606. ಗೆಳೆಯ (೨೦೦೭)

ಗೆಳೆಯ ಚಲನಚಿತ್ರದ ಹಾಡುಗಳು 
  1. ಈ ಸಂಜೆ ಯಾಕಾಗಿದೆ 
  2. ನನ್ನ ಸ್ಟೈಲು ಬೇರೇನೇ  
  3. ಪುಟಗಳ ನಡುವಿನ 
  4. ಚಾಂಗು ಬಾಳ ಚಾಂಗುರೇ 
  5. ಹುಡುಗಿ ಮಳೆಬಿಲ್ಲು 
  6. ಕನಸಲ್ಲೇ ಮಾತಾಡುವೆ 
ಗೆಳೆಯ (೨೦೦೭) - ಈ ಸಂಜೆ ಯಾಕಾಗಿದೆ 
ಸಂಗೀತ : ಮನೋಮೂರ್ತಿ ಸಾಹಿತ್ಯ :ಜಯಂತ ಕಾಯ್ಕಿಣಿ ಗಾಯನ ಗಾಯನ : ಸೋನು ನಿಗಮ್

ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ   ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು 
ಮೌನ ಬಿಸಿಯಾಗಿದೆ........ ಮೌನ ಬಿಸಿಯಾಗಿದೆ.....

ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ 
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ 
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಜೀವ ಕಸಿಯಾಗಿದೆ........ ಜೀವ ಕಸಿಯಾಗಿದೆ.....

ನೀನಿಲ್ಲದೆ ಚಂದಿರಾ  ಕಣ್ಣಲಿ ಕಸವಾಗಿದೆ 
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ 
ಆಕಾಶದಿ ಕಲೆಯಾಗಿದೆ  ಸಂಜೆಯ ಕೊಲೆಯಾಗಿದೆ 
ಗಾಯ ಹಸಿಯಾಗಿದೆ..... ಗಾಯ ಹಸಿಯಾಗಿದೆ....
-------------------------------------------------------------------------------------------------------------------------

ಗೆಳೆಯ (೨೦೦೭) - ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
ಸಂಗೀತ : ಮನೋಮೂರ್ತಿ ಸಾಹಿತ್ಯ : ಕವಿರಾಜ  ಗಾಯನ ಗಾಯನ : ರಾಜೇಶ ಕೃಷ್ಣನ್, ಇಂಚರ  

ಹೆ : ಓಹೋಹೋಊ ಯಯೇ ಓಹೋಹೋಊ ನನನ್ನಆಆಆಅ
ಗ : ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
     ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೇ...
ಹೆ : ನಿನ್ನ ಲುಕ್ಕು ಬೇರೇನೇ ನಿನ್ನ ಟಚೂ ಏರೇನೇ
     ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ

ಗ : ಈ ಜಾಲ ನಂದೇ ಈ ಗಾಳ ನಂದೇ ಈ ಕಾಲ ನಂದೇ ಈ ಭೂಮಿ ನಂದೇ
ಹೆ : ನಿನ್ ಲೂಕೇ ಬೇರೆ ನಿನ್ ಟಚೆ  ಬೇರೆ ಬಾಬಾರೋ ನನ್ ಹೀರೊ ನೀನೇ
ಗ : ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
     ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೇ...
ಹೆ : ನಿನ್ನ ಲುಕ್ಕು ಬೇರೇನೇ ನಿನ್ನ ಟಚೂ ಏರೇನೇ
     ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ

ಗ : ಹುಟ್ಟೋದೆ ಸಾಯೋಕೆ ಅನ್ನೋದೇ ಸಿಲ್ಲಿ.. ಹುಟ್ಟಿದ್ದೇ ಗೆಲ್ಲೋಕೆ ನಾನಿಂದು ಇಲ್ಲಿ... 
ಹೆ : ನುಗ್ಗೋನ್ಗೆ ಭೂಮಿಲಿ ಎಲ್ಲುಂಟು ಬೇಲಿ.. ನೀ ಹೋಗೋ ದಿಕ್ಕಲ್ಲೇ ಬಿಸೋದು ಗಾಳಿ    
ಗ : ನಂಗೇ ಸೋಲೇ ಗೊತ್ತಿಲ್ಲಾ.. ನನ್ನ ಯಾರು ಗೆದ್ದಿಲ್ಲಾ.. ನನ್ನ ಆಟ   ನಿನ್ನ ಬಿಟ್ಟು ಯಾರಗೂ ಗೊತ್ತಿಲ್ಲಾ.. 
ಹೆ : ನಿನ್ನ ಲುಕ್ಕು ಬೇರೇನೇ ನಿನ್ನ ಟಚೂ ಏರೇನೇ 
      ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ
ಗ : ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
     ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೇ... 
ಹೆ : ನಿನ್ನ ಲುಕ್ಕು ಬೇರೇನೇ ನಿನ್ನ ಟಚೂ ಏರೇನೇ 
      ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ
ಗ : ಹೇ ಹೇ ಯಪ್ಪಾ ಓಲೆ ಒಲೆಯೇ ಯಪ್ಪಾ 
     ಹೇ ಹೇ ಯಪ್ಪಾ ಓಲೆ ಒಲೆಯೇ ಯಪ್ಪಾ.. ಹೇ  

