1676. ಭಕ್ತಿಗೀತೆಗಳು

ಭಕ್ತಿಗೀತೆಗಳು
------------------------------------------------------------------------------------------------------
ಶ್ರೀ ರಾಘವೇಂದ್ರ ಭಕ್ತಿಗೀತೆ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮುರುಳೀಧರ್, ಗಾಯನ :ಪಿ.ಬಿ.ಎಸ್  
ಕೋರಿಕೆ : ಶ್ರೀಯುತ. ಶಿವರಾಮರವರು 

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ: ರತಾಯ ಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ।।

ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
ಕರಗಳನ್ನು ಮುಗಿದು ಭವದಲ್ಲಿ ಬೆಂದು ನಿನ್ನನೇ  ಅರಸಿ ಬಂದು ।
ಪರಿಪರಿಯ ಜನರು ಪರಿತಾಪದಂತೆ ನಿನ್ನನೇ ಅರಸುತಿಹರು । 

ನಿನ್ನನು ಕಾಡಿ ನಿನ್ನಲಿ ಬೇಡಿ ಭಜಿಸುತಿಹರು ನಿನ್ನಾ 
ಅವರನ್ನು ಪೊರೆದು ಅವರಲ್ಲಿ ಒಲಿದು ಕೃಪೆ ಮಾಡುವುದೇ ಚೆನ್ನಾ 
ಗುರುರಾಜ ನಿಮ್ಮ ಚರಣವನ್ನು ಮುನ್ನ ನಂಬಿಹರು ಭಕ್ತವೃಂದ 
ಕರುಣಿಸಲು ಅವರ ಬಲು ನೊಂದ ಜನರ ಪೊರೆಯಯ್ಯ ರಾಘವೇಂದ್ರ 
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 

ಸಂಗೀತದಿಂದ ಸಾಹಿತ್ಯದಿಂದ ಸ್ತುತಿಸುತಿಹರು ನಿನ್ನಾ ।
ಅವರವರ ಇಷ್ಟ ಮತ್ತವರ ಅಭೀಷ್ಟ  ಇತ್ತವರ ಒಲಿಯೋ ಚೆನ್ನ ।
ಹಿಂದೆಣಿನಿಸೊ ಜನರ ಪಿಡಿದವರ ಕರವ ಪರಿಪಾಲಿಸುತ್ತಿರುವೆ ಗುರುವೇ ।
ಮತ್ತೇಕೆ ಎನ್ನ ನೋಡುತಿಹೆ ತಂದೆ ಕುಂದೆಣಿಸದಿರೂ ಮುಂದೆ ।।
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
ಶ್ರೀ ರಾಘವೇಂದ್ರ ಗುರುರಾಘವೇಂದ್ರ ಯತಿರಾಘವೇಂದ್ರ ಪ್ರಭುವೇ । 
------------------------------------------------------------------------------------------------------
ಗಾಯನ : ಎಸ್.ಪಿ.ಬಿ 

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ ನಿರ್ಮಲ ಭಾಸಿತ ಶೋಭಿತ ಲಿಂಗಂ
ಜನ್ಮಜದುಃಖ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 

ದೇವಮುನಿ ಪ್ರವರಾರ್ಚಿತ ಲಿಂಗಂ ಕಾಮದಹನ ಕರುಣಾಕರ ಲಿಂಗಂ
ರಾವಣ ದರ್ಪ ವಿನಾಶನ ಲಿಂಗಂ  ತತ್ಪ್ರಣಮಾಮಿ ಸದಾ ಶಿವ ಲಿಂಗಂ 
ಸರ್ವ ಸುಗಂಧ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಂ
ಸಿದ್ಧ ಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 

ಕನಕಮಹಾಮಣಿಭೂಷಿತ ಲಿಂಗಂ ಫಣಿಪತಿವೇಷ್ಟಿತಶೋಭಿತ ಲಿಂಗಂ
ದಕ್ಷಸುಯಜ್ಞವಿನಾಶನ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 

ಕುಂಕುಮ ಚಂದನ ಲೇಪಿತ ಲಿಂಗಂ ಪಂಕಜಹಾರ ಸುಶೋಭಿತ ಲಿಂಗಂ
ಸಂಚಿತ ಪಾಪ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 
ದೇವಗಣಾರ್ಚಿತ ಸೇವಿತ ಲಿಂಗಂ  ಭಾವೈರ್ಭಕ್ತಿಭಿರೇವ ಚ ಲಿಂಗಂ
ದಿನಕರ ಕೋಟಿ ಪ್ರಭಾಕರ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 

ಅಷ್ಟದಳೋ ಪರಿವೇಷ್ಟಿತ ಲಿಂಗಂ ಸರ್ವ ಸಮುದ್ಭವ ಕಾರಣ ಲಿಂಗಂ
ಅಷ್ಟದರಿದ್ರ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 
ಸುರಗುರು ಸುರವರಪೂಜಿತ ಲಿಂಗಂ ಸುರವನಪುಷ್ಪಸದಾರ್ಚಿತ ಲಿಂಗಂ
ಪರಾತ್ಪರಂ/ ಪರಮಪದಂ ಪರಮಾತ್ಮಕ ಲಿಂಗಂ ತತ್ಪ್ರಣಮಾಮಿ ಸದಾ ಶಿವ ಲಿಂಗಂ 

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವ ಸನ್ನಿಧೌ 
ಶಿವಲೋಕ ಮವಾಪ್ನೋತಿ ಶಿವೇನ ಸಹ ಮೋದತೇ
-----------------------------------------------------------------------------------------------------------------

ಗಾಯನ : ಎಸ್.ಪಿ.ಬಿ 

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥನಾಥಂ ಸದಾನಂದಭಾಜಂ ಭವದ್ಭವ್ಯಭೂತೇಶ್ವರಂ ಭೂತನಾಥಂ ಶಿವಂ ಶಂಕರಂ ಶಂಭುಮೀಶಾನಮೀಡೇ  

ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲಕಾಲಂ ಗಣೇಶಾಧಿಪಾಲಂ ।ಜಟಾಜೂಟಗಂಗೋತ್ತರಂಗೈರ್ವಿಶಾಲಂ ಶಿವಂ ಶಂಕರಂ ಶಂಭುಮೀಶಾನಮೀಡೇ 

ಮುದಾಮಾಕರಂ ಮಂಡನಂ ಮಂಡಯಂತಂ ಮಹಾಮಂಡಲಂ ಭಸ್ಮಭೂಷಾಧರಂ ತಂ 
ಅನಾದಿಂ ಹ್ಯಪಾರಂ ಮಹಾಮೋಹಮಾರಂ ಶಿವಂ ಶಂಕರಂ ಶಂಭುಮೀಶಾನಮೀಡೇ 

ತಟಾಧೋನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪನಾಶಂ ಸದಾ ಸುಪ್ರಕಾಶಂ 
ಗಿರೀಶಂ ಗಣೇಶಂ ಸುರೇಶಂ ಮಹೇಶಂ ಶಿವಂ ಶಂಕರಂ ಶಂಭುಮೀಶಾನಮೀಡೇ 

ಗಿರೀಂದ್ರಾತ್ಮಜಾಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾ ಸನ್ನಿಗೇಹಂ
ಪರಬ್ರಹ್ಮ ಬ್ರಹ್ಮಾದಿಭಿರ್ವಂದ್ಯಮಾನಂ ಶಿವಂ ಶಂಕರಂ ಶಂಭುಮೀಶಾನಮೀಡೇ
ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜನಮ್ರಾಯ ಕಾಮಂ ದದಾನಂ ।ಬಲೀವರ್ದಯಾನಂ ಸುರಾಣಾಂ ಪ್ರಧಾನಂ ಶಿವಂ ಶಂಕರಂ ಶಂಭುಮೀಶಾನ ಮೀಡೇ 

ಶರಚ್ಚಂದ್ರಗಾತ್ರಂ ಗುಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೆಶಸ್ಯ ಮಿತ್ರಂ 
ಅಪರ್ಣಾಕಳತ್ರಂ ಚರಿತ್ರಂ ವಿಚಿತ್ರಂ ಶಿವಂ ಶಂಕರಂ ಶಂಭುಮೀಶಾನಮೀಡೇ 
ಹರಂ ಸರ್ಪಹಾರಂ ಚಿತಾಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ 
ಶ್ಮಶಾನೇ ವಸಂತಂ ಮನೋಜಂ ದಹಂತಂ ಶಿವಂ ಶಂಕರಂ ಶಂಭುಮೀಶಾನಮೀಡೇ

ಸ್ತವಂ ಯಃ ಪ್ರಭಾತೇ ನರಃ ಶೂಲಪಾಣೇಃ ಪಠೇತ್ಸರ್ವದಾ ಭರ್ಗಭಾವಾನುರಕ್ತಃ 
ಸ ಪುತ್ರಂ ಧನಂ ಧಾನ್ಯಮಿತ್ರಂ ಕಳತ್ರಂ ವಿಚಿತ್ರೈಃ ಸಮಾರಾದ್ಯ ಮೋಕ್ಷಂ ಪ್ರಯಾತಿ 
-------------------------------------------------------------

ಗಾಯನ : ಎಸ್.ಪಿ.ಬಿ 

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ
ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ ||
ಕೋಟಿಕನ್ಯಾ ಮಹಾದಾನಂ ತಿಲಪರ್ವತಕೋಟಯಃ
ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ ||

ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ ||
ಇಂದುವಾರೆ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಃ
ನಕ್ತಂ ಹೌಶ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ ||
ರಾಮಲಿಂಗ ಪ್ರತಿಷ್ಠಾ ಚ ವಿವಾಹಿತ ಕೃತಂ ತಥಾ
ತಟಾಕಾನಿ ಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ ||
ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ ನಾಮಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ ||

ಉಮಯಾ ಸಹ ದೇವೇಶ ನಂದಿವಾಹನಮೇವ ಚ
ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ ||
ಸಾಲಗ್ರಾಮೇಶು ವಿಪ್ರಾನಾಂ ತಟಾಕಂ ದಶಕೂಪಯೋಃ
ಯಜ್ಞಕೋಟಿ ಸಹಸ್ರಶ್ಚ ಏಕಬಿಲ್ವಂ ಶಿವಾರ್ಪಣಂ ||
ದಂತಿಕೋಟಿ ಸಹಸ್ರೇಶು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾನಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||

ಸಹಸ್ರವೇದಪಾಠೇಶು ಬ್ರಹ್ಮಸ್ಥಾಪನಮುಚ್ಯತೆ
ಅನೇಕವ್ರತಕೋಟೀನಾಂ ಏಕಬಿಲ್ವಂ ಶಿವಾರ್ಪಣಂ ||
ಅನ್ನದಾನ ಸಹಸ್ರೇಶು ಸಹಸ್ರೋಪನಯನಂ ತಥಾ
ಅನೇಕ ಜನ್ಮ ಪಾಪಾನಿ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ
ಶಿವಲೋಕಂ ಅವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ ||
----------------------------------------------------------------------

ಗಾಯನ : ಎಸ್.ಪಿ.ಬಿ 

ಗಂಗಾತರಂಗ ರಮಣೀಯ ಜಟಾಕಲಾಪಂ ಗೌರೀ ನಿರಂತರ ವಿಭೂಷಿತ ವಾಮಭಾಗಂ 
ನಾರಾಯಣ ಪ್ರಿಯಮನಂಗ ಮದಾಪಹಾರಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ 

ವಾಚಾಮಗೋಚರ ಮನೇಕಗುಣಸ್ವರೂಪಂ ವಾಗೀಶವಿಷ್ಣು ಸುರಸೇವಿತ ಪಾದಪೀಠಂ 
ವಾಮೇನ ವಿಗ್ರಹವರೇಣ ಕಲತ್ರವಂತಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ
ಭೂತಾಧಿಪಂ ಭುಜಗಭೂಷಣ ಭೂಷಿತಾಂಗಂ ವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿನೇತ್ರಂ
ಪಾಶಾಂಕುಶಾಭಯ ವರಪ್ರದ ಶೂಲಪಾಣಿಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ 

ಶೀತಾಂಶುಶೋಭಿತ ಕಿರೀಟ ವಿರಾಜಮಾನಂ ಫಾಲೇಕ್ಷಣಾನಲ ವಿಶೋಷಿತ ಪಂಚಬಾಣಂ 
ನಾಗಾಧಿಪಾರಚಿತ ಭಾಸುರಕರ್ಣಪೂರಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ 
ಪಂಚಾನನಂ ದುರಿತ ಮತ್ತ ಮತಂಗಜಾನಾಂ ನಾಗಾಂತಕಂ ದನುಜಪುಂಗವ ಪನ್ನಗಾನಾಂ 
ದಾವಾನಲಂ ಮರಣಶೋಕ ಜರಾಟವೀನಾಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ 

ತೇಜೋಮಯಂ ಸಗುಣ ನಿರ್ಗುಣಮದ್ವಿತೀಯಂ ಆನಂದಕಂದಮಪರಾಜಿತಮಪ್ರಮೇಯಂ 
ನಾದಾತ್ಮಕಂ ಸಕಲನಿಷ್ಕಲಮಾತ್ಮರೂಪಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ 
ಆಶಾಂ ವಿಹಾಯ ಪರಿಹೃತ್ಯ ಪರಸ್ಯ ನಿಂದಾಂ ಪಾಪೇರತಿಂ ಚ ಸುನಿವಾರ್ಯ ಮನಃ ಸಮಾಧೌ 
ಆಧಾಯ ಹೃತ್ಕಮಲ ಮಧ್ಯಗತಂ ಪರೇಶಂ ವಾರಾಣಸೀಪುರಪತಿಂ ಭಜ ವಿಶ್ವನಾಥಂ 
ರಾಗಾದಿದೋಷರಹಿತಂ ಸ್ವಜನಾನುರಾಗಂ ವೈರಾಗ್ಯ ಶಾಂತಿನಿಲಯಂ ಗಿರಿಜಾಸಹಾಯಂ 
ಮಾಧುರ್ಯ ಧೈರ್ಯ ಸುಭಗಂ ಗರಲಾಭಿರಾಮಂ  ವಾರಾಣಸೀಪುರಪತಿಂ ಭಜ ವಿಶ್ವನಾಥಂ 

ವಾರಾಣಸೀ ಪುರಪತೆಃ ಸ್ತವನಂ ಶಿವಸ್ಯ ವ್ಯಾಖ್ಯಾತಮಷ್ಟಕಮಿದಂ ಪಠತೆ ಮನುಷ್ಯಃ 
ವಿದ್ಯಾಂ ಶ್ರಿಯಂ ವಿಪುಲಸೌಖ್ಯಮನಂತಕೀರ್ತಿಂ ಸಂಪ್ರಾಪ್ಯ ದೇಹವಿಲಯೆ ಲಭತೆ ಚ ಮೋಕ್ಷಂ 
ವಿಶ್ವನಾಥಾಷ್ಟಕಮಿದಂ ಯಃ ಪಠೇತ್ ಶಿವ ಸನ್ನಿಧೌ ಶಿವಲೊಕಮವಾಪ್ನೋತಿ ಶಿವೇನ ಸಹ ಮೋದತೆ 
-------------------------------------------------------------------------------------------------------------------------

ಶ್ರೀ ವೇಂಕಟೇಶ್ವರ ಸುಪ್ರಭಾತಂ - ಎಂ.ಎಸ್.ಸುಬ್ಬುಲಕ್ಷ್ಮಿ 

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ ‖ 1 ‖

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ |
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು ‖ 2 ‖

ಮಾತಸ್ಸಮಸ್ತ ಜಗತಾಂ ಮಧುಕೈಟಭಾರೇಃ
ವಕ್ಷೋವಿಹಾರಿಣಿ ಮನೋಹರ ದಿವ್ಯಮೂರ್ತೇ |
ಶ್ರೀಸ್ವಾಮಿನಿ ಶ್ರಿತಜನಪ್ರಿಯ ದಾನಶೀಲೇ
ಶ್ರೀ ವೇಂಕಟೇಶ ದಯಿತೇ ತವ ಸುಪ್ರಭಾತಂ ‖ 3 ‖

ತವ ಸುಪ್ರಭಾತಮರವಿಂದ ಲೋಚನೇ
ಭವತು ಪ್ರಸನ್ನಮುಖ ಚಂದ್ರಮಂಡಲೇ |
ವಿಧಿ ಶಂಕರೇಂದ್ರ ವನಿತಾಭಿರರ್ಚಿತೇ
ವೃಶ ಶೈಲನಾಥ ದಯಿತೇ ದಯಾನಿಧೇ ‖ 4 ‖

ಅತ್ರ್ಯಾದಿ ಸಪ್ತ ಋಷಯಸ್ಸಮುಪಾಸ್ಯ ಸಂಧ್ಯಾಂ
ಆಕಾಶ ಸಿಂಧು ಕಮಲಾನಿ ಮನೋಹರಾಣಿ |
ಆದಾಯ ಪಾದಯುಗ ಮರ್ಚಯಿತುಂ ಪ್ರಪನ್ನಾಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 5 ‖

ಪಂಚಾನನಾಬ್ಜ ಭವ ಷಣ್ಮುಖ ವಾಸವಾದ್ಯಾಃ
ತ್ರೈವಿಕ್ರಮಾದಿ ಚರಿತಂ ವಿಬುಧಾಃ ಸ್ತುವಂತಿ |
ಭಾಷಾಪತಿಃ ಪಠತಿ ವಾಸರ ಶುದ್ಧಿ ಮಾರಾತ್
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 6 ‖

ಈಶತ್-ಪ್ರಫುಲ್ಲ ಸರಸೀರುಹ ನಾರಿಕೇಳ
ಪೂಗದ್ರುಮಾದಿ ಸುಮನೋಹರ ಪಾಲಿಕಾನಾಂ |
ಆವಾತಿ ಮಂದಮನಿಲಃ ಸಹದಿವ್ಯ ಗಂಧೈಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 7 ‖

ಉನ್ಮೀಲ್ಯನೇತ್ರ ಯುಗಮುತ್ತಮ ಪಂಜರಸ್ಥಾಃ
ಪಾತ್ರಾವಸಿಷ್ಟ ಕದಲೀ ಫಲ ಪಾಯಸಾನಿ |
ಭುಕ್ತ್ವಾಃ ಸಲೀಲ ಮಥಕೇಳಿ ಶುಕಾಃ ಪಠಂತಿ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 8 ‖

ತಂತ್ರೀ ಪ್ರಕರ್ಷ ಮಧುರ ಸ್ವನಯಾ ವಿಪಂಚ್ಯಾ
ಗಾಯತ್ಯನಂತ ಚರಿತಂ ತವ ನಾರದೋಽಪಿ |
ಭಾಷಾ ಸಮಗ್ರ ಮಸತ್-ಕೃತಚಾರು ರಮ್ಯಂ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 9 ‖

ಭೃಂಗಾವಳೀ ಚ ಮಕರಂದ ರಸಾನು ವಿದ್ಧ
ಝುಂಕಾರಗೀತ ನಿನದೈಃ ಸಹಸೇವನಾಯ |
ನಿರ್ಯಾತ್ಯುಪಾಂತ ಸರಸೀ ಕಮಲೋದರೇಭ್ಯಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 10 ‖

ಯೋಷಾಗಣೇನ ವರದಧ್ನಿ ವಿಮಥ್ಯಮಾನೇ
ಘ್ಷಾಲಯೇಷು ದಧಿಮಂಥನ ತೀವ್ರಘ್ಷಾಃ |
ರೋಷಾತ್ಕಲಿಂ ವಿದಧತೇ ಕಕುಭಶ್ಚ ಕುಂಭಾಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 11 ‖

ಪದ್ಮೇಶಮಿತ್ರ ಶತಪತ್ರ ಗತಾಳಿವರ್ಗಾಃ
ಹರ್ತುಂ ಶ್ರಿಯಂ ಕುವಲಯಸ್ಯ ನಿಜಾಂಗಲಕ್ಷ್ಮ್ಯಾಃ |
ಭೇರೀ ನಿನಾದಮಿವ ಭಿಭ್ರತಿ ತೀವ್ರನಾದಂ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಂ ‖ 12 ‖

ಶ್ರೀಮನ್ನಭೀಷ್ಟ ವರದಾಖಿಲ ಲೋಕ ಬಂಧೋ
ಶ್ರೀ ಶ್ರೀನಿವಾಸ ಜಗದೇಕ ದಯೈಕ ಸಿಂಧೋ |
ಶ್ರೀ ದೇವತಾ ಗೃಹ ಭುಜಾಂತರ ದಿವ್ಯಮೂರ್ತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 13 ‖

ಶ್ರೀ ಸ್ವಾಮಿ ಪುಷ್ಕರಿಣಿಕಾಪ್ಲವ ನಿರ್ಮಲಾಂಗಾಃ
ಶ್ರೇಯಾರ್ಥಿನೋ ಹರವಿರಿಂಚಿ ಸನಂದನಾದ್ಯಾಃ |
ದ್ವಾರೇ ವಸಂತಿ ವರನೇತ್ರ ಹತೋತ್ತ ಮಾಂಗಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 14 ‖

ಶ್ರೀ ಶೇಷಶೈಲ ಗರುಡಾಚಲ ವೇಂಕಟಾದ್ರಿ
ನಾರಾಯಣಾದ್ರಿ ವೃಷಭಾದ್ರಿ ವೃಷಾದ್ರಿ ಮುಖ್ಯಾಂ |
ಆಖ್ಯಾಂ ತ್ವದೀಯ ವಸತೇ ರನಿಶಂ ವದಂತಿ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 15 ‖

ಸೇವಾಪರಾಃ ಶಿವ ಸುರೇಶ ಕೃಶಾನುಧರ್ಮ
ರಕ್ಷೋಂಬುನಾಥ ಪವಮಾನ ಧನಾಧಿ ನಾಥಾಃ |
ಬದ್ಧಾಂಜಲಿ ಪ್ರವಿಲಸನ್ನಿಜ ಶೀರ್ಷದೇಶಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 16 ‖

ಧಾಟೀಷು ತೇ ವಿಹಗರಾಜ ಮೃಗಾಧಿರಾಜ
ನಾಗಾಧಿರಾಜ ಗಜರಾಜ ಹಯಾಧಿರಾಜಾಃ |
ಸ್ವಸ್ವಾಧಿಕಾರ ಮಹಿಮಾಧಿಕ ಮರ್ಥಯಂತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 17 ‖

ಸೂರ್ಯೇಂದು ಭೌಮ ಬುಧವಾಕ್ಪತಿ ಕಾವ್ಯಶೌರಿ
ಸ್ವರ್ಭಾನುಕೇತು ದಿವಿಶತ್-ಪರಿಶತ್-ಪ್ರಧಾನಾಃ |
ತ್ವದ್ದಾಸದಾಸ ಚರಮಾವಧಿ ದಾಸದಾಸಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 18 ‖

ತತ್-ಪಾದಧೂಳಿ ಭರಿತ ಸ್ಫುರಿತೋತ್ತಮಾಂಗಾಃ
ಸ್ವರ್ಗಾಪವರ್ಗ ನಿರಪೇಕ್ಷ ನಿಜಾಂತರಂಗಾಃ |
ಕಲ್ಪಾಗಮಾ ಕಲನಯಾಽಽಕುಲತಾಂ ಲಭಂತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 19 ‖

ತ್ವದ್ಗೋಪುರಾಗ್ರ ಶಿಖರಾಣಿ ನಿರೀಕ್ಷಮಾಣಾಃ
ಸ್ವರ್ಗಾಪವರ್ಗ ಪದವೀಂ ಪರಮಾಂ ಶ್ರಯಂತಃ |
ಮರ್ತ್ಯಾ ಮನುಷ್ಯ ಭುವನೇ ಮತಿಮಾಶ್ರಯಂತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 20 ‖

