162. ಸಿಪಾಯಿ (1996)

ಸಿಪಾಯಿ ಚಿತ್ರದ ಹಾಡುಗಳು 
  1. ಚಿರಕಾಲ ಇರಲಿ ಈ ಸ್ನೇಹ ಚಿರಕಾಲ ಇರಲಿ ಈ ಪ್ರೇಮ
  2. ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
  3. ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
  4. ರುಕ್ಕಮ್ಮಾ...ನಾ ... ನೂರು ಊರು ನೋಡಿ ಬ೦ದೆ ರುಕ್ಕಮ್ಮಾ
  5. ಯಾರಿಗೇ ಬೇಕು ಈ ಲೋಕ 
  6. ಓಡೋ ಚಂದಿರ ನಿನಗೆ ಬಾನೇ ಮಂದಿರ 
  7. ಕರಗೋ ಚಂದಿರ ನೀನು ಕರಗೋ ಚಂದಿರ 
  8. ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ 
  9. ನನ್ನ ಕೈ ಹಿಡಿದಾಕೆ ಕೈ ಕೊಸರುವುದ್ಯಾಕೆ ?
  10. ವಂದಿತ ಕಿರಣ ನಾದಸುಧೆಯ ಸ್ವೀಕರಿಸು 
  11. ಯಾರಲೇ ನಿನ್ನ ಮೆಚ್ಚಿದವನು ಯಾರಲೇ 
  12. ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ 
  13. ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ (ದುಃಖ)  
ಸಿಪಾಯಿ (1996) - ಸ್ನೇಹಕ್ಕೆ ಸ್ನೇಹ
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ಹೇ ನಮಸ್ತೆ ಕರುನಾಡಿಗೆ..... 
ಚಿರಕಾಲ ಇರಲಿ ಈ ಸ್ನೇಹ   ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು  ಚಿರಕಾಲ ಇರಲಿ ಈ ನೆನಪು ||೨||
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ ಹಾಡು ಬಾರೊ ಪ್ರೇಮ ಜೀವಿ
ಚಿರಕಾಲ ಇರಲಿ ಈ ಸ್ನೇಹ   ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು  ಚಿರಕಾಲ ಇರಲಿ ಈ ನೆನಪು

ಪಕ್ಕದ ಊರು ನನ್ನೂರು ಹಿಂದೊಮ್ಮೆ ಎರಡು ಒಂದೂರು
ಇಲ್ಲಿನ ಜನರು ನಿನ್ನೋರು ಒಂದಾಗಿ ಇರುವ ಅನ್ನೋರು
ನಿಮ್ಮೂರ ದಾಸಪದ ನಮ್ಮೂರಲ್ಲಿ  ನಿಮ್ಮೂರ ಜಾನಪದ ನಮ್ಮೂರಲ್ಲಿ
ತಿಮ್ಮ ನಿಮ್ಮವನು ರಾಯ ನಮ್ಮವನು ನಮ್ಮ ದೇವರೊಂದೆ
ನಾನು ನಿಮ್ಮವನು ನೀನು ನಮ್ಮವನು ನಮ್ಮ ಆಸೆ ಒಂದೆ
ಸ್ನೇಹ ಜ಼ಿಂದಾಬಾದ್ ಪ್ರೀತಿ ಜ಼ಿಂದಾಬಾದ್

ಸಾವಿರ ವರುಷ ಹಾಯಾಗಿ ಬಾಳಿರಿ ನೀವು ಒಂದಾಗಿ
ನಮ್ಮಯ ಅತಿಥಿ ನೀವಾಗಿ ತುಂಬಿದೆ ಹೃದಯ ತಂಪಾಗಿ
ನಮ್ಮೂರ ಚಂದಿರನೆ ನಿಮ್ಮೂರಲ್ಲಿ ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲಾ ಸ್ನೇಹವೊಂದೆ
ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ ಎಲ್ಲಾ ಪ್ರೀತಿ ಒಂದೆ
--------------------------------------------------------------------------------------------------------------------------

ಸಿಪಾಯಿ (೧೯೯೬) - ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ,  ಹಾಡಿದವರು: ಮನು

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ

ಮಾತು ನಂಬಿಕೊಂಡು ಬಾಳುತಾರೆ ಜೀವಮಾನವೆಲ್ಲ ಕಾಯುತಾರೆ
ಆಗದ ಹೋಗದ ಅಂಜಿಕೆ ಎಂದೂ ಇವರಿಗಿಲ್ಲ
ಚಂದಮಾಮನನ್ನು ಕೂಗುತಾರೆ ಎದೆ ನೋವನೆಲ್ಲ ಹೇಳುತಾರೆ
ಕಾಣದು ಕೇಳದು ಯಾರಿಗು ಇವರ ಚಿಂತೆಯೆಲ್ಲ
ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು ಹುಚ್ಚರಂತೆ ಪ್ರೀತಿಸುತ ಬಾಳುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ

