807. ಮುಕುಂದ ಮುರಾರಿ (೨೦೧೬)


ಮುಕುಂದ ಮುರಾರಿ ಚಿತ್ರದ ಹಾಡುಗಳು 
  1. ಮುಕುಂದ ಮುರಾರೇ  ಮುಕುಂದ ಮುರಾರೇ
  2. ಗೋಪಾಲ ಬಾ ಬಾ ಬಾ 
  3. ಆಯ್ ಯಾಮ್ ಗಾಡ್ ಗಾಡ್ ಇಸ್ ಗ್ರೇಟ್ 
ಮುಕುಂದ ಮುರಾರಿ (೨೦೧೬) - ಮುಕುಂದ ಮುರಾರೇ  ಮುಕುಂದ ಮುರಾರೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ಶಂಕರ ಮಹಾದೇವನ

ನೀನೇ ರಾಮ...  ನೀನೇ ಶಾಮ...   ನೀನೇ ಅಲ್ಲಾ...  ನೀನೇ ಯೇಸು..
ನೀನೇ ಕರ್ಮ....  ನೀನೇ ಧರ್ಮ...   ನೀನೇ ಮರ್ಮ....  ನೀನೇ ಪ್ರೇಮ....
ನಿಮ್ಮ ಜೀವದ ಮಾಲಿಕ ನಾನು ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ ಕಣಕಣ ಕಣದೊಳಗೆ ಕುಳಿತಿರುವೆ
ಮುಕುಂದ ಮುರಾರೇ  ಮುಕುಂದ ಮುರಾರೇ
ಮುಕುಂದ ಮುರಾರೇ  ಮುಕುಂದ ಮುರಾರೇ
ನೀನೇ ರಾಮ...  ನೀನೇ ಶಾಮ...   ನೀನೇ ಅಲ್ಲಾ...  ನೀನೇ ಯೇಸು..

ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು ಅದಕೇತಕೆ ಈ ತಕರಾರು...
ಅಣು ಅಣು ಅಣು ಒಳಗೆ ಕುಳಿತಿರುವೆ....
ಮುಕುಂದಾ ಮುರಾರೇ  ಮುಕುಂದಾ ಮುರಾರೇ
ಮುಕುಂದಾ ಮುರಾರೇ  ಮುಕುಂದಾ ಮುರಾರೇ... ಆಆಆ...
ಮುಕುಂದಾ ಮುರಾರೇ  ಮುಕುಂದಾ ಮುರಾರೇ
ಮುಕುಂದಾ ಮುರಾರೇ  ಮುಕುಂದಾ ಮುರಾರೇ

ಯುಗದ ಯುಗದ ಮೃಗದ ಖಗದ ಉಸಿರಲ್ಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು ನಾ ..
ಇರುವೆನು  ಒಳಗೆ ನೀ ಹುಡುಕಿದೆ ಹೊರಗೆ ಬಿಚ್ಚು ಮದದ ಆ ಉಡುಗೆ ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲಿಕ ನಾನು ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ....
ಮುಕುಂದಾ ಮುರಾರೇ  ಮುಕುಂದಾ ಮುರಾರೇ
ಮುಕುಂದಾ ಮುರಾರೇ  ಮುಕುಂದಾ ಮುರಾರೇ
ಮುಕುಂದಾ ಮುರಾರೇ  ಮುಕುಂದಾ ಮುರಾರೇ
ಮುಕುಂದಾ ಮುರಾರೇ  ಮುಕುಂದಾ ಮುರಾರೇ
ನೀನೇ ರಾಮ...  ನೀನೇ ಶಾಮ...   ನೀನೇ ಅಲ್ಲಾ...  ನೀನೇ ಎಲ್ಲಾ... .
--------------------------------------------------------------------------------------------------------------------------

