158. ನವಜೀವನ (1964)

ನವಜೀವನ ಚಲನಚಿತ್ರದ ಹಾಡುಗಳು 
  1. ಲೀಲಾಮಯಹೇ ದೇವ ನೀ ತೋರು ದಯಾ ಭಾವ
  2. ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ
  3. ಕರೆಯೇ ಕೋಗಿಲೆ ಮಾಧವನಾ ಕಾತರ ತುಂಬಿದಾ ಈ ನಯನಾ 
  4. ಪ್ರೀತಿ ಹೊನಲೇ ಹಾಯಾಗಿರೆಲೇ
  5. ಯೋ ಯೋ ಯಾಮ್ ಯಾಮ್ ತನು ಭಕ್ತಹಃ 
  6. ಭಾಮ ಭಾಮ ನಾ ಅರಿಯೇ ಮನದ ಮರ್ಮಾ 
  7. ವಾರೇ ನೋಟ ನೋಡಿ ಮಳ್ಳ 
ನವಜೀವನ (1964) ಲೀಲಾಮಯ ಹೇ ದೇವ ನೀ ತೋರು ದಯಾ ಭಾವ
ಸಾಹಿತ್ಯ : ಬಸವಣ್ಣನವರು ಮತ್ತು ಸೋರಟ್ ಅಶ್ವಥ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಪಿ. ಸುಶೀಲ

ದಯೆಯಿಲ್ಲದಾ ಧರ್ಮವು ಆವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲೀ
ದಯವೇ ಧರ್ಮದ ಮೂಲವಯ್ಯಾ....ದಯವೇ ಧರ್ಮದ ಮೂಲವಯ್ಯಾ... ಕೂಡಲ ಸಂಗಮದೇವ....

ಲೀಲಾಮಯಹೇ ದೇವ ನೀ ತೋರು ದಯಾ ಭಾವ ಗುರಿಕಾಣದಿದೆ ಜೀವ ನೆರವಾಗೆಲೊ ದೇವ
ಲೀಲಾಮಯಹೇ ದೇವ ನೀ ತೋರು ದಯಾ ಭಾವ ಗುರಿಕಾಣದಿದೆ ಜೀವ ನೆರವಾಗೆಲೊ ದೇವ

ಸರಿದಾರಿ ಜಗಕೆ ಕಾಣದಿಂತು ಪಯಣ ಸಾಗಿದೆ...
ಸುಖಶೋಕ ಪಥದೆ ಬಾಳ ಜಾತ್ರೆ ಬರಿದೆ ಕೂಡಿದೆ ಎದುರಾಗೆ ಕಾಳರಾತ್ರೆ ಬೆಳಕೀಯಬಾರದೇ......
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೇ......
ಲೀಲಾಮಯಹೇ ದೇವ ನೀ ತೋರು ದಯಾ ಭಾವ ಗುರಿಕಾಣದಿದೆ ಜೀವ ನೆರವಾಗೆಲೊ ದೇವ

ಕುರುಡಂಗೆ ನಿರತ ಊರುಗೋಲೆ ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ ನೀನೆ ಆಗಿರೇ ಕರುಣಾಳು ಮೌನವೇಕೆ ಮೊರೆ ಕೇಳಬಾರದೆ..
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ.....
ಲೀಲಾಮಯಹೇ ದೇವ ನೀ ತೋರು ದಯಾ ಭಾವ ಗುರಿಕಾಣದಿದೆ ಜೀವ ನೆರವಾಗೆಲೊ ದೇವ
--------------------------------------------------------------------------------------------------------------------------

ನವಜೀವನ (1964) - ಇದೇ ಇದೇ ಸವಿ ಬಾಳ ದಿನ.....
ಸಾಹಿತ್ಯ : ಸೋರಟ್ ಅಶ್ವಥ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಪಿ. ಬಿ. ಶ್ರೀನಿವಾಸ್/ಎಸ್. ಜಾನಕಿ

ಹೆಣ್ಣು : ಓಹೋ....ಓಹೊಹೋ...ಓಹೋಹೋ.....
ಗಂಡು  : ಓಹೋ....ಓಹೊಹೋ...ಓಹೋಹೋ.....
ಹೆಣ್ಣು : ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ
          ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ
         ಮೈಮರೆಸುವಾ ಮನ ತಣಿಸುವಾ ಪ್ರೇಮ ಮಿಲನದ ದಿನಾ....ಓಹೊ...
ಗಂಡು : ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ
            ಮೈಮರೆಸುವಾ ಮನ ತಣಿಸುವಾ ಪ್ರೇಮ ಮಿಲನದ ದಿನಾ....ಓಹೊ...
           ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ

