889. ಅತಿರಥ ಮಹಾರಥ (೧೯೮೭)


ಅತಿರಥ ಮಹಾರಥ ಚಲನ ಚಿತ್ರದ ಹಾಡುಗಳು 
  1. ಮಾಗಿಯ ಕಾಲದ ಮಂಜಿನ ಹಾಗೆ ಬಂದಿತು ಮನದೆ ಪ್ರೇಮ
  2. ಸವಿದಿನ ಇದು ಸವಿದಿನ
  3. ಹಾಡುವೆ ನಾ ಹಾಡುವೆ ಹರುಷದ ಹಬ್ಬದ ಪುಣ್ಯ ದಿನ
ಅತಿರಥ ಮಹಾರಥ (೧೯೮೭) - ಮಾಗಿಯ ಕಾಲದ ಮಂಜಿನ ಹಾಗೆ ಬಂದಿತು ಮನದೆ ಪ್ರೇಮ
ಸಂಗಿತ: ಚಕ್ರವರ್ತಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯಕರು : ಎಸ್ಪಿ.ಬಿ., ಪಿ.ಸುಶೀಲಾ

ಗಂಡು : ಮಾಗಿಯ ಕಾಲ ಮಂಜಿನ ಹಾಗೆ ಬಂದಿತು ಮನದೆ ಪ್ರೇಮ
           ಮೀಟಿದೆ ಆಸೆಯ ರಾಗದಲಿ
           ಮೀಟಿದೆ ಆಸೆಯ ರಾಗದಲಿ  ಒಲವಿನ ನೂತನ ಸರಿಗಮ
           ಒಲವಿನ ನೂತನ ಸರಿಗಮ
ಹೆಣ್ಣು : ಮಾಗಿಯ ಕಾಲ ಮಂಜಿನ ಹಾಗೆ ಬಂದಿತು ಮನದೆ ಪ್ರೇಮ
           ಮೀಟಿದೆ ಆಸೆಯ ರಾಗದಲಿ
           ಮೀಟಿದೆ ಆಸೆಯ ರಾಗದಲಿ  ಒಲವಿನ ನೂತನ ಸರಿಗಮ
           ಒಲವಿನ ನೂತನ ಸರಿಗಮ

ಹೆಣ್ಣು : ಲಲಲಲ (ಆಹಾ ಹಾ ) ಲಲಲಲ (ಆಹಾ ಆಹಾಹಾ ಆಹಾಹಾ )
ಇಬ್ಬರು : ಆಹಾಹಾ
ಹೆಣ್ಣು : ದಿಗಂತದಲ್ಲಿ ಬಾನು ಭೂಮಿಯ ಮಿಲನವು ಸಾರಿದೆ ಪ್ರೇಮಾ
ಗಂಡು : ಸಾಗರ ಸೇರಲು ಓಡುವ ನದಿಯು ಸಂಭ್ರಮ ಕಾರಣ ಪ್ರೇಮ
ಹೆಣ್ಣು : ಹೂವಿನ ನಗೆಯಲು ಪ್ರೇಮ
ಗಂಡು : ದುಂಬಿಯ ಮೊರೆತದೆ ಪ್ರೇಮ
ಹೆಣ್ಣು : ಕಂಡೆ ಕಂಡೆ ಎಲ್ಲೂ ಎಲ್ಲೂ ಪುಣಿದಪ್ಪ ವಿಶ್ವ ಪ್ರೇಮ.. ಪುಣಿದಪ್ಪ ವಿಶ್ವ ಪ್ರೇಮ
ಗಂಡು : ಮಾಗಿಯ ಕಾಲದ ಮಂಜಿನ ಹಾಗೆ ಬಂದಿತು ಮನದೆ ಪ್ರೇಮ
ಹೆಣ್ಣು : ಮೀಟಿದೆ ಆಸೆಯ ರಾಗಾದಲಿ ಮೀಟಿದೆ ಆಸೆಯ ರಾಗಾದಲಿ
ಗಂಡು :  ಒಲವಿನ ನೂತನ ಸರಿಗಮ
ಇಬ್ಬರು :  ಒಲವಿನ ನೂತನ ಸರಿಗಮ

