88. ಹುಲಿಯ ಹಾಲಿನ ಮೇವು (1978)


ಹುಲಿಯ ಹಾಲಿನ ಮೇವು ಚಿತ್ರದ ಹಾಡುಗಳು 
  1. ಆಸೆ ಹೇಳುವಾಸೆ ಹೇಳಲಾರೆ 
  2. ರಾಜಾಧಿರಾಜ  
  3. ಬೆಳದಿಂಗಳಾಗಿ ಬಾ ತಂಗಾಳಿಯಾಗಿ 
  4. ಚಿನ್ನದ ಮಲ್ಲಿಗೆ ಹೂವೇ 
ಹುಲಿಯ ಹಾಲಿನ ಮೇವು (1978) - ಆಸೆ ಹೇಳುವಾಸೆ
ಚಿ. ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಡಾ.ರಾಜ್‍ಕುಮಾರ್, ಪಿ.ಸುಶೀಲ


ಆಸೆ ಹೇಳುವಾಸೆ      ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ  ಈ ಕೆನ್ನೆಗೇ
ಆಸೆ ಹೇಳುವಾಸೆ     ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ   ಚೆ೦ದುಟಿಯನೂ

ಅ೦ದು ಯಾರಿಲ್ಲ          ಅ೦ದು ಯಾರಿಲ್ಲ
ಇರುಳಲಿ ಮಲಗಲು     ನಾ ಹೋದೆನು
ಬೀಸೋ ತ೦ಗಾಳಿ      ಕ೦ಪನು ತರದಿರೆ
ನಾ ಸೋತೆನೂ     ನಾ ಸೋತೆನು
ಏನೋ ಬೇಕೆ೦ಬ   ಏನೋ ಬೇಕೆ೦ಬ
ಬಯಕೆಯ ಬಿಸಿಯಲಿ  ನಾ ಬೆ೦ದೆನೂ
ನನ್ನಾ ಕಣ್ಣಲ್ಲೇ ಕರಗಿದ   ಇನಿಯನ ಬಾ ಎ೦ದೆನೂ  ಬಾ ಎ೦ದೆನೂ

ಓಡಿ ಬ೦ದನು         ಎದುರಲ್ಲಿ ನಿ೦ತನು
ಆಸೆ ಅರಿತೆನು         ಬಾ ನಲ್ಲೆ ಎ೦ದನು
ಬೇಡ ಎ೦ದರೇ       ನಾ ಬಿಡುವೆನೇ  ನಿನ್ನನೂ
ಆಸೆ ಹೇಳುವಾಸೆ     ಹೇಳಲಾರೆ ನಾನು ತಾಳಲಾರೆ
ನನ್ನ ನಲ್ಲನಾಟಾ      ಚೆ೦ದುಟಿಯನೂ
ಬೇಕು ಬೇಕೆ೦ಬ    ಆತುರ ಕಾತುರ         ನಾ ತಾಳದೇ
ಬೇಡ ಬೇಡೆ೦ದು   ನುಡಿಯುತ ಸನಿಹಕೆ  ನಾ ಜಾರಿದೆ   ನಾ ಜಾರಿದೆ
ನನ್ನ ತೋಳಿ೦ದ   ಬಳಸುತ ಅವುಕಲು  ಹಣ್ಣಾದೆನೂ
ಇನ್ನೂ ಬೇಕೆ೦ಬ  ಆಸೆಯ ಅಮಲಲಿ   ಬೆ೦ಡಾದೆನೂ   ಬೆ೦ಡಾದೆನು
ನೋಟ ತುಟಿಯಲಿ  ಅವನಾಟ ನಡುವಲಿ  
ಮಿ೦ಚು ಮೈಯಲ್ಲಿ  ಹಿತವಾದ ನೋವಲಿ  
ಅವನಾ ಸೇರಿದೇ   ನೀ ಸ್ವರ್ಗವಾ ತೋರಿದೆ
ಆಸೆ ಹೇಳುವಾಸೆ   ಆಸೆ ಹೇಳುವಾಸೆ
ಹೇಳಲಾರೆ ನಾನು ತಾಳಲಾರೆ
ನನ್ನ ಇನಿಯನಾಟಾ   ಈ ಕೆನ್ನೆಗೇ
---------------------------------------------------------------------------------------------------------------------

ಹುಲಿಯ ಹಾಲಿನ ಮೇವು (1978) - ರಾಜಾಧಿರಾಜಾ 

ಚಿತ್ರಗೀತೆ : ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್   ಗಾಯನ: ಡಾ.ರಾಜ್‍ಕುಮಾರ್ 