ಹೆ : ಕಣ್ಣಲ್ಲೇ ಸುಟ್ಟಕೊ ಬೆಂಕಿನೊ ನೀನು ಅಬ್ಬಬ್ಬಾ ನನ್ನಾಣೆ ತೂಫಾನೋ ನೀನು
ಗ : ಮುಟ್ಟದೊರು ಖಲ್ಲಾಸು ಕಟ್ಟದೊರೆ ಗೋರಿ ಬಾ ನನ್ನ ಗುರಾಯ್ಸು ಒಂದೇ ಒಂದಸಾರಿ
ಹೆ : ಎಂಟು ಗುಂಡಿಗೆ ನಿಂಗೆ ಮಾತು ಗುಂಡಿನ ಹಂಗೆ  ನನ್ನ ಗಂಡೇ ನಿನ್ನ ಕಂಡೆ ನಂಗೆ ಮತ್ತು ಬಂತಲ್ಲೋ
ಗ :(ಘಟ್ಟಿ ಧ್ವನಿ)  ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
     ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೇ... 
ಹೆ : ನಿನ್ನ ಲುಕ್ಕು ಬೇರೇನೇ ನಿನ್ನ ಟಚೂ ಏರೇನೇ 
      ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ 
ಗ :  ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
      ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೇ... 
ಗ : ಈ ಜಾಲ ನಂದೇ ಈ ಗಾಳ ನಂದೇ ಈ ಕಾಲ ನಂದೇ ಈ ಭೂಮಿ ನಂದೇ
ಹೆ : ನಿನ್ ಲೂಕೇ ಬೇರೆ ನಿನ್ ಟಚೆ  ಬೇರೆ ಬಾಬಾರೋ ನನ್ ಹೀರೊ ನೀನೇ
ಗ :(ಘಟ್ಟಿ ಧ್ವನಿ)  ನನ್ನ ಸ್ಟೈಲು ಬೇರೇನೇ  ನನ್ನ ದಿಲ್ಲು ಬೇರೇನೇ
     ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೇ... 
ಹೆ : ನಿನ್ನ ಲುಕ್ಕು ಬೇರೇನೇ ನಿನ್ನ ಟಚೂ ಏರೇನೇ
     ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ 
---------------------------------------------------------------------------------------------------------------

ಗೆಳೆಯ (೨೦೦೭) - ಪುಟಗಳ ನಡುವಿನ 
ಸಂಗೀತ : ಮನೋಮೂರ್ತಿ ಸಾಹಿತ್ಯ :ಜಯಂತ ಕಾಯ್ಕಿಣಿ ಗಾಯನ ಗಾಯನ : ಪ್ರವೀಣ ದತ್ತ ಸ್ಟೆಫೆನ್  

ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು 
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು 
ಓ ಸ್ನೇಹವೇ ಹೂ ಹೂವಲಿ ನಗುವಾಗಿ ನೀ ನೋಡು 
ಆಕಾಶವೇ ಈ ಮಣ್ಣಲ್ಲಿ ಮಗುವಾಗಿ ನೀನು ಆಡು 
ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು 
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು 

ಈ ಜೇಬಿನಲ್ಲಿ ಬುಗುರಿ ಬಳಪ ಕನಸ್ಸೂ ನೂರೂ ... 
ಆ ಬಾನಿನಲ್ಲಿ ಏಳು ಬಣ್ಣದ ಬಳೆಯ ಚೂರು 
ಏನೇ ಇರಲಿ ಹಂಚಿ ನಲಿವ ಮುತ್ತು 
ಎಳೆತದ ನಮ್ಮ ಗೆಳೆತನ ಇರಲಿ ಕಡೆತನ 
ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು 
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು 

