169. ಮಾನಸ ಸರೋವರ (1983)


ಮಾನಸ ಸೋರವರ ಚಿತ್ರದ ಹಾಡುಗಳು 
  1. ಚೆಂದ ಚೆಂದ ಸಂಗಾತಿ ನೋಟವೆ ಚೆಂದ
  2. ಹಾಡು ಹಳೆಯದಾದರೇನು ಭಾವ ನವನವೀನ..
  3. ಮಾನಸ ಸರೋವರ ಈ ನಿನ್ನಾ ಮನಸೇ ಮಾನಸ ಸರೋವರ
  4. ನೀನೇ ಸಾಕಿದಾ ಗಿಣಿ  ನಿನ್ನಾ ಮುದ್ದಿನಾ ಗಿಣಿ
  5. ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ
ಮಾನಸ ಸರೋವರ (1983) - ಚೆಂದ ಚೆಂದ
ಸಂಗೀತ - ವಿಜಯಭಾಸ್ಕರ್   ಸಾಹಿತ್ಯ - ಎಮ್. ಎನ್. ವ್ಯಾಸರಾವ್  ಧ್ವನಿ - ಜಯಚಂದ್ರನ್


ಚೆಂದ ಚೆಂದ ಸಂಗಾತಿ ನೋಟವೆ ಚೆಂದ
ಅಂದ ಅಂದ ಗುಲಾಬಿ ತೋಟವೆ ಅಂದ

ಹಿಮದ ಮಣಿಗೆ ಎಂದೆಂದು ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ
ದುಂಬಿಗೆ ಸುಮದ ಮಕರಂದ ಹೀರುವ ಧ್ಯಾನ
ಗಿರಿಗೆ ಮುಗಿಲ ಕೂಗಿ ಚುಂಬಿಸೊ ಧ್ಯಾನ

ಬನಕೆ ಚೆಂದ ವಸಂತ ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು ನೀಡಿದ ಗಾನ
ಭೂಮಿಗೆ ಸೂರ್ಯ ಚೆಂದ್ರರ ಬೆಳಕಿನ ಗಾನ
ಪ್ರೇಮಿಗೆ ಪ್ರಿಯಳ ಬಾಚಿ ಅಪ್ಪುವ ಧ್ಯಾನ
------------------------------------------------------------------------------------------------------------------------

ಮಾನಸ ಸರೋವರ (1983) - ಹಾಡು.. ಹಾಡು.. ಹಾಡು ಹಳೆಯದಾದರೇನು... 
ಸಾಹಿತ್ಯ :ಡಾ| ಜಿ.ಎಸ್.ಶಿವರುದ್ರಪ್ಪನವರು    ಸಂಗೀತ :ವಿಜಯಭಾಸ್ಕರ್  ಗಾಯನ :ವಾಣಿ ಜಯರಾಂ 


ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..

ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ....
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..

ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..
--------------------------------------------------------------------------------------------------------------------

ಮಾನಸ ಸರೋವರ (1983) - ಮಾನಸ ಸರೋವರ ಈ ನಿನ್ನ ಮನಸೇ

ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್‍.ಪಿ.ಬಿ, ವಾಣಿ ಜಯರಾಂ   


ಮಾನಸ ಸರೋವರ... ಹೂಂ ಹಾಡು..ಹಾಡ್ತೀಯ..ಹಾ
ಮಾನಸ ಸರೋವರ  ಮಾನಸ ಸರೋವರ
ಈ ನಿನ್ನಾ ಮನಸೇ ಮಾನಸ ಸರೋವರ
ಮಾನಸ ಸರೋವರ  ಮಾನಸ ಸರೋವರ
ಈ ನಿನ್ನಾ ಮನಸೇ ಮಾನಸ ಸರೋವರ
ಮಾನಸ ಸರೋವರ