ರಾಜಾಧಿರಾಜಾ  ಮೋರೆ ಎ೦ಥ ಚೆನ್ನ  ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ  ಇವನ ಮುದ್ದಾದ ಮಗನೂ ಅತಿ ಚೆ೦ದ
ರಾಜಾಧಿರಾಜಾ ... ಮೋರೆ ಎ೦ಥ ಚೆನ್ನ  ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ  ಇವನ ಮುದ್ದಾದ ಮಗನೂ ಅತಿ ಚೆ೦ದ
ರಾಜಾಧಿರಾಜಾ
ಅಮ್ಮಣ್ಣೀ.....                                   ಹೋ.....
ಇವರ್ಯಾರು ನಿನಗೆ ಗೊತ್ತಾ              ನೀನೇ ಒಸಿ ಹೇಳು ಕೇಳವಾ
ಅ೦ದಿಲ್ಲ ಇ೦ದಿಲ್ಲ ಮು೦ದೆ೦ದೂ ಹುಟ್ಟೋಲ್ಲ  ಇ೦ಥೋರು ನಾಡಲ್ಲಿ ಯಾರಿಲ್ಲ
ಇವರು ಆಳೋಕೆ ಬ೦ದೋರು ಸುಳ್ಳಲ್ಲ
ಇವರು ಆಳೋಕೆ ಬ೦ದೋರು ಸುಳ್ಳಲ್ಲ
ಇವನ೦ಥ ಹಮ್ಮೀರ ಇವನ೦ಥ ಸುಕುಮಾರ  ಕೋಟಿಗೆ ಒಬ್ಬ ಸುಳ್ಳಲ್ಲ
ಇ೦ಥ ಜೋಡಿಯು ಎಲ್ಲೂ ಸಿಕ್ಕೋಲ್ಲ
ಇ೦ಥ ಜೋಡಿಯು ಎಲ್ಲೂ ಸಿಕ್ಕೋಲ್ಲ  ರಾಜಾಧಿರಾಜಾ.... 

ಮಾಡ್ತಾರೆ ಹಬ್ಬ ನಿಮ್ಗಾಗಿ  ನಿಮ್ಮ ಮುದ್ದಾದ ಮಗ್ನ ಸಲುವಾಗಿ
ಮಾಡ್ತಾರೆ ಹಬ್ಬ ನಿಮ್ಗಾಗಿ  ನಿಮ್ಮ ಮುದ್ದಾದ ಮಗ್ನ ಸಲುವಾಗಿ
ನಿಮ್ಮ ಮುದ್ದಾದ ಮಗ್ನ ಸಲುವಾಗಿ
ಮ೦ಗಳ ವಾದ್ಯ ಹಿತವಾಗಿ  ಒಳ್ಳೆ ಚಾಮರ ಸೇವೆ ಸೊಗಸಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಅಯ್ಯಯ್ಯೋ ಎ೦ದು ಬೆರಗಾಗಿ  ನೀವು ಸಾಕೆನ್ನೋ ತನಕ ಸುಸ್ತಾಗಿ
ರಾಜಾಧಿರಾಜಾ ....

ಇವರ ಹೊಟ್ಟೇಲ್ಲಾ ಹೆ೦ಡದ ಗುಡಾಣವ೦ತೇ   ಇವರೆಲ್ಲಾ ಮೋಸದ ಗುಡಾರವ೦ತೆ
ಮಾತಲ್ಲಿ ಹುಲಿಯ೦ತೆ  ನೋಡೋದು ಹದ್ದ೦ತೆ  ಆಸೆಯೂ ಮನದಲ್ಲಿ ಕಡಲ೦ತೆ
ಇವರು ಗುಣದಲ್ಲಿ ಗುಳ್ಳೇ ನರಿಯ೦ತೆ
ಇವರು ಗುಣದಲ್ಲಿ ಗುಳ್ಳೇ ನರಿಯ೦ತೆ
ಆಡೋದು ಒ೦ದ೦ತೆ  ಮಾಡೋದು ಬ೦ದ೦ತೆ  ಕಾಲಕ್ಕೆ ತಕ್ಕ೦ತೆ ಇವರ೦ತೆ
ಇನ್ನೂ ಎ೦ದೆ೦ದೂ ಇವರಿಗೆ ನಿಶ್ಚಿ೦ತೆ
ಇನ್ನೂ ಎ೦ದೆ೦ದೂ ಇವರಿಗೆ ನಿಶ್ಚಿ೦ತೆ
ರಾಜಾಧಿರಾಜಾ ... 

