131. ಗಂಡು ಭೇರುಂಡ (1984)



ಗಂಡು ಭೇರುಂಡ ಚಿತ್ರದ ಹಾಡುಗಳು 
  1. ಬಾರೇ ಬಾರೇ ನನ್ನವಳೇ 
  2. ಗಗನಕೆ ಸೂರ್ಯ ಚಂದ್ರರೇ ಸಾಕ್ಷಿಯು 
  3. ಹೇ ಎಂಚಿಣ್ಣಿ ಮಾರಾಯ್ರೇ 
  4. ನೋವು ತುಂಬು ನೋವು 
  5. ಭೈರುಂಡ ಭೈರುಂಡ 
ಗಂಡು ಭೇರುಂಡ (1984)
ಸಾಹಿತ್ಯ: ಆರ್.ಎನ್.ಜಯಗೋಪಾಲ್    ಸಂಗೀತ: ಸತ್ಯಂ   ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಬಾರೇ ಬಾರೇ ನನ್ನವಳೇ, ನೂರಾಸೆಯಾ ತಂದವಳೇ
           ಅದು ಎಂಥಹ ಮೋಡಿಯ ಮಾಡಿದೆ ನೀನು, ನನ್ನಲ್ಲೇ
           ಈ ರೂಪದ ರಾಶಿಗೆ ಸೋತೆನು ಇಂದು, ನಾ ಅಲ್ಲೇ
ಹೆಣ್ಣು : ಆಹಾ.. ಆಹಾ.... ಆಆಆ..
ಗಂಡು : ಬಾರೇ ಬಾರೇ ನನ್ನವಳೇ, ನೂರಾಸೆಯಾ ತಂದವಳೇ
           ಹೊಸ ಯೌವನ ತಂದಿದೆ ನೂತನ ಮಿಂಚು, ನಿನ್ನಲ್ಲೀ
           ನಿನ್ನಂದದೆ ತುಂಬಿದೆ ನನ್ನೆದೆ ಚಿನ್ನ, ನೋಡಿಲ್ಲೀ

ಗಂಡು : ಈ ಕೇಶವು, ಕರಿಮೋಡದ ಸಾಲಂತೆ
            ಆ ಮೋಡದೇ, ನಾ ಸುಳಿಯುವೆ ಮಿಂಚಂತೆ
           ಈ ತುಟಿಗಳು, ರಸತುಂಬಿದ ಹಣ್ಣಂತೆ
           ಆ ರುಚಿಯನು, ನಾ ನೋಡುವುದೆಂದತೆ
          ಎದೆ ತಾಕಿದಾಗ, ಮೈ ರೋಮಾಂಚನ
          ಕಿವಿ ಮಾತು ಕೇಳಿ, ಏಕೀ ಕಂಪನ
          ಈ ತೋಳಲ್ಲಿ ನೀನಿರುವಾಗ ಆವೇಗ, ಹೊಸ ಆವೇಗ
         ಬಾರೇ ಬಾರೇ ನನ್ನವಳೇ, ನೂರಾಸೆಯಾ ತಂದವಳೇ
        ಅದು ಎಂಥಹ ಮೋಡಿಯ ಮಾಡಿದೆ ನೀನು, ನನ್ನಲ್ಲೇ
       ಈ ರೂಪದ ರಾಶಿಗೆ ಸೋತೆನು ಇಂದು, ನಾ ಅಲ್ಲೇ
ಹೆಣ್ಣು : ಆಹಾ.. ಆಹಾ.... ಆಆಆ.. ಆಆಆ..