ಗಂಡು : ಅನುರಾಗದ ಬಾಳಿನ ಗಾನ ನೆರೆಹೊಮ್ಮಿ ಹಾಡೆ ಮನ ವೀಣಾ
ಹೆಣ್ಣು : ಅಹಾಹಾ.....ಓಹೋಹೊ.....ಅಹಾಹಾ.....
          ನವಜೀವನ ತುಂಬಿದ ತ್ರಾಣ ನಮ್ಮ ಪ್ರೇಮವಿಂದೇ ಸವಿಪೂರ್ಣ
ಗಂಡು : ನಾವಾಡಿ ಪಾಡಿ ಮನಸಾರೆ ನೋಡುವಾ
ಹೆಣ್ಣು : ಸದಾ ನಲಿವ ಸದನ ಆಹಾ....................
          ಇದೇ ಇದೇ ಸವಿ ಬಾಳ ದಿನ
ಗಂಡು : ಕಾದು ಕಂಡಿತೇ ಮಧುರ ಮನ
ಇಬ್ಬರು : ಮೈಮರೆಸುವಾ ಮನ ತಣಿಸುವಾ ಪ್ರೇಮ ಮಿಲನದ ದಿನಾ....ಓಹೊ...
            ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ

ಹೆಣ್ಣು : ಒಲವೊಂದಿರೆ ನಮ್ಮಯ ಮುಂದೆ ತನುಮೆರೆವ ಒಡವೆ ತೃಣವೆಂದೇ
ಗಂಡು : ಅಹಹಾ....ಓಹೋಹೊ.....ಅಹಹಾ...
           ಮನಹೊಂದಿರೆ ಸ್ವರ್ಗವು ನಮದೇ ಬಡತನವು ಸಿರಿಯು ಸಮವೆಂದೇ
ಹೆಣ್ಣು : ನಾವಿಂದು ಸೇರಿ ನಲಿವಿಂದ ತೇಲುವ
ಗಂಡು : ಸುಧೆ ಸವಿವ ಸುದಿನಾ ಆಹಾ.................
          ಇದೇ ಇದೇ ಸವಿ ಬಾಳ ದಿನ
ಹೆಣ್ಣು : ಕಾದು ಕಂಡಿತೇ ಮಧುರ ಮನ
ಇಬ್ಬರು : ಮೈಮರೆಸುವಾ ಮನ ತಣಿಸುವಾ ಪ್ರೇಮ ಮಿಲನದ ದಿನಾ....ಓಹೊ...
            ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ
            ಮೈಮರೆಸುವಾ ಮನ ತಣಿಸುವಾ ಪ್ರೇಮ ಮಿಲನದ ದಿನಾ....ಓಹೊ...
            ಇದೇ ಇದೇ ಸವಿ ಬಾಳ ದಿನ ಕಾದು ಕಂಡಿತೇ ಮಧುರ ಮನ
---------------------------------------------------------------------------------------------------------------------

ನವಜೀವನ (1964) - ಕರೆಯೇ ಕೋಗಿಲೆ ಮಾಧವನಾ

ಸಾಹಿತ್ಯ : ಸೋರಟ್ ಅಶ್ವಥ್  ಸಂಗೀತ : ರಾಜನ್-ನಾಗೇಂದ್ರ  ಗಾಯನ : ಎಸ್. ಜಾನಕಿ

ಕರೆಯೇ ಕೋಗಿಲೆ ಮಾಧವನಾ ಕಾತರ ತುಂಬಿದಾ ಈ ನಯನಾ ಕಾಣಲು ಕಾದಿದೆ ಪ್ರಿಯತಮನಾ....
ಕರೆಯೇ ಕೋಗಿಲೆ ಮಾಧವನಾ ಕಾತರ ತುಂಬಿದಾ ಈ ನಯನಾ ಕಾಣಲು ಕಾದಿದೆ ಪ್ರಿಯತಮನಾ....
ಕರೆಯೇ ಕೋಗಿಲೆ ಮಾಧವನಾ....