ಶ್ರೀ ಭೂಮಿನಾಯಕ ದಯಾದಿ ಗುಣಾಮೃತಾಬ್ದೇ
ದೇವಾದಿದೇವ ಜಗದೇಕ ಶರಣ್ಯಮೂರ್ತೇ |
ಶ್ರೀಮನ್ನನಂತ ಗರುಡಾದಿಭಿ ರರ್ಚಿತಾಂಘೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 21 ‖

ಶ್ರೀ ಪದ್ಮನಾಭ ಪುರುಷೋತ್ತಮ ವಾಸುದೇವ
ವೈಕುಂಠ ಮಾಧವ ಜನಾರ್ಧನ ಚಕ್ರಪಾಣೇ |
ಶ್ರೀ ವತ್ಸ ಚಿಹ್ನ ಶರಣಾಗತ ಪಾರಿಜಾತ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 22 ‖

ಕಂದರ್ಪ ದರ್ಪ ಹರ ಸುಂದರ ದಿವ್ಯ ಮೂರ್ತೇ
ಕಾಂತಾ ಕುಚಾಂಬುರುಹ ಕುಟ್ಮಲ ಲೋಲದೃಷ್ಟೇ |
ಕಲ್ಯಾಣ ನಿರ್ಮಲ ಗುಣಾಕರ ದಿವ್ಯಕೀರ್ತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 23 ‖

ಮೀನಾಕೃತೇ ಕಮಠಕೋಲ ನೃಸಿಂಹ ವರ್ಣಿನ್
ಸ್ವಾಮಿನ್ ಪರಶ್ವಥ ತಪೋಧನ ರಾಮಚಂದ್ರ |
ಶೇಷಾಂಶರಾಮ ಯದುನಂದನ ಕಲ್ಕಿರೂಪ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 24 ‖

ಏಲಾಲವಂಗ ಘ್ನಸಾರ ಸುಗಂಧಿ ತೀರ್ಥಂ
ದಿವ್ಯಂ ವಿಯತ್ಸರಿತು ಹೇಮಘ್ಟೇಷು ಪೂರ್ಣಂ |
ಧೃತ್ವಾದ್ಯ ವೈದಿಕ ಶಿಖಾಮಣಯಃ ಪ್ರಹೃಷ್ಟಾಃ
ತಿಷ್ಠಂತಿ ವೇಂಕಟಪತೇ ತವ ಸುಪ್ರಭಾತಂ ‖ 25 ‖

ಭಾಸ್ವಾನುದೇತಿ ವಿಕಚಾನಿ ಸರೋರುಹಾಣಿ
ಸಂಪೂರಯಂತಿ ನಿನದೈಃ ಕಕುಭೋ ವಿಹಂಗಾಃ |
ಶ್ರೀವೈಷ್ಣವಾಃ ಸತತ ಮರ್ಥಿತ ಮಂಗಳಾಸ್ತೇ
ಧಾಮಾಶ್ರಯಂತಿ ತವ ವೇಂಕಟ ಸುಪ್ರಭಾತಂ ‖ 26 ‖

ಬ್ರಹ್ಮಾದಯಾ ಸ್ಸುರವರಾ ಸ್ಸಮಹರ್ಷಯಸ್ತೇ
ಸಂತಸ್ಸನಂದನ ಮುಖಾಸ್ತ್ವಥ ಯೋಗಿವರ್ಯಾಃ |
ಧಾಮಾಂತಿಕೇ ತವ ಹಿ ಮಂಗಳ ವಸ್ತು ಹಸ್ತಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 27 ‖

ಲಕ್ಶ್ಮೀನಿವಾಸ ನಿರವದ್ಯ ಗುಣೈಕ ಸಿಂಧೋ
ಸಂಸಾರಸಾಗರ ಸಮುತ್ತರಣೈಕ ಸೇತೋ |
ವೇದಾಂತ ವೇದ್ಯ ನಿಜವೈಭವ ಭಕ್ತ ಭೋಗ್ಯ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಂ ‖ 28 ‖

ಇತ್ಥಂ ವೃಷಾಚಲಪತೇರಿಹ ಸುಪ್ರಭಾತಂ
ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ |
ತೇಷಾಂ ಪ್ರಭಾತ ಸಮಯೇ ಸ್ಮೃತಿರಂಗಭಾಜಾಂ
ಪ್ರಜ್ಞಾಂ ಪರಾರ್ಥ ಸುಲಭಾಂ ಪರಮಾಂ ಪ್ರಸೂತೇ ‖ 29 ‖
----------------------------------------------------------------

ಗೌರಿ ಪುತ್ರ ವಿನಾಯಕನಿಗೆ ಆನೆ ಮುಖವು ಬಂದ ಕಥೆ 

ಹೇಳುವೇ ಕಥೆ ಹೇಳುವೆ ಕೇಳಿರಿ ​​ಕಥೆ ಹೇಳುವೆ
ಹೇಳುವೇ ಕಥೆ ಹೇಳುವೆ ಕೇಳಿರಿ ​​ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ ಆನೆ ಮುಖವು ಬಂದ ಕಥೆಯಾ
ಹೇಳುವೇ ಕಥೆ ಹೇಳುವೆ ಕೇಳಿರಿ ​​ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ ಆನೆ ಮುಖವು ಬಂದ ಕಥೆಯಾ
ಹೇಳುವೇ ಕಥೆ ಹೇಳುವೆ ಕೇಳಿರಿ ​​ಕಥೆ ಹೇಳುವೆ

ಒಂದು ದಿನ ಪಾರ್ವತಿಯು ಸ್ನಾನ ಗೃಹಕೆ ಹೊರಟಳು
ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕೆ ಇಟ್ಟಳು
ಒಂದು ದಿನ ಪಾರ್ವತಿಯು ಸ್ನಾನ ಗೃಹಕೆ ಹೊರಟಳು
ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕೆ ಇಟ್ಟಳು
ಅಮ್ಮ ನಿನ್ನ ಆಜ್ಞೆಯೆಂದು ಕೇಳಿ ಕಂದನು
ಅಮ್ಮ ನಿನ್ನ ಆಜ್ಞೆಯೆಂದು ಕೇಳಿ ಕಂದನು
ಕಾವಲಿರು ಎಂದಳು ಗೌರಿ ಒಲವಿಂದ
ಕಾವಲಿರು ಎಂದಳು ಗೌರಿ ಒಲವಿಂದ
ಹೇಳುವೇ ಕಥೆ ಹೇಳುವೆ ಕೇಳಿರಿ ​​ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ ಆನೆ ಮುಖವು ಬಂದ ಕಥೆಯಾ
ಹೇಳುವೇ ಕಥೆ ಹೇಳುವೆ ಕೇಳಿರಿ ​​ಕಥೆ ಹೇಳುವೆ

ಕಂದ ಕಾವಲಿರುವ ವೇಳೆ ಶಿವನು ಅಲ್ಲಿಗೆ ಬಂದ
ಶಿವನು ಯಾರೆಂದರಿಯದೆ ನಿಲ್ಲಿಸಿದನು ಕಂದ 
ಒಳಗಡೆ ಬಿಡೇನು ಇಲ್ಲೆ ನಿಂತು ಯೆಂದು ಕಂದ ಎನಲು
ಹೊರಗೆ ಉಕ್ಕಿ ಬಂತು ಆಗ ಕೋಪದ ಹೊನಲು
ಕೋಪದ....  ಹೊನಲು
ಕೋಪದಿಂದ ಶೂಲ ತೆಗೆದು ನಿಂತನು ತ್ರಿಪುರಾರಿ
ಕಂದನ ತಲೆ ಕತ್ತರಿಸಿದ ಕಾಮ ಸಂಹಾರಿ
ಶಬ್ದ ಕೇಳಿ ಒಳಗಿನಿಂದ ಓಡಿ ಬಂದಳು ಗೌರಿ
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ

ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು
ಒಂದೂ ತಲೆಯ ಅರಸಿ ತನ್ನಿ ಎಂದು ಆಜ್ಞೆ ತಂದನು
ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು
ಒಂದೂ ತಲೆಯ ಅರಸಿ ತನ್ನಿಯೆಂದು ಆಜ್ಞೆ ತಂದನು
ಅರಸಿ ಹೊರಟರು ಗಣಗಳು ದಿಕ್ಕು ದಿಕ್ಕಿಗೆ
ಆನೆಯೊಂದು ಮಲಗಿತ್ತು ಉತ್ತರ ದಿಕ್ಕಿಗೆ
ಆನೆ ತಲೆಯ ಕತ್ತರಿಸಿ ಶಿವನ ಬಳಿಗೆ ತಂದರು
ಅದನು ಮಗನ ದೇಹಕಿಟ್ಟು ಜೀವ ತಂದನು ದೇವನು
ಜೀವ ತುಂಬಿದ ಕಂದ ತಂದೆಗೆ ವಂದನೆಗೈದನು
ಸಂತಸದಿ ಮಗನ ತಬ್ಬಿ ಅವಗೆ ವರವ ಇಟ್ಟನು
ಸಂತಸದಿ ಮಗನ ತಬ್ಬಿ ಅವಗೆ ವರವ ಇಟ್ಟನು
ಇಂದಿನಿಂದ ಮೊದಲ ಪೂಜೆ ಎಂದು ನಿನಗೇ ಎಂದನು
ಗಣಗಳಿಗೆ ನಾಯಕ ನೀ ಎಂದು ಶಿವನು ನುಡಿದನು
ಅಂದಿನಿಂದ ಕಂದನಾದ ದೈವ ಗಣ ನಾಯಕ
ಭಕ್ತರ ವಿಘ್ನಗಳನು ಅರಿಸುವ ವಿನಾಯಕ |೩|
---------------------------------------------------------------------------------------


ಕಲ್ಯಾಣಾಧ್ಬುತ ಗಾತ್ರಾಯಾ ಕಾಮಿತಾರ್ಥ ಪ್ರದಾಯಿನೇ
ಶ್ರೀ ಮದ್ ವೆಂಕಟನಾಥಯಾ ಶ್ರೀನಿವಾಸಯತೇ ನಮಃ
ಶ್ರೀನಿವಾಸಯತೇ ನಮಃ

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಅತ್ರಿಮುನಿ ಮುಂತಾದ ಸಪ್ತಋಷಿಗಳು
ಆಕಾಶಗಂಗೆಯಿಂದ ತರಲು ಹೂಗಳು
ಅತ್ರಿಮುನಿ ಮುಂತಾದ ಸಪ್ತಋಷಿಗಳು
ಆಕಾಶಗಂಗೆಯಿಂದ ತರಲು ಹೂಗಳು
ಆಜಾನುಬಾಹುವೇ ಅಭ್ರಮೇಯ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಜಾಜಿಮಲ್ಲೆ, ಸೇವಂತಿಗೆ ಹೂಗಳು ಅರಳಿ
ಕಾದಿಹವು ಅಲಂಕರಿಸೇ ತವಪಾದವ
ಜಾಜಿಮಲ್ಲೆ, ಸೇವಂತಿಗೆ ಹೂಗಳು ಅರಳಿ
ಕಾದಿಹವು ಅಲಂಕರಿಸೇ ತವಪಾದವ
ತಂಗಾಳಿ ಸೌಗಂಧವ ಚೆಲ್ಲುತಿರುವುದು
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಪಂಚವರ್ಣ ಗಿಣಿಗಳು ನಾಮ ಹಾಡಿವೆ
ಪಂಚಾಮೃತ ಅಭಿಷೇಕದ ವೇಳೆ ಕಾದಿದೆ
ಪಂಚವರ್ಣ ಗಿಣಿಗಳು ನಾಮ ಹಾಡಿವೆ
ಪಂಚಾಮೃತ ಅಭಿಷೇಕದ ವೇಳೆ ಕಾದಿದೆ
ಪಾಂಚಜನ್ಯ ಶಂಖದೊಡೆಯ ಪದ್ಮನಾಭನೇ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ
-----------------------------------------------------------------------------------------------

ಪವಮಾನ ಪವಮಾನ ಜಗದಾ ಪ್ರಾಣಾ 
ಕೀರ್ತನಕಾರರು : ವಿಜಯದಾಸರು  ರಾಗ : ಪಂತುವರಾಳಿ ತಾಳ : ಆದಿ
 
ಪವಮಾನ ಪವಮಾನ ಜಗದಾ ಪ್ರಾಣಾ 
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ ।।ಪ॥
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ।।ಅ.ಪ॥

ಹೇಮ ಕಚ್ಚುಟ ಉಪವೀತ ಧರಿಪ ಮಾರುತಾ ಕಾಮಾದಿ ವರ್ಗರಹಿತಾ
ಕಾಮಾದಿ ವರ್ಗರಹಿತಾ
ವ್ಯೋಮಾದಿ ಸರ್ವವ್ಯಾವೃತಾ ನಿರ್ಭೀತಾ ರಾಮಚಂದ್ರನ ನಿಜದೂತಾ
ರಾಮಚಂದ್ರನ ನಿಜದೂತಾ
ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ 
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು ।।೧।।
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ

ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ 
ಪಾರಾವಾರ ಉದಾರಾ ಸಜ್ಜನರಘ ಪರಿಹಾರಾ
ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆಹೆಜ್ಜೆಗೆ ನಿನ್ನಬ್ಜ ಪಾದಧೂಳಿಮೂಜಗದಲಿ ಭವವರ್ಜಿತನೆನಿಸೊ ।।೨।।
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ

ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತೀರಮಣ 
ಆನಂದ ಭಾರತೀರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನ ಧನ ಪಾಲಿಪ ವರೇಣ್ಯ
ಜ್ಞಾನ ಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೆಸಗುವೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ
ಪ್ರಾಣನಾಥಾ ಶ್ರೀವಿಜಯವಿಠ್ಠಲನ ಕರುಣಿಸಿ ಕೊಡುವ ಭಾನಪ್ರಕಾಶಾ ।।೩।।
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ…
---------------------------------------------------------------------------------------------------------------------

ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ 
ಸಾಹಿತ್ಯ: -ಚಿ ಉದಯಶಂಕರ್ ಮತ್ತು ಎಂ ರಂಗ ರಾವ, ಗಾಯಕರು: ಡಾ.ರಾಜ್‌ಕುಮಾರ,

ಗಂಡು : ಎಲ್ಲಿ ನಿನ್ನ ಭಕ್ತರೋ.. ಅಲ್ಲೇ ಮಂತ್ರಾಲಯ...
            ಎಲ್ಲಿ ನಿನ್ನ ನೆನೆವರೋ... ಅಲ್ಲೇ ದೇವಾಲಯ...
            ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
ಕೋರಸ್ : ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ
                ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ

ಗಂಡು : ಪೂಜೆ ನಡೆವ ಮನೆಗಳೇ ಎಂದೂ ಪರಮಪಾವನ
           ಧ್ಯಾನಗೈವ ಮನೆಗಳೇ ನಿನ್ನಾ ಬೃಂದಾವನ
           ಪೂಜೆ ನಡೆವ ಮನೆಗಳೇ ಎಂದೂ ಪರಮಪಾವನ
           ಧ್ಯಾನಗೈವ ಮನೆಗಳೇ ನಿನ್ನಾ ಬೃಂದಾವನ
           ನಿನ್ನ ಅರಿತ ಹೃದಯವೇ. ದೇವನಿರುವ ಮಂದಿರ...ಅ.....ಅ.ಅ.
           ಆ..ಆ...ಆ...ಆ....ಆ......ಆ.ಆ. 
           ನಿನ್ನ ಅರಿತ ಹೃದಯವೇ. ದೇವನಿರುವ ಮಂದಿರ
           ನಿನ್ನ ಬೆರೆವ ಭಾಗ್ಯವೇ ನಿತ್ಯ ಸತ್ಯ ಸುಂದರ
           ನಿನ್ನ ಬೆರೆವ ಭಾಗ್ಯವೇ ನಿತ್ಯ ಸತ್ಯ ಸುಂದರ
           ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
ಕೋರಸ್ : ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ
               ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ

ಗಂಡು : ನಿನ್ನ ಕಾಣುವಾಸೆಯೇ ಪೂರ್ವ ಜನ್ಮ ಪುಣ್ಯವು..
            ನಿನ್ನ ನಂಬಿ ನಡೆವುದೇ ಬಾಳಿನಲ್ಲಿ ಭಾಗ್ಯವು...
            ನಿನ್ನ ಕಾಣುವಾಸೆಯೇ ಪೂರ್ವ ಜನ್ಮ ಪುಣ್ಯವು..
            ನಿನ್ನ ನಂಬಿ ನಡೆವುದೇ ಬಾಳಿನಲ್ಲಿ ಭಾಗ್ಯವು...
            ನಿನ್ನ ನಾಮಸ್ಮರಣೆಯೇ ದಿವ್ಯ ವೇದ ಮಂತ್ರವು.....ಉ..ಉ..
            ಆ..ಆ...ಆ...ಆ....ಆ......ಆ.ಆ.
           ನಿನ್ನ ನಾಮಸ್ಮರಣೆಯೇ ದಿವ್ಯ ವೇದ ಮಂತ್ರವು...
           ನಿತ್ಯ ನಿನ್ನ ಸೇವೆಯೇ ಮುಕ್ತಿ ಪಡೆವ ತಂತ್ರವು
           ನಿತ್ಯ ನಿನ್ನ ಸೇವೆಯೇ ಮುಕ್ತಿ ಪಡೆವ ತಂತ್ರವು
           ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
ಕೋರಸ್ : ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ
                ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
                ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ
------------------------------------------------------------------------------------------------------------------

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ಸಾಹಿತ್ಯ: -ಚಿ ಉದಯಶಂಕರ್ ಮತ್ತು ಎಂ ರಂಗ ರಾವ, ಗಾಯಕರು: ಡಾ.ರಾಜ್‌ಕುಮಾರ,

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||

ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ
ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ||
ಹೇಗೆ ಇರಲಿ ಎಲ್ಲೆ ಇರಲಿ…ಅವನ ಸ್ಮರಣೆ ಮಾಡಿರಿ….
ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ||

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ 

ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ||
ಕಲ್ಲು ಮುಳ್ಳೊ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ
ಏನೇ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ||

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||

ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು |
ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು||
ಕೊಡುವುದೆಲ್ಲ ಕೊಡುವನವನು ಇನ್ನು ಆಸೆಯೇತಕೆ
ಕಲ್ಪವೃಕ್ಷದಂತೆ ಗುರುವು ಇರಲು ಚಿಂತೆಯೇತಕೆ||

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||

“ಪೂಜ್ಯಾಯ ರಾಘವೇಂದ್ರಾಯ, ಸತ್ಯಧರ್ಮವ್ರತಾಯಚ
ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ…. ನಮತಾಂ ಕಾಮಧೇನುವೆ” ||
-------------------------------------------------------------------------------------------------------------------------
ಕೃಷ್ಣನ ಹಾಡು - ಏಸ್.ಜಾನಕೀ

ನಂದ ಕಿಶೋರ ನವನೀತ ಚೋರ ಉಡುಪಿ ನಾಥ ಶ್ರೀ ಹರಿ | ಶ್ಯಾಮಲ ಕೋಮಲ ಕೃಷ್ಣ ಮುರಾರಿ ಮೋಹನ ಮುರಳಿಧಾರಿ ||

ನಗೆ ಬೆಳದಿಂಗಳ ಚೆಲ್ಲುತನಿಂದ ಭಕುತರ ಕಾಯುವ ಗೋವಿಂದ | ನಲಿಯುತ ಗೋಪಿಯರೆಲ್ಲರ ಕೂಡಿ ಆಡುತ ನೀಡುವ ಆನಂದ | ಹಸುಕರು ಕೂಗಲು ತವಕದಿ ಓಡುವ ಹಸುಳೆಯ ತೆರದಿ ಮುಕುಂದಾ ||

ಕಂಸನ ಕಂಡು ಕಿಡಿಮಿಡಿಗೊಂಡು ಧ್ವ0ಸವ ಮಾಡಿದ ಅಸುರಾರಿ | ಕನಕನ ಕಂಡು ಬಲು ಮುದಗೊಂಡು ಕಿಂಡಿಯಲಿಣಿಕಿದ ದಯೆ ತೋರಿ | ಕನ್ನಡ ನೆಲದಲ್ಲಿ ನಲೆಸಿದ ನಮ್ಮ ಕರುಣಾಸಾಗರ ಶ್ರೀಹರಿ
------------------------------------------------------------------
ಶ್ರೀ ವೆಂಕಟೇಶ ಸುಪ್ರಭಾತ
ಗಾಯನ : ಘಂಟಸಾಲ್

ನಮೋ ವೆಂಕಟೇಶ... ನಮೋ ತಿರುಮಲೇಶಾ....
ನಮಸ್ತೇ... ನಮಸ್ತೇ... ನಮ: ಆಆಅಆಆಆಆ...
ನಮೋ ವೆಂಕಟೇಶ... ನಮೋ ತಿರುಮಲೇಶಾ....
ನಮೋ ವೆಂಕಟೇಶ... ನಮೋ ತಿರುಮಲೇಶಾ....
ಮಹಾನಂದ ಮಾಯೇ.. ಓ ಮಹಾದೇವ ದೇವ...
ಮಹಾನಂದ ಮಾಯೇ.. ಓ ಮಹಾದೇವ ದೇವ
ನಮೋ ವೆಂಕಟೇಶ... ನಮೋ ತಿರುಮಲೇಶಾ...

ಮುದುಪುಲು ನೇ ಕೊಸಗೇ ಮಾ ಮೊಕ್ಕಲು ತಿರ್ಚುಮಯಾ...
ಮುದುಪುಲು ನೇ ಕೊಸಗೇ ಮಾ ಮೊಕ್ಕಲು ತಿರ್ಚುಮಯಾ...
ಮುಕ್ತಿ ಕೋರೆ ವಚ್ಚೆನೇ.... ಭಕ್ತುಲ ಬ್ರೊವುಮಯಾ...
ಭಕ್ತುಲ ಬ್ರೊವುಮಯಾ.
ನಮೋ ವೆಂಕಟೇಶ... ನಮೋ ತಿರುಮಲೇಶಾ...

ನರಕ ತುಲ್ಯಮವು ಯೇ ಭುವಿ ಸ್ವರ್ಗಮು ಛೇಯವಯಾ
ನರಕ ತುಲ್ಯಮವು ಯೇ ಭುವಿ ಸ್ವರ್ಗಮು ಛೇಯವಯಾ
ಮನುಜುಲು ನೀನು ಜೇರೇ ಪರಮಾರ್ಧಮು ತೇಲ್ಪವಯಾ...
ಪರಮಾರ್ಧಮು ತೇಲ್ಪವಯಾ
ನಮೋ ವೆಂಕಟೇಶ... ನಮೋ ತಿರುಮಲೇಶಾ...
ನಮೋ ವೆಂಕಟೇಶ... ನಮೋ ತಿರುಮಲೇಶಾ... ... 
ನಮೋ ತಿರುಮಲೇಶಾ... ನಮೋ... ನಮೋ ತಿರುಮಲೇಶಾ
--------------------------------------------------------------------------

ಮಾನವ ಜನ್ಮ ದೊಡ್ಡದು - ಪುರುಂದರದಾಸರ 

ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ||

ಕಣ್ಣು ಕೈ ಕಾಲ್ಕಿವಿ ನಾಲಗೆ ಇರಲಿಕ್ಕೆ
ಮಣ್ಣುಮುಕ್ಕಿ ಮರಳಾಗುವರೆ
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು
ಉಣ್ಣದೆ ಉಪವಾಸವಿರುವರೇನೋ ||1||

ಕಾಲದೂತರು ಬಂದು ಕರಪಿಡೆದೆಳೆದಾಗ
ತಾಳು ತಾಳೆಂದರೆ ಕೇಳುವರೆ?
ವೇಳೆ ಹೋಗುವ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ||2||

ಏನು ಕಾರಣ ಯದುಪತಿಯನ್ನು ಮರೆತಿರಿ
ಧನ ಧಾನ್ಯ ಸತಿ ಸುತರಿವು ನಿತ್ಯವೆ?
ಇನ್ನಾದರು ಭಜಿಸಿ ಶ್ರೀ ಪುರಂದರವಿಠಲನ
ಚೆನ್ನಾಗಿ ನೀವು ಸುಖಿಯಾಗಿರಯ್ಯ ||3||
-------------------------------------------------------------------------
ಮಲೆನಾಡಿನ ಮೈ ಸಿರಿಯಲಿ  - ಎಸ್.ಜಾನಕೀ

ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರೀ ... 
ನಲಿಯುತ ಹರಿದಿಹ ತುಂಗಾ ನದಿಯ ಒಲವನು ಪಡೆದಿಹ ಶೃಂಗೇರಿ... 
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರೀ ... 

