644. ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ (೧೯೯೧)

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ ಚಿತ್ರದ ಹಾಡುಗಳು 
  1. ಜಿಂಪಕು ಜಿಂಪಕು ಜಿಂಪಕು ಮಾವ ಬಿಟ್ಟರೆ ಸಿಕ್ಕನು ಈ ಕೆಟ್ಟ ಮಾವ
  2. ಮೆಲ್ಲಗೇ ನೀ ಬಂದು ಹೀಗೆನ್ನ ತಬ್ಬಿಕೋಬೇಡ 
  3. ಯಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ 
  4. ಬಂತು ಬಂತು ಪ್ರೀತಿ ಮಾಡೋ ಕಾಲ 
  5. ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ 
ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ (೧೯೯೧)
ಸಂಗೀತ: ರಾಜಕೋಟಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ, ರಾಧಿಕಾ, ಮಂಜುಳ ಗುರುರಾಜ

ಜಿಂಪಕು ಜಿಂಪಕು ಜಿಂಪಕು ಮಾವ ಬಿಟ್ಟರೆ ಸಿಕ್ಕನು ಈ ಕೆಟ್ಟ ಮಾವ
ಖಾಕಿಯ ಡ್ರೆಸ್ಸಿನ ಠೀವಿಯ ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ ಮಾವ ಯಾರೂ? ಇವರ್ಯಾರು
ಪೊಲೀಸ್ ಮಾವ್ ಕಣೇ ಅಲ್ಲ  ಮುದ್ದಿನ ಮಾವ್ ಕಣೇ ಊಹೂಂ
ಇಬ್ಬರ ಮಾವ್ ಕಣೇ ಅಲ್ಲಲ್ಲ ಉತ್ತರ ಏನೋ ಕಾಣೆ ಆಅ...
ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್ ಮಾವ್
ಜಿಂಪಕು ಜಿಂಪಕು ಜಿಂಪಕು ಮಾವ ಬಿಟ್ಟರೆ ಸಿಕ್ಕಾನು ಈ ಕೆಟ್ಟ ಮಾವ

ಖಾಕಿಯ ಡ್ರೆಸ್ಸಿನ ಠೀವಿಯ ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ ಮಾವ ಯಾರೂ? ಇವರ್ಯಾರು
ಮೀಸೆಯ ನ್ಯಾಯವ ಕಾಯುವಂತ ವೀರರು ಇವರಂತೆ
ಕೊರಳಿಗೆ ತಾಳಿಯ ಕಟ್ಟಿರುವ ದೇವರು ಇವರಂತೆ
ಕಣ್ಣು ಮುಚ್ಚಾಲೆಯ ಆಡಿಸುವ ತುಂಟರು ಇವರಂತೆ
ಸುಳ್ಳಿನ ಮಾಲೆಯ ಕಟ್ಟುವಂತೆ ನೆಂಟರು ಇವರಂತೆ
ರುಕ್ಮಿಣಿ ಇಲ್ಲಿ ಹೇ... ನಾನು ಆ.. ಸತ್ಯಭಾಮೆಯು ನಾನು .. ।।
ಇಷ್ಟಾದರೂ ನಲ್ಲನಿಗೆ ತೃಪ್ತಿ ನೋಡಿಲ್ಲ
ಮೂರನೇ ಸಂಬಂಧವೂ ಯಾರು ಗೊತ್ತಿಲ್ಲ
ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್ ಮಾವ್... ।।
ಜಿಂಪಕು ಜಿಂಪಕು ಜಿಂಪಕು ಮಾವ ಬಿಟ್ಟರೆ ಸಿಕ್ಕಾನು ಈ ಕೆಟ್ಟ ಮಾವ
ಖಾಕಿಯ ಡ್ರೆಸ್ಸಿನ ಠೀವಿಯ ಮಾವ ಯಾರೂ? ಇವರ್ಯಾರು
ಲಾಠಿಯ ಹಿಡಿದು ಸುತ್ತುವ ಮಾವ ಯಾರೂ? ಇವರ್ಯಾರು