ಬೀಸೊ ಗಾಳಿಯನ್ನು ಮೆಚ್ಚುತಾರೆ ಅಲ್ಲಿ ಗೋಪುರವ ಕಟ್ಟುತಾರೆ
ತೇಲುತ ಕಾಯುವ ಪ್ರೇಮಿಗೆ ಜಾರೊ ಭಯವೆ ಇಲ್ಲ
ಲೋಕ ಪ್ರೀತಿಯನ್ನು ಬೆಂಕಿಯೆಂದರು ಬೆಂಕಿ ಮೇಲೆ ನಿಂತು ಹಾಡುತಾರೆ
ಬೇಯುತ ಬಾಳುವ ವಿರಹಿಗೆ ಸಾಯೊ ಭಯವೆ ಇಲ್ಲ
ನಂಬಿದರೆ ಅಂಧರಂತೆ ನಂಬುವರು ಸೇರಿದರೆ ಜೀವದಂತೆ ಸೇರುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ
ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ, ಎಂದೂ ಹೀಗೆ
----------------------------------------------------------------------------------------------------------------

ಸಿಪಾಯಿ (1996) - ಜಾರಿ ಬಿದ್ದನಮ್ಮಾ
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಕೆ. ಜೆ. ಏಸುದಾಸ 

ಹೆಣ್ಣು : ಜಾರಿ ಬಿದ್ದನಮ್ಮಾ ಸಿಕ್ಕಿಬಿದ್ದನಮ್ಮಾ
          ಜಾರಿ ಬಿದ್ದನಮ್ಮಾ ಸಿಕ್ಕಿಬಿದ್ದನಮ್ಮಾ  ಪ್ರೀತಿ ಮಾಡಿದರೆ ಬೇಡ ಅನ್ನಲಾರೆ
         ಇವನ ರೀತಿ ನಾ ಪ್ರೀತಿ ಮಾಡಲಾರೆ
ಗಂಡು : ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
           ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
           ತ೦ದಾನಾನ ತಾನಾನ ನಾನಾನ ಕೇಳೇ ಚಿನ್ನಾ ಸುವ್ವಾಲಿ ರಾಗಾನ
           ತ೦ದಾನಾನಾ ತಾನಾನ ನಾನಾನ ಕೇಳೆ ರನ್ನಾ ರ೦ಗೋಲಿ ರಾಗಾನ
          ಎಲ್ಲಿದೆ ಹೇಳು ನಿನ್ನ ಗಾಯ ತ೦ದಾನ ಕೇಳಿ ಮ೦ಗಮಾಯ
          ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ
         ಪ್ರೀತೀಲಿ ಸಿಪಾಯಿ ಆಗೋದ ಗವಾಯಿ
         ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ

ಹೆಣ್ಣು : ಆಸೆಯಾಯಿತಮ್ಮ ಮಾತು ಹೋಯಿತಮ್ಮ ಪ್ರೀತಿ ಬ೦ದಿತಮ್ಮ
          ಧೈರ್ಯ ಹೋಯಿತಮ್ಮ ಇ೦ಥ ಹುಡುಗನ ಎಲ್ಲೂ ನೋಡೇ ಇಲ್ಲಾ   
          ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ
ಗಂಡು : ಬ೦ಗಾರದ ಬೊ೦ಬೆ ನನ್ನ ದೇವಿ ನೀನಮ್ಮ
           ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮ
           ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮ
           ತ೦ದನಾನಾ ತಾನಾನ ನಾನಾನ ಬ೦ದೂಕದ ಬಾಯಲ್ಲಿ ಸುವ್ವಾಲಿ 
           ತ೦ದಾನನಾ ಸಿಪಾಯಿ ಮಾತೆಲ್ಲಾ ಕವ್ವಾಲಿ
          ವೈರಿಯ ಇರುವೆ ಅ೦ತ ತಿಳಿ ಸಿ೦ಹದ ಗುಹೆಯಲ್ಲಿ ಇಳಿ
          ಕಿತ್ತೂರ ಚನ್ನಮ್ಮ ನೀನಾಗುತ್ತೀಯಮ್ಮ
         ಒನಕೆ ಓಬವ್ವಾ ನೀನಾಗುತ್ತೀಯಮ್ಮಾ
         ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
------------------------------------------------------------------------------------------------------------------------

ಸಿಪಾಯಿ (1996) -  ರುಕ್ಕಮ್ಮಾ........ನಾ ... ನೂರು ಊರು ನೋಡಿ ಬ೦ದೆ ರುಕ್ಕಮ್ಮಾ
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ರುಕ್ಕಮ್ಮಾ........ನಾ ... ನೂರು ಊರು ನೋಡಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಊರೇ ಊರಮ್ಮಾ|
ರುಕ್ಕಮ್ಮಾ.. ನಾ...  ನೂರು ಮಾತು ಕೇಳಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಮಾತೇ ಮಾತಮ್ಮ
ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ

ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡ ಬಾವುಟ
ತಿರುಗೊ ಭೂಮಿಯಲಿ ಮಿನುಗಿ ತೋರಿಸಲಿ ಚೆಲುವ ಕನ್ನಡ ಭೂಪಟ.... ||ರುಕ್ಕಮ್ಮಾ||
ಮಾತಿನ ಜೊತೆಯಲ್ಲೆ ಗ೦ಧವಿರೋ ಕನ್ನಡ ಕಸ್ತೂರಿ ಎಲ್ಲೂ ಇಲ್ಲಾ
ಊರಿನ ಹೆಸರಲ್ಲೇ ಕರುಣೆಯಿರೋ ಕರುಣೆಯ ಕರುನಾಡು ಎಲ್ಲೂ ಇಲ್ಲಾ
ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ
ರುಕ್ಕಮ್ಮಾ ನಾ ಏಳು ಕೆರೆಯ ನೀರು ಕುಡಿದೆ ರುಕ್ಕಮ್ಮಾ
ಏಳರಲ್ಲೂ ನಮ್ಮ ನೀರೇ ನೀರಮ್ಮಾ
ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ

ಇಲ್ಲಿರೋ ಆನ೦ದ ಎಲ್ಲೂ ಇಲ್ಲಾ ಮೆಚ್ಚಿದ ಹುಡುಗಿ ಇರೋ ಊರೇ ಇದು
ನನ್ನ ಕಣ್ಣಿಗೇನಾದರೂ ನನಗೆ ತಾನೇ ನೋವು
ರುಕ್ಕಮ್ಮಾ ನಾ ನೂರು ತರದ ಹೂವ ನೋಡಿದೆ ರುಕ್ಕಮ್ಮಾ
ನೂರರಲ್ಲೂ ದು೦ಡು ಮಲ್ಲಿಗೆ ಮೊದಲಮ್ಮಾ.....
ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
--------------------------------------------------------------------------------------------------------------------------

ಸಿಪಾಯಿ (1996) - ಯಾರಿಗೇ ಬೇಕೋ ಈ ಲೋಕ 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ್ 

ಯಾರಿಗೇ ಬೇಕೋ ಈ ಲೋಕಾ
ಯಾರಿಗೇ ಬೇಕೋ ಈ ಲೋಕಾ ಮೋಸಕ್ಕೆ ಕೈ ಮುಗಿಬೇಕಾ
ಚಿಂತೆಯು ಇದ್ದರು ನಗಬೇಕಾ ಪ್ರೀತಿಯೇ ಹೋದರೂ ಇರಬೇಕಾ
ಯಾರಿಗೇ ಬೇಕೋ ಈ ಲೋಕಾ
ಯಾರಿಗೇ ಬೇಕೋ ಈ ಲೋಕಾ ಮೋಸಕ್ಕೆ ಕೈ ಮುಗಿಬೇಕಾ
ಚಿಂತೆಯು ಇದ್ದರು ನಗಬೇಕಾ ಪ್ರೀತಿಯೇ ಹೋದರೂ ಇರಬೇಕಾ 
ಯಾರಿಗೇ ಬೇಕೋ ಈ ಲೋಕಾ ಯಾರಿಗೇ ಬೇಕೋ ಈ ಲೋಕಾ

ಮಕ್ಕಳನ್ನೇ ಜೂಜಲ್ಲಿ ಇಡುವಾಗ ನೋಡಿಕೊಂಡು ಇರಬೇಕಾ 
ಯುದ್ಧವನ್ನು ಗೆಲ್ಲೋಕೇ ಬಲ್ಲವನೂ ಕೈ ಕಟ್ಟಿ ಕೂರಬೇಕಾ 
ನಾರಿಯೇ ಕಾಂಚಾಣ ಕೌರವರ ಪಾಲಿಗೇ ಧರ್ಮವೇ ಲಾಂಛನ ಪಾಂಡವರ ಜೂಜಿಗೇ 
ಯಾರಿಗೇ ಬೇಕೋ ಈ ಲೋಕಾ
ಯಾರಿಗೇ ಬೇಕೋ ಈ ಲೋಕಾ ಮೋಸಕ್ಕೆ ಕೈ ಮುಗಿಬೇಕಾ
ಚಿಂತೆಯು ಇದ್ದರು ನಗಬೇಕಾ ಪ್ರೀತಿಯೇ ಹೋದರೂ ಇರಬೇಕಾ 
ಯಾರಿಗೇ ಬೇಕೋ ಈ ಲೋಕಾ ಯಾರಿಗೇ ಬೇಕೋ ಈ ಲೋಕಾ