ಈ ಅನುರಾಗದ ಕರೆಯನು ತಿಳಿಸೆ ವೀಣೆಯ ನಾದಕೆ ನೀ ದನಿ ಬೆರೆಸೀ  ಆ....ಅ......
ಈ ಅನುರಾಗದ ಕರೆಯನು ತಿಳಿಸೆ ವೀಣೆಯ ನಾದಕೆ ನೀ ದನಿ ಬೆರೆಸೀ
ಹಾಡಿ ಪಾಡಿ ಒಲವಿರಿಸೀ ವಿರಹಿ ರಾಧೆಯಾ ಮನ ತಣಿಸೇ........
ಕರೆಯೇ ಕೋಗಿಲೆ ಮಾಧವನಾ ಕಾತರ ತುಂಬಿದಾ ಈ ನಯನಾ ಕಾಣಲು ಕಾದಿದೆ ಪ್ರಿಯತಮನಾ....
ಕರೆಯೇ ಕೋಗಿಲೆ ಮಾಧವನಾ....

ಮುನಿದಿಹನೇನೆ ನೀ ಹೇಳೇ ಮನಸಿನ ಚಿಂತೆ ನಾ ತಾಳೇ
ಮುನಿದಿಹನೇನೆ ನೀ ಹೇಳೇ ಮನಸಿನ ಚಿಂತೆ ನಾ ತಾಳೇ
ಏಕೋ ಏನೋ ಭಯವಿಂದೇ ಇನಿಯನ ಕಾಣದೆ ನಾ ನೊಂದೇ.......
ಕರೆಯೇ ಕೋಗಿಲೆ ಮಾಧವನಾ ಕಾತರ ತುಂಬಿದಾ ಈ ನಯನಾ ಕಾಣಲು ಕಾದಿದೆ ಪ್ರಿಯತಮನಾ....
ಕರೆಯೇ ಕೋಗಿಲೆ ಮಾಧವನಾ ಕಾತರ ತುಂಬಿದಾ ಈ ನಯನಾ
-----------------------------------------------------------------------------------------------------------------------

ನವಜೀವನ (1964) ಪ್ರೀತಿ ಹೊನಲೇ ಹಾಯಾಗಿರೆಲೇ

ಸಂಗೀತ : ರಾಜನ್-ನಾಗೇಂದ್ರ  ಸಾಹಿತ್ಯ : ಸೋರಟ್ ಅಶ್ವಥ್    ಗಾಯನ : ಪಿ. ಸುಶೀಲ

ಪ್ರೀತಿ ಹೊನಲೇ ಹಾಯಾಗಿರೆಲೇ ಬಾಳಲ್ಲಿ ಬಂಗಾರವಾಗೆಲೆ
ಪ್ರೀತಿ ಹೊನಲೆ ಹಾಯಾಗಿರೆಲೆ ಬಾಳಲ್ಲಿ ಬಂಗಾರವಾಗೆಲೆ
ಜೋ.....ಜೋ.....ಜೋ.....ಜೋ......

ಹೂವಂತ ಚೆಲುವೇ ಹಾಲಂಥ ಮನವೇ ತಾಯಾಸೆ ಒಲವೆಲ್ಲ ಏಕೆಂದೇ
ನನ್ನನೋಡಿ ನಗುವೆ ನೆನೆದೇನು ಅಳುವೆ ಈ ನೋಟ ಸಂಕೇತ ಏನೆಂದೇ
ಹೇಳೆ ಕಂದ ಬಾಳಿಗಂದ ನಗೆಮುಂದೆ ಅಳುಹಿಂದೆ ನೀನೆಂಬೆಯಾ...
ಪ್ರೀತಿ ಹೊನಲೆ ಹಾಯಾಗಿರೆಲೆ ಬಾಳಲ್ಲಿ ಬಂಗಾರವಾಗೆಲೆ
ಜೋ.....ಜೋ.....ಜೋ.....ಜೋ......