ವರ ಮುನಿ ವೃಕ್ಷ ಶೃಂಗರ ಆಶ್ರಮ ಮೆರೆದ ಭೂಮಿ ಈ ಶೃಂಗೇರಿ... 
ವರ ಮುನಿ ವೃಕ್ಷ ಶೃಂಗರ ಆಶ್ರಮ ಮೆರೆದ ಭೂಮಿ ಈ ಶೃಂಗೇರಿ... 
ತೆರೆಯುತ ಹೆಡೆಯ ಹಾವು ತಪಿಗೇ... 
ತೆರೆಯುತ ಹೆಡೆಯ ಹಾವು ತಪಿಗೇ ನೆರಳನು ನೀಡಿದ ಶೃಂಗೇರಿ... 
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರೀ ... 
 
ಆದಿ ಗುರು ಶ್ರೀ ಶಂಕರ ಸ್ಥಾಪಿತ ಶಾರದ ಪೀಠದ ಶೃಂಗೇರೀ .... 
ಆದಿ ಗುರು ಶ್ರೀ ಶಂಕರ ಸ್ಥಾಪಿತ ಶಾರದ ಪೀಠದ ಶೃಂಗೇರೀ .... 
ಅಭಯಿತದ ಸಿದ್ಧಾಂತದ ಕೇಂದ್ರ ಏನುಸಿದ ಪಾವನ ಶೃಂಗೇರಿ.. 
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರೀ ... 

ಶ್ರೀ ಚಕ್ರಾಂಪಿತ ಪೀಠದಿ ಮರೆಯುವ ಶಾರದಾಂಬೆಯ ಶೃಂಗೇರಿ... 
ಶ್ರೀ ಚಕ್ರಾಂಪಿತ ಪೀಠದಿ ಮರೆಯುವ ಶಾರದಾಂಬೆಯ ಶೃಂಗೇರಿ... 
ಸುರೇಶ್ವರಾಂಕಿತ ಪಠಿಚ ಲಿಂಗ ಶ್ರೀಚಂದ್ರಮೌಳಿಯಾ ಶೃಂಗೇರಿ... 
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರೀ ... 
ನಲಿಯುತ ಹರಿದಿಹ ತುಂಗಾ ನದಿಯ ಒಲವನು ಪಡೆದಿಹ ಶೃಂಗೇರಿ... 
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರೀ ... 
---------------------------------------------------------------------------
ಕಾಶಿಯಿಂದ ಬಂದನಿಲ್ಲಿ - ಎಸ್.ಜಾನಕೀ

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ 
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ 
ಧರ್ಮದಾ ಮರ್ಮವಿಹ ಈ ನೆಲ ಕನ್ನಡದ ಹಿರಿಮೆಯ ಧರ್ಮಸ್ಥಳ 
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ  

ನೇತ್ರಾವತಿ ಬಂದಳು ಮಾಯೆಯಾಗಿ ದೇವಗಂಗೆಯಂತೆಯೇ ಪಾವನೆಯಾಗಿ 
ನೇತ್ರಾವತಿ ಬಂದಳು ಮಾಯೆಯಾಗಿ ದೇವಗಂಗೆಯಂತೆಯೇ ಪಾವನೆಯಾಗಿ 
ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ ಭೂತ ಪ್ರೇತ ಸೇನೆಗೆ ನಾಥನಾಗಿ 
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ 

ಹಿಂದೂ ಜೈನ ಧರ್ಮದ ಸಂಗಮವಿಲ್ಲಿ ಎಂದು ಸಾರುತಿಹನು ಬಾಹುಬಲಿ 
ಹಿಂದೂ ಜೈನ ಧರ್ಮದ ಸಂಗಮವಿಲ್ಲಿ ಎಂದು ಸಾರುತಿಹನು ಬಾಹುಬಲಿ  
ಇಂಥ ಪುಣ್ಯ ಕ್ಷೇತ್ರಕೆ ಸಾಟಿಯೆಲ್ಲಿ ಯಾತ್ರಿಕನೆ ಧನ್ಯನಾಗಿ ನಲಿ ನಲಿ 
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ  
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ  
ಧರ್ಮದಾ ಮರ್ಮವಿಹ ಈ ನೆಲ ಕನ್ನಡದ ಹಿರಿಮೆಯ ಧರ್ಮಸ್ಥಳ 
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ 
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ 
-----------------------------------------------------------------------

ಎದ್ದೇಳು ಮಂಜುನಾಥ - ಗಾಯನ : ಪಿ.ಬಿ.ಶ್ರೀನಿವಾಸ

ಎದ್ದೇಳು……
ಎದ್ದೇಳು ಮಂಜುನಾಥ ಏಳು ಬೆಳಗಾಯಿತು…
ಎದ್ದೇಳು ಮಂಜುನಾಥ ಏಳು ಬೆಳಗಾಯಿತು…
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..
ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು
ಎದ್ದೇಳು ಮಂಜುನಾಥ ಎದ್ದೇಳು…

ಮುನಿಗಣಂಗಳು ಸ್ತೋತ್ರ ಮಾಡುತಿಹರು…………
ಮುನಿಗಣಂಗಳು ಸ್ತೋತ್ರ ಮಾಡುತಿಹರು…………
ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …
ಎದ್ದೇಳು ಮಂಜುನಾಥ ಎದ್ದೇಳು…

ಮೃಗರಾಜನೂ ನಿನ್ನ ದರುಶನಕೇ ಬಂದಿಹನು…
ಮೃಗರಾಜನೂ ನಿನ್ನ ದರುಶನಕೇ ಬಂದಿಹನು…
ಗಜರಾಜನು ನಿನಗೇ ಚಾಮರವ ಬೀಸುತಿಹನು….
ಗಜರಾಜನು ನಿನಗೇ ಚಾಮರವ ಬೀಸುತಿಹನು….
ನಿನ್ನ ಆಭರಣಗಳಿಗಾಗಿ ಆದಿಶೇಷನೂ……..
ನಿನ್ನ ಆಭರಣಗಳಿಗಾಗಿ ಆದಿಶೇಷನೂ…… ನಿನ್ನ ಸೇರಲೂ ಕಾತರಿಸುತಿಹನು
ಎದ್ದೇಳು ಮಂಜುನಾಥ ಎದ್ದೇಳು……

ಕೋಗಿಲೆಗಳೂ, ಕೋಗಿಲೆಗಳೂ, ಸುಸ್ವರದಿ ಗಾನಮೊಳಗುತಿಹವೂ…………
ಸರಿಗಪದ… ಸದಪಗಪ…. ದಪಗಸರಿ… ಗರಿಸದಸ…..
ಕೋಗಿಲೆಗಳು ಸುಸ್ವರದಿ ಗಾನ ಮೊಳಗುತಿಹವು….
ಸವಿಮಾತಿನ ಅರಗಿಳಿಯೂ ನಿನ್ನ ಧ್ಯಾನದಲಿಹುದೂ …….
ಪಾರಿವಾಳಗಳು ನಿನ್ನ ದರುಶನಕೆ ಕಾದಿಹವೂ………
ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು………..
ತಡವು ಏತಕೆ ಪ್ರಭುವೇ..... 
ತಡವು ಏತಕೆ ಪ್ರಭುವೇ ದರುಶನವ ನೀಡೇಳು
ಎದ್ದೇಳು ಮಂಜುನಾಥ ಎದ್ದೇಳು……

ನೇತ್ರಾವತಿಯಲ್ಲಿ ಮಿಂದು ಜನರೂ ವಿಧವಿಧದೀ ಸೇವೆಗಳ ಗೈಯುತಿಹರೂ…….
ನೇತ್ರಾವತಿಯಲ್ಲಿ ಮಿಂದು ಜನರೂ ವಿಧವಿಧದೀ ಸೇವೆಗಳ ಗೈಯುತಿಹರೂ…….
ಸರ್ವರಕ್ಷಕ… ಸರ್ವರಕ್ಷಕನು ನೀನು ದರುಶನವಾ ನೀಡೇಳೂ ……….
ವಿಪ್ರರೆಲ್ಲರೂ ಕೂಡಿ ವೇದಘೋಷಿಸುತಿಹರೂ………..
ವಿಪ್ರರೆಲ್ಲರೂ ಕೂಡಿ ವೇದಘೋಷಿಸುತಿಹರೂ………..
ಮೋಕ್ಷವನು ನೀಡೇಳು….
ರವಿಯ ಕಿರಣವೂ ನಿನ್ನ ಮಹಾದ್ವಾರವನು ಬೆಳಗುತಿಹುದೂ…
ದರುಶನವ ನೀಡೇಳೂ…… ಏಳೂ ಬೆಳಗಾಯಿತು ….ಏಳು ಬೆಳಗಾಯಿತು …….
ಎದ್ದೇಳು ಮಂಜುನಾಥಾ ಎದ್ದೇಳು……….. ಎದ್ದೇಳು 
----------------------------------------------------------------------------------------------------------
ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳು - 

ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ - ಹಾಡಿದವರು : ಕೆ.ಜೆ.ಏಸುದಾಸ 

ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ
ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ
ನಾನಲ್ಲ ಕವಿಯೂ ಶ್ರೀ ಮೃದ ಮದಸ್ಮಿತ ಬಣ್ಣಿಸಲೂ ಎಲ್ಲಾ ಮರೆತೂ ಹಾಡೋ.. ಅಸತೋಮ ಸದ್ಗಮಯ
ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ

ತತ್ವವೂ ತನ್ನ ಸ್ಮಿತ್ತವ ಪಡೆವುದು ತತ್ವವನೇ ಸೇರಿ.. ನಿತ್ಯ ನಿರಂತರ ಬೇಡುವೇ ಸದ್ಗತಿ ಸನ್ನಿಧಿಯಾ  ಸೇರಿ 
ತತ್ವವೂ ತನ್ನ ಸ್ಮಿತ್ತವ ಪಡೆವುದು ತತ್ವವನೇ ಸೇರಿ.. ನಿತ್ಯ ನಿರಂತರ ಬೇಡುವೇ ಸದ್ಗತಿ ಸನ್ನಿಧಿಯಾ  ಸೇರಿ 
ಉತ್ತಮವೆಂದೂ ನಿತ್ಯವು ನಿಂದೂ ನನ್ನನೇ ಮರೆತೂ .. ನಾ ಅರಿಯದೇ ಹಾಡೋ.. ತಮೋಸೋಮ್ ಜ್ಯೋತಿರ್ಗಮಯ... 
ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ
ನಾನಲ್ಲ ಕವಿಯೂ ಶ್ರೀ ಮೃದ ಮದಸ್ಮಿತ ಬಣ್ಣಿಸಲೂ ಎಲ್ಲಾ ಮರೆತೂ ಹಾಡೋ.. ಅಸತೋಮ ಸದ್ಗಮಯ 
ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ
ಕರ್ಪುರ ಉರಿವುದೂ ಆರದೇ ಹೊನ್ನಿನ ಬೆಳಕಾಗಿ.. ನಿಲ್ಲುವೇ ನಾನೂ ನಿನ್ನೆದುರಲ್ಲೀ ಒಂದೇ ಹಿಡಿಯಾಗಿ 
ಕರ್ಪುರ ಉರಿವುದೂ ಆರದೇ ಹೊನ್ನಿನ ಬೆಳಕಾಗಿ.. ನಿಲ್ಲುವೇ ನಾನೂ ನಿನ್ನೆದುರಲ್ಲೀ ಒಂದೇ ಹಿಡಿಯಾಗಿ 
ಉಕ್ಕಿದೆ ನನ್ನ ಮನಸಲಿ ನಿನ್ನ ತೇಜೋ ರೂಪ... ನನ್ನ ಭಕ್ತಿಯ ಹಾಡೂ .. ಮೃತ್ಯೋರ್ಮ ಅಮೃತಂಗಮಯ 
ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ
ನಾನಲ್ಲ ಕವಿಯೂ ಶ್ರೀ ಮೃದ ಮದಸ್ಮಿತ ಬಣ್ಣಿಸಲೂ ಎಲ್ಲಾ ಮರೆತೂ ಹಾಡೋ.. ಅಸತೋಮ ಸದ್ಗಮಯ 
ಮಕರ ಸಂಕ್ರಮ ದೀಪಾವಳಿಯೂ ನಾಡಿಗೆ ಬಂದಾಗ ಮನಸ್ಸಿನೋಳಗಿನ ಮಣಿಕಂಠ ನೀ ಸಂತಸಗೊಂಡಾಗ
--------------------------------------------------------------------------------------------------------------------------

02) ಪರಶಿವನ ಪ್ರತಿರೂಪ ಶಭರಿವಳಗ ಹತ್ತಿ ದೀಪ  - ಹಾಡಿದವರು : ಕೋರಸ್

ಗಂಡು : ಆಆಆ... ಶಬರಿಗಿರಿ ಒಳಗ ಹತ್ತಿದಂಗ ಜ್ಯೋತಿ
            ಶಬರಿಗಿರಿ ಒಳಗ ಹತ್ತಿದಂಗ ಜ್ಯೋತಿ
            ಭಕ್ತರ ಮನಸಿನೊಳಗ ಓಂ ಶರಣಂ ಸ್ವಾಮಿ ಅಯ್ಯಪ್ಪ ಎಂದೂ ಕೂಗತೈತಿ...
ಕೋರಸ್ : ಓಂ..
ಗಂಡು : ಸ್ವರ್ಗಲೋಕದಿಂದ ಗರುಡಾ ಹಾರೀ ಬರತೈತಿ..
ಕೋರಸ್ : ಓಂ..
ಗಂಡು : ಶಬರಿ ಮಲೈಯನ್ನೇ ಸುತ್ತಿ ಸುತ್ತೀ ಸಾರತೈತೇ ಆ ಶಿವನೇ ನಿನ್ನಾ ಕೀರ್ತಿ.. 
ಕೋರಸ್ : ಓಂ.. 
ಗಂಡು : ಸಾರತೈತೇ ಆ ಶಿವನೇ ನಿನ್ನಾ ಕೀರ್ತಿ.. 
ಕೋರಸ್ : ಓಂ.. 
ಗಂಡು : ಪರಶಿವನ...  ಪ್ರತಿರೂಪ.. ಶಬರಿ ಒಳಗ ಹತ್ತಿ ದೀಪ 
           ಸಂಕ್ರಮಣ ಮನದಾಗ ಶಬರಿ ಒಳಗ ಗರುಡನ ರೂಪ 
           ದುಷ್ಟ ಮಹಿಷಿಯ ಜುಟ್ಟನ್ನೂ ಹಿಡಿದೂ ಅಡಗಿಸಿದ ಆಕೀಯ ದರ್ಪ 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
ಕೋರಸ್ :  ಪರಶಿವನ...  ಪ್ರತಿರೂಪ.. ಶಬರಿ ಒಳಗ ಹತ್ತಿ ದೀಪ               
           ಸಂಕ್ರಮಣ ಮನದಾಗ ಶಬರಿ ಒಳಗ ಗರುಡನ ರೂಪ 
           ದುಷ್ಟ ಮಹಿಷಿಯ ಜುಟ್ಟನ್ನೂ ಹಿಡಿದೂ ಅಡಗಿಸಿದ ಆಕೀಯ ದರ್ಪ 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
ಗಂಡು : ಮಾಡಲಿಲ್ಲ ಕೋಪ ಕೊಡಲಿಲ್ಲ ಶಾಪ ಮನೆಯಿಂದ ಹೊರಗ ಬಂದ್ಯಪ್ಪಾ.. 
            ಇಂದ್ರ ಲೋಕದೊಳಗ ಇಂದ್ರನ್ ಕಟ್ಟೀ ಮಹಿಷಿ ತೋರುತಿದ್ದಲೂ ಆಕೀ ದರ್ಪ 
ಕೋರಸ್  : ಮಾಡಲಿಲ್ಲ ಕೋಪ ಕೊಡಲಿಲ್ಲ ಶಾಪ ಮನೆಯಿಂದ ಹೊರಗ ಬಂದ್ಯಪ್ಪಾ.. 
            ಇಂದ್ರ ಲೋಕದೊಳಗ ಇಂದ್ರನ್ ಕಟ್ಟೀ ಮಹಿಷಿ ತೋರುತಿದ್ದಲೂ ಆಕೀ ದರ್ಪ 
ಗಂಡು : ಮಾಡಲಿಲ್ಲ ಕೋಪ ಕೊಡಲಿಲ್ಲ ಶಾಪ ಮನೆಯಿಂದ ಹೊರಗ ಬಂದ್ಯಪ್ಪಾ.. 
            ಇಂದ್ರ ಲೋಕದೊಳಗ ಇಂದ್ರನ್ ಕಟ್ಟೀ ಮಹಿಷಿ ತೋರುತಿದ್ದಲೂ ಆಕೀ ದರ್ಪ 
ಕೋರಸ್  : ಮಾಡಲಿಲ್ಲ ಕೋಪ ಕೊಡಲಿಲ್ಲ ಶಾಪ ಮನೆಯಿಂದ ಹೊರಗ ಬಂದ್ಯಪ್ಪಾ.. 
            ಇಂದ್ರ ಲೋಕದೊಳಗ ಇಂದ್ರನ್ ಕಟ್ಟೀ ಮಹಿಷಿ ತೋರುತಿದ್ದಲೂ ಆಕೀ ದರ್ಪ 
ಗಂಡು : ಬಿಲ್ಲೂ ಬಾಣ ಬತ್ತಳಿಕೆ ಹೆಗಲಮ್ಯಾಗ ಹೊತ್ಯಾಪ್ಪಾ .. 
            ದುಷ್ಟ ರಾಕ್ಷಸರ ಎದುರಿಗೇ ಹೋಗಿ ಹೆಂಗ ಹೊಡೆದ್ಯಪ್ಪಾ 
            ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
            ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
ಕೋರಸ್ :  ಪರಶಿವನ...  ಪ್ರತಿರೂಪ.. ಶಬರಿ ಒಳಗ ಹತ್ತಿ ದೀಪ               
           ಸಂಕ್ರಮಣ ಮನದಾಗ ಶಬರಿ ಒಳಗ ಗರುಡನ ರೂಪ 
           ದುಷ್ಟ ಮಹಿಷಿಯ ಜುಟ್ಟನ್ನೂ ಹಿಡಿದೂ ಅಡಗಿಸಿದ ಆಕೀಯ ದರ್ಪ 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ..             
ಗಂಡು : ಸ್ವರ್ಗಲೋಕದೊಳಗ ಗರುಡನ ರೂಪ ಕೆಳಗ ಇಳಿದೂ ಬಂದ್ಯಪ್ಪಾ .. 
            ಬರೂದರ ಒಳಗ ಶಬರಿಯ ಒಳಗ ಹತ್ತಿತ್ತಲ್ಲೋ ಶಿವನ ನಿನ್ನ ದೀಪ .. 
ಕೊರಸ್  : ಸ್ವರ್ಗಲೋಕದೊಳಗ ಗರುಡನ ರೂಪ ಕೆಳಗ ಇಳಿದೂ ಬಂದ್ಯಪ್ಪಾ .. 
            ಬರೂದರ ಒಳಗ ಶಬರಿಯ ಒಳಗ ಹತ್ತಿತ್ತಲ್ಲೋ ಶಿವನ ನಿನ್ನ ದೀಪ .. 
ಗಂಡು : ಸ್ವರ್ಗಲೋಕದೊಳಗ ಗರುಡನ ರೂಪ ಕೆಳಗ ಇಳಿದೂ ಬಂದ್ಯಪ್ಪಾ .. 
            ಬರೂದರ ಒಳಗ ಶಬರಿಯ ಒಳಗ ಹತ್ತಿತ್ತಲ್ಲೋ ಶಿವನ ನಿನ್ನ ದೀಪ .. 
ಕೊರಸ್  : ಸ್ವರ್ಗಲೋಕದೊಳಗ ಗರುಡನ ರೂಪ ಕೆಳಗ ಇಳಿದೂ ಬಂದ್ಯಪ್ಪಾ .. 
            ಬರೂದರ ಒಳಗ ಶಬರಿಯ ಒಳಗ ಹತ್ತಿತ್ತಲ್ಲೋ ಶಿವನ ನಿನ್ನ ದೀಪ .. 
ಗಂಡು : ವರುಷಕೊಮ್ಮೇ ಸಂಕ್ರಮಣದಾಗ  ಹತ್ತತೈತೀ ನಿನ್ನ ದೀಪ 
            ಸ್ವರ್ಗಲೋಕದಿಂದ ಗರುಡ ಹಾರೀ ಹಾರತೈತಿ ನಿನ್ನ ರೂಪ 
            ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
            ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
ಕೋರಸ್ :  ಪರಶಿವನ...  ಪ್ರತಿರೂಪ.. ಶಬರಿ ಒಳಗ ಹತ್ತಿ ದೀಪ               
           ಸಂಕ್ರಮಣ ಮನದಾಗ ಶಬರಿ ಒಳಗ ಗರುಡನ ರೂಪ 
           ದುಷ್ಟ ಮಹಿಷಿಯ ಜುಟ್ಟನ್ನೂ ಹಿಡಿದೂ ಅಡಗಿಸಿದ ಆಕೀಯ ದರ್ಪ 
           ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ.. 
          ಧರೆಗೇ ಇಳಿದೂ ಬಾರೋ ಸ್ವಾಮೀ ಶರಣಂ ಅಯ್ಯಪ್ಪ..             
 -------------------------------------------------------------------------------------------------------------------------

೦೩) ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ  - ಆಪೇಕ್ಷೆ ಪಟ್ಟವರು : ರತ್ನಾ, ದಿವ್ಯಾ, ಕಾವ್ಯ 

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ

ನೀನಿಷ್ಟದಂತೆನ್ನ ಇಟ್ಟಿರುವೆ ರಾಮ ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ... ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ
ರಘುರಾಮ ರಘುರಾಮ ರಘುರಾಮ ರಾಮ 
ರಘುರಾಮ ರಘುರಾಮ ರಘುರಾಮ ರಾಮ 
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ

ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ ನನ್ನ ಹರಣಕೆ ನಿನ್ನ ಚರಣ ಕೊಡು ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ

ಕೌಸಲ್ಯೆಯಾಗುವೆನು ಮಡಿಲಲಿರು ರಾಮ ವೈದೇಹಿಯಾಗುವೆನು ಒಡನಾಡು ರಾಮ
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ ಸಹವಾಸ ಕೊಡು ನನಗೆ ಸೌಮಿತ್ರಿ ರಾಮ
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ ಶಬರಿಯಾಗುವೆ ನಿನ್ನ ಭಾವ ಕೊಡು ರಾಮ
ರಘುರಾಮ ರಘುರಾಮ ರಘುರಾಮ ರಾಮ 
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ  ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ

ಮಡಿಲಲ್ಲಿ ಮರಣಕೊಡು ನಾ ಜಟಾಯೂ ರಾಮ ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣು ಭಾವ ಕೊಡು ರಾಮ ನನ್ನೊಳಿಹ ರಾವಣಗೆ ಸಾವ ಕೊಡು ರಾಮ
ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ
ರಘುರಾಮ ರಘುರಾಮ ರಘುರಾಮ ರಾಮ 
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ  ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ

ಋತ ನೀನೆ ಋತು ನೀನೆ ಶೃತಿ ನೀನೆ ರಾಮ ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ
ಆರಂಭ ಅಸ್ತಿತ್ವ ಅಂತ್ಯ ನೀ ರಾಮ ಪೂರ್ಣ ನೀ ಪ್ರಕಟ ನೀ ಆನಂದ ರಾಮ
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ 
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ
ರಘುರಾಮ ರಘುರಾಮ ರಘುರಾಮ ರಾಮ
ನಗುರಾಮ ನಗರಾಮ ಜಗರಾಮ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ರಾಮ ರಾಮ ರಾಮ ರಾಮ
---------------------------------------------------------------------------------------------------------------

ಮಹಿಷಾಸುರಮರ್ದಿನಿ ಸ್ತೋತ್ರಮ್ -  
ರಚನೆ : ಆದಿ ಶಂಕರಾಚಾರ್ಯ ,  ಗಾಯನ : ಸೂಲಮಂಗಲಂ ಸಹೋದರಿಯರು 

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇ
ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ
ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧ ||

ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ
ತ್ರಿಭುವನಪೋಷಿಣಿ ಶಂಕರತೋಷಿಣಿ ಕಿಲ್ಬಿಷಮೋಷಿಣಿ ಘೋಷರತೇ
ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨ ||

ಅಯಿ ಜಗದಂಬ ಮದಂಬ ಕದಂಬವನಪ್ರಿಯವಾಸಿನಿ ಹಾಸರತೇ
ಶಿಖರಿಶಿರೋಮಣಿತುಂಗಹಿಮಾಲಯಶೃಂಗನಿಜಾಲಯಮಧ್ಯಗತೇ
ಮಧುಮಧುರೇ ಮಧುಕೈಟಭಗಂಜಿನಿ ಕೈಟಭಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೩ ||

ಅಯಿ ಶತಖಂಡ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇ
ರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ
ನಿಜಭುಜದಂಡ ನಿಪಾತಿತಖಂಡವಿಪಾತಿತಮುಂಡಭಟಾಧಿಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೪ ||


ಅಯಿ ರಣದುರ್ಮದ ಶತ್ರುವಧೋದಿತ ದುರ್ಧರನಿರ್ಜರ ಶಕ್ತಿಭೃತೇ
ಚತುರವಿಚಾರಧುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ
ದುರಿತದುರೀಹದುರಾಶಯದುರ್ಮತಿದಾನವದೂತಕೃತಾಂತಮತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೫ ||

ಅಯಿ ಶರಣಾಗತವೈರಿವಧೂವರ ವೀರವರಾಭಯದಾಯಕರೇ
ತ್ರಿಭುವನ ಮಸ್ತಕ ಶೂಲವಿರೋಧಿಶಿರೋಧಿಕೃತಾಮಲ ಶೂಲಕರೇ
ದುಮಿದುಮಿತಾಮರ ದುಂದುಭಿನಾದ ಮಹೋ ಮುಖರೀಕೃತ ತಿಗ್ಮಕರೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೬ ||

ಅಯಿ ನಿಜಹುಂಕೃತಿಮಾತ್ರ ನಿರಾಕೃತ ಧೂಮ್ರವಿಲೋಚನ ಧೂಮ್ರಶತೇ
ಸಮರವಿಶೋಷಿತ ಶೋಣಿತಬೀಜ ಸಮುದ್ಭವಶೋಣಿತ ಬೀಜಲತೇ
ಶಿವ ಶಿವ ಶುಂಭ ನಿಶುಂಭ ಮಹಾಹವ ತರ್ಪಿತ ಭೂತ ಪಿಶಾಚರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೭ ||

ಧನುರನುಸಂಗ ರಣಕ್ಷಣಸಂಗ ಪರಿಸ್ಫುರದಂಗ ನಟತ್ಕಟಕೇ
ಕನಕ ಪಿಶಂಗಪೃಷತ್ಕನಿಷಂಗರಸದ್ಭಟ ಶೃಂಗ ಹತಾವಟುಕೇ
ಕೃತಚತುರಂಗ ಬಲಕ್ಷಿತಿರಂಗ ಘಟದ್ಬಹುರಂಗ ರಟದ್ಬಟುಕೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೮ ||

ಸುರಲಲನಾ ತತಥೇಯಿ ತಥೇಯಿ ಕೃತಾಭಿನಯೋದರ ನೃತ್ಯರತೇ
ಕೃತ ಕುಕುಥಃ ಕುಕುಥೋ ಗಡದಾದಿಕತಾಲ ಕುತೂಹಲ ಗಾನರತೇ
ಧುಧುಕುಟ ಧುಕ್ಕುಟ ಧಿಂಧಿಮಿತ ಧ್ವನಿ ಧೀರ ಮೃದಂಗ ನಿನಾದರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೯ ||




ಜಯ ಜಯ ಜಪ್ಯ ಜಯೇ ಜಯ ಶಬ್ದಪರಸ್ತುತಿ ತತ್ಪರ ವಿಶ್ವನುತೇ
ಭಣ ಭಣ ಭಿಂಜಿಮಿ ಭಿಂಕೃತನೂಪುರ ಸಿಂಜಿತಮೋಹಿತ ಭೂತಪತೇ
ನಟಿತನಟಾರ್ಧ ನಟೀನಟನಾಯಕ ನಾಟಿತನಾಟ್ಯ ಸುಗಾನರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೦ ||

ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ
ಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರವೃತೇ
ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೧ ||

ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಕ ಮಲ್ಲರತೇ
ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಭಿಲ್ಲಿಕ ಭಿಲ್ಲಿಕ ವರ್ಗ ವೃತೇ
ಸಿತಕೃತ ಪುಲ್ಲಿಸಮುಲ್ಲಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೨ ||

ಅವಿರಲಗಂಡಗಲನ್ಮದಮೇದುರ ಮತ್ತಮತಂಗಜ ರಾಜಪತೇ
ತ್ರಿಭುವನಭೂಷಣಭೂತಕಳಾನಿಧಿ ರೂಪಪಯೋನಿಧಿ ರಾಜಸುತೇ
ಅಯಿ ಸುದತೀಜನ ಲಾಲಸಮಾನಸ ಮೋಹನಮನ್ಮಥ ರಾಜಸುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೩ ||

ಕಮಲದಲಾಮಲ ಕೋಮಲಕಾಂತಿ ಕಲಾಕಲಿತಾಮಲ ಭಾಲಲತೇ
ಸಕಲವಿಲಾಸ ಕಳಾನಿಲಯಕ್ರಮ ಕೇಳಿಚಲತ್ಕಲ ಹಂಸಕುಲೇ
ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲದ್ಭಕುಲಾಲಿ ಕುಲೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೪ ||

ಕರಮುರಳೀರವವೀಜಿತಕೂಜಿತ ಲಜ್ಜಿತಕೋಕಿಲ ಮಂಜುಮತೇ
ಮಿಳಿತ ಪುಲಿಂದ ಮನೋಹರ ಗುಂಜಿತ ರಂಜಿತಶೈಲ ನಿಕುಂಜಗತೇ
ನಿಜಗುಣಭೂತ ಮಹಾಶಬರೀಗಣ ಸದ್ಗುಣಸಂಭೃತ ಕೇಳಿತಲೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೫ ||

ಕಟಿತಟಪೀತ ದುಕೂಲವಿಚಿತ್ರ ಮಯೂಖತಿರಸ್ಕೃತ ಚಂದ್ರರುಚೇ
ಪ್ರಣತಸುರಾಸುರ ಮೌಳಿಮಣಿಸ್ಫುರದಂಶುಲಸನ್ನಖ ಚಂದ್ರರುಚೇ
ಜಿತಕನಕಾಚಲ ಮೌಳಿಪದೋರ್ಜಿತ ನಿರ್ಭರಕುಂಜರ ಕುಂಭಕುಚೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೬ ||

ವಿಜಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇ
ಕೃತ ಸುರತಾರಕ ಸಂಗರತಾರಕ ಸಂಗರತಾರಕ ಸೂನುಸುತೇ
ಸುರಥಸಮಾಧಿ ಸಮಾನಸಮಾಧಿ ಸಮಾಧಿಸಮಾಧಿ ಸುಜಾತರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೭ ||

ಪದಕಮಲಂ ಕರುಣಾನಿಲಯೇ ವರಿವಸ್ಯತಿ ಯೋಽನುದಿನಂ ಸ ಶಿವೇ
ಅಯಿ ಕಮಲೇ ಕಮಲಾನಿಲಯೇ ಕಮಲಾನಿಲಯಃ ಸ ಕಥಂ ನ ಭವೇತ್
ತವ ಪದಮೇವ ಪರಂಪದಮಿತ್ಯನುಶೀಲಯತೋ ಮಮ ಕಿಂ ನ ಶಿವೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೮ ||

ಕನಕಲಸತ್ಕಲ ಸಿಂಧುಜಲೈರನು ಸಿಂಚಿನುತೇಗುಣ ರಂಗಭುವಂ
ಭಜತಿ ಸ ಕಿಂ ನ ಶಚೀಕುಚಕುಂಭ ತಟೀಪರಿರಂಭ ಸುಖಾನುಭವಮ್
ತವ ಚರಣಂ ಶರಣಂ ಕರವಾಣಿ ನತಾಮರವಾಣಿ ನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೯ ||

ತವ ವಿಮಲೇಂದುಕುಲಂ ವದನೇಂದುಮಲಂ ಸಕಲಂ ನನು ಕೂಲಯತೇ
ಕಿಮು ಪುರುಹೂತ ಪುರೀಂದುಮುಖೀ ಸುಮುಖೀಭಿರಸೌ ವಿಮುಖೀಕ್ರಿಯತೇ
ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾ ಕಿಮುತ ಕ್ರಿಯತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨೦ ||

ಅಯಿ ಮಯಿ ದೀನದಯಾಲುತಯಾ ಕೃಪಯೈವ ತ್ವಯಾ ಭವಿತವ್ಯಮುಮೇ
ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿ ತಥಾಽನುಭಿತಾಸಿರತೇ


ಯದುಚಿತಮತ್ರ ಭವತ್ಯುರರಿ ಕುರುತಾದುರುತಾಪಮಪಾಕುರುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨೧ ||

---------------------------------------------------------------------------------------------------------------
೦೩) ದಾಸರ ಪದಗಳು - ಆಪೇಕ್ಷೆ ಪಟ್ಟವರು : ಹರೀಶ. ಅ.ಕುಲಕರ್ಣಿ, ಮೈಸೂರು





01. ಸಾಮಾನ್ಯವಲ್ಲ ಶ್ರೀ ಹರಿಯಸೇವೆ    ರಾಗ : ಚಾರುಕೇಶಿ ತಾಳ : ಆದಿತಾಳ 
     ರಚನೆ : ಶ್ರೀ ಪುರಂದರದಾಸರು ಅಂಕಿತನಾಮ : ಪುರಂದರವಿಠ್ಠಲ 

ಆ : ಸ ರಿ2 ಗ3 ಮ1 ಪ ದ 1 ನಿ2 ಸ 26 ನೇ ಮೇಳಕರ್ತ ರಾಗ
ಅವ : ಸ ನಿ2 ದ1 ಪ ಮ1 ಗ3 ರಿ2 ಸ ಶುದ್ಧ ಮಧ್ಯಮ ರಾಗ
| |ಪಲ್ಲವಿ | | ಸಾಮಾನ್ಯವಲ್ಲ ಶ್ರೀ ಹರಿಯಸೇವೆ | |
ಪಾಮರ ಜನರಿಗೆ ಸಾಮಾನ್ಯವಲ್ಲ | |

| | ಚರಣ | | 1 | | ಅಂತರ ಮಲಿನ ಅಳಿಯಲುಬೇಕು | |
| | ಶ್ರೀ ಕಾಂತನ ಚರಿತವ ಕೇಳಲುಬೇಕು
| | ಸಂತಸವಿರಬೇಕು ಸಂತ ಜನರ ಗುಣ | |
| | ನಿರಂತರದಲಿ ತಾ ಚಿಂತಿಸಬೇಕು | |

| | ಚರಣ | | 2 | | ಸರ್ವಾ0ತರ್ಯಾಮಿ ಶ್ರೀ ಹರಿಯೆಂದು | |
| | ಸರ್ವೇಶ್ವರನೆಂದು ಸ್ವರಮಣನೆಂದು | |
| | ಸರ್ವಾನುರಾಗನೆಂದು ಪುರಂದರವಿಠಲನ | |
| | ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು | |

--------------------------------------------------------------------------------------------------------------
2. ಹರಿನಾಮ ಕೀರ್ತನೆ
ರಾಗ: ಹಂಸನಾಂದಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು ಅಂಕಿತನಾಮ : ಪುರಂದರವಿಠ್ಠಲ 


ಆ : ಸ ರಿ1 ಗ3 ಮ2 ದ2 ನಿ3 ಸ 53 ಗಮನಶ್ರಮದಲ್ಲಿ ಜನ್ಯ
ಅವ : ಸ ನಿ3 ದ2 ಮ2 ಗ3 ರಿ1 ಸ ಪಂಚಮ ವರ್ಜ್ಯ ಷಾಡವ ರಾಗ

|ಪಲ್ಲವಿ | | ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ| |
ನರಕ ಭಯಗಳು೦ಟೇ | |

| | ಚರಣ | | 1 | | ಕೇಸರಿ ಗಂಜದ ಮೃಗವುಂಟೆ – ದಿ
ನೇಶನಿ ಗಂಜದ ತನುವುಂಟೆ | |
ವಾಸುದೇವ ವೈಕುಂಠ ಜಗನ್ಮಯ
ಕೇಶವ ಕೃಷ್ಣ ನೀನೆಂದು ಚ್ಚರಿಸುವ | |

| | ಚರಣ | | 2 | | ಕುಲಿಶವನೆದುರಿಪ ಗಿರಿಯುಂಟೆ - ಬಲು
ಪ್ರಳಯ ಬಂದಾಗ ಜೀವಿಪರುಂಟೆ
ಜಲಜನಾಭ ಗೋವಿಂದ ಜನರ್ಧನಾ
ಕಲುಷ ಹರಣ ಕರಿರಾಜ ರಕ್ಷಕನೆಂಬ | |

| | ಚರಣ | | 3 | | ಗರುಡಗೆ ಅಂಜದ ಫಣಿಯುಂಟೆ - ದ
ಳ್ಳುರಿಯಲಿ ಬೇಯದ ತೃಣವುಂಟೆ
ನರಹರಿ ನಾರಾಯಣ ಕೃಷ್ಣ ಕೇಶವ
ಪುರಂದರ ವಿಠಲ ನೀನೆಂದು ಚ್ಚರಿಸುವ | |
-----------------------------------------------------------------------------------------------------

3. ವಂದಿಸುವುದಾದಿಯಲಿ ರಚನೆ : ಶ್ರೀ ಪುರಂದರದಾಸರು ಅಂಕಿತನಾಮ : ಪುರಂದರವಿಠ್ಠಲ 

ರಾಗ: ಆಠಾಣ ತಾಳ : ಖಂಡಚಾಪು
ಆ : ಸ ರಿ2 ಮ1 ಪ ನಿ3 ಸಾ 29 ನೇ ಧೀರ ಶಂಕರಾಭರಣದಲ್ಲಿ ಜನ್ಯ 
ಅವ : ಸ ನಿ2 ಸ ದಾ2 ಪ ಮ1 ಪ ಗಾ2 ಮ1 ರಿ2 ಸ ಔಡವ ವಕ್ರ ರಾಗ

| |ಪಲ್ಲವಿ| | ವಂದಿಸುವುದಾದಿಯಲಿ ಗಣನಾಥನ
| | ಅ. ಪ | | ಸಂದೇಹಸಲ್ಲ ಶ್ರೀಹರಿಯಾಜ್ಞೆಯಿದ ಕುಂಟು

| | ಚರಣ | | 1 | | ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನುಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು | |

| | ಚರಣ | | 2 | | ಅಂದಿನಾ ಬಗೆಯರಿತು ಬಂದು ಹರಿಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೆ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು | |

| | ಚರಣ | | 3 | | ಇಂದು ಜಗವೆಲ್ಲ ಉಮೆ ನಂದನನ ಪೂಜಿಸಲು
ಚಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿ ಪುರಂದರ ವಿಠಲನ ಸೇವೆಯೊಳು
ಬಂದು ವಿಘ್ನವ ಕಳೆದಾನಂದವನು ಕೊಡುವ | |
-----------------------------------------------------------------------------------------------------

4. ಅಂಜಿಕೆ ಇನ್ನೇತಕಯ್ಯ 
ರಾಗ: ಕಲ್ಯಾಣಿ ತಾಳ : ಆದಿತಾಳ ರಚನೆ : ಶ್ರೀ ಪುರಂದರದಾಸರು ಅಂಕಿತನಾಮ : ಪುರಂದರವಿಠ್ಠಲ 

ಆ : ಸ ರಿ2 ಗ3 ಮ2 ಪ ದ2 ನಿ3 ಸ 65 ನೇ ಮೇಳಕರ್ತ ರಾಗ
ಅವ : ಸ ನಿ3 ದ2 ಪ ಮ2 ಗ3 ರಿ2 ಸ ಪ್ರತಿ ಮಧ್ಯಮ ರಾಗ

| |ಪಲ್ಲವಿ | | ಅಂಜಿಕೆ ಇನ್ನೇತಕಯ್ಯ ಸಜ್ಜನರಿಗೆ
ಅಂಜಿಕೆ ಇನ್ನೇತಕಯ್ಯ
ಸಂಜೀವ ರಾಯರ ಸ್ಮರಣೆ ಮಾಡಿದ ಮೇಲೆ | |
| | ಅ. ಪ | | ಕನಸಿನೊಳ್ ಮನಸಿನೊಳ್ ಕಳವಳವೇತಕೆ
ಹನುಮನ ನೆನದರೆ ಹಾರಿ ಹೋಹುದು ಪಾಪ | |

| | ಚರಣ | | 1 | | ರೋಮರೋಮಕೆ ಕೋಟಿಲಿಂಗವುದರಿಸಿದ
ಭೀಮನ ನೆನೆದರೆ ಬಿಟ್ಟುಹೋಹುದು ಪಾಪ | |
ಪುರಂದರ ವಿಠ್ಠಲನ ಪೂಜೆಯ ಮಾಡುವ
ಗುರು - ಮಧ್ವ ರಾಯರ ಸ್ಮರಣೆ ಮಾಡಿದ ಮೇಲೆ | |
-----------------------------------------------------------------------------------------------------

5. ಗೋವರ್ಧನ ಗಿರಿಯ  ರಾಗ : ಬಿಲಹರಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಗ3 ಪ ದ2 ಸ 29 ನೇ ಧೀರ ಶಂಕರಾಭರಣದಲ್ಲಿ ಜನ್ಯ
ಅ ವ : ಸ ನಿ3 ದ2 ಪ ಮ1 ಗ3 ರಿ2 ಸ ಔಡವ ಸಂಪೂರ್ಣ ಭಾಷಾಂಗ ರಾಗ “ನಿ" ಅನ್ವಸ್ವರ
| |ಪಲ್ಲವಿ | | ಗೋವರ್ಧನ ಗಿರಿಯ ನೆಗಹಿಬಂದು
ಹಾವಿನ ಮಂಚದ ಮೇಲೆ ಮಲಗಿದೆಯೋ ರಂಗ | |
| | ಅ. ಪ | | ಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ
ಬಂದು ಕಾಲು ನೊಂದು ಮಲಗಿದೆಯೋ ರಂಗ | |

| | ಚರಣ | | 1 | | ಅಸುರೆ ಪೂತಣಿಯ ಮೊಲೆಯುಂಡ | |
ಶಕಟನ ಒದೆದು ಅಸುಗುಂದಿ ಮಲಗಿದೆಯೋ
ಕಡಹದ ಮರದಿಂದ ಧುಮುಕಿ ಕಾಳಿಂಗನ
ಹೆಡೆಯ ತುಳಿದ ಕಾಲುನೊಂದು ಮಲಗಿದೆಯೋ | |

| | ಚರಣ | | 2 | | ಬಾಲ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿ
ನೆಲವನಳೆದು ಕಾಲುನೊಂದು ಮಲಗಿದೆಯೋ
ಶ್ರೀಶ ಶ್ರೀರಂಗರಾಜ ಪರಮ ಪಾವನ
ಶೇಷ ಶಯನ ಶ್ರೀ ಪುರಂದರ ವಿಠ್ಠಲ | |
-----------------------------------------------------------------------------------------------------

6. ಹರಿನಾರಾಯಣ  ರಾಗ : ಜಂಜೂಟಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ದ 2 ಸ ರಿ2 ಗ3 ಮ1 ಪ ದ2 ನಿ2 28 ನೇ ಹರಿ ಕಾಂಬೋಜಿ ಯಲ್ಲಿ ಜನ್ಯ
ಅ ವ : ನಿ2 ದ2 ಪ ಮ1 ಗ3 ರಿ2 ಸ ನಿಷಾದ ಅಂತ್ಯ ರಾಗ
| |ಪಲ್ಲವಿ | | ಹರಿನಾರಾಯಣ ಹರಿನಾರಾಯಣ
ಹರಿನಾರಾಯಣ ಎನು ಮನವೆ | |
| | ಅ. ಪ | | ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ | |

| | ಚರಣ | | 1 | ತರಳ ದ್ರುವನಿಂದಲಿ ಅಂಕುರಿಸಿತು ಅದು
ವರ ಪ್ರಹ್ಲಾದನಿಂದ ಮೊಳಕೆಯಾಯ್ತು
ಧರಣೇಶ ರುಕ್ಮಾ೦ಗದನಿಂದ ಚಿಗುರಿತು
ಕುರು ಪಿತಾಮಹನಿಂದ ಹೂವಾಯ್ತು | |

| | ಚರಣ | | 2 | ವಿಜಯನ ಸತಿಯಿಂದ ಫಲವಾಯ್ತು - ಅದು
ಗಜೇಂದ್ರನಿಂದ ದೋರೆ ಹಣ್ಣಾಯ್ತು
ದಿಜ ಶುಕ ಮುನಿಯಿಂದ ಫಲ ಪಕ್ವವಾಯಿತು
ಅಜಾಮಿಳ ತಾನುಂಡು ರಸ ಸವಿದ | |

| | ಚರಣ | | 3 | | ಕಾಮಿತ ಪಲವೀವ ನಾಮ ವೊಂದರಲಾಗಿ
ಹೋಮ ನೇಮ ಜಪತಪವೇಕೆ
ಸ್ವಾಮಿ ಶ್ರೀ ಪುರಂದರ ವಿಠಲ ರಾಯನ
ನೇಮ ದಿಂದಲಿ ನೆನೆ ಮನವೇ
-----------------------------------------------------------------------------------------------------

7. ಕೂಸನು ಕಂಡಿರಾ ರಾಗ : ನಾದ ನಾಮ ಕ್ರಿಯೆ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಮ1 ಪ ದ1 ನಿ3 15 ನೇ ಮಾಯಾಮಾಳವಗೌಳದಲ್ಲಿ ಜನ್ಯ
ಅ ವ : ನಿ3 ದ1 ಪ ಮ1 ಗ3 ರಿ1 ಸ ನಿಷಾದ ಅಂತ್ಯ ರಾಗ
| |ಪಲ್ಲವಿ | | ಕೂಸನು ಕಂಡಿರಾ - ಮುಖ್ಯ ಪ್ರಾಣನ ಕಂಡಿರಾ | |
| | ಚರಣ | | 1 | ಅಂಜನೆ ಉದರದಿ ಹುಟ್ಟಿತು ಕೂಸು
ರಾಮರ ಪಾದಕ್ಕೆರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನು ಸುಟ್ಟಿತು` ಕೂಸು | |

| | ಚರಣ | | 2 | ಬಂಡಿಯ ಅನ್ನವ ಉಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆಯ ಮೆದ್ದಿತು ಕೂಸು
ಮಡದಿಗೆ ಪುಷ್ಪವ ತಂದಿತು ಕೂಸು| |

| | ಚರಣ | | 3 | | ಮಾಯವಾದಿಗಳ ಗೆದ್ದಿತು ಕೂಸು
ಮಧ್ವಮತವನುದ್ದರಿಸಿತು ಕೂಸು
ಮುದ್ದು ಶ್ರೀ ಪುರಂದರ ವಿಠ್ಠಲನ ದಯದಿಂದ
ಉಡುಪಿಯಲಿ ಬಂದು ನಿಂತಿತು ಕೂಸು | |
-----------------------------------------------------------------------------------------------------