ಗ: ದೊಡ್ಡ ಮನೇಲಿ ಉಪ್ಪಿಟ್ಟು ಚಿಕ್ಕ ಮನೇಲಿ ನಿಪ್ಪಟ್ಟು ತಿನ್ನೊಂಥ ಗಂಡು ನಾನು
     ಹಗಲು ರಾತ್ರಿ ಬಿಡದೇ ಡ್ಯೂಟಿಯ ಮಾಡುವ ಟೆಕ್ನಿಕು ಬಲ್ಲವನು ಅಹ್ಹಹ
     ಒರಿಜಿನಲ್ ಕೃಷ್ಣಗೆ ಪೈಪೋಟಿ ಮಾಡುವ ರಸಿಕರ ರಾಜ ಕಣೇ... ಹೇ..
     ವಾತ್ಸಾಯನನಿಗೆ ಪಾಠ ಹೇಳುವ ಮಹಾರಾಜ ಭೋಜ ಕಣೇ
ಹೆ : ತಲೆ ಮೇಲೆ ಗಂಗಮ್ಮ ನಾನು ನಿನ್ನ ಪಕ್ಕದಲ್ಲಿ ಗೌರಿಯು ನಾನು.. ।।
ಗ : ಇಬ್ಬರನೂ ಆಳೋ ರೀತಿ ತಿಳಿಯಬೇಕೇನು
      ಫಿಸ್ ಇಲ್ಲದೇ ಹೇಳ ಕೊಡ್ತೀನಿ ಎಲ್ಲರಿಗೂ ನಾನು
      ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್ ಮಾವ್.. (ಆಹ್ಹಹ್ )
      ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್ ಮಾವ್..(ಹೌದು ಆಹ್ಹಹ್ ಸೈಡ್ ಹೋಗಲಿ)
--------------------------------------------------------------------------------------------------------------------------

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ (೧೯೯೧) - ಮೆಲ್ಲಗೆ ನೀ ಬಂದು ಹೀಗೆನ್ನ ತಬ್ಬಿಕೋ ಬೇಡ 
ಸಂಗೀತ: ರಾಜಕೋಟಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ, ಮಂಜುಳ ಗುರುರಾಜ

ಹೆಣ್ಣು : ಮೆಲ್ಲಗೆ ನೀ ಬಂದು ಹೀಗೆನ್ನ ತಬ್ಬಿಕೋ ಬೇಡ
          ಹಿತ್ತಲಿಂದ ನೀ ನುಗ್ಗಿ ಕಣ್ಣವ ಹಾಕಲು ಬೇಡ
          ದೊರೆ ಹಾಗೆ ನೀನು ಜೋರಾಗಿ ಬಾ ರಾಜ ರೋಷವಾಗಿ ಎತ್ತಿಕೊಂಡು ಹೋಗು
          ಬೇಯೋದಿಲ್ಲ ಈ ಬೆಳೆ  ನೀ ಕಟ್ಟು  ನಿನ್ನಾಟವ
ಗಂಡು : ಸುಮ್ಮನೆ ಮೈ ತುಂಬಿ ನಿಂತಿರೋ ಸುಂದರ ಹೆಣ್ಣೇ
           ಸುಮ್ಮನ್ನೇ ಕಣ್ಣಲ್ಲೇ ಕೊಲ್ಲುವ ಚೆಂದುಳ್ಳಿ ಹೆಣ್ಣೇ
          ಗ್ರಹಚಾರ ಕೆಟ್ಟು ಸಿಕ್ಕಿ ಬಿಟ್ಟೆನು ದಿಕ್ಕು ಕಾಣದೇ ನಾ ಹೀಗೆ ನಿಂತೆನು
          ಜಾಣೆ ಕೇಳೇ ನೀ  ಕಾಣೆ ಈ ನನ್ನ ಪೇಚಾಟವ

