126. ಕಣ್ತೆರೆದು ನೋಡು (1961)



ಕಣ್ತೆರೆದು ನೋಡು ಚಿತ್ರದ ಹಾಡುಗಳು 
  1. ಶರಣು ಕಾವೇರಿ ತಾಯಿ 
  2. ಕಲ್ಲು ಸಕ್ಕರೆ ಕೊಳ್ಳಿರೋ 
  3. ಹಗಲು ಇರುಳು ಹೊರಗೆ 
  4. ಸಿಗದನ್ನ ಇದು ನಾಳೆಗೆ ಸಿಗದು 
  5. ನಿನಗಿದು ನ್ಯಾಯವೇ 
  6. ಬಂಗಾರದ ಒಡವೆ ಬೇಕೇ 
  7. ಹೆಣ್ಣಿನ ಮೇಲೆ ಕಣ್ಣಿಡುವಾಗ 
  8. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ 
  9. ಎಡವಿದರೇ ನಾಲ್ಕುರುಳೂ 

ಕಣ್ತೆರೆದು ನೋಡು (೧೯೬೧).......ಶರಣು ಕಾವೇರಿ
ಸಾಹಿತ್ಯ : ಜಿ.ವಿ.ಅಯ್ಯರ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್


ಸಿರಿಯೇ ಕರುನಾಡ ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ... ಶರಣು ಕಾವೇರಿ ತಾಯೆ

ತೆರೆತೆರೆತೆರೆಯಾಗಿ ಬರೆ ಸರಸರಸರವಾಗಿ ನೊರೆ
ತುಂತುರು ತುಂತುರು ನೀರ ಹನಿ ಕಲಕಲ ಮಾಡೇ ದನಿ
ಪುರದಾ ಪುಣ್ಯವತೀ ಗಂಗೆ ತಾಯೆ 
ಕರೆದು ಕಣ್ತೆರೆದು ನೋಡಲೇ ನೀಯೆ 
ಕುರುಡು ಬಾಳಿನ ಸಾಗರದೊಂದೇ 
ಹರಿಯ ನಾಮ ಹರಿಗೋಲೆಂದೇ.. 

ಅಲೆಯು ಒಂದರಲಿ...
ಅಲೆಯ ಒಂದರಲಿ ಆಸೆಯೂ ಆರು
ಅಲೆಯ ಒಂದರಲಿ ಆಸೆಯೂ ಆರು
ಬಲೆಯ ತಾಬೀಸೇ ಬೀಳದೇ ಜಾರು...
ಮದವು ಮೋಹ ತುಂಬಿದ ಮೇಲೆ
ಬಾಳೇಬರಿ ಸಂಕೋಲೇ
ಸಿರಿಯೇ ಕರುನಾಡ ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ... ಶರಣು ಕಾವೇರಿ ತಾಯೆ
ಕರುನಾಡ ಜೀವನದಿಯೇ ತಾಯೇ
ಶರಣು ಕಾವೇರಿ ತಾಯೆ... ಶರಣು ಕಾವೇರಿ ತಾಯೆ
-------------------------------------------------------------------------------------------------------------------------

ಕಣ್ತೆರೆದು ನೋಡು (೧೯೬೧).......ಕಲ್ಲು ಸಕ್ಕರೆ ಕೊಳ್ಳಿರೋ
ಸಾಹಿತ್ಯ : ಶ್ರೀ ಪುರಂದರದಾಸರು ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್


ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ....
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ....
ಕಲ್ಲು ಸಕ್ಕರೆ ಕೊಳ್ಳಿರೋ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣ ನಾಮವೆಂಬ
ಪುಲ್ಲಲೋಚನ ಶ್ರೀಕೃಷ್ಣ ನಾಮವೆಂಬ
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ....
ಕಲ್ಲು ಸಕ್ಕರೆ ಕೊಳ್ಳಿರೋ