ನರಿಗಳು ನ್ಯಾಯನ ಹೇಳುವಾಗ ಕಿವಿಗೊಟ್ಟು ಕೇಳಬೇಕಾ
ಮೊಸಳೆಯು ಕಣ್ಣೀರು ಇಡುವಾಗ ಕೂಡಿಕೊಂಡು ಅಳಬೇಕಾ
ತಡೆದನು ಈ ದಿನಾ ಮನಸಿನ ನಾಯಕ ಬಿಟ್ಟರೇ ಎಲ್ಲರ ಸೀಳುವಾ ಸೈನಿಕ
ಯಾರಿಗೇ ಬೇಕೋ ಈ ಲೋಕಾ
ಯಾರಿಗೇ ಬೇಕೋ ಈ ಲೋಕಾ ಮೋಸಕ್ಕೆ ಕೈ ಮುಗಿಬೇಕಾ
ಚಿಂತೆಯು ಇದ್ದರು ನಗಬೇಕಾ ಪ್ರೀತಿಯೇ ಹೋದರೂ ಇರಬೇಕಾ 
ಯಾರಿಗೇ ಬೇಕೋ ಈ ಲೋಕಾ ಯಾರಿಗೇ ಬೇಕೋ ಈ ಲೋಕಾ 
--------------------------------------------------------------------------------------------------------------------------

ಸಿಪಾಯಿ (1996) - ಓಡೋ ಚಂದಿರ ನಿನಗೆ ಬಾನೆ ಮಂದಿರ 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಎಲ್.ಏನ್.ಶಾಸ್ತ್ರಿ 

ಓಡೋ ಚಂದಿರ ನಿನಗೆ ಬಾನೆ ಮಂದಿರ
ಗೋಲವಿಲ್ಲ ಗುಮ್ಮಟವಿಲ್ಲ ಬಾಗಿಲಿಲ್ಲ ಬೀಗವು ಇಲ್ಲ
ಓಡೋ ಚಂದಿರ ನಿನಗೆ ಬಾನೆ ಮಂದಿರ
ಸರಿಗಮ ಪದನಿಸ ಗರಿಸನಿ ದಪದನಿ ಗರಿಸ ಗರಿಸ ನಿದಪಮಗರಿಸ 
ಪಮಗರಿಸ ಪಮಗರಿಸ ಪಮಗರಿಸ 
--------------------------------------------------------------------------------------------------------------------------

ಸಿಪಾಯಿ (1996) - ಕರಗೋ ಚಂದಿರ ನೀನು ಕರಗೋ ಚಂದಿರ 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ,  ಗಾಯನ : ಎಲ್.ಏನ್.ಶಾಸ್ತ್ರಿ 

ಕರಗೋ ಚಂದಿರ ನೀನು ಕರಗೋ ಚಂದಿರ
ನಿನಗೂ ಸೂರ್ಯನಿಗೂ ನಡುವೇ ಭೂಮಿ ಅಂತರ
ಆದಿ ಇಲ್ಲ ಅಂತ್ಯ ಇಲ್ಲ ದ್ವಾರವಿಲ್ಲ ಛಾವಣಿಯಿಲ್ಲ
ಕರಗೋ ಚಂದಿರ ನೀನು ಕರಗೋ ಚಂದಿರ
ಕರಗೋ ಚಂದಿರ ನೀನು ಕರಗೋ ಚಂದಿರ
--------------------------------------------------------------------------------------------------------------------------

ಸಿಪಾಯಿ (1996) - ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ,  ಗಾಯನ : ಎಸ್.ಜಾನಕೀ 

ಓ.. ಮೇಘರಾಜನೇ.. ನುಡಿ ನುಡಿ..
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವ ಕಳೆಯ ನಮ್ಮ ಊರ ಬೆಳೆಗೆ
ಓ.. ಜೀವ ಗಂಗೆಯೇ ಮಿಂದೇ ಮಿಂದೇ ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವ ಕಳೆಯ ನಮ್ಮ ಊರ ಬೆಳೆಗೆ

ಮಳೆರಾಯ ನೀನು ಪನ್ನೀರ ಚೆಲ್ಲಿ ಕರೆದೆ ಧರೆಯಾ ಸಂತೋಷದಿಂದ ಧರಣಿ ಈ ತೆರೆದ ನಿನ್ನ ಹೃದಯ 
ಮೈಯೆಲ್ಲ ರೋಮಾಂಚನ ಜಲದಾ ನೆಲದಾಲಿಂಗನಾ ಬಿಡಿಸದಾ ಬಂಧವೇ 
ನಿಮ್ಮದು ಬೆರೆಯುವಾ ಪಂದ್ಯವೇ ನೀವಿಬ್ಬರು ಬೆರೆತರೆ ಸುತ್ತಲೂ ಮಾಗಿದ ಮಣ್ಣಿನ ಗಂಧವೇ 
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವ ಕಳೆಯ ನಮ್ಮ ಊರ ಬೆಳೆಗೆ 