ಹೆಣ್ಣು : ನೀ ದೂರ ಹೋದ ವೇಳೆ ಕಾವಾಯಿತು ನನ್ನ ಮೈಯ್ಯಿ ತಾ ತಂಪನು
ಗಂಡು : ನೀ ಹತ್ತಿರ ಬಂದ ಮೇಲೆ ಬೇವತ್ತೋಯಿತು ನನ್ನ ಮೈಯ್ಯಿ ನಾ ತಾಳೇ
ಹೆಣ್ಣು : ನೀನ್ ಇಲ್ಲದೆ ನಾ ಬಾಳಲಾರೆ ನನ್ನಾಣೆ ನಿನ್ ಮೇಲೆ ನನ್ನ ಜೀವವೂ
ಗಂಡು : ನನ್ ಗತಿ ನಾ ಹೇಳಲಾರೆ ಓ ಜಾಣೆ ಪರದಾಡಿದ ಈ ಪ್ರಾಣಕ್ಕೆ
ಹೆಣ್ಣು : ಬಾರೋ ನಲ್ಲ ಸೇರು ನನ್ನ ಬೇಗ ಇನ್ನ
ಗಂಡು : ಬೇಡ ಬೇಡ ನಿಲ್ಲಮ್ಮಾ ಹೀಗೇಕೆ ತುಂಟಾಟವೂ
ಹೆಣ್ಣು : ಮೆಲ್ಲಗೆ ನೀ ಬಂದು ಹೀಗೆನ್ನ ತಬ್ಬಿಕೋ ಬೇಡ
ಗಂಡು : ಸುಮ್ಮನೆ ಮೈ ತುಂಬಿ ನಿಂತಿರೋ ಸುಂದರ ಹೆಣ್ಣೇ 

ಹೆಣ್ಣು : ಇರುಳಲ್ಲಿ ನಿದ್ರೆ ಇಲ್ಲ ಹಗಲಲ್ಲಿ ಶಾಂತಿ ಇಲ್ಲ ನೀ ಬೆರೆಯೋ
ಗಂಡು : ಸರಸಕ್ಕೆ ಹಾಕು ಬ್ರೇಕ್ ವಿರಹಕೆ ಹಾಕು ಲಾಕು ನೀ ನೀ ಮರೆಯೋ
ಹೆಣ್ಣು : ನೀ ಅಪ್ಪಿ ಮುತ್ತನು ನೀಡು ಮೈಯ್ಯಲ್ಲಿ ಮಿಂಚೊಂದು ಸುಳಿದಾಡಿ
ಗಂಡು : ಸದ್ಯಕ್ಕೆ ಡುಯೆಟ್ ಹಾಡು ಬಾಕಿದ್ದೂ ನಾಳೆಗೆ ಮುಡಿಪಾಗಲೀ
ಹೆಣ್ಣು : ತಾಳಲಾರೆ ನನ್ನ ಆಸೆ ತೀರಿಸು ಬಾರೋ
ಗಂಡು : ಜಾಣೆ ಕೇಳೇ ನೀ ಕಾಣೆ ಈ ನನ್ನ ಪೇಚಾಟವ
ಹೆಣ್ಣು : ಮೆಲ್ಲಗೆ ನೀ ಬಂದು ಹೀಗೆನ್ನ ತಬ್ಬಿಕೋ ಬೇಡ
          ಹಿತ್ತಲಿಂದ ನೀ ನುಗ್ಗಿ ಕಣ್ಣವ ಹಾಕಲು ಬೇಡ
          ದೊರೆ ಹಾಗೆ ನೀನು ಜೋರಾಗಿ ಬಾ ರಾಜ ರೋಷವಾಗಿ ಎತ್ತಿಕೊಂಡು ಹೋಗು
          ಬೇಯೋದಿಲ್ಲ ಈ ಬೆಳೆ  ನೀ ಕಟ್ಟು  ನಿನ್ನಾಟವ
ಗಂಡು : ಸುಮ್ಮನೆ ಮೈ ತುಂಬಿ ನಿಂತಿರೋ ಸುಂದರ ಹೆಣ್ಣೇ
           ಸುಮ್ಮನ್ನೇ ಕಣ್ಣಲ್ಲೇ ಕೊಲ್ಲುವ ಚೆಂದುಳ್ಳಿ ಹೆಣ್ಣೇ
          ಗ್ರಹಚಾರ ಕೆಟ್ಟು ಸಿಕ್ಕಿ ಬಿಟ್ಟೆನು ದಿಕ್ಕು ಕಾಣದೇ ನಾ ಹೀಗೆ ನಿಂತೆನು
          ಜಾಣೆ ಕೇಳೇ ನೀ  ಕಾಣೆ ಈ ನನ್ನ ಪೇಚಾಟವ
--------------------------------------------------------------------------------------------------------------------------