ಗಂಡು : ನೀ ನಕ್ಕರೆ, ಅದು ಮುತ್ತಿನ ಮಳೆಯಂತೆ
           ಆ ಮುತ್ತಿಗೆ, ನಾ ಬೇಡುವೆ ಇಂದಂತೆ
           ಸಂಗಾತಿಯು, ನೀನಾದರೆ ಬಾಳಲ್ಲಿ
          ನಾ ಗೆಲ್ಲುವೆ, ಈ ಜಗವನೆ ಕೇಳಿಲ್ಲಿ
         ನಿನ್ನ ಕಂಡು ಮೈ ಬಿಸಿ ಇಂದಾಗಿದೆ
         ಇಂದು ಏಕೋ ಏನೋ, ನನ್ನ ಬಾಯಾರಿದೆ
        ನಾ ನಿನಗಾಗಿ ನೀ ನನಗಾಗಿ ಎಂದೆಂದೂ, ಇನ್ನೆಂದೆಂದೂ
       ಬಾರೇ ಬಾರೇ ನನ್ನವಳೇ, ನೂರಾಸೆಯಾ ತಂದವಳೇ
       ಅದು ಎಂಥಹ ಮೋಡಿಯ ಮಾಡಿದೆ ನೀನು, ನನ್ನಲ್ಲೇ
       ಈ ರೂಪದ ರಾಶಿಗೆ ಸೋತೆನು ಇಂದು, ನಾ ಅಲ್ಲೇ
ಹೆಣ್ಣು : ಆಹಾ.. ಆಹಾ.... ಆಆಆ.. ಆಆಆ..
--------------------------------------------------------------------------------------------------------------------------

ಗಂಡು ಭೇರುಂಡ (1984)
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ., ಪಿ.ಬಿ.ಎಸ್.


ಪಿ.ಬಿ.ಎಸ್. : ಹ್ಹಾ... ಆಆಆ.... ಒಹೋ... ಎಸ್.ಪಿ.ಬಿ. : ಹೇ... ಹೇ..ಹೇ...
ಎಸ್.ಪಿ.ಬಿ. : ಗಗನಕೆ ಸೂರ್ಯ ಚಂದ್ರರೇ ಕಾವಲೂ
                  ಧರಣಿಗೆ ಕಡಲು ಗಿರಿಗಳೇ ಕಾವಲೂ
                  ಈ ತಮ್ಮನ ಬಾಳಿಗೆ ಈ ತಮ್ಮನ ಜೀವಕೆ
                  ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
ಪಿ.ಬಿ.ಎಸ್  : ಗಗನಕೆ ಸೂರ್ಯ ಚಂದ್ರರೇ ಕಾವಲೂ
                  ಧರಣಿಗೆ ಕಡಲು ಗಿರಿಗಳೇ ಕಾವಲೂ
                  ಈ ತಮ್ಮನ ಬಾಳಿಗೆ ಈ ತಮ್ಮನ ಜೀವಕೆ
                  ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
ಇಬ್ಬರು  : ಗಗನಕೆ ಸೂರ್ಯ ಚಂದ್ರರೇ ಕಾವಲೂ  

ಎಸ್.ಪಿ.ಬಿ.: ಎಂದೆಂದೂ ಹಿತವನ್ನೇ ನಾ ನೀಡುವೇ
                 ಎಂದೆಂದೂ ಸುಖವನ್ನೇ ನಾ ಕೋರುವೇ ಹೇ...ಹೇ
ಪಿ.ಬಿ.ಎಸ್  : ದಿನವೆಲ್ಲ ನಿನ್ನಾಸೆ ಪೊರೈಸುವೇ
                 ಉಸಿರಂತೆ ನಿನ್ನಲ್ಲಿ ಒಂದಾಗುವೇ
ಎಸ್.ಪಿ.ಬಿ.:ತಾಯಿಯ ಹಾಗೆ ನೋಡುವೆ
ಪಿ.ಬಿ.ಎಸ್ : ತಂದೆಯ ಹಾಗೆ ಸಲುಹುವೆ
ಇಬ್ಬರು : ತಬ್ಬಲಿ ಎನ್ನುವ ಭಾವನೆ ಮರೆಸುವೇ ಹೇ..ಹೇ
ಇಬ್ಬರು  : ಗಗನಕೆ ಸೂರ್ಯ ಚಂದ್ರರೇ ಕಾವಲೂ  