ಮುಕುಂದ ಮುರಾರಿ (೨೦೧೬) - ಗೋಪಾಲ ಬಾ ಬಾ ಬಾ
ಸಂಗೀತ: ಅರ್ಜುನ ಜನ್ಯ, ಸಾಹಿತ್ಯ: ವಿ.ನಾಗೇಂದ್ರಪ್ರಸಾದ ಗಾಯನ: ವಿಜಯಪ್ರಕಾಶ, ಚಿಂತನವಿಕಾಸ, ಪಲಕಮುಚ್ಚಲ

ಗಂಡು : ಬೋಲೋ ಶ್ರೀ ಲಾಲ ಕೃಷ್ಣ ಮಹಾರಾಜ ಕಿ ಜೈ
           ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ ಗಧೆಯನ್ನು ಹಿಡಿದಿರುವ ವೀರ ಭೀಮ
          ಕೊಳಲನು ಹಿಡಿದು ನಿಂತಿರುವೇ ಶಾಮ ನಿನಗಿರುವ ಇನ್ನೊಂದು ಹೆಸರು ಪ್ರೇಮ
ಹೆಣ್ಣು : ನಿನ್ನ ಪ್ರೇಮವೂ ನಮಗೆ ಇರಲಿನ್ನೂ ನಿನ್ನ ಕೊಳಲಿನ ನಾದ ಬೇಕಿನ್ನೂ
          ಮನೆ ಕಡೆಗೆ ಕಳಿಸೋ ಗೋಪಿಕೆ ಬಾಲೆರ ಗುಂಪನ್ನು
          ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
          ಗೋಪಾಲ ಬಾ   ಗೋವಿಂದ ಬಾ ಬಾ ಬಾ
          ಗೋಪಾಲ ಬಾ   ಗೋವಿಂದ ಬಾ ಬಾ ಬಾ
          ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ ಗಧೆಯನ್ನು ಹಿಡಿದಿರುವ ವೀರ ಭೀಮ

ಗಂಡು :  ಹೇ... ರುಕ್ಮಿಣಿ ಚೆಲುವೇ ನೀನು ಹೇ... ರಾಧಿಕೆ ಕಂಗಳು ನೀನು 
         ಮಧುರ ಪೂರಯ ದಾಟಿ ನನ್ನ ಹುಡುಕಿ ಏತಕೆ ಬಂದ್ರೀ 
ಹೆಣ್ಣು :  ನೀ ಕನಸಿಗೆ ಬರುವುದು ಸನಿಹವೇ ಇರುವುದು ಮರೆತರೆ ಬಿಡುವೇವು ಶ್ರೀ ಕೃಷ್ಣ  
          ಸರಸಕೆ ಕರೆಯಲು ಯುಗಗಳು ಕಳೆದವು ಬಾರೋ ಸದ್ಗುಣ ಸಂಪನ್ನ
          ಕಾದು ಕಾದು ಸಾಕಾಗಿಹೋಯಿತು ಬಾರೋ ನಾದ
          ಲೋಲ ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ ಗೋಪಾಲ ಬಾ......
          ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
          ಗೋಪಾಲ ಬಾ   ಗೋವಿಂದ ಬಾ ಬಾ ಬಾ
           ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ ಗಧೆಯನ್ನು ಹಿಡಿದಿರುವ ವೀರ ಭೀಮ


