109. ಮಂಜಿನತೆರೆ (1980)



ಮಂಜಿನ ತೆರೆ ಚಿತ್ರದ ಹಾಡುಗಳು
  1. ಬಳಸಿರುವ ನಿನ್ನ ತೋಳಿನಲಿ 
  2. ಜೋಕೆ ಎಲ್ಲಿ ಹೋದರೂ 
  3. ಓ ನನ್ನ ಚೆಲುವೇ 
  4. ನೋಡುವೆ ಇದೇಕೆ ಹೀಗೆ 
ಮಂಜಿನತೆರೆ (1980)
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಕೆ.ಜೆ.ಯೇಸುದಾಸ್, ವಾಣಿ ಜಯರಾಮ್


ಹೆಣ್ಣು : ಬಳಸಿರುವ ಈ ತೋಳಿನಲಿ ನನ್ನ ಜೀವಾ ಅಡಗಿದೆ
         ಬಳಸಿರುವ ಈ ತೋಳಿನಲಿ ನನ್ನ ಜೀವಾ ಅಡಗಿದೆ
ಗಂಡು : ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
           ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
           ಮುದ್ದು ಮುದ್ದು ಮಾತಾಡಿದೆ   ಮುದ್ದು ಮುದ್ದು ಮಾತಾಡಿದೆ
ಹೆಣ್ಣು :  ಬಳಸಿರುವ ಈ ತೋಳಿನಲಿ ನನ್ನ ಜೀವಾ ಅಡಗಿದೆ
ಗಂಡು : ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
            ಮುದ್ದು ಮುದ್ದು ಮಾತಾಡಿದೆ   ಮುದ್ದು ಮುದ್ದು ಮಾತಾಡಿದೆ

ಗಂಡು : ಕಂಗಳು ಕೂಗಿರಲು, ತುಟಿಗಳು ಬೇಕೆನ್ನಲು
            ಸುಮ್ಮನೆ ನಿಲ್ಲಲಾರೆ, ಬಯಕೆಯ ಪೂರೈಸಲೇನು
ಹೆಣ್ಣು : ತನುವಿಗೆ ಆಸೆ ಇದೆ, ಮನಸಿಗೆ ಭಯವಾಗಿದೆ
          ಏನನು ಹೇಳೆ ನಾನು, ಸುಮ್ಮನೆ ಮಾತೇಕೆ ಇನ್ನು
          ಓ... ಬಳಸಿರುವ ಈ ತೋಳಿನಲಿ  ನನ್ನ ಜೀವಾ ಅಡಗಿದೆ

ಹೆಣ್ಣು : ಮನಸಿನ ಭಾವನೆಯ, ಹೃದಯದ ನಿನ್ನಾಸೆಯ
         ಬಲ್ಲೆನು ನಲ್ಲ ನಾನು, ನೀನೆಲ್ಲೊ ನಾನಲ್ಲೆ ಇನ್ನು
ಗಂಡು : ಚೆಲುವಿನ ಬೊಂಬೆಯನು, ಒಲವಿನ ಈ ಹೂವನು
           ಅಗಲಿರಲಾರೆ ನಾನು, ಸರಿಯೆನು ನಾ ದೂರ ಇನ್ನು
          ಓ... ಬಳಸಿರುವ ಈ ತೋಳಿನಲಿ   ನನ್ನ ಜೀವಾ ಅಡಗಿದೆ
ಹೆಣ್ಣು : ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
          ನನ್ನ ಪ್ರಾಣವೇಕೊ ಈ ಬೆನ್ನ ಹಿಂದೆ ಸೇರಿ
          ಮುದ್ದು ಮುದ್ದು ಮಾತಾಡಿದೆ 
ಇಬ್ಬರು : ಮುದ್ದು ಮುದ್ದು ಮಾತಾಡಿದೆ ಮುದ್ದು ಮುದ್ದು ಮಾತಾಡಿದೆ
-------------------------------------------------------------------------------------------------------------------------

ಮಂಜಿನತೆರೆ (1980) 
ಸಂಗೀತ: ಉಪೇಂದ್ರಕುಮಾರ್  ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಜಾನಕೀ 

ಏ... ಏ...  ಏ  ಜೋಕೇ... ಜೋಕೇ..ಜೋಕೇ..ಜೋಕೇ..
ಎಲ್ಲಿ ಹೋದರೂ ಎಲ್ಲ ನೋಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ಕಾಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ನೋಡುವರು
ಎಲ್ಲ ಕಾಡುವರು ಬೇಟೆಯಾಡುವರು ಜೋಕೇ
ಜೋಕೇ..ಜೋಕೇ..ಜೋಕೇ..ಜೋಕೇ..