ಪಿ.ಬಿ.ಎಸ್ : ತಂಪಾದ ತಂಗಾಳಿ ನಾನಾಗುವೆ 
                 ಎಂದೆಂದೂ ಉಲ್ಲಾಸ ನಾ ನೀಡುವೆ 
ಎಸ್ಪಿ.ಬಿ. :ಬಿರುಗಾಳಿ ನಾನಾಗಿ ಸುಳಿದಾಡುವೆ 
             ನಿನ್ನನ್ನು ಕಾಡೋರ ಅಹ್ಹಹ್ಹ ನಾ ನುಂಗುವೆ 
ಪಿ.ಬಿ.ಎಸ್ :ಕಣ್ಣಿಗೆ ಕಣ್ಣಾಗಿ ಇರುವೆನು 
ಎಸ್ಪಿ.ಬಿ. : ಸ್ವರ್ಗವ ಬೇಡು ತರುವೆನು 
ಇಬ್ಬರು : ಪ್ರಾಣವ ಕೇಳು ಇಂದೇ ಕೊಡುವೇನು .. ಹೇ.. 
ಎಸ್.ಪಿ.ಬಿ. : ಗಗನಕೆ ಸೂರ್ಯ ಚಂದ್ರರೇ ಕಾವಲೂ
ಪಿ.ಬಿ.ಎಸ್ :  ಧರಣಿಗೆ ಕಡಲು ಗಿರಿಗಳೇ ಕಾವಲೂ
ಎಸ್.ಪಿ.ಬಿ:   ಈ ತಮ್ಮನ ಬಾಳಿಗೆ
ಪಿ.ಬಿ.ಎಸ್ : ಈ ತಮ್ಮನ ಜೀವಕೆ
ಇಬ್ಬರೂ : ಈ ಅಣ್ಣನಾ ಪ್ರಾಣವೇ ಕಾವಲೂ ಹೇ... 
              ಗಗನಕೆ ಸೂರ್ಯ ಚಂದ್ರರೇ ಕಾವಲೂ  
             ಲಲ್ಲಲ್ಲಲಾಲಾಲ ಲಲ್ಲಲ್ಲಲಾಲಾಲ 
--------------------------------------------------------------------------------------------------------------------------

ಗಂಡು ಭೇರುಂಡ (1984)
ಸಂಗೀತ: ಸತ್ಯಂ  ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಜಾನಕೀ 

ಲಾ..ಲಾಲಾ ಲಲಲ ಲಾ..ಲಾಲಾ ಲಲಲ
ಹೇ ಎಂಚಿಣಿ ಮಾರ್ಯಾರೇ ಕಸಾಯ್ರೆ ಸಾಯ್ ಬಾ
ಕೆಂಚನೇ ಮೈಯ್ ಚಂಚಲೆ ಕಣ್ಣ ಚೀನಾಲಿ ನೋಡು ಬಾ
ಹೇ ಎಂಚಿಣಿ ಮಾರ್ಯಾರೇ ಕಸಾಯ್ರೆ ಸಾಯ್ ಬಾ
ಕೆಂಚನೇ ಮೈಯ್ ಚಂಚಲೆ ಕಣ್ಣ ಚೀನಾಲಿ ನೋಡು ಬಾ
ಈ ಚೀನಾಲಿ ನೋಡು ಬಾ 
(ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್ 
 ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್ )
ಲಾ..ಲಾಲಾ ಲಲಲ ಲಾ..ಲಾಲಾ ಲಲಲ
ಲಾ..ಲಾಲಾ ಲಲಲ ಲಾ..ಲಾಲಾ ಲಲಲ 