ಯಾರ್ಯಾರ ಊರ ಮೋಡ ಅದು ಇಲ್ಲೋ ಅಲ್ಲೋ ಎಲ್ಲೋ 
ಮಳೆ ಹಂಚೋ ಮುಗಿಲ ಎದೆಗೆ ಪದಕಾ ಕಾಮನ ಬಿಲ್ಲೋ 
ಏನೇನು ಆಶ್ಚರ್ಯವೋ ಏನೆಲ್ಲಾ ಆನಂದವೋ 
ಬಿಂದುವೇ ಸಿಂಧೂವೋ ಇಲ್ಲವೇ ಸಿಂಧುವೇ ಬಿಂದುವೋ 
ಈ ಮಾಯದ ಮಳೆಯಲಿ ಎಲ್ಲವು ವಿಂದವೋ ದೇವರೇ ಎಂದವೋ 
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವ ಕಳೆಯ ನಮ್ಮ ಊರ ಬೆಳೆಗೆ
ಓ.. ಜೀವ ಗಂಗೆಯೇ ಮಿಂದೇ ಮಿಂದೇ ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವ ಕಳೆಯ ನಮ್ಮ ಊರ ಬೆಳೆಗೆ
---------------------------------------------------------------------------------------

ಸಿಪಾಯಿ (1996) - ನನ್ನ ಕೈ ಹಿಡಿದಾಕೆ ಕೈ ಕೊಸರುವುದ್ಯಾಕೆ ?
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಎಸ್.ಜಾನಕೀ, ಕೆ.ಜೆ.ಏಸುದಾಸ್  

ಗಂಡು : ನನ್ನ ಕೈ ಹಿಡಿದಾಕೆ ಕೈ ಕೊಸರುವುದ್ಯಾಕೆ ?
            ನನ್ನ ಮೋಹಿಸಿದಾಕೆ ಮೈ ನಡುಗುವುದ್ಯಾಕೆ
ಹೆಣ್ಣು : ಅವರ ನೋಡಿದರೆ ಆಸೆಯು ಯಾಕೆ
          ಆಸೆ ತೋರಿಸಲು ಅಂಜಿಕೆ ಯಾಕೆ
          ಅವರ ಕಣ್ಣಿನಲ್ಲಿ ದೇವರ ಕಂಡು
          ಸೇವೆಸಲ್ಲಿಸಲು ಹೆದರಿಕೆ ಯಾಕೆ
ಕೋರಸ್ : ಓಓಓಓಓಓ ... ಓಓಓಓಓಓ ... 

ಗಂಡು : ಸರಿಯೇ.... ಸರಿಯೇ.... ಮೊದಲಿರುಳು ಅಳು ಸರಿಯೇ...
ಹೆಣ್ಣು : ನಿಜವೇ... ನಿಜವೇ....ಮೊದಲಿರುಳು ಭಯ ನಿಜವೇ...
ಗಂಡು : ಈ ಹುಣ್ಣಿಮೆಯ ಹೂ ಮಂಚದಲಿ ಮನ ಮರುಗುವುದ್ಯಾಕೆ....
ಹೆಣ್ಣು : ಸರಿರಾತ್ರಿಯಲಿ ಭೀತಿಯಲಿ ಪ್ರೀತಿಸಬೇಕೆ
          ಈ ಪ್ರೀತಿಯು ಯಾಕೆ ಭಯ ಭೀತಿಯು ಯಾಕೆ
          ಈ ಸುಂದರ ಮೊಗವ... ಕೈ ಸೋಕದು ಯಾಕೆ
ಗಂಡು : ಕಣ್ಣು ಮುಚ್ಚಿದರೆ ಕಾಡುವಳ್ಯಾಕೆ ರೆಪ್ಪೆ ಬಿಚ್ಚಿದರೆ ಓಡುವಳ್ಯಾಕೆ
            ತುಂಬಿ ತುಳುಕುತಿರೋ ಅಂದವನೆಲ್ಲಾ ನಾನು ಬೇಡಿದರೆ ನೀಡಳು ಯಾಕೆ
ಕೋರಸ್ : ಓಓ ಆಆಆಅ ಓಓ ಆಆಆಅ 