ಅಣುವಾಗಿ ಬರುವಾ ನಿನಗಾದ ದಿನವಾ ಈ ತಾಯ ಮಡಿಲಲ್ಲಿ ನೀ ನೋಡೇ..
ಮಗುವಾಗಿ ಇರುವೆ ತಾಯಾಗಿ ಮೆರೆವೆ ನನ್ನಂತೆ ಈ ಹಾಡ ನೀ ಹಾಡೇ
ಕಾದುನಿಂದ ನಾಳಿನಂದ ನಿನಗಾಗಿ ಗೆಲುವಿಂದ ಕೈನೀಡಿದೆ......
ಪ್ರೀತಿ ಹೊನಲೆ ಹಾಯಾಗಿರೆಲೆ ಬಾಳಲ್ಲಿ ಬಂಗಾರವಾಗೆಲೆ
ಜೋ.....ಜೋ.....ಜೋ.....ಜೋ......ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ
--------------------------------------------------------------------------------------------------------------------------

ನವಜೀವನ (1964) ಯೋ ಯೋ ಯಾಮ್ ಯಾಮ್ ತನು ಭಕ್ತಹಃ
ಸಂಗೀತ : ರಾಜನ್-ನಾಗೇಂದ್ರ  ಸಾಹಿತ್ಯ : ಸೋರಟ್ ಅಶ್ವಥ್  ಗಾಯನ : ಪಿ.ಬಿ.ಎಸ್ 

ಯೋ ಯೋ ಯಾಮ್ ಯಾಮ್ ತನು ಭಕ್ತಹಃ ರಖ್ಖಯಾಕೇತೂ  ನಿಚ್ಚತೀ ..
ತಸ್ಯ ತಸ್ಯ ಚಲಾಂ ಶೃದ್ದಾಂ ತಾನೇವ ವಿಧ ಧಾಮ್ಯಹಹಂ... ತಾಮೇವ ವಿಧ ಧಾಮ್ಯಹಹಂ 

ಅಲ್ಲಾ.. ಹೂ ಅಕ್ಬರ ಅಲ್ಲಾ ಹೂ .. ಅಕ್ಬರ್
ಅಲ್ಲಾ.. ಹೂ ಅಕ್ಬರ ಅಲ್ಲಾ ಹೂ .. ಅಕ್ಬರ್  ಅಷಹದ ಅಲ್ಲಾ ಇಲ್ಲಾಹ ಇಲ್ಲಲ್ಲಾಹ್ 
ಅಷಹದ ಅನ್ ಮೊಹಮದ್ ರುಸೂಲ್ಲೂಲ್ಲಾಹ್ 
ಹೈಯಾ ಅಲಟ್ ಫಲಾಹ್ ಹೈಯ್ಯಾ ಅಲಲಫಲಾಹ್
ಅಸ್ ಸಲಾಖ್ ಖೈಉಮ್ಮಿನ ನೋ...  
ಅಲ್ಲಾ.. ಹೂ ಅಕ್ಬರ ಅಲ್ಲಾ ಹೂ .. ಅಕ್ಬರ್ ಅಲ್ಲಾಹಿ ಇಲಾ ಹಿಲ್ಲಲ್ಲಾ..

ಹಾ ಫಾದರ್ ಹೂ ಆರ್ ಇನ್ ಹೇವಿನ್ ಹೆಲೋ ಅಗ್ರೀಸ್ ರೀ ಡ್ಯಾನಿಂಗ್ ಡೈ ಕಿಂಗ್ಡಮ್ ಕಮ್
ಡೈ ವಿಲ್ ಬಿ ಡನ್ ಇನ್ ಅರ್ಥ್ ಎಟ್ ಇಟ್ ಇಸ್  ಇನ್ ಹೇವಿನ್ ಗಿವ್ ಆಸ್ಕ್ ದಿ ಗೇಮ್ ಆರ್ ಡೈಲಿ ಬ್ರೆಡ್
ಏಂಡ್ ಫಾರಗಿವ ಅಸ್  ಆರ್ ಟ್ರಸ್ಟ್ ಬೈ ಟ್ರಸ್ಟ್ ಆಯ್ ಅಗ್ರೀ ಫಾರ್ ಗಿವ್ ದೇನ್ ದೇ ಟ್ರಸ್ಟ್ ಅಗೇನ್ಸಟ್ ಅಸ್
ಯ್ಯಾನ್ಡ್  ಲೀವ್ ಎಸ್ ನಾಟ್ ಇಂಟು ಟೆಂಪ್ಲಿಷನ್ ಬಟ್ ಲೀವ್ ದಿ ಅಸ್ ಫ್ರಮ್ ಈವನ್ ಫಾರ್ ಡೈಯಿಂಗ್
ದಿ ಕಿಂಗ್ಡಮ್ ದಿ ಪಾರ್ಟ್ ಯ್ಯಾನ್ಡ್ ಗ್ಲೋವಿಂಗ್ ಫಾರ್ ಎವರ್ ಯ್ಯಾನ್ಡ್ ಎವರ್...  ಆಮೇನ್
--------------------------------------------------------------------------------------------------------------------------