ಹೆಣ್ಣು : ದೂರದ ಆಸೆಯ ತೀರಕ್ಕೇ ಸೇರಲು ಬೇಕು ಪ್ರೇಮದ ದೋಣಿ 
ಗಂಡು : ಬಾಳಲಿ ಸಾಧಿಸೆ ಮೇಲಕ್ಕೆ ಏರಲು ಬೇಕು ನಂಬಿಕೆ ಏಣಿ 
ಹೆಣ್ಣು : ಸಿಹಿ ಸಿಹಿ ಒಲವಿನ ಮಾಲೆ
ಗಂಡು : ಸುಖ ಸುಖ ಪದವಿಯ ಮಾಲೆ 
ಹೆಣ್ಣು : ನಾಳೆ ಏನೇ ಹೇಗೆ ಇರಲಿ ಬಾಡದು ಈ ನಮ್ಮ ಪ್ರೇಮ.. ಬಾಡದು ಈ ನಮ್ಮ ಪ್ರೇಮ  
ಗಂಡು : ಮಾಗಿಯ ಕಾಲದ ಮಂಜಿನ ಹಾಗೆ ಬಂದಿತು ಮನದೆ ಪ್ರೇಮ
ಹೆಣ್ಣು : ಮೀಟಿದೆ ಆಸೆಯ ರಾಗಾದಲಿ. ... ಮೀಟಿದೆ ಆಸೆಯ ರಾಗಾದಲಿ
ಗಂಡು : ಒಲವಿನ ನೂತನ ಸರಿಗಮ
ಇಬ್ಬರು : ಒಲವಿನ ನೂತನ ಸರಿಗಮ 
--------------------------------------------------------------------------------------------------------------------------

ಅತಿರಥ ಮಹಾರಥ (೧೯೮೭) - ಸವಿದಿನ ಇದು ಸವಿದಿನ
ಸಂಗಿತ: ಚಕ್ರವರ್ತಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯಕರು : ಎಸ್ಪಿ.ಬಿ., 

ಸವಿದಿನ.. ಅಹ್ಹಹ್ಹ ...  ಇದು ಸವಿದಿನ ... ಅಹ್ಹಹ್ಹಹಹ
ಸವಿದಿನ..  ಇದು ಸವಿದಿನ...  ಜೀವನವೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ
ಸವಿದಿನ ಇದು ಸವಿದಿನ... ಅಹ್ಹಹ್ಹ

ಬಾಡಿ ಹೋದ ಬೆಂಗಾಡಲಿ....
ಬಾಡಿ ಹೋದ ಬೆಂಗಾಡಲಿ ನವಚೇತನ ರಸಗಂಗೆ ಹರಿಸಿದೆ 
ಪರಿಪೂರ್ಣವಾದ ಈ ಬಾಳಲಿ ಪರಿಪೂರ್ಣತೆ ಕನಸನ್ನು ತುಂಬಿದೆ 
ಧನ್ಯತೆ ತಿಳಿಸಲು ಮನಸನು ತೇರೆಯಲು ಹೃದಯ ತುಂಬಿ ಮಾತು ಬಾರದಾಗಿದೆ.. 
ಸವಿದಿನ.... ಆಆಆ  ಇದು ಸವಿದಿನ ಅಹ್ಹಹ್ಹಹ್ಹ 
ಜೀವನವೇ ಮರೆಯದಂಥಾ ಸವಿದಿನ ನೂತನ ಸಿಹಿ ಚೈತ್ರ ತಂದ ಶುಭ ದಿನ 
ಸವಿದಿನ ಇದು ಸವಿದಿನ.. ಅಹ್ಹಹ್ಹಹಹ

ಜೀವನದಾ ಈ ಪಯಣದಲಿ...  
ಜೀವನದಾ ಈ ಪಯಣದಲಿ ನಾ ಒಂಟಿಯಾಗಿತೇ ಎನಿತು ದಿನ
ದಾರಿ ಇನ್ನು ದೂರವಿದೆ ಸಂಗಾತಿಯು ಬಯಸುತಿದೆ ನನ್ನ ಮನ
ಜೊತೆಯಲಿ ಬರುವೆಯ ನೆಮ್ಮದಿ ತರುವೆಯ ಪ್ರಶ್ನೆ ಹಾಗೆ ತುಟಿಯಂಚಲಿ ಉಳಿದಿದೆ
ಸವಿದಿನ.....  ಇದು ಸವಿದಿನ ಅಹ್ಹಹ್ಹ
ಜೀವನವೇ ಮರೆಯದಂಥಾ ಸವಿದಿನ ನೂತನ ಸಿಹಿ ಚೈತ್ರ ತಂದ ಶುಭ ದಿನ 
ಸವಿದಿನ.....  ಇದು ಸವಿದಿನ ಅಹ್ಹಹ್ಹ
--------------------------------------------------------------------------------------------------------------------------

