ಕಾಶೀ .. 
ಗಂಡು : ಗಾಳಿ ಗಂಧ ಸೇರಿದ ಹಾಗೇ .. 
ಹೆಣ್ಣು : ಮೋಹ ಸ್ನೇಹ ತಂದಿದೇ ಬೆಸುಗೆ.. 
ಗಂಡು : ಓ ಉಷಾ ಉಷಾ ಉಲ್ಲಾಸ ನೀ ಕೋಡು ಹೊಸ ಸಂತೋಷ 

ಗಂಡು :  ಅಹ್ಹಹ್ಹಹ್ಹಹ ಆಆಆ ಆಆಆ
ಹೆಣ್ಣು : ನಿನ್ನಯ ಕಣ್ಣು ಬೆಳಗುವ ದೀಪ ನಿನ್ನಯ ನಗೆಯು ಮಲ್ಲಿಗೆ ರೂಪ 
ಗಂಡು : ಕಪ್ಪನೇ ಮುಗಿಲೂ ನಿನ್ನಯ ಕುರುಳೂ 
           ಕಪ್ಪನೇ ಮುಗಿಲೂ ನಿನ್ನಯ ಕುರುಳೂ ಬಾಳೆಯ ದಿಂಡೂ ನಿನ್ನಯ ತೋಳು 
ಹೆಣ್ಣು : ಒಲವೂ ಚೆಲುವೂ ಕೂಡಿದ ಹಾಗೇ .. 
ಗಂಡು : ಜೀವ ಭಾವ ತಂದಿದೇ ಹೊಸುಗೆ 
            ಓ ಉಷಾ ಉಷಾ ಉಲ್ಲಾಸ ನೀ ಕೋಡು ಹೊಸ ಸಂತೋಷ 
           ಸೌಂದರ್ಯ ಸಂಜೀವಿನೀ ನೀನೂ ಶೃಂಗಾರ ಸಂಮೋಹಿನೀ ನೀನೂ 
ಹೆಣ್ಣು : ಕಾಣದ ರೋಮಾಂಚ ಹೊಂದೇ ನಾನಿಂದೂ 
ಗಂಡು : ಓ ಉಷಾ ಉಷಾ ಉಲ್ಲಾಸ ನೀ ಕೋಡು ಹೊಸ ಸಂತೋಷ 
----------------------------------------------------------------------------------------------
 
ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪) - ನನ್ನ ಚಿನ್ನ ನನ್ನ ರನ್ನ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವಾಣಿಜಯರಾಂ 

ನನ್ನ ಚಿನ್ನ ನನ್ನ ರನ್ನ ನನ ಮುದ್ದು ಕಂದ 
ಏನ್ ಬೇಕಪ್ಪ ಹೇಳಪ್ಪಾ ಕಂದ 
ನನ್ನ ಚಿನ್ನ ನನ್ನ ರನ್ನ ನನ ಮುದ್ದು ಕಂದ 
ಏನ್ ಬೇಕಪ್ಪ ಹೇಳಪ್ಪಾ ಕಂದ 
ರಂಪ್ ಮಾಡ್ಕೊಂಡು ಚಂಡಿ ಹಿಡ್ಕೊಂಡು... 
ಯಾಕೇ ಹೀಗೆಲ್ಲಾ ತಂಟೆ ನಿಮ್ಮದೆಲ್ಲಾ 
ನನ್ನ ಚಿನ್ನ ನನ್ನ ರನ್ನ ನನ ಮುದ್ದು ಕಂದ 
ಏನ್ ಬೇಕಪ್ಪ ಹೇಳಪ್ಪಾ ಕಂದ 
   
ಯಾವತ್ತೂ ಕಚ್ಚಾಡಬೇಡಿ ನೀವೆಲ್ಲಾ ಜೊತೆಯಾಗಿ ಆಡಿ 
ಈ ಕೋಪ ಸಿಟ್ಟೆಲ್ಲಾ ದೂಡಿ ನೀವೆಲ್ಲ ನಗುನಗುತಾ ಆಡೀ 
ಕುಂಟೆ ಬಿಲ್ಲೆ ಕಬ್ಬಡಿ ಕಬ್ಬಡಿ ಅಂಚಿನ ಕಲ್ಲು ಐಸಾ ಪೈಸಾ 
ಆಡಿ ಅರಿತು ಬೆರೆತು ಕುಣಿದು ನಲಿದು 
ನನ್ನ ಚಿನ್ನ ನನ್ನ ರನ್ನ ನನ ಮುದ್ದು ಕಂದ 
ಏನ್ ಬೇಕಪ್ಪ ಹೇಳಪ್ಪಾ ಕಂದ 