ಗಂಡು : ಯಾಕೇ.... ಯಾಕೇ....  ಎಣಿಸುವಳು ನನ್ನಾಕೆ
ಹೆಣ್ಣು : ಹೂವು ಮುಳ್ಳು ಹೀಗೇನೆ ಇರಬೇಕೆ
ಗಂಡು : ಎದೆ ಅನುಭವಿಸೋ ನನ್ನ ನೋವುಗಳ ಯಾಕೆ ತಿಳಿಯಳು ಈಕೆ
ಹೆಣ್ಣು : ತುದಿ ನಾಲಿಗೆಯ ಮಾತುಗಳು ಹೊರಬರದ್ಯಾಕೆ
ಗಂಡು : ನನ್ನ ಪೂಜಿಸುವಾಕೆ ನನ್ನ ಪ್ರೀತಿಸಳ್ಯಾಕೆ ?
            ಅನ್ನ ತಿನ್ನಿಸುವಾಕೆ.... ಮುತ್ತು ತಿನಿಸಳು ಯಾಕೆ
ಹೆಣ್ಣು : ಇವರ ಒಳ್ಳೆತನ ಹಿಡಿಸುವುದ್ಯಾಕೆ? 
          ಇವರ ಒರಟುತನ ಹಿಡಿಸದು ಯಾಕೆ
          ಮನಸು ಮಾಡಿದರು ಮೌನವು ಯಾಕೆ
         ಇವರ ಬಿಟ್ಟಿರಲು ಆಗದು ಯಾಕೆ
--------------------------------------------------------------------------------------------------------------------------

ಸಿಪಾಯಿ (1996) - ವಂದಿತ ಕಿರಣ ನಾದಸುಧೆಯ ಸ್ವೀಕರಿಸು ಸುಂಧರೆಯನು  
ಸಂಗೀತ ಮತ್ತು ಸಾಹಿತ್ಯ, ಗಾಯನ : ಎಲ್.ಏನ್.ಶಾಸ್ತ್ರಿ, ಕೋರಸ್ 

ವಂದಿತ ಕಿರಣ ನಾದಸುಧೆಯ ಸ್ವೀಕರಿಸು ಸುಂಧರೆಯನು ಸಿಂಗರಿಸು
ಸ ಸ ಸ ಸ ಸ ಸ...   ಸಗಪದಸನಿದಪದ
ನೀ ನೀ ನೀ ನೀ ನೀ ನೀ .. ದನಿಪದಗಪಗಗಪ
ಗರಿಸನಿಸರಿಗಪದನಿಪ  ಸನಿದಪಗಪದನಿಸರಿಸ
ನೀ ನೀ ನೀ ನೀ ನೀ ನೀ .... ಗ ಗ ಗ ಗ ಗ ಗ
ಸ ಸ ಸ ಸ ಸ ಸ ...       ನೀ ನೀ ನೀ ನೀ ನೀ ನೀ ...
ರೀ.. ಸ.. ನಿಸಗರಿರೀಸ...  ನಿಸಗರಿರೀಸ
--------------------------------------------------------------------------------------------------------------------------

ಸಿಪಾಯಿ (1996) - ಯಾರಲೇ ನಿನ್ನ ಮೆಚ್ಚಿದವನು 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಮನು, ಎಸ್.ಜಾನಕೀ, ಕೋರಸ್  

ಕೋರಸ್ : ಯಾರಲೇ ನಿನ್ನ ಮೆಚ್ಚಿದವನೂ ... ಯಾರಲೇ ಕೆನ್ನೇ ಕಚ್ಚುವವನೂ
               ಯಾರಲೇ ಮಲ್ಲೆ ಮೂಡಿಸುವವನೂ.. ಯಾರಲೇ ಸೆರಗ ಎಳೆಯುವವನೂ
ಗಂಡು : ಹೇಳೇ ಹುಡುಗೀ ಹೇಳೇ ಬೆಡಗಿ ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ  ನಿನ್ನ ಗಂಡ ತಾನೇ
ಹೆಣ್ಣು : ಇಲ್ಲಾ ಇಲ್ಲಾ ಆಗೋದಿಲ್ಲಾ ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ ಸಲಿಗೆ ಚೆಂದ ಅಲ್ಲಾ

ಗಂಡು : ಜೀವನ ಬೋಂಬೆ ನಾನಮ್ಮಾ ಭೀಮನೆಂಬ ಮಣ್ಣು ಬೋಂಬೆ ಯಾಕಮ್ಮಾ
ಹೆಣ್ಣು : ಬೋಂಬೆ ಬೇಕು ಪೂಜೆಗೆ ಪೂಜೆ ಬೇಕು ಮನಸಿಗೆ
          ಮನಸು ಬೇಕು ಪ್ರೀತಿಗೆ ಪ್ರೀತಿ ಬೇಕು ಹೆಣ್ಣಿಗೇ
ಕೋರಸ್  : ಯಾರಲೇ ನೀನು ಮೆಚ್ಚಿದವನೂ ಯಾರಲೇ ತಾಳಿ ಕಟ್ಟುವವನೂ
                 ಯಾರಲೇ ನಿನ್ನ ಕಾಡುವವನೂ ಯಾರಲೇ ನಿನ್ನ ಕುಡುವವನೂ
ಗಂಡು : ಹೇಳೇ ಹುಡುಗಿ ಹೇಳೇ ಬೆಡಗಿ ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ ನಿನ್ನ ಗಂಡ ನಾನೇ
ಹೆಣ್ಣು : ಇಲ್ಲಾ ಇಲ್ಲಾ ಆಗೋದಿಲ್ಲಾ ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ ಸಲಿಗೆ ಚೆಂದ ಅಲ್ಲಾ