8. ಮಾಮಝ ಭಾಪುರೆ ರಾಗ : ವಸಂತ ತಾಳ : ಅದಿತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ಮ1 ಗ3 ಮ1 ದ2 ನಿ3 ಸ 17 ನೇ ಸೂರ್ಯಕಾಂತದಲ್ಲಿ ಜನ್ಯ
ಅವ : ಸ ನಿ3 ದ2 ಮ1 ಗ3 ರಿ1 ಸ ವಕ್ರ- ಸಂಪೂರ್ಣ ರಾಗ
| |ಪಲ್ಲವಿ | | ಮಾಮಝ ಭಾಪುರೆ ಭಳಿರೆ ಹನುಮಂತ
ರಾಮಪದ ಸೇವಿಪ ವೀರ ಹನುಮಂತ | |

| | ಚರಣ | | 1 | ಅಂಬರಕೆಪುಟನೆಗೆದು ಅಂಬುಧಿಯ ನೆರೆದಾಟಿ
ಕುಂಭಿನಿಯ ಮಗಳಿಗುಂಗುರವನ್ನಿತ್ತು
ಬೆಂಬಿಡದೆ ಲಂಕೆಯನು ಸಂಭ್ರಮದಿಸಖಿಗಿತ್ತೆ
ಗಂಭೀರ ವೀರಾಧಿವೀರ ಹನುಮಂತ | |

| | ಚರಣ | | 2 | ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ
ತೃತೀಯದಲಿ ಗುರು ಮಧ್ವ ಮುನಿಯೆನಿಸಿ
ಪ್ರತಿಯಿಲ್ಲದಲೆ ಮೆರೆದ ಪುರಂದರ ವಿಠಲನ
ಸುತ್ತ ನಿನಗಾರುಸರಿ ವಿಜಯ ಹನುಮಂತ | |
-----------------------------------------------------------------------------------------------------

9. ಹನುಮನ ಮತವೆ ರಾಗ: ಹಂಸ ನಾಂದಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಮ2 ದ2 ನಿ3 ಸ 53 ನೇ ಗಮನಶ್ರಮದಲ್ಲಿ ಜನ್ಯ
ಅವ : ಸ ನಿ3 ದ2 ಮ2 ಗ3 ರಿ1 ಸ ಷಾಡವ ರಾಗ
| |ಪಲ್ಲವಿ | | ಹನುಮನ ಮತವೆ ಹರಿಯ ಮತವು
ಹರಿಯ ಮತವೆ ಹನುಮನ ಮತವು | |

| | ಚರಣ | | 1 | ಹನುಮನು ಒಲಿದರೆ ಹರಿತಾನೊಲಿವನು
ಹನುಮನು ಮುನಿದರೆ ಹರಿ ಮುನಿವಾ
ಹನುಮನ ನಂಬಿದ ಸುಗ್ರೀವ ಗೆದ್ದ
ಹನುಮನ ನಂಬದ ವಾಲಿಯು ಬಿದ್ದ | |

| | ಚರಣ | | 2 | ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿಯಲು ರಾವಣ ಬಿದ್ದ
ಹನುಮನು ಪುರಂದರ ವಿಠಲನ ದಾಸ
ಹನುಮನೊಳ್ ಪುರಂದರ ವಿಠಲನ ವಾಸ | |
-----------------------------------------------------------------------------------------------------

10. ಶರಣೆಂಬೆ ವಾಣಿ ರಾಗ : ಜಗನ್ಮೋಹಿನಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು

ಆ : ಸ ಗ3 ಮ1 ಪ ನಿ3 ಸ 15 ನೇ ಮಾಯಾಮಾಳವಗೌಳದಲ್ಲಿ ಜನ್ಯ
ಅವ : ಸ ನಿ3 ಪ ಮ1 ಗ3 ರಿ1 ಸ ಔಡವ - ಷಾಡವರಾಗ
| |ಪಲ್ಲವಿ | | ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ | |
| | ಅ. ಪ | | ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರ ವೇಣಿ - ಸುಚರಿತ್ರಾಣಿ | |

| | ಚರಣ | | ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆ ನಮ್ಮ
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರ ವಿಠಲನ ಸೋದರ ಸೊಸೆಯ | |
-----------------------------------------------------------------------------------------------------

11. ಕರುಣಿಸೋ ರಂಗ ರಾಗ : ರೇವತಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಮ1 ಪ ನಿ2 ಸ 2ನೇ ಮೇಳ ಕರ್ತ ರಾಗ ರತ್ನಾ೦ಗಿಯಲ್ಲಿ ಜನ್ಯ
ಅ ವ : ಸ ನಿ2 ಪ ಮ1 ರಿ1 ಸ ಔಡವ ರಾಗ
| |ಪಲ್ಲವಿ | | ಕರುಣಿಸೋ ರಂಗಾ ಕರುಣಿಸೋ | |
| | ಅ. ಪ | | ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ | |

| | ಚರಣ | | 1 | ರುಕುಮಾ೦ಗದನಂತೆ ವ್ರತವನಾ ನರಿಯೆನು
ಶುಕ ಮುನಿಯಂತೆ ಸ್ತುತಿಸಲರಿಯೆ
ಬಕ ವೈರಿಯಂತೆ ದ್ಯಾನವ ಮಾಡಲರಿಯೆ
ದೇವಕಿ ಯಂತೆ ಮುದ್ದಿಸಲರಿಯೆನು ರಂಗಾ | |

| | ಚರಣ | | 2 | ಗರುಡನಂತೆ ಪೊತ್ತು ತಿರುಗಲರಿಯೆ ನಾನು
ಕರಿರಾಜನಂತೆ ಕರೆಯಲರಿಯೆನು
ವರ ಕಪಿಯಂತೆ ಸೇವೆಯ ಮಾಡಲರಿಯೆನು
ಸಿರಿಯಂತೆ ನಿನ್ನ ಮೆಚ್ಚಿಸಲರಿಯ ರಂಗಾ | |

| | ಚರಣ | | 3 | | ಬಲಿಯಂತೆ ಧಾನವ ಕೊಡಲರಿಯೆ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರ ವಿಠಲ | |
-----------------------------------------------------------------------------------------------------

12. ಕರುಣಾಕರ ನೀನೆಂಬುವುದೇತಕೊ ರಾಗ : ಷಣ್ಮುಖಪ್ರಿಯ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಗ2 ಮ2 ಪ ದ1 ನಿ2 ಸ 56 ನೇ ಮೇಳಕರ್ತರಾಗ
ಅ ವ : ಸ ನಿ2 ದ1 ಪ ಮ2 ಗ2 ರಿ2 ಸ ಪ್ರತಿ ಮಧ್ಯಮ ರಾಗ
| |ಪಲ್ಲವಿ | | ಕರುಣಾಕರ ನೀನೆಂಬುವುದೇತಕೊ
ಭರವಸೆ ಇಲ್ಲೆನಗೆ | |

| | ಚರಣ | | 1 | ಕರಿ ದ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ಭವದಲಿ ನೀನಂತೆ
ಅರಿತು ವಿಚಾರಿಸಿ ನೋಡಲಿದೆಲ್ಲವು
ಪರಿ ಪರಿ ಕಂತೆಗಳಂತಿದೆ ಕೃಷ್ಣ | |

| | ಚರಣ | | 2 | ಕರುಣಾಕರ ನೀನಾದರೆ ಈಗಲೆ
ಕರಪಿಡಿದೆನ್ನನು ನೀ ಕಾಯೋ
ಸರಸಿ ಜಾಕ್ಷನೇ ಅರಸು ನೀನಾದರೆ
ದುರಿತಗಳೆನ್ನನು ಪೀಡಿಪುದುಂಟೆ | |

| | ಚರಣ | | 3 | | ಮರಣ ಕಾಲದಲಿ ಅಜಮಿಳಗೊಲಿದೆಯೊ
ಗರುಡಧ್ವಜನೆಂಬ ಬಿರುದಿನಿಂದ
ವರ ಬಿರುದುಗಳು ಉಳಿಯ ಬೇಕಾದರೆ
ತ್ವರಿತದಿ ಕಾಯೋ ಪುರಂದರ ವಿಠಲ| |
-----------------------------------------------------------------------------------------------------

13. ನಾನು ನೀನು ಎನ್ನದಿರು ರಾಗ : ಪೀಲು(ಕಾಫಿ) ತಾಳ : ಆದಿ ತಾಳ ರಚನೆ : ಶ್ರೀ ಕನಕದಾಸರು 

ಆ : ನಿ2 ಸ ಗ2 ಮ1 ಪ ನಿ2 ದ2 ಪ ಸ 22 ನೇ ಖರಹರಪ್ರಿಯ ದಲ್ಲಿ ಜನ್ಯ
ಅ ವ : ಸ ನಿ2 ದ2 ಪ ದ2 ಪ ಮ1 ಗ2 ರಿ2 ಸ ನಿ2 ಸ ವಕ್ರ ರಾಗ
 |ಪಲ್ಲವಿ | | ನಾನು ನೀನು ಎನ್ನದಿರು ಹೀನಮಾನವ
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ | |

| | ಚರಣ | | 1 | ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ
ಅನ್ನದಿಂದ ಬಂದ ಕಾಮ ನಿನ್ನದೇನೆಲೋ
ಕರ್ಮದಿಂದ ಬರುವ ಘೋಷ ನಿನ್ನದೇನೆಲೋ
ನಿನ್ನ ಬಿಟ್ಟ ಹೋಹ ಜೀವ ನಿನ್ನದೇನೆಲೋ | |

| | ಚರಣ | | 2 | ಹಲವು ಜನ್ಮದಿಂದ ಬಂದಿರುವನು ನೀನೆಲೋ
ಮಲದ ಗರ್ಭದಲಿ ನಿಂದಿರುವನು ನೀನೆಲೋ
ಜಲದ ದಾರಿಯಲಿ ಬಂದಿರುವನು ನೀನೆಲೋ
ಕುಲವ ಜಾತಿ ಗೋತ್ರಗಳುಳ್ಳವನು ನೀನೆಲೋ | |

| | ಚರಣ | | 3 | | ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ
ಜಾಲ ವಿದ್ಯೆ ಬಯಲು ಮಾಯೆ ನಿನ್ನದೇನೆಲೋ
ಕೀಲು ಜಡಿದ ಮರದ ಬೊಂಬೆ ನಿನ್ನದೇನೆಲೋ
ಲೋಲ ಆದಿ ಕೇಶವನ ಭಕ್ತನಾಗೆಲೋ
-----------------------------------------------------------------------------------------------------

14. ನೀನೆ ದಯಾಳು ರಾಗ : ಆನಂದ ಭೈರವಿ ತಾಳ : ಖಂಡ ಛಾಪು ತಾಳ ರಚನೆ : ಶ್ರೀ ಪುರಂದರದಾಸರು

ಆ : ಸ ಗ2 ರಿ2 ಗ2 ಮ1 ಪ ದ2 ಪ ಸ 20ನೇ ನಠ ಭೈರವಿಯಲ್ಲಿ ಜನ್ಯ
ಅ ವ : ಸ ನಿ2 ದ2 ಪ ಮ1 ಗ3 ರಿ2 ಸ ವಕ್ರ ರಾಗ
| |ಪಲ್ಲವಿ | | ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ | |
| | ಅ. ಪ | | ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ದೊರೆಗಳ ನಾ ಕಾಣೆ | |

| | ಚರಣ | | 1 | ಬಗೆಬಗೆಯಲಿ ನಿನ್ನ ಸ್ತುತಿಪೆನೋ
ನಗಧರ ಖಗಪತಿ ವಾಹನನೇ
ಮಗುವಿನ ಮಾತೆಂದು ನಗುತ ಕೇಳುತ ನೀನು
ಬೇಗದಿಂದಲಿ ಕಾಯೋ ಸಾಗರ ಶಯನನೇ | |

| | ಚರಣ | | 2 | ದಾನವಾ೦ತಕ ದೀನ ಜನ ಮಂದಾರನೆ
ಧ್ಯಾನಿಪರ ಮನದೊಳು ಸಂಚರನೆ
ಮೌನ ನಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೋ ಸನಕಾದಿವಂದ್ಯನೆ | |

| | ಚರಣ | | 3 | | ಮಂದರೋದ್ದರ ಅರವಿಂದ ಲೋಚನ ನಿನ್ನ
ಕಂದನೆಂದೆನಿಸೊ ಎನ್ನ
ಸಂದೇಹ ವೇತಕೆ ಸ್ವಾಮಿ ಮುಕುಂದನೆ
ಬಂದೆನ್ನ ಕಾಯೋ ಶ್ರೀ ಪುರಂದರ ವಿಠ್ಠಲನೆ
-----------------------------------------------------------------------------------------------------

15. ಲಕ್ಷ್ಮೀ ಕಾಂತ ನೀ ಬಾರೋ ರಾಗ : ಮೋಹನ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಗ3 ಪ ದ2 ಸ ಮೋಹನ ರಾಗವು 28 ನೇ ಹರಿ ಕಾಂಬೋಜಿ ಯಲ್ಲಿ ಜನ್ಯ
ಅ ವ : ಸ ದ2 ಪ ಗ3 ರಿ2 ಸ ಔಡವ ರಾಗ
| |ಪಲ್ಲವಿ | | ಲಕ್ಷ್ಮಿ ಕಾಂತಾ ಬಾರೋ - ಶುಭ ಲಕ್ಷ್ಮಣ ವಂತ ನೀ ಬಾರೋ | |
| | ಅ. ಪ | | ಆದಿ ಮೂಲ ವಿಗ್ರಹನೇ ಬಾರೋ
ಪಾವನ ಮೂರುತಿ ಬಾರೋ ಬಾರೋ ಬಾರೋ | |

| | ಚರಣ | | ಗಾಡಿ ಗಾರ ಕೃಷ್ಣ ನೀ ಬಾರೋ ಸರ್ವ -
ರೂಡಿರೊಡೆಯ ನೀ ಬಾರೋ
ಬಣ್ಣಿಸಿ ಕರೆವನು ಬಾರೋ ಬಾರೋ
ಪನ್ನಗ ಶಯನ ಪುರಂದರ ವಿಠಲ ಬಾರೋ | |
-----------------------------------------------------------------------------------------------------

16. ನಾರಾಯಣತೇ ನಮೋ ನಮೋ ರಾಗ : ತಿಲ್ಲಂಗ್ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ಗ3 ಮ1 ಪ ನಿ3 ಸ 28 ನೇ ಹರಿಕಾಂಭೋಜಿಯಲ್ಲಿ ಜನ್ಯ
ಅ ವ : ಸ ನಿ2 ಪ ಮ1 ಗ3 ಸ "ನಿ3 " ಅನ್ವ ಸ್ವರ ಭಾಷಾಂಗ ರಾಗ
| |ಪಲ್ಲವಿ | | ನಾರಾಯಣತೆ ನಮೋ ನಮೋ
ನಾರದ ಸನ್ನುತ ನಮೋ ನಮೋ | |

| | ಚರಣ | | 1 | ಮುರಹರ ನಗಧರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ
ಪರಮ ಪುರುಷ ಭವ ಭಂಜನ ಕೇಶವ
ವರ ಮೃಗ ಶರೀರ ನಮೋ ನಮೋ | |

| | ಚರಣ | | 2 | ಜಲಧಿಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ
ಬಲಿ ಬಂಧನ ಗೋವರ್ಧನ ಧಾರಿ
ನಳಿನೋದರ ತೇ ನಮೋ ನಮೋ | |

| | ಚರಣ | | 3 | | ಆದಿ ದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ
ವೇದ್ದೋದ್ದರ ಶ್ರೀ ವೆಂಕಟ ನಾಯಕ
ಮೋದದ ಪುರಂದರ ವಿಠಲ ನಮೋ ನಮೋ
-----------------------------------------------------------------------------------------------------

17. ಹರಿಯೆ ಇದು ಸರಿಯೆ ರಾಗ : ಕೇದಾರ್ ತಾಳ : ಆದಿ ತಾಳ ರಚನೆ : ಶ್ರೀ ನರಹರಿ ತೀರ್ಥರು 
ಆ : ಸ ಮ1 ಗ3 ಮ1 ಪ ನಿ3 ಸ 29 ನೇ ಧೀರ ಶಂಕರಾಭರಣದಲ್ಲಿ ಜನ್ಯ
ಅ ವ : ಸ ನಿ3 ಪ ಮ1 ಗ3 ರಿ2 ಸ ವಕ್ರ ರಾಗ
| |ಪಲ್ಲವಿ | | ಹರಿಯೆ ಇದು ಸರಿಯೆ
ಚರಣ ಸೇವಕನಲ್ಲಿ ಕರುಣೆಬಾರದ್ಯಾಕೆ | |
| | ಅ. ಪ | | ಪತಿತನೆಂದು ಶ್ರೀಪತಿ ರಕ್ಷಿಸಿದರೆ
ವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ | |

| | ಚರಣ | | 1 | ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ
ಭಕ್ತವತ್ಸಲ ನಾಮ ವ್ಯರ್ಥವಾಗದೆ
ದಿಗಿಲಿಲ್ಲದೆ ಒದ್ಧ ಭೃಗುವ ಪಾಲಿಸಿದೆ
ನಗಧರ ಎನ್ನ ಬಿಡುವ ಬಗೆ ಏನಿದು | |

| | ಚರಣ | | 2 | ಹೇಯ ಅಜಮಿಳನ ಪೊರೆಯಲ್ಲಿಲ್ಲವೇ ಅವ
ಸ್ವಕೀಯನೇನಾ ಪರಕೀಯನೇ
ಹಿರಣ್ಯಕನ ಕಂಟಕ ಬಿಡಿಸಿದ್ದು
ನಂಟನೆ ನಿನಗೆ ಅವ, ಬಂಟ ನಾನಲ್ಲವೇ ? | |

| | ಚರಣ | | 3 | | ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದ್ದು
ಕೊಟ್ಟಳು ಅವಳೇನು ಬಿಟ್ಟಿದ್ದು ನಾನೇನು
ದೊರೆ ನಿನ್ನ ಮನಸ್ಸಿಗೆ ಸರಿಬಂದಂತೆ ಮಾಡು
ಮೊರೆ ಹೊಕ್ಕೆನು ನಿನಗೆ ನರಹರಿ ಪೂರ್ಣನೆ | |
-----------------------------------------------------------------------------------------------------

18. ಕಡ ಗೋಲ ತಾರೆನ್ನ ಚಿನ್ನವೆ ರಾಗ : ಬಿಲಹರಿ ತಾಳ : ಆದಿ ತಾಳ ರಚನೆ : ಶ್ರೀ ವ್ಯಾಸರಾಯರು 

ಆ : ಸ ರಿ2 ಗ3 ಪ ದ2 ಸ 29 ನೇ ಶಂಕರಾಭರಣದಲ್ಲಿ ಜನ್ಯ
ಅ ವ : ಸ ನಿ3 ದ2 ಪ ಮ1 ಗ3 ರಿ2 ಸ ಔಡವ - ಸಂಪೂರ್ಣ ಭಾಷಾಂಗ ರಾಗ
| |ಪಲ್ಲವಿ | | ಕಡೆಗೋಲ ತಾರೆನ್ನ ಚಿನ್ನವೇ ಮೊಸ | |
| | ಅ. ಪ | | ರೊಡೆದರೆ ಬೆಣ್ಣೆ ಬಾರದು ಮುದ್ದುರಂಗ | |

| | ಚರಣ | | 1 | ಅಣ್ಣನ ಒಡಗೊಂಡು ಬಾರಯ್ಯ ಸವಿ
ಬೆಣ್ಣೆಯ ಮುದ್ದೆಯ ಮೆಲುವಿರಂತೆ
ಬಣ್ಣದ ಸರವನ್ನು ಕೊರಳಲಿ ಹಾಕುವೆ
ಚಿಣ್ಣ ರೊಡನೆ ಆಡಕಳುಹುವೆರಂಗ | |

| | ಚರಣ | | 2 | ಪುಟ್ಟ ಬೂಚಿಯ ತಂದು ನಿನ್ನೆಯ ಚಿನ್ನದ
ತೊಟ್ಟಿಲ ಕಾಲಿಗೆ ಕಟ್ಟಿಸುವೆ
ಬಟ್ಟಲು ತುಂಬಿದ ಸಕ್ಕರೆ ನಿನಗೀವೆ
ಕಟ್ಟಾಣಿ ಮುತ್ತಿನ ಸರವ ನೀವೆ | |

| | ಚರಣ | | 3 | | ಬಡವರ ಭಾಗ್ಯದ ನಿಧಿಯೆ -ಗೋಕುಲ
ದೊಡೆಯನೆ ಮಾಣಿಕ್ಯದ ಹರಳೆ
ಕಡುಮುದ್ದು ಉಡುಪಿನ ಬಾಲಕೃಷ್ಣಯ್ಯ
ದುಡುಕು ಮಾಡುವರೇನೊಪಂಗಳೊಳು ರಂಗ | |
-----------------------------------------------------------------------------------------------------

19. ಆರು ಹಿತರೆಂದು ನಂಬಬೇಡ ರಾಗ : ರೇವತಿ ತಾಳ : ಝ೦ಪೆತಾಳ ರಚನೆ : ಶ್ರೀ ಕನಕದಾಸರು 

ಆ : ಸ ರಿ1 ಮ1 ಪ ನಿ2 ಸ 2 ನೇ ಮೇಳ ಕರ್ತ ರಾಗ ರತ್ನಾ೦ಗಿಯಲ್ಲಿ ಜನ್ಯ
ಅ ವ : ಸ ನಿ2 ಪ ಮ1 ರಿ1 ಸ ಔಡವ ರಾಗ
| |ಪಲ್ಲವಿ | | ಆರು ಹಿತವರು ಎಂದು ನಂಬಬೇಡ
ಆರಿಗಾರಿಲ್ಲ ಆಪತ್ತು ಬಂದೊದಗಿದಡೆ | |

| | ಚರಣ | | 1 | ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಸುವಳೆಂತೆ೦ಬನೇ ಆ ಕುಂತಿ
ತನಯ ರಾಧೇಯನಿಗೆ ಎರಡನೆಣಿಸಿದ ಮೇಲೆ | |

| | ಚರಣ | | 2 | ಮಗನು ತೆತ್ತಿ ಗನೆನಲೆ ಕಂಸ ತನ್ನಯ ಪಿತನ
ನಿಗಳ ಬಂದನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯೊಳ್ಳ ವನೆನಲೆ
ಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ | |

| | ಚರಣ | | 3 | | ತನಗೆ ದೇಹಾನು ಬಂಧಿಗಳೇ ಬಂಧುಗಳೆಂದು
ವಿನದಿ ನಿಚ್ಚಳವಾಗಿ ನಂಬಬೇಡ
ಘನ ಕೃಪಾ ನಿಧಿ ಕಾಗಿನೆಲೆ ಆದಿಕೇಶವನ
ಅನುದಿನದಿ ನಂಬಿದವಗಿ ಹಪರದ ಸುಖವು | |
-----------------------------------------------------------------------------------------------------