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ (೧೯೯೧) - ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ 
ಸಂಗೀತ: ರಾಜಕೋಟಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ರಾಧಿಕಾ, ಮಂಜುಳ ಗುರುರಾಜ

ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ
ಎಣ್ಣೆಲಿ ಹುರಿದು ಮಸಾಲೆ ತುಂಬಿ ತಿಂದರೆ ಸ್ವರ್ಗ ನನ್ ಮಾತನು ನಂಬು 
ನೋಡುತಾ ಇದ್ರೇ ನೀರೂರತ್ತೇ ಬಾಯಲಿಟ್ಟರೆ ಜುಮ್ ಅನ್ನುತ್ತೆ 
ಬಾರೋ ಬಾರೋ ಹೀರೊ ಹೀರೊ 
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು 
ಮೆಣಸಿನಪುಡಿ ಶುಂಠಿ ಇಟ್ಟು ಹಿತವಾಗಿ ಅದನ್ನ ಬೇಯ್ಸಿ ಬಿಟ್ಟು 
ಒಂದು ತುಂಡು ಬಾಯಲಿಟ್ಟರೇ ದೇವರಾಣೆ ನಿನ್ ಬಿಟ್ಟರೆ ಬಾರೋ ಬಾರೋ ಹೀರೊ ಹೀರೊ 
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ 
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು 

ಅಂಗೈಲಿ ಇಟ್ಟುಕೊಂಡರೇ ಗುಂ ಏನೋ ಸುಖ ನಾಲಿಗೇಲಿ ನೆಕ್ಕುತ್ತಿದ್ದರೆ ಧೀಮ್ ಏನೋ ಸುಖ 
ರಾತ್ರಿ ಡ್ಯೂಟಿಗೆ ನಿಂಗೆ ಹೊಸ ತಾಕತ್ ಬೇಕೇ ಬೇಕು 
ಲಾಠಿ ಇಟ್ಟುಕೊಂಡು ಕೈಲಿ ನೀ ಠೀವಿಲಿ ತಿರುಗಿಸ ಬೇಕು 
ಕಾದಿರುವೆ ಹಸಿವು ಲೀಲೆ ನಿನ್ನ ಜೊತೆ ನಾನೇ ಸಾಕೇ ಬಾರೋ ಬೇಗ ತೋರೋ ಬೇಗ 
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ 
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು 
ಎಣ್ಣೆಲಿ ಹುರಿದು ಮಸಾಲೆ ತುಂಬಿ ಒಂದು ತುಂಡು ಬಾಯಲಿಟ್ಟರೇ 
ದೇವರಾಣೆ ನಿನ್ ಬಿಟ್ಟರೆ ಬಾರೋ ಬಾರೋ ಹೀರೊ ಹೀರೊ 
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ 
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು 