ಗಂಡು : ಇಲ್ಲಿ ದ್ವಾಪರ ಯುಗದ ಹಾಡು ಸರಿಯಾಗದು ಸುಮ್ಮನ್ನೇ ಓಡು
            ಕಲಿಗಾಲವೂ ಚೆಲುವೇ ನೋಡು ಏಕಾಂತ ಬಯಸಿದೆ ಮನಸೂ
ಹೆಣ್ಣು : ಈ ರಸಮಯ ಸನ್ನಿಧಿಗೆ ಮಧುಮಯ ಘಳಿಗೆಗೆ ನೆನೆಸುತ ಇರುವೆವು ಶ್ರೀಕೃಷ್ಣ
          ಒಲವಿನ ಮಡಿಯಲಿ ಹೃದಯವ ಬೆಳಗುವೇ ನಿನ್ನ ಹಾಗೇ ಯಾರಿಲ್ಲ
          ರಾಧೇ ರುಕ್ಕೂ ಬಂದಾಯ್ತಲ್ಲಾ ಬಾರೋ ಬೆಣ್ಣೆ ಕಳ್ಳ
          ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
          ಗೋಪಾಲ ಬಾ   ಗೋವಿಂದ ಬಾ ಬಾ ಬಾ
          ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
          ಗೋಪಾಲ ಬಾ   ಗೋವಿಂದ ಬಾ ಬಾ ಬಾ
          ಗೋಪಾಲ ಬಾ ಬಾ ಬಾ  ಗೋವಿಂದ ಬಾ ಬಾ ಬಾ
          ಗೋಪಾಲ ಬಾ   ಗೋವಿಂದ ಬಾ ಬಾ ಬಾ
--------------------------------------------------------------------------------------------------------------------------

ಮುಕುಂದ ಮುರಾರಿ (೨೦೧೬) - ಆಯ್ ಯಾಮ್ ಗಾಡ್ ಗಾಡ್ ಇಸ್ ಗ್ರೇಟ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ :ಯೋಗರಾಜ ಭಟ್ಟ ಗಾಯನ : ಉಪೇಂದ್ರ

ಧಮ್ ಇದ್ರೇ ಬಾರೋ ದೇವರೇ ಬೀಳು ನನ್ನ ಕಣ್ಣಿಗೆ
ಗುಮ್ ಬಿಡ್ತೀನಿ ನೋಡು ನಿಂಗೆ ಸಿಕ್ಕರೇ ನನ್ನ ಕೈಗೇ
ತೂತುತೂತುತೂ ನಾನ್ ಯಾಕೆ ದೇವರ ಕೂಗಿದೆ ಉಗುದುಗುದು ಉಗುದು
ನನ್ ಗಂಟ್ಲೆ  ಕ್ರ್ಯಾಕ್ ಆಗೋಗಿದೆ  ಎತ್ತೋ ಇವೆಲ್ಲಾ ವೇಸ್ಟು ನಾವೇ ದೇವರಾಗೋದು ಬೆಸ್ಟು
ಆಯ್ ಯಾಮ್ ದ್ ಗಾಡ್ ಗಾಡ್ ಇಸ್ ಗ್ರೇಟ್ ನೀವೆಲ್ಲಾ ರಾಂಗ್ ನಾನೇ ರೈಟ್
ಆಯ್ ಯಾಮ್ ಗಾಡ್ ಗಾಡ್ ಇಸ್ ಗ್ರೇಟ್
ಧಮ್ ಇದ್ರೆ ನಿಂಗ್ ಧಮ್ ಇದ್ರೇ ಧಮ್ ಇದ್ರೇ ಬಾರೋ ದೇವರೇ
ಬೀಳು ನನ್ನ ಕಣ್ಣಿಗೆ ಗುಮ್ ಬಿಡ್ತೀನಿ ನೋಡು ನಿಂಗೆ ನೀನ್ ಸಿಕ್ಕರೇ ನನ್ನ ಕೈಗೇ


ಡಮರು ಡಮರು ಡಮಡಮಡಮ ಡಮರು ಡಮಡಮಡಮ
ಶಾಕಿನಿ ಡಾಕಿನಿ ಹಿಂಬಮ್ ಡಮರೆಂದ ಮೂರಿಂದ ಘೋರ ವಾಹಿನ ಕಾಳಿ ಕಾಟ್
ಘೋರ ವಾಹಿನ ಕಾಳಿ ಕಾಟ್  ಕಟಚಟಪಟ ಕಟಚಟಪಟ ಕಟಕಟಕಟಕಟ ರುಂಡ ಧಾರಿಣಿ