20. ಆದದೆಲ್ಲ ಒಳಿತೇ ಆಯಿತು ರಾಗ : ಪಂತವರಾಳಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಮ2 ಪ ದ1 ನಿ3 ಸ 51 ನೇ ಮೇಳ ಕರ್ತ ರಾಗ
ಅ ವ : ಸ ನಿ3 ದ1 ಪ ಮ2 ಗ3 ರಿ1 ಸ ಪ್ರತಿ ಮಧ್ಯಮ ರಾಗ
| |ಪಲ್ಲವಿ | | ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು | |

| | ಚರಣ | | 1 | ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ | |

| | ಚರಣ | | 2 | ಗೋಪಾಲ ಬುಟ್ಟಿ ಹಿಡಿಯುವುದಕ್ಕೆ ಭೂಪತಿಯೆಂದು ಗರ್ವಿಸುತಿದ್ದೆ
\ಪತ್ನಿಕುಲ ಸಾವಿರವಾಗಲಿ ಗೋಪಾಲ ಬುಟ್ಟಿ ಹಿಡಿಸಿದಳಯ್ಯ | |

| | ಚರಣ | | 3 | | ತುಳಸಿಮಾಲೆ ಹಾಕುವುದಕ್ಕೆ ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಪುರಂದರ ವಿಠಲನು ತುಳಸೀ ಮಾಲೆ ಹಾಕಿಸಿದನು | |
-----------------------------------------------------------------------------------------------------

21. ಯಾರೇ ಬಂದವರು ರಾಗ : ಸಿಂಹೇ೦ದ್ರ ಮಧ್ಯಮ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಗ2 ಮ2 ಪ ದ1 ನಿ3 ಸ 57 ನೇ ಮೇಳ ಕರ್ತ ರಾಗ
ಅ ವ : ಸ ನಿ3 ದ1 ಪ ಮ2 ಗ2 ರಿ2 ಸ ಪ್ರತಿ ಮಧ್ಯಮ ರಾಗ
| |ಪಲ್ಲವಿ | | ಯಾರೇ ಬಂದವರು ಮನೆಗೆ ಮತ್ಯಾರೆ ಬಂದವರು | |
| | ಅ. ಪ | | ನಾರಾಯಣ ಕೃಷ್ಣನಾಥನಲ್ಲದೆ ಬೇರೆ | |

| | ಚರಣ | | 1 | ವಜ್ರ ರೇಖೆಗಳಿವೆ ಮನೆಯಲ್ಲಿ ಕಾಲ ಗೆಜ್ಜೆಯ ಧ್ವನಿ ಕೇಳಿ ಬರುತಲಿದೆ
ವಜ್ರ ಮಾಣಿಕ್ಯವೆಲ್ಲ ಹರಿದು ಬಿದ್ದಿವೆ ಮಜ್ಜಿಗೆಯೊಳಗಿನ ಬೆಣ್ಣಯ ಕಾಣೆ | |

| | ಚರಣ | | 2 | ಕೊಂಬು ಕೊಳಲು ಧ್ವನಿ ರಭಸಗಳಿವೆ ಕದಂಬ ಕಸ್ತೂರಿ ಕಂಪೆಸೆದಿವೆ
ಪೊಂಬ ಟ್ಟೆ ಚೆಲ್ಲಣ ಚೆಲ್ಲಿದೆ ಹಾಲು ಕುಂಭ ಒಡೆದು ಮನೆ ತುಂಬ ಚೆಲ್ಲಾಡಿದೆ | |

| | ಚರಣ | | 3 | | ಮಿಂಚು ಹುಳದಂತೆ ಹೊಳೆಯುತಲಿ ತಮ್ಮ ಸಹಚರರೊಡಗೂಡಿ ಚಲಿಸುತಲಿ
ವಂಚಿಸಿ ಬೆಣ್ಣೆಯ ಮೆಲ್ಲುತಲಿ ನಮ್ಮ ಲಂಚದ ಪುರಂದರ ವಿಠ್ಠಲನಲ್ಲದೆ ಬೇರೆ
-----------------------------------------------------------------------------------------------------
 
22. ಹರಿ ಕುಣಿದ ರಾಗ : ಬೇಹಾಗ್ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ಗ3 ಮ1 ಪ ನಿ3 ದ2 ಸ 29 ನೇ ಧೀರ ಶಂಕರಭರಣದಲ್ಲಿ ಜನ್ಯ
ಅ ವ : ಸ ನಿ3 ದ2 ಪ ಮ2 ಪ ಮ1 ಗ3 ರಿ2 ಸ ವಕ್ರ ಭಾಷಾಂಗ ರಾಗ

| |ಪಲ್ಲವಿ | | ಹರಿ ಕುಣಿದ ನಮ್ಮ ಹರಿ ಕುಣಿದ | |
| | ಚರಣ | | 1 | ಅಕಳಂಕ ಚರಿತ ಮಕರ ಕುಂಕಲದರ ಸಕಲರ ಪಾಲಿಪ ಹರಿಕುಣಿದ | |

| | ಚರಣ | | 2 | ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿಕುಣಿದ | |

| | ಚರಣ | | 3 | | ಅಂದುಗೆ ಪಾಡಗ ಬಿಂದಲಿ ಬಾಪುರಿ
ಚಂದದಿ ನಲಿವುತ ಹರಿಕುಣಿದ | |

| | ಚರಣ | | 4 | | ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದ | |

| | ಚರಣ | | 5 | | ಪರಮ ಭಾಗವತರ ಕೇರಿಯೊಳಾಡುವ
ಪುರಂದರ ವಿಠಲ ಹರಿಕುಣಿದ | |
-----------------------------------------------------------------------------------------------------

23. ನೀ ಮಾಯೆಯೊಳಗೋ ರಾಗ : ಸಾರಮತಿ ತಾಳ : ಝ೦ಪೆ ರಚನೆ : ಶ್ರೀ ಕನಕದಾಸರು 

ಆ : ಸ ರಿ2 ಗ2 ಮ1 ಪ ದ1 ನಿ2 ಸ 20 ನೇ ನಠ ಭೈರವಿಯಲ್ಲಿ ಜನ್ಯ
ಅ ವ : ಸ ನಿ ದ ಮ ಗ ಸ ಸಂಪೂರ್ಣ ಔಡವ ರಾಗ
| |ಪಲ್ಲವಿ | | ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ | |
| | ಅ. ಪ | | ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೇ | |

| | ಚರಣ | | 1 | ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ದಿಯ ಒಳಗೊ ಬುದ್ದಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೋ ಹರಿಯೆ| |

| | ಚರಣ | | 2 | ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೋ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೋ
ಜಿಹ್ವೆ ಮನಸುಗಳೆರಡು ನಿನ್ನೊಳಗೋ ಹರಿಯೆ| |

| | ಚರಣ | | 3 | | ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮ ಗಂಧಗಳೆರಡು ಅಘ್ರಾಣದೊಳಗೋ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರೆಲೆನ್ನಳವಲ್ಲ ಎಲ್ಲ ನಿನ್ನೊಳಗೋ ಹರಿಯೆ
-----------------------------------------------------------------------------------------------------

24. ಶಿವದರುಶನ ನಮಗಾಯಿತು ರಾಗ : ಮಧ್ಯಮಾವತಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಮ1 ಪ ನಿ2 ಸ 22ನೇ ಖರಹರಪ್ರಿಯದಲ್ಲಿ ಜನ್ಯ
ಅ ವ : ಸ ನಿ2 ಪ ಮ1 ರಿ2 ಸ ಔಡವ ರಾಗ
| |ಪಲ್ಲವಿ | | ಶಿವದರುಶನ ನಮಗಾಯಿತು ಕೇಳಿ ಶಿವರಾತ್ರಿಯ ಜಾಗರಣೆ | |
| | ಅ. ಪ | | ಪಾತಾಳ ಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು | |

| | ಚರಣ | | 1 | ಜ್ಯೋತಿರ್ಲಿಂಗನ ಧ್ಯಾನವ ಮಾಡಲು ಕಷ್ಟಗಳಿಲ್ಲ ಅನುದಿನವು
ಬೇಡಿದ ವರಗಳ ಕೊಡುವನ ತಾಯಿ ಬ್ರಹ್ಮನ ರಾಣೆಯ ನೋಡುವನು| |

| | ಚರಣ | | 2 | ಆಡುತ ಪಾಡುತ ಏರುತ ಬಸವನ ಆನಂದದಲಿ ನಲಿದಾಡುವನು
ಹರನನು ಕಂಡೆನು ಪುರಂದರ ವಿಠಲನ ಹರಿನಾರಾಯಣ ಧ್ಯಾನದಲಿ | |
-----------------------------------------------------------------------------------------------------

25. ತಾಳ ಬೇಕು ತಕ್ಕ ಮೇಳ ಬೇಕು ರಾಗ : ಮಧ್ಯಮಾವತಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಮ1 ಪ ನಿ2 ಸ 22ನೇ ಖರಹರಪ್ರಿಯದಲ್ಲಿ ಜನ್ಯ
ಅ ವ : ಸ ನಿ2 ಪ ಮ1 ರಿ2 ಸ ಔಡವ ರಾಗ
| |ಪಲ್ಲವಿ | | ತಾಳ ಬೇಕು ತಕ್ಕ ಮೇಳ ಬೇಕು ಶಾಂತ | |
| | ಅ. ಪ | | ವೇಳೆ ಬೇಕು ಗಾನ ಕೇಳುವ ಜನರಿಗೆ | |

| | ಚರಣ | | 1 | ಯತಿಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು
ರತಿಪತಿ ಪಿತನೊಳು ಅತಿ ಪ್ರೇಮವಿರಬೇಕು | |

| | ಚರಣ | | 2 | ಗಳ ಶುದ್ಧವಿರಬೇಕು ತಿಳಿದುಪೇಳಲುಬೇಕು
ಕಳವಳ ಬಿಡಬೇಕು ಕಳೆಮುಖವಿರಬೇಕು | |

| | ಚರಣ | | 3 | | ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು
ಗುರು ಮಧ್ವಪತಿ ವಿಠಲನ ಪರದೈವವೆನಬೇಕು | |
-----------------------------------------------------------------------------------------------------

26. ತೂಗಿರೆ ರಾಯರ ರಾಗ : ಆನಂದಭೈರವಿ ತಾಳ : ಏಕತಾಳ ರಚನೆ : ಶ್ರೀ ಜಗನಾಥ ವಿಠಲರು 

ಆ : ಸ ಗ2 ರಿ2 ಗ2 ಮ1 ಪ ದ2 ಪ ಸ 20ನೇ ನಠಭೈರವಿಯಲ್ಲಿ ಜನ್ಯ
ಅ ವ : ಸ ನಿ2 ದ2 ಪ ಮ1 ಗ3 ರಿ2 ಸ ವಕ್ರ- ಭಾಷಾಂಗ ರಾಗ “ಗ ನಿ” ಅನ್ವಸ್ವರ

| |ಪಲ್ಲವಿ | | ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ | |
| | ಅ. ಪ | | ತೂಗಿರೆ ಯೋಗಿಂದ್ರ ಕರ ಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ | |

| | ಚರಣ | | 1 | ಕುಂದಣ ಮಯವಾದ ಚಂದ ತೊಟ್ಟಿಲೊಳ್ ಅಂದದಿ ಮಲಗ್ಯಾರ ತೂಗಿರೆ
ನಂದ ನಂದನ ಗೋವಿಂದ ಮುಕುಂದನ ಅಂದದಿ ಭಜಿಪರ ತೂಗಿರೆ | |

| | ಚರಣ | | 2 | ಯೋಗ ನಿದ್ರೆಯನ್ನು ಬೇಗನೆ ಮಾಡುವ ಯೋಗೀಶ ವಂದ್ಯರ ತೂಗಿರೆ
ಭೋಗಿ ಶಯನನ ಪಾದ ಯೋಗಾದಿ ಭಜಿಪರ ಭಾಗವತರನ ತೂಗಿರೆ | |

| | ಚರಣ | | 3 | | ನೇಮದಿ ತಮ್ಮನ್ನು ಕಾಮಿಪ ಜನರಿಗೆ ಕಾಮಿತ ಕೊಡುವರ ತೂಗಿರೆ
ಪ್ರೇಮದಿ ನಿಜ ಜನರ ಆಮಯವ ನಕುಲ ಧೂಮಕೇತನಿ ಪರ ತೂಗಿರೆ | |

| | ಚರಣ | | 4 | | ಅದ್ವೈತ ಮತದ ವಿಧ್ವಂಸನ ನಿಜಗುರು ಮಧ್ವಮತೋದ್ಧಾರನ ತೂಗಿರೆ
ಶುದ್ಧ ಸಂಕಲ್ಪದಿ ಬದ್ಧನಿಜ ಭಕ್ತರ ಉದ್ದಾರ ಮಾಳ್ಪರ ತೂಗಿರೆ

| | ಚರಣ | | 5 | | ಭಜಕ ಜನರ ಭವ ತ್ಯಜನೆ ಮಾಡಿಸಿ ಅವರ ನಿಜಗತಿ ಇಪ್ಪರ ತೂಗಿರೆ
ನಿಜಗುರು ಜಗನ್ನಾಥ ವಿಠಲನ್ನ ಪದಕಂಜ ಭಜನೆಯ ಮಾಳ್ಪರ ತೂಗಿರೆ
-----------------------------------------------------------------------------------------------------

27. ಕಾಗದ ಬಂದಿದೆ ರಾಗ : ಗಮನ ಶ್ರಮ ತಾಳ : ಏಕತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಮ2 ಪ ದ2 ನಿ3 ಸ 53ನೇ ಮೇಳ ಕರ್ತ ರಾಗ
ಅ ವ : ಸ ನಿ3 ದ2 ಪ ಮ2 ಗ3 ರಿ1 ಸ ಪ್ರತಿಮಧ್ಯಮ ರಾಗ
| |ಪಲ್ಲವಿ | | ಕಾಗದ ಬಂದಿದೆ ನಮ್ಮ ಕಮಲ ನಾಭನದು ಈ | |
| | ಅ. ಪ | | ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ | |

| | ಚರಣ | | 1 | ಕಾಮ ಕ್ರೋಧವ ಬಿಡಿರೆಂಬೋ ಕಾಗದ ಬಂದಿದೆ
ನೇಮಿನಿಷ್ಠೆಯೊಳಿರಿರೆಂಬೋ ಕಾಗದ ಬಂದಿದೆ
ತಾಮಸ ಜನರ ಕೊಡದಿರೆಂಬೋ ಕಾಗದ ಬಂದಿದೆ
ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ | |

| | ಚರಣ | | 2 | ಹೆಣ್ಣಿನಾಸೆ ಬಿಡಿರೆಂಬೋ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೋ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೋ ಕಾಗದ ಬಂದಿದೆ
ನಮ್ಮ ಕಮಲನಾಭ ತಾನೇ ಬರೆದ ಕಾಗದ ಬಂದಿದೆ | |

| | ಚರಣ | | 3 | | ಗೆಜ್ಜೆಯ ಕಾಲಿಗೆ ಕಟ್ಟಿರೆಂಬೋ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿ ಎಂಬೋ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರಿ ಎಂಬ ಕಾಗದ ಬಂದಿದೆ
ನಮ್ಮ ಪುರಂದರ ವಿಠಲನು ತಾನೇ ಬರೆದ ಕಾಗದ ಬಂದಿದೆ | |
-----------------------------------------------------------------------------------------------------

28. ವಾಯು ಕುಮಾರಗೆ ಮಂಗಳಂ ರಾಗ : ಮಧ್ಯಮಾವತಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 
ಆ : ಸ ರಿ2 ಮ1 ಪ ನಿ2 ಸ 22ಖರಹರಪ್ರಿಯದಲ್ಲಿ ಜನ್ಯ
ಅ ವ : ಸ ನಿ2 ಪ ಮ1 ರಿ2 ಸ ಔಡವ ರಾಗ
| |ಪಲ್ಲವಿ | | ವಾಯು ಕುಮಾರಗೆ ಮಂಗಳಂ ರಘುರಾಮ ಸೇವಕಗೆ ಮಂಗಳಂ | |

| | ಚರಣ | | 1 | ಅಂಜನಿಗರ್ಭ ಸಂಜಾತಗೆ ಮಂಗಳಂ
ರಂಜಿತ ದಿವ್ಯ ಮೂರ್ತಿಗೆ ಮಂಗಳಂ
ಮಂಜುಳ ಕೀರ್ತಿ ಮಹಾತ್ಮಗೆ ಮಂಗಳಂ
ಸಂಜೀವರಾಯಗೆ ಮಂಗಳಂ | |

| | ಚರಣ | | 2 | ದನಿಜನಿಕರ ಸಂಹಾರಗೆ ಮಂಗಳಂ
ಜಾನಕಿ ಶೋಕ ವಿನಾಶಗೆ ಮಂಗಳಂ
ವನದಿ ಶಿರೋದಿಗೆ ಮಂಗಳ ಜಯ
ಹನುಮ ವಿಲಾಸಗೆ ಮಂಗಳಂ | |

| | ಚರಣ | | 3 | | ಸೇತುವೆ ಗಟ್ಟಿದಾತಗೆ ಮಂಗಳಂ
ಸೀತೆಯ ತಂದ ಬಂಟಗೆ ಮಂಗಳಂ
ಖ್ಯಾತ ಪುರಂದರ ವಿಠ್ಠಲನ ಕರುಣೆಗೆ
ಪಾತ್ರನಾದ ಭಕುತಗೆ ಮಂಗಳಂ| |
-----------------------------------------------------------------------------------------------------

29. ಶೃಂಗಾರವಾಗಿಹುದು ಶ್ರೀ ಹರಿಯ ಮಂಚ ರಾಗ : ಕಾಂಬೋಜಿ ತಾಳ : ಖಂಡಚಾಪು ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಗ3 ಮ1 ಪ ದ2 ಸ 28ನೇ ಹರಿಕಾಂಭೋಜಿಯಲ್ಲಿ ಜನ್ಯ
ಅ ವ : ಸ ನಿ2 ದ2 ಪ ಮ1 ಗ3 ರಿ2 ಸ ನಿ3 ಪ ದ2 ಸ ಷಾಡವ ಸಂಪೂರ್ಣ ಬಾಷಾಂಗ "ನಿ " ಅನ್ವಸ್ವರ

| |ಪಲ್ಲವಿ | | ಶೃಂಗಾರವಾಗಿಹುದು ಶ್ರೀ ಹರಿಯ ಮಂಚ ಅಂಗನೆ ರುಕ್ಮಿಣಿಯ ಅರಸನಾ ಮಂಚ | |

| | ಚರಣ | | 1 | ಬಡಗಿ ಮುಟ್ಟದ ಮಂಚ ಕಡಲಿನೊಳಗಿಹ ಮಂಚ
ಮೃಡನ ತೋಳಲಿ ಅಡಗಿರುವ ಮಂಚ
ಸಡಗರ ವುಳ್ಳ ಮಂಚ ಹೆಡೆಯುಳ್ಳ ಹೊಸ ಮಂಚ
ಪೊಡವಿಗೊಡೆಯ ಪಾಂಡುರಂಗನ ಮಂಚ | |

| | ಚರಣ | | 2 | ಕಾಲಿಲ್ಲದಿಹ ಮಂಚ ಗಾಳಿ ನುಂಗುವ ಮಂಚ
ತೋಳುಬಿಳುಪಿನ ಮಂಚ ವಿಷದ ಮಂಚ
ಕಾಳಗದೊಳ ರ್ಜುನನ ಮಕುಟ ಕೆಡಹಿದ ಮಂಚ
ಕೇಳು ಪರೀಕ್ಷಿತನ ಕೊಂದು ದೀ ಮಂಚ | |

| | ಚರಣ | | 3 | | ಕಣ್ಣು ಕಿವಿಯಾದ ಮಂಚ ಬಣ್ಣ ಬಿಳುಪಿನ ಮಂಚ
ಹೊನ್ನ ಪೆಟ್ಟಿಗೆಯೊಳಗೆ ಅಡಗುವ ಮಂಚ
ಹುಣ್ಣಿಮೆ ಚಂದ್ರಮನ ಬಣ್ಣ ಕೆಡಹಿದ ಮಂಚ
ಕನ್ನೆ ಮಹಾಲಕ್ಷ್ಮಿ ಅರಸನಾ ಮಂಚ | |

| | ಚರಣ | | 4 | | ಹಕ್ಕಿಗೆ ಹಗೆ ಮಂಚ ರೊಕ್ಕ ಮುಟ್ಟದ ಮಂಚ
ರಕ್ಕ ಸಾರಿ ಪಾಂಡು ರಂಗನಾ ಮಂಚ
ಸಿಕ್ಕಿಲ್ಲ ದೀ ಮಂಚ ಲಕ್ಷ್ಮೀಪತಿಯ ಮಂಚ
ಪೊಡವಿ ಗೊಡೆಯ ಪಾಂಡುರಂಗನ ಮಂಚ| |

| | ಚರಣ | | 5 | | ಅಂಕ ಡೊಂಕಿನ ಮಂಚ ಆನಂತ ಕಾಲಿನ ಮಂಚ
ಶ0ಕರನ ತೋಳಿಗೆ -ಪದಕದ ಮಂಚ
ಶಂಕೆಯೊಳ ಸುರರ ಸಂಹರಿಸಿದ ಮಂಚ
ಪಂಕಜಾಕ್ಷ ಮುಕುಂದ ಪವಡಿಪ ಮಂಚ | |

| | ಚರಣ | | 6 | | ಹುತ್ತದೊಳಿಹ ಮಂಚ ಧರೆಯ ಪೊತ್ತಿಹ ಮಂಚ
ಹೆತ್ತ ಮಕ್ಕಳಿಗೆ ಹೆಸರಿಡುವ ಮಂಚ
ಹತ್ತ ಬಾರದ ಮಂಚ ಹತ್ತಲಿಸದ ಮಂಚ
ಚಿತ್ತಜಪಿತ ತಾನು ಪವಡಿಪ ಮಂಚ | |

| | ಚರಣ | | 7 | | ಏಳು ಹೆಡೆಯ ಮಂಚ ಬಹಳ ಮೃದುವಿನ ಮಂಚ
ಧ್ಯಾನ ಮಾತ್ರದಿ ನಾರದ ಗೊಲಿದ ಮಂಚ
ನಾರಾಯಣನ ಮಂಚ ಶ್ರೀ ಲಕ್ಷ್ಮೀ ಪತಿಯ ಮಂಚ
ಸ್ವಾಮಿ ಶ್ರೀ ಪುರಂದರ ವಿಠಲನ ಮಂಚ | |
-----------------------------------------------------------------------------------------------------

30. ಡೀ ಡೀ ಅಡ್ಯಾನೆ ರಂಗ ರಾಗ : ಪಾಡಿ ತಾಳ : ಆದಿ ತಾಳ ರಚನೆ : ಶ್ರೀ ವಿಜಯದಾಸರು 

ಆ : ಸ ರಿ1 ಮ1 ಪ ದ1 ಪ ನಿ-3 ಸ 15ನೇ ಮಾಯಾಮಾಳವಗೌಳದಲ್ಲಿ ಜನ್ಯ
ಅ ವ : ಸ ನಿ3 ಪ ಧಾ1 ಸ ಮ1 ರಿ1 ಸ ಉಭವ ವಕ್ರ ರಾಗ
| |ಪಲ್ಲವಿ | | ಡೀ ಡೀ ಅಡ್ಯಾನೆ ರಂಗ - ಡೀ ಡೀ ಅಡ್ಯಾನೆ ರಂಗಾ| |
ಓಡಿ ಓಡಿ ಬಂದು ಹಣೆಗೆ ನೀಡಿ - ನೀ ನೀ -ಡೀಡಿಕ್ ಎಂದು

| | ಚರಣ | | 1 | ಮರಕತ್ತ ನವರತ್ನ ವಜ್ರ ಹರಳು ಕೆತ್ತಿಸಿದ ದ್ಯುಮಣೆ
ಕಿರಣ ಮುಕುಟ ದರಿಸಿದ ಶಿರದಲ್ಲಿ ಸರಿ ಸರಿ ಸರಿಸರಿ- ಸರಿ ಸರಿ- ದಾಡುತ್ತ | |

| | ಚರಣ | | 2 | ಚಂದ್ರಶೇಖರ ಹಂಸ-ವಾಹನ ಇಂದ್ರಾದ್ಯರಾಕಾಶ-ದಲ್ಲಿ
ದುಂ ದುಂ ದುಂದುಭಿ - ನೂಕಿಸೆ ಬಂದೆ ಇಕ್ಕೋ ಬಂದೆ - ಬಂದೆನುತ್ತ | |

| | ಚರಣ | | 3 | | ಹಿಂತಿರುಗಿ ಪೋಗಿ -ನೀನು ಅಂತರಿಸಿ ದೂರ-ದಲ್ಲಿ
ನಿಂತು ವಿಜಯ ವಿಠಲ ರಾಯನು ರಿ ರಿ ರಿ ರಿ ರಿ ರಿ ರಿ ಎಂದು | |
-----------------------------------------------------------------------------------------------------