ಬಲೆಯ  ಬೀಸುವರು ಜೋಕೇ ಬಳಿಗೆ ಸೆಳೆಯುವರು ಜೋಕೇ
ಸೆರೆಯ ಹಾಕುವರು ಜೋಕೇ ಕೊರಳ ಅಮುಕುವರು ಜೋಕೇ
ಕಾಣುವುದೂ ಏಕೆ ಕರೆಯುವುದು ಏಕೇ
ಕೆಣುಕುವುದು ಏಕೇ ದೂರವಿರು ಜೋಕೇ
ಆ... ಓ.... ಜೋಕೇ...

ಜೋಕೇ...
ಹೊಂಚು ಹಾಕುವರು ಜೋಕೇ ಸಂಚು ಮಾಡುವರು ಜೋಕೇ
ಮೋಸ ಹೋಗದಿರು ಜೋಕೇ  ಮಾಯವಾಗಿ ಬಿಡು ಜೋಕೇ
ದೊರಕುವುದು ಏಕೇ  ನರಳುವುದು ಏಕೇ
ಅಳಿಯುವುದು ಏಕೇ ಸಿಕ್ಕದಿರು ಜೋಕೇ
ಜೋಕೇ..  ಜೋಕೇ...  ಜೋಕೇ...  ಜೋಕೇ...
ಎಲ್ಲಿ ಹೋದರೂ ಎಲ್ಲ ನೋಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ಕಾಡುವರು ಜೋಕೇ
ಎಲ್ಲಿ ಹೋದರೂ ಎಲ್ಲ ನೋಡುವರು
ಎಲ್ಲ ಕಾಡುವರು ಬೇಟೆಯಾಡುವರು ಜೋಕೇ
ಜೋಕೇ..ಜೋಕೇ..ಜೋಕೇ..ಜೋಕೇ..
--------------------------------------------------------------------------------------------------------------------------

ಮಂಜಿನತೆರೆ (1980) 
ಸಂಗೀತ: ಉಪೇಂದ್ರಕುಮಾರ್  ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಕೆ.ಜೆ.ಏಸುದಾಸ್ 

ಓ..ಓ.. ಓ.. ಹೂಂ..ಹೂಂ..ಹೂಂ..ಹೂಂ..ಹೂಂ..ಹೂಂ..
ಓ  ನನ್ನ ಚೆಲುವೇ  ಓ  ನನ್ನ ಚೆಲುವೇ  ಏಕೇ ಹೀಗೆ ಅಳುವೇ
ನಿರಾಶೆಯೇನು ನೋವು ಈ ಕಣ್ಣೀರು ಇನ್ನೇಕೇ
ಓ... ಓ... ಓ....
ಓ  ನನ್ನ ಚೆಲುವೇ ಏಕೇ ಹೀಗೆ ಅಳುವೇ

ನಿನಗಾಗಿ ನಾನಿಲ್ಲವೇನು ನಮ್ಮಲ್ಲಿ ಅನುಮಾನವೇನು
ನಿನಗಾಗಿ ನಾನಿಲ್ಲವೇನು ನಮ್ಮಲ್ಲಿ ಅನುಮಾನವೇನು
ಈ ಜೀವ ನೀನಗಾಗೇ ಎಂದೆಂದೂ ಇನ್ನೂ ಸಂತೋಷವೇನೂ
ಓ  ನನ್ನ ಚೆಲುವೇ ಏಕೇ ಹೀಗೆ ಅಳುವೇ