ಈ ಕಾಲದಾರಿ ನೇರ ನಿನ್ನ ಮನದ ತನಕ 
ಈ ಲೋಕವನ್ನು ಮೈ ಮರೆತು ತಿಳಿವ ತವಕ 
ನಲುಮೆಗಿಲ್ಲಿ ಬರದೇ ಇರಲೀ ಎಂದು ಬಡತನ 
ನಮ್ಮ ಗೆಳೆತನ ಇರಲಿ ಕಡೆತನ 
ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು 
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು 
ಓ ಸ್ನೇಹವೇ ಹೂ ಹೂವಲಿ ನಗುವಾಗಿ ನೀ ನೋಡು 
ಆಕಾಶವೇ ಈ ಮಣ್ಣಲ್ಲಿ ಮಗುವಾಗಿ ನೀನು ಆಡು 
ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು 
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು 
---------------------------------------------------------------------------------------------------------------

ಗೆಳೆಯ (೨೦೦೭) - ಚಾಂಗು ಬಾಳ ಚಾಂಗುರೇ 
ಸಂಗೀತ : ಮನೋಮೂರ್ತಿ ಸಾಹಿತ್ಯ : ನಾಗೇಂದ್ರ ಪ್ರಸಾದ  ಗಾಯನ ಗಾಯನ : ಶಂಕರ ಮಹಾದೇವನ್ 

ಚಾಂಗು ಬಲ ಚಾಂಗು ಬಲ ಚಾಂಗುರೇ 
ಝಣ ಝಣ ಚಿಲ್ಲರೆ ಜೇಬಿನಲ್ಲಿ ಇದ್ದರೇ 
ನೋಡು ಮಗಾ ಊರುತುಂಬಾ ಜಾತ್ರೇ 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  
ಚಾಂಗು ಬಲ ಚಾಂಗು ಬಲ ಚಾಂಗುರೇ 
ಝಣ ಝಣ ಚಿಲ್ಲರೆ ಜೇಬಿನಲ್ಲಿ ಇದ್ದರೇ 
ನೋಡು ಮಗಾ ಊರುತುಂಬಾ ಜಾತ್ರೇ 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  

ಖುಷಿ ಖುಷಿ ಪಡು ಗುರು ಯಾಕೇ ಋಷಿ ಆಗುವೇ 
ತಗೋ ಇಲ್ಲೇ ಡ್ಯಾನ್ಸೂ ಶೂರು ಜಿಂಗಲ್ ಜಿಂಗಾವೇ  
ಗಂಡಾಗುಂಡಿ ಮಾಡೋರಿಲ್ಲ ನಮ್ದೇ ಇಲ್ಲೇ ಬಜಾರು 
ಊರಲ್ ಬ್ಯಾರೇ ಮಾತೆ ಇಲ್ಲ ನಮ್ದೇ ಪುಕಾರೂ 
ಬಾಳು ಎನ್ನುವ ಗೋಳಲಿ ಮೇಲು ಕೀಳು ಧೂಳಲೀ 
ಯಾಕೇ ಕುಳಿತೆ ಮಾನವ ಹಾದಿ ಕುಣಿವ ಬಾ ಶಿವಾ ... 
ಚಿಂತೆ ಬಿಡು ಮನ್ಸೂ ಇದು ನಕ್ಕು ಬಿಡು 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  
ಚಾಂಗು ಬಲ ಚಾಂಗು ಬಲ ಚಾಂಗುರೇ 
ಝಣ ಝಣ ಚಿಲ್ಲರೆ ಜೇಬಿನಲ್ಲಿ ಇದ್ದರೇ 
ನೋಡು ಮಗಾ ಊರುತುಂಬಾ ಜಾತ್ರೇ 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  

ಬಾರೋ ಬಾರೋ ಬಾ ಗೆಳೆಯ ಟಪ್ಪಂಗುಚ್ಚಿ ಆಡುವಾ 
ಮೀಸೆ ಮೇಲೆ ಒಂದು ಕೈಯ್ಯ್ ನೋಡೇ ಬೀಡುವಾ 
ಕರ್ಣ ನೀನು ಕೌರವನ ನೋಡು ನಮ್ಮ ಸ್ನೇಹವನಾ 
ತೊಡೆ ತಟ್ಟಿ ನಿಂತರೇ ವ್ವಾರೇ ವ್ವಾರೇ ವ್ಹಾಹ್... 
ದೂರ ಸರಿಸು ನಾಚಿಕೆ ಊರಿನಿಂದ ಆಚೆಗೆ 
ಹಾಡಿ ಕುಣಿವ ಆಟಕ್ಕೆ ತಾಳ ತಬಲಾ ಯಾತಕೇ ... 
ಸುಸ್ತಿರದೇ ಮಸ್ತಿರಲೀ ದಡ್ಡಿದೀನ್ 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  
ಚಾಂಗು ಬಲ ಚಾಂಗು ಬಲ ಚಾಂಗುರೇ 
ಝಣ ಝಣ ಚಿಲ್ಲರೆ ಜೇಬಿನಲ್ಲಿ ಇದ್ದರೇ 
ನೋಡು ಮಗಾ ಊರುತುಂಬಾ ಜಾತ್ರೇ 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  
ಚಾಂಗು ಬಲ ಚಾಂಗು ಬಲ ಚಾಂಗುರೇ 
ಝಣ ಝಣ ಚಿಲ್ಲರೆ ಜೇಬಿನಲ್ಲಿ ಇದ್ದರೇ 
ನೋಡು ಮಗಾ ಊರುತುಂಬಾ ಜಾತ್ರೇ 
ತನನನರೇ  ಕುಣಿಯೋ ದೊರೇ ಅರೆರೇರೀ... ಎಲ್ಲಾ ಇಲ್ಲಿ ನಮ್ಮೋರೇ  
-------------------------------------------------------------------------------------------------------------