ನವಜೀವನ (1964) - ಭಾಮ ಭಾಮ ನಾ ಅರಿಯೇ ಮನದ ಮರ್ಮಾ  
ಸಂಗೀತ : ರಾಜನ್-ನಾಗೇಂದ್ರ  ಸಾಹಿತ್ಯ : ಸೋರಟ್ ಅಶ್ವಥ್  ಗಾಯನ : ನಾಗೇಂದ್ರ, ಎಲ್.ಆರ್.ಈಶ್ವರಿ  

ಗಂಡು : ಭಾಮ ಭಾಮ ನಾ ಅರಿಯೇ ಮನದ ಮರ್ಮಾ
           ಬಿಗುಮಾನ ಬಿಡು ಚಿನ್ನಾ ನೀನು ನಗುತಿರೇ ಬಲು ಚೆನ್ನ
           ಭಾಮ ಭಾಮ ನಾ ಅರಿಯೇ ಮನದ ಮರ್ಮಾ
           ಬಿಗುಮಾನ ಬಿಡು ಚಿನ್ನಾ ನೀನು ನಗುತಿರೇ ಬಲು ಚೆನ್ನ
           ಭಾಮ ಭಾಮ ನಾ ಅರಿಯೇ ಮನದ ಮರ್ಮಾ

ಹೆಣ್ಣು : ಈ ಥಳಕು ಮಾತು  ಬೇಕಿಲ್ಲ ನಾ ಬಲ್ಲೇ ನಿಮ್ಮ ಜೋಕೆಲ್ಲಾ
          ಈ ಥಳಕು ಮಾತು  ಬೇಕಿಲ್ಲ ನಾ ಬಲ್ಲೇ ನಿಮ್ಮ ಜೋಕೆಲ್ಲಾ
          ನಮ್ಮ ದಾರೀ ಬೇರೆ ನಿಮ್ಮ ದಾರಿ ಬೇರೆ ಈ ಸಂಸಾರ ಸುಖವಿಲ್ಲ ..
ಗಂಡು : ಹಾಗೆನ್ನಬೇಡವೇ.. ಹಾರ್ಟ್ ಫೇಲ್ಯೂರ್ ಆಗುತ್ತೇ
            ಹಾಗೆನ್ನಬೇಡ ನಾ ಬದುಕಲಾರೆನೇ ವೈಫ್ ಇಲ್ಲದೇ ಲೈಫ್ ಇಲ್ಲಾ..
ಹೆಣ್ಣು : ಅಯ್ಯೋ ರಾಮ ಇದು ಏನೋ ಬಂತು ಕರ್ಮಾ
           ಹೆಣಗಾಟದಿವೇಲ್ಲಾ ಏಕೇ ಕೊಟ್ಟನು ಆ ಬ್ರಹ್ಮ ..
ಗಂಡು : ಭಾಮ ಭಾಮ ನಾ ಅರಿಯೇ ಮನದ ಮರ್ಮಾ
           ಬಿಗುಮಾನ ಬಿಡು ಚಿನ್ನಾ ನೀನು ನಗುತಿರೇ ಬಲು ಚೆನ್ನ
           ಭಾಮ ಭಾಮ ನಾ ಅರಿಯೇ ಮನದ ಮರ್ಮಾ