ಸತ್ಯ ಸುಂದರ ಜೀವನ ರಂಗ ಆ.....ಆ.....ಆ..
ನಿತ್ಯ ನಿರ್ಮಲ ಅಂತರಂಗ  ಆ.....ಆ.....ಆ..
ಸತ್ಯ ಸುಂದರ ಜೀವನ ರಂಗ  ನಿತ್ಯ ನಿರ್ಮಲ ಅಂತರಂಗ
ಆನಂದ ನೀಡುವ... ಆನಂದ ನೀಡುವ...
ಆನಂದ ನೀಡುವ...ಆಆ..  ರಾಗ ತರಂಗ
ಆನಂದ ನೀಡುವ ರಾಗ ತರಂಗ
ಅನುಪಮ ಯೋಗದ ಜೀವ ಗಂಗ
ಅನುಪಮ ಯೋಗದ ಜೀವ ಗಂಗ
ಮಾನಸ ಸರೋವರ  ಮಾನಸ ಸರೋವರ
ಈ ನಿನ್ನಾ ಮನಸೇ ಮಾನಸ ಸರೋವರ
ಮಾನಸ ಸರೋವರ
ಸಂತಸ ಲೀಲೆಯ ಹಂಸವಿಹಾರ  ಆ...ಆ...ಆ...
ಸ್ವರ್ಗ ಸೀಮೆಯ ಕೌಸ್ತುಭ ಹಾರ ಆ...ಆ...ಆ...
ಸಂತಸ ಲೀಲೆಯ ಹಂಸವಿಹಾರ  ಸ್ವರ್ಗ ಸೀಮೆಯ ಕೌಸ್ತುಭ ಹಾರ
ಸೌಂದರ್ಯ ಲಹರಿಯ  ಲಹರಿ ಲಹರಿ ಲಹರಿ ಲಹರಿ
ಸೌಂದರ್ಯ ಲಹರಿಯ  ಲಹರಿ ಲಹರಿ ಲಹರಿ ಲಹರಿ
ಸೌಂದರ್ಯ ಲಹರಿಯ  ಲಹರಿ ಲಹರಿ ಲಹರಿ ಲಹರಿ  ಮಧುರ ಸಂಚಾರ 
ಸೌಂದರ್ಯ ಲಹರಿಯ  ಮಧುರ ಸಂಚಾರ
ವೇದಮಾತೆಯು ನಲಿಯುವ ತೀರ
ವೇದಮಾತೆಯು ನಲಿಯುವ ತೀರ
ಮಾನಸ ಸರೋವರ   ಮಾನಸ ಸರೋವರ
ಈ ನಿನ್ನಾ ಮನಸೇ ಮಾನಸ ಸರೋವರ
ಮಾನಸ ಸರೋವರ
----------------------------------------------------------------------------------------------------------------------

ಮಾನಸ ಸರೋವರ (1983) - ನೀನೇ ಸಾಕಿದಾ ಗಿಣಿ
ಸಾಹಿತ್ಯ : ವಿಜಯನಾರಸಿಂಹ   ಸಂಗೀತ  :  ವಿಜಯಭಾಸ್ಕರ್  ಗಾಯನ : ಎಸ್‍.ಪಿ. ಬಾಲಸುಬ್ರಹ್ಮಣ್ಯಂ


ನೀನೇ ಸಾಕಿದಾ ಗಿಣಿ  ನಿನ್ನಾ ಮುದ್ದಿನಾ ಗಿಣಿ
ಹದ್ದಾಗಿ ಕುಕ್ಕಿತಲ್ಲೊ   ನಿನ್ನ ಹದ್ದಾಗಿ ಕುಕ್ಕಿತಲ್ಲೊ
ನೀನೇ ಸಾಕಿದಾ ಗಿಣಿ  ನಿನ್ನಾ ಮುದ್ದಿನಾ ಗಿಣಿ