ಬಾಂಗಾಡಿ ಮೀನು ಬಲ್ಲೆಯ ನೀನೂ ಅದನು ಹೋಲುವೆ ನಾನು 
ಬೀಸಿ ಬಲೆಯ ಹಿಡಿವ ನನ್ನ ರುಚಿಯ ಕಾಣುವೇ ನೀನು 
ಮಾಗಿದ ಹಣ್ಣು ಎದುರಿರುವಾಗ ತಿನ್ನಲು ಏತಕೆ ಶಂಕೆ 
ಬಾಗಿದ ಬೆನ್ನ ಮುದುಕನ ಹಿಂದೆ ಸುಮ್ಮನೇ ಓಡುವೇ ಏಕೇ 
ಮಾಕನಕಾ ಮಾಕನಕಾ ಎನ್ನೋ ಮಾತೇಕೇ 
ಹೇ ಎಂಚಿಣಿ ಮಾರ್ಯಾರೇ ಕಸಾಯ್ರೆ ಸಾಯ್ ಬಾ
ಕೆಂಚನೇ ಮೈಯ್ ಚಂಚಲೆ ಕಣ್ಣ ಚೀನಾಲಿ ನೋಡು ಬಾ
ಹೇ ಎಂಚಿಣಿ ಮಾರ್ಯಾರೇ ಕಸಾಯ್ರೆ ಸಾಯ್ ಬಾ
ಕೆಂಚನೇ ಮೈಯ್ ಚಂಚಲೆ ಕಣ್ಣ ಚೀನಾಲಿ ನೋಡು ಬಾ
ಈ ಚೀನಾಲಿ ನೋಡು ಬಾ 
(ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್ 
 ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್ )
ಲಾ..ಲಾಲಾ ಲಲಲ ಲಾ..ಲಾಲಾ ಲಲಲ
ಲಾ..ಲಾಲಾ ಲಲಲ ಲಾ..ಲಾಲಾ ಲಲಲ 

ಕಾಜೂ ಹೊನ್ನಿ ಸ್ವರ್ಗಕೆ ಏಣಿ ಅದಲಿ ಈಜಿ ಮುಳುಗಿದ್ದಾ
ಕಂಗಳ ಮಧುವು ಹೆಚ್ಚಿನ ಮತ್ತು ಕುಡಿದು ನೋಡಿ ಹೇಳು ಬಾ
ಹ್ಹ.. ಬಳುಕುವ ಸೊಂಟ ಕರೆದಿದೆ ತುಂಟ ಆಸರೆ ನೀಡಲು ನಿನ್ನ
ತಂದರೇ ಗಂಟ ನೀನೇ ನಂಟ ಮುಂದಿನ ಆಟವೇ ಚೆನ್ನಾ..
ಮಾಕನಕಾ ಮಾಕನಕಾ ಎನ್ನೋ ಮಾತೇಕೇ 
ಹೇ ಎಂಚಿಣಿ ಮಾರ್ಯಾರೇ ಕಸಾಯ್ರೆ ಸಾಯ್ ಬಾ
ಕೆಂಚನೇ ಮೈಯ್ ಚಂಚಲೆ ಕಣ್ಣ ಚೀನಾಲಿ ನೋಡು ಬಾ
ಹೇ ಎಂಚಿಣಿ ಮಾರ್ಯಾರೇ ಕಸಾಯ್ರೆ ಸಾಯ್ ಬಾ
ಕೆಂಚನೇ ಮೈಯ್ ಚಂಚಲೆ ಕಣ್ಣ ಚೀನಾಲಿ ನೋಡು ಬಾ
ಈ ಚೀನಾಲಿ ನೋಡು ಬಾ 
(ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್ 
 ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್
 ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್
 ಹ್ಯಾಪಿ ಟು ಯಾರ್ ಮ್ಯಾರಿ ಟು ಯಾರ್ )
ಹೇ...ಹೇ... ಹೇ.. ಹೇ..  
-------------------------------------------------------------------------------------------------------------------------