ಮಸಾಲೆ  ಮುಟ್ಟಿದ್ರೇ ನೀ ಆಗುತ್ತೀ ಎಸ್.ಐ  ನಾನೇನು ಕೇಳಿದ್ರು ನೀ ಅಂತಿ ಸೈಸೈ 
ಜೀಪು ಹತ್ತುತ್ತಾ ಇದ್ರೇ ನೀ ಜೀವ ಖುಷಿಯಾಯಿತು ಗೇರು ಬದಲಾಯಿಸಿದರೇ ನೀ ಮನಸು ತೇಲೋಯಿತು 
ನೀನು ಡ್ರೈವ್ ಮಾಡಿದಾಗ ಸ್ಪೀಡು ಹೆಚ್ಚು ಆಗುವಾಗ ಜೋಕೇ ಜೋಕು ಇನ್ನೇನು ಬೇಕು 
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ
ಎಣ್ಣೆಲಿ ಹುರಿದು ಮಸಾಲೆ ತುಂಬಿ ತಿಂದರೆ ಸ್ವರ್ಗ ನನ್ ಮಾತನು ನಂಬು 
ನೋಡುತಾ ಇದ್ರೇ ನೀರೂರತ್ತೇ ಬಾಯಲಿಟ್ಟರೆ ಜುಮ್ ಅನ್ನುತ್ತೆ 
ಬಾರೋ ಬಾರೋ ಹೀರೊ ಹೀರೊ 
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು 
ಮೆಣಸಿನಪುಡಿ ಶುಂಠಿ ಇಟ್ಟು ಹಿತವಾಗಿ ಅದನ್ನ ಬೇಯ್ಸಿ ಬಿಟ್ಟು 
ಒಂದು ತುಂಡು ಬಾಯಲಿಟ್ಟರೇ ದೇವರಾಣೆ ನಿನ್ ಬಿಟ್ಟರೆ ಬಾರೋ ಬಾರೋ ಹೀರೊ ಹೀರೊ 
ಯಾಮ್ಮನನ್ ಸಿಪಾಯಿ ಗುಳ್ಳದ ಬದನೇಕಾಯಿ ಎಂಡಗಾಯಿ ನೋಡಿ ಬೀಡು ಬಾಯಿ ಬಾಯಿ 
ಯಾಮ್ಮನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ ನಮ್ಮ ಮನೆ ಕುಕ್ಕುರೂ  ಕೋಳಿ ಸಾರು 
--------------------------------------------------------------------------------------------------------------------------

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ (೧೯೯೧) - ಬಂತು ಬಂತು ಪ್ರೀತಿ ಮಾಡೋ ಕಾಲ 
ಸಂಗೀತ: ರಾಜಕೋಟಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ, ಚಿತ್ರಾ

ಗಂಡು : ಗೀತೋಪದೇಶ ಮಾಡಿದೆ ಅಂದು ಕುರುಕ್ಷೇತ್ರದ ರಣರಂಗದಲಿ
            ಎಲ್ಲಾ ನಾನೇ ಸಿದ್ಧಾಂತವಿದೂ ವಿಶ್ವ ನಾನೇ ವೇದಾಂತವಿದು ಒಳಗೆ ಎಲ್ಲ ಇಹುದು ತಿಳಿ
ಹೆಣ್ಣು : ಬಂತು ಬಂತು ಪ್ರೀತಿ ಮಾಡೋ ಕಾಲ ತೋರು ಬಾರೋ ನಿನ್ನ ಕೃಷ್ಣ ಲೀಲಾ
          ಗೀತೋಪದೇಶ ಸಾಕಿನ್ನೂ ಪ್ರೇಮೋಪದೇಶ ಮಾಡು ಬಾ
          ಕಾದಿಹೆ ನಾನು ನಿಂಗಾಗಿ ರಾಸ ಕ್ರೀಡೆಯ ಆಡು ಬಾ
          ಊದು ನಿನ್ನ ಫ್ಲೂಟ್  ತೋರು ನಿನ್ನ ರೂಟು ಇನ್ನು ಏಕೆ ಲೇಟು ಬಾರೋ ಕೃಷ್ಣನೇ
ಗಂಡು : ಬಂತು ಬಂತು ಪ್ರೀತಿ ಮಾಡೋ ಕಾಲ ಆದ ಬಂದೆ ನಾನು ರಾಸಲೀಲಾ
            ಗೀತೋಪದೇಶ ಮಾಡಿದ್ದೂ ಪ್ರೇಮೋಪದೇಶ ಹೇಳಿದ್ದು ಸುಮ್ಮನೇ ಬಕವಾಸ್ ಹೇಳಲ್ಲಾ
           ಆಡದ ವಿಷಯ ನೋಡೆಲ್ಲ ತೂರು ಹಾರ್ಟಿಗೆ ರೂಟು
           ನೀ ತೆರೆ ಬಂಗಾರ ಗೇಟು ಹೊಡೆದೆ ನಿಂಗೆ ಸೈಟು ಬಾರೇ ರಾಧಿಕೆ