31. ವೃಂದಾವನದೊಳು ಆಡುವನ್ಯಾರೆ ರಾಗ : ಷಣ್ಮುಖಪ್ರಿಯ ತಾಳ : ಆದಿತಾಳ ರಚನೆ : ಶ್ರೀ ಪುರಂದರದಾಸರು 

ಆ :ಸ ರಿ2 ಗ2 ಮ2 ಪ ದ1 ನಿ2 ಸ 56ನೇ ಮೇಳ ಕರ್ತ ರಾಗ
ಅವ :ಸ ನಿ2 ದ1 ಪ ಮ2 ಗ2 ರಿ2 ಸ ಪ್ರತಿ ಮಧ್ಯಮ ರಾಗ
| |ಪಲ್ಲವಿ :- ವೃಂದಾವನದೊಳು ಆಡುವನ್ಯಾರೆ
ಚಂದಿರ ವದನೆ ನೋಡುವ ಬಾರೇ | |

| | ಚರಣ | | 1 | | ಅರುಣ ಪಲ್ಲವ ಪಾದ ಯುಗಳನೇ ದಿವ್ಯ
ಮರಕತ ಮಂಜುಳಾ ಭರಣನೆ
ಸಿರಿವರ ಯದುಕುಲ ಸೋಮನೆ ಇಂಥ
ಪರಿಪೂರ್ಣ ಕಾಮ ನಿಸ್ಸಿಮನೇ | |

| | ಚರಣ | | 2 | | ಹಾರ ಹೀರ ಗುಣಧಾ ರನೇ ದಿವ್ಯ
ಸಾರ ಶರೀರ ಶೃಂಗಾರನೇ
ಆರಿಗಾದರು ಮನ ದುರನೇ ತನ್ನ
ಸೇರಿದವರ ಮಾತ ಮೀರನೇ | |

| | ಚರಣ | | 3 | | ಮಕರ ಕುಂಡಲ ಕಾಂತಿಭರಿತನೇ ದಿವ್ಯ
ಅಕಳ0ಕ ರೂಪ ಲಾವಣ್ಯನೇ
ಸಕಲರೊಳಗೆ ದೇವ ನಿತನೇ ನಮ್ಮ'
ಮುಕುತೀಶ ಪುರಂದರ ವಿಠಲನೇ | |
-----------------------------------------------------------------------------------------------------
 
32. ಬಾರೋ ಗುರು ರಾಘವೇಂದ್ರ ರಾಗ : ಮಧ್ಯಮಾವತಿ ತಾಳ : ಛಾಪು ತಾಳ ರಚನೆ : ಕುಂಟೋಜಿ ನರಸಿಂಹದಾಸರು 

ಆ :ಸ ರಿ2 ಮ1 ಪ ನಿ2 ಸ 22ನೇ ಖರಹರ ಪ್ರಿಯದಲ್ಲಿ ಜನ್ಯ
ಅವ :ಸ ನಿ2 ಪ ಮ1 ರಿ2 ಸ ಔಡವ ರಾಗ
| |ಪಲ್ಲವಿ :- ಬಾರೋ ಗುರು ರಾಘವೇಂದ್ರ ಬಾರಯ್ಯ ಬಾಬಾ | |
| | ಅ .ಪ| | ಹಿಂದು ಮುಂದಿಲ್ಲದೆನಗೆ ನೀಗತಿ ಎಂದು ಪೊಂದಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದನ ಕಂದ ಮುಕುಂದ ಬಂಧೋ | |

| | ಚರಣ | | 1 | | ಸೇವಕನೆ ಲೋ ನಾನು ದಾವಿಸಿ ಬಂದೆನೋ ಸೇವೆಯ ನೀಡೋ ನೀನು
ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವ ವೀಯುತ
ಠಾವು ಗಾಣೆ ಪೊರೆಯೋ ಧರೆಯೊಳು ಪಾವನಾತ್ಮಕ ಕಾಯ್ವ ಕರುಣೆ | |

| | ಚರಣ | | 2 | | ಕರೆದರೆ ಬರುವೆಯೆಂದು ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು ಜರಿಯ ಬೇಡವೋ ಬರಿದೆ ನಿಮ್ಮಯ
ವಿರಹ ತಾಳದೆ ಮನದಿ ಕೊರಗುವೆ ಹರಿಯ ಸ್ಮರಣೆಯ ನೀಡು ನಮಗೆ
ಹರುಷದಲಿ ನೀ ನಿರುತ ಕೊಡುತಲಿ | |

| | ಚರಣ | | 3 | | ನರಹರಿಪ್ರಿ ಬಾರೋ ಗುರುಶ್ರೀಶವಿಠ ನ ಕರುಣ ಪಾತ್ರನೆ ಬಾರೋ
ಗುರುವರನೆ ಪರಿತೋಷಿಸೆನ್ನನು ಮರೆಯದಲೆ ತವಚರಣ ಕೊಡುತಲಿ
ಚರಣಾ0ಭುಜವ ತೋರುತ ತ್ವರಿತದಲಿ ಓಡೋಡಿ ಬಾಬಾ | |
-----------------------------------------------------------------------------------------------------

33. ಸಾಸಿರ ಮಾತುಗಳ್ಯಾಕೋ ರಾಗ : ಕಾಮ ವರ್ಧಿನಿ ತಾಳ : ಆದಿತಾಳ ರಚನೆ : ಶ್ರೀರಾಮದಾಸರು 

ಆ :ಸ ರಿ1 ಗ3 ಮ2 ಪ ದ1 ನಿ3 ಸ 51ನೇ ಮೇಳ ಕರ್ತ ರಾಗ
ಅವ :ಸ ನಿ ದ1 ಪ ಮ2 ಗ3 ರಿ1 ಸ ಪ್ರತಿಮಧ್ಯಮ ರಾಗ
| |ಪಲ್ಲವಿ :- ಸಾಸಿರ ಮಾತುಗಳ್ಯಾಕೋ ಎಲೆಮನ ಕೇವಲ ಹರಿನಾಮ ಒಂದೇ ಸಾಕೋ | |
| | ಅ .ಪ| | ಸ್ನಾನವು ಯಾಕೊ ಮೌನವು ಯಾಕೊ ದಾನವಾರಿಯ ಧ್ಯಾನವೊಂದೇ ಸಾಕೊ| |

| | ಚರಣ | | ಮಂತ್ರವುಯಾಕೊ ತಂತ್ರವುಯಾಕೊ ಮಂತ್ರ ಮೂರ್ತಿ ಚಿಂತೆವೊಂದೇ ಸಾಕೊ
ಹೋಮವು ಯಾಕೋ ನೇಮವು ಯಾಕೋ ಸ್ವಾಮಿ ಶ್ರೀರಾಮನ ಭಕ್ತಿಯೊಂದೆ ಸಾಕೋ | |
-----------------------------------------------------------------------------------------------------
 
34. ಕಲ್ಲಿನಿಂದಲಿ ಸರ್ವ ರಾಗ : ತ್ರಿನೇತ್ರಪ್ರಿಯ ತಾಳ : ಆದಿ ತಾಳ ರಚನೆ : ಶ್ರೀ ವಿಜಯದಾಸರು 

ಆ : ಸ ರಿ1 ಮ1 ದ2 ನಿ2 ಸ 16ನೇ ಚಕ್ರವಾಕದಲ್ಲಿ ಜನ್ಯ
ಅ ವ : ಸ ನಿ2 ದ2 ಮ1 ರಿ1 ಸ ಔಡವ ರಾಗ
| |ಪಲ್ಲವಿ | | ಕಲ್ಲಿನಿಂದಲಿ ಸರ್ವ -ಫಲ ಬಾ -ಹುದೋ ಕಲ್ಲು ಭಜಿಸಿದರೆ -ಕೈವಲ್ಯ -ತೋರುವುದೋ | |

| | ಚರಣ | | 1 | ಕಲ್ಲು ಕಡೆಯುತ್ತಿರಲು - ಅಮೃತವೇ -ಪುಟ್ಟಿತೋ
ಕಲ್ಲು ಎತ್ತಲು ಮಳೆ-ಯೊಳೆಲ್ಲರು - ಉಳಿದರು
ಕಲ್ಲು ಹರಿಪಾದವನು -ಸೋಕೆ ಹೆ -ಣ್ಣಾಯಿತು
ಕಲ್ಲು ಲಂಕೆಗೆ ಮಾರ್ಗ -ಚನ್ನಾಗಿ –ಶೋಭಿಸಿತು | |

| | ಚರಣ | | 2 | ಕಲ್ಲಿನೊಳಗೆ ದೇವ ಒಡಮೂಡಿ - ಕಾಣಿಸುವ
ಕಲ್ಲು ಕೊರೆಯಲು ಮೂರ್ತಿ - ಮುಂತಾಹುದೋ
ಕಲ್ಲು ದೇವರ ಗುಡಿಗೆ -ಗರುಡ ಗಂಭವು ಆಯ್ತು
ಕಲ್ಲು ಕೋಟ್ಯಾನು ಕೋಟಿ -ಗೆಲ್ಲ ಬೆಲೆ –ಯಾಯ್ತು | |

| | ಚರಣ | | 3 | | ಕಲ್ಲೆಂದು ಪೇಕ್ಷಿಸದೇ –ಕಾಲಕಾಲದಿ ನಿಮ್ಮ
ಕಲ್ಲು ಮನಸನು ಬಿಟ್ಟು ಪೂಜೆ ಮಾಡಿ
ಕಲ್ಲಿನೊಳಗಿದ್ದು ಸಿರಿ ವಿಜಯ ವಿಠ್ಠಲ ಒಳ್ಳೆ
ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೋ| |
-----------------------------------------------------------------------------------------------------
 
35. ಹರಿಯ ನೆನಸಿದ ದಿವಸ ರಾಗ : ಸಿಂಧುಭೈರವಿ ತಾಳ ಝ೦ಪೆ ತಾಳ ರಚನೆ : ಶ್ರೀ ವಿಜಯದಾಸರು 

ಆ : ಸ ಗ2 ಮ1 ಪ ದ1 ಸ 8ನೇ ಮೇಳಕರ್ತ ರಾಗ ಹನುಮ ತೋಡಿಯಲ್ಲಿ ಜನ್ಯ
ಅ ವ : ಸ ನಿ2 ದ1 ಪ ಮ1 ಗ2 ರಿ1 ಸ ಶುದ್ಧ ಮಧ್ಯಮ ರಾಗ
| |ಪಲ್ಲವಿ | | ಹರಿಯ ನೆನಸಿದ ದಿವಸ ಶುಭ ಮಂಗಳಾ | |
| | ಅ. ಪ | | ಹರಿಯ ನೆನಸದ ದಿವಸ ಅವ ಮಂಗಳಾ | |

| | ಚರಣ | | 1 | ಹರಿಯ ನೆನಸಿದ ನಿಮಿಷ ಯಾವಾಗಲು ಹರುಷ
ಹರಿಯ ನೆನಸದ ದಿವಸ ದುರ್ಮಾಸನಾ
ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ
ಹರಿಯ ನೆನಸದ ಘಳಿಗೆ ಯಮನ ಬಳಿಗೆ | |

| | ಚರಣ | | 2 | ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ದಾರ
ಹರಿಯ ನೆನಸದ ಪ್ರಹರ ಹೀನಾಚಾರ
ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು
ಹರಿಯ ನೆನಸದ ಹಗಲು ನರಕಕ್ಕೆ ತಗಲು | |

| | ಚರಣ | | 3 | | ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನಾ
ಹರಿಯ ನೆನಸದ ಮಧ್ಯಾಹ್ನ ಕಾನನ
ಹರಿಯ ನೆನಸಿದ ಸಾಯಂಕಾಲ ಸುಕಾಲ
ಹರಿಯ ನೆನಸದ ಸಾಯಂಕಾಲ ದುಷ್ಕಾಲ

| | ಚರಣ | | 4 | | ಹರಿಯ ನೆನಸಿದ ದಿನವು ನರನಿಗೆ ಸಮ್ಮತವು
ಹರಿಯ ನೆನಸದ ದಿನವು ದುರ್ದಿನವು
ಹರಿಯ ನೆನಸಿದ ನರನು ಕೃತ ಕೃತ್ಯ
ಹರಿಯ ನೆನಸದ ನರಜನ್ಮ ವ್ಯರ್ಥಾ

| | ಚರಣ | | 5 | | ಹರಿಯ ನೆನಸಿದ ರಾತ್ರಿ ತೀರ್ಥ ಕ್ಷೇತ್ರದ ಯಾತ್ರೆ
ಹರಿಯ ನೆನಸದ ರಾತ್ರಿ ಪಂಚ ಪಾತ್ರಿ
ಪುರಂದರನ ಪ್ರಿಯಸಿರಿ ವಿಜಯ ವಿಠಲನಂಘೀ
ಮರೆಯದೆ ಸದಾ ನೆನವವನೆ ಮುಕ್ತ
-----------------------------------------------------------------------------------------------------

36. ಬಾರೇ ಭಾಗ್ಯದ ನಿಧಿಯೇ ರಾಗ: ರಾಗೇಶ್ರೀ (ರವಿಚಂದ್ರಿಕೆ ) ತಾಳ: ಖಂಡಛಾಪು ರಚನೆ: ತಿರುಪತಿ ಅನಂತಾದ್ರೀಶ ವಿಠಲ 

ಆ : ಸ ರಿ2 ಗ3 ಮ1 ದಾ2 ನಿ2 ಸ 28ನೇ ಹರಿಕಾಂಭೋಜಿಯಲ್ಲಿ ಜನ್ಯ
ಅ ವ : ಸ ನಿ2 ದ2 ಗಾ3 ಮ1 ರೀ2 ಸ
| |ಪಲ್ಲವಿ | | ಬಾರೇ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೆ | |
| | ಅ. ಪ | | ಬಾರೇ ಕರವೀರ ನಿವಾಸಿನಿ ಬಾರಿ ಬಾರಿಗೆ ಶುಭ ತೋರೇ | |

| | ಚರಣ | | 1 | ನಿಗಮ ವೇದ್ಯ-ಳೆನೀನು ಪೋಗಳಲಾ - ರದೆನಾನು
ಮಗನ ಪ ರಾ-ದವ ತೆಗೆದೆಣಿಸ -ದೆ ನೀ
ಲಘು ಬಗೆ-ಯಿಂದಲಿ -ಪನ್ನಗ ವೇಣಿ | |

| | ಚರಣ | | 2 | ಕಡೆಗನ -ಮ್ಮನಿವಾಸಾ ನಿನ್ನೊಡೆಯಾ - ನಂತಾದ್ರೀಶ
ಒಡೆಯನಿ-ದ್ದಲ್ಲಿಗೆ ಮಡದಿ -ಬಾಹುದೋ
ನಡತೆ ಉಚಿತ ವಿದು ನಡೆ ನಮ್ಮ-ನಿಗೆ | |
-----------------------------------------------------------------------------------------------------
 
37. ಹೆತ್ತ ತಾಯಿಗಿಂತ ರಾಗ : ಶಿವರಂಜನಿ ತಾಳ : ರೂಪಕತಾಳ ರಚನೆ : ಶ್ರೀ ಕನಕದಾಸರು 

ಆ : ಸ ರಿ2 ಗ2 ಪ ದ2 ಸ 22ನೇ ಖರಹರಪ್ರಿಯದಲ್ಲಿ ಜನ್ಯ
ಅ ವ : ಸ ದ2 ಪ ಗ2 ರಿ2 ಸ ಔಡವ ರಾಗ
| |ಪಲ್ಲವಿ | | ಹೆತ್ತ ತಾಯಿಗಿಂತ ಅತ್ಯಧಿಕ ಮಾಯೆವುಂಟೆ
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ | |

| | ಚರಣ | | 1 | ವಿತ್ತ ವುಳ್ಳವ ಎಣಿಸುವುದುಂಟೆ
ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ | |

| | ಚರಣ | | 2 | ಅತ್ತೆ ಮನೆ ಸೇರು ವಗೆ ಅಭಿಮಾನವುಂಟೆ
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ | |

| | ಚರಣ | | 3 | | ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ
ಮರ್ತ್ಯದೋಳನ್ಯ ದೇವರು ಸರಿಯುಂಟೆ | |
-----------------------------------------------------------------------------------------------------

38. ಯಾದವ ರಾಯ ರಾಗ ಮಾಲಿಕಾ ದೇವರನಾಮ ರಾಗ : ಬಸಂತ ತಾಳ : ಆದಿ ತಾಳ ರಚನೆ : ಶ್ರೀ ಕನಕದಾಸರು 

ಆ : ಸ ಗ3 ಮ2 ದ1 ನಿ3 ಸ ( ಸ ಮ1 ಮ1 ಗ3 ಪ್ರಯೋಗ)
ಅ ವ : ಸ ನಿ3 ದ1 ಪ ಮ2 ಗ3 ಮ2 ಗ3 ರಿ1 ಸ
| |ಪಲ್ಲವಿ | | ಯಾದವರಾಯ ಬೃಂದಾವನದೊಳು ವೇಣು ಗಾನವ ಮಾಡುತಿರೆ | |
| | ಅ. ಪ | | ರಾಧಾ ಮುಂತಾದ ಗೋಪಿಯರೆಲ್ಲ ಮಧುಸೂದ ನಿನ್ನ ಸೇವಿಸುತಿರೇ

ಸುರರು ಅಂಬರದಿ ಸಂಚರಿಸುತಿರೆ ಅಪ್ಸರ ಸ್ತ್ರೀಯರು ಮೈಮರೆತಿರೆ | | | | ಚರಣ | | 1 |
ರಾಗ : ಸಿಂಧುಭೈರವಿ ಆದಿತಾಳ
ಆ : ಸ ಗ2 ಮ1 ಪ ದ1 ಸ 8ನೇ ಮೇಳಕರ್ತರಾಗ ಹನುಮತೋಡಿಯಲ್ಲಿ ಜನ್ಯ
ಅವ : ಸ ನಿ2 ದ1 ಪ ಮ1 ಗ2 ರಿ1 ಸ ಶುದ್ಧ ಮಾಧ್ಯಮ ರಾಗ
ಕರದಲಿ ಕೊಳಲನು ಊದುತ ಪಾಡುತ ಸರಿಗಮ ಪದನಿ ಸ್ವರಗಳ ನುಡಿಸುತ
ಹರಿ-ಹರ ಬ್ರಹ್ಮರು ನಲಿದಾಡುತಿರೆ ತುಂಬುರು ನಾರದರು ಪಾಡುತಿರೇ | | | | ಚರಣ | | 2 |

ರಾಗ: ದುರ್ಗಾ ಆದಿತಾಳ ಆ : ಸ ರಿ2 ಮ1 ಪ ದ2 ಸ 29ನೇ ಶಂಕರಭರಣದಲ್ಲಿ ಜನ್ಯ
ಅವ : ಸ ದ2 ಪ ಮ1 ರಿ2 ಸ ಔಡವ ರಾಗ
ಅರವಿಂದ ದಳನಯನ ಕೃಷ್ಣಾ ಕರುಗಳ ಸಹಿತ ಗೋವುಗಳನ್ನೆಲ್ಲಾ
ಸಿರಿ ಕಾಗಿನೆಲೆ ಆದಿ-ಕೇಶವರಾಯ ತಿರುಗಿದ ಮೆಲ್ಲನೆ ವರ ಗೋಪಾಲ | |
-----------------------------------------------------------------------------------------------------

39. ನೆಚ್ಚದಿರು ಸಂಸಾರ ರಾಗ : ಹಂಸ ನಾಂದಿ ತಾಳ : ಝ೦ಪೆ ತಾಳ ರಚನೆ : ಶ್ರೀ ಕನಕದಾಸರು 

ಆ : ಸ ರಿ1 ಗ3 ಮ2 ದ2 ನಿ3 ಸ 53ನೇ ಗಮನಾಶ್ರಮದಲ್ಲಿ ಜನ್ಯ
ಅ ವ : ಸ ನಿ3 ದ2 ಮ2 ಗ3 ರಿ ಸ ಷಾಡವ ರಾಗ
| |ಪಲ್ಲವಿ | | ನೆಚ್ಚದಿರು ಸಂಸಾರ ನೆಲೆಯಲ್ಲ ವೀ ಕಾಯ
ಅಚ್ಚುತನ ನಾಮವನು ನೆನದು ಸುಖಿಯಾಗೋ | |

| | ಚರಣ | | 1 | ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತ ರಾಶಿಗಳನು
ನಳಿನಾಭನ ದಿವ್ಯ ನಾಮವನು ನೆನೆನೆನೆದು
ನೆಲೆಯಾದ ಪರಮ ಪದವಿಯ ಪಡೆಯೋ ಮನವೇ | |

| | ಚರಣ | | 2 | ನೋಡದಿರು ಪರಸತಿಯ ಕೊಡದಿರು ದುರ್ಜನರ
ಆಡದಿರು ಮಾತುಗಳ ಗರ್ವದಿಂದ
ಬೇಡದಿರು ಕೈಯ ಹಿಂದೆಗೆವ ಹೇಡಿಯನು ಕೊಂ
ಡಾಡದಿರು ಬೀದಿಗೊಳುಂಬ ದೈವಗಳನು | |

| | ಚರಣ | | 3 | | ನಾನಾಜನ್ಮದಿ ಬಂದ ನಾಟಕದ ಬೊಂಬೆಯಿದು
ಮಾನಕ್ಕೆ ಮೆಚ್ಚಿ ನೀ ಮರುಳಾಗದೆ
ಜಾಣತನದಿಂದ ಕಾಗಿನೆಲೆಯಾದಿ ಕೇಶವನ
ಮಾನಸದಿ ನೆನೆನೆನೆದು ಸುಖಿಯಾಗೊ ಮನವೆ | |
-----------------------------------------------------------------------------------------------------
 
40. ಕಲಿಯುಗದಲಿ ಹರಿನಾಮವ ರಾಗ : ಜಂಜೂಟಿ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ದ2 ಸ ರಿ2 ಗ3 ಮ1 ಪ ದ2 ನೀ2 28ನೇ ಹರಿಕಾಂಭೋಜಿಯಲ್ಲಿ ಜನ್ಯ
ಅ ವ : ನಿ2 ದ2 ಪ ಮ1 ಗ3 ರಿ2 ಸ ನಿ2 ದ2 ಪ ದ2 ಸಾ ನಿಷಾದ ಅಂತ್ಯ ರಾಗ
| |ಪಲ್ಲವಿ | | ಕಲಿಯುಗದಲಿ ಹರಿನಾಮವ ನೆನದರೆ
ಕುಲ ಕೋಟಿಗಳುದ್ದರಿಸುವವು ರಂಗ | |
| | ಅ. ಪ | | ಸುಲಭದ ಮುಕ್ತಿಗೆ ಸುಲಭವೆಂದೆನಿಸುವ
ಜಲರುಹನಾಭನ ನೆನೆ ಮನವೇ | |

| | ಚರಣ | | 1 | ಸ್ನಾನವ ನರಿಯೆನು ಮೌನವ ನರಿಯೆನು
ಧ್ಯಾನವ ನೆರಿಯೆನೆಂದೆನ ಬೇಡ
ಜಾನಕಿವಲ್ಲಭ ದಶರಥ ನಂದನ
ಗಾನವಿನೋದನ ನೆನೆ ಮನವೇ | |

| | ಚರಣ | | 2 | ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಛನು ನಾನೆಂದೆನಬೇಡ
ಅಚ್ಚುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆ ಮನವೇ | |

| | ಚರಣ | | 3 | | ಜಪವೊಂದರಿಯೆನು ತಪವೊಂದರಿಯೆನು
ಉಪದೇಶ ವಿಲ್ಲೆಂದೆನ ಬೇಡ
ಅಪಾರ ಮಹಿಮ ಶ್ರೀ ಪುರಂದರ ವಿಠಲನ
ಉಪಾಯದಿಂದಲಿ ನೆನೆ ಮನವೇ| |
-----------------------------------------------------------------------------------------------------