ಗಂಡು ಭೇರುಂಡ (1984)
ಸಂಗೀತ: ಸತ್ಯಂ ಸಾಹಿತ್ಯ:ದೊಡ್ಡರಂಗೇಗೌಡ  ಗಾಯನ: ಎಸ್.ಜಾನಕೀ

ಆಹಾ... ಆಂ.. ಆಹಾ... ಆಂ..ಆಹಾ... ಆಂ..ಬೇಡಾ ಬೇಡಾ  
ನೋವು ತುಂಬಾ ನೋವು ನನ್ನೆದೆಯಲಿ ನೂರೆಂಟು ನೋವು 
ಈ ನೋವು ಈ ನೋವು 
ನೋವು ತುಂಬಾ ನೋವು ನನ್ನೆದೆಯಲಿ ನೂರೆಂಟು ನೋವು 
ಈ ನೋವು ಈ ನೋವು 
ಪ್ರಾಯದ ಬಿಸಿ ತಾಪವೂ ಜೋರಾದ ಎದೆ ಬಡಿತವೂ 
ಲಾಲಲ ಲಾಲಲಲಾಲಲ ಲಾಲಲಲಾಲಲ
ಬೇಡಾ ಆಂ..ಬೇಡಾ  ಆಂ..
ನೋವು ತುಂಬಾ ನೋವು ನನ್ನೆದೆಯಲಿ ನೂರೆಂಟು ನೋವು 
ಈ ನೋವು ಈ ನೋವು 

ಕಣ್ಣಿನ ನೋಟಕೆ ಏನೋ ದಾಹ ಕಾಡುತ ಕರೆದಿದೇ ಮೋಹ 
ಮೌನವ ಪ್ರೀತಿಗೆ ಕಾಣದು ಮೋಹ ಮೈಯಲಿ ಮೆರೆದಿದೆ ದಾಹ 
ಒಲವಿನ ಚೆಲ್ಲಾಟ ಏನೆಲ್ಲಾ ಹುಡುಗಾಟ ಸಾಕಿನ್ನೂ ಈ ಆಟವೂ 
ಬೇಕಿಂದು ನಿನ್ನ ಸ್ನೇಹವೂ ಲಾಲಲ ಲಾಲಲಲಾಲಲ ಲಾಲಲಲಾಲಲ
ಆಂ..ಆಹಾ... ಆಂ..ಬೇಡಾ ಬೇಡಾ  
ನೋವು ತುಂಬಾ ನೋವು ನನ್ನೆದೆಯಲಿ ನೂರೆಂಟು ನೋವು 
ಈ ನೋವು ಈ ನೋವು

ಆಂ..ಆಹಾ.. ಆಂ..ಆಹಾ ಆಂ..ಆಹಾ ಬೇಡಾ ಬೇಡಾ  
ಆಂ..ಆಹಾ.. ಆಂ ಆಂ..ಆಹಾ.. ಆಂ ಬೇಡಾ ಬೇಡಾ  
ನಿನ್ನಲು ಸೇರಲು ಸಾವಿರ ಭೀತಿ ಕಾಣದು ಯಾವುದು ರೀತಿ 
ನಲಿದು ಕೂಡಲು ಕಾಳ ರಾತ್ರಿ ಯಾರಿಂದ ಪಡೆಯಲಿ ಮೈತ್ರಿ 
ಇನ್ನೆಲ್ಲಿ ಉತ್ಸಾಹ ಕರಗಿದೆ ಉಲ್ಲಾಸ ಯಾತನೇ ಹೆಚ್ಚಾಗಲೂ 
ಹೃದಯವೂ ಹುಚ್ಚಾಗಲೂ ಲಾಲಲ ಲಾಲಲಲಾಲಲ ಲಾಲಲಲಾಲಲ
ಆಂ..ಆಹಾ... ಆಂ..ಬೇಡಾ  
ನೋವು ತುಂಬಾ ನೋವು ನನ್ನೆದೆಯಲಿ ನೂರೆಂಟು ನೋವು 
ಈ ನೋವು ಈ ನೋವು
ಪ್ರಾಯದ ಬಿಸಿ ತಾಪವೂ ಜೋರಾದ ಎದೆ ಬಡಿತವೂ 
ಲಾಲಲ ಲಾಲಲಲಾಲಲ ಲಾಲಲಲಾಲಲ
ಆಂ.. ಆಂ..ನೋವು ತುಂಬಾ ನೋವು ನನ್ನೆದೆಯಲಿ ನೂರೆಂಟು ನೋವು 
ಈ ನೋವು ಈ ನೋವು 
-------------------------------------------------------------------------------------------------------------------------