ಹೆಣ್ಣು : ನಿನ್ನ ಕೊಳಲ ಧ್ವನಿಗೆ ಕಾದು ಸೋತೆನು ವಿರಹದಿ ಈ ದಿನ
ಗಂಡು : ಕೊಳಲ ನುಡಿಸಿ ಹಲವು ರಾಗ ಬಳಲಿದೆ ಅದುವೇ ಕಾರಣ
ಹೆಣ್ಣು : ಸಾಕು ಮಾತಿದು ಗಮ್ಮತ್ತು ನೀ ಇತ್ತ ಈ ಮುತ್ತಿದು
ಗಂಡು : ತಂದೆ ಈಗಲೇ ಚಿತ್ತದ ಈ ಹೊತ್ತು ನಾ ಮತ್ತಲಿ
ಹೆಣ್ಣು : ನಾ ಇಂದು ಆನಂದ ಹಿಂದೆಂದೂ ಕಂಡಿಲ್ಲ
ಗಂಡು : ಮನ್ಮಥ ಬಾಣವು ಎದೆಗೆ ನಾಟಿದೆ ಆಸೆಯೂ ಸಾವಿರ ಅಲ್ಲಿ ನಿಂತಿದೆ
            ಮೈಯಲ್ಲಿ ನೂತನ ವೇಗ ಹೊಮ್ಮಿದೆ ಕಾರಂಜಿಯಾಗುತಾ ನಲಿದು ಚಿಮ್ಮಿದೆ
ಹೆಣ್ಣು : ಬಂತು ಬಂತು ಪ್ರೀತಿ ಮಾಡೋ ಕಾಲ ತೋರು ಬಾರೋ ನಿನ್ನ ಕೃಷ್ಣ ಲೀಲಾ
          ಗೀತೋಪದೇಶ ಸಾಕಿನ್ನೂ ಪ್ರೇಮೋಪದೇಶ ಮಾಡು ಬಾ
          ಕಾದಿಹೆ ನಾನು ನಿಂಗಾಗಿ ರಾಸ ಕ್ರೀಡೆಯ ಆಡು ಬಾ
          ಊದು ನಿನ್ನ ಫ್ಲೂಟ್  ತೋರು ನಿನ್ನ ರೂಟು ಇನ್ನು ಏಕೆ ಲೇಟು ಬಾರೋ ಕೃಷ್ಣನೇ

ಗಂಡು : ಹೂವೋ ನಿನ್ನ ಓದಲು ಹೇಳು  ಸ್ವರ್ಗವ ಅಲ್ಲಿ ನಾ 
ಹೆಣ್ಣು : ಹಿತವೂ ಸುಖವು ನಿನ್ನದು ತೋಳು ಹೊಸ ಹೊಸ ಅನುಭವ ಕಂಡೇ ನಾ 
ಗಂಡು : ಪ್ರೇಮ ಕಾವ್ಯಾವ ಆ ಕಣ್ಣ ಮಿಂಚಲಿ ನಾ ನೋಡಿದೆ 
ಹೆಣ್ಣು : ಮೆಲ್ಲ  ಏನೇನೋ ತುಂಟಾಟ ನೀ ಆಡಿದೆ 
ಗಂಡು : ಎಂದೆಂದೂ ಹೀಗೇನೇ ಒಂದಾಗಿ ಆಡೋಣ 
ಹೆಣ್ಣು : ಮುರುಳಿ ಮನೋಹರ ಕೃಷ್ಣ ಕನ್ನಯ್ಯಾ ಪ್ರೇಮಕೆ ಲೀಡರು ನೀನೇ ಕಣಯ್ಯ
          ಅಂದಿನ ಕೃಷ್ಣಗೆ ಸಾವಿರ ಪ್ರೇಯಸೀ ಇಂದಿನ ನಿನಗೇ ಒಬ್ಬಳೇ ರೂಪಸಿ 
ಗಂಡು : ಬಂತು ಬಂತು ಪ್ರೀತಿ ಮಾಡೋ ಕಾಲ ಆದ ಬಂದೆ ನಾನು ರಾಸಲೀಲಾ
            ಗೀತೋಪದೇಶ ಮಾಡಿದ್ದೂ ಪ್ರೇಮೋಪದೇಶ ಹೇಳಿದ್ದು ಸುಮ್ಮನೇ ಬಕವಾಸ್ ಹೇಳಲ್ಲಾ
           ಆಡದ ವಿಷಯ ನೋಡೆಲ್ಲ ತೂರು ಹಾರ್ಟಿಗೆ ರೂಟು
           ನೀ ತೆರೆ ಬಂಗಾರ ಗೇಟು ಹೊಡೆದೆ ನಿಂಗೆ ಸೈಟು ಬಾರೇ ರಾಧಿಕೆ
--------------------------------------------------------------------------------------------------------------------------