41. ಏಳೋ ಹನುಮಂತ ರಾಗ : ಚೌಳಿ ತಾಳ : ಛಾಪು ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಪ ದ1 ಸ 15ನೇ ಮಾಯಾಮಾಳವಗೌಳದಲ್ಲಿ ಜನ್ಯ
ಅ ವ : ಸ ನಿ3 ದ1 ಪ ಗ3 ರಿ1 ಸ ಔಡವ - ಷಾಡವ ರಾಗ
| |ಪಲ್ಲವಿ | | ಏಳು ಹನುಮಂತ ಎಷ್ಟು ನಿದ್ರೆ ಏಳು ಹನುಮಂತ ಎಷ್ಟು ನಿದ್ರೆ | |

| | ಚರಣ | | 1 | ಮಾತನಾಡಲು ಬೇಕು -ಮುದ್ರಿಕೆ ತರಬೇಕು
ಹರಿಕುಶಲ ಜಾನಕಿಗೆ - ತಿಳಿಸಬೇಕು
ವನವ ಕೀಳಲು ಬೇಕು - ಚೂಡಾಮಣಿ ತರಬೇಕು
ಹರಿ ಹರುಷ ದಿಂದಲಿ -ಖ್ಯಾತಿ ಪಡೆಯಲು ಬೇಕು | |

| | ಚರಣ | | 2 | ಶರಧಿ ಲಂಘಿಸಬೇಕು - ರಘು ಪತಿಯ ಕೂಡಿರಬೇಕು
ದುರುಳ ಇಂದ್ರಜಿತುವಿನ -ಗೆಲ್ಲಬೇಕು
ಅನುಜ ಲಕ್ಷಣಗೆ ಸಂಜೀವಿ ಕೊಡಲು ಬೇಕು
ಹನುಮಂತ ಬಲವಂತ (3) –ಎಂದೆನಿಸಬೇಕು | |

| | ಚರಣ | | 3 | | ದುಷ್ಟ ರಕ್ಕಸರೆಲ್ಲ -ಕುಟ್ಟಿ ಕೆಡಹಲು ಬೇಕು
ಹತ್ತು ತಲೆ ರಾವಣನ - ಬಲ ಇಳಿಸಬೇಕು
ಭಕ್ತ ವಿಭೀಷಣಗೆ -ಪಟ್ಟ ಗಟ್ಟಲು ಬೇಕು
ಲಕ್ಷ್ಮಿ ಸಹಿತ ಅಯೋಧ್ಯಗೆ ತೆರಳಬೇಕು | |

| | ಚರಣ | | 4 | | ಕುರುಕುಲದಲಿ ಕುಂತಿ -ಸುತನಾಗಿ ಜನಿಸಬೇಕು
ರಣದಲ್ಲಿ ಕೌರವರ -ಗೆಲ್ಲಬೇಕು
ವನದೊಳಗೆ ಘನ ತೃಷೆಯ -ಘಾಸಿ ಪಡಿಸಲುಬೇಕು
ಮಡದಿಗೆ ಸೌಗಂಧವ -ತರಲು ಬೇಕು | |

| | ಚರಣ | | 5 | | ಯತಿಯಾಗಿ ಬರಬೇಕು -ಕುಮುಟ ಖಂಡಿಸಬೇಕು
ಅದ್ಬುತ ವಾದಿಗಳ -ಗೆಲ್ಲಬೇಕು
ಮಧ್ವ ಶಾಸ್ತ್ರವ ಲೋಕಕೆಲ್ಲ -ಬೋಧಿಸಲು ಬೇಕು
ಮುದ್ದು ಪುರಂದರ ವಿಠಲ -ಎಂದೆನಿಸಬೇಕು | |
-----------------------------------------------------------------------------------------------------

42. ಪೋಪು ಹೋಗೋಣ ಬಾರೊ ರಂಗ ರಾಗ : ಸಾರಂಗ ತಾಳ : ಆದಿ ತಾಳ ರಚನೆ : ಶ್ರೀ ಪಾದರಾಜರು 

ಆ : ಸ ರಿ2 ಗ3 ಮ3 ಪ ದ2 ನಿ3 ಸ 65ನೇ ಮೇಚು ಕಲ್ಯಾಣಿಯಲ್ಲಿ ಜನ್ಯ
ಅ ವ : ಸ ನಿ3 ದ2 ಪ ಮ2 ರಿ2 ಗ3 ಮ1 ರಿ2 ಸ ಭಾಷಾಂಗ ರಾಗ "ಮ" ಅನ್ವಸ್ವರ
| |ಪಲ್ಲವಿ | | ಪೋಪು ಹೋಗೋಣ ಬಾರೋ ರಂಗ ಪೋಪು ಹೋಗೋಣ ಬಾರೋ | |

| | ಚರಣ | | 1 | ಜಾಹ್ನವಿಯ ತೀರವಂತೆ ಜನಕ ರಾಯನ ಕುವರಿಯಂತೆ
ಜಾನಕಿಯ ವಿವಾಹದಂತೆ ಜಾಣ ನೀ ಬರಬೇಕಂತೆ | |

| | ಚರಣ | | 2 | ಕುಂಡನೀಯ ನಗರವಂತೆ ಭೀಷ್ಮಕನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ | |

| | ಚರಣ | | 3 | | ಪಾಂಡವರು ಕೌರವರು ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ ರಂಗವಿಠಲ ಬರಬೇಕಂತೆ | |
-----------------------------------------------------------------------------------------------------

43. ಕಂಡೆ ಕರುಣಾ ನಿಧಿಯ ರಾಗ : ನಾದನಾಮ ಕ್ರಿಯ ತಾಳ : ಆದಿ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಮ1 ಪ ದ1 ನಿ3 15ನೇ ಮಾಯಾಮಾಳವಗೌಳದಲ್ಲಿ ಜನ್ಯ
ಅ ವ : ನಿ3 ದ1 ಪ ಮ1 ಗ3 ರಿ1 ಸ ನಿಷಾದ ಅಂತ್ಯ ರಾಗ
| |ಪಲ್ಲವಿ | | ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ | |
| | ಅ. ಪ | | ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ | |

| | ಚರಣ | | 1 | ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿಸುತ ಸರ್ಪಭೂಷಣ ಶಿವನ ಹರನ | |

| | ಚರಣ | | 2 | ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶು ಪತಿಯೆನಿಸುವನ ವಸುದೆಯೊಳ್ ಶಶಿಶೇಖರ ಶಿವನ ಹರನ | |

| | ಚರಣ | | 3 | | ಗಜಚರ್ಮಾ೦ಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನನಾ ತ್ರಿಪುರಾಂತಕ ಶಿವನ ಹರನ | |

| | ಚರಣ | | 4 | | ಕಾಮಿತ ಫಲವೀವನ ಭಕ್ತರ -ಪ್ರೇಮದಿ ಸಲಹುಹನ
ರಾಮ ನಾಮ ಸ್ಮರನ ರತಿಪತಿ -ಕಾಮನ ಸಂಹರನ ಶಿವನ| |

| | ಚರಣ | | 5 | | ಧರೆಗೆ ದಕ್ಷಿಣ ಕಾಶಿ ಎನಿಸುವ - ಪುರ ಪಂಪಾವಾಸಿ
ತಾರಕ ಉಪದೇಶ -ಪುರಂದರ ವಿಠಲನ ಭಕ್ತರ ಪೋಷಿ | |
-----------------------------------------------------------------------------------------------------

44. ಎಲ್ಲಿರುವನೋ ರಂಗ ರಾಗ : ಮುಖಾರಿ ತಾಳ : ಝ೦ಫೆ ರಚನೆ : ಶ್ರೀ ಕನಕದಾಸರು 

ಆ : ಸ ರಿ1 ಮ1 ಪ ದ2 ಸ 20ನೇ ನಠಭೈರವಿಯಲ್ಲಿ ಜನ್ಯ
ಅ ವ : ಸ ನಿ2 ದ1 ಪ ಮ1 ಗ2 ರಿ2 ಸ ಔಡವ ಸಂಪೂರ್ಣ ಬಾಷಾಂಗ ರಾಗ
| |ಪಲ್ಲವಿ | | ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ | |
| | ಅ. ಪ | | ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು | |

| | ಚರಣ | | 1 | ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಬರೆದೊದಲವನ ಪಿತ ಕೋಪದಿಂದ
ಶಿರವದೋಡಿ ಕಂಬದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆ ಮನವೇ | |

| | ಚರಣ | | 2 | ಪಾಪ ಕರ್ಮವ ಮಡಿದ ಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನ ಕರೆಯ ಕೇಳಿ ರಕ್ಷಿಸೆ ಶ್ವೇತ
ದ್ವೀಪವೀ ಧರೆಗೆ ಸಮೀಪದಲ್ಲಿಹುದೆ | |

| | ಚರಣ | | 3 | | ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ತ್ವರಿತದಲ್ಲಿ ಬಂದು
ಕರುಣದಲಿ ಬಂಧನವ ಪರಿಹರಿಸೆ ಗಜರಾಜ -
ನಿರುವ ಸರಸಿಯು ಅನಂತಾಸನಕೆ ಮುಮ್ಮುನೆಯ | |

| | ಚರಣ | | 4 | | ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದೊದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯ | |

| | ಚರಣ | | 5 | | ಅಣುವ ಹೊತ್ತಿನೊಳಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮ ನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿ ಕೇಶವನು
ನೆನೆದವರ ಮನದೊಳಿಹನೆಂಬ ಬಿರುದುಂಟಾಗಿ | |
-----------------------------------------------------------------------------------------------------

45. ಸತ್ಯವಂತರ ಸಂಗವಿರಲು ತೀರ್ಥವೇತಕೆ ರಾಗ: ಕಾಂಬೋಜಿ ತಾಳ: ರೂಪಕತಾಳ ರಚನೆ: ಶ್ರೀ ಕನಕದಾಸರು 

ಆ : ಸ ರಿ2 ಗ3 ಮ ಪ ದ2 ಸ 28ನೇ ಹರಿಕಾಂಭೋಜಿಯಲ್ಲಿ ಜನ್ಯ
ಅ ವ : ಸ ನಿ2 ದ2 ಪ ಮ1 ಗ3 ರಿ2 ಸ ನಿ3 ಪ ದ2 ಸಾ ಔಡವ ಸಂಪೂರ್ಣ ರಾಗ "ನಿ " ಅನ್ವಸ್ವರ
| |ಪಲ್ಲವಿ | | ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಅನ್ನ ದಾನವಿರಲು ಭಯವು ಏತಕೆ | |

| | ಚರಣ | | 1 | ಗುರು ಹಿರಿಯರ ಅರಿಯದವನ ಅರಿವು ಏತಕೆ
ಪರ ಹಿತಾರ್ಥಕಿಲ್ಲದವನ ಶರೀರವೇತಕೆ
ಹರಿಯ ಪೂಜೆ ಮಾಡದವನ ಜನುಮವೇತಕೆ
ಅನಾಥನ ಪೊರೆಯದ ದೊರೆಯು ಏತಕೆ | |

| | ಚರಣ | | 2 | ಮಾತು ಕೇಳದ ಸದಾ ಮೆರೆವ ಮಕ್ಕಳೇತಕೇ
ಭೀತನಾಗಿ ಓಡಿಬರುವ ಬಂಟನೇತಕೆ
ಪ್ರೀತಿಯಿಂದ ಬಡಿಸದ ಊಟವೇತಕೆ
ದುರ್ಗುಣಗೆ ಸುಗುಣನೆಂಬ ನಾಮ ವೇತಕೆ | |

| | ಚರಣ | | 3 | | ತಾನು ಉಣ್ಣದ ಪರರಿಕ್ಕಿದ ಧನ ವಿದ್ದೇತಕೆ
ಮಾನ ಹಿನನಾಗಿ ಬಾಳ್ವ ಮನುಜನೇತಕೇ
ಕೊಂಕುಮಾತು ಆಡುವಲ್ಲಿ ಇರುವುದೇತಕೆ
ತಾಯಿ-ತಂದೆ ನೋಡದವನ ಸ್ನೇಹವೇತಕೆ | |

| | ಚರಣ | | 4 | | ಭಕ್ತಿಗಾನ ಅರಿಯದಂತ ಪ್ರೌಢನೇತಕೆ
ಮನಶುದ್ಧವಿಲ್ಲದವನ ಸಂಗವೇತಕೇ
ಜ್ಞಾನವಿಲ್ಲದ ನೂರುಕಾಲ ಬದುಕಲೇತಕೇ
ಧ್ಯಾನದೊಳಗೆ ಕೃಷ್ಣನಿಲ್ಲದ ತನುವಿದ್ದೇತಕೇ | |

| | ಚರಣ | | 5 | | ಸನ್ನೆಯರಿತು ನಡೆಯದಂತ ಸತಿಯಿದ್ದೇತಕೆ
ಬಿನ್ನವರಿತು ನಡೆಯುವಂಥ ಬಂಧು ವೇತಕೆ
ಮುನ್ನ ಕೊಳ್ಳು ಬೇಡವ ಕಾರ್ಯವೇತಕೆ
ಚೆನ್ನ ಆದಿಕೇಶವನಿರಲು ದೈವವೇತಕೇ | |
-----------------------------------------------------------------------------------------------------

46. ನಂಬದಿರು ಈ ದೇಹ ನಿತ್ಯವಲ್ಲ ರಾಗ : ಬಿಲಹರಿ ತಾಳ : ಝ೦ಪೆ ತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ2 ಗ3 ಪ ದ2 ಸ 29ನೇ ಧೀರ ಶಂಕರಭರಣದಲ್ಲಿ ಜನ್ಯ
ಅ ವ : ಸ ನಿ3 ದ2 ಪ ಮ1 ಗ3 ರಿ2 ಸ ಔಡವ ಸಂಪೂರ್ಣ ಬಾಷಾಂಗ ರಾಗ "ನಿ "ಅನ್ವಸ್ವರ
| |ಪಲ್ಲವಿ | | ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ -ಭಜಿಸಿ -ಸುಖಿಯಾಗು ಮನವೇ | |

| | ಚರಣ | | 1 | ಎಲುಬು ರಕ್ತ ಮಾಂಸಗಳ -ಮೇಲೆ ಚರ್ಮದ ಹೊದಿಕೆ
ಒಳಗೆ ಮಲಮೂತ್ರ -ಕ್ರಿಮಿಗಳಿಹವು
ಹಲು ವ್ಯಾಧಿಯ ಬೀಡು -ಪಂಚ ಭೂತದ ನಾಡು
ಹುಲು ದೇಹವಾ ನೆಚ್ಚಿ -ಕೆಡಬೇಡ ಮನುಜ | |

| | ಚರಣ | | 2 | ಸತಿಸುತರು ಹಿತರೆಂದು -ಮತಿ ಮರೆತು -ಮಮತೆಯಲಿ
ಅತಿ ಆಕಾಂಷೆಯಿಂದ -ದುರ್ವಿಷಯ ಕೊಲಿದು
ಸತತ ಲಕ್ಷ್ಮೀಪತಿಯ -ಶರಣೆನದೆ -ಇಹಪರದ
ಗತಿ ಶೂನ್ಯ –ನಾಗಿ ನೀ -ಕೆಡಬೇಡ –ಮನುಜ | |

| | ಚರಣ | | 3 | | ಪರರ ನಿಂದಿಸದೆ ಪರ -ವಧುಗಳನು ಬಯಸದೆ
ಗುರು-ಹಿರಿಯರಾ ಸೇವೆ -ಮಾಡದೇ
ಹರಿಸ್ತುತಿಯ -ನೀ ಕೇಳು -ಹರಿ ಕೀರ್ತನೆ ಮಾಡು
ಸಿರಿ ಪುರಂದರ ವಿಠಲ ಒಲಿದು ಪಾಲಿಸುವ | |
-----------------------------------------------------------------------------------------------------

47. ನೀನೆ ಅನಾಥ ಬಂಧು ರಾಗ : ನಾದನಾಮಕ್ರಿಯೆ ತಾಳ : ರೂಪಕತಾಳ ರಚನೆ : ಶ್ರೀ ಪುರಂದರದಾಸರು 

ಆ : ಸ ರಿ1 ಗ3 ಮ1 ಪ ದ1 ನಿ1 15ನೇ ಮಾಯಾಮಾಳವಗೌಳದಲ್ಲಿ ಜನ್ಯ
ಅವ : ನಿ1 ದ1 ಪ ಮ1 ಗ3 ರಿ1 ಸ ನಿಷಾದ ಅಂತ್ಯ ರಾಗ
| |ಪಲ್ಲವಿ :- ನೀನೆ ಅನಾಥ ಬಂಧು ಕಾರುಣ್ಯ ಸಿಂಧು | |

| | ಚರಣ | | 1 | | ಮದಗಜವೆಲ್ಲ ಕೂಡಿದರೇನು ಅದರ ವ್ಯಾಳಕೆ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣ | |

| | ಚರಣ | | 2 | | ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಷಯವಿತ್ತೆ ಕೃಷ್ಣ | |

| | ಚರಣ | | 3 | | ಶಿಲೆಯ ರಕ್ಷಿಸಿ ಕುಲಕೆ ತಂದೆ ಬಲಿಗೆ ಒಲಿದು ಪದವಿಯನಿತ್ತೆ
ಸುಲಭದಿ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರ ವಿಠಲರಾಯ | |
-----------------------------------------------------------------------------------------------------

48. ತುಂಗಾ ತೀರ ವಿರಾಜಂ ರಾಗ : ಸಾಲಗ ಬೈರವಿ ತಾಳ : ಆದಿ ತಾಳ ರಚನೆ : ಶ್ರೀ ಸುರಪುರದ ಆನಂದದಾಸರು 

ಆ : ಸ ರಿ2 ಮ1 ಪ ದ2 ಸ 22 ನೇ ಖರ ಹರ ಪ್ರಿಯದಲ್ಲಿ ಜನ್ಯ
ಅ ವ : ಸ ನಿ2 ದ2 ಪ ಮ1 ಗ2 ರಿ2 ಸ ಔಡವ ಸಂಪೂರ್ಣ ರಾಗ
| |ಪಲ್ಲವಿ | | ತುಂಗಾ ತೀರ ವಿರಾಜಂಭಜಮನ ರಾಘವೇಂದ್ರ ಗುರುರಾಜಂ ಭಜಮನ| |
| | ಅ. ಪ | | ಮಂಗಳಕರ ಮಂತ್ರಾಲಯವಾಸಂ ಬೃಂದಾವನ ಸನ್ಮ೦ದಿರ ವಾಸಂ | |

| | ಚರಣ | | ಕರದ್ರತ ದಂಡ ಕಮಂಡಲ ಮಾಲಂ
ಸುರುಚಿರ ಚೇಲ೦ ದ್ರುತಮಣಿ ಮಾಲಂ
ನಿರುಪಮ ಸುಂದರ ಕಾಯ ಸುಶೀಲಂ
ವರ ಕಮಾಲೇಶಾರ್ಚಿತ ನಿಜ ಸಕಲಂ | |
-----------------------------------------------------------------------------------------------------

49. ಚಂದ್ರ ಚೂಡ ಶಿವ ಶಂಕರ ರಾಗ : ಧನ್ಯಾಸಿ ತಾಳ : ಆದಿತಾಳ ರಚನೆ : ಶ್ರೀ ಪುರಂದರದಾಸರು 

ಆ :ಸ ಗ2 ಮ1 ಪ ನಿ2 ಸಾ 8ನೇ ಹನುಮತೋಡಿಯಲ್ಲಿ ಜನ್ಯ
ಅವ :ಸ ನಿ2 ದ2 ಪ ಮ1 ಗ2 ರಿ2 ಸ ಔಡವ ಸಂಪೂರ್ಣ ರಾಗ
| |ಪಲ್ಲವಿ :- ಚಂದ್ರ ಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ | |
| | ಅ .ಪ| | ಸುಂದರ ಮೃಗಧರ ಪಿನಾಕ ಧನುಕರ ಗಂಗಾಶಿರ ಗಜ ಚರ್ಮ೦ಬರ ಧರ

| | ಚರಣ | | 1 | | ನಂದಿವಾಹನನಂದದಿಂದ ಮಾರ್ಜಗದಿ ಮೆರೆವ ನೀನೆ
ಅಂದು ಅಮೃತ ಘಟದಿಂದುಸಿದ ವಿಷತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರ ನೀನೇ
ಇಂದಿರೇಶ ಶ್ರೀರಾಮನ ಪಾದವ ಚಂದದಿ ಪೊಗಳುವ ನೀನೇ| |

| | ಚರಣ | | 2 | | ಬಾಲಮೃಕಂಡ ಜನ ಕಾಲನು ಎಳೆವಾಗ ಪಾಲಿಸಿದವ ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆಬೇಡೋ ದಿಗಂಬರ ನೀನೆ
ಕಾಲಕೂಟವನು ಪಾನಮಾಡಿದ ನೀಲಕಂಠನು ನೀನೆ
ಜಾಲ ಮಾಡಿದ ಗೋಪಾಲನೆಂಬ ಪೆಣ್ಣಗೆ ಮರುಳಾದವ ನೀನೆ | |

| | ಚರಣ | | 3 | | ಧರೆಗೆ ದಕ್ಷಿಣ ಕಾವೇರಿ ತೀರ ಕುಂಭ ಪುರವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗ ಭೂಷಣನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣಪ್ರಿಯನು ನೀನೆ | |
-----------------------------------------------------------------------------------------------------

50. ರಂಗ ಬಾರೋ ಪಾಂಡು ರಂಗ ಬಾರೋ ರಾಗ: ಮಧ್ಯಮಾವತಿ ತಾಳ: ಆದಿತಾಳ ರಚನೆ: ಶ್ರೀ ಪುರಂದರದಾಸರು 

ಆ : ಸ ರಿ2 ಮ ಪ ನಿ2 ಸ 22ನೇ ಖರಪ್ರಿಯದಲ್ಲಿ ಜನ್ಯ
ಅವ: ಸ ನಿ2 ಪ ಮ1 ರಿ2 ಸ ಔಡವ ರಾಗ
| |ಪಲ್ಲವಿ :- ರಂಗ ಬಾರೋ ಪಾಂಡು ರಂಗ ಬಾರೋ ಶ್ರೀ
ರಂಗ ಬಾರೋ ನರಸಿಂಗ ಬಾರೋ | |

| | ಚರಣ | | 1 | | ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾರಮಣ ಮುಕುಂದ ಬಾರೋ | |

| | ಚರಣ | | 2 | | ಅಪ್ಪ ಬಾರೋ ತಿಮ್ಮಪ್ಪ ಬಾರೋ ಕದರ್ಪ ನೈಯನೇ ಕಂಚೀವರದ ಬಾರೋ
ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ ಎನ್ನಿಷ್ಟ ಮೂರುತಿ ಪುರಂದರ ವಿಠಲ ಬಾರೋ | |

-----------------------------------------------------------------------------------------------------------------------------

No comments:

Post a Comment