ದೇವರೇ ಇಲ್ಲ ಅಂದ್ರೆ ದೇವರಿಲ್ಲ ಅಷ್ಟೇ ಅದಕ್ಕೇನೆ ನಾನು ಕೈ ಮುಗಿಯೋದ ಬಿಟ್ಟೇ
ಹಳೇ ಪಿಚ್ಚರನಲ್ಲಿ ಆಲೂಮನಿ ತಟ್ಟೆ ಹಿಡುಕೊಂಡಿದ್ರೂ ಕೂಡಾ ದೇವರಿಗೇ ಬೈಯ್ಯೋದು ಬಿಟ್ಟೇ
ಓ.. ಇಲ್ಲದೇ ಇರೋ ದೇವ್ರೇ ಏನಪ್ಪಾ ನಿನ್ನ ಮಹಿಮೇ ಹಿಂಗ ಇರೋ ದಿನ ನಿಂದೂ ಆಗೋದಿಲ್ಲಾ ಕಡಿಮೇ
ಎತ್ತೋ ಯಾಕೇ ಕೈ ಮುಗಿತೀ ಅದೂ ಆಫ್ಟರ್  ಆಲ್ ಕಲ್ಲ್ ಮೂರ್ತಿ
ಕುಂಕುಮ ಇಟ್ರೆ ಕೆಲಸ ಆಗೋಲ್ಲ ಹೈತ ಹೇಳು ಚೂರು ಪ್ರೀತಿ
ಆಯ್ ಯಾಮ್ ಗಾಡ್ ಗಾಡ್ ಇಸ್ ಗ್ರೇಟ್ ನೀವೆಲ್ಲಾ ರಾಂಗ್ ನಾನೇ ರೈಟ್
ಆಯ್ ಯಾಮ್ ಗಾಡ್ ಗಾಡ್ ಇಸ್ ಗ್ರೇಟ್
ಹರೇ ಕೃಷ್ಣ ಹರೇ ರಾಮ ಹರೇ ರಾಮ ಹರ ಹರ ಕೃಷ್ಣ ಹರೇ ರಾಮ 

ಇಂದಿನ ದಿನ ಬಕುತಿನಿ ಭಾಂತಿ ಪಾದ ಅಂದೊಂದು ಗ್ರಂಥಿಗೆ ಅಂಗಡಿ
ಎತ್ತಲಾಗ್ ಹೋಯ್ತ್ ಐತೊ ಜೀವನದ ಬಂಡಿ ಎತ್ತಲಾಗ್ ಹೋದರೂ ಒಂದೇ ನಿಲ್ಲಗಂಟ್ ಓಡಿ
ಆ ತೊಟ್ಟಿಲಿಂದ ಈ ಚಟ್ಟದ ತನಕ ಪ್ರತಿ ದಿನವೂ ನಿಂದೆ ನೀನೇ ದೇವರು ಅಂಕ
ಅಲ್ಲಿ ಭಕ್ತರೆಲ್ಲಾ ಎದ್ದು ನಿಂತಕಳ್ಳಿ ನಿಮ್ಮ ಕನ್ನಡಿಗೆ ಕೈ ಮುಕ್ಕಳ್ಳಿ ಅರ್ಥ ಆದರೆ ನನ್ನ ಪಕ್ಕ ನಿಂತ್ಕಳ್ಳಿ
ಇಲ್ಲ ಗುಂಡಿಗೋಗಿ ಮಣ್ಣೇಳ್ಕೊಂಡ ನೀವೇ ಮಲ್ಕೊಳ್ಳಿ
ದೇವೆರೇ ಹೇಳೋನೇ ಪುಸಿ ಕ್ಯಾಟ್ ಹಾಕೋಂಡೋಣ ಪ್ಯಾರಾಚೂಟ್
ಬರಲಿ ಕೆಳಗೆ ಐತೆ ಫೈಟ್ ಇಷ್ಟೆಲ್ಲಾ ಬರಿದಿದ್ದು ಯೋಗರಾಜ್ ಭಟ್ಟ್
------------------------------------------------------------------------------------------------------------------------

No comments:

Post a Comment