ಎತ್ತು ಏರುಗಳಿಂದ ಹೊತ್ತು ಮಾರುವುದಲ್ಲ
ಎತ್ತು ಏರುಗಳಿಂದ ಹೊತ್ತು ಮಾರುವುದಲ್ಲ
ಒತ್ ಒತ್ತಿಗೋಣಿಯೋಳ್ ತುಂಬುವುದಲ್ಲಾ
ಒತ್ ಒತ್ತಿಗೋಣಿಯೋಳ್ ತುಂಬುವುದಲ್ಲಾ
ಎತ್ತ ಹೋದರು ಬಾಡಿಗೆ ಸುಂಕ ಇದಕ್ಕಿಲ್ಲ
ಎತ್ತ ಹೋದರು ಬಾಡಿಗೆ ಸುಂಕ ಇದಕ್ಕಿಲ್ಲ
ಉತ್ತಮ ಸರಕಿದು ಅತೀ ಲಾಭ ಬರುವಂಥ
ಉತ್ತಮ ಸರಕಿದು ಅತೀ ಲಾಭ ಬರುವಂಥ
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ....
ಕಲ್ಲು ಸಕ್ಕರೆ ಕೊಳ್ಳಿರೋ

ಸಂತೆ ಸಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೋಂಬ
ಕಾಂತ ಪುರಂದರ ವಿಠ್ಠಲನಾಮವೆಂಬ
ಕಾಂತ ಪುರಂದರ ವಿಠ್ಠಲನಾಮವೆಂಬ
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ....
ಕಲ್ಲು ಸಕ್ಕರೆ ಕೊಳ್ಳಿರೋ
--------------------------------------------------------------------------------------------------------------------------

ಕಣ್ತೆರೆದು ನೋಡು (1961)
ರಚನೆ: ಜಿ.ವಿ.ಅಯ್ಯರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿರುವವರು: ಪಿ.ಬಿ.ಶ್ರೀನಿವಾಸ್

ಹಗಲು ಇರುಳು ಹೊರಗೆ
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೇ
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೇ 
ಹಗಲು ಇರುಳು ಹೊರಗೆ

ಕರುಣೆಯ ನಗದ ಹೊಸ ವ್ಯಾಪಾರ 
ಕರುಣೆಯ ನಗದ ಹೊಸ ವ್ಯಾಪಾರ 
ಧಾರಣೆ ಮಾಡುವಾ ನೆಂಟರು ದೂರಾ 
ಮಾಡಿದ ಪಾಪ ಭೋಗಿಸಲಾರೇ 
ಮಾಡಿದ ಪಾಪ ಭೋಗಿಸಲಾರೇ 
ಎಂದರೆ ಕೇಳುವಾ ದೇವರು ಯಾರ 
ಹಗಲು ಇರುಳು ಹೊರಗೆ ಬರಿದೆ 
ನಗುತಲಿ ನಲಿವಾ ದಿನವೇ ಇರದೇ 
--------------------------------------------------------------------------------------------------------------------------

ಕಣ್ತೆರೆದು ನೋಡು (1961)
ರಚನೆ: ಜಿ.ವಿ.ಅಯ್ಯರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿರುವವರು: ಪಿ.ಬಿ.ಶ್ರೀನಿವಾಸ್

ಸಿಗದಣ್ಣ ಇದು ನಾಳೆಗೆ ಸಿಗದು ಸೊಗಸಿನ ನೋಟದ ಸಿರಿಯಣ್ಣ
ಸೊಗಸಿನ ನೋಟದ ಸಿರಿಯಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು ಸೊಗಸಿನ ನೋಟದ ಸಿರಿಯಣ್ಣ

ಧನಿಕನ ಸಾವಿರ ದಾನದ ಮೇಲೆ ಬಡವನ ಒಡವೆ ಇದೆಯಣ್ಣ
ಬಡವನ ಒಡವೆ ಇದೆಯಣ್ಣ 
ಸಿಗದಣ್ಣ ಇದು ನಾಳೆಗೆ ಸಿಗದು ಸೊಗಸಿನ ನೋಟದ ಸಿರಿಯಣ್ಣ  

ಕುರುಡನ ಕಣ್ಣಿಗೆ ಕಾಣುವುದಣ್ಣಾ ಮುರಹರ ನಿನ್ನಯ ನಿಜಬಣ್ಣ
ಮುರಹರ ನಿನ್ನಯ ನಿಜಬಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು ಸೊಗಸಿನ ನೋಟದ ಸಿರಿಯಣ್ಣ  
ಸೊಗಸಿನ ನೋಟದ ಸಿರಿಯಣ್ಣ  
-------------------------------------------------------------------------------------------------------------------------