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ (೧೯೯೧) - ಗಂಗೆ ಗೌರಿ ಕಟ್ಟಿಕೊಂಡೆ ಶಿವಶಿವಾ
ಸಂಗೀತ: ರಾಜಕೋಟಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ, ಚಿತ್ರಾ 

ಗಂಡು : ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ ಹೆಂಗೆ ನೀನು ನಿಭಾಯಿಸಿದೇ ಶಿವಶಿವಾ 
            ನಿನ್ನ ಫಾಲೋ ಮಾಡಿದೆನು ಶಿವಶಿವಾ ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವಾ 
            ವಿಷವ ಕುಡಿದು ನೀ ಬಚಾವಾದೇ ಸಾರಾಯಿ ಕುಡಿದು ನಾ ತೂರಾಡಿದೇ 
            ನಿನ್ನಂಗೇ ಕಲ್ಲಾದರೇ ಶಿವಶಿವಾ ತಲೆನೋವು ಇಲ್ಲಯ್ಯ ಶಿವಶಿವಾ 
            ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ ಹೆಂಗೆ ನೀನು ನಿಭಾಯಿಸಿದೇ ಶಿವಶಿವಾ 

ಗಂಡು : ಕೂಲಿಂಗ್ ಗ್ಲಾಸು ಹಾಕಿ ಕಣ್ಣು ಹೊಡೆಯಬೇಡ ಚಿಕ್ಕಮನೆ ಸೆಟ್ಟಪ್ಪು ನೀನು ಮಾಡಬೇಡ 
            ಎರಡನೇಯದನ್ನ ಕಟ್ಟಿಕೊಂಡರೇ ಶಾಂತಿ ಇಲ್ಲ ಅಲ್ಲೇ ಸುಖ ಜಾಸ್ತಿ ಅನ್ನೋದು ಭ್ರಾಂತಿಯಲ್ಲ 
            ಕೇಳಿ ನನ್ನ ಅನುಭವ... 
ಹೆಣ್ಣು : ಏನು ಮೋಸ ಮಾಡಿಬಿಟ್ಟೆಯೋ ನನ್ನ ಹಾಳು ಮಾಡಿಬಿಟ್ಟೆಯೋ 
           ನಂಗೆ ನಿಂಗೂ ಬಂಧ ಸಾಕು ನನ್ನ ಸುಮ್ಮನೆ ಬಿಟ್ಟರೇ ಸಾಕು 
ಗಂಡು : ಅಮ್ಮಯ್ಯ ಕುಡುಕನ ಮಾತನ್ನೂ ಕೇಳಿ ಗಂಡನ ಜೊತೆ ಜಗಳ ಆಡಬೇಡಾ 
            ತಮ್ಮಯ್ಯ ನಿಂಗೆ ನಾನು ಕೈ  ಮುಗಿತೀನಿ ಸಂಸಾರ ಹಾಳು ಮಾಡಿಕೋಬೇಡಾ 
            ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ ಹೆಂಗೆ ನೀನು ನಿಭಾಯಿಸಿದೇ ಶಿವಶಿವಾ 
           ನಿನ್ನ ಫಾಲೋ ಮಾಡಿದೆನು ಶಿವಶಿವಾ ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವಾ 
           ವಿಷವ ಕುಡಿದು ನೀ ಬಚಾವಾದೇ ಸಾರಾಯಿ ಕುಡಿದು ನಾ ತೂರಾಡಿದೇ 
           ನಿನ್ನಂಗೇ ಕಲ್ಲಾದರೇ ಶಿವಶಿವಾ ತಲೆನೋವು ಇಲ್ಲಯ್ಯ ಶಿವಶಿವಾ 
           ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ ಹೆಂಗೆ ನೀನು ನಿಭಾಯಿಸಿದೇ ಶಿವಶಿವಾ 