ಅತಿರಥ ಮಹಾರಥ (೧೯೮೭) - ಹಾಡುವೆ ನಾ ಹಾಡುವೆ ಹರುಷದ ಹಬ್ಬದ ಪುಣ್ಯ ದಿನ
ಸಂಗಿತ: ಚಕ್ರವರ್ತಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯಕರು : ಪಿ.ಸುಶೀಲಾ

ಹೆಣ್ಣು : ಲಾ ಲಲಲಲಾ... ಲಾ  ಲಲಲಲಾ... ಲಾ ಲಲಲಲಾ...
ಕೋರಸ್ : ಲಾ ಲಲಲಲಾ... ಲಾ  ಲಲಲಲಾ... ಲಾ ಲಲಲಲಾ...
ಹೆಣ್ಣು : ಹಾಡುವೆ ನಾ ಹಾಡುವೆ,
          ಹಾಡುವೆ ನಾ ಹಾಡುವೆ ಹರುಷದ ಹಬ್ಬದ ಪುಣ್ಯ ದಿನ  ಈ ಮಮತೆಯ ದೇವಾಲಯಕೆ
          ನಾ ನೀಡುವೇ... ನನ್ನಯ ಮನಾ 
          ಹಾಡುವೆ ನಾ ಹಾಡುವೆ,  ಹಾಡುವೆ ನಾ ಹಾಡುವೆ
ಕೋರಸ್ : ಲಾ ಲಲಲಲಾ... ಲಾ  ಲಲಲಲಾ... ಲಾ ಲಲಲಲಾ... 

ಹೆಣ್ಣು : ಎಲ್ಲಿಂದ ಬಂದವೋ....  ಯಾರಲ್ಲಿ ಸಂದವೋ...   
          ಎಲ್ಲಿಂದ ಬಂದವೋ ಯಾರಲ್ಲಿ ಸಂದವೋ ಸಮಾಜ ಬಿಸುಡಿದ ಹೂವುಗಳು 
          ಪ್ರೇಮದ ನೀರನ್ನು ಈ ಮಾಲಿ ಎರೆಯಲು
          ಪ್ರೇಮದ ನೀರನ್ನು ಈ ಮಾಲಿ ಎರೆಯಲು ಅರಳಿ  ನಗುತಿಹ ಮೊಗ್ಗುಗಳು,
          ಅರಳಿ  ನಗುತಿಹ ಮೊಗ್ಗುಗಳು, ಈ ಹೂಗಳ....  ಪೂಜೆಗೆ ಕೊಳ್ಳಿ 
          ಹಾಡುವೆ ನಾ ಹಾಡುವೆ,  ಹಾಡುವೆ ನಾ ಹಾಡುವೆ
ಕೋರಸ್ : ಲಾ ಲಲಲಲಾ... ಲಾ  ಲಲಲಲಾ... ಲಾ ಲಲಲಲಾ...
      
ಹೆಣ್ಣು : ಬೇಧವ ಕಾಣೆವು....  ದ್ವೇಷವ ಅರಿಯೆವು...
          ಬೇಧವ ಕಾಣೆವು ದ್ವೇಷವ ಅರಿಯೆವು ನಾವಿಲ್ಲಿ ನಮಗೆ ಬಂಧುಗಳು
          ಬಿರುಗಾಳಿ ಎದುರು ಹೋರಾಡಿ ನಿಂತು
          ಬಿರುಗಾಳಿ ಎದುರು ಹೋರಾಡಿ ನಿಂತು ನಾಡನು ಬೆಳಗುವ ದೀಪಗಳು
          ನಾಡನು ಬೆಳಗುವ ದೀಪಗಳು ಈ ದೀಪಗಳ...  ಆರದೆ ಸಲಹಿ...
          ಹಾಡುವೆ ನಾ ಹಾಡುವೆ, 
         ಹಾಡುವೆ ನಾ ಹಾಡುವೆ ಹರುಷದ ಹಬ್ಬದ ಪುಣ್ಯ ದಿನ 
         ಈ ಮಮತೆಯ ದೇವಾಲಯಕೆ ನಾ ನೀಡುವೆ ನನ್ನಯ ನಮನ 
         ಹಾಡುವೆ ನಾ ಹಾಡುವೆ,  ಹಾಡುವೆ ನಾ ಹಾಡುವೆ
-------------------------------------------------------------------------------------------------------------------------

No comments:

Post a Comment