ಕಣ್ತೆರೆದು ನೋಡು (1961)
ರಚನೆ: ಜಿ.ವಿ.ಅಯ್ಯರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿರುವವರು: ಪಿ.ಬಿ.ಶ್ರೀನಿವಾಸ್

ಆಹ್ ಆಹ್ ಆಹ್ಹಹ್ಹ ಆಆಅಅ ...
ನಿನಗಿದು ನ್ಯಾಯವೇ ಮೋಸ
ನಿನಗಿದು ನ್ಯಾಯವೇ ದಾನಿಯಾಗಿ ಈ ವಂಚನೆ ವೇಷ
ನಿನಗಿದು ನ್ಯಾಯವೇ

ಮಾನಹೀನರ ಸಂಗವು ಸಾಕು
ಜ್ಞಾನ ಸಾಧನೆಯು ಎನಗಿರಬೇಕು
ದೀನ ಪಾಲಕ ನಾನಿರುವನಕ ನಿನ್ನ ಸೇವೆಯ ನೀಡೋ ಸಾಕು
ನಿನಗಿದು ನ್ಯಾಯವೇ ಮೋಸ ದಾನಿಯಾಗಿ ಈ ವಂಚನೆ ವೇಷ
ನಿನಗಿದು ನ್ಯಾಯವೇ
--------------------------------------------------------------------------------------------------------------------------

ಕಣ್ತೆರೆದು ನೋಡು (1961) - ಬಂಗಾರದೊಡವೆ ಬೇಕೆ
ರಚನೆ: ಜಿ.ವಿ.ಅಯ್ಯರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿರುವವರು: ಪಿ.ಬಿ.ಶ್ರೀನಿವಾಸ್

ಬಂಗಾರದೊಡವೆ ಬೇಕೆ ನೀರೆ
ಬಂಗಾರದೊಡವೆ ಬೇಕೆ ನೀರೇ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ

ನಿಲ್ಲದೆ ನೀನೋಡಲೇಕೆ.... ಆಆಆಆ
ನಿಲ್ಲದೆ ನೀನೋಡಲೇಕೆ ನೀರೆ
ಕಣ್ಮನ ತಣಿಸುವ ಅಮೃತದ ಧಾರೆ
ಕಣ್ಮನ ತಣಿಸುವ ಅಮೃತದ ಧಾರೆ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ

ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು
ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು
ಅಂಗ ಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು
ಅಂಗ ಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು
ಎಂಥ ರಮ್ಯದ ನೋಟ.... ನೋಡೆ...
ಎಂಥ ರಮ್ಯದ ನೋಟ...  ನೋಡೆ ನಿನ್ನಯ ಒಡಲು..  ನೀರೆ
ಅಂಗನೆ ನಿನ್ನಂಗ ಸಿಂಗಾರ ಕೊಪ್ಪಿರಲು
ಅಂಗನೆ ನಿನ್ನಂಗ ಸಿಂಗಾರ ಕೊಪ್ಪುವ
ಬಂಗಾರದೊಡವೆ ಬೇಕೆ ನೀರೇ
ಬಂಗಾರದೊಡವೆ ಬೇಕೆ

-------------------------------------------------------------------------------------------------------------------------

ಕಣ್ತೆರೆದು ನೋಡು (೧೯೬೧)
ಸಾಹಿತ್ಯ : ಜಿ.ವಿ.ಅಯ್ಯರ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ  

ಹೆಣ್ಣು : ಹೆಣ್ಣಿನ ಮೇಲೆ ಕಣ್ಣಿಡುವಾಗ ಓ..
          ಕಣ್ಣಲ್ಲಿ ಕಣ್ಣಿರಬೇಕು ನೀಗಾ ತುಂಬಬೇಕು ಛಲಬೇಕು 
          ಹೆಣ್ಣಾಸೆ ಏನದು ಎಂದು ತಿಳಿಬೇಕು
ಗಂಡು : ನಾಟಕದಂತೆ ಜೀವನವಲ್ಲಾ ಇದೇ ಬೇರೆ ಆಟ 
            ಜೀವಂತ ಭಾವವವೆಲ್ಲಾ ಜಂಜಾಟ 
            ಕಣ್ಣೀರ ಕಾಲುವೆಯಲ್ಲೇ ಈಜಾಟ 