ನೀನಿಲ್ಲವೆಂದಾಗ ನನ್ನ ಈ ಪ್ರಾಣ ಉಳಿದೀತೇ ಚಿನ್ನ
ನೀನಿಲ್ಲವೆಂದಾಗ ನನ್ನ ಈ ಪ್ರಾಣ ಉಳಿದೀತೇ ಚಿನ್ನ
ಉಸಿರಲ್ಲಿ ಉಸಿರಾಗಿ ನಾನೆಂದೋ ನಿನ್ನ ಬೆರತಾಯಿತಲ್ಲಾ
ಓ ನನ್ನ ಚೆಲುವೇ ಬಾರೇ ನನ್ನ ಒಲವೇ
ನಿಧಾನವೇಕೇ ಚಿಂತೆ ಈ ದೂರ ಇನ್ನೇಕೆ
ಓ... ಓ... ಓ....
--------------------------------------------------------------------------------------------------------------------------

ಮಂಜಿನತೆರೆ (1980) 
ಸಂಗೀತ: ಉಪೇಂದ್ರಕುಮಾರ್  ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಜಾನಕೀ 

ಅಹ್ಹಹ್ಹ .... ನೋಡುವೇ,  ಇದೇಕೇ ಹೀಗೇ,  ನನ್ನಲ್ಲಿ ಕೋಪವೇ
ನನ್ನಲ್ಲಿ ಕೋಪವೇ,  ನಾನಾಗಿ,  ಬಾ ಎಂದೂ,  ಕೂಗಲೂ,  ನಿಧಾನವೇ 

ಮಾತು : ನೀನ್ಯಾರು ಏನ್ಮಾಡ್ತೀ ಎಲ್ಲಾ ನನಗೊತ್ತು 
             ನಿನ್ನ ನೋಡಿ ಏನೇನೋ ಆಸೆ ನಂಗಾಯ್ತು 
             ಹಗಲೆಲ್ಲಾ ಇರುಳೆಲ್ಲಾ ನಿಂದೇ ಕನಸಾಯ್ತು 
             ನೀನಿಲ್ದೆ ಬದುಕಲಾರೆಂತ ಮನಸ್ಸು ಹೇಳ್ತು ಅದಕ್ಕೆ... ಅದಕ್ಕೆ..  ಅದಕ್ಕೆ.
ಹಾಡು : ನಿನ್ನನೂ ಕೂಗಿದೆ ಸೇರಲು ಬಯಸಿದೇ 
            ನನ್ನನೂ ನೋಡಲೂ ಆಸೆಯೂ ಬಾರದೆ 
            ನೀನಾಗಿ, ಬಾ ಸೇರು,  ಹಾಯಾಗೀ...... 
            ನೋಡುವೇ,  ಇದೇಕೇ ಹೀಗೇ,  ನನ್ನಲ್ಲಿ ಕೋಪವೇ 

ಮಾತು : ಈ ವಯಸ್ಸು ಏನೇನೋ ನನಗೆ ಹೇಳತ್ತೇ 
             ಈ ಮನಸ್ಸು ದಿನವೆಲ್ಲಾ ನನ್ನ ಕಾಡುತ್ತೇ 
             ಕಣ್ಣಲ್ಲಿ ಕಣ್ಣಿಟ್ಟು ನೀ ನೋಡು ಮತ್ತೇ 
             ನನ್ನಾಸೆ ಏನೂಂತಾ ನಿನಗೇ ಗೊತ್ತಾಗುತ್ತೆ ನೋಡು ನೋಡು ನೋಡು 
ಹಾಡು  :ಅಂದವು ಅರಳಿದೆ ಯೌವ್ವನ ಕುಣಿದಿದೆ 
           ಮೈಗೆ ಮೈ ಸೋಕಲು ಬಯಕೆಯೂ ಕೆರಳದೇ 
           ಇನ್ನೆಂದೂ ಬೀಡಲಾರೆ ನಾ ನಿನ್ನ ... ಆಆಆ 
           ನೋಡುವೇ,  ಇದೇಕೇ ಹೀಗೇ,  ನನ್ನಲ್ಲಿ ಕೋಪವೇ 
           ನಾನಾಗಿ,  ಬಾ ಎಂದೂ,  ಕೂಗಲೂ,  ನಿಧಾನವೇ 
------------------------------------------------------------------------------------------------------------------------- 

No comments:

Post a Comment