ಗಂಡು : ಕೋಮಲೇ ಕೇಳೇ ಮಾತನ್ನ ಕೋಪಕ್ಕೆ ಹಾಕೇ ಬ್ರೆಕ್ಕನ್
           ಕೋಮಲೇ ಕೇಳೇ ಮಾತನ್ನ ಕೋಪಕ್ಕೆ ಹಾಕೇ ಬ್ರೆಕ್ಕನ್
           ಸಾಕಿನ್ನೂ ಫೈಟ್ ನಿನ್ನ ಮಾತೇ ರೈಟ್ ಮನ ಒಂದಾದ್ರೇ ಸುಖವುಂಟು
           ಸಾಕಿನ್ನೂ ಫೈಟ್ ನಿನ್ನ ಮಾತೇ ರೈಟ್ ಮನ ಒಂದಾದ್ರೇ ಸುಖವುಂಟು
ಹೆಣ್ಣು : ಅಂದಂತೇ ನಡೇವಿರಾ ...
ಗಂಡು : ಅಲ್ಲರೈಟ್ ಮೈ ಡಿಯರ್
ಹೆಣ್ಣು : ಅಂದಂತೇ ನಡೆದು ಆನಂದ ತಳೆದು ನಾವೂ ಎಂದೆಂದೂ ಬಾಳೋಣ
ಗಂಡು : ಭಾಮ ಭಾಮ ನಾ ಅರಿಯೇ ಮನದ ಮರ್ಮಾ
           ಬಿಗುಮಾನ ಬಿಡು ಚಿನ್ನಾ ನೀನು ನಗುತಿರೇ ಬಲು ಚೆನ್ನ
ಹೆಣ್ಣು : ಆಹಾಹಾ.. ಆಹಾಹಾ.. ( ಒಹೋ ಓಹೋಹೋ  )
ಇಬ್ಬರು : ಆಹಾಹಾ.. ಆಹಾಹಾ..  ಒಹೋ ಓಹೋಹೋ ಓಹೋಹೋ ಹೂಂಹೂಂಹೂಂ 
--------------------------------------------------------------------------------------------------------------------------

ನವಜೀವನ (1964) - ವಾರೇ ನೋಟ ನೋಡಿ ಮಳ್ಳ  
ಸಾಹಿತ್ಯ : ಸೋರಟ್ ಅಶ್ವಥ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಆಮೀರಬಾಯಿ ಕರ್ನಾಟಕಿ,  

ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 

ಊರಿಗೊಂದ ದಿನ ಹೋಗಿ ಬರ್ತೀನೆಂದಲ್ಲಾ 
ವಾರತೀರೇ  ಇನ್ನೂ ಯಾಕ ಬರಲಿಲ್ಲಾವ್ .. 
ಸವಿ ಸವಿ ಮಾತನಾಡಿ ಹೋದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 

ಬಾಳ ಚಂದ ತಾಳೆ ಸೇರಿಯ ನೋಟೆ ಹಳದಿ ಜನದ ಉಪಟವ ನೋಡದೇ.. 
ತೋಳಿಗೆ ಬಂದಿ ಸಿಕ್ಕಿನವ್ವಾ  ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 

ಮರಳಿಗೆ ಮರ್ಜಿ ಮುಡಿಯಲೇ ಹೂವ ನಲ್ಲನ ನೋಡದೆ ಹ್ಯಾಂಗೀರಲವ್ವಾ 
ಗಾಡಿ ನೋಡಿ ನೋಡಿದ್ಯಾ ಕರೀತಾ ಜೀವಾ    
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 

ಬಂಧ ಬಯಕೆ ಎಲ್ಲದಕ್ಕೂ ಒಂದಿನ ಎಲ್ಲವಳದ ಈವನೆಂಬುದನ ಬಿಡೇನಾ    
ಬೆಲ್ಲದಂತ ಮಾತನಾಡಿ ಬಿಟ್ಟು ಹೋದವಾ.. ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗೋದ ಜೀವಾ... 
--------------------------------------------------------------------------------------------------------------------------

ನವಜೀವನ (1964) - ವಾರೇ ನೋಟ ನೋಡಿ ಮಳ್ಳ 
ಸಾಹಿತ್ಯ : ಸೋರಟ್ ಅಶ್ವಥ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ವಾಸನ್  

ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗದೋ ಜೀವಾ... 
ಆಹ್ಹಾ.. ವಾರೇ ನೋಟ ಓಹೋ .. ವಾರೇ ನೋಟ ಓಹೋ 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗದೋ ಜೀವಾ... 
ವಾರೇ ನೋಟ ಓಹ್ಹಹೋ .. ವಾರೇ ನೋಟ ಆಹ್ಹಹ್ಹಾ .. 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗದೋ ಜೀವಾ... 
ವಾರೇ ನೋಟ ನೋಡಿ ಮಳ್ಳ  ಮಾಡಿದನವ್ವಾ 
ಯಾರ ಮುಂದೆ ಹೇಳಬೇಕೋ ಮರಗದೋ ಜೀವಾ... 
--------------------------------------------------------------------------------------------------------------------------

No comments:

Post a Comment