ಹೆಣ್ಣು : ಕಣ್ಣೀರ ಹಿಂದೆ ಕೈವಾಡವೇನು ನಾವ್ಯಾರು  ಕಾಣದಂತ ನೋವೇನು 
          ಕಣ್ಣೀರ ಹಿಂದೆ ಕೈವಾಡವೇನು ನಾವ್ಯಾರು  ಕಾಣದಂತ ನೋವೇನು
          ಯಾರೋ ವಿರೋಧಿ ಇಂದು ವಿಷ ಹಿಂಡಿ ಹೋದನೇನು 
          ಹಣ್ಣಾದ ನಮ್ಮಿ ಆಷೆ ಮಣ್ಣೇನು ಹೆಣ್ಣಾಸೆ ಏನದು ಎಂದು ತಿಳಿಬೇಕು
          ಹೆಣ್ಣಾಸೆ ಏನದು ಎಂದು ತಿಳಿಬೇಕು

ಗಂಡು : ಹೂವೊಂದು ಬೇರೆ ನಾರೊಂದು ಬೇರೆ ಹೂವಮಾಲೆ ಆಗದಂತೆ ಕೈಯಾರೇ 
           ಹೂವೊಂದು ಬೇರೆ ನಾರೊಂದೇ ಬೇರೆ ಹೂವಮಾಲೆ ಆಗದಂತೆ ಕೈಯಾರೇ
           ಏನೋ ವಿನೋದ ನೋಡೇ ವಿಧಿ ನಿಂತು ಮಣ್ಣು ತೂರಿ ಕಣ್ಣೀರ ಈ ದಿನ ನೋಡು ಕಣ್ಣಾರೇ..  
           ಕಣ್ಣೀರ ಕಾಲುವೆಯಲ್ಲಿ ಈಜಾಟ.. ಕಣ್ಣೀರ ಕಾಲುವೆಯಲ್ಲಿ ಈಜಾಟ..   
           ನಾಟಕದಂತೆ ಜೀವನವಲ್ಲಾ ಇದೇ ಬೇರೆ ಆಟ 
           ಜೀವಂತ ಭಾವವವೆಲ್ಲಾ ಜಂಜಾಟ 
           ಕಣ್ಣೀರ ಕಾಲುವೆಯಲ್ಲೇ ಈಜಾಟ 
--------------------------------------------------------------------------------------------------------------------------

ಕಣ್ತೆರೆದು ನೋಡು (೧೯೬೧).......ಕನ್ನಡದ ಮಕ್ಕಳೆಲ್ಲ ಬನ್ನಿ
ಸಾಹಿತ್ಯ : ಜಿ.ವಿ.ಅಯ್ಯರ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಜಿ.ಕೆ.ವೆಂಕಟೇಶ್ 

ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೇವೆನ್ನಿ
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೇವೆನ್ನಿ
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ

ಗೆಳೆತನದ ವರದಹಸ್ತ ನೀಡಿ ಬನ್ನೀ 
ಮೊಳೆತಿರುವ ಭೇಧಗಳ ಬಿಟ್ಟು ಬನ್ನಿ 
ಗೆಳೆತನದ ವರದಹಸ್ತ ನೀಡಿ ಬನ್ನೀ 
ಮೊಳೆತಿರುವ ಭೇಧಗಳ ಬಿಟ್ಟು ಬನ್ನಿ 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೇವೆನ್ನಿ 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವವೆನ್ನಿ
ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವವೆನ್ನಿ
ಕೀಳು ನಾವೆಂಬುವರ ಕಣ್ಣ ತೇರೆಯಿರೆನ್ನಿ
ಕೀಳು ನಾವೆಂಬುವರ ಕಣ್ಣ ತೇರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೇವೆನ್ನಿ 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ

ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ 
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ 
ಯಾದವ ಬಲ್ಲಾಳ ವಿಜಯನಗರ ವೀರರ ಗತವೈಭವ ಕಾಣುವ
ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ ಸಂದೇಶವ ಸಾರುವಾ 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೇವೆನ್ನಿ 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
-----------------------------------------------------------------------------------------------------------------------

ಕಣ್ತೆರೆದು ನೋಡು (೧೯೬೧)
ಸಾಹಿತ್ಯ : ಜಿ.ವಿ.ಅಯ್ಯರ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕೀ, ರಾಜೇಶ್ವರೀ 

ಆಆಆಅ...
ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಹೆಣ್ಣಿನ ಕೊರಳಿಗೆ  ಉರುಳು
ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಹೆಣ್ಣಿನ ಕೊರಳಿಗೆ  ಉರುಳು
ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಹೆಣ್ಣಿನ ಕೊರಳೆ ಉರುಳು ಉರುಳು 
ಎಡವಿದರೇ ನಾಲ್ಕುರುಳೂ

ಆಆಆ....
ಕಂಕಣ ಕಾಲುಂಗುರಾ ಸಿಂಗಾರದ ಗೋಪುರಾ
ಕಂಕಣ ಕಾಲುಂಗುರಾ ಸಿಂಗಾರದ ಗೋಪುರಾ
ಸುಂದರಿಯಳ ವಯ್ಯಾರ ಗಂಡಿಗೇಕೆ ಬೇಸರಾ 
ಸುಂದರಿಯಳ ವಯ್ಯಾರ ಗಂಡಿಗೇಕೆ ಬೇಸರಾ 
ಗಂಡಿಗೇಕೆ ಬೇಸರಾ...   
ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಗಂಡಿಗೆ ನರಕವೇ ನೆರಳು ನೆರಳು 
ಎಡವಿದರೇ ನಾಲ್ಕುರುಳೂ

ಆಆಆ... ಆಆಆ... ಆಆಆ.. 
ಜಾಣೆಯಂತೇ ಮಾತನಾಡಿ ಜಾರಿ ಜಾರಿ ಬೀಳಬೇಡಾ 
ಜಾಣೆಯಂತೇ ಮಾತನಾಡಿ ಜಾರಿ ಜಾರಿ ಬೀಳಬೇಡಾ 
ಜಾರಿ ನೀನು ಬಿದ್ದಾಗ ನಗುವೇ ಏಕೆ ಎನಬೇಡಾ 
ಜಾರಿ ನೀನು ಬಿದ್ದಾಗ ನಗುವೇ ಏಕೆ ಎನಬೇಡಾ 
ನಗುವೇ ಏಕೆ ಎನಬೇಡಾ 
ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಹೆಣ್ಣಿನ ಕೊರಳಿಗೆ ಉರುಳು ಉರುಳು 
ಎಡವಿದರೇ ನಾಲ್ಕುರುಳೂ

ಆಆಆ.... ಆಆಆ...
ನೀತಿ ನೂರು ಪಾಠ ನೂರು ಹೇಳುವವರು ಸಾವಿರಾರು
ನೀತಿ ನೂರು ಪಾಠ ನೂರು ಹೇಳುವವರು ಸಾವಿರಾರು
ಮಾತಲೊಂದು ಗೋಪುರ ಕಷ್ಟವೇ ಬೇಡ ನೀ ಚತುರಾ 
ಮಾತಲೊಂದು ಗೋಪುರ ಕಷ್ಟವೇ ಬೇಡ ನೀ ಚತುರಾ 
ಮಾತಲಲ್ಲೂ ಗೋಪುರ ಆಆಆ... 
ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಗಂಡಿಗೆ ನರಕವೇ ನೆರಳು ನೆರಳು 
ಓಓಓಓಓ...  ಎಡವಿದರೇ ನಾಲ್ಕುರುಳೂ ನುಡಿ ಜಾರೇ ನೂರೂರುಳೂ
ನಡೆ ಜಾರೇ ಹೆಣ್ಣಿನ ಕೊರಳಿಗೆ ಉರುಳು ಉರುಳು 
ಎಡವಿದರೇ ನಾಲ್ಕುರುಳೂ
--------------------------------------------------------------------------------------------------------------------------

No comments:

Post a Comment