ಗಂಡು ಭೇರುಂಡ (1984)
ಸಂಗೀತ: ಸತ್ಯಂ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ., ಎಸ್.ಜಾನಕೀ
ಹೆಣ್ಣು : ಓಂ.. ಓಂ.. ಓಂ.. ಓಂ.. ಓಂ.. 
ಎಲ್ಲರೂ : ಹು ಆ ಹುಹೂ ಆ  ಹುಹೂ ಆ ಹುಹೂ ಆ 
ಗಂಡು : ಭೈರುಂಡ ಭೈರುಂಡ ಭೈರುಂಡ (ಭೈರುಂಡ )
            ಭೈರುಂಡ ಭೈರುಂಡ ಭೈರುಂಡ (ಭೈರುಂಡ )
            ಮರನೇ ಭೈರುಂಡವೇ..... ವೇ..ವೇ.. (ಸ್ವಾಗತಮ್ಮೋ)
ಹೆಣ್ಣು : ಮಾಯಿ ನಮ್ಮಮ್ಮ ತಾಯಿ... (ಸ್ವಾಗತಮ್ಮೋ)
ಗಂಡು : ಮಾರಾಣಿ ಕ್ಯೂವ್ವಾ ಕ್ಯೂವ್ವಾ ಕುಲಿವಾ ಮಾರಾಣಿ ಕುಲಿವಾ
ಎಲ್ಲರೂ : ಮಾರಾಣಿ ಕುಲಿವಾ  ಕುಲಿವಾ  ಕುಲಿವಾ ಮಾರಾಣಿ ಕುಲಿವಾ 
ಹೆಣ್ಣು : ಬಾರಾಣಿ ನಲಿವಾ ನಲಿವಾ ನಲಿವಾ ಬಾರಾಣಿ ನಲಿವಾ 
ಎಲ್ಲರೂ : ಬಾರಾಣಿ ನಲಿವಾ ನಲಿವಾ ನಲಿವಾ ಬಾರಾಣಿ ನಲಿವಾ 
ಗಂಡು : ಕಾದೇವು ನಿಂಗೇ ಮಾದೇವಿ ನಿಂಗೇ ಭೈರುಂಡ ಭಂಡಾರ ತುಮ್ಕಾ ತುಮ್ಕಾ 
ಕೋರಸ್ : ಭೈರುಂಡ ಭಂಡಾರ ತುಮ್ಕಾ ತುಮ್ಕಾ 
ಹೆಣ್ಣು : ಮಾರಾಣಿ ಭೈರುಂಡ ದೇವೀ (ಸ್ವಾಗತಮ್ಮೋ) 
           ಮಾಯಿ ನಮ್ಮಮ್ಮ ತಾಯಿ... (ಸ್ವಾಗತಮ್ಮೋ)

ಗಂಡು : ಭೈರುಂಡ ಕಾಂಡ ಹೂವೂ ಓ ಪೂಜೇ ಮಾಡಿತೋ 
           ಭೈರುಂಡ ವನದ ಹಣ್ಣು ಮೆಚ್ಚುಕೆ ಆದೀತೋ 
           ಮಾರಾಣಿ ಕುಲಿವಾ ಕುಲಿವಾ ಕುಲಿವಾ ಮಾರಾಣಿ ಕುಲಿವಾ  
ಎಲ್ಲರೂ : ಮಾರಾಣಿ ಕುಲಿವಾ  ಕುಲಿವಾ  ಕುಲಿವಾ ಮಾರಾಣಿ ಕುಲಿವಾ 
ಹೆಣ್ಣು : ಬಾರಾಣಿ ನಲಿವಾ ನಲಿವಾ ನಲಿವಾ ಬಾರಾಣಿ ನಲಿವಾ 
ಎಲ್ಲರೂ : ಬಾರಾಣಿ ನಲಿವಾ ನಲಿವಾ ನಲಿವಾ ಬಾರಾಣಿ ನಲಿವಾ 
ಗಂಡು : ಮಾರಾಣಿ ಭೈರುಂಡ ದೇವೀ (ಸ್ವಾಗತಮ್ಮೋ) 
ಹೆಣ್ಣು:   ಮಾಯಿ ನಮ್ಮಮ್ಮ ತಾಯಿ... (ಸ್ವಾಗತಮ್ಮೋ)