ಗೆಳೆಯ (೨೦೦೭) - ಹುಡುಗಿ ಮಳೆಬಿಲ್ಲು 
ಸಂಗೀತ : ಮನೋಮೂರ್ತಿ ಸಾಹಿತ್ಯ :ಜಯಂತ ಕಾಯ್ಕಿಣಿ ಗಾಯನ ಗಾಯನ : ಕಾರ್ತೀಕ, ಪ್ರಿಯ ಹಿಮೇಶ  

ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ 
ಎದೆಗೆ ನಾಟಿದರೆ ಸೀದಾ ಸ್ವರ್ಗಕ್ಕೆ ಸೋಪಾನ 
ಹುಡುಗ ಅಲೆಮಾರಿ ಅವನ ಆಟ ಜೋಪಾನ 
ನಮ್ಮ ಕಣ್ಣಲ್ಲೇ ಅವನ ಕನಸಿನ ನಿಲ್ದಾಣ 
ಕಣ್ಣೆದುರೂ ನೀವಿರಲೂ ಇನ್ನೆಲ್ಲಿ ನೋಡೋಣ 
ಸಂತಸದ ಅಲೆಯಲ್ಲಿ ಜಾರದೆಯೇ ಕುಣಿಯೋಣ 
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ 
ಹುಡುಗ ಅಲೆಮಾರಿ ಅವನ ಆಟ ಜೋಪಾನ 

ಕಣ್ಣಲೀ ದೀಪ ಹಚ್ಚುವಿರಿ ಚಿನ್ನದ ಗರಿಗಳ ಚೆಲುವೆಯರೇ ದೀಪಗಳ ಉತ್ಸವವೇ 
ಬಣ್ಣದ ಬಲೆಯನು ಬೀಸುವಿರಿ ಮಿಂಚಿನ ಓಟದ ಮೋಹಿತರೇ  
ಅಷ್ಟೊಂದು ಅವಸರವೇ ಈ ಸಮಯ ಇನ್ನಿಲ್ಲ ಇನ್ನೇಕೆ ಬಿಗುಮಾನ 
ಈ ಹರೆಯ ಬಲು ಜೋರು ಇರಬೇಕು ಕಡಿವಾಣ 
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ 
ಹುಡುಗ ಅಲೆಮಾರಿ ಅವನ ಆಟ ಜೋಪಾನ 

ಮುತ್ತಿನ ಸರಗಳ ಖಜಾನೆಗೆ ನಿಮ್ಮಯ ತುಟಿಯಲಿ ಕೀಲಿ ಇದೆ 
ಒಂಚೂರು ತೆರೆಯುವೀರಾ...  
ನಮ್ಮಯ ಬಾಳಲಿ ಈಗೊಂದು ಬೆಳೆಯಲು ಜಾಗ ಖಾಲಿಯಿದೆ 
ಅರ್ಜಿಯನು ಬರೆಯುವೀರಾ... 
ಈ ಸೆಳೆತ ನಿನ್ನಿಂದ ನಾವೇನು ಮಾಡೋಣ 
ಈ ಪಾಡು ನಿಮಗಿರಲಿ ಇನ್ನೊಮ್ಮೆ ಸೇರೋಣ 
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ 
ಎದೆಗೆ ನಾಟಿದರೆ ಸೀದಾ ಸ್ವರ್ಗಕ್ಕೆ ಸೋಪಾನ 
ಹುಡುಗ ಅಲೆಮಾರಿ ಅವನ ಆಟ ಜೋಪಾನ 
ನಮ್ಮ ಕಣ್ಣಲ್ಲೇ ಅವನ ಕನಸಿನ ನಿಲ್ದಾಣ 
ಕಣ್ಣೆದುರೂ ನೀವಿರಲೂ ಇನ್ನೆಲ್ಲಿ ನೋಡೋಣ 
ಸಂತಸದ ಅಲೆಯಲ್ಲಿ ಜಾರದೆಯೇ ಕುಣಿಯೋಣ 
------------------------------------------------------------------------------------------------------------