ಗಂಡು : ಸಾವಿರ ಜನ್ಮ ಬರಲಮ್ಮಾ ನನ್ನ ಪ್ರೀತಿ ನನ್ನ ಪ್ರಾಣ ನೀನಗಮ್ಮಾ 
ಹೆಣ್ಣು : ಚಂದಮಾಮ ಅಲ್ಲಿದೆ ನೈದಿಲೆ ಹೂ ಇಲ್ಲಿದೆ ಚಂದ್ರನೇ ಇಲ್ಲಿ ಬಂದರೆ ಹೂವಿಗೆ ಭಯವಾಗಿದೆ 
ಕೋರಸ್ : ಯಾರಲೇ ನಿನ್ನ ಮುದ್ದು ಗಂಡ ಯಾರಲೇ ನಿನ್ನ ತುಂಟ ಗಂಡ 
                ಯಾರಲೇ ನಿನ್ನ ವೀರ ಗಂಡ ಯಾರಲೇ ನಿನ್ನ ಧೀರ ಗಂಡ 
ಗಂಡು : ಹೇಳೇ ಹುಡುಗಿ ಹೇಳೇ ಬೆಡಗಿ ವೀರ ಧೀರ ಜೋಕುಮಾರ ನಾನು ತಾನೇ ನಿನ್ನ ಗಂಡ ನಾನೇ 
ಹೆಣ್ಣು : ಇಲ್ಲಾ ಇಲ್ಲಾ ಆಗೋದಿಲ್ಲಾ ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ ಸಲಿಗೆ ಚೆಂದ ಅಲ್ಲಾ
--------------------------------------------------------------------------------------------------------------------------

ಸಿಪಾಯಿ (1996) - ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಎಸ್.ಪಿ.ಬಿ 
 
ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ ನಾನೆಂದೂ ನಿನ್ನ ಬಿಡೇನೇ
ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ ನಾನೆಂದೂ ನಿನ್ನ ಬಿಡೇನೇ
ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ 

ಚೆಂದುಳ್ಳಿ ಚೆಲುವೆಯ ಅಂದಾನ ನೋಡಿದೆ ಕೆನ್ನೇಲಿ ಗಾಯನ ಮಾಡಿದೇ 
ಊರಲ್ಲಿ ಯಾರನು ಕಣ್ಣೆತ್ತಿ ನೋಡದಾ ಹೂವನ್ನ ಹಗಲಲ್ಲೇ ಮುಟ್ಟಿದೆ 
ಲೇ ಲೇ ಲೇ ನಿಲ್ಲೆಲೇ... ನೋಡೋದು ಆಹ್ ಸಾಕೆಲೇ 
ನಿನಗೀಗ ಸವ್ವಾಲೆ ಅರಿತೀನಿ ಮಸಾಲೇ 
ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ ನಾನೆಂದೂ ನಿನ್ನ ಬಿಡೇನೇ
ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ 

ಕಾಲಿಂದ ತಿನ್ನಲಾ ಕೈಯಿಂದ ತಿನ್ನಲಾ  ಮುದ್ದಾಡಿ ಮೂತಿನಾ ತಿನ್ನಲಾ 
ಲಲಾಲಾಲಲಲಲಲ ಲಲಾಲಾಲಲಲಲಲ  ಹಾಯಾಗಿ ನಾನೀಗ ತೇಗಲಾ 
ಪ್ರೀತಿಗೇ ಪ್ರಣಾಮ ನಾನಿದರ ಗುಲಾಮ ಒಲಿದಾಗ ಮಿಠಾಯಿ ಸಿಡಿದಾಗ ಸಿಪಾಯಿ 
ಕೊಕ್ಕೋ ಕೋಳಿಯೇ ಕೇಳೇ ಕೋಳಿಯೇ 
ಕೊಕ್ಕೋ ಕೋಳಿಯೇ ಕೇಳೇ ಕೋಳಿಯೇ ಮುದ್ದು ಕೋಳಿಯೇ ಪ್ರಾಣ ಕೋಳಿಯೇ ನಾನೆಂದು ನಿನ್ನ ಬಿಡೇನೇ
ಕೊಕ್ಕೋ ಕೋಳಿಯೇ ಪ್ರಿಯ ಕೋಳಿಯೇ
ಕೊಕ್ಕೋ ಕೋಳಿಯೇ ಪ್ರೇಮ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ ನಾನೆಂದೂ ನಿನ್ನ ಬಿಡೇನೇ
--------------------------------------------------------------------------------------------------------------------------