ಹೆಣ್ಣು : ಹತ್ತಾರು ಕಲಕಲ ಬಾರೋ ಕಾವಲೂ ಕಾದೇವೋ 
         ಸುತ್ತಲೂ ಕಲಕಲದಿಂದ ಪಹರ ನಿಂತೆವೋ 
ಗಂಡು : ದೋಚಕೆ ಚಾಚಿದ ಕೈಯ್ ಬಲಿಯ ಹಾಕೇವೂ  ಹೂಹ್ಹಾಂ 
ಹೆಣ್ಣು : ನಿಂಗಾಗೇ ಕಾದು ಕಾದು ಮೈ ಸೋತೆವು 
          ಹತ್ತರಿಗೆ ತುಂಬಾ ಒಳ್ಳೆ ಕಾಣಿಕೆ ಆದಿತೋ  (ಲಲಲ್ಲಲ್ಲಲಾ )
          ನಿಸ್ಸಿಮ ನಿತ್ಯ ಕೊರಳ ಕಣ್ಣ ತುಂಬಿತೋ   (ಲಲಲ್ಲಲ್ಲಲಾ )
ಗಂಡು : ಹೋ ಹೋಯ್ಯ್ ಓ ರಪ್ಪಾ ರಾಶಿ ಜೀವಿಗೆ ಆದೀತೋ 
           ಭೈರುಂಡ ಭಂಡಾರ ಪಾದಕೆ ಒಪ್ಪಿತೋ  
           ಮಾರಾಣಿ ಕುಲಿವಾ ಕುಲಿವಾ ಕುಲಿವಾ ಮಾರಾಣಿ ಕುಲಿವಾ  
ಎಲ್ಲರೂ : ಮಾರಾಣಿ ಕುಲಿವಾ  ಕುಲಿವಾ  ಕುಲಿವಾ ಮಾರಾಣಿ ಕುಲಿವಾ 
ಹೆಣ್ಣು : ಬಾರಾಣಿ ನಲಿವಾ ನಲಿವಾ ನಲಿವಾ ಬಾರಾಣಿ ನಲಿವಾ 
ಎಲ್ಲರೂ : ಬಾರಾಣಿ ನಲಿವಾ ನಲಿವಾ ನಲಿವಾ ಬಾರಾಣಿ ನಲಿವಾ 
ಗಂಡು : ಮಾರಾಣಿ ಭೈರುಂಡ ದೇವೀ (ಸ್ವಾಗತಮ್ಮೋ) 
ಹೆಣ್ಣು:   ಮಾಯಿ ನಮ್ಮಮ್ಮ ತಾಯಿ... (ಸ್ವಾಗತಮ್ಮೋ)
ಗಂಡು : ಭೈರುಂಡ ಭೈರುಂಡ  (ಭೈರುಂಡ )
            ಭೈರುಂಡ ಭೈರುಂಡ  (ಭೈರುಂಡ )
            ಹು ಆ ಹುಹೂ ಆ  ಹುಹೂ ಆ ಹುಹೂ ಆ 
           ಕುಲಿವಾ  ಕುಲಿವಾ ಭೈರುಂಡ ಭೈರುಂಡ  ಕುಲಿವಾ  ಕುಲಿವಾ 
ಹೆಣ್ಣು : ಭೈರುಂಡ ಭೈರುಂಡ (ಕುಲಿವಾ  ಕುಲಿವ್ವಾ...)  
-------------------------------------------------------------------------------------------------------------------------

No comments:

Post a Comment