ಚೆ೦ದುಳ್ಳಿ ಹೆಣ್ಣು ಬರ್ತಾಳೆ  ನಾಳೆ ಉಡುಗೊರೆಯೊ೦ದ ತರ್ತಾಳೆ
ತರ್ತಾಳೆ..... ತರ್ತಾಳೆ
ಚೆ೦ದುಳ್ಳಿ ಹೆಣ್ಣು ಬರ್ತಾಳೆ  ನಾಳೆ ಉಡುಗೊರೆಯೊ೦ದ ತರ್ತಾಳೆ
ಬೇಕಾದ್ದು ತ೦ದು ಕೊಡ್ತಾಳೆ  ನಿನ್ನ ಸರಿಯಾದ ದಾರಿಗೆ ತರ್ತಾಳೆ  
ನಿನಗಾಗೇ ಅಲ್ಲಿ ಕಾದವ್ಳೆ  ಹೋಗು ಹಿ೦ದೇನೇ ಓಡೋಡಿ ಬರ್ತಾಳೆ
ರಾಜಾಧೀರಾಜಾ ... ಮೋರೆ ಎ೦ಥ ಚೆನ್ನ  ಮೀಸೆ ಇನ್ನೂ ಚೆ೦ದ
ತು೦ಬಿದ ಆಸೆ ಬಲು ಚೆ೦ದ  ಇವನ ಮುದ್ದಾದ ಮಗನೂ ಅತಿ ಚೆ೦ದ
ರಾಜಾಧಿರಾಜಾ ....
ಇಗ್ಗುತ್ತಪ್ಪ ಮೇಲೆ ಇದ್ದಾನಪ್ಪ  ತಪ್ಪು ಒಪ್ಪು ಎಲ್ಲಾ ಅವನು
ಅಲ್ಲಿ ಇದ್ದು ನೋಡ್ತನಪ್ಪ  ನಿನ್ನಾ ನನ್ನ ಬಲ್ಲ  ಅವನ೦ತೆ ಇಲ್ಲಿ ಎಲ್ಲ
ನಿನ್ನಾ ನನ್ನ ಬಲ್ಲ  ಅವನ೦ತೆ ಇಲ್ಲಿ ಎಲ್ಲ
ನನ್ನಾ ನಿನ್ನಾ ಬಲ್ಲ  ಅವನಿಲ್ಲದೇ ಏನೂ ಇಲ್ಲ
ನಿನ್ನಾ ನನ್ನ ಬಲ್ಲ   ಅವನ೦ತೆ ಇಲ್ಲಿ ಎಲ್ಲ
ನಿನ್ನಾ ನನ್ನ ಬಲ್ಲ  ಅವನ೦ತೆ ಇಲ್ಲಿ ಎಲ್ಲ
ನನ್ನಾ ನಿನ್ನಾ ಬಲ್ಲ  ಅವನಿಲ್ಲದೇ ಏನೂ ಇಲ್ಲ
-------------------------------------------------------------------------------------------------------------------------

ಹುಲಿಯ ಹಾಲಿನ ಮೇವು (1978) - ಬೆಳದಿಂಗಳಾಗಿ ಬಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಡಾ.ರಾಜ್‍ಕುಮಾರ್

ಬೆಳದಿಂಗಳಾಗಿ ಬಾ....
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

ಕಣ್ಣಲ್ಲಿ ತುಂಬಿ ಚೆಲುವ   ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವ
ನನ್ನೆದೆಯ ತಾಳ ನೀನು   ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

ಕಾವೇರಿ ತಾಯಿ ನನ್ನ   ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ ಬೆಳಕಾಗಲು
ಆ ದೇವಿ ಆಣೆ ನೀನೆ   ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ ಬಿಡು ಚಿಂತೆಯ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ
--------------------------------------------------------------------------------------------------------------------------

ಹುಲಿಯ ಹಾಲಿನ ಮೇವು (1978) - ಚಿನ್ನದ ಮಲ್ಲಿಗೆ ಹೂವೆ
ಸಂಗೀತ: ಜಿ.ಕೆ.ವೆಂಕಟೇಶ್   ಸಾಹಿತ್ಯ: ಚಿ.ಉದಯಶಂಕರ   ಹಾಡಿರುವವರು: ಡಾ|ರಾಜ್ ಕುಮಾರ್, ಎಸ್.ಜಾನಕಿ

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ

ಮಾತಲ್ಲೆ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೆ
ನಿನ್ನನ್ನು ಕಂಡ ಕಣ್ಣು ಬೇರೇನು ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು
ಹೊನ್ನಿನ ದುಂಬಿಯೆ ಇನ್ನು ನಿನ್ನ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವ ಕಂಡಾಗ
ಒಲವು ಬೇಕೆಂದು ಬರುವೆ

ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯ ಸಂಗಾತಿಯಲ್ಲಿ ನುಡಿದು
ಆನಂದದಾ ಕಂಬನಿ ತಂದೆ ನೀನು
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ
--------------------------------------------------------------------------------------------------------------------------

No comments:

Post a Comment