ಗಂಡು : ಹೆಣ್ಣೇ ನಿನ್ನ ಮನೆಯಲ್ಲಿ ನಲ್ಲಿ ಕೆಟ್ಟು ಹೋಯಿತೇ ಪಾಪ ಬೀದಿ ನಲ್ಲಿ ಹುಡುಕಿ ಬರುವ ಹಾಗಾಯಿತೇ ಅಯ್ಯೋ .. 
ಹೆಣ್ಣು : ನಮ್ಮ ಮನೆ ಮೋಟಾರಿಗೇ ಪವರು ಇಲ್ಲವೋ ಬೀದಿ ಹ್ಯಾಂಡ್ ಪಂಪು ಗತಿಯಲ್ಲವೋ 
ಗಂಡು : ಒಹೋ.. ಐಸಿ... ಪವರು ಸಪ್ಲೈ ಮಾಡಲಾರೇ ನಾ ನಿನಗೆ ಸಹಾಯ ಆಗಲಾರೆ ನಾ 
           ಪೊಲೀಸ್ ಡ್ಯೂಟಿಲಿ ಇದೆಲ್ಲ ಇಲ್ಲವೋ ನೈಟ್ ಡ್ಯೂಟಿಗೇ ಸಮಯ ಇಲ್ಲವೋ 
           ರಿಪೋರ್ಟ್ ಮಾಡಿದರೆ ಸಸ್ಪೆಂಡ್ ಮಾಡುತ್ತಾರೆ ಡೇ ನೈಟು ಡ್ಯೂಟಿ ಆಗ ನೀನು ಮಾಡಿಕೊ 
            ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ ಹೆಂಗೆ ನೀನು ನಿಭಾಯಿಸಿದೇ ಶಿವಶಿವಾ 
           ನಿನ್ನ ಫಾಲೋ ಮಾಡಿದೆನು ಶಿವಶಿವಾ ಇಬ್ಬರು ಹೆಂಡಿರು ಮಧ್ಯ ನಾನು ಶಿವಶಿವಾ 
           ವಿಷವ ಕುಡಿದು ನೀ ಬಚಾವಾದೇ ಸಾರಾಯಿ ಕುಡಿದು ನಾ ತೂರಾಡಿದೇ 
           ನಿನ್ನಂಗೇ ಕಲ್ಲಾದರೇ ಶಿವಶಿವಾ ತಲೆನೋವು ಇಲ್ಲಯ್ಯ ಶಿವಶಿವಾ 
           ಗಂಗೆ ಗೌರಿ ಕಟ್ಟಿಕೊಂಡೇ ಶಿವಶಿವಾ ಹೆಂಗೆ ನೀನು ನಿಭಾಯಿಸಿದೇ ಶಿವಶಿವಾ 
           ಬುದ್ದಿ ತಪ್ಪಾಯಿತು ಕ್ಷಮಿಸಿಬಿಡಿ ನಾನ್ ಕುಡಿದು ಬಿಟ್ಟಿದ್ದೀನಿ ಆಯ್ ಆಮ್ ಡ್ರನ್ಕರ್ ಹೀ ಹೀ ಹೀ  
--------------------------------------------------------------------------------------------------------------------------

No comments:

Post a Comment