ಚಿನ್ನಾದ ಚೂರಿ ಚಂದಾವ ತೋರಿ
ಚಿನ್ನಾದ ಚೂರಿ ಚಂದಾವ ತೋರಿ
ಬೆನ್ನಲ್ಲೆ ತೂರಿತಲ್ಲೊ, ಬೆನ್ನಲ್ಲೆ ತೂರಿತಲ್ಲೊ.
ನೆತ್ತಾರ ಹೀರಿತಲ್ಲೊ ನಿನ್ನ ನೆತ್ತಾರ ಹೀರಿತಲ್ಲೊ
ನೀನೇ ಸಾಕಿದಾ ಗಿಣಿ  ನಿನ್ನಾ ಮುದ್ದಿನಾ ಗಿಣಿ

ಬೀಸೊ ಗಾಳಿ ಬಿರುಗಳಿಯಾಗಿ
ಬೀಸೊ ಗಾಳಿ ಬಿರುಗಳಿಯಾಗಿ
ಬೆಂಕೀಯ ಮಳೆ ತಂತಲ್ಲೊ
ಬೆಂಕೀಯ ಮಳೆ ತಂತಲ್ಲೊ
ಬೆಂಕಿಲಿ ಬೆಂದೆಯಲ್ಲೊ ಉರಿ ಬೆಂಕೀಲಿ ಬೆಂದೆಯಲ್ಲೊ
ನೀನೇ ಸಾಕಿದಾ ಗಿಣಿ  ನಿನ್ನಾ ಮುದ್ದಿನಾ ಗಿಣಿ
ಹೂವಾಗಿ ಅರಳಿ ಹಾವಾಗಿ ಕೆರಳಿ
ಹೂವಾಗಿ ಅರಳಿ ಹಾವಾಗಿ ಕೆರಳಿ
ಪ್ರಾಣಾವ ಹಿಂಡಿತಲ್ಲೊ, ಪ್ರಾಣಾವ ಹಿಂಡಿತಲ್ಲೊ
ಎದೆಯಲ್ಲಾ ಸಿಡಿಯಿತಲ್ಲೊ ನಿನ್ನ ನಗುವೆಲ್ಲ ಉಡುಗಿತಲ್ಲೊ
ನೀನೇ ಸಾಕಿದಾ ಗಿಣಿ  ನಿನ್ನಾ ಮುದ್ದಿನಾ ಗಿಣಿ
ಹದ್ದಾಗಿ ಕುಕ್ಕಿತಲ್ಲೊ  ನಿನ್ನ ಹದ್ದಾಗಿ ಕುಕ್ಕಿತಲ್ಲೊ
ಹದ್ದಾಗಿ ಕುಕ್ಕಿತಲ್ಲೊ  ನಿನ್ನ ಹದ್ದಾಗಿ ಕುಕ್ಕಿತಲ್ಲೊ
--------------------------------------------------------------------------------------------------------------------------

ಮಾನಸ ಸರೋವರ (1983) - ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ

ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪನವರು   ಸಂಗೀತ : ವಿಜಯಭಾಸ್ಕರ್   ಗಾಯನ : ಪಿ.ಬಿ.ಶ್ರೀನಿವಾಸ್ 

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ
ಕವಿಯೊಬ್ಬ ಸಾರಿದನು ಮಣ್ಣೆಲ್ಲ ಹೊನ್ನೂ ಹೊನ್ನೂ...
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು ಓ ಇವಳೆ ಚೆಲುವೆ
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ...ಸ್ವರ್ಗವನೇ ಗೆಲ್ಲುವೆ...
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ

ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು ಓ ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿಯೇ ನಾಎಷ್ಟು ಧನ್ಯ....ನಾ ಎಷ್ಟು ಧನ್ಯ.......
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ
ಕವಿಯೊಬ್ಬ ಸಾರಿದನು ಮಣ್ಣೆಲ್ಲ ಹೊನ್ನೂ ಹೊನ್ನೂ...
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ
--------------------------------------------------------------------------------------------------------------------------

No comments:

Post a Comment