ಗೆಳೆಯ (೨೦೦೭) - ಕನಸಲ್ಲೇ ಮಾತಾಡುವೆ 
ಸಂಗೀತ : ಮನೋಮೂರ್ತಿ ಸಾಹಿತ್ಯ :ಜಯಂತ ಕಾಯ್ಕಿಣಿ ಗಾಯನ ಗಾಯನ : ಶ್ರೇಯಾ ಘೋಷಾಲ್ 

ಮನಸಲ್ಲೇ ಮಾತಾಡುವೇ ನಿನ್ನೊಂದಿಗೆ ಮನಸಲ್ಲೇ ಮಾತಾಡುವೇ 
ಕನಸಲ್ಲೇ ಓಡಾಡುವೇ ನಿನ್ನೊಂದಿಗೇ 
ಕನಸಲ್ಲೇ ಓಡಾಡುವೇ ಏಕಾಂತವೇ ಸಲ್ಲಾಪವೂ 
ಅನುರಾಗದ ಆಲಾಪವೂ ನಿನಗೆಂದೇ ನಾ ಹಾಡುವೇ ... 
ನಿನಗೆಂದೇ ನಾ ಹಾಡುವೇ ... 
ಮನಸಲ್ಲೇ ಮಾತಾಡುವೇ ನಿನ್ನೊಂದಿಗೆ ಮನಸಲ್ಲೇ ಮಾತಾಡುವೇ 

ಎಲ್ಲೆಲ್ಲಿಯೂ ನೀ ಅಲೆಯುತ ಈ ದಾರಿಯ ಮರೆತಂತಿದೆ 
ಎಲ್ಲಿಂದಲೋ ನೀ ನನ್ನನ್ನೂ ಪಿಸುಮಾತಲಿ ಕರೆದಂತಿದೇ ... 
ನೀನಲ್ಲದೇ  ದಿಗಿಲಾಗಿದೆ ಬೆಳದಿಂಗಳು ಹಗಲಾಗಿದೆ 
ಇನ್ನೆಂದು ನೀ ಕಾಣುವೆ ಓಓಓ ಇನ್ನೆಂದು ನೀ ಕಾಣುವೇ 
ಮನಸಲ್ಲೇ ಮಾತಾಡುವೇ ನಿನ್ನೊಂದಿಗೆ ಮನಸಲ್ಲೇ ಮಾತಾಡುವೇ 

ಕೈಯ್ಯ ಹಿಡಿಯುತ ಮುನ್ನೆಡಿಸಿದೇ ಸವಿ ನೆನಪಿನ ಸಂಮ್ಮೋಹಿನಿ  
ಮೈಮನಗಳ ಆವರಿಸಿದೆ ನಿನ್ನೋಲವಿನ ಸಂಜೀವಿನೀ... 
ಈ ಭಿನ್ನಹ ತಲುಪಿಲ್ಲವೇ ನೋವಿಲ್ಲವೇ  ಒಲವಿಲ್ಲವೇ  
ನಿನಗಾಗಿ ನಾ ಕಾಯುವೇ  ನಿನಗಾಗಿ ನಾ ಕಾಯುವೇ 
ಮನಸಲ್ಲೇ ಮಾತಾಡುವೇ ನಿನ್ನೊಂದಿಗೆ ಮನಸಲ್ಲೇ ಮಾತಾಡುವೇ 
ಕನಸಲ್ಲೇ ಓಡಾಡುವೇ ನಿನ್ನೊಂದಿಗೇ ಕನಸಲ್ಲೇ ಓಡಾಡುವೇ 
ಏಕಾಂತವೇ ಸಲ್ಲಾಪವೂ ಅನುರಾಗದ ಆಲಾಪವೂ ನಿನಗೆಂದೇ ನಾ ಹಾಡುವೇ ... 
ನಿನಗೆಂದೇ ನಾ ಹಾಡುವೇ ... 
ಮನಸಲ್ಲೇ ಮಾತಾಡುವೇ ನಿನ್ನೊಂದಿಗೆ ಮನಸಲ್ಲೇ ಮಾತಾಡುವೇ 
--------------------------------------------------------------------------------------------------------------

No comments:

Post a Comment