ಆಆಆಅ ಆಆಆಅ ಆಆಆಅ ಆಆಆಅ ಆಆಆಅ 
ಹೂಂಹೂಂಹೂಂಹೂಂಹೂಂ ಹೂಂಹೂಂಹೂಂಹೂಂಹೂಂ
ನನ್ನ ಚಿನ್ನ ನನ್ನ ರನ್ನ ನನ ಮುದ್ದು ಕಂದ ... 
ಮಲ್ಕೊಳೋ ನನ್ನಪ್ಪ ಕಂದ ಪಚ್ಚೋಲೋ ನನ್ನಪ್ಪ ಕಂದ 
ಬೇಗ ಎದ್ದು ಹಲ್ಲ ಉಜ್ಜಿ ನೀವು ಮೈಯ್ಯ ತೊಳೆದು 
ತಂಪಾಗಿ ಮಿಂದು ಚೆನ್ನಾಗಿ ಬಟ್ಟೆಗಳ ಧರಿಸಿ 
ಭಕ್ತಿಯಲಿ ದೈವಕ್ಕೆ ನಮಿಸಿ ಗಲಾಟೆ ಮಾಡದೇ 
ಗಪ್ ಚಿಪ್ ಆಗಿ ಹೇಳ್ದಂಗೆ ಕೇಳ್ತಾ ನೀವ್ ತಿಂಡಿ ತಿನ್ನಿ 
ಅಳಲು ತೊರೆದು ಮಮತೆ ಮಿಡಿದು 
  
ನಂಗೇ ಕಾಫಿ ಬೇಕು... (ಹೂಂ...)  ದೋಸೆ ನಂಗ್ ಬೇಕು (ಆಹಾ) 
ನಂಗೇ ಇಡ್ಲಿ ಬೇಕು (ಆ...ಅಹ್ಹಹ್ಹ) ನಂಗ್ ಪೂರಿ ಬೇಕು  
ಹೌದಾ... ಕೊಡ್ತೀನಿ.. ಕೊಡ್ತೀನಿ.. 

ದೋಸೇನೂ ಕಾಫಿನೂ ತರ್ತೀನಿ ಕಂದ 
ಎಲ್ಲಾನೂ ಕೊಡ್ತೀನೋ ಕಂದ ಬೇಕಾದ್ದೂ ಕೊಡ್ತಿನೋ ಕಂದ 
ಬಲ್ ಬ್ಯೂಟೀ ನಮ್ ಆಂಟೀ ನಮಗೆಲ್ಲ ಸ್ವೀಟಿ 
ನೀನ್ ಮೇಲೆ ನಮಗೆಲ್ಲಾ ಪ್ರೀತಿ 
ತಿಂಡಿ ಕಟ್ಕೊಂಡು ಹಾಡ್ ಹೇಳ್ಕೊಂಡು 
ಪಪ್ಪೀ ಕೊಟ್ಕೊಂಡು ಪ್ರೀತಿ ಮಾಡ್ಕೊಂಡು 
ಬಲ್ ಬ್ಯೂಟೀ ನಮ್ ಆಂಟೀ ನಮಗೆಲ್ಲ ಸ್ವೀಟಿ 
ನೀನ್ ಮೇಲೆ ನಮಗೆಲ್ಲಾ ಪ್ರೀತಿ 
ಲಾಲಾ... ಲಲಲ ಲಾಲಾ... ಲಲಲ ಲಾಲಾ... ಲಲಲ 
ಲಾಲಾ... ಲಲಲ ಲಾಲಾ... ಲಲಲ ಲಾಲಾ... ಲಲಲ 
-----------------------------------------------------------------------------------------------
 
ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪) - ಬಾಳ ಏಳು ಬೀಳು 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಜಯಚಂದ್ರ 