ಸಿಪಾಯಿ (1996) - ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮಾ 
ಸಂಗೀತ ಮತ್ತು ಸಾಹಿತ್ಯ, : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ್ 

ಓಓ... ಓಓ.. 
ಓ ಓ ಓ  ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮಾ 
ಸಾವಿಗೇ ಸೂಜಿ ಮದ್ದು ಏನು ಹೇಳಮ್ಮಾ 
ಓ ಓ ಓ  ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮಾ 
ಸಾವಿಗೇ ಸೂಜಿ ಮದ್ದು ಏನು ಹೇಳಮ್ಮಾ 

ಕಂಗಳು ಕಂಗಳು ಸೇರಿದೆ ಕಣ್ಣಿನ ಜ್ಯೋತಿಯೇ ಆರಿದೇ ... 
ಮುಚ್ಚಿದ ಮನವ ಬಿಡಿಸಿದೇ ..   ಕಾಯದೇ ಕಣ್ಣನೇ ಮುಚ್ಚಿದೇ ...
ತಂದನಾನಾ ತಾನಾನ ರಾನಾನ  ತಂದನಾನಾ ತಾನಾನ ರಾನಾನ 
ಎಲ್ಲಿದೇ ಹೇಳು ನಿನ್ನ ಪ್ರಾಣ ತಂದಾನ  ಕೇಳಿ ಯಾಕೇ ಮೌನ... ಓಓ ಓಓ 
ಇದು ನ್ಯಾಯವೇನಮ್ಮಾ ಇದು ಪ್ರೀತಿಯೇನಮ್ಮಾ.. 
ಸೈ ನೋಡಿ ಬಂದಾಗ ಭೂಕಂಪವೇನಮ್ಮಾ 
ಓ ಓ ಓ  ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮಾ 
ಸಾವಿಗೇ ಸೂಜಿ ಮದ್ದು ಏನು ಹೇಳಮ್ಮಾ 
ಓ ಓ ಓ  ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮಾ 
ಸಾವಿಗೇ ಸೂಜಿ ಮದ್ದು ಏನು ಹೇಳಮ್ಮಾ ... 

ಓಓಓಓಓ ಓ ಓ ಓ ಓಓಓಓಓ ಓ ಓ ಓ 
ಕುಸುಮಾ ಕುಂಕುಮಾ ಪ್ರೇಮ ಬೆಂಕಿಗೇ ಬೀಳಲು ಈಕೆಗೇ .. 
ಯಾರಿಗೂ ಇಷ್ಟವೇ ಇಲ್ಲವೇ....  ಹೋಗುವೇ ನಿನ್ನದು ತಪ್ಪಹೆಜ್ಜೇ ... 
ದೇವರಿಗೇ ... ದಯವಿಲ್ಲ ದಯವಿಲ್ಲ 
ಸಾವೇದೂರು..... ಜಯವಿಲ್ಲ ಜಯವಿಲ್ಲ...  ಗಾಳಿ ಎದೆಯಲ್ಲೂ ಜೋರೂ  
ಮೋಡದ ಕಣ್ಣಿನಲ್ಲೂ ನೀರೂ...  ಓ ಓ ಓ...  ಓ ಓ ಓ 
ನೀರಲ್ಲೂ ನೀನಮ್ಮಾ... ಗಾಳಿಲೂ ನೀನಮ್ಮಾ.. 
ಮಣ್ಣಲ್ಲೂ ನೀನಮ್ಮಾ ... ಎಲ್ಲೆಲ್ಲೂ ನೀನಮ್ಮಾ 
ಬಂಗಾರದ ಬೊಂಬೆ ಹೀಗೇ ಹೋಗಬಾರದೂ 
ನನ್ನಂತೇ ಮುಂದೆ ಯಾರೂ ಆಗಬಾರದೂ 
ಪ್ರೀತಿಯ ಮುಚ್ಚಿಕೊಂಡು ಬಾಳಬಾರದೂ 
ಪ್ರೀತಿಯ ಹೇಳೋದಕ್ಕೇ ಕಾಯಬಾರದೂ ... 
ಬಂಗಾರದ ಬೊಂಬೆ ಹೀಗೇ ಹೋಗಬಾರದೂ 
ನನ್ನಂತೇ ಮುಂದೆ ಯಾರೂ ಆಗಬಾರದೂ 
-------------------------------------------------------------------------------------------------------------------------

No comments:

Post a Comment