ಆ ಆಆಆ... ಆ ಆ ಆ ಆಆ ಆ ಆ ಆಆಆ... ಆ ಆ ಆ ಆಆ ಆ 
ಬಾಳ ಏಳು ಬೀಳು ಎಂದೆಂದೂ ತುಳಿಯದೇನೋ 
ಜೀವ ನೂರು ನೋವು ಕಂಡಂತೆ ಕೊರಗದೇನೋ 
ಸವಿದಂತ ರಾಗ ಭೋಗ ಪಡೆದಂತ ಸ್ನೇಹ ಮೋಹ 
ಇಂದು ನೆನಪ ತಂದ ಅಳಲು 
ಬಾಳ ಏಳು ಬೀಳು ಎಂದೆಂದೂ ತುಳಿಯದೇನೋ 

ಇರುವಾಗ ನಂಟು ತೋರಿ ಇಲ್ಲದಾಗ ದೂರ ಹೋಗಿ 
ಒಡನಾಡಿ ಬಂದ ಮಂದಿ ಬದಲಾಗಿ ಆಸೆ ಇಂಗೀ 
ಮಸುಕಾದ ದಾರಿ ಸಾಗಿ ಅಲೆದಾಟ ಸಾಗಿ ಸಾಗಿ 
ಬರಡಾಗಿ ಹೋದೆ ನಾ... ಬರಡಾಗಿ ಹೋದೇ ... ಮರುಭೂಮಿಯಾದೇ ... 
ಬಾಳ ಏಳು ಬೀಳು ಎಂದೆಂದೂ ತುಳಿಯದೇನೋ 

ಮಿನುಗಾದ ರಂಗು ಕರಗಿ ಸುಖವಾದ ಸಂಗ ನಲುಗಿ 
ಅನುಗಾಲ ಕಂಡ ಕನಸು ಮರೆಯಾಗಿ ಮೌನವಾಗಿ 
ಸಿರಿ ಕೀರ್ತಿ ನಂಬಿ ಹೋಗಿ ಅಪಕೀರ್ತಿ ಹೊಂದಿ ಹೊಂದಿ 
ಶೃತಿ ಮರೆತ ಹಾಡು ಹಾಡು ಮೊಡಕಾದ ಪಾಡು 
ಬಾಳ ಏಳು ಬೀಳು ಎಂದೆಂದೂ ತುಳಿಯದೇನೋ 
ಜೀವ ನೂರು ನೋವು ಕಂಡಂತೆ ಕೊರಗದೇನೋ 
ಸವಿದಂತ ರಾಗ ಭೋಗ ಪಡೆದಂತ ಸ್ನೇಹ ಮೋಹ 
ಇಂದು ನೆನಪ ತಂದ ಅಳಲು 
----------------------------------------------------------------------------------------------

ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪) - ಯಾದವ ನೀ ಬಾರೋ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಭೀಮಸೇನ ಜೋಶಿ

ಯಾದವ ನಿ ಬಾ ಯಾದವ ನಿ ಬಾ 
ಯಾದವ ನಿ ಬಾರೋ ಯಾದವ ನಿ ಬಾ 
ಯದುಕುಲ ನಂದನಮಾಧವ ಮಧುಸೂದನ ಬಾರೋ 
ಸೋದರ ಮಾವನ ಮದುರಲಿ ಮಡಹಿದ
ಸೋದರ ಮಾವನ ಮದುರಲಿ ಮಡಹಿದ
ಯಶೋದ ಕಂದ ನೀ ಬಾರೋ 
ಯಾದವ ನಿ ಬಾ ಯಾದವ ನಿ ಬಾ 

ಕನಕರಾಂದಿಗೆ ಘುಲು ಘುಲು ಎನಿತಲಿ 
ಝಣ ಝಣ ಎನುತಿಹ ನಾದಗಳು....ಊಊಊಊಉ  
ಚಿನ್ನಿಕೊಲು ಚೆಂಡು ಬುಗರೇ ಆಡುತ 
ಸಣ್ಣವರಗೂಡಿ ನೀ ಬಾರೋ 
ಯಾದವ ನಿ ಬಾ ಯಾದವ ನಿ ಬಾ ಯಾದವ ನಿ ಬಾರೋ 

ಶಂಖ ಚಕ್ರವು ಕೈಯೇಲಿ ಹೊಳೆಯುತ
ಶಂಖ ಚಕ್ರವು ಕೈಯೇಲಿ ಹೊಳೆಯುತ
ಬಿಂಕದ ಕೋಮಲ ನಿ ಬಾರೋ.... ಓಓಓಓಓಓ 
-----------------------------------------------------------------------------------------------